ಕವಿತೆ
ಹಸಿವಾಗದು ನಿದಿರೆ
ಧಣಿವಾಗದು ಮಧಿರೆ
ತಣಿವಾಗದು ನಿನ ಕಾಣದೆ
ಈ ಜೀವಕೆ ಚತುರೆ.....
ನಿನ್ನಯ ಪಾದದಿ ಸ್ಪರ್ಶಿಸು
ನನ್ನಯ ಎದೆಯ,
ಕಿಡಿ ನೋಟವೇ ಸಾಕು
ಬೂದಿಯಾಗಲು ನಿನ್ನೀ ಒಡೆಯ
ಕತ್ತಲ ಕೋಣೆಗೆ ನಿನ ನೆನಪೆ
ದೀವಟಿಗೆ,
ಬರುಡಾದ ಮರುಳನ ಮರಳಿಗೆ
ನೀನಾದೆ ಮರೀಚಿಕೆ.....
ದೂರ ಹೋದರು
ನಾನೆಂದು ದೂರೇನು
ಕನಸ್ಸಲಂತೂ ಎಂದು ಕಾಡೆನು....
ಅರೆ ಹುಚ್ಚನ ಚಿಂತೆಗೆ
ಹೊರಡಲು ಸಿದ್ದವಾಗಿದೆ
ಪ್ರಾಣ ಚಿತೆಗೆ......
ಕೇಳುವೆ ನಾ ಮಾತಿಗೆ
ನೀ - ನಲ್ಲ - ವೇ ಕಾರಣ
ಈ ಪ್ರೇಮ ಕ್ರಾಂತಿಗೆ??
. ✒️ANIMA.... 🩵