ದಿವಶಿ ಅಮಾವಾಸ್ಯೆಯ ಮಹತ್ವ
ಆಷಾಢ ಮಾಸದ ಕೊನೆಯ ದಿನ ಅಮವಾಸ್ಯೆ ಮತ್ತು ಈ ದಿನವನ್ನು ದಿವಶಿ ಅಮವಾಸ್ಯೆ (ಅಮಾವಾಸ್ಯೆ ದಿನ) ಎಂದು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಮಕ್ಕಳ ಮತ್ತು ಕುಟುಂಬದ ಇತರ ಸದಸ್ಯರ ಒಟ್ಟಾರೆ ಯೋಗಕ್ಷೇಮಕ್ಕಾಗಿ ಮಹಾ ಮಾತೆ ಗೌರಿಯ ಆಶೀರ್ವಾದವನ್ನು ಕೋರಿ ದಿವಶಿ ಅಮಾವಾಸ್ಯೆಯ ದಿನದಂದು ದಿವಶಿ ಗೌರಿ ಪೂಜೆಯನ್ನು ಮಾಡುತ್ತಾರೆ ಮತ್ತು ಇದನ್ನು ಮುಖ್ಯವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಹೆಚ್ಚಿನ ಭಾಗಗಳಲ್ಲಿ ನಡೆಸಲಾಗುತ್ತದೆ.
ಈ ಪೂಜೆಯನ್ನು ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ. ಕೆಲವು ಭಾಗಗಳಲ್ಲಿ, ಈ ದಿನದಂದು ಸಮೇ/ದೀಪ(ಲ್ಯಾಂಪ್)ವನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ಕಡೆಗಳ್ಳಲ್ಲಿ ಮಣ್ಣಿನಿಂದ ಪಿರಾಮಿಡ್ನಂತಹ (ಕೊಂತಿ) ಆಕೃತಿಗಳನ್ನು ಮಾಡಿ ಅದ್ದನ್ನು ಮಹಾ ಗೌರಿಯಂದು ಆರಾಧನೆ ಮಾಡಲಾಗುತ್ತದೆ. ದೇವಿ ಗೌರಿಯ ಜೊತೆಗೆ ಪವಿತ್ರವಾದ ಧಾರದ ಪೂಜೆಯನ್ನು ವಿವಿಧ ಬಗೆಯ ಹೂವು, ಪತ್ರೆಗಳಿಂದ ಮಾಡಿ ಪೂಜೆಯ ನಂತರ ದೇವಿಗೆ ಅರ್ಪಿಸಿದ ಧಾರವನ್ನು ಮಹಿಳೆಯರು ಮತ್ತು ಮಕ್ಕಳು ತಮ್ಮ ಮುಂಗಟ್ಟಿಗೆ ಅಥವಾ ಕೊರಳಲ್ಲಿ ಧರಿಸುತ್ತಾರೆ.
ಆಷಾಢದಲ್ಲಿ ಬರುವ ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಸಹ ಕರೆಯಲಾಗುತ್ತದೆ ಮತ್ತು ಈ ದಿನದಂದು ಸುಮಂಗಳೆಯರು ತಮ್ಮ ಪತಿಯ ದೀರ್ಘ ಆಯಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಮಹಾಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸಿ ವ್ರತವನ್ನು ಆಚರಿಸುತ್ತಾರೆ. ಈ ವ್ರತವನ್ನು ಜ್ಯೋತಿರ್ ಭೀಮೇಶ್ವರ ವ್ರತ ಅಥವಾ ಪತಿ ಸಂಜೀವಿನಿ ವ್ರತವೆಂದು ಸಹ ಕರೆಯಲಾಗುತ್ತದೆ. ಈ ವರ್ಷ ಎಂದರೆ 2022 ರಲ್ಲಿ ದಿವಶಿ ಅಮಾವಾಸ್ಯೆಯು ಜೂಲೈ 28ರಂದು ಇದೆ.
ತಾವುಗಳು ಈ ವ್ರತವನ್ನು ಆಚರಿಸುತ್ತಿದಲ್ಲಿ ಹೇಗೆ ಆಚರಿಸುತ್ತೀರಿ ಎಂದು ಕಮೆಂಟ್ ಮಾಡುವ ಮೂಲಕ ತಿಳಿಸಿ
Article by
Brainsmediasolutions