Avala Horata - 4 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 4

Featured Books
  • વડનગર પુરાતત્વ મ્યુઝિયમ

    વડનગર હાટકેશ્વર મંદિર વિશે અત્રે લખી ગયો છું. ટૂંકમાં ફરી કહ...

  • રોકાણ - 5

    ભાગ ૫ — એક અધૂરું સપનુંડોક્ટરનો ફોન મૂક્યા પછી રમેશભાઈ થોડા...

  • Imege Time Mashin

    સોમનાથના દરિયા કિનારે અદ્રશ્ય થયેલી 'ટાઈમ-મશીન' વાન...

  • શૂન્યની બહાર - 11

    ભાગ 11 — પ્રથમ વિષય“હું નક્ષત્રનો પ્રથમ વિષય હતી.”નિષાના શબ્...

  • આનંદનગર : પ્રકરણ ૩૦

    પ્રકરણ ૩૦: દ્વારકાની યાદો અને આનંદનગરમાં પાવન 'લાલાના હિ...

Categories
Share

ಅವಳ ಹೋರಾಟ - 4

ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ಖಚಿತಪಡಿಸಿಕೊಂಡು ಹೊರಗಡೆ ಬಂದಳು.

ಶಿವರಾಜ್ : ಇದ್ದಕ್ಕಿದ್ದಂತೆ ನಿನಗೆ ಏನಾಯಿತು? (ಅಂತ ಕೋಪದಿಂದ ಕೇಳಿದ).

ನಾರಾಯಣ : ನಾನು ನಿಮೆಲ್ಲರಿಗೆ ಮೊದಲು ಎಚ್ಚರಿಕೆ ಕೊಟ್ಟಿದ್ದೆ, ಮರೆತೋದೆರಾ?

ಸುಲೋಚನಾ : ಈಗ ಯಾರಿಗೆ ಏನಾಯಿತು ಅಂತ ಇಷ್ಟೊಂದು ಮಾತಾಡ್ತಿದ್ದೀಯಾ?

ನಾರಾಯಣ : ರಾಘವೇಂದ್ರ, ನಿನ್ನ ಪಾಲಿನ ಹಾಲು ಖಾಲಿ ಆಗಿದೆಯಾ ಅಥವಾ ಇನ್ನೂ ಇದೆಯಾ?

ರಾಘವೇಂದ್ರ : ಇನ್ನೂ ಇದೆ ಅಪ್ಪಾ, ತಗೊಂಡು ಬರಲಾ?

ನಾರಾಯಣ : ತಗೊಂಡು ಬಾ.

(ಆಗ ರಾಘವೇಂದ್ರ ತನ್ನ ಪಾಲಿನ ಉಳಿದ ಹಾಲು ತರೋಕೆ ಓಡಿದ. ನಂತರ ನಾರಾಯಣ ಮುಂದುವರಿದು) ಪ್ರಸಾದ್, ರಾಜಾ ನೀವಿಬ್ಬರು ನಿಮ್ಮ ಪಾಲಿನ ಹಾಲು ತಗೊಂಡು ಬನ್ನಿ (ನಾರಾಯಣನ ಮಾತಿಗೆ ಅವರೆಿಬ್ಬರೂ ಹಾಲು ತರಲು ಓಡಿದರು).

ಅವರ ಹಿಂದೆಯೇ ಪದ್ಮ ಕೂಡ ಹೋಗಲು ಎದ್ದು ನಿಂತಳು. ಆಗ

ನಾರಾಯಣ : ಯಾರೂ ಎಲ್ಲೂ ಹೋಗಬಾರದು (ಅಂತ ಜೋರಾಗಿ ಹೇಳಿದ).

ಮಕ್ಕಳು ಹಾಲನ್ನು ತಗೊಂಡು ನಾರಾಯಣನ ಮುಂದೆ ಇಟ್ಟರು.

ನಾರಾಯಣ : ನೀವು ಮೂವರು ಹೋಗಿ ಮಲಗೊಳ್ಳಿ (ಅಂತ ಹೇಳಿ ಮಕ್ಕಳನ್ನು ಒಳಗೆ ಕಳುಹಿಸಿದ). ನಂತರ ಮುಂದುವರಿದು — ಈ ಮೂರು ಲೋಟದಲ್ಲಿರುವ ಹಾಲನ್ನು ಎಲ್ಲರೂ ಸೂಕ್ಷ್ಮವಾಗಿ ನೋಡಿ ಯಾವ ಲೋಟದಲ್ಲಿ ಹಾಲು ಹೆಚ್ಚು ಇದೆ, ಯಾವ ಲೋಟದಲ್ಲಿ ನೀರು ಹೆಚ್ಚು ಇದೆ ಅಂತ ಹೇಳಿ.

(ನಿಜ ಏನು ಅಂದ್ರೆ ಪ್ರತಿದಿನ ಮೂವರು ಮಕ್ಕಳಿಗೆ ಪದ್ಮನೇ ಕುಡಿಯಲು ಹಾಲು ಕೊಡುತ್ತಿದ್ದಳು. ಆದರೆ ತನ್ನಿಬ್ಬರು ಮಕ್ಕಳಿಗೆ ಪೂರ್ಣ ಹಾಲು ಮತ್ತು ರಾಘವೇಂದ್ರಗೆ ನೀರು ಬೆರೆಸಿದ ಹಾಲು ಕೊಡುತ್ತಿದ್ದಳು. ಇದರ ಬಗ್ಗೆ ಲಕ್ಷ್ಮಿ ನಾರಾಯಣನಿಗೆ ಮೊದಲು ಹೇಳಿದ್ದಳು. ಆಗ ನಾರಾಯಣ ಇನ್ನೂ ಸ್ವಲ್ಪ ದಿನ ನೋಡೋಣ ಅಂತ ಹೇಳಿದ್ದ. ಅದಕ್ಕೆ ಇವತ್ತು ಅವನಿಗೆ ತಡೆಯಲಾಗದೆ ಕೋಪ ವ್ಯಕ್ತಪಡಿಸಿದ್ದ).

ಸುಲೋಚನಾ : ನೋಡು ನಾರಾಯಣ, ಇದ್ರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನನ್ನ ಇದರಿಂದ ಹೊರಗಿಡು (ಅಂತ ಹೇಳಿ ಅಲ್ಲಿಂದ ಹೋಗಿಬಿಟ್ಟಳು).

ನಾರಾಯಣ : ನನಗೆ ಗೊತ್ತು, ಇದರಲ್ಲಿ ಅಮ್ಮನ ಯಾವ ತಪ್ಪೂ ಇಲ್ಲ. ಇದಕ್ಕೆ ಉತ್ತರ ಅತ್ತಿಗೆನೇ ಹೇಳಬೇಕು.

(ಶಿವರಾಜ್ ಮತ್ತು ನಾರಾಯಣ ಇಬ್ಬರೂ ಪದ್ಮನ ಕಡೆ ನೋಡಿದರು).

ಪದ್ಮ : ನನ್ನನ್ನ ಕ್ಷಮಿಸಿ, ಇನ್ನೊಮ್ಮೆ ಈ ರೀತಿ ಮಾಡೋದಿಲ್ಲ (ಅಂತ ಹೇಳಿದಳು).

ಲಕ್ಷ್ಮಿ : (ಸಂದರ್ಭವನ್ನು ಶಾಂತಗೊಳಿಸಲು) ಇದನ್ನ ಇಲ್ಲಿಗೇ ಬಿಡಿ. ಮಾತಾಡಿದಷ್ಟು ಇದು ದೊಡ್ಡದಾಗುತ್ತ ಹೋಗುತ್ತದೆ (ಅಂತ ಹೇಳಿದಳು).

ನಾರಾಯಣ : (ಲಕ್ಷ್ಮಿಯ ಮಾತಿಗೆ ಒಪ್ಪಿಕೊಂಡು) ಇನ್ನೊಮ್ಮೆ ಈ ರೀತಿ ಆಗಬಾರದು. ನಾನು ನನ್ನ ಮಕ್ಕಳು ಮತ್ತು ನಿಮ್ಮ ಮಕ್ಕಳಲ್ಲಿ ಯಾವ ಭೇದಭಾವವೂ ಮಾಡಿಲ್ಲ. ನಿಮ್ಮಿಂದಲೂ ಅದೇ ನಿರೀಕ್ಷಿಸುತ್ತೇನೆ (ಅಂತ ಹೇಳಿ ಲಕ್ಷ್ಮಿಯ ಜೊತೆ ಹೋದ).

ಶಿವರಾಜ್ : ಪದ್ಮ, ನಿನಗೆ ಏನಾದರೂ ತಲೆ ಕೆಟ್ಟಿದೆಯಾ? ಇಷ್ಟು ಕೀಳುಮಟ್ಟಕ್ಕೆ ಯಾರಾದರೂ ಇಳಿಯುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ.

ಪದ್ಮ : ನನ್ನನ್ನ ಕ್ಷಮಿಸಿ (ಅಂತ ತುಂಬಾ ಅಳಲು ಶುರು ಮಾಡಿದಳು).

ಶಿವರಾಜ್ : ಸರಿ ಬಿಡು, ಆಗಿದ್ದೇ ಆಗಿದೆ (ಅಂತ ಅವಳನ್ನು ಕರೆದುಕೊಂಡು ಹೋದ).

ನಾರಾಯಣ ಕೊನೆಗೆ ಬಂದು ರಾಘವೇಂದ್ರನನ್ನು ಜೋರಾಗಿ ತಬ್ಬಿಕೊಂಡು ಅಳಲು ಶುರು ಮಾಡಿದ. ರಾಘವೇಂದ್ರಗೆ ಏನೂ ಅರ್ಥವಾಗದೆ ಸುಮ್ಮನೆ ನಿಂತಿದ್ದ.

ಲಕ್ಷ್ಮಿ : ಸಮಾಧಾನ ಮಾಡ್ಕೊಳ್ಳಿ (ಅಂತ ನಾರಾಯಣನ ಕಣ್ಣೀರು ಒರೆಸಿದಳು).

ರಾಘವೇಂದ್ರ ಕೂಡ ಅಳುತ್ತ ಲಕ್ಷ್ಮಿ ಮತ್ತು ನಾರಾಯಣನ ಕಣ್ಣೀರು ಒರೆಸಿದ.

ದುರ್ಗಾ ತೊಟ್ಟಿಲಲ್ಲಿ ಮಲಗಿಕೊಂಡು ಬಹಳ ಹೊತ್ತಿನಿಂದ ಮೂವರನ್ನೂ ನೋಡುತ್ತಿದ್ದಳು. ನಂತರ ಮೂವರೂ ದುರ್ಗಾನ್ನು ನೋಡಿ ನಗಲು ಶುರು ಮಾಡಿದರು. ಆ ರಾತ್ರಿ ತುಂಬಾ ಖುಷಿಯಾಗಿ ಕಳೆದಿತು.

(10 ವರ್ಷಗಳ ನಂತರ)

ಲಕ್ಷ್ಮಿ : ದುರ್ಗಾ ಬೇಗ ಬೇಗ ತಯಾರಾಗು, ಶಾಲೆಗೆ ಹೊತ್ತಾಗಿದೆ.

ಕೊಠಡಿಯಿಂದ ಏನೋ ಬಿದ್ದಂತೆ ಜೋರಾಗಿ ಶಬ್ದ ಆಯಿತು. ಲಕ್ಷ್ಮಿ ಓಡಿ ಬಂದಳು. ಅಲ್ಲಿ ರಾಘವೇಂದ್ರ ಮತ್ತು ದುರ್ಗಾ ಜಗಳ ಮಾಡುತ್ತಿದ್ದರು. ಅದು ಸಾಮಾನ್ಯ ಜಗಳ ಅಲ್ಲ, ದೊಡ್ಡ ಯುದ್ಧದಂತಿತ್ತು. ದುರ್ಗಾ ಕೂದಲು ಎಲ್ಲಾ ಕೆದರಿ ಹೋಗಿತ್ತು, ರಾಘವೇಂದ್ರನ ಬಟ್ಟೆ ಹರಿದು ಹೋಗಿತ್ತು.

ಲಕ್ಷ್ಮಿ : ಯಾಕ್ರೋ ಹಂದಿ, ನಾಯಿಯಂತೆ ಕಿತ್ತಾಡ್ತಿದ್ದೀರಾ? ನಾನು ಅಡುಗೆ ಮನೆಗೆ ಹೋಗ್ತಿದ್ದೀನಿ, ಇನ್ನೂ ಅರ್ಧ ಗಂಟೆಯಲ್ಲಿ ಇಬ್ಬರೂ ತಯಾರಾಗಿ ತಿಂಡಿಗೆ ಬರಬೇಕು (ಅಂತ ಹೇಳಿ ಹೋದಳು).

ದುರ್ಗಾ : ಕೇಳಸ್ತೇನೋ, ಅರ್ಧ ಗಂಟೆ ಮಾತ್ರ ಇದೆ. ನಾನು ಬೇಗನೆ ತಯಾರಾಗುತ್ತೇನೆ. ನೀನೇ ನೋಡ್ಕೋ, ನೀನು ಬಟ್ಟೆ ಹಾಕೋಕೆ ಅರ್ಧ ಗಂಟೆ ಬೇಕು (ಅಂತ ಜೋರಾಗಿ ನಗಲು ಶುರು ಮಾಡಿದಳು).

ರಾಘವೇಂದ್ರ ಇನ್ನೇನು ಮಾತಾಡಬೇಕೆಂದಿದ್ದಾಗಲೇ ನಾರಾಯಣ ಬಂದನು.

ರಾಘವೇಂದ್ರ : ನಿನ್ನನ್ನ ನಂತರ ನೋಡ್ಕೊಳ್ಳುತ್ತೀನಿ (ಅಂತ ಹೇಳಿ ತಯಾರಾಗಲು ಹೋದ).

ನಾರಾಯಣ : ಏನು ನಡೆಯುತ್ತಿದೆ ಇಲ್ಲಿ? ಇದೇನು ನಿಮ್ಮಿಬ್ಬರ ಅವಸ್ಥೆ?

ದುರ್ಗಾ : ಎಲ್ಲವೂ ನಿಮ್ಮ ಮಗನ ಕಾರಣಕ್ಕೇ ಆಗಿದೆ.

ನಾರಾಯಣ : ಅಲ್ವೇ, ನನ್ನ ಮುಂದೆ ಮಾತನಾಡುವಾಗ ಸ್ವಲ್ಪವೂ ಹೆದರಲ್ಲವಲ್ಲ ನೀನು? ಈ ಧೈರ್ಯ ಎಲ್ಲಿಂದ ಬಂದಿದೆ?

ದುರ್ಗಾ : ಅಯ್ಯೋ, ನಾನು ನಿಮ್ಮ ಮಗಳಲ್ಲವಾ ಅಪ್ಪಾ! ನಿಮ್ಮ ಮಗಳಾಗಿ ಹೆದರಿಕೊಂಡ್ರೆ ಸರಿಯೇ? ನೀವು ಮತ್ತು ಅಮ್ಮ ಯಾವಾಗಲೂ ನನ್ನ ಜೊತೆ ಇದ್ದರೆ ನನಗೆ ಯಾರ ಭಯವೂ ಇರಲ್ಲ.

ಲಕ್ಷ್ಮಿ : ಇವೆಲ್ಲ ನಿಮ್ಮಿಂದಲೇ ಆಗಿದೆ. ಅವಳನ್ನ ತಲೆ ಮೇಲೆ ಇಟ್ಟುಕೊಂಡಿದ್ದೀರಲ್ಲ, ಅದ್ರ ಫಲ ಇದು.

ದುರ್ಗಾ : ನೀನ್ಯಾಕಮ್ಮ ಬೇಜಾರ್ ಮಾಡ್ಕೊಳ್ಳುತ್ತೀಯ? ನನಗಾಗಿ ನಿನ್ನನ್ನ ತಲೆಕೆಳಗೆ ಇಳಿಸಲ್ವಲ್ಲ, ಚಿಂತಿಸಬೇಡ.

(ನಾರಾಯಣ ನಗಲು ಶುರು ಮಾಡಿದ).

ಆದರೆ ಒಮ್ಮಿಂದೊಮ್ಮೆಲೆ ಅವನ ನಗು ಮಾಯವಾಯಿತು.

ನಾರಾಯಣ : ಕೆಲವು ವರ್ಷಗಳ ಹಿಂದೆ ಎಲ್ಲರೂ ಎಷ್ಟು ಚೆನ್ನಾಗಿ ಒಂದಾಗಿದ್ದ್ವಿ. ಎಷ್ಟು ಬೇಗ ಎಲ್ಲವೂ ಬದಲಾಗಿಬಿಟ್ಟಿತು.

ಲಕ್ಷ್ಮಿ : ಯಾವ ಸಮಯದಲ್ಲಿ ಏನು ಆಗಬೇಕೋ ಅದೇ ಆಗುತ್ತದೆ.

10 ವರ್ಷಗಳ ಹಿಂದೆ ಏನಾಯಿತು, ಕುಟುಂಬ ಬೇರೆ ಏಕೆ ಆಗಿತು? ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ...