ಮಾರ್ಗಶಿರ ದಿನದ ಪೂಜೆ

ಶ್ರಾವಣ ಮತ್ತು ದೀಪಾವಳಿ ಹಬ್ಬದ ನಂತರ ಇಲ್ಲಿ ಮತ್ತೊಂದು ಪೂಜೆ ಬರುತ್ತದೆ, ಅದು ಮಾರ್ಗಶಿರ ಪೂಜೆ. ಹಿಂದು ಸಂಪ್ರದಾಯದ ಪ್ರಕಾರ ಇಡೀ ವರ್ಷದಲ್ಲಿ ಮಾರ್ಗಶಿರ ಅತ್ಯಂತ ಮಂಗಳಕರ ತಿಂಗಳು. ಮಾರ್ಗಶಿರ ಮಾಸಕ್ಕೆ ವಿಶೇಷ ಮಹತ್ವವಿದೆ.

ಮಾರ್ಗಶಿರ ಮಾಸದಲ್ಲಿ ಪ್ರತಿ ಗುರುವಾರದಂದು ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ.ಈ ಪೂಜೆಯನ್ನು ಮಾಡುವುದರಿಂದ ನಾವು ನಮ್ಮ ದೈನಂದಿನ ಜೀವನದಲ್ಲಿ ಬಹಳಷ್ಟು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತೇವೆ.

ಮಾರ್ಗಶೀರ ಮಾಸದ ಗುರುವಾರದಂದು, ಭಕ್ತರು ಮನೆಗಳಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲು ಸಿದ್ಧರಾಗುತ್ತಾರೆ. ಹಬ್ಬದ ದಿನಗಳಲ್ಲಿ ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಅಚ್ಚುಕಟ್ಟಾಗಿ ಇಡಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಸಣ್ಣ ವಿಗ್ರಹವನ್ನು ಪೂಜೆ ಸ್ಥಳದಲ್ಲಿ ಇರಿಸಲಾಗುತ್ತದೆ. ಕೆಲವರು ಲಕ್ಷ್ಮಿಯ ಚಿತ್ರ ಅಥವಾ ವಿಗ್ರಹದ ಬದಲಿಗೆ ಕಲಶವನ್ನು ಇಡುತ್ತಾರೆ.

ಮಾರ್ಗಶೀರ ಮಾಸದ ಎಲ್ಲಾ ಗುರುವಾರಗಳಲ್ಲಿ, ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸವನ್ನು ಮಾಡುತ್ತಾರೆ.ಈ ಉಪವಾಸದ ಸಮಯದಲ್ಲಿ, ಹಣ್ಣುಗಳನ್ನು ಮಾತ್ರ ಸೇವಿಸಲಾಗುತ್ತದೆ. ಈ ದಿನಗಳಲ್ಲಿ ಗಣೇಶ, ಲಕ್ಷ್ಮಿ ಮತ್ತು ವಿಷ್ಣು ದೇವರನ್ನು ಪೂಜಿಸಲಾಗುತ್ತದೆ ಮತ್ತು ಮಹಾಲಕ್ಷ್ಮಿ ವ್ರತ ಕಥೆಯನ್ನು

ಓದುತ್ತಾರೆ. ಶ್ರೀ ಮಹಾಲಕ್ಷ್ಮಿ ಆರತಿ ಮತ್ತು ಮಹಾಲಕ್ಷ್ಮಿ ನಮನ ಅಷ್ಟಕಗಳನ್ನು ಸಹ ಪಠಣ ಮಾಡಲಾಗುತ್ತದೆ. ಸಂಜೆ ಲಕ್ಷ್ಮಿ ಪೂಜೆಯ ನಂತರ, ಲಕ್ಷ್ಮಿ ದೇವಿಗೆ ತೋರಿಸಿದ್ಧ ನೈವೇದ್ಯವನ್ನು ಆಕಳಿಗೆ ತಿನ್ನಿಸಿ ಅದರ ನಂತರ ಅವರು ತಮ್ಮ ಆಹಾರವನ್ನು ಸೇವಿಸುತ್ತಾರೆ. ಈ ರೀತಿಯಾಗಿ ಮಾರ್ಗಶೀರ ಪೂಜೆಯನ್ನು ಸಂತೋಷದಿಂದ ಆಚರಿಸಲಾಗುತ್ತದೆ.Article By

Akshata Ningannavar

Brains Media Solutions

Kannada Religious by Brains Media Solutions Pvt. Ltd. : 111847006

The best sellers write on Matrubharti, do you?

Start Writing Now