English Quote in Blog by Saandeep Joshi

Blog quotes are very popular on BitesApp with millions of authors writing small inspirational quotes in English daily and inspiring the readers, you can start writing today and fulfill your life of becoming the quotes writer or poem writer.

ಮಾನವನ ಜೀವನದಲ್ಲಿ ಕನಸುಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ನಿದ್ರೆಯಲ್ಲಿರುವಾಗ ನಾವು ನೋಡೋದು ಕನಸುಗಳೇ. ಕೆಲವೊಮ್ಮೆ ಅವು ಸಿಹಿಯಾಗಿರುತ್ತವೆ, ಕೆಲವೊಮ್ಮೆ ಭಯ ಹುಟ್ಟಿಸುತ್ತವೆ. ಕೆಲವೊಂದು ಕನಸುಗಳು ಅರ್ಥಪೂರ್ಣವಾಗಿ ನಮಗೆ ಸಂದೇಶ ನೀಡುವಂತಿರುತ್ತವೆ. ಹೀಗಾಗಿ ಜನರ ಮನಸ್ಸಿನಲ್ಲಿ ಸಹಜವಾಗಿ ಒಂದು ಪ್ರಶ್ನೆ ಮೂಡುತ್ತದೆ – ಕನಸುಗಳು ಏಕೆ ಬೀಳುತ್ತವೆ?

ಕನಸುಗಳ ವೈಜ್ಞಾನಿಕ ನೋಟ: ಆಧುನಿಕ ವಿಜ್ಞಾನ ಪ್ರಕಾರ ಕನಸುಗಳು ದೈನಂದಿನ ಬದುಕಿನ ಚಟುವಟಿಕೆಗಳ ಫಲ, ನಿದ್ರೆಯ REM (Rapid Eye Movement) ಹಂತದಲ್ಲಿ ಮನುಷ್ಯನು ಹೆಚ್ಚು ಕನಸು ಕಾಣುತ್ತಾನೆ. ಈ ಸಮಯದಲ್ಲಿ ಮೆದುಳಿನ ನರಗಳು ಸಕ್ರಿಯವಾಗುತ್ತವೆ. ಹಳೆಯ ನೆನಪುಗಳು, ಭಾವನೆಗಳು ಮತ್ತು ಅನುಭವಗಳು ಮರುಕಳಿಸುತ್ತವೆ. ಅನೇಕ ಬಾರಿಗಳು ದಿನದಲ್ಲಿ ನಡೆದ ಘಟನೆಗಳ ಪ್ರತಿಫಲವೇ ಕನಸುಗಳಲ್ಲಿ ಕಾಣುತ್ತದೆ.
ಅಂದರೆ, ವಿಜ್ಞಾನ ಪ್ರಕಾರ ಕನಸು ಎನ್ನುವುದು ದೈನಂದಿನ ಚಟುವಟಿಕೆಗಳಲ್ಲಿ ತೊಡಗುವ ಇಳಿಕೆ ಮನೋವೈಜ್ಞಾನಿಕ ಪ್ರಕ್ರಿಯೆ.

ಕನಸುಗಳ ತತ್ತ್ವಶಾಸ್ತ್ರೀಯ ನೋಟ: ಭಾರತೀಯ ತತ್ತ್ವಶಾಸ್ತ್ರದಲ್ಲಿ ಕನಸುಗಳನ್ನು ಅವಚೇತನ ಮನಸ್ಸಿನ ಪ್ರಜ್ಞೆಯ ಕಿರಣಗಳು ಎಂದು ವಿವರಿಸಲಾಗಿದೆ. ಕನಸುಗಳಲ್ಲಿ ವ್ಯಕ್ತಿಯ ಅಡಗಿದ ಭಾವನೆಗಳು, ಬಯಕೆಗಳು ಮತ್ತು ಭಯಗಳು ಹೊರಹೊಮ್ಮುತ್ತವೆ.ಈ ಕನಸುಗಳು ಕೆಲವೊಮ್ಮೆ ಭವಿಷ್ಯದ ಸೂಚನೆಗಳನ್ನೂ ಕೊಡುತ್ತವೆ ಎಂದು ಹಲವು ಜನರಿಗೆ ವಿಶ್ವಾಸ ಕೂಡ ಇದೆ.

ಜ್ಯೋತಿಷ್ಯ ಮತ್ತು ಕನಸುಗಳು:  ಜ್ಯೋತಿಷ್ಯ ಪ್ರಕಾರ ಕನಸುಗಳು ಗ್ರಹಗಳ ಚಲನೆ ಮತ್ತು ಮನಸ್ಸಿನ ಸ್ಥಿತಿಯ ಆಧಾರದ ಮೇಲೆ ಬೀಳುತ್ತವೆ. ಶುಭ ಗ್ರಹಗಳ ಪ್ರಭಾವವಿದ್ದರೆ ಸಿಹಿ ಕನಸುಗಳು. ಪಾಪಗ್ರಹಗಳ ಪ್ರಭಾವವಿದ್ದರೆ ಭಯಾನಕ ಅಥವಾ ಗೊಂದಲಕರ ಕನಸುಗಳು. ಇನ್ನು ಶಾಸ್ತ್ರಗಳಲ್ಲಿ ಕನಸುಗಳ ಮೂಲಕ ದೇವರು ಅಥವಾ ಪ್ರಕೃತಿ ವ್ಯಕ್ತಿಗೆ ಸಂದೇಶ ನೀಡುತ್ತವೆ ಎಂಬ ನಂಬಿಕೆ ಇದೆ.

ಕನಸುಗಳ ಪ್ರಕಾರ

1. ದೈನಂದಿನ ಪ್ರತಿಫಲನ – ದಿನದಲ್ಲಿ ಏನು ಯೋಚಿಸಿದ್ದೇವೆಯೋ  ಅದೇ ಕನಸಿನಲ್ಲಿ ಕಾಣುವುದು.
2. ಅವಚೇತನ ಬಯಕೆಗಳು – ಹೃದಯದೊಳಗಿನ ಅಪೂರ್ಣ ಆಸೆಗಳು ಕನಸಾಗಿ ಬರುತ್ತವೆ.
3. ಭವಿಷ್ಯ ಸೂಚನೆ – ಕೆಲವು ಕನಸುಗಳು ಜೀವನದಲ್ಲಿ ಮುಂದೆ ನಡೆಯುವ ಘಟನೆಗಳನ್ನು ಮುಂಚಿತವಾಗಿ ತೋರಿಸುತ್ತವೆ.
4. ಭಯದ ಕನಸುಗಳು  – ಆತಂಕ, ಒತ್ತಡ, ಅಶಾಂತಿ ಇವೆಲ್ಲದರ ಪರಿಣಾಮ.
5. ಆಧ್ಯಾತ್ಮಿಕ ಕನಸುಗಳು – ದೇವತೆ, ಗುರುಗಳು, ಅಥವಾ ದೈವಿಕ ಸಂಕೇತಗಳನ್ನು ಕಾಣುವುದು.

ಕನಸುಗಳ ಮಾನಸಿಕ ಅರ್ಥ: ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಕನಸುಗಳು ಅಪೂರ್ಣ ಬಯಕೆಗಳ ಪ್ರತಿಫಲನ. ನಾವು ಬಯಸಿದರೂ ಸಾಧಿಸಲಾಗದ ಆಸೆಗಳು ಕನಸಿನ ರೂಪದಲ್ಲಿ ಹೊರಹೊಮ್ಮುತ್ತವೆ. ಕೆಲವೊಮ್ಮೆ ಒತ್ತಡ, ಭಯ, ನೋವುಗಳೇ ದುಷ್ಟ ಕನಸುಗಳಾಗಿ ತೋರುತ್ತವೆ.

ಕನಸುಗಳು ಬೀಳಲು ಕಾರಣ
1. ದೈನಂದಿನ ಚಟುವಟಿಕೆಗಳು – ನಿದ್ರೆಯ ಸಮಯದಲ್ಲಿ ನರಕೋಶಗಳು ಸಕ್ರಿಯವಾಗುವುದು.
2. ಮನೋಭಾವಗಳು – ದಿನದ ಅನುಭವಗಳು, ಆಲೋಚನೆಗಳು ಮನಸ್ಸಿನಲ್ಲಿ ಉಳಿದುಕೊಂಡು ಕನಸು ರೂಪದಲ್ಲಿ ತೋರುತ್ತವೆ.
3. ಶಾರೀರಿಕ ಸ್ಥಿತಿ – ದೇಹದ ದೌರ್ಬಲ್ಯ, ಅಸ್ವಸ್ಥತೆ, ಅತಿಯಾದ ನಿದ್ರೆ ಇಲ್ಲದಿರುವುದು.
4. ಆಧ್ಯಾತ್ಮಿಕ ಕಾರಣಗಳು – ದೈವಿಕ ಶಕ್ತಿ ಅಥವಾ ಅವಚೇತನದಿಂದ ಸಂದೇಶ.
5. ಜ್ಯೋತಿಷ್ಯ ಪ್ರಭಾವ – ಗ್ರಹಗಳ ಚಲನೆ, ಚಂದ್ರನ ಹಂತಗಳು.

ಕನಸುಗಳ ಮಹತ್ವ: ಕನಸುಗಳು ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ತೋರಿಸುತ್ತವೆ. ಅವು ಕೆಲವೊಮ್ಮೆ ಎಚ್ಚರಿಕೆ ಅಥವಾ ಪ್ರೇರಣೆ ನೀಡುತ್ತವೆ. ಕನಸುಗಳ ಮೂಲಕ ನಾವು ನಮ್ಮ ಅಂತರಂಗವನ್ನು ಅರಿತುಕೊಳ್ಳಬಹುದು.

ಕನಸುಗಳ ಬಗ್ಗೆ ಭಾರತೀಯ ನಂಬಿಕೆ: ಪುರಾಣಗಳಲ್ಲಿ ಕನಸುಗಳಿಗೆ ವಿಶಿಷ್ಟ ಸ್ಥಾನವಿದ್ದು ಸ್ವಪ್ನ ಶಾಸ್ತ್ರ ಪ್ರಕಾರ ಒಳ್ಳೆಯ ಸಂಕೇತದ ಕನಸುಗಳು ಶುಭಫಲ ನೀಡುತ್ತವೆ.
ಅದೇ ಕೆಟ್ಟ ಕನಸುಗಳನ್ನು ಕಂಡರೆ ದೇವರ ಸ್ಮರಣೆ, ಜಪ, ಹೋಮ ಮಾಡಿದರೆ ದುಷ್ಪ್ರಭಾವ ಕಡಿಮೆಯಾಗುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕನಸುಗಳು ಏಕೆ ಬೀಳುತ್ತವೆ? ಎಂಬ ಪ್ರಶ್ನೆಗೆ ಉತ್ತರ ಬಹುಮುಖ.
ವಿಜ್ಞಾನ ಪ್ರಕಾರ → ಮೆದುಳಿನ ಚಟುವಟಿಕೆ.
ತತ್ತ್ವಶಾಸ್ತ್ರ ಪ್ರಕಾರ → ಅವಚೇತನ ಮನಸ್ಸಿನ ಪ್ರತಿಫಲನ.
ಜ್ಯೋತಿಷ್ಯ ಪ್ರಕಾರ → ಗ್ರಹಗಳ ಪ್ರಭಾವ ಮತ್ತು ದೈವ ಸಂದೇಶ.

ಹೀಗಾಗಿ ಕನಸುಗಳು ಕೇವಲ ನಿದ್ರೆಯ ಆಟವಲ್ಲ, ಅವು ಮಾನವನ ಜೀವನ, ಚಿಂತನೆ, ಭಾವನೆ ಮತ್ತು ಭವಿಷ್ಯಗಳಿಗೂ ಆಳವಾದ ಸಂಬಂಧ ಹೊಂದಿವೆ. ಕನಸುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅವು ಜೀವನದ ಮಾರ್ಗದರ್ಶಕ ಬೆಳಕು ಆಗಬಹುದು. ಅಂತಿಮವಾಗಿ, ಕನಸುಗಳು ನಮ್ಮ ಅಂತರಂಗದ ಕಿಡಕಿಯಾಗಿದ್ದು ಅವುಗಳ ಮೂಲಕ ನಾವು ನಮ್ಮನ್ನು ನಾವು ಚೆನ್ನಾಗಿ ಅರಿತುಕೊಳ್ಳಬಹುದು.

ನನಗೂ ಕನಸುಗಳು ಬೀಳುತ್ತಿವೆ ಆರಂಭದಲ್ಲಿ ಗೊಂದಲಕ್ಕೀಡಾಗಿ ತೊಂದರೆಯೂ ಅನುಭವಿಸಿದ್ದೆ. ದಿನಗಳು ಕಳೆದಂತೆ ಪುಸ್ತಕಗಳ ಅಧ್ಯಯನದ ಫಲ ನನ್ನ ಈ ಕನಸಿನ ಸಮಸ್ಯೆಗೆ ಪರಿಹಾರವು ದೊರಕಿತು.  ನನಗೆ ಬೀಳುತ್ತಿರುವ ಕನಸುಗಳನ್ನು ನನ್ನ ಡೈರಿಯಲ್ಲಿ ಬರೆಯುತ್ತಿದ್ದೇನೆ. ಆಶ್ಚರ್ಯಕರ ವಿಷಯವೆಂದರೆ ಅಧ್ಯಯನ ಮಾಡಿದಾಗ  ಬಿದ್ದಿದ್ದ ಕನಸುಗಳು ನನಗೆ ಒಂದಲ್ಲ ಒಂದು ರೀತಿಯಲ್ಲಿ ಸೂಚನೆ ಕೊಟ್ಟಿದ್ದೂ ಇದೆ, ಇನ್ನು ಕೆಲವು ಬಾರಿ ಎಚ್ಚರಿಸಿರುವ ಅನುಭವ ಆಗಿದೆ. ರಾತ್ರಿ ಬಿದ್ದ ಕನಸುಗಳು ಸಾಮಾನ್ಯವಾಗಿ ಬೆಳಿಗ್ಗೆ ಎಚ್ಚರಗೊಂಡಾಗ ನೆನಪಿನಲ್ಲಿ ಉಳಿಯುವುದು ತುಂಬಾ ಕಡಿಮೆ, ಇನ್ನು ಕೆಲವರಿಗೆ ನೆನಪೇ ಇರುವುದಿಲ್ಲ. ಆದರೆ ನನ್ನ ಜೀವನದಲ್ಲಿ ರಾತ್ರಿ ಬಿದ್ದ ಕನಸು ನಾನು ಮುಂಜಾನೆ ಎಚ್ಚರಗೊಂಡ ನಂತರವೂ ಕೂಡ ನನಗೆ ನೆನಪಿರುತ್ತದೆ. ಕನಿಷ್ಠ ವೆಂದರೂ ನನಗೆ ಎರಡು ಗಂಟೆಗಳ ಕಾಲ ನೆನಪಿನಿರುತ್ತದೆ. ನಿಮಗೆ ನಂಬಲು ಕಷ್ಟ ಆಗಬಹುದು. ಆದರೆ ಇದು ಸತ್ಯ.
    ನಿಮಗೂ ಕೂಡ ಕನಸುಗಳು ಬಿದ್ದರೆ ಗೊಂದಲ ಪಡುವ ಅಗತ್ಯವಿಲ್ಲ. ನಿಮಗೂ ಕೂಡ ನಿಮ್ಮ ಕನಸಿನ ಬಗ್ಗೆ ತಿಳಿಯುವ ಇಚ್ಛೆ ಇದ್ದರೆ ನನಗೆ ತಿಳಿಸಿ. ಯಾವ ಕಾರಣಕ್ಕೆ ಬಿದ್ದಿದೆ ಎಂದು ಅರ್ಥ ಸಹಿತ ನಾನು ತಿಳಿಸುತ್ತೇನೆ. ಆದರೆ ನಾನು ಕನಸುಗಳಿಗೆ ಅರ್ಥವನ್ನು ಉಚಿತವಾಗಿ ತಿಳಿಸುವುದಿಲ್ಲ. ಬೀಳುವ ಪ್ರತಿ ಕನಸಿಗೆ ಅರ್ಥವನ್ನು ಹೇಳುವುದಕ್ಕೆ ನಾನು ತೆಗೆದುಕೊಳ್ಳುವ ದರ ರೂ.11/- ಮಾತ್ರ. ಏಕೆಂದರೆ ನಿಮಗೆ ಬೀಳುತ್ತಿರುವ, ಅಥವಾ ಬೀಳುವ ಕನಸು ನಿಮ್ಮ ಜೀವನದಲ್ಲಿ ಏನಾದರೂ ಮುನ್ಸೂಚನೆಯಾಗಿರಬಹುದು ಅಥವಾ ಎಚ್ಚರಿಕೆಯೂ ಆಗಿರಬಹುದು.
ಕನಸುಗಳು ಬೀಳುವುದರಿಂದ ಆಗುವ ಲಾಭಗಳು
1) ಮನಸ್ಸಿನ ಶಾಂತಿ: ದಿನಪೂರ್ತಿ ಕಂಡ ಒತ್ತಡವನ್ನು ಮೆದುಳು ಕನಸಿನ ಮೂಲಕ ಹೊರಗೆ ಹಾಕುತ್ತದೆ.
2) ಸೃಜನಶೀಲತೆ: ಹಲವಾರು ಕಲಾವಿದರು, ಲೇಖಕರು, ಬರಹಗಾರರು, ವಿಜ್ಞಾನಿಗಳು ತಮ್ಮ ಕನಸಿನ ಮೂಲಕವೇ ಹೊಸ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ.
3) ಅವಚೇತನ ಅರಿವು: ಕನಸುಗಳು ನಮ್ಮ ಒಳಗಿನ ಭಯ,ಬಯಕೆ, ಆಸೆಗಳನ್ನು ಎತ್ತಿ ತೋರಿಸುತ್ತವೆ.
4) ಆಧ್ಯಾತ್ಮಿಕ ಮಾರ್ಗದರ್ಶನ: ಕೆಲವರಿಗೆ ಕನಸುಗಳಲ್ಲಿ ದೇವರ ಸಂದೇಶ ಸಿಗುತ್ತದೆ ಎಂಬ ನಂಬಿಕೆಯಿದೆ.

ಕನಸುಗಳನ್ನು ಅರ್ಥ ಮಾಡಿಕೊಳ್ಳುವ ವಿಧಾನ
1) ಪ್ರತಿಯೊಂದು ಕನಸಿಗೂ ನೇರ ಅರ್ಥವಿರುವುದಿಲ್ಲ.
2) ಕನಸನ್ನು ಅರ್ಥ ಮಾಡಿಕೊಳ್ಳುವಾಗ ನಿಮ್ಮ ಮನಸ್ಸಿನ ಸ್ಥಿತಿ, ಅಂದು ಕಂಡ ಘಟನೆಗಳು ಮತ್ತು ಮುಖ್ಯವಾಗಿ ನಿಮ್ಮ ಭಾವನೆಗಳು ಮುಖ್ಯ.
3) ಕನಸುಗಳಿಗೆ ಹೆದರಬೇಡಿ ಅವುಗಳನ್ನು ಒಂದು ಸಂದೇಶ ಅಥವಾ ಪ್ರತಿಬಿಂಬ ಎಂಬಂತೆ ನೋಡಿ.

English Blog by Saandeep Joshi : 111999824
New bites

The best sellers write on Matrubharti, do you?

Start Writing Now