ನಾವು ಮಾಡೋ ಕೆಲಸದಲ್ಲಿ ಒಳ್ಳೆ ಉದ್ದೇಶ ಇದ್ದರೆ ಸ್ವಲ್ಪ ಕಷ್ಟ ಆದ್ರು ಕೊನೆಗೆ ಒಳ್ಳೇದೇ ಆಗುತ್ತೆ ಅನ್ನೋ ಮಾತಿದೆ ಹಾಗೇ ತಾತ ಫ್ಯಾಕ್ಟರಿ ನಾ ಶುರು ಮಾಡಿದೆ ಒಳ್ಳೆ ಉದ್ದೇಶದಿಂದ ಹಾಗೇ ನಾನು ಕೂಡ ದುಡ್ಡಿನ ಆಸೆಗೆ ಬೀಳದೆ ನನ್ನ ನಂಬಿ ಬಂದವರಿಗೆ ಒಳ್ಳೆಯದು ಆಗಲಿ ಅಂತ ಅನ್ಕೊಂಡು ಈ ನಿರ್ಧಾರ ತಗೊಂಡೆ. ತಾತ ನಾ ಅನುಭವ ನನಗೆ ತುಂಬಾ ಸಹಾಯ ಮಾಡಿತು, ಪ್ರತಿಯೊಂದು ಹೆಜ್ಜೆ ನಾ ಯೋಚ್ನೆ ಮಾಡಿ ಇಡೋಕೆ ಶುರು ಮಾಡಿದೆ. ನೀಲಾ ರೋಹಿಣಿ ಇಬ್ಬರು ಅವರ ಬುದ್ದಿವಂತಿಕೆ ನ ಬಳಸಿಲೋಳ್ಳೋಕೆ ಶುರು ಮಾಡಿದ್ರು, ಒಳ್ಳೆ ಒಳ್ಳೆ ಡಿಸೈನ್ ಮಾಡೋಕೆ ಶುರು ಮಾಡಿದ್ರು ಈಗಿನ ಟ್ರೆಂಡ್ ಗೆ ತಕ್ಕ ಹಾಗೇ. ಮೊದಲೇ ಪ್ಲಾನ್ ಮಾಡಿದ ಹಾಗೇ ಕಾಲೇಜ್ ಗಳಲ್ಲಿ ಫ್ಯಾಷನ್ ಷೋ ನ ಶುರು ಮಾಡಿದ್ವಿ. ಸೋಶಿಯಲ್ ಮೀಡಿಯಾ ದಲ್ಲೂ ಒಳ್ಳೆ ಅಭಿಪ್ರಾಯ ಬರೋಕೆ ಶುರುವಾಯ್ತು. ಡಿಮ್ಯಾಂಡ್ ಗೆ ತಕ್ಕ ಹಾಗೇ ಪ್ರೊಡಕ್ಷನ್ ನಾ ಶುರು ಮಾಡಿದ್ವಿ. ಮೈಸೂರಲ್ಲಿ ಬೆಂಗಳೂರಲ್ಲಿ ಶಬರಿ ಶಾಪಿಂಗ್ ಮಾಲ್ ನ ಓಪನ್ ಮಾಡಿದ್ವಿ. ಶಬರಿ ಬ್ರಾಂಡ್ ಗೆ ಒಳ್ಳೆ ಡಿಮ್ಯಾಂಡ್ ಬಂತು. ಹೊಸದಾಗಿ ಬಿಸಿನೆಸ್ ಶುರು ಮಾಡಬೇಕು ಅಂತ ಇದ್ದಾ ಯುವಕರಿಗೆ ಫ್ರ್ಯಾಂಚಸಿ ಕೊಟ್ವಿ. ನೋಡ್ತಾ ಇದ್ದಾ ಹಾಗೇ 6 ತಿಂಗಳು ಕಳೆದು ಹೋಯ್ತು. ಶಬರಿ ಟೆಕ್ಸ್ಟ್ ಟೈಲ್ಸ್ ಬ್ರಾಂಡ್ ಟಾಪ್ ಬ್ರಾಂಡ್ ಗಳಲ್ಲಿ ಒಂದಾಯ್ತು. ಹೆಸರಿನ ಜೊತೆಗೆ ದುಡ್ಡು ಕೂಡ ಬಂತು . ಎರಡು ಫ್ಯಾಮಿಲಿ ಗಳು ತುಂಬಾ ಖುಷಿ ಪಟ್ಟರು ತಾತ ಅಜ್ಜಿ ಅಂತು ಇನ್ನು ಹೆಚ್ಚು ಸಂತೋಷ ಪಟ್ಟರು.
ಇಬ್ಬರು ತಾತಂದಿರು ಕೂತು ಮಾತಾಡಿಕೊಂಡು ನೀಲಾ ಶಿಲ್ಪಾ ಮದನ್ ರೋಹಿಣಿ ನ ಕಂಪನಿ ಗೆ ಬೋರ್ಡ್ ಆಫ್ ಡೈರೆಕ್ಟರ್ಸ್ ನ ಮಾಡಿದ್ರು. ಛೇರ್ಮನ್ ಆಗಿ ಇಬ್ಬರು ತಾತಂದಿರು ಇರೋಕೆ ಹೇಳಿದ್ರೆ ಅವರು ಈ ವಯಸ್ಸಲ್ಲಿ ನಮಗೆ ಬೇಕಾಗಿರೋದು ವಿಶ್ರಾಂತಿ ನೆಮ್ಮದಿ ಅಷ್ಟೇ, ಜವಾಬ್ದಾರಿ ಅಲ್ಲ ಅಂತ ಹೇಳಿ. ಶಿಲ್ಪಾ ಅವರ ತಾತ ಇವತ್ತು ಈ ಮಟ್ಟಕ್ಕೆ ಈ ವ್ಯಾಪಾರ ಬೆಳಿಯೋಕೆ ಕಾರಣ ಮಹಿ. ಇವತ್ತು ಅವನು ನಮ್ಮಲ್ಲಿ ಒಬ್ಬನು. ಅವನಿಗೆ ಅವನು ಬೆಳಿಬೇಕು ಅನ್ನೋದಕ್ಕಿಂತ ಎಲ್ಲರೂ ಬೆಳಿಬೇಕು ಅನ್ನೋ ಒಳ್ಳೆ ಮನಸ್ಸಿರೋ ವ್ಯಕ್ತಿ ಅಂತ ವ್ಯಕ್ತಿ ನ ಈ ಕಂಪನಿ ಯ ಛೇರ್ಮನ್ ಆಗಿ ಈ ಕಂಪನಿ ಅ ceo ಆಗಿ ಮಾಡಿದ್ರೆ ಇನ್ನು ಒಳ್ಳೇದು ಆಗುತ್ತೆ ಅಂತ ಹೇಳಿದ್ರು. ಅದಕ್ಕೆ ತಾತ ಹೌದು ಕನ್ಲಾ ನಿನ್ ಹೇಳೋದು ನಿಜಾನೆ ಇವತ್ತು ಈ ಕಂಪನಿ ಇಷ್ಟು ಬೆಳಿಯೋಕೆ ಕಾರಣ ಮಹಿ ನೇ, ಅದಕ್ಕೆ ನಿನ್ ಹೇಳಿದ ಹಾಗೇ ಅವನನ್ನ ಕಂಪನಿ ಗೆ ಛೇರ್ಮನ್ ಆಗಿ ceo ಆಗಿ ಮಾಡೋಣ ಅಂತ ಹೇಳಿ. ನೀಲಾ ಕಡೆಗೆ ನೋಡಿ ಅಮ್ಮ ಮಹಿ ಎಲ್ಲಿ ಹೋಗಿದ್ದಾನೆ ಅಂತ ಕೇಳಿದ್ರು. ನೀಲಾ ತಾತನ ಕಡೆ ನೋಡ್ತಾ ತಾತ ಮಹಿ ಮುಂಬೈ ಹೋಗಿದ್ದಾನೆ ನಾಳೆ ಬರ್ತಾನೇ ಅಂತ ಹೇಳಿದ್ಲು. ತಾತ ಸರಿ ಅವನು ಬಂದ್ರೆ ಮನೆಗೆ ಬರೋಕೆ ಹೇಳು ಅಂತ ಹೇಳಿ. ಮೀಟಿಂಗ್ ಮುಗಿಸಿಕೊಂಡು ಹೊರಟು ಹೋದರು. ಶಿಲ್ಪಾ ಅವರ ತಾತ ಕೂಡ ತಾತನ ಜೊತೆಗೆ ಹೊರಟು ಹೋದರು.
ಮುಂಬೈ ಅಲ್ಲಿ ಮೀಟಿಂಗ್ ಮುಗಿಸಿಕೊಂಡು ಫ್ಲೈಟ್ ಅಲ್ಲಿ ಬೆಂಗಳೂರು ಬಂದೆ. ಬೆಂಗಳೂರಿಗೆ ಬರ್ತಾ ಇದ್ದಾ ಹಾಗೇ ನೀಲಾ ಕಾಲ್. ಕಾಲ್ ಪಿಕ್ ಮಾಡಿ ಹೇಳೇ ಅಂದೇ. ಲೋ ಎಲ್ಲಿದ್ದೀಯ ಅಂತ ಕೇಳಿದ್ಲು. ಜಸ್ಟ್ ಈಗಷ್ಟೇ ಏರ್ಪೋರ್ಟ್ ಯಿಂದ ಹೊರಗೆ ಬಂದು ಟ್ಯಾಕ್ಸಿ ಲಿ ಮನೆಗೆ ಹೋಗ್ತಾ ಇದ್ದೀನಿ ಅಂತ ಹೇಳ್ದೆ. ಸರಿ ಹುಷಾರು ಮೈಸೂರ್ ಯಾವಾಗ ಬರ್ತೀಯ ಅಂತ ಕೇಳಿದ್ಲು. ಸಂಜೆ ಬರ್ತೀನಿ ಅಂತ ಹೇಳ್ದೆ. ಸರಿ ಹುಷಾರಾಗಿ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ಲು. ನಾನು ಟ್ಯಾಕ್ಸಿ ಅಲ್ಲಿ ಮನೆಗೆ ಹೋದೆ. ಅಮ್ಮ ಮನೇಲಿ ಇದ್ರು. ನನ್ನ ನೋಡಿ ಖುಷಿಯಾಗಿ ಹೇಗಿದ್ದಿಯೋ ಅಂತ ಎದ್ದು ಹತ್ತಿರ ಬಂದರು . ಚೆನ್ನಾಗಿ ಇದ್ದೀನಿ ಅಮ್ಮ ನಿನ್ ಹೇಗ್ ಇದ್ದಿಯಾ ಅಂತ ಕೇಳ್ದೆ. ಅಮ್ಮ ಸ್ವಲ್ಪ ಬೇಜಾರಿನಿಂದ ಮಾತಾಡ್ತಾ . ಇಷ್ಟು ದಿನ ನಿನ್ ಇಲ್ದೆ ಇದ್ರು ಹರಿಣಿ ಪಾಪು ಇದ್ರು ದಿನ ಹೋಗೋದೇ ಗೊತ್ತಾಗ್ತಾ ಇರಲಿಲ್ಲ ಇವಾಗ ಅವಳು ಅವಳ ಗಂಡನ ಮನೆಗೆ ಹೋದ್ಲು ನಿಮ್ಮಕ್ಕ ಆಫೀಸ್ ಗೆ ಹೋದ್ಲು, ನೀನು ಯಾವಾಗೋ ಒಂದು ಸರಿ ಮನೆಗೆ ಬರ್ತೀಯ. ಒಬ್ಳೆ ಇದ್ದು ಇದ್ದು ಬೋರಗ್ತಾ ಇದೆ ಅಂತ ಹೇಳಿದ್ರು. ನಾನು ನಗ್ತಾ ಏನಮ್ಮ ನೀನು ಅಕ್ಕ ವಾರದಲ್ಲಿ 4 ದಿನ ಮನೇಲೆ ಇರ್ತಾಳೆ 3 ದಿನ ಆಫೀಸ್ ಗೆ ಹೋಗ್ತಾಳೆ, ನಿನ್ ಇರು ಅಂತ ಹೇಳಿದ್ರೆ ಮನೇಲೆ ಇದ್ದು ಆಫೀಸ್ ವರ್ಕ್ ಮಾಡ್ತಾ ನಿನ್ ಜೊತೆಗೆ ಇರ್ತಾಳೆ. ಹೇಳೋದು ಅಲ್ವಾ ಅವಳಿಗೆ ಮನೇಲೆ ಇರೋಕೆ ಅಂತ ಹೇಳ್ದೆ. ಹೇಳ್ದೆ ಕಣೋ ಇಂಪಾರ್ಟೆಂಟ್ ಮೀಟಿಂಗ್ ಇದೆ ಅಂತ ಹೋದ್ಲು ಮಧ್ಯಾಹ್ನ ಕ್ಕೆ ಬರ್ತಾಳೆ ಅಂತ ಹೇಳಿ. ತಿಂಡಿ ತಿಂದ ಅಂತ ಕೇಳಿದ್ರು. ಇನ್ನು ಇಲ್ಲಾ ಅಂತ ಹೇಳ್ದೆ. ಸರಿ ಬೇಗ ಹೋಗಿ ಫ್ರೆಶ್ ಅಪ್ ಆಗಿ ಬಾ ತಿಂಡಿ ಕೊಡ್ತೀನಿ ಅಂತ ಹೇಳಿದ್ರು. ಸರಿ ಅಮ್ಮ ಅಂತ ಹೇಳಿ ನನ್ನ ರೂಮ್ ಗೆ ಹೋದೆ. ರೂಮ್ ಗೆ ಬಂದು ಫ್ರೆಷ್ ಅಪ್ ಆಗಿ ರೆಡಿ ಆಗಿ ತಿಂಡಿ ತಿನ್ನೋಕೆ ಹಾಲ್ ಗೆ ಹೋದೆ. ಅಮ್ಮ ನನ್ನ ನೋಡಿ ಏನೋ ಮತ್ತೆ ಹೋಗ್ತಾ ಇದ್ದಿಯಾ ಅಂತ ಕೇಳಿದ್ರು. ಇಲ್ಲಾ ಅಮ್ಮ ಇಲ್ಲೇ ಒಂದು ಮೀಟಿಂಗ್ ಇದೆ ಹೋಗಿ ಅದನ್ನ ಮುಗಿಸಿಕೊಂಡು ಆಫೀಸ್ ಗೆ ಹೋಗಿ ಬರ್ತೀನಿ ಅಂತ ಹೇಳ್ದೆ. ಅಮ್ಮ ಸರಿ ಬಾ ಕುತ್ಕೋ ಅಂತ ಹೇಳಿ ಪ್ಲೇಟ್ ಗೆ ತಿಂಡಿ ಬಡಿಸೋಕೆ ಶುರು ಮಾಡಿದ್ರು. ಅಮ್ಮ ನೀನು ಕುತ್ಕೋ ಒಟ್ಟಿಗೆ ತಿಂಡಿ ತಿನ್ನೋಣ ಅಂತ ಹೇಳ್ದೆ. ಅಮ್ಮ ಕೂಡ ನನ್ನ ಜೊತೆಗೆ ತಿಂಡಿ ತಿನ್ನೋಕೆ ಶುರು ಮಾಡಿದ್ರು. ಅಮ್ಮ ತಿಂಡಿ ಮಾಡ್ತಾ ಅಲ್ವೋ ಈಗಷ್ಟೇ ಬಂದಿದ್ದೀಯ ಮತ್ತೆ ಕೆಲಸ ಅಂತ ಹೋಗ್ತಾ ಇದ್ದಿಯಾ ನಿನಗೆ ರೆಸ್ಟ್ ಅನ್ನೋದೇ ಬೇಡವೇನೋ ಅಂತ ಕೇಳಿದ್ರು. ಇಲ್ಲಾ ಅಮ್ಮ ಇವಾಗ ಹೋಗ್ತಾ ಇರೋ ಮೀಟಿಂಗ್ ಲಾಸ್ಟ್ ವೀಕ್ ನಡೀಬೇಕಾಗಿತ್ತು ಅದ್ರೆ ಲಾಸ್ಟ್ ಮೂಮೆಂಟ್ ಅಲ್ಲಿ ಅವರಿಗೆ ಏನೋ ಸ್ವಲ್ಪ ಪ್ರಾಬ್ಲಮ್ ಆಗಿ ಕ್ಯಾನ್ಸಲ್ ಮಾಡಿದ್ರು. ನೆನ್ನೆ ಕಾಲ್ ಮಾಡಿ ಇವತ್ತು ಮೀಟಿಂಗ್ ಗೆ ಬರೋಕೆ ಆಗುತ್ತಾ ಅಂತ ಕೇಳಿದ್ರು. ಹೇಗಿದ್ರು ಇಲ್ಲೇ ಅಲ್ವಾ ಮೀಟಿಂಗ್ ಅದಕ್ಕೆ ಬರ್ತೀನಿ ಅಂತ ಹೇಳ್ದೆ ಅಂತ ಹೇಳಿ ತಿಂಡಿ ತಿನ್ನೋಕೆ ಶುರು ಮಾಡಿದೆ. ಅಮ್ಮ ವ್ಯಾಪಾರ ದ ಬಗ್ಗೆ ಕೆಲವೊಂದು ವಿಷಯ ನ ಮಾತಾಡ್ತಾ ನಾನು ಅವರಿಗೆ ಹೇಳ್ತಾ ತಿಂಡಿ ಮುಗಿಸಿದ್ವಿ.
ತಿಂಡಿ ತಿಂದ ಮೇಲೆ ಅಮ್ಮನಿಗೆ ಬೈ ಹೇಳಿ ಕಾರ್ ನ ಸ್ಟಾರ್ಟ್ ಮಾಡಿಕೊಂಡು ಮೀಟಿಂಗ್ ಪ್ಲೇಸ್ ಕಡೆಗೆ ಹೋದೆ. ಸ್ವಲ್ಪ ಸಮಯದ ನಂತರ ಅ ಪ್ಲೇಸ್ ಹತ್ತಿರ ಬಂದೆ. ನನಗೆ ಸ್ವಲ್ಪ ಶಾಕ್ ಆಯ್ತು ಕಾರಣ ಮೀಟಿಂಗ್ ಬಂದ ಪ್ಲೇಸ್ ನಾನು ಇದಕ್ಕೂ ಮೊದಲು ವರ್ಕ್ ಮಾಡ್ತಾ ಇದ್ದಾ ಆಫೀಸ್. ಆಲ್ರೆಡಿ ಕ್ಯಾನ್ಸಲ್ ಮಾಡಿ ಮತ್ತೆ ಫಿಕ್ಸ್ ಮಾಡಿರೋ ಮೀಟಿಂಗ್ ಮತ್ತೆ ಕ್ಯಾನ್ಸಲ್ ಅಂತ ಹೇಳಿದ್ರೆ ಬಿಸಿನೆಸ್ ಗೆ ಪ್ರಾಬ್ಲಮ್ ಆಗುತ್ತೆ ಅಂತ ಯೋಚ್ನೆ ಮಾಡಿ ಕಾರ್ ನ ಪಾರ್ಕಿಂಗ್ ಅಲ್ಲಿ ನಿಲ್ಲಿಸಿ, ಲಿಫ್ಟ್ ಅಲ್ಲಿ ಆಫೀಸ್ ರಿಸೆಪ್ಶನ್ ಗೆ ಬಂದೆ. ರಿಸೆಪ್ಶನ್ ಅಲ್ಲಿ ಇದ್ದಾ ಹುಡುಗಿ ನನ್ನ ನೋಡಿ ಸ್ವಲ್ಪ ಶಾಕ್ ಆಗಿ. ಮಹಿ ನಿನ್ ಏನ್ ಇಲ್ಲಿ. ಹೇಗಿದ್ದೀಯ ಅಂತ ಸ್ವಲ್ಪ ಅಕ್ಕರೆಯಿಂದ ಕೇಳಿದ್ರು. ನಾನು ಚೆನ್ನಾಗಿ ಇದ್ದೀನಿ ನೀವು ಹೇಗಿದ್ದೀರ ಅಂತ ಕೇಳ್ದೆ. ನಾನು ಚೆನ್ನಾಗಿ ಇದ್ದೀನಿ ಅಂತ ಹೇಳಿ. ಹೇಳು ಮಹಿ ನೀನು ಬಂದ ವಿಷಯ ಅಂತ ಕೇಳಿದ್ರು. ನಾನು ವಿಷಯ ಹೇಳಿದೆ. ವಿಷಯ ಕೇಳಿ ಅವರು ಶಾಕ್ ಆದ್ರು. ಬಟ್ ತುಂಬಾ ಖುಷಿ ಪಟ್ಟರು. ಸೀರಿಯಸ್ಲಿ ಮಹಿ ನಿನ್ನ ನೋಡಿ ನನಗೆ ತುಂಬಾ ಖುಷಿ ಆಗ್ತಾ ಇದೆ. ಯಾವ ಕಂಪನಿ ನಿನ್ನ ಕೆಲಸದಿಂದ ತೆಗೆದು ಹೊರಗೆ ಕಳಿಸಿದ್ರೋ ಇವಾಗ ಅದೇ ಕಂಪನಿ ನಿನ್ನ ಹತ್ತಿರ ಬರೋ ಹಾಗೇ ಮಾಡಿದೆ. ನಿನ್ನ ನೋಡ್ತಾ ಇದ್ರೆ ನನಗೆ ತುಂಬಾ ಹೆಮ್ಮೆ ಅಂತ ಅನ್ನಿಸ್ತಾ ಇದೆ ಅಂತ ಹೇಳಿದ್ರು. ನಾನು ಅಯ್ಯೋ ಅ ರೀತಿ ಏನು ಇಲ್ಲಾ ಏನೋ ದೇವರ ದಯೆ ಒಳ್ಳೆ ವ್ಯಕ್ತಿ ಗಳು ಸಿಕ್ಕಿದ್ರು ಅಷ್ಟೇ ನಂದೇನು ಇಲ್ಲಾ ಅಂತ ಹೇಳ್ದೆ. ನಿನ್ ಮನಸ್ಸು ತುಂಬಾ ಒಳ್ಳೇದು ಮಹಿ ಅದಕ್ಕೆ ನಿನಗೆ ಒಳ್ಳೆಯವರೇ ಸಿಕ್ಕಿದ್ರು, ನನಗು ಈ ಕಂಪನಿ ಅಲ್ಲಿ ವರ್ಕ್ ಮಾಡೋಕೆ ಇಷ್ಟ ಇಲ್ಲಾ ಬಟ್ ನನ್ನ ಪರಿಸ್ಥಿತಿ ಬೇರೆ ಕಡೆಗೆ ಹೋಗೋ ಹಾಗೇ ಬಿಡ್ತಿಲ್ಲ. 8 ತಿಂಗಳಿಂದ ಇದೆ ಆಫೀಸ್ ಅಲ್ಲಿ ಇದೆ ರಿಸೆಪ್ಶನ್ ಅಲ್ಲಿ ಇದೆ ವರ್ಕ್ ಮಾಡ್ತಾ ಇದ್ದೀನಿ ಬೇರೆ ಪೋಸ್ಟ್ ಕೊಡ್ತಾ ಇಲ್ಲಾ ವಿಧಿ ಇಲ್ಲದೆ ಮಾಡ್ತಾ ಇದ್ದೀನಿ ಅಂತ ಹೇಳಿದ್ರು. ನನಗೆ ಅವರ ಪರ್ಸನಲ್ ವಿಷಯ ಅಷ್ಟಾಗಿ ಗೊತ್ತಿಲ್ದೆ ಇದ್ದರು ಬಟ್ ಇಲ್ಲಿ ವರ್ಕ್ ಮಾಡೋವಾಗ ಅವರ ಬಗ್ಗೆ ಸ್ವಲ್ಪ ಗೊತ್ತಾಯಿತು. ಅದಕ್ಕೆ ಮೇಡಂ ನೀವೇನು ನನ್ನ ಬಗ್ಗೆ ತಪ್ಪಾಗಿ ತಿಳ್ಕೊಳ್ಳೋದಿಲ್ಲ ಅಂದ್ರೆ ನಿಮಗೆ ಒಂದು ವಿಷಯ ಹೇಳ್ಳಾ ಅಂದ್ರು. ಅವರು ನಗ್ತಾ ಮಹಿ ನಿನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ನಿನ್ನ ಬಗ್ಗೆ ಬೇರೆಯವರು ತಪ್ಪಾಗಿ ತಿಳ್ಕೋತಾರೆ ಬಿಟ್ರೆ ನಿನ್ ಯಾರ್ ಬಗ್ಗೆನೂ ತಪ್ಪಾಗಿ ತಿಳಿದುಕೊಳ್ಳೋದು ಇಲ್ಲಾ ತಪ್ಪಾಗಿ ಮಾತಾಡೋದು ಇಲ್ಲಾ. ನನ್ನ ನೀವು ಮೇಡಂ ಅಂತ ಕರಿಯೋದು ಬೇಡ ಶೀತಲ್ ಅಂತ ಕರೀರಿ ಸಾಕು ಅಂತ ಹೇಳಿ ವಿಷಯ ಹೇಳು ಅಂತ ಕೇಳಿದ್ರು. ಮೇಡಂ ನಿಮ್ ಹತ್ತಿರ ನನ್ನ ನಂಬರ್ ಇದೆ ಅಲ್ವಾ ಈವನಿಂಗ್ ಆಫೀಸ್ ಮುಗಿದ ಮೇಲೆ ನನಗೆ ಕಾಲ್ ಮಾಡಿ ಅಂತ ಹೇಳ್ದೆ. ಸರಿ ಆಫೀಸ್ ಮುಗಿದ ಮೇಲೆ ಕಾಲ್ ಮಾಡ್ತೀನಿ ಅಂತ ಹೇಳಿ. ಸಾರೀ ನಿನ್ ಬಂದ ಕೆಲಸಾನೇ ಮರೆತು ಹೋಯ್ತು ಅಂತ ಹೇಳಿ, ಕಾಲ್ ಮಾಡಿ ನಾನ್ ಬಂದ ವಿಷಯ ಹೇಳಿದ್ರು. ಆಮೇಲೆ ನನ್ನ ಹತ್ತಿರ ಮಾತಾಡ್ತಾ ಮಹಿ 15 ನಿಮಿಷ ಮೀಟಿಂಗ್ ಗೆ ರೆಡಿ ಆಗ್ತಾ ಇದೆ, ನೀವು ಆರಾಮಾಗಿ ಕೂತ್ಕೊಳ್ಳಿ ಅಂತ ಹೇಳಿದ್ರು. ನಾನು ಸರಿ ಅಂತ ಹೇಳಿ ಅಲ್ಲೇ ಇದ್ದಾ ಸೋಫಾ ಮೇಲೆ ಹೋಗಿ ಕುತ್ಕೊಂಡೆ.
5 ನಿಮಿಷದ ನಂತರ ಯಾರೋ ನನ್ನ ಬಗ್ಗೆ ಮಾತಾಡಿಕೊಂಡು ನನ್ನ ಹತ್ತಿರ ಬರೋ ಹಾಗೇ ಆಯ್ತು. ನಾನು ಅ ಕಡೆಗೆ ನೋಡಿದೆ. ಇನ್ನ್ಯಾರು ವಿನೋದ್ . ವಿನೋದ್ ನನ್ನ ನೋಡಿ ನೋಡಿದ ಅಕಿರಾ ನಾನ್ ಹೇಳಿಲ್ವಾ ಇವನು ಮಹಿ ನೇ ಅಂತ ಹೇಳಿ ಅಕಿರಾ ಕಡೆಗೆ ನೋಡಿ ನಗ್ತಾ ಹೇಳ್ತಾ ಇದ್ದಾ. ನಾನು ವಿನೋದ್ ಕಡೆಗೆ ನೋಡದೆ ಅಕಿರಾ ಕಡೆಗೆ ನೋಡಿದೆ ಅಕಿರಾ ನ ಲಾಸ್ಟ್ ಟೈಮ್ ಮೈಸೂರ್ ಗೆ ಹೋಗೋ ಹಿಂದಿನ ದಿನ ನೋಡಿದ್ದು ಮತ್ತೆ ಇವತ್ತೇ ನೋಡ್ತಾ ಇರೋದು. ಅಕಿರಾ ಮುಖ ನ ನೋಡಿದೆ ತುಂಬಾ ಡಲ್ ಆಗಿ ಇದ್ಲು ವಿನೋದ್ ಹೇಳೋ ವಿಷಯ ಕೇಳಿ ಅವಳಿಗೆ ಕೋಪ ಬಂದ್ರು ಅದನ್ನ ಹೇಳೋ ಪರಿಸ್ಥಿತಿ ಅಲ್ಲಿ ಅವಳು ಇಲ್ಲಾ. ನನ್ನಕಡೆಗೆ ನೋಡಿ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಕ್ಷಮಿಸಿ ಅನ್ನೋ ಹಾಗೇ ನೋಡಿದ್ಲು. ಎಲ್ಲೋ ಏನೋ ತಪ್ಪಾಗಿದೆ ಅಂತ ನನ್ನ ಮನಸ್ಸಿಗೆ ಅನ್ನಿಸೋಕೆ ಶುರುವಾಯ್ತು. ವಿನೋದ್ ಮಾತನ್ನ ಕೇಳದೆ ಎದ್ದು ಅಕಿರಾ ಮುಂದೆ ನಿಂತು ಏನಾಯ್ತು ಅಂತ ಕೇಳಿದೆ. ಅಕಿರಾ ಏನು ಹೇಳೋ ಸ್ಥಿತಿ ಅಲ್ಲಿ ಇಲ್ಲಾ. ವಿನೋದ್ ನಗ್ತಾ ಅವಳನ್ನ ಏನು ಕೇಳ್ತಿಯಾ ನನ್ನ ಕೇಳು ಅಂತ ಹೇಳ್ದ. ಅಷ್ಟೇ ಅವನ ಕುತ್ತಿಗೆ ಗೆ ಕೈ ಹಾಕಿ ಗಟ್ಟಿಯಾಗಿ ಇಡ್ಕೊಂಡು ಅವನ ಕಡೆಗೆ ಕೋಪದಿಂದ ನೋಡ್ತಾ ನಿನ್ನ ಬಾಯಿಂದ ಒಂದು ಮಾತು ಬಂದ್ರು ಅದೇ ನಿನ್ನ ಕೊನೆ ಮಾತಾಗಿ ಇರುತ್ತೆ ಅಂತ ವಾರ್ನಿಂಗ್ ಕೊಟ್ಟು. ಅಕಿರಾ ಕಡೆಗೆ ನೋಡ್ತಾ ಏನಾಯ್ತು ಅಂತ ಕೇಳ್ದೆ. ಅಕಿರಾ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು. ನನಗೆ ಪೂರ್ತಿ ವಿಷಯ ಏನು ಅಂತ ಗೊತ್ತಾಗದೆ ಇದ್ರು ಒಂದು ವಿಷಯ ಮಾತ್ರ ನನಗೆ ಅರ್ಥ ಆಯ್ತು ಅಕಿರಾ ತುಂಬಾ ನೋವನ್ನ ಅನುಭವಿಸ್ತಾ ಇದ್ದಾಳೆ ಅಂತ. ನನಗೆ ಗೊತ್ತಿಲ್ಲ ದ ಹಾಗೇ ವಿನೋದ್ ಮೇಲೆ ತುಂಬಾ ಕೋಪ ಬರೋಕೆ ಶುರುವಾಯ್ತು. ಅವನ ಕುತ್ತಿಗೆ ನ ಇನ್ನು ಗಟ್ಟಿಯಾಗಿ ಇಡಿದು ಕೊಂಡೆ. ವಿನೋದ್ ಗೆ ಉಸಿರಾಡೋಕೆ ತುಂಬಾ ಕಷ್ಟ ಆಯ್ತು. ನನ್ನಗೆ ಬರ್ತಾ ಇದ್ದಾ ಕೋಪ ವಿನೋದ್ ನ ಪರಿಸ್ಥಿತಿ ನ ನೋಡಿ ಶೀತಲ್ ಗೆ ಭಯ ಆಗಿ ಓಡಿ ಬಂದು ಮಹಿ ಪ್ಲೀಸ್ ಅವನನ್ನ ಬಿಟ್ಟು ಬಿಡು ಇಲ್ಲಾ ಅಂದ್ರೆ ಅವನು ಸತ್ತೇ ಹೋಗ್ತಾನೆ ಅಂತ ಹೇಳಿದ್ಲು. ಶೀತಲ್ ಮಾತನ್ನ ಕೇಳೋ ಪರಿಸ್ಥಿತಿ ಅಲ್ಲಿ ನಾನ್ ಇಲ್ಲಾ. ಶೀತಲ್ ಗೆ ಅದು ಅರ್ಥ ಆಗಿ ಹೋಗಿ. ಅಕಿರಾ ಹತ್ತಿರ ಮಾತಾಡ್ತಾ ಅಕಿರಾ ಪ್ಲೀಸ್ ನಿನ್ ಆದ್ರು ಹೇಳು ಇಲ್ಲಾ ಅಂದ್ರೆ ಮಹಿ ವಿನೋದ್ ನ ಸಾಯಿಸಿ ಬಿಡ್ತಾನೆ ಅಂತ ಹೇಳಿದ್ಲು. ಅಕಿರಾ ಶೀತಲ್ ಮಾತನ್ನ ಅರ್ಥ ಮಾಡಿಕೊಂಡು ಅಳೋದನ್ನ ನಿಲ್ಲಿಸಿ ನನ್ನ ಮುಖ ನೋಡ್ತಾ ಮಹಿ ಪ್ಲೀಸ್ ಅವನನ್ನ ಬಿಟ್ಟು ಬಿಡು ಅಂತ ಹೇಳಿದ್ಲು. ನನಗೆ ಅಕಿರಾ ಮಾತಿಗಿಂತ ಅವಳ ಕಣ್ಣಲ್ಲಿ ಬರ್ತಾ ಇರೋ ಕಣ್ಣೀರೇ ನನಗೆ ಕಾಣಿಸ್ತಾ ಇದೆ. ನನಗೆ ನನ್ನ ಕೋಪ ಕಂಟ್ರೋಲ್ ಮಾಡದೇ ಇರೋ ಸ್ಟೇಜ್ ಗೆ ಹೋಗಿದೆ. ವಿನೋದ್ ಗೆ ಉಸಿರಾಡೋಕೆ ಆಗ್ತಾ ಇಲ್ಲಾ, ಅಕಿರಾ ಗೆ ವಿನೋದ್ ನ ಪರಿಸ್ಥಿತಿ ನೋಡಿ ಭಯ ಆಗೋಕೆ ಶುರುವಾಯ್ತು. ಅಕಿರಾ ಗೆ ಅರ್ಥ ಆಗಿ ಬಿಡ್ತು ಇವತ್ತು ಮಹಿ ವಿನೋದ್ ನ ಉಳಿಸೋದಿಲ್ಲ ಅಂತ ಭಯ ಆಗಿ ಹಿಂದೆ ಮುಂದೆ ಯೋಚ್ನೆ ಮಾಡದೇ ನನಗೆ ಕಿಸ್ ಮಾಡೋಕೆ ಶುರು ಮಾಡಿದ್ಲು. ಕೊನೆಗೂ ಅಕಿರಾ ನನ್ನಲ್ಲಿ ಇದ್ದಾ ಕೋಪ ನ ಕಮ್ಮಿ ಮಾಡಿದ್ಲು. ವಿನೋದ್ ಕುತ್ತಿಗೆ ನ ಬಿಟ್ಟೆ. ವಿನೋದ್ ಕೆಳಗೆ ದುಪ್ಪ್ ಅಂತ ಬಿದ್ದು ಉಸಿರಾಡೋಕೆ ತುಂಬಾ ಕಷ್ಟ ಪಟ್ಟ. ಹಾಗೋ ಹೀಗೋ ಕಷ್ಟ ಪಟ್ಟು ಎದ್ದು ನಿಂತು ನಮ್ಮಿಬ್ಬರ ಕಡೆಗೆ ನೋಡ್ತಾ ನಿಂತು ಬಿಟ್ಟ. ಅಕಿರಾ ಕಿಸ್ ಮಾಡೋದನ್ನ ಸ್ಟಾಪ್ ಮಾಡಿ. ಏನು ಮಾತನಾಡದೆ ಸೈಲೆಂಟ್ ಆಗಿ ನಿಂತು ಬಿಟ್ಟಳು. ವಿನೋದ್ ಅಕಿರಾ ನ ನೋಡಿ ಏನೇ ಈ ಭಿಕಾರಿ ನ ಕರ್ಕೊಂಡು ಬಂದು ನನ್ನೇ ಸಾಯಿಸೋಕೆ ನೋಡ್ತೀಯ ನಿಮ್ಮನ್ನ ಮಾತ್ರ ಸುಮ್ಮನೆ ಬಿಡೋದಿಲ್ಲ ಅಂತ ಕೋಪದಿಂದ ಹೇಳ್ತಾ ಮೊಬೈಲ್ ತೆಗೆದುಕೊಂಡು ಯಾರಿಗೋ ಕಾಲ್ ಮಾಡೋಕೆ ಹೋದ.
ಅಷ್ಟರಲ್ಲಿ ಏನ್ ನಡೀತಾ ಇದೆ ಇಲ್ಲಿ ಅಂತ ಹೇಳಿ ಅಲ್ಲಿಗೆ 5 6 ಜನ ಬಂದ್ರು. ಅವರ ಜೊತೆಗೆ ಮ್ಯಾನೇಜರ್ ಕೂಡ ಬರ್ತಾ ಇದ್ರು. ಮ್ಯಾನೇಜರ್ ನನ್ನ ನೋಡಿ ಮಹಿ ಅಂತ ಹತ್ತಿರ ಬಂದು ಮಹಿ ನಿನ್ ಏನ್ ಇಲ್ಲಿ ಏನ್ ನಡೀತು ಅಂತ ಕೇಳಿದ್ರು. ಅದಕ್ಕೆ ವಿನೋದ್ ಲೋ ಮ್ಯಾನೇಜರ್ ಅ ಭಿಕಾರಿ ನ ಏನ್ ಕೇಳ್ತಾ ಇದ್ದಿಯಾ ನನ್ನ ಕೇಳು ಅವನು ನನ್ನ ಸಾಯಿಸೋಕೆ ನೋಡಿದ ಅಂತ ಹೇಳಿದ್ದೆ, ಅವರ ಅಪ್ಪ ವಿನೋದ್ ಹತ್ತಿರ ಬಂದು ಏನೋ ಹೇಳ್ತಾ ಇದ್ದಿಯಾ ಅಂತ ಕೇಳಿದ್ರು. ಹೌದು ಅಪ್ಪ ಅಂತ ಹೇಳಿದ. ವಿನೋದ್ ಅವರ ಅಪ್ಪನಿಗೆ ತುಂಬಾ ಕೋಪ ಬಂದು ನನ್ನ ಎದುರಿಗೆ ಬಂದು ಎಷ್ಟೋ ಧೈರ್ಯ ನಿನಗೆ ನನ್ನ ಮಗನನ್ನೇ ಸಾಯಿಸೋಕೆ ನೋಡಿದ ನಿನ್ನ ಮಾತ್ರ ಸುಮ್ನೆ ಬಿಡೋದಿಲ್ಲ ಅಂತ ನನ್ನ ಕುತ್ತಿಗೆ ಇಡ್ಕೊಳ್ಳೋಕೆ ಬಂದ್ರು. ಅಷ್ಟರಲ್ಲಿ ಒಬ್ಬರು ಮಾತಾಡ್ತಾ ವಿಲ್ ಯು ಸ್ಟಾಪ್ ಅಲ್ ದಿಸ್ ನಾನ್ಸೆನ್ಸ್ ಅಂತ ಜೋರಾಗಿ ಹೇಳ್ತಾ ಒಬ್ಬ ಲೇಡಿ ಬಂದ್ರು. ಎಲ್ಲರೂ ಸೈಲೆಂಟ್ ಆಗಿ ಅವರ ಕಡೆಗೆ ನೋಡ್ತಾ ನಿಂತ್ರು. ನಿಮಗೆ ಏನಾದ್ರು ಬುದ್ದಿ ಇದೆಯಾ ನಿಮಗೆಲ್ಲ ಏನ್ ಹೇಳಿದೆ, ಇವತ್ತು ಒಂದು ಇಂಪಾರ್ಟೆಂಟ್ ಮೀಟಿಂಗ್ ಇದೆ ಅಂತ ಹೇಳ್ದೆ ಅಲ್ವಾ, ಹೇಳ್ತಾ ಶೀತಲ್ ಹತ್ತಿರ ಬಂದು ಶೀತಲ್ ಕ್ಲೈಂಟ್ಸ್ ಎಲ್ಲಿ ಅಂತ ಕೇಳಿದ್ರು. ಶೀತಲ್ ಅವರನ್ನ ನೋಡ್ತಾ ಮೇಡಂ ಇವರೆ ಅಂತ ಹೇಳಿ ನನ್ನ ಕಡೆಗೆ ತೋರಿಸಿದ್ರು. ಎಲ್ಲರೂ ನನ್ನ ಕಡೆಗೆ ನೋಡಿ ಶಾಕ್ ಆದ್ರು. ವಿನೋದ್ ಮತ್ತೆ ಅವರ ಅಪ್ಪ ಇನ್ನು ಶಾಕ್ ಆದ್ರು.
****************************************