Kannada Quote in Poem by Prashanth B

Poem quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

ಬಿಡುಗಡೆ, ಬೇಕಿಲ್ಲ ನೀವಾಗಲೇ ಮುಕ್ತರು..!! ಈ ಶೀರ್ಷಿಕೆ ನಿಮಗೆ ಗೊಂದಲ ಉಂಟು ಮಾಡಿದೆಯೇ?
ಹಾಗಾದರೆ ಈ ಕವನ ಓದಿಕೊಳ್ಳಿ... ಈ ಒಡಲು ಬಂಧನದಲ್ಲಿ ಇದೆ, ಮನಸ್ಸು ಬಂಧನದಲ್ಲಿ ಇದೆ... ಆದರೆ ಅವನ್ನು ಅರಿವ ಅರಿವಿಗೆ ಬಂಧನವಿಲ್ಲ... ಅದು ನಿತ್ಯ ಮುಕ್ತ...

ಓ ಮನವೆ

ಓ ಮನವೆ, 
ಸರಿದು ಹೋಗುವ ಮುನ್ನ, ಬರಿದಾಗ ಒಮ್ಮೆ 
ನಿ ಯಾರಿಂದು ಕೇಳು, ಓ ಮನವೆ. 
ನನ್ನ ಹೆಸರು, ಕುಲ, ಗೋತ್ರ, ನೆನವು, ನನಗೆ ಗೊತ್ತೆಂದೆನ್ನ ಬೇಡ, 
ಎಲ್ಲ ನಾ ಬಲ್ಲೆನೆನಬೇಡ. 
ಹೆಸರು, ಕುಲ, ಗೋತ್ರ, ನೆನವುಗಳಾಚೆ, 
ನಿ ಯಾರೆಂದು ಕೇಳು, ಓ ಮನವೆ. 

ಓ ಮನವೆ, 
ಯಾವುದರ ಅರಿವು ನಿನಗಿದೆಯೋ, ಅದು ನೀನಲ್ಲ. 
ಆ ಮಾಮರದ ಅರಿವು ನಿನಗಿದೆ, 
ಆ ಮಾಮರವು ನೀನಲ್ಲ. 
ಆ ಸದ್ದಿನ ಅರಿವು ನಿನಗಿದೆ, 
ಆ ಸದ್ದು ನೀನಲ್ಲ. 
ಮಾವಿನ ರುಚಿಯ ಅರಿವು ನಿನಗಿದೆ, 
ಆ ರುಚಿಯು ನೀನಲ್ಲ. 
ಗಂಧದ ಘಮದ ಅರಿವು ನಿನಗಿದೆ, 
ಆ ಘಮವು ನೀನಲ್ಲ. 
ರೇಷ್ಮೆಯ ನುಣುಪಿನ ಅರಿವು ನಿನಗಿದೆ, 
ಆ ನುಣುಪು ನೀನಲ್ಲ. 

ಓ ಮನವೆ, 
ಸರಿದು ಹೋಗುವ ಮುನ್ನ ಬರಿದಾಗ ಒಮ್ಮೆ 
ನಿ ಯಾರೆಂದು ಕೇಳು. 
ಈ ಒಡಲ ಅರಿವು ನಿನಗಿದೆ, 
ಈ ಒಡಲು ನೀನಲ್ಲ. 
ಈ ಯೋಚನೆಗಳ ಅರಿವು ನಿನಗಿದೆ, 
ಈ ಯೋಚನೆಗಳು ನಿನಲ್ಲ, ಓ ಮನವೆ. 
ಕೆಟ್ಟ ಯೋಚನೆಗಳು ನೀನಲ್ಲ, 
ಒಳ್ಳೆ ಯೋಚನೆಗಳು ನೀನಲ್ಲ. 
ಆತಂಕವೂ ನೀನಲ್ಲ, ಓ ಮನವೆ. 
ನಿನಗೆ ಅವೆಲ್ಲದರ ಅರಿವಿದೆ, 
ನಿ ಯೋಚನೆಗಳಲ್ಲ, ಓ ಮನವೆ. 

ಒಮ್ಮೆ ಯೋಚನೆಗಳು ನಿಂತೊಡನೆ ನಿರಾಳ, 
ಆ ನಿರಾಳದ ಅರಿವು ನಿನಗಿದೆ, 
ಆ ನಿರಾಳವು ನೀನಲ್ಲ, ಓ ಮನವೆ. 

ಹಾಗಾದರೆ, ಯಾರು ನೀ ಹೇಳು ಮನವೆ. 
ಈ ಅರಿವೇ ನೀನು, ಮನವೆ. 
ನೋಡು, ನಿನಗಿಲ್ಲ ಯಾವ ಆಕಾರ, 
ನೋಡು, ನಿನಗಿಲ್ಲ ಯಾವ ಮಿತಿ, 
ನೋಡು, ನಿನಗಿಲ್ಲ ಯಾವ ಪರಿಧಿ. 
ನೋಡು ಓ ಮನವೆ, ಕೊನೆಮೊದಲಿಲ್ಲ ನಿನಗೆ. 

ಎಲ್ಲವನರಿವೆ ನೀನು, 
ನಿನ್ನ ನೀನು ಅರಿವೆ. 

ಹೊರಗುರುವನು ಹುಡುಕಬೇಡ ಮನವೆ, 
ಈ ಅರಿವೆ ನಿನ್ನ ಗುರುವು. 
ನಿನಗೆ ನೀನೇ ದೀವಿಗೆ, 
ನಿನಗೆ ನೀನೇ ಬೆಳಕು. 
ಈ ಅರಿವೆ ಬೆಳಕು, 
ನೀನೇ ಆ ಬೆಳಕು.

ಅರ್ಥಸಾರ (ಭಾವಾನುವಾದ)
ಈ ವಚನದಲ್ಲಿ ಕವಿ ಮನಸ್ಸಿಗೆ ಕೇಳುತ್ತಾರೆ — “ನೀ ಯಾರು?” 
ನೀನು ಅರಿವಿನ ಸಾಕ್ಷಿ, ಆದರೆ ಅರಿತ ವಸ್ತುಗಳಲ್ಲ. 
ದೇಹ, ಯೋಚನೆ, ಭಾವನೆ — ಇವು ನಿನ್ನಲ್ಲ. 
ಅವುಗಳ ಅರಿವು ನಿನಗಿದೆ, ಆದರೂ ಅವು ನೀನಲ್ಲ. 
ಆದ್ದರಿಂದ ಹೊರಗುರುವನ್ನೇ ಹುಡುಕಬೇಡ; 
ನಿನ್ನೊಳಗಿನ ಅರಿವೇ ನಿನ್ನ ಗುರು, ನಿನ್ನ ದೀವಿಗೆ, ನಿನ್ನ ಬೆಳಕು.

ಸಾರಾಂಶವಾಗಿ — “ಮನಸ್ಸು ನಿನ್ನವಲ್ಲ, ಅರಿವು ನೀನು.” ✨

Kannada Poem by Prashanth B : 112017058
New bites

The best sellers write on Matrubharti, do you?

Start Writing Now