ಕೆಳ ಬೆನ್ನಿನ ಆರೈಕೆಗಾಗಿ ಸಲಹೆಗಳುಬೆನ್ನು ಮಾನವ ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ, ಏಕೆಂದರೆ ಇದು ದೈನಂದಿನ ಚಟುವಟಿಕೆಗಳನ್ನು ಸಲೀಸಾಗಿ ನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. ಬೆನ್ನಿನ ಸ್ನಾಯುಗಳು ನಮ್ಮ ದೇಹವನ್ನು ಚಲಿಸಲು, ಬಾಗಲು, ನಮ್ಮ ಕತ್ತನ್ನು ತಿರುಗಿಸಲು ಮತ್ತು ನೇರವಾಗಿ ನಿಲ್ಲಲು ಸಹಾಯ ಮಾಡುತ್ತದೆ. ಅವು ನಮ್ಮ ಬೆನ್ನುಮೂಳೆಯನ್ನು ಬೆಂಬಲಿಸುತ್ತವೆ ಮತ್ತು ನಮಗೆ ಉಸಿರಾಡಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನಮ್ಮ ಬೆನ್ನಿನ ಸ್ನಾಯುಗಳು ನಮ್ಮ ತೂಕವನ್ನು ಬೆಂಬಲಿಸುತ್ತವೆ ಮತ್ತು ಅನೇಕ ಚಲನೆಗಳಿಗೆ ಕಾರಣವಾಗಿವೆ, ಹೀಗಾಗಿ ಈ ಸ್ನಾಯುಗಳಿಗೆ ಗಾಯಗಳು ಸಾಮಾನ್ಯವಾಗಿದೆ. ಆದರೆ ಗಾಯಗಳು ಅಥವಾ ನೋವನ್ನು ನಿರ್ಲಕ್ಷಿಸುವುದು ಅಥವಾ ತಪ್ಪಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.ವಿಶೇಷವಾಗಿ ಕೆಳ ಬೆನ್ನಿನ ಭಾಗ. ನಿಮ್ಮ ಬೆನ್ನಿನ ಕೆಳಭಾಗದಲ್ಲಿ ವಿನ್ಯಾಸಗೊಳಿಸಲಾದ ಅದ್ಭುತ ಶಕ್ತಿ ಮತ್ತು ನಮ್ಯತೆಯು ಸಾಕಷ್ಟು ಸಮಸ್ಯೆಗಳನ್ನು ತಂದೋಡುತ್ತವೆ. ಅಷ್ಟೇ ಅಲ್ಲ ಬೆನ್ನುಮೂಳೆಯ ಉದ್ದಕ್ಕೂ ಮತ್ತು ನಿಮ್ಮ ದೇಹದ ಉಳಿದ ಭಾಗಗಳಲ್ಲಿ ಹಲವಾರು ನರಗಳಿರುವ ಕಾರಣ, ಕೆಳಗಿನ ಬೆನ್ನಿನ ಸಮಸ್ಯೆಯು ಕಾಲು ನೋವು, ಸೊಂಟದ ಸಮಸ್ಯೆಗಳು ಮತ್ತು ಹೆಚ್ಚಿನವುಗಳಿಗೆ ಕಾರಣವಾಗಬಹುದು. ಹಾಗಾಗಿ ಇದರ ಕಾಳಜಿ ವಹಿಸುವುದು ತೀರಾ ಅವಶ್ಯಕ. ಹಾಗಿದ್ದರೆ ಬೆನ್ನಿನ ಕೆಳಭಾಗದ ಕಾಳಜಿ ವಹಿಸುವುದು ಹೇಗೆ, ಇಗೋ ಇಲ್ಲಿವೆ ಕೆಲವು ಉಪಾಯಗಳು -* ಉತ್ತಮ ಭಂಗಿಯನ್ನು ಇರಿಸಿ

* ನೀವು ಅಧಿಕ ತೂಕ ಹೊಂದಿದ್ದರೆ ತೂಕವನ್ನು ಕಡಿಮೆ ಮಾಡಿ

* ಪ್ರತಿದಿನ ನಿಮ್ಮ ಕೋರ್ ಸ್ನಾಯುಗಳನ್ನು ಬಲಪಡಿಸಿ

* ಈಜು, ನಡಿಗೆಯಂತಹ ಏರೋಬಿಕ್ ವ್ಯಾಯಾಮ ಮಾಡಿ

* ನೀವು ಕುಳಿತುಕೊಳ್ಳುವಾಗ, ನಿಂತಾಗ, ನಡೆಯುವಾಗ, ನಿದ್ದೆ ಮಾಡುವಾಗ ಅಥವಾ ದಿನನಿತ್ಯದ ಚಟುವಟಿಕೆಗಳನ್ನು ಮಾಡುವಾಗ ನಿಮ್ಮ ಬೆನ್ನನ್ನು ಹಿಡಿದಿಟ್ಟುಕೊಳ್ಳುವ ವಿಧಾನಕ್ಕೆ ಗಮನ ಕೊಡಿ

* ಭಾರ ಎತ್ತುವುದನ್ನು ತಪ್ಪಿಸಿ, ಅಗತ್ಯವಿದ್ದಲ್ಲಿ ಸೊಂಟವನ್ನು ಅಲ್ಲ ಮೊಣಕಾಲುಗಳನ್ನು ಬಾಗಿಸುವ ಮೂಲಕ ಸರಿಯಾಗಿ ಮೇಲಕ್ಕೆತ್ತಿ

* ದೀರ್ಘ ಬಾಗುವಿಕೆಯ ನಂತರ ನಿಮ್ಮ ಬೆನ್ನಿಗೆ ವಿಶ್ರಾಮ ನೀಡಿ

* ನಿಮ್ಮ ಮಂಡಿರಜ್ಜುಗಳನ್ನು (hamstrings) ಹಿಗ್ಗಿಸಿ

* ಕೂರಲು ಸರಿಯಾದ ಆಸನವನ್ನು ಬಳಸಿ

* ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳಬೇಡಿ, ನೀವು ದೀರ್ಘಕಾಲ ಕುಳಿತುಕೊಳ್ಳಬೇಕಾದರೆ, ಮೆತ್ತನೆಯ ಕುರ್ಚಿಗಳನ್ನು ಬಳಸಿ. ಗಟ್ಟಿಯಾದ ಆಸನಗಳು ನಿಮ್ಮ ಬೆನ್ನನ್ನು ಬೆಂಬಲಿಸುವುದಿಲ್ಲ ಮತ್ತು ನೇರವಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ

* ಆಫೀಸಿನಲ್ಲಿ ಕೆಲಸದ ನಡುವೆ ಕೆಲವು ನಿಮಿಷಗಳ ವಿಶ್ರಾಂತಿಯನ್ನು ನಿಮ್ಮ ಬೆನ್ನಿಗೆ ನೀಡುತ್ತಿರಿ

* ನೀವು ಹೆಚ್ಚು ಹೊತ್ತು ನಿಂತಿದ್ದರೆ, ನಿಮ್ಮ ತೂಕವನ್ನು ಒಂದು ಪಾದದಿಂದ ಇನ್ನೊಂದಕ್ಕೆ ಮತ್ತು ನಿಮ್ಮ ಕಾಲ್ಬೆರಳುಗಳಿಂದ ಹಿಮ್ಮಡಿಗೆ ನಿಯಮಿತವಾಗಿ ಬದಲಾಯಿಸುವುದು ಅವಶ್ಯಕ.ಈ ಮೇಲಿನವುಗಲ್ಲದೆ ಸಾಮಾನ್ಯವಾಗಿ ನಾವು. ಸಕ್ರಿಯವಾಗಿರುವುದು

. ಸಾಕಷ್ಟು ನೀರು ಕುಡಿಯುವುದು

. ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು

. ಸಾಕಷ್ಟು ಆಳವಾದ, ಪುನಶ್ಚೈತನ್ಯಕಾರಿ ನಿದ್ರೆಯನ್ನು ಪಡೆಯುವುದು

. ನಿಯಮಿತವಾದ ಆಹಾರವನ್ನು ಸೇವಿಸುವುದು

. ಧೂಮಪಾನ ಮತ್ತು ಯಾವುದೇ ರೀತಿಯ ನಿಕೋಟಿನ್ ಸೇವನೆಯನ್ನು ತಪ್ಪಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಬಹುದು

Article by

Saroja Huddar

Brainsmedia Solutions

Kannada Blog by Brains Media Solutions Pvt. Ltd. : 111832483
Anita Kocheri 1 year ago

This is very useful for me

The best sellers write on Matrubharti, do you?

Start Writing Now