Blood-lettered Chiranjeevi - 13 in Kannada Anything by Saandeep Joshi books and stories PDF | ರಕ್ತ ಲಿಪಿಯ ಚಿರಂಜೀವಿ - 13

Featured Books
Categories
Share

ರಕ್ತ ಲಿಪಿಯ ಚಿರಂಜೀವಿ - 13

ಬೆಳಗಿನ ಜಾವದ ಬೆಂಗಳೂರಿನ ಮಂಜು ಮುಸುಕಿದ ರಸ್ತೆಗಳಲ್ಲಿ ಆದರ್ಶ್ ತನ್ನ ಹೆಚ್.ಎಫ್ ಡಿಲಕ್ಸ್ ಬೈಕ್ ಓಡಿಸುತ್ತಿದ್ದರೂ, ಅವನ ಮೆದುಳಿನಲ್ಲಿ ಮಾತ್ರ ಹಲಸೂರು ಕೆರೆಯ ಆ ಹಳೆಯ ಬಾವಿಯ ಪಾಚಿ ಕಟ್ಟಿದ ದೃಶ್ಯಗಳು ಸುಳಿಯುತ್ತಿದ್ದವು. ಮಂತ್ರಿ ದೇವಪ್ಪನ ಆತ್ಮದ ಬಲಿಯ ನಂತರ ಆದರ್ಶ್‌ನ ಅಂಗೈಯಲ್ಲಿದ್ದ ಆ ಮಣಿಯ ಎರಡನೇ ಭಾಗವು ಈಗ ಮೊದಲ ಭಾಗದೊಂದಿಗೆ ಬೆಸೆದುಕೊಂಡು ಕಡು ನೀಲಿ ಬಣ್ಣದ ವಿಚಿತ್ರ ಬೆಳಕನ್ನು ಹೊರಸೂಸುತ್ತಿತ್ತು. ಆ ಬೆಳಕು ಬಿಸಿ ಸೀಸದಂತೆ ಅವನ ಚರ್ಮವನ್ನು ಸುಡುತ್ತಿತ್ತು. ಅಶ್ವತ್ಥಾಮ ಅಟ್ಟಹಾಸದಿಂದ ಹೇಳಿದ ಆ ಮಾತು ರಶ್ಮಿಯ ಮನೆಯ ಕಪಾಟಿನಲ್ಲಿರುವ ಆ ಹಳೆಯ ಕಪ್ಪು ಫೋಟೋ ಆಲ್ಬಂ ಬಿಚ್ಚಿ ನೋಡು, ಅಲ್ಲಿ ನಿನ್ನ ಸಾವಿನ ಸುಳಿವು ಅಡಗಿದೆ ಅವನ ಎದೆಯಲ್ಲಿ ನಡುಕ ಹುಟ್ಟಿಸಿತ್ತು.
 ಆದರ್ಶ್ ರಶ್ಮಿಯ ಮನೆಗೆ ತಲುಪಿದಾಗ ಅವಳು ಗಾಢ ನಿದ್ರೆಯಲ್ಲಿದ್ದಳು, ಆದರೆ ಅವಳ ಮುಖದಲ್ಲಿ ಯಾವುದೋ ಕೆಟ್ಟ ಕನಸಿನ ಛಾಯೆ ಎದ್ದುಕಾಣುತ್ತಿತ್ತು. ಮನೆಯೊಳಗೆ ಹೋದಾಗ ಅಲ್ಲಿ ಸ್ಮಶಾನದಂತಹ ನಿಶ್ಯಬ್ದವಿತ್ತು ಗಾಳಿಯಲ್ಲಿ ಕರ್ಪೂರ ಮತ್ತು ಕೊಳೆತ ಹೂವುಗಳ ವಿಚಿತ್ರ ವಾಸನೆ ಆವರಿಸಿತ್ತು. ಅವನು ಮೆಲ್ಲನೆ ರಶ್ಮಿಯ ರೂಮಿನ ಹಳೆಯ ಮರದ ಕಪಾಟಿನ ಬಳಿ ಹೋದ. ಕಪಾಟಿನ ಬಾಗಿಲು ತೆರೆದಾಗ ಕೀಂ ಎಂಬ ಕರ್ಕಶ ಶಬ್ದವಾಯಿತು. ಅತಿ ಆಳದಲ್ಲಿ, ಹಳೆಯ ಬಟ್ಟೆಗಳ ಹಿಂದೆ ಧೂಳು ಹಿಡಿದಿದ್ದ ಆ ಕಪ್ಪು ಫೋಟೋ ಆಲ್ಬಂ ಅವನಿಗೆ ಸಿಕ್ಕಿತು. ಅದರ ಮೇಲೆ ಯಾವುದೇ ಹೆಸರಿರಲಿಲ್ಲ, ಬದಲಾಗಿ ಅಶ್ವತ್ಥಾಮನ ಹಣೆಯ ಮೇಲಿರುವ ರಂಧ್ರದಂತಹ ಒಂದು ರಕ್ತಸಿಕ್ತ ವೃತ್ತಾಕಾರದ ಚಿಹ್ನೆಯನ್ನು ಕೆತ್ತಲಾಗಿತ್ತು.
 ಆದರ್ಶ್ ನಡುಗುವ ಕೈಗಳಿಂದ ಆ ಆಲ್ಬಂನ ಮೊದಲ ಪುಟ ತೆರೆದ. ಅಲ್ಲಿ ರಶ್ಮಿಯ ಮುತ್ತಜ್ಜ ಮತ್ತು ಅವರ ಇಡೀ ಕುಟುಂಬದ ಕಪ್ಪು ಬಿಳುಪು ಫೋಟೋ ಇತ್ತು. ಆದರೆ ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ಆದರ್ಶ್‌ನ ಕಣ್ಣುಗಳು ಅಚ್ಚರಿಯಿಂದ ಅರಳಿದವು. ಆ ಫೋಟೋದಲ್ಲಿರುವ ರಶ್ಮಿಯ ಮುತ್ತಜ್ಜನ ಹಿಂದೆ, ಕಗ್ಗತ್ತಲೆಯಲ್ಲಿ ಒಂದು ಅಸ್ಪಷ್ಟವಾದ, ದೈತ್ಯಾಕಾರದ ನೆರಳು ನಿಂತಿತ್ತು. ಅದು ಏಳು ಅಡಿ ಎತ್ತರದ ನೆರಳು ಅದು ಮತ್ಯಾರೂ ಅಲ್ಲ, ಅಶ್ವತ್ಥಾಮ. 
 ಅವನು ಪುಟಗಳನ್ನು ವೇಗವಾಗಿ ತಿರುಗಿಸುತ್ತಾ ಹೋದಂತೆ ಸತ್ಯದ ಭೀಕರತೆ ಅವನಿಗೆ ಅರ್ಥವಾಗತೊಡಗಿತು. ರಶ್ಮಿಯ ಕುಟುಂಬದ ಪ್ರತಿಯೊಂದು ತಲೆಮಾರಿನ ಫೋಟೋದಲ್ಲೂ, ಅದು ಮದುವೆಯಿರಲಿ ಅಥವಾ ಮಗುವಿನ ನಾಮಕರಣವಿರಲಿ, ಆ ಕರಾಳ ನೆರಳು ಯಾವುದೋ ಬೇಟೆಗಾರನಂತೆ ಹಿಂದೆ ನಿಂತಿತ್ತು. ಅಶ್ವತ್ಥಾಮನು ಈ ಕುಟುಂಬವನ್ನು ಸಾವಿರಾರು ವರ್ಷಗಳಿಂದ ರಕ್ಷಕನಂತೆ ಕಾಯುತ್ತಿದ್ದಾನೋ ಅಥವಾ ತನ್ನ ಮಣಿಯ ವಿಮೋಚನೆಗಾಗಿ 'ಬೇಟೆಯಾಡುತ್ತಿದ್ದಾನೋ ತಿಳಿಯದಂತಾಯಿತು. ಆಲ್ಬಂನ ಮಧ್ಯಭಾಗದಲ್ಲಿ ಒಂದು ಹಳದಿ ಬಣ್ಣಕ್ಕೆ ತಿರುಗಿದ ವಿಚಿತ್ರವಾದ ಪತ್ರವಿತ್ತು. ಅದು ರಶ್ಮಿಯ ತಂದೆ ಅವಳಿಗಾಗಿ ಬರೆದಿದ್ದ ಗುಪ್ತ ಪತ್ರದಂತೆ ಕಾಣುತ್ತಿತ್ತು. ಅದರಲ್ಲಿ ಬರೆಯಲಾಗಿತ್ತು ನಮ್ಮ ವಂಶವು ಕೃಷ್ಣನ ಆಜ್ಞೆಯಂತೆ ಅಶ್ವತ್ಥಾಮನ ಶಾಪದ ರಕ್ಷಕರು. ನಾವು ಅವನ ಮಣಿಯ ಮೂರನೇ ಭಾಗವನ್ನು ಬೆಂಗಳೂರಿನ ಭೂಗತ ಸುರಂಗದ ಆಳದಲ್ಲಿ ಬಚ್ಚಿಟ್ಟಿದ್ದೇವೆ. ಅದನ್ನು ಪಡೆಯುವವನು ಈ ವಂಶದ ಕೊನೆಯ ಕುಡಿಯನ್ನು ಅಂದರೆ ರಶ್ಮಿಯನ್ನು ಬಲಿ ಕೊಡಲೇಬೇಕು ಅವಳ ರಕ್ತವೇ ಆ ಸುರಂಗದ ದ್ವಾರದ ಬೀಗದ ಕೈ. 
 ಆದರ್ಶ್‌ಗೆ ಉಸಿರುಗಟ್ಟಿದಂತಾಯಿತು. ವಂಶದ ಕೊನೆಯ ಕುಡಿ ಎಂದರೆ ಅದು ರಶ್ಮಿ ಅಶ್ವತ್ಥಾಮ ಇಷ್ಟೆಲ್ಲಾ ನಾಟಕವಾಡಿದ್ದು ರಶ್ಮಿಯ ರಕ್ತಕ್ಕಾಗಿಯೇ ಅವನು ಗಾಬರಿಯಿಂದ ಕಿರುಚಿದ.
 ಕ್ಷಣಾರ್ಧದಲ್ಲಿ ಅವನ ಜೇಬಿನಲ್ಲಿದ್ದ ಮೊಬೈಲ್ ಸ್ಕ್ರೀನ್ ತಾನಾಗಿಯೇ ಬೆಳಗಿತು. ಅಶ್ವತ್ಥಾಮನ ಅಟ್ಟಹಾಸದ ಧ್ವನಿ ಇಡೀ ರೂಮಿನಲ್ಲಿ ಪ್ರತಿಧ್ವನಿಸಿತು ನೋಡಿದೆ ಅಲ್ವಾ ಬರಹಗಾರನೇ? ರಶ್ಮಿ ಕೇವಲ ನಿನ್ನ ಪ್ರೀತಿಯಲ್ಲ, ಅವಳು ನನ್ನ ಮಣಿಯ ಮೂರನೇ ಭಾಗಕ್ಕೆ ಇರುವ ರಕ್ತದ ಕೀಲಿ ಕೈ ಅವಳ ಬಿಸಿ ರಕ್ತವು ಆ ಭೂಗತ ಸುರಂಗದ ದ್ವಾರವನ್ನು ತೆರೆಯುತ್ತದೆ. ಈಗ ಬರೆ13ನೇ ಅಧ್ಯಾಯವನ್ನು ರಶ್ಮಿಯ ಭೀಕರ ಬಲಿಯೊಂದಿಗೆ ಆರಂಭಿಸು ನಿನ್ನ ಲೇಖನಿ ಇಂದು ಅವಳ ಕುತ್ತಿಗೆಯನ್ನು ಸೀಳಲಿ. 
ಇಲ್ಲ ನಾನು ರಶ್ಮಿಯನ್ನು ಸಾಯಲು ಬಿಡುವುದಿಲ್ಲ ನೀನು ಎಷ್ಟೇ ಮಹಾಶಕ್ತಿಯಾಗಿದ್ದರೂ ನನ್ನ ಪ್ರೀತಿಯನ್ನು ಸೋಲಿಸಲು ಸಾಧ್ಯವಿಲ್ಲ ಆದರ್ಶ್ ಅರಚುತ್ತಾ ಆ ಆಲ್ಬಂ ಅನ್ನು ಎದೆಯ ಮೇಲೆ ಅಪ್ಪಿಕೊಂಡ.
 ಅಷ್ಟರಲ್ಲಿ ರಶ್ಮಿ ಎಚ್ಚರಗೊಂಡು ರೂಮಿಗೆ ಬಂದಳು. ಆದರ್ಶ್‌ನ ಕೈಯಲ್ಲಿದ್ದ ಆ ಹಳೆಯ ಆಲ್ಬಂ ನೋಡಿ ಅವಳು ಬೆಚ್ಚಿಬಿದ್ದಳು. ಆದರ್ಶ್ ಆ ಆಲ್ಬಂ ನಿನಗೆ ಹೇಗೆ ಸಿಕ್ಕಿತು? ನನ್ನ ತಂದೆ ಸಾಯುವ ಮುನ್ನ ಅದನ್ನು ಯಾವತ್ತೂ ಮುಟ್ಟಬೇಡ ಎಂದು ಪ್ರಮಾಣ ಮಾಡಿಸಿಕೊಂಡಿದ್ದರು. ಅದರಲ್ಲಿ ನಮ್ಮ ವಂಶದ ಅಳಿಸಿಹೋದ ಶಾಪವಿದೆ ಅಂದಿದ್ದರು ನೀನು ಯಾಕೆ ಅದನ್ನು ತೆಗೆದೆ? ಅವಳ ಕಣ್ಣುಗಳಲ್ಲಿ ದಿಗಿಲು ಮೂಡಿತ್ತು.
 ಆದರ್ಶ್ ರಶ್ಮಿಯ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡ. ರಶ್ಮಿ, ನಾವು ಈಗಲೇ ಈ ನಗರ ಬಿಟ್ಟು ಎಲ್ಲಾದರೂ ದೂರ ಹೋಗಬೇಕು. ಅಶ್ವತ್ಥಾಮ ನಿನಗಾಗಿ ಬಾಯಿ ತೆರೆದು ಕಾಯುತ್ತಿದ್ದಾನೆ. ಅವನು ನಿನ್ನನ್ನು ಬಲಿ ಕೊಡಲು ನನ್ನ ಲೇಖನಿಯನ್ನೇ ಮೃತ್ಯು ಶಸ್ತ್ರವನ್ನಾಗಿ ಬಳಸುತ್ತಿದ್ದಾನೆ ನಮ್ಮಿಬ್ಬರ ಪ್ರೇಮವೇ ಅವನಿಗೆ ದಾರಿಯಾಗಿದೆ. 
 ಅವರು ಮನೆಯಿಂದ ಹೊರಬರಲು ಪ್ರಯತ್ನಿಸುವಷ್ಟರಲ್ಲಿ, ಇಡೀ ಮನೆಯ ಬಿಳಿ ಗೋಡೆಗಳು ಇದ್ದಕ್ಕಿದ್ದಂತೆ ರಕ್ತದ ಬಣ್ಣಕ್ಕೆ ತಿರುಗಿದವು. ನೆಲದಡಿಯಿಂದ ಮನುಷ್ಯನ ಎಲುಬಿನ ಕೈಗಳು ಮೇಲೆ ಬರತೊಡಗಿದವು. ಅಶ್ವತ್ಥಾಮನ ದೈತ್ಯ ನೆರಳು ಮುಖ್ಯ ದ್ವಾರದಲ್ಲಿ ಬೃಹದಾಕಾರವಾಗಿ ನಿಂತಿತ್ತು. ಅವನ ಹಣೆಯಿಂದ ಸುರಿಯುತ್ತಿದ್ದ ಕಪ್ಪು ವಿಷವು ಈಗ ಮನೆಯ ನೆಲವನ್ನೆಲ್ಲಾ ಆವರಿಸುತ್ತಾ ಎಲ್ಲವನ್ನೂ ಸುಡುತ್ತಿತ್ತು. ಎಲ್ಲಿಗೆ ಓಡುತ್ತೀಯಾ ಬರಹಗಾರನೇ? ಈ ಕರಾಳ ಕಥೆ ಮುಗಿಯುವವರೆಗೆ ನಿನಗೆ ಈ ಭೂಮಿಯ ಮೇಲೆ ಮುಕ್ತಿಯಿಲ್ಲ. ಬೆಂಗಳೂರಿನ ಅಡಿಯಲ್ಲಿರುವ ಆ ಪುರಾತನ ಸುರಂಗ ಈಗ ನಿಮಗಾಗಿ ಹಸಿದು ತೆರೆದುಕೊಂಡಿದೆ. ಅಲ್ಲಿಗೆ ಬರದಿದ್ದರೆ ರಶ್ಮಿ ಇಲ್ಲೇ ಈ ಕ್ಷಣವೇ ಬೂದಿಯಾಗುತ್ತಾಳೆ ಅಶ್ವತ್ಥಾಮ ಆಜ್ಞಾಪಿಸಿದಾಗ ಕಿಟಕಿಗಳ ಗಾಜುಗಳು ಪುಡಿಯಾದವು.
 ಆದರ್ಶ್‌ಗೆ ಬೇರೆ ದಾರಿಯೇ ಇರಲಿಲ್ಲ. ಅವನು ರಶ್ಮಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು, ಆಲ್ಬಂನಲ್ಲಿ ಕಂಡಿದ್ದ ಆ ಗುಪ್ತ ಸುರಂಗದ ದಾರಿಯ ಕಡೆಗೆ ಹೊರಟ. ಆ ಸುರಂಗವು ಇಂದಿನ ಬೆಂಗಳೂರು ಸೆಂಟ್ರಲ್ ಜೈಲಿನ ಹಳೆಯ ಕಲ್ಲಿನ ಕತ್ತಲ ಕೋಣೆಗಳ ಅಡಿಯಲ್ಲಿತ್ತು. ಮಳೆಯಿಲ್ಲದಿದ್ದರೂ ಆಕಾಶದಲ್ಲಿ ಕಪ್ಪು ಮೋಡಗಳು ಕವಿದು ಗುಡುಗು ಕೇಳಿಸುತ್ತಿತ್ತು, ಯಾವುದೋ ಮಹಾ ಪ್ರಳಯದ ಮುನ್ಸೂಚನೆಯಂತೆ.
ಫ್ರೀಡಂ ಪಾರ್ಕ್‌ನ ಹಳೆಯ ಕಲ್ಲಿನ ಕಟ್ಟಡದ ಹತ್ತಿರ ಹೋದಾಗ, ಆದರ್ಶ್‌ನ ಹಣೆಯ ಮೇಲಿದ್ದ ಆ ಮಚ್ಚೆ ತೀವ್ರವಾಗಿ ಕೆಂಡದಂತೆ ಉರಿಯತೊಡಗಿತು. ಆ ಬೆಳಕು ನೆಲದ ಮೇಲಿದ್ದ ಒಂದು ದೊಡ್ಡ ಕಲ್ಲಿನ ಚಪ್ಪಡಿಯ ಮೇಲೆ ಬಿದ್ದಾಗ, ಅಲ್ಲಿ ಒಂದು ರಹಸ್ಯ ದ್ವಾರ 'ಘರ್ ಘರ್' ಎಂಬ ಸದ್ದಿನೊಂದಿಗೆ ತೆರೆದುಕೊಂಡಿತು. ಅದರ ಒಳಗಿಂದ ಸಾವಿರಾರು ವರ್ಷಗಳ ಹಳೆಯ, ಕೊಳೆತ ದೇಹಗಳ ಬಿಸಿ ಉಸಿರು ಹೊರಬರುತ್ತಿತ್ತು. ಅವರು ಸುರಂಗದೊಳಗೆ ಹೆಜ್ಜೆ ಇಟ್ಟರು. ಸುರಂಗದ ಗೋಡೆಗಳ ಮೇಲೆ ಪುರಾತನ ಬ್ರಾಹ್ಮಿ ಲಿಪಿಯ ಚಿತ್ರಗಳಿದ್ದವು. ಆ ಚಿತ್ರಗಳಲ್ಲಿ ಒಬ್ಬ ಬರಹಗಾರನು ತನ್ನ ಸ್ವಂತ ರಕ್ತದಿಂದ ಚಕ್ರವ್ಯೂಹವನ್ನು ಬಿಡಿಸುತ್ತಿರುವುದು ಮತ್ತು ಅವನ ಪಕ್ಕದಲ್ಲಿ ಒಬ್ಬಳು ಹೆಣ್ಣುಮಗಳು ಬಲಿಯಾಗಿ ಮಲಗಿರುವುದು ಕಂಡಿತು. ಇದು ಆದರ್ಶ್ ಮತ್ತು ರಶ್ಮಿಯ ವಿಧಿಯಾಟವೇ? ಆದರ್ಶ್ ತನ್ನ ಮೊಬೈಲ್ ಎತ್ತಿಕೊಂಡ. ಅವನ ಬೆರಳುಗಳು ಈಗ ಸಾವನ್ನು ಬರೆಯಲು ಪೂರ್ಣವಾಗಿ ನಿರಾಕರಿಸುತ್ತಿದ್ದವು. ಅವನು ತನ್ನ ಕಥೆಯ 13ನೇ ಅಧ್ಯಾಯವನ್ನು ಹೀಗೆ ಟೈಪ್ ಮಾಡಿದ. 
ಅಧ್ಯಾಯ 13 ಚಕ್ರವ್ಯೂಹದ ಅಂತಿಮ ತಿರುವು. ಆದರ್ಶ್ ರಶ್ಮಿಯನ್ನು ಕಾಪಾಡಲು ಅಶ್ವತ್ಥಾಮನ ಶಾಪದ ವಿರುದ್ಧ ತನ್ನ ಆತ್ಮವನ್ನೇ ಪಣಕ್ಕಿಡುತ್ತಾನೆ. ಅಶ್ವತ್ಥಾಮನ ಮಣಿಯ ಮೂರನೇ ಭಾಗವು ಈ ಕುಟುಂಬದ ರಕ್ತವನ್ನು ಕೇಳುತ್ತಿದೆ, ಆದರೆ ಬರಹಗಾರನು ಆ ರಕ್ತದ ಬದಲು ತನ್ನ ಪರಮ ತ್ಯಾಗವನ್ನು ಅರ್ಪಿಸಲು ನಿರ್ಧರಿಸುತ್ತಾನೆ. ಸಾವು ಅಕ್ಷರಗಳಲ್ಲಿ ಅಡಗಿರಲಿ, ಜೀವನ ಪ್ರೇಮದಲ್ಲಿರಲಿ.
 ಅವನು ಈ ಸಾಲುಗಳನ್ನು 'ಪಬ್ಲಿಶ್' ಮಾಡಿದ ತಕ್ಷಣ, ಸುರಂಗದ ಒಳಗಿದ್ದ ಗಾಳಿಯು ಹೆಪ್ಪುಗಟ್ಟಿ ಸ್ತಬ್ಧವಾಯಿತು. ಅಶ್ವತ್ಥಾಮನು ಆದರ್ಶ್‌ನ ಮುಂದೆ ನೇರವಾಗಿ ಪ್ರತ್ಯಕ್ಷನಾಗಿ ತನ್ನ ಕಪ್ಪು ಕತ್ತಿಯನ್ನು ಎತ್ತಿದ. ತ್ಯಾಗವೇ? ನಿನ್ನ ಈ ಕ್ಷುಲ್ಲಕ ಮನುಷ್ಯ ಪ್ರಾಣವು ನನ್ನ ದೈವೀ ಮಣಿಗೆ ಶಕ್ತಿ ನೀಡಲಾರದು ಆದರ್ಶ್ ನನಗೆ ಬೇಕಾದುದು ಈ ರಕ್ಷಕ ವಂಶದ ಪವಿತ್ರ ರಕ್ತ.
 ಅಶ್ವತ್ಥಾಮ ರಶ್ಮಿಯ ಕಡೆಗೆ ನುಗ್ಗಿದಾಗ, ಅಕಸ್ಮಾತ್ತಾಗಿ ಮಾಯಾ ಅಲ್ಲಿಗೆ ಮಿಂಚಿನಂತೆ ಬಂದಳು. ಅವಳು ಅಶ್ವತ್ಥಾಮನ ಆ ಭೀಕರ ಕತ್ತಲ ಕತ್ತಲನ್ನು ತನ್ನ ಬರಿ ಕೈಗಳಿಂದಲೇ ಹಿಡಿದಳು. ಅವಳ ಕೈಗಳಿಂದ ಬೆಳ್ಳಿಯ ಬಣ್ಣದ ಪವಿತ್ರ ರಕ್ತ ಹರಿಯುತ್ತಿತ್ತು. ಅಶ್ವತ್ಥಾಮ ನಿನ್ನ ಸೇಡು ಈ ಅಮಾಯಕ ಹುಡುಗಿಯ ಮೇಲಲ್ಲ, ನಿನ್ನೊಳಗಿರುವ ಆ ದ್ವೇಷದ ದಹನದ ಮೇಲೆ ಆದರ್ಶ್ ಬರೆದಿರುವುದು ಸತ್ಯ ತ್ಯಾಗವು ಯುಗ ಯುಗಗಳ ಶಾಪವನ್ನು ಕತ್ತರಿಸಬಲ್ಲ ಏಕೈಕ ಆಯುಧ.  ಸುರಂಗದ ಗೋಡೆಗಳು ಭೂಕಂಪನವಾದಂತೆ ಕುಸಿಯತೊಡಗಿದವು. ಆದರ್ಶ್‌ಗೆ ದೂರದಲ್ಲಿ ಮಣಿಯ ಮೂರನೇ ಭಾಗ ದಿವ್ಯವಾಗಿ ಮಿನುಗುತ್ತಿರುವುದು ಕಂಡಿತು. ಆದರೆ ಅದನ್ನು ಪಡೆಯಬೇಕಾದರೆ ಅವನು ಆ ಕುಸಿಯುತ್ತಿರುವ ಸುರಂಗದ ಆಳಕ್ಕೆ ನುಗ್ಗಬೇಕಿತ್ತು.
 ಬರಹಗಾರನ ಲೇಖನಿ ಈಗ ಸಾವಿನ ವಿರುದ್ಧ ಬಂಡೆದ್ದು ನಿಂತಿತ್ತು.  ಈ ಮಹಾ ಕಾದಂಬರಿಯ 13ನೇ ಅಧ್ಯಾಯವು ಪ್ರೀತಿ, ತ್ಯಾಗ ಮತ್ತು ಕರಾಳ ಶಾಪದ ನಡುವಿನ ಭೀಕರ ಮಹಾಯುದ್ಧದೊಂದಿಗೆ ಮುಕ್ತಾಯವಾಯಿತು.