Avala Horata - 6 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 6

Featured Books
Categories
Share

ಅವಳ ಹೋರಾಟ - 6

(ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.)

ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ನಿಮನ್ನೆಲ್ಲ ನೋಡ್ಕೊಂಡು ಹೋಗೋಣ ಅಂತ ಬಂದೆ.

(ಶೌರ್ಯ ನಾರಾಯಣನ ಸ್ನೇಹಿತನ ಮಗನಾಗಿದ್ದ. ಶೌರ್ಯ ಬಂದಿದ್ದು ಎಲ್ಲರಿಗೂ ತುಂಬ ಖುಷಿ ಆಯ್ತು. ಚಿಕ್ಕವಯಸ್ಸಿನಿಂದಲೇ ರಾಘವೇಂದ್ರ ಮತ್ತು ಶೌರ್ಯ ಒಟ್ಟಿಗೆ ಆಟ ಆಡುತ್ತಿದ್ದರು. ಆದರೆ ದುರ್ಗಾಗೆ ಮೊದಲಿನಿಂದಲೇ ಶೌರ್ಯನನ್ನು ಕಂಡರೆ ಅಷ್ಟೇನೂ ಇಷ್ಟ ಇರಲಿಲ್ಲ.)

ದುರ್ಗಾ : ಅಪ್ಪಾ, ನಾನು ಚಿಕ್ಕವಯಸ್ಸಿಂದ ನೋಡ್ತಾ ಇದ್ದೀನಿ, ನೀವು ಯಾಕೆ ಅವನಿಗೆ ಇಷ್ಟು ಸಲುಗೆ ಕೊಡ್ತೀರೀ?

ಲಕ್ಷ್ಮಿ : ದುರ್ಗಾ, ಈ ರೀತಿ ಎಲ್ಲ ಮಾತಾಡ್ಬಾರದು. ಅಷ್ಟಕ್ಕೂ ಅವನು ನಿನಗೆ ಏನು ಮಾಡಿದ್ದಾನೆ? ನಾನು ಮೊದಲಿಂದಲೇ ನೋಡ್ತಾ ಇದ್ದೀನಿ, ಅವನು ನಿನ್ನ ಜೊತೆ ಚೆನ್ನಾಗಿ ಮಾತಾಡಿದ್ರೂ ನೀನು ಯಾಕೆ ಇಷ್ಟು ಸೋಕು ತೋರಿಸ್ತೀಯಾ ಅವನಿಗೆ? ಶೌರ್ಯ ತುಂಬ ಒಳ್ಳೆ ಹುಡುಗ. ದೊಡ್ಡವರಂದ್ರೆ ಎಷ್ಟು ಗೌರವ ಇದೆ ಅವನಿಗೆ.

ದುರ್ಗಾ : ಅದನ್ನೇ ನಾನು ಹೇಳ್ತಿರೋದು. “ಅತಿ ವಿನಯಂ ಧೂರ್ತ ಲಕ್ಷಣಂ” ಅಂತ ಹೇಳ್ತಾರಲ್ಲ, ಹಾಗೆ ಇವನು.

(ನಾರಾಯಣ ದುರ್ಗಾಳ ಭುಜಕ್ಕೆ ಬಡಿದು, ಸ್ವಲ್ಪ ನಿಧಾನವಾಗಿ ಮಾತಾಡು, ಅವನಿಗೆ ಕೇಳಿದರೆ ತುಂಬ ಬೇಜಾರಾಗುತ್ತೆ ಎಂದರು.)

ಶೌರ್ಯ : ಹಾಯ್ ದುರ್ಗಾ (ಅಂತ ಶೇಕ್ ಹ್ಯಾಂಡ್ ಕೊಟ್ಟ).

ದುರ್ಗಾ : ಹೆಲೋ ಶೌರ್ಯ (ಅಂತ ಹೇಳಿ ಅವನ ಕೈಯಲ್ಲಿರುವ ಟ್ಯಾಟೂ ಗಮನಿಸಿದಳು), ಮುಂದುವರಿದು – ಏನ ಶೌರ್ಯ, ಕೈಯಲ್ಲೇ ಬೆಂಕಿ ಹಾಕಿಸಿಕೊಂಡಿದ್ದೀಯಲ್ಲಾ.

ಶೌರ್ಯ : ಹಾಗೇನಿಲ್ಲ, ನನಗೆ ಅಗ್ನಿ ಅಂದ್ರೆ ತುಂಬ ಇಷ್ಟ ದುರ್ಗಾ.

ದುರ್ಗಾ : ನಾವಿಬ್ಬರು ಎಷ್ಟು ವಿರುದ್ಧವಾಗಿದ್ದೀವಲ್ಲ. ನಿನಗೆ ಬೆಂಕಿ ಇಷ್ಟ, ನನಗೆ ನೀರು ಇಷ್ಟ. ನಿನಗೆ ಬೆಂಕಿ ಹಚ್ಚೋಕೆ ಇಷ್ಟ, ನನಗೆ ನೀನು ಹಚ್ಚಿರೋ ಬೆಂಕಿಯನ್ನ ಆರಿಸೋಕೆ ಇಷ್ಟ.

ಶೌರ್ಯ : ನಿನಗೆ ನನ್ನ ಬಗ್ಗೆ ಏನಾದ್ರೂ ತೊಂದರೆ ಇದ್ದರೆ ಹೇಳಿಬಿಡು. ಯಾಕೆ ನನ್ನ ಜೊತೆ ಯಾವಾಗಲೂ ಹೀಗೇ ಮಾತಾಡ್ತೀಯಾ? ನಾನು ಬೆಂಕಿ ಹಚ್ಚೋ ತರ ಕಾಣಿಸ್ತಿನಾ?

ದುರ್ಗಾ : ಹೌದು.

ದುರ್ಗಾ ಹೀಗೆ ಅಂದದ್ದು ನೋಡಿ ಎಲ್ಲರೂ ಹಾಗೆ ಸುಮ್ಮನೆ ನಿಂತುಬಿಟ್ಟರು. ಶೌರ್ಯಗೆ ತುಂಬ ಬೇಜಾರಾಯಿತು.

ಲಕ್ಷ್ಮಿ : ಶೌರ್ಯ, ಅವಳ ಮಾತನ್ನ ತಪ್ಪಾಗಿ ತಿಳಿಬೇಡ. ಅವಳು ಯಾವಾಗಲೂ ಹೀಗೆ. ತಿಂಡಿ ಮಾಡಿದ್ದೀನಿ, ಬಾ ತಿನ್ನು.

(ಎಲ್ಲರೂ ತಿಂಡಿ ಮಾಡಲು ಹೋದರು. ತಿಂಡಿ ಮಾಡ್ತಿರಬೇಕಾದರೆ ಶೌರ್ಯಗೆ ಕಾಲ್ ಬಂತು.)

ಶೌರ್ಯ : ಒಂದು ನಿಮಿಷ, ನಾನು ಮಾತಾಡಿ ಬರುತ್ತೀನಿ.

ನಾರಾಯಣ : ಆಯ್ತು.

ಶೌರ್ಯ : ಅದೇನು ಅಷ್ಟು ಸುಲಭ ಅಂತಕೊಂಡಿದ್ದೀಯಾ? ಸ್ವಲ್ಪ ವೇಟ್ ಮಾಡಪ್ಪಾ(ಅಂತ ಫೋನ್‌ನಲ್ಲಿ ಮಾತನಾಡುತ್ತಿದ್ದ).

(ಶೌರ್ಯ ಮಾತಾಡೋದನ್ನ ಮುಗಿಸಿ ಹಿಂದಿರುಗಿ ನೋಡಿದ. ಅಲ್ಲಿ ದುರ್ಗಾ ನಿಂತಿದ್ದಳು. ಅವಳನ್ನು ನೋಡಿ ಅವನು ಹಾಗೆ ನಿಂತುಕೊಂಡ.)

ದುರ್ಗಾ : ಏನ ಶೌರ್ಯ, ಏನೋ ಸುಲಭ ಅಲ್ಲ ಅಂತ ಹೇಳ್ತಿದ್ದೆ. ಏನಾಯ್ತು?

ನಾರಾಯಣ : ಅರೆ, ಇಬ್ಬರೂ ಹೊರಗಡೆ ನಿಂತುಕೊಂಡು ಏನ ಮಾತಾಡ್ತಿದ್ದೀರಾ? ತಿಂಡಿ ಮಾಡಿ ಬನ್ನಿ.

ಶೌರ್ಯ : ಆ ಅಂಕಲ್, ಬಂದ್ವಿ. ಏನಿಲ್ಲ ದುರ್ಗಾ, ಹೀಗೇ ನನ್ನ ಸ್ನೇಹಿತನ ಜೊತೆ ಮಾತಾಡ್ತಿದ್ದೆ ಅಷ್ಟೇ. ಬಾ, ತಿಂಡಿ ಮಾಡೋಣ.

(ದುರ್ಗಾ ಅವನನ್ನೇ ನೋಡ್ತಾ ಇದ್ದಳು. ಅವಳು ಮೊದಲೇ ಲಾಯರ್ ಆಗಿದ್ದಳು. ಅಷ್ಟು ಸುಲಭವಾಗಿ ಅವಳನ್ನ ಮೂರ್ಖ ಮಾಡೋಕೆ ಸಾಧ್ಯನೇ ಇರಲಿಲ್ಲ.)

ಎಲ್ಲೋ ಏನೋ ಯಡವಟ್ಟಾಗಿದೆ. ಕಂಡುಹಿಡಿಯಲೇಬೇಕು. ಇವನನ್ನ ನಂಬಕ್ಕಾಗಲ್ಲ (ಅಂತ ಮನಸ್ಸಲ್ಲಿ ಅಂದುಕೊಂಡಳು).

ಶೌರ್ಯ : ಅಂಕಲ್, ನನ್ನ ಸ್ನೇಹಿತ ಒಂದು ಹೋಟೆಲ್ ಕಟ್ಟಿಸಿದ್ದಾನೆ. ಇವತ್ತು ರಾತ್ರಿ ಊಟಕ್ಕೆ ಕರಿದಿದ್ದಾನೆ. ನಾನು ಒಬ್ಬನೇ ಹೋಗೋಕೆ ತುಂಬ ಬೇಜಾರಾಗುತ್ತೆ. ನೀವೆಲ್ಲ ನನ್ನ ಜೊತೆಗೆ ಬನ್ನಿ, ತುಂಬ ಚೆನ್ನಾಗಿರತ್ತೆ.

ದುರ್ಗಾ : ನೀನು ಈಗಷ್ಟೇ ಫೋನ್‌ನಲ್ಲಿ ಮಾತಾಡ್ತಿದ್ದೀಯಲ್ಲ, ಅದೇ ಸ್ನೇಹಿತನಾ ಊಟಕ್ಕೆ ಕರಿದದ್ದು?

ಶೌರ್ಯ : ಹೌದು ಅವನೇ.

ನಾರಾಯಣ : ಸರಿ, ಬರ್ತೀವಿ. ಅಷ್ಟಕ್ಕೂ ಸ್ವಲ್ಪ ಹೊರಗಡೆ ಸುತ್ತಾಡಿದರೆ ನಮಗೂ ಚೆನ್ನಾಗಿ ಅನ್ನಿಸುತ್ತದೆ.

ದುರ್ಗಾ : ನಾವೆಲ್ಲ ಯಾಕೆ ಶೌರ್ಯ? ಅಷ್ಟಕ್ಕೂ ನಿನ್ನ ಸ್ನೇಹಿತ ಕರೆದದ್ದು ನಿನ್ನನ್ನೇ. ಅವನಿಗೆ ನಾವು ಯಾರೂ ಪರಿಚಯ ಇಲ್ಲ. ನಾವು ಎಲ್ಲ ಬಂದರೆ ಸರಿಯಾಗಿರಲ್ಲ. ನೀನು ಮಾತ್ರ ಹೋಗು.

ನಾರಾಯಣ : ಹೌದು ದುರ್ಗಾ ಸರಿಯಾಗಿ ಹೇಳ್ತಿದ್ದಾಳೆ. ನಾವು ಎಲ್ಲ ಅಲ್ಲಿ ಬಂದರೆ ಅಷ್ಟೊಂದು ಸರಿಯಾಗಿರಲ್ಲ. ನೀನೇ ಹೋಗು.

ಶೌರ್ಯ : (ಕೋಪದಿಂದ ದುರ್ಗಾನ್ನೇ ನೋಡುತ್ತ) ಹಾಗೇನಿಲ್ಲ ಅಂಕಲ್, ಅವನಿಗೆ ನಿಮ್ಮ ಬಗ್ಗೆ ಗೊತ್ತು… (ದುರ್ಗಾ ಅನುಮಾನದಿಂದ ಶೌರ್ಯನ್ನೇ ನೋಡಿದಳು), ಅಂದರೆ ಅವನಿಗೆ ನಿಮ್ಮ ಜೊತೆಗಿನ ಫೋಟೋಗಳನ್ನು ತೋರಿಸಿದ್ದೇನೆ. ಹೀಗಾಗಿ ನೀವೆಲ್ಲ ಅವನಿಗೆ ಗೊತ್ತು.

ದುರ್ಗಾ : ಹ್ಮ್, ಮೊದಲೇ ಎಲ್ಲ ಹೇಳಿಬಿಟ್ಟಿದ್ದೀಯಲ್ಲ ಶೌರ್ಯ.

ನಾರಾಯಣ : ದುರ್ಗಾ, ಸುಮ್ಮನಿರು. ಸರಿ ಶೌರ್ಯ, ಬರ್ತೀವಿ.

ಶೌರ್ಯ : ಆಯ್ತು ಅಂಕಲ್, ಸಂಜೆ 9:00 ಗಂಟೆಗೆ ಹೋಗೋಣ.

ದುರ್ಗಾ : ಹೋಟೆಲ್ ಇರುವ ಸ್ಥಳ ಆದರೂ ಹೇಳ್ತೀಯಾ ಶೌರ್ಯ?

ಶೌರ್ಯ : ಸ್ಥಳ ನನಗೂ ಗೊತ್ತಿಲ್ಲ. ಈಗ ಕಾಲ್ ಮಾಡಿ ಕೇಳ್ತೀನಿ.

ನಾರಾಯಣ : ಪರವಾಗಿಲ್ಲ, ನೀನು ಎಲ್ಲಿಗೆ ಕರೆದೊಯ್ಯ್ದರೂ ನಾವು ಬರ್ತೀವಿ (ಎಂದು ನಗುತ್ತ ಹೇಳಿದರು).

(ಎಲ್ಲರೂ ಅಲ್ಲಿಂದ ಎದ್ದು ತಮ್ಮ ತಮ್ಮ ಕೆಲಸಕ್ಕೆ ಹೋದರು. ಶೌರ್ಯ ಹೊರಗಡೆ ಹೋಗ್ತಿದ್ದ. ಅವನಿಗೆ ಹಿಂದೆ ಯಾರೋ ಕರೆಯುವ ಧ್ವನಿ ಕೇಳಿಸಿತು. ಅವನು ಹಿಂದಿರುಗಿ ನೋಡಿದ. ಅಲ್ಲಿ ದುರ್ಗಾ ನಿಂತಿದ್ದಳು.)

ದುರ್ಗಾ : ಶೌರ್ಯ, ನಾನು ನಿನಗೆ ಒಂದು ಮಾತು ಹೇಳ್ತೀನಿ. ಗಮನವಿಟ್ಟು ಕೇಳು. ನನ್ನ ಇಡೀ ಕುಟುಂಬ ನಿನ್ನನ್ನ ತುಂಬ ನಂಬುತ್ತೆ. ನಂಬಿಕೆ ಉಳಿಸು. ಇನ್ನೊಂದು – ನಾನು ನನ್ನ ಕುಟುಂಬವನ್ನು ತುಂಬ ಪ್ರೀತಿಸ್ತೀನಿ. ಅವರಿಗೆ ಏನಾದರೂ ತೊಂದರೆ ಆದ್ರೆ ನಾನು ಸುಮ್ಮನಿರಲ್ಲ, ನಿನಗೆ ನನ್ನ ಹೆಸರಿನ ಅರ್ಥ ತಿಳಿಸ್ಬೇಕಾಗತ್ತೆ ಶೌರ್ಯ.

ಶೌರ್ಯ : ಯಾವ ಯಾವ ಸಮಯದಲ್ಲಿ ಏನು ಆಗ್ಬೇಕು ಅಂತ ವಿಧಿ ಬರೆದಿರುತ್ತೋ ಅದು ಆಗೇ ಆಗುತ್ತೆ ದುರ್ಗಾ. ನೀನು ತುಂಬ ಯೋಚನೆ ಮಾಡ್ಬೇಡ, ಎಲ್ಲ ಒಳ್ಳೇದಾಗುತ್ತೆ.

ದುರ್ಗಾ : ಸರಿಯಾಗಿ ಹೇಳದೆ ಎಲ್ಲ ಒಳ್ಳೇದಾದ್ರೆ ನಿನಗೂ ಒಳ್ಳೇದು. ಅದು ನಿನಗೆ ನೆನಪಿರಲಿ (ಅಂತ ಹೇಳಿ ನಗುತ್ತ ಹೋದಳು).

ಅವಳ ನಗುವಲ್ಲೇ ಅವನಿಗೆ ಎಚ್ಚರಿಕೆ ಸಿಕ್ಕಿತ್ತು. ಅದನ್ನು ನೋಡಿ ಶೌರ್ಯಗೆ ಸ್ವಲ್ಪ ಭಯವೂ ಆಯ್ತು.

ಮುಂದೆ ಎಲ್ಲರೂ ರಾತ್ರಿ ಊಟಕ್ಕೆ ಹೋದಾಗ ಅಲ್ಲಿ ಏನಾಯ್ತು? ಶೌರ್ಯ ಯಾಕೆ ಅವರನ್ನು ಕರೆದುಕೊಂಡು ಹೋಗಿದ್ದ ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ…