Kannada Quote in Religious by Brains Media Solutions Pvt. Ltd.

Religious quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ವರಮಹಾಲಕ್ಷ್ಮಿ ವ್ರತದ ಆಚರಣೆ ಮತ್ತು ಮಹತ್ವ



ಜಗನ್ಮಾತೆಯಾದ ಮಹಾಲಕ್ಷ್ಮಿಯನ್ನು ಶ್ರಾವಣ ಮಾಸದಲ್ಲಿ ಆರಾಧಿಸುವುದು ನಮ್ಮ ಪ್ರತೀತಿ. ಅದರಲ್ಲೂ ಶ್ರಾವಣ ಮಾಸದ ಎರಡನೇ ಶುಕ್ರವಾರವು ವರಗಳನ್ನು (ವರ) ನೀಡುವ ವರಮಹಾಲಕ್ಷ್ಮಿಗೆ ಸಮರ್ಪಿತವಾಗಿದೆ. ಮಹಾ ವಿಷ್ಣುವಿನ ಪತ್ನಿಯಾದ ವರಮಹಾಲಕ್ಷ್ಮಿಯನ್ನು ಎರಡನೇ ಶುಕ್ರವಾರದಂದು ಅದ್ಧುರಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿವಾಹಿತ ಮಹಿಳೆಯರು ಮಾಡುತ್ತಾರೆ.



ವರಮಹಾಲಕ್ಷ್ಮಿ ವ್ರತವನ್ನು ಮಾಡುವ ಮಹಿಳೆಯರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜಾ ಸ್ಥಳ ಮತ್ತು ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಸುಂದರವಾದ ರಂಗೋಲಿಯನ್ನು ಬಿಡಿಸಿ ಮನೆಯನ್ನು ತಳಿರು ತೋರಣಗಳಿಂದ ಲಕ್ಷ್ಮಿಯ ಸ್ವಾಗತಕ್ಕಾಗಿ ಅಲಂಕಾರ ಮಾಡುತ್ತಾರೆ. ಕಂಚಿನ ಅಥವಾ ಬೆಳ್ಳಿಯ ಮಡಕೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಶ್ರೀಗಂಧದ ಸ್ವಸ್ತಿಕ ಚಿಹ್ನೆಯನ್ನು ಎಳೆಯಲಾಗುತ್ತದೆ. ಮಡಕೆಯಲ್ಲಿ ಅಕ್ಕಿ, ನೀರು, ನಾಣ್ಯಗಳು, ಸುಣ್ಣ, ಐದು ವಿಧದ ಎಲೆಗಳು ಮತ್ತು ಅಡಿಕೆಇಂದ ತುಂಬಿರುತ್ತಾರೆ.



ಮಡಕೆಗೆ ಸುಂದರವಾದ ಸೀರೆಯನ್ನು ಉಡಿಸಿ, ಮಾವಿನ ಎಲೆಗಳನ್ನು ಮಡಕೆಯ ಮೇಲ್ಭಾಗದಲ್ಲಿ ಇರಿಸಲಾಗುತ್ತದೆ. ಮಾವಿನ ಎಲೆಗಳ ಮೇಲೆ ಅರಿಶಿನ ಲೇಪಿಸಿದ ತೆಂಗಿನಕಾಯಿಯನ್ನು ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಅರಿಶಿನ ಪುಡಿಯನ್ನು ಬಳಸಿ ಲಕ್ಷ್ಮಿ ದೇವಿಯ ಚಿತ್ರವನ್ನು ಚಿತ್ರಿಸಲಾಗುತ್ತದೆ. ಮಡಕೆಯು ಸಾಂಕೇತಿಕವಾಗಿ ಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಸಾಮಾನ್ಯವಾಗಿ ಅಕ್ಕಿಯ ಹಾಸಿಗೆಯ ಮೇಲೆ ಇರಿಸಲಾಗುತ್ತದೆ. ಪೂಜೆಯು ಗಣೇಶನನ್ನು ಪೂಜಿಸುವುದರಿಂದ ಪ್ರಾರಂಭವಾಗುತ್ತದೆ ನಂತರ ವರಲಕ್ಷ್ಮಿ ಪೂಜಿಸುತ್ತಾರೆ. ಶ್ಲೋಕಗಳು, ವರಮಹಾಲಕ್ಷ್ಮಿಯ ಕಥೆ ಮತ್ತು ಲಕ್ಷ್ಮಿ ಸಹಸ್ರನಾಮವನ್ನು ಹಾಡಿ ಮಹಾಲಕ್ಷ್ಮಿಗೆ ಆರತಿ ಮಾಡುತ್ತಾರೆ.



ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುವ ಮಹಿಳೆ ಪೂಜೆಯ ಅವಧಿಯವರೆಗೆ ಉಪವಾಸವನ್ನು ಆಚರಿಸುತ್ತಾಳೆ. ಮಹಾಲಕ್ಷಿಮಿಯ ನೈವೇದ್ಯಯಕ್ಕಾಗಿ ಭಕ್ಷಭೋಜನವನ್ನು ತಯಾರಿಸಲಾಗುತ್ತದೆ. ಈ ದಿನ ಸಂಧ್ಯಾಕಾಲದಲ್ಲಿ ಸುಮಂಗಲೆಯರನ್ನು ಆಮಂತ್ರಿಸಿ ಬಾಗಿಣ ನೀಡುವುದರ ಮೂಲಕ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ಮರುದಿನ, ಸ್ನಾನದ ನಂತರ, ಮಡಕೆಯನ್ನು ತೆಗೆದು ಅದರಲ್ಲಿರುವ ನೀರನ್ನು ಮನೆಯಲ್ಲಿ ಚಿಮುಕಿಸುವ ಮೂಲಕ ಮನೆಯನ್ನು ಪವಿತ್ರಗೊಳಿಸಲಾಗುತ್ತದೆ.



ನೀವು ಈ ವ್ರತವನ್ನು ಮಾಡುವಂತವರಾಗಿದ್ದರೆ ನಿಮ್ಮ ಆಚರೆಣೆಯ ಕುರಿತು ನಮಗೆ comment ಮಾಡುವ ಮೂಲಕ ತಿಳಿಸಿ



Article by

Saroja Huddar

Brainsmedia Solutions

Kannada Religious by Brains Media Solutions Pvt. Ltd. : 111823677
New bites

The best sellers write on Matrubharti, do you?

Start Writing Now