Mahi - 27 in Kannada Love Stories by S Pr books and stories PDF | ಮಹಿ - 27

The Author
Featured Books
Categories
Share

ಮಹಿ - 27

     ಶೀತಲ್ ನನ್ನ ಕಡೆಗೆ ತೋರಿಸಿ ಮೇಡಂ ಇವರೆ ಅ ಕ್ಲೈಂಟ್ ಅಂತ ಹೇಳಿದಾಗ. ಎಲ್ಲರಿಗೂ ಶಾಕ್ ಆಯ್ತು. ಅ ವ್ಯಕ್ತಿ ವಾಟ್ ಇವರೇನಾ ನ ಕ್ಲೈಂಟ್ಸ್ , ಕ್ಲೈಂಟ್ಸ್ ಜೊತೆಗೆ ಜಗಳ ಮಾಡ್ಕೊಂಡು ಇದ್ದೀರಾ ನೀವೆಲ್ಲಾ ಅಂತ ಹೇಳಿ ವಿನೋದ್ ತಂದೆ ಹತ್ತಿರ ಬಂದು ಮಿಸ್ಟರ್ ನಿಮಗೆ ಸ್ವಲ್ಪ ಆದ್ರು ಬುದ್ದಿ ಇದೆಯಾ ಕ್ಲೈಂಟ್ಸ್ ಹತ್ತಿರ ಬಂದು ಈಗೆ ಜಗಳ ಮಾಡ್ತಾ ಇದ್ದೀರಾ ಅಂತ ಕೋಪದಲ್ಲಿ ಬೈಯ್ಯೋಕೆ ಶುರು ಮಾಡ್ತಾಳೆ. ವಿನೋದ್ ತಂದೆ ಮೇಡಂ ಇವನು ಯಾವ್ ಸೀಮೆ ಕ್ಲೈಂಟ್ಸ್ ಮೇಡಂ ಇವನು ಇದಕ್ಕೂ ಮೊದಲು ಇದೆ ಆಫೀಸ್ ಅಲ್ಲಿ ವರ್ಕ್ ಮಾಡ್ತಾ ಇದ್ದಾ ಎಂಪ್ಲೋಯ್ ನಾನೆ ಇವನನ್ನ ಕೆಲಸ ಸರಿಯಾಗಿ ಮಾಡೋದಿಲ್ಲ ಅಂತ ಹೇಳಿ ಕೆಲಸದಿಂದ ತೆಗೆದು ಬಿಸಾಕಿದ್ದೆ. ಇವಾಗ ಕ್ಲೈಂಟ್ಸ್ ಅಂತ ಹೇಳ್ಕೊಂಡು ಬಂದಿದ್ದು ಅಲ್ಲದೆ ನನ್ನ ಮಗನನ್ನೇ ಸಾಯಿಸೋಕೆ ನೋಡಿದ ಅಂತ ಅಷ್ಟೇ ಕೋಪದಲ್ಲಿ ಹೇಳ್ತಾನೆ.  ಅ ವ್ಯಕ್ತಿ ವಾಟ್ ಇವನು ಈ ಕಂಪನಿ ಎಕ್ಸ್ ಎಂಪ್ಲೋಯ್ ಅ. ವಾಟ್ ಶೀತಲ್ ಇವರು ಹೇಳೋದು ನಿಜಾನಾ ಅಂತ ಕೇಳ್ತಾಳೆ. ಶೀತಲ್ ಹೌ... ಹೌದು ಮೇಡಂ ಅಂತ ಹೇಳ್ತಾಳೆ.  ಅ ವ್ಯಕ್ತಿ ನಿನಗೆ ಕಂಪನಿ ರೂಲ್ಸ್ ಗೊತಿಲ್ವಾ ಒಂದು ಸರಿ ಇಲ್ಲಿ ಕೆಲಸ ಮಾಡಿ ಬಿಟ್ಟು ಹೋದ ವ್ಯಕ್ತಿ ನ ಮತ್ತೆ ಕಂಪನಿ ಒಳಗೆ ಸೇರಿಸ ಬಾರದು ಅಂತ ಕೇಳಿದಾಗ. ಶೀತಲ್ ಯಸ್ ಮೇಡಂ ನನಗೆ ಗೊತ್ತು ಬಟ್ ಇವರು ಎಕ್ಸ್ ಎಂಪ್ಲೋಯ್ ಆಗಿ ಬಂದಿಲ್ಲ. ಇವತ್ತು ನಡೀಬೇಕಾದ ಮೀಟಿಂಗ್ ಗೆ ಬಂದಿರೋ ಕ್ಲೈಂಟ್ಸ್ ಇವರು ಅದಕ್ಕೆ ಅಲೋ ಮಾಡಿದೆ ಅಂತ ಹೇಳಿದ್ಲು.  ಅ ವ್ಯಕ್ತಿ ನೋಡು ಶೀತಲ್ ಅವರು ಯಾರೇ ಆಗಿರಲಿ ವನ್ಸ್ ಈ ಕಂಪನಿ ಯ ಎಕ್ಸ್ ಎಂಪ್ಲೋಯ್ ಅಂತ ಅಂದಮೇಲೆ ಅವರಿಗೆ ಯಾವುದೇ ಕಾರಣಕ್ಕೂ ಈ ಕಂಪನಿ ಒಳಗೆ ಬರೋ ಅಧಿಕಾರ ಇಲ್ಲಾ ಗಾಟ್ ಇಟ್ ಅಂತ ಹೇಳಿ. ಅ ವ್ಯಕ್ತಿ ನನ್ನ ಹತ್ತಿರ ಬಂದು ನೋಡಿ ಮಿಸ್ಟರ್ ನೀವು ಈ ಕಂಪನಿ. ಎಕ್ಸ್ ಎಂಪ್ಲೋಯ್ ಅಂತ ಗೊತ್ತಿಲ್ದೆ ಈ ಮೀಟಿಂಗ್ ಗೆ ಬರೋಕೆ ಹೇಳ್ದೆ ಸೋ ನೀವು ನಿಮ್ ಕಂಪನಿ ಅಲ್ಲಿ ಯಾವುದೇ ಪೊಸಿಷನ್ ಅಲ್ಲಿ ಇದ್ರು ಐ ಡೋಂಟ್ ಮೈಂಡ್ ನನಗೆ ನಿಮ್ ಜೊತೆಗೆ ಮಾತಾಡೋಕೆ ಇಷ್ಟ ಇಲ್ಲಾ. ನಾನು ನಿಮ್ ಕಂಪನಿ ಬಾಸ್ ಹತ್ತಿರ ಮಾತಾಡ್ತೀನಿ ಸೋ ನೀವಿನ್ನು ಹೊರಟು ಹೋಗಿ ಅಂತ ಹೇಳಿದ್ಲು. ಅ ವ್ಯಕ್ತಿ ಹಾಗೇ ಹೇಳಿದ್ದನ್ನ ಕೇಳಿ ವಿನೋದ್ ಗೆ ಮತ್ತೆ ಅವರ ಅಪ್ಪನಿಗೆ ಎಲ್ಲಿಲ್ಲದ ಸಂತೋಷ.  ಅ ವ್ಯಕ್ತಿ ನ ನೋಡಿ ಓಕೆ ಮೇಡಂ ನಿಮಗೆ ನನ್ನ ಹತ್ತಿರ ಮಾತಾಡೋದಕ್ಕೆ ಇಷ್ಟ ಇಲ್ಲಾ ಅಂತ ಅಂದ್ರೆ ನನಗೆ ಏನು ತೊಂದ್ರೆ ಇಲ್ಲಾ. ಅಂಡ್ ಇದರಿಂದ ನನಗೆ ನಷ್ಟ ಆಗೋದು ಏನು ಇಲ್ಲಾ. ನೀವು ನಮ್ ಬಾಸ್ ಹತ್ತಿರ ನೇ ಮಾತಾಡಿಕೊಳ್ಳಿ ಅಂತ ಹೇಳಿ. ಸೀದಾ ಅಕಿರಾ ಹತ್ತಿರ ಹೋಗಿ ಎದುರಿಗೆ ನಿಂತೇ ಅಕಿರಾ ಕಣ್ಣಲ್ಲಿ ಕಣ್ಣೀರು ಹಾಗೇ ಇದೆ. ತಲೆ ಎತ್ತಿ ನನ್ನ ನನ್ನ ನೋಡಿದ್ಲು. ನೋಡು ಏನ್ ನಡೀತೋ ನನಗೆ ಗೊತ್ತಿಲ್ಲ, ಅದ್ರೆ ಒಂದಂತೂ ಸತ್ಯ ನಿನ್ ಕಣ್ಣಲ್ಲಿ ಕಣ್ಣೀರು ಬರೋಕೆ ಕಾರಣ ಆದವನು ಯಾವನೇ ಆಗಿರಲಿ ಅವನನ್ನ ಮಾತ್ರ ಸುಮ್ನೆ ಬಿಡೋದಿಲ್ಲ. ನಿನಗೆ ಇಲ್ಲೇ ಕೆಲಸ ಮಾಡಬೇಕು ಅಂತ ಇದ್ರೆ ಇಲ್ಲೇ ಮಾಡು ನಾನ್ ಬೇಡ ಅಂತ ಹೇಳೋದಿಲ್ಲ. ಇಲ್ಲಾ ಕಷ್ಟಪಟ್ಟು ಮಾಡೋ ಕೆಲಸ ಯಾವುದಾದ್ರೂ ಓಕೆ ಅಂತ ಅನ್ನಿಸಿದ್ರೆ ಈಗ್ಲೇ ಈ ಕೆಲಸಕ್ಕೆ ರಾಜೀನಾಮೆ ಕೊಟ್ಟು ನನ್ನ ಜೊತೆಗೆ ಬಾ ಅಂತ ಹೇಳ್ದೆ. 

  ಅಕಿರಾ ಏನು ಮಾತನಾಡದೆ ಅಲ್ಲಿಂದ ಹೊರಟು ಅವಳು ವರ್ಕ್ ಮಾಡೋ ಪ್ಲೇಸ್ ಕಡೆಗೆ ಹೋದ್ಲು. ವಿನೋದ್ ನಗ್ತಾ  ಲೋ ನಿನ್ ಎಷ್ಟೇ ಹೇಳಿದ್ರು ಅವಳು ಇಲ್ಲಿಂದ ಈ ಕಂಪನಿ ಯಿಂದ ಬರೋದು ಇಲ್ಲಾ ಸೋ ನೀನು ಇಲ್ಲಿಂದ ಮುಚ್ಕೊಂಡು ಹೋದ್ರೆ ಸರಿ ಇಲ್ಲಾ ನಾನೆ ಕತ್ತು ಇಡಿದು ಹೊರಗಡೆ ದಬ್ಬುತ್ತಿನಿ ಅಂತ ಹೇಳಿದ. ನಾನ್ ಅವನ ಕಡೆಗೆ ನೋಡಿ ಲೋ ನಿನ್ ಏನಾದ್ರು 6 ತಿಂಗಳಿಗೆ ಹುಟ್ಟಿದ ಇಷ್ಟು ಅವಸರ ಪಡ್ತಾ ಇದ್ದಿಯಾ ಸ್ವಲ್ಪ ಸಮಾಧಾನ ಪಡ್ಕೊ ಅಂತ ಹೇಳ್ದೆ. ವಿನೋದ್ ಗೆ ನನ್ನ ಮಾತಿಂದ ಇನ್ನು ಕೋಪ ಬಂತು. ಏನೋ ಹೇಳ್ದೆ ಅಂತ ನನ್ನ ಹೊಡಿಯೋಕೆ ಬಂದ. ಅವರ ಅಪ್ಪ ಬಂದು ಅವನನ್ನ ತಡೆದು ವಿನಿ ಇದು ಆಫೀಸ್ ಸುಮ್ನೆ ಇರು ಅವನನ್ನ ಎಲ್ಲಿ ನೋಡ್ಕೋಬೇಕೋ ಅಲ್ಲೇ ನೋಡ್ಕೊಳ್ಳೋಣ ಅಂತ ಹೇಳಿ ತಡೆದ. 5 ನಿಮಿಷದಲ್ಲಿ ಅಕಿರಾ ಅವಳ ಥಿಂಗ್ಸ್ ಎಲ್ಲಾ ತೆಗೆದುಕೊಂಡು ಬಂದು ಲ್ಯಾಪ್ಟಾಪ್ ನ ಮ್ಯಾನೇಜರ್ ಗೆ ಕೊಟ್ಟು. ನನ್ನ ಹತ್ತಿರ ಬಂದು ಮಹಿ ನಡಿ ಹೋಗೋಣ ಅಂತ ಹೇಳಿದ್ಲು.  ವಿನೋದ್ ರಿಸೈನ್ ಮಾಡಿದ್ರು ನೋಟೀಸ್ ಪಿರಿಯಡ್ ಅಂತ ಒಂದು ತಿಂಗಳು ವರ್ಕ್ ಮಾಡಬೇಕು ಅಂತ ಗೊತ್ತಿಲ್ವಾ ಅಂತ ಹೇಳಿದ. ನಾನ್ ಅವನ ಮುಂದೆ ಹೋಗಿ ನಗ್ತಾ ಪಕ್ಕ ನೀನು 6 ತಿಂಗಳಿಗೆ ಹುಟ್ಟಿದವನೋ ಅದಕ್ಕೆ ಈಗೆ ಆಡ್ತಾ ಇದ್ದಿಯಾ. ಅಪ್ಪನ ರೆಕಾಮೆಂಡೇಶಮ್ ಮೇಲೆ ಜಾಬ್ ಬಂತು ಅಲ್ವಾ ಅದಕ್ಕೆ ನಿನಗೆ ಕೆಲವೊಂದು ವಿಷಯ ಗಳು ಸರಿಯಾಗಿ ಗೊತ್ತಿಲ್ಲ ಅಂತ ಕಾಣಿಸುತ್ತೆ. ಮತ್ತೆ ಸಿಗ್ತಿಯ ಅಲ್ವಾ ಅವಾಗ ನಾನ್ ಹೇಳ್ಕೊಡ್ತೀನಿ ಅಂತ ಹೇಳಿ. ಅಕಿರಾ ಳ ಕೈ ಇಡ್ಕೊಂಡು ಅಲ್ಲಿಂದ ಹೊರಗೆ ಬಂದೆ. 

   ನಾನು ಅಲ್ಲಿಂದ ಬಂದ ಮೇಲೆ ಅ ವ್ಯಕ್ತಿ ಶೀತಲ್ ಹತ್ತಿರ ಮಾತಾಡ್ತಾ ಶೀತಲ್ ಈ ಮೀಟಿಂಗ್ ಕ್ಯಾನ್ಸಲ್ ಮಾಡಿದೆ ಅಂತ ಅ ಕಂಪನಿ ಗೆ ಮೆಲ್ ಮಾಡಿ ಹೇಳು. ಹಾಗೇ ಅ ಕಂಪನಿ ಬಾಸ್ ಹತ್ತಿರ ಮೀಟಿಂಗ್ ಗೆ ಅಪ್ಪೋಯಿಂಟ್ಮೆಂಟ್ ತಗೋ ಅಂತ ಹೇಳಿ ಅಲ್ಲಿಂದ ಹೊರಟು ಹೋದಳು. 

   ಅಕಿರಾ ಳ ಕೈ ಇಡ್ಕೊಂಡು ಕಾರ್ ಪಾರ್ಕಿಂಗ್ ಗೆ ಬಂದು ನನ್ನ ಕಾರ್ ಹತ್ತಿರ ನಿಂತು ಕಾರ್ ನ ಅನ್ಲೋಕ್ ಮಾಡಿ ಕಾರ್ ಡೋರ್ ಓಪನ್ ಮಾಡಿ ಕುತ್ಕೋ ಅಂತ ಹೇಳ್ದೆ. ಅಕಿರಾ ಏನು ಮಾತನಾಡದೆ ಕಾರ್ ಒಳಗೆ ಕುತ್ಕೊಂಡ್ಲು. ನಾನು ಕಾರ್ ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಗೆ ಬಂದು  ಮೇನ್ ರೋಡ್ ಅಲ್ಲಿ ಡ್ರೈವ್ ಮಾಡಿಕೊಂಡು ಒಂದು ಕಾಫಿ ಶಾಪ್ ಹತ್ತಿರ ಬಂದು ಕಾರ್ ನ ನಿಲ್ಲಿಸಿ ಇಳಿ ಅಂತ ಹೇಳ್ದೆ. ಅಕಿರಾ ಕಾರ್ ಇಳಿದು ನನ್ನ ಜೊತೆಗೆ ಕಾಫಿ ಶಾಪ್ ಒಳಗೆ ಬಂದ್ಲು.  ನಾನ್ ಹೋಗಿ ಒಂದು ಟೇಬಲ್ ಹತ್ತಿರ ಕೂತ್ಕೊಂಡು ಅಕಿರಾಗೆ ಕೂತ್ಕೋಳ್ಳೋಕೆ ಹೇಳ್ದೆ.  ಒಬ್ಬ ವ್ಯಕ್ತಿ ಬಂದು ಸರ್ ಏನ್ ಬೇಕು ಆರ್ಡರ್ ಕೊಡಿ ಅಂತ ಕೇಳ್ದ. ನಾನ್ ಅವನ ಕಡೆಗೆ ನೋಡಿ ಸ್ವಲ್ಪ ಹೊತ್ತು ಈ ಕಾಫಿ ಶಾಪ್ ಬೇಕು ಅಂತ ಹೇಳ್ದೆ. ಅವನು ನಗ್ತಾ ಓಕೆ ಸರ್ ಅಂತ ಹೇಳಿ ಅಲ್ಲಿ ಇದ್ದಾ ಕೆಲವು ಕಸ್ಟಮರ್ಸ್ ನ ಶಾಪ್ ಕ್ಲೋಸ್ ಅಂತ ಹೇಳಿ ಕಳಿಸಿ ಬಿಟ್ಟು  ಎರಡು ಕಾಫಿ ನ ತಂದು ಟೇಬಲ್ ಮೇಲೆ ಇಟ್ಟು ಸರ್ ಇನ್ನೇನದ್ರು ಬೇಕಿದ್ರೆ ಕೇಳಿ ಅಂತ ಹೇಳಿ ಅಲ್ಲಿಂದ ಹೊರಟು ಹೋದ. 

  ಅಕಿರಾ ಸೈಲೆಂಟ್ ಆಗಿ ನೇ ಇದ್ಲು. ನಾನ್ ಅಕಿರಾ ಕಡೆಗೆ ನೋಡ್ತಾ ಅಕಿರಾ ಏನ್ ಆಯ್ತು ಹೇಳು ಅಂತ ಕೇಳ್ದೆ. ಅಕಿರಾ ಅಳೋಕೆ ಶುರು ಮಾಡಿದ್ಲು. ಎದ್ದು ಹೋಗಿ ಅಕಿರಾ ಪಕ್ಕ ಕೂತು ಅಕಿರಾ ಈ ರೀತಿ ಅಳ್ತಾ ಇದ್ರೆ ನನಗೆ ಏನ್ ಅರ್ಥ ಆಗುತ್ತೆ ಹೇಳು. ಪ್ಲೀಸ್ ಅಳೋದನ್ನ ನಿಲ್ಲಿಸಿ ಈ ನಡೀತು ಅಂತ ಹೇಳು ಅಂತ ಕೇಳ್ದೆ. ಅಕಿರಾ ಕಣ್ಣೀರನ್ನ ಹೊರೆಸಿಕೊಂಡು  ನೀನು ಮನೇಲಿ ಮಾತಾಡಿ ಹೋದಮೇಲೆ ನನಗೆ ಒಂದು ಕಡೆ ಖುಷಿ ಇನ್ನೊಂದು ಕಡೆ ಬೇಜಾರ್ ಆಯ್ತು. ಧ್ರುವ್ ನ ಮೀಟ್ ಮಾಡೋಕೆ ಆಗೋದಿಲ್ಲ ಅಂತ. ಬಟ್ ಏನೋ ಗೊತ್ತಿಲ್ಲ ನೀನು ನನಗೋಸ್ಕರ ಇಷ್ಟು ಹೆಲ್ಪ್ ಮಾಡೋವಾಗ ನಿನ್ನ ಮಾತು ಕೇಳಬೇಕು ಅಂತ ಅನ್ನಿಸ್ತು.  ಧ್ರುವ್ ನ ಮೀಟ್ ಮಾಡೋದು ಸ್ಟಾಪ್ ಮಾಡಿದೆ. ಬಟ್ ಕಾಲ್ ಮಾಡಿ ಮಾತಾಡ್ತಾ ಇದ್ದೆ. ಅದ್ರೆ ಅವನು ಮೀಟ್ ಮಾಡೋಣ ಬಾ ಅಂತ ತುಂಬಾ ಕೇಳ್ತಾ ಇದ್ದ. ಬಟ್ ನನಗೆ ನಿನ್ನ ಮಾತನ್ನ ಮೀರಿ ಹೋಗಬೇಕು ಅಂತ ಅನ್ನಿಸಲಿಲ್ಲ. ನನ್ನಿಂದ ನೀನು ಜಾಬ್ ನ ಕಳ್ಕೊಂಡೆ. ವಿನೋದ್ ಹತ್ತಿರ ಬೈಸ್ಕೊಂಡೆ. ಧ್ರುವ್ ನಿನ್ನ ಹತ್ತಿರ ಹಾಗೇ ಮಾತಾಡಿದ್ರು ನಾನು ನೋಡ್ತಾ ಸುಮ್ನೆ ಇದ್ದೆ ನಾನು ಕೂಡ ನಿನ್ನ ಹತ್ತಿರ ಅದೇ ರೀತಿ ಮಾತಾಡಿದೆ. ನನ್ನಿಂದ ನೀನು ಇಷ್ಟೆಲಾ ಅವಮಾನ ಪಡ್ತಾ ಇದ್ರು ನಾನು ಬರಿ ನನ್ನ ಪ್ರೀತಿ ಅಂತ ಸ್ವಾರ್ಥಿ ಆಗಿ ಇದ್ದು ಬಿಟ್ಟೆ. ನಿನ್ನ ಮಾತು ಈಗಲಾದ್ರೂ ಕೇಳೋಣ ಅಂತ ನಿರ್ಧಾರ ಮಾಡಿ. ಇಲ್ಲಾ ಧ್ರುವ್ ಮಹಿ ಹೇಳೋವರೆಗೂ ನಿನ್ನ ಮೀಟ್ ಮಾಡೋದಿಲ್ಲ ಅಂತ ಹೇಳಿಬಿಟ್ಟೆ. ಅವನಿಗೆ ಅದನ್ನ ಒಪ್ಪಿಕೊಳ್ಳೋಕೆ ಆಗಲಿಲ್ಲ. ತುಂಬಾ ಕೋಪ ಮಾಡ್ಕೊಂಡು ಲೇಟ್ ನೈಟ್ ಟೈಮ್ ಕಾಲ್ ಮಾಡೋಕೆ ಶುರು ಮಾಡಿದ. ಆಫೀಸ್ ಹತ್ತಿರ ಬರೋಕೆ ಶುರು ಮಾಡಿದ. ಅವನಿಗೆ ಎಷ್ಟು ರೀತಿ ಅರ್ಥ ಮಾಡಿಸೋಕೆ ಹೋದ್ರು ಅರ್ಥ ಮಾಡಿಕೊಳ್ಳೋಕೆ ಹೋಗಲಿಲ್ಲ ಅವನು. ಬಟ್ ಒಂದು ದಿನ ನನಗೆ ಕಾಲ್ ಬಂತು ಧ್ರುವ್ ಗೆ ಆಕ್ಸಿಡೆಂಟ್ ಆಗಿದೆ ಅಂತ ನಾನು ಹಿಂದೆ ಮುಂದೆ ಯೋಚ್ನೆ ಮಾಡದೇ ಅವನನ್ನ ನೋಡೋಕೆ ಹೋದೆ. ಅದ್ರೆ ಅಲ್ಲಿಗೆ ಹೋದ ಮೇಲೆ ಗೊತ್ತಾಯ್ತು ಅದು ಅವನು ಮಾಡಿದ ನಾಟಕ ಅಂತ. ನನಗೆ ಕೋಪ ಬಂದು ಅವನ ಕಪಾಳಕ್ಕೆ ಬಾರಿಸಿ ಅಲ್ಲಿಂದ ಹೊರಟು ಬಂದು ಬಿಟ್ಟೆ. ನೆಕ್ಸ್ಟ್ ಡೇ ಕಾಲ್ ಮಾಡಿ ತುಂಬಾ ಕೆಟ್ಟ ಕೆಟ್ಟದಾಗಿ ಮಾತಾಡೋಕೆ ಶುರು ಮಾಡಿದ. ನನಗಿಂತ ನಿನಗೆ ಮಹಿ ನೇ ಮುಖ್ಯ ಆಗಿ ಬಿಟ್ನಾ. ಅವ್ನ ಮಾತನ್ನ ಇಷ್ಟು ಇಂಪಾರ್ಟೆಂಟ್ ಆಗಿ ತಗೊಂಡು ಇದ್ದಿಯಾ ಅಂದ್ರೆ ಅವನಿಗೂ ನಿನಗೂ ಏನ್ ಸಂಬಂಧ, ಅವನು ನಿನಗೆ ಹೆಲ್ಪ್ ಮಾಡೋಕೆ ನೀನು ಏನಾದ್ರು ಅವನ ಜೊತೆಗೆ ಮಲಗಿದ್ದ ಅಂತ ತುಂಬಾ ಕೆಟ್ಟದಾಗಿ ಕೇಳಿದ. ಅ ಕ್ಷಣ ನನಗೆ ಅನ್ನಿಸ್ತು ಇಷ್ಟು ಕೆಟ್ಟ ವ್ಯಕ್ತಿ ನ ನಾನು ಇಷ್ಟು ದಿನ ಲವ್ ಮಾಡ್ತಾ ಇದ್ದಿದು ಅಂತ ಅನ್ನಿಸ್ತು. ಅವತ್ತೇ ಅವನಿಗೆ ಹೇಳಿದೆ. ಹೌದು ಕಣೋ ನಿನ್ನಂತ ಕೆಟ್ಟ ವ್ಯಕ್ತಿ ನ ಲವ್ ಮಾಡೋಕ್ಕಿಂತ, ನಾನು ಹೆಲ್ಪ್ ಮಾಡೋ ಅಂತ ಕೇಳಿದ ಒಂದೇ ಒಂದು ಕಾರಣಕ್ಕೆ ನನಗೋಸ್ಕರ ಅಷ್ಟು ಅವಮಾನ ಅಷ್ಟು ಮಾತು ಕೊನೆಗೆ ಕೆಲಸ ನೇ ಕಳ್ಕೊಂಡ. ನಿನ್ನಿಂದ ಈ ರೀತಿ ಆಯ್ತು ಅಂತ ಒಂದು ಮಾತು ಹೇಳಿಲ್ಲ. ನನ್ನಿಂದ ದೂರ ಹೋಗೋವಾಗ ಕೂಡ ನನಗೆ ಯಾವರೀತಿ ತೊಂದ್ರೆ ಆಗ್ಬಾರ್ದು ಅಂತ ಮನೇಲಿ ಮಾತಾಡಿ ಒಪ್ಪಿಸಿ ಹೋದ. ನಿನ್ನಂತವನ್ನ ಲವ್ ಮಾಡೋಕ್ಕಿಂತ ಅವನ ಜೊತೆ ಮಲಗೋದ್ರಲ್ಲಿ ನನಗೆ ಸಂತೋಷ ಅಂತ ಹೇಳಿ ಕಾಲ್ ಕಟ್ ಮಾಡಿ ನಂಬರ್ ಬ್ಲಾಕ್ ಮಾಡಿದೆ. 

   ಎಷ್ಟೋ ದಿನ ರಾತ್ರಿ ಅವನು ಮಾತಾಡಿದ ಒಂದೊಂದು ಮಾತನ್ನ ನೆನೆಸ್ಕೊಂಡು ಕಣ್ಣೀರು ಹಾಕಿ ಮಲಗಿದೆ. ಮನೇಲಿ ಅಪ್ಪ ಅಮ್ಮ ನೀನು ದೂರ ಅದೇ ಅದಕ್ಕೆ ಡಲ್ ಆಗಿ ಇದ್ದೀನಿ ಅಂತ ಅನ್ಕೊಂಡು ನನಗೆ ಸಮಾಧಾನ ಮಾಡ್ತಾ ಇದ್ರು. ಬಟ್ ವಿನೋದ್ ಗೆ ಈ ವಿಷಯ ಹೇಗೆ ಗೊತ್ತಯ್ತು ಅಂತ ನನಗೆ ಗೊತ್ತಿಲ್ಲ. ಮನೇಲಿ ಧ್ರುವ್ ನ ಲವ್ ಮಾಡ್ತಾ ಇರೋ ವಿಷಯ. ನೀನು ನಾನು ಲವ್ ಮಾಡ್ತಾ ಇರೋದು ನಾಟಕ ಅನ್ನೋ ವಿಷಯ ಹೇಳ್ತಿನಿ ಅಂತ ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ. ನನಗೆ ತುಂಬಾ ಭಯ ಆಯ್ತು. ಈ ವಿಷಯ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಅವರು ತಾತ ನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕು ನನ್ನಿಂದ ಅವರು ಅವಮಾನ ಪಡಬೇಕು. ಇದೆಲ್ಲಾ ನಿನಗೆ ಹೇಳೋಣ ಅಂದ್ರೆ ನೀನು ಎಲ್ಲಿದ್ದೀಯ ಅಂತ ಗೊತ್ತಿಲ್ಲ. ಕಾಲ್ ಮಾಡಿ ಹೇಳೋಕೆ ನನ್ನ ಮನಸು ಒಪ್ಪಲಿಲ್ಲ. ಬರಿ ಸ್ವಾರ್ಥಿ ಆಗಿ ನಾನು ಯೋಚ್ನೆ ಮಾಡ್ತಾ ಇದ್ದೀನಿ ಅನ್ನೋ ನೋವು ನನಗೆ ಕಾಡೋಕೆ ಶುರು ಮಾಡ್ತು. ನಿನಗೆ ಹೇಳೋದು ಬೇಡ  ನಾನು ಮಾಡಿದ ತಪ್ಪಿಗೆ ನಾನೆ ಶಿಕ್ಷೆ ಅನುಭವಿಸಬೇಕು ಅಂತ ನಿರ್ಧಾರ ಮಾಡಿ ಸುಮ್ನೆ ಆಗೋದೇ. 

    ವಿನೋದ್ ನನ್ನ ಕ್ಯಾರೆಕ್ಟರ್ ನ ಬ್ಯಾಡ್ ಮಾಡಬೇಕು ಅಂತ ಆಫೀಸ್ ಅಲ್ಲಿ ನನ್ನ ಜೊತೆಗೆ ಕ್ಲೋಸ್ ಆಗಿ ಇರೋ ಹಾಗೇ ತೋರಿಸಿ ಕೊಳ್ಳೋಕೆ. ಬಂದು ಬಂದು ಮಾತಾಡಿಸ್ತಾ ಇದ್ದಾ. ಆಫೀಸ್ ಅಲ್ಲಿ ಕೂಡ ಅದೇ ಮಾತಾಡೋಕೆ ಶುರು ಮಾಡ್ಕೊಂಡ್ರು. ಒಬ್ಬ ಹೋದ ಇನ್ನೊಬ್ಬ ಬಂದ. ಇನ್ನು ಎಷ್ಟು ಜನ ನೋ ಅಂತ. ಅ ಮಾತನ್ನ ಕೇಳಿ ನನಗೆ ತುಂಬಾ ಹಿಂಸೆ ಆಗ್ತಾ ಇತ್ತು. ಸತ್ತೋಗೋಣ ಅನ್ನಿಸ್ತು, ಸತ್ತೋದ್ರೆ ಅವರು ಮಾತಾಡಿಕೊಳ್ಳೋದೇ ನಿಜ ಆಗುತ್ತೆ. ಅಪ್ಪ ಅಮ್ಮ ನ ಮರ್ಯಾದೆ ಹೋಗುತ್ತೆ. ಅದಕ್ಕೆ ದೇವರ ಮೇಲೆ ಭಾರ ಹಾಕಿ ಈ ರೀತಿ ಯಾರಿಗೂ ಹೇಳೋಕು ಆಗದೆ ಅಳೋಕು ಆಗದೆ ನನ್ನಲ್ಲೇ ಅನುಭವಿಸೋಕೆ ಶುರು ಮಾಡಿದೆ ಅಂತ ಹೇಳಿ ಅವಳ ಮಾತನ್ನ ನಿಲ್ಲಿಸಿ ಅಳೋಕೆ ಶುರು ಮಾಡಿದ್ಲು. ಅವಳ ಮಾತನ್ನ ಕೇಳಿ ನನ್ನಾ ಮನಸ್ಸಿಗೂ ತುಂಬಾ ನೋವಾಯ್ತು. ಅವಳನ್ನ ಸೈಡ್ ಯಿಂದ ಅಪ್ಪಿಕೊಂಡೆ. ಅಕಿರಾ ನನ್ನ ಅಪ್ಪಿಕೊಂಡು ಅಳೋಕೆ ಶುರು ಮಾಡಿದ್ಲು. ಇಷ್ಟುದಿನ ಮನಸಲ್ಲಿ ಇದ್ದಾ ನೋವನ್ನ ಕಣ್ಣೀರು ರೂಪದಲ್ಲಿ ಹೊರಗೆ ಹಾಕಲಿ ಅಂತ ನಾನು ಸುಮ್ನೆ ಇದ್ದೆ. ಸ್ವಲ್ಪ ಸಮಯದ ನಂತರ ಅಕಿರಾ ಅಳೋದನ್ನ ನಿಲ್ಲಿಸಿದಳು.  

   ಕಾಫಿ ಕೊಟ್ಟ ವ್ಯಕ್ತಿ ಬಂದು ಸರ್ ಕಾಫಿ ತಣ್ಣಗೆ ಆಗಿದೆ ನಾನ್ ಹೋಗಿ ಬೇರೆ ಕಾಫಿ ತಗೋಬರ್ತೀನಿ ಅಂತ ಹೇಳಿ ಕಾಫಿ ಕಪ್ ನ ವಾಪಸ್ಸು ತಗೊಂಡು ಹೋದ. ಅಕಿರಾ ನನ್ನ ಅಪ್ಪುಗೆ ಯಿಂದ ದೂರ ಆಗಿ ಸಾರೀ ಮಹಿ ಅಂತ ಹೇಳಿದ್ಲು. ಪರ್ವಾಗಿಲ್ಲ ಹೋಗಿ ಫೇಸ್ ವಾಶ್ ಮಾಡ್ಕೊಂಡು ಬಾ ಹೋಗು ಅಂತ ಹೇಳಿ ಕಳಿಸಿದೆ. 5 ನಿಮಿಷ ದಲ್ಲಿ ಅಕಿರಾ ಬಂದು ನನ್ನ ಪಕ್ಕದಲ್ಲಿ ಕೂತ್ಕೋಳ್ಳದೆ ಎದುರುಗಡೆ ಇದ್ದಾ ಚೇರ್ ಅಲ್ಲಿ ಕುತ್ಕೊಂಡ್ಲು. ಕಾಫಿ ತಗೊಂಡು ಹೋದ ವ್ಯಕ್ತಿ ಬಂದು ಅಕಿರಾ ಮುಂದೆ ಒಂದು ಪ್ಲೇಟ್ ಇಟ್ಟ. ಅಕಿರಾ ಅ ಪ್ಲೇಟ್ ನ ನೋಡಿ ನನ್ನ ಕಡೆಗೆ ನೋಡಿದ್ಲು. ನಾನು ಅಕಿರಾ ನ ನೋಡ್ತಾ  ಮೊದಲು ತಿಂಡಿ ತಿನ್ನು ಅಂತ ಹೇಳಿದೆ. ಕಾಫಿ ಶಾಪ್ ವ್ಯಕ್ತಿ ನನ್ನ ಕಡೆಗೆ ನೋಡಿ ಸರ್ ಕಾಫಿ ಶಾಪ್ ಓಪನ್ ಮಾಡ್ಲಾ ಅಂತ ಕೇಳಿದ. ನಾನು ಅವನ ಕಡೆಗೆ ನೋಡಿ ಓಪನ್ ಮಾಡು ಅಂತ ಹೇಳ್ದೆ. ಅವನು ತುಂಬಾ ಥ್ಯಾಂಕ್ಸ್ ಸರ್ ಅಂತ ಹೇಳಿ ಹೋದ. ಅಕಿರಾ ನನ್ನೇ ನೋಡ್ತಾ ಇದ್ಲು. ನಾನು ಅವಳ ಕಡೆ ನೋಡಿ, ನಾನ್ ಎಲ್ಲೂ ಹೋಗಲ್ಲ ಮೊದಲು ತಿಂಡಿ ತಿನ್ನು ಅಂತ ಹೇಳ್ದೆ. ಅಕಿರಾ ತಿಂಡಿ ತಿನ್ನೋಕೆ ಶುರು ಮಾಡಿದ್ಲು. ನಾನು ಎದ್ದು ಹೋಗಿ ಎರಡು ಕಪ್ ಕಾಫಿ ನ ತೆಗೆದುಕೊಂಡು ಬಂದು ಒಂದು ಕಪ್ ನ ಅಕಿರಾ ಮುಂದೆ ಇಟ್ಟು ಇನ್ನೊಂದು ಕಪ್ ಕಾಫಿ ನ ಸಿಪ್ ಮಾಡ್ತಾ ಎದುರು ಕುತ್ಕೊಂಡೆ. 

   ಅಕಿರಾ ತಿಂಡಿ ತಿಂದು ಕಾಫಿ ಕುಡಿದು ನನ್ನ ಕಡೆಗೆ ನೋಡಿದ್ಲು. ಅಕಿರಾ ಕಡೆಗೆ ನೋಡಿ ಇನ್ನೊಂದು ಕಪ್ ಕಾಫಿ ಬೇಕಾ ಅಂತ ಕೇಳ್ದೆ. ಅಕಿರಾ ಬೇಡ ಮಹಿ ಹೊರಡೋಣ್ವಾ ಅಂತ ಕೇಳಿದ್ಲು. ಸರಿ ಹೋಗೋಣ ಬಟ್ ಮನೆಗೆ ಅಲ್ಲ ಅಂತ ಹೇಳಿದೆ. ಕಾಫಿ ಕೊಟ್ಟ ವ್ಯಕ್ತಿ ಬಂದು ಒಂದು ಸರ್ ಇನ್ನೇನಾದ್ರೂ ಬೇಕಾ ಅಂತ ಕೇಳ್ದ. ಅಕಿರಾ ಏನು ಬೇಡ ಬಿಲ್ ಕೊಡಿ ಅಂತ ಹೇಳಿದ್ಲು. ಅ ವ್ಯಕ್ತಿ ನಗೋಕೆ ಶುರು ಮಾಡಿದ . ಅಕಿರಾ ಗೆ ಅರ್ಥ ಆಗಲಿಲ್ಲ ಅವನು ಯಾಕೆ ಹಾಗೇ ನಗ್ತಾ ಇದ್ದಾನೆ ಅಂತ. ನಾನು ಅಕಿರಾ ಕಡೆಗೆ ನೋಡಿ ಅಕಿರಾ ಇವನು ನನ್ನ ಫ್ರೆಂಡ್ ಜೀವಾ ಈ ಕಾಫಿ ಶಾಪ್ ಇವನದ್ದೇ ಅಂತ ಹೇಳ್ದೆ. ಅಕಿರಾ ಫ್ರೆಂಡ್ ಅದ್ರೆ ಬಿಲ್ ಪೆ ಮಾಡ್ಬಾರ್ದ ಅಂತ ಕೇಳಿದ್ಲು. ಜೀವಾ ಸಿಸ್ಟರ್ ಕಸ್ಟಮರ್ ಬಿಲ್ ನ ತಗೋತೀವಿ ಬಟ್ ಓನರ್ ಬಿಲ್ ನ ತಗೊಳೋದಿಲ್ಲ ಅಂತ ಹೇಳಿ. ಅವನು ನನ್ನ ಕಡೆಗೆ ನೋಡ್ತಾ ಓಕೆ ಮಗ ನನಗೆ ಕೆಲಸ ಇದೆ ಕಾಲ್ ಮಾಡ್ತೀನಿ ಅಂತ ಹೇಳಿ ಹೊರಟು ಹೋದ. 

  ಅಕಿರಾ ಶಾಕ್ ನಿಂದ ಹೊರಗೆ ಬಂದು, ಮಹಿ ಈ ಕಾಫಿ ಶಾಪ್ ನಿಂದ ಅಂತ ಕೇಳಿದ್ಲು. ನಾನು ಇಲ್ಲಾ ಅಕಿರಾ ಫ್ರೆಂಡ್ ಅಲ್ವಾ ಅದಕ್ಕೆ ಹಾಗೇ ಹೇಳಿ ಹೋದ ಬಾ ಹೋಗೋಣ ಅಂತ ಹೇಳಿ ಕಾಫಿ ಶಾಪ್ ನಿಂದ ಹೊರಗೆ ಬಂದು ಕಾರ್ ಹತ್ತಿರ ಬಂದ್ವಿ.  ಅಕಿರಾ ಕಾರ್ ನ ನೋಡಿ ನನ್ನ ಕಡೆಗೆ ನೋಡಿ ಈ ಕಾರ್ ನಿಂದ ಅಂತ ಕೇಳಿದ್ಲು. ಇಲ್ಲಾ ಕಂಪನಿ ಕಾರ್ ಅಂತ ಹೇಳಿ ಅವಳಿಗೆ ಕುತ್ಕೋ ಅಂತ ಹೇಳಿದೆ. ನಂತರ ಕಾರ್ ಸ್ಟಾರ್ಟ್ ಮಾಡಿಕ್ಕೊಂಡು ಅಲ್ಲಿಂದ ಹೊರಟ್ವಿ..


 ****************************************


P. S