ದೀಪಾವಳಿ ಹಬ್ಬದ ಆಚರಣೆ ಮತ್ತುಪ್ರಾಮುಖ್ಯತೆ
ದೀಪಾವಳಿ ಬೆಳಕಿನ ಹಬ್ಬ.ಇದು ಭಾರತದಲ್ಲಿ ಆಚರಿಸಲಾಗುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಪುರಾಣದ ಪ್ರಕಾರ, ರಾಕ್ಷಸ ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮನು ತನ್ನ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಹಿಂದಿರುಗಿದ ದಿನವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ.
ಈ ಹಬ್ಬವು ದೀಪಗಳಿಂದ ತುಂಬಿರುತ್ತದೆ ಮತ್ತು ಬಹಳಷ್ಟು ಸಮೃದ್ಧಿ, ಸಂತೋಷ ಶಾಂತಿಯನ್ನು ತರುತ್ತದೆ. ಈ ಹಬ್ಬದಲ್ಲಿ ಲಕ್ಷ್ಮಿ ದೇವತೆಯನ್ನೂ ಪೂಜಿಸಲಾಗುತ್ತದೆ. ದೀಪಾವಳಿಯ ಸಮಯದಲ್ಲಿ ಜನರು ತಮ್ಮ ಅತ್ಯುತ್ತಮ ಉಡುಪುಗಳನ್ನು ಧರಿಸುತ್ತಾರೆ ಮತ್ತು ಸಿಹಿ ತಿಂಡಿಗಳು ಮತ್ತು ಉಡುಗೊರೆಗಳನ್ನು ಸಹ ಹಂಚಲಾಗುತ್ತದೆ.
ದೀಪಾವಳಿಯು ಐದು ದಿನ ಹಬ್ಬ. ದೀಪಾವಳಿಯ ಮೊದಲ ದಿನವನ್ನು ಧನ್ತೇರಸ್ ((ಧನತ್ರಯೋದಶಿ) ಎಂದು ಕರೆಯಲಾಗುತ್ತದೆ. ಈ ದಿನ ದೀಪಾವಳಿಯ ಆರಂಭವನ್ನು ಸೂಚಿಸುತ್ತದೆ. ಚಿನ್ನವನ್ನು ಉಡುಗೊರೆ ನೀಡಲು, ಅಥವಾ ಖರೀದಿಸಲು ಇದು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.
ಎರಡನೇ ದಿನವನ್ನು ನರಕ ಚತುರ್ದಶಿ ಎಂದು ಗುರುತಿಸಲಾಗಿದೆ. ಈ ದಿನ ಜನರು ಮುಂಜಾನೆ ಎದ್ದು ಸ್ನಾನ ಮಾಡುವ ಮೊದಲು ಸುಗಂಧ ತೈಲಗಳನ್ನು ಹಚ್ಚುತ್ತಾರೆ, ಇದು ಎಲ್ಲಾ ಕಲ್ಮಶಗಳು ಹಾಗು ಪಾಪಗಳನ್ನು ತೆಗೆದುಹಾಕುತ್ತದೆ. ಮನೆಮಂದಿಯಲ್ಲಾ ಹೊಸ ಬಟ್ಟೆಯನ್ನು ಧರಿಸಿ ಪೂಜೆ ನೆರವೇರಿಸುತ್ತಾರೆ ಮತ್ತು ದೇವಸ್ಥಾನಗಳನ್ನು ಭೇಟಿ ನೀಡುತ್ತಾರೆ.
ದೀಪಾವಳಿಯ ಮೂರನೇ ದಿನ ಅಮಾವಾಸ್ಯೆ. ಲಕ್ಷ್ಮಿ ಪೂಜೆಯನ್ನು ಮಾಡಲು ಮತ್ತು ಒಟ್ಟಾರೆ ಸಮೃದ್ಧಿ, ಬೆಳವಣಿಗೆಗೆ ಆಶೀರ್ವಾದ ಪಡೆಯಲು ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಪಟಾಕಿಯನ್ನು ಸಿಡಿಸುತ್ತಾರೆ.
ಹಿಂದೂ ಪುರಾಣಗಳ ಪ್ರಕಾರ, ಬಲಿ ಪಾಡ್ಯದ ದಿನದಂದು, ನಾರಾಯಣನ ಪ್ರೀತಿಯ ಭಕ್ತನಾದ ಬಲಿ ಚಕ್ರವರ್ತಿಯು ತನ್ನ ಭಕ್ತರಿಗೆ ಆಶೀರ್ವಾದವನ್ನು ನೀಡಲು ಒಂದು ದಿನ ಭೂಮಿಗೆ ಭೇಟಿ ನೀಡುತ್ತಾನೆ.
ದೀಪಾವಳಿಯ ಐದನೇ ಮತ್ತು ಅಂತಿಮ ದಿನವನ್ನು ಭಾಯಿ ಧೂಜ್ ಎಂದು ಕರೆಯಲಾಗುತ್ತದೆ,
ಈ ದಿನ ಸಹೋದರ ಸಹೋದರಿಯರ ನಡುವಿನ ಸುಂದರ ಬಂಧವನ್ನು ಸೂಚಿಸುತ್ತದೆ.
ದೀಪಾವಳಿ ಹಬ್ಬದ ಈ ಐದು ದಿನವು ಸಂಪೂರ್ಣ ಸಂತೋಷದಿಂದ ತುಂಬಿರುತ್ತದೆ ಮತ್ತು ಹೊಸದನ್ನು ತರುತ್ತದೆ.
ನಿಮ್ಮೆಲ್ಲರಿಗೂ ದೀಪಾವಳಿಯ ಹಬ್ಬದ ಶುಭಾಶಯಗಳು.
Article By Akshata Ningannavar
Brains Media Solutions.