Mahi - 25 in Kannada Love Stories by S Pr books and stories PDF | ಮಹಿ - 25

The Author
Featured Books
Categories
Share

ಮಹಿ - 25

   ಬೆಳಿಗ್ಗೆ ಎದ್ದು  ರೆಡಿ ಆಗಿ  ತಾತನಿಗೆ ಫ್ಯಾಕ್ಟರಿ ಹತ್ತಿರ ನಾನು ಹೋಗಿರ್ತೀನಿ ಬನ್ನಿ ನೀವು ಅಂತ ಹೇಳಿದೆ. ತಾತ ಎಲ್ಲರೂ ಒಟ್ಟಿಗೆ ಹೋಗೋಣ ಅಂತ ಹೇಳಿದ್ರು. ಇಲ್ಲಾ ತಾತ ಅಲ್ಲಿ ಸ್ವಲ್ಪ ಕೆಲಸಗಳು ಇದ್ದಾವೆ ಹೋಗಿ ನೋಡ್ಕೋಬೇಕು ಅಂತ ಹೇಳಿದೆ. ನೀಲಾ ತಾತ ನಾನು ಹೋಗ್ತೀನಿ ಮಹಿ ಜೊತೆಗೆ ಅಂತ ಹೇಳಿದ್ಲು. ತಾತ ಸರಿ ಹುಷಾರು ಅಂತ ಹೇಳಿ ಕಳಿಸಿದ್ರು. ಇಬ್ಬರು ಕಾರ್ ಅಲ್ಲಿ ಫ್ಯಾಕ್ಟರಿ ಕಡೆಗೆ ಹೊರಟ್ವಿ. ಹೋಗ್ತಾ ದಾರಿಲಿ ನೀಲಾ ನಾ ನೋಡಿ ಲೇ ಮನೆಯವರ ಜೊತೆಗೆ ಬರೋದು ಅಲ್ವಾ ಅಂತ ಕೇಳ್ದೆ. ನೀಲಾ ಹಲೋ ಮಾಸ್ಟರ್  ಇಷ್ಟು ದಿನ ಒಬ್ಬನ್ನೇ ಬಿಟ್ಟಿದ್ದು ಹೆಚ್ಚು ಅದು ನನಗೆ ಹೇಳ್ದೆನೆ ಒಬ್ಬನೇ ಹೋಗಿ ಎಲ್ಲಾ ಕೆಲಸ ಮಾಡಿ ಮುಗಿಸಿಕೊಂಡು ಬಂದಿದ್ದೀಯಾ. ಈ ಫ್ಯಾಕ್ಟರಿ ಮೇಲೆ ನಿನಗೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ನನಗು ಇದೆ. ಅಂಡ್ ಇನ್ನೊಂದು ಮುಖ್ಯವಾದ ವಿಷಯ ಈ ಫ್ಯಾಕ್ಟರಿ ಅಲ್ಲಿ ನಾನು ಒಬ್ಬ ಕೆಲಸಗಾರಳು ಸೋ ಯಾಕ್ ಬಂದೆ ಅನ್ನೋ ಪ್ರಶ್ನೆ ಬಿಟ್ಟು  ಮೊದಲು ದೇವಸ್ಥಾನಕ್ಕೆ ನಡಿ ಅಲ್ಲಿ ಪೂಜೆ ಮಾಡಿಸಿಕೊಂಡು ಫ್ಯಾಕ್ಟರಿ ಗೆ ಹೋಗೋಣ ಅಂತ ಹೇಳಿದ್ಲು.  ನಾನು ಜಾಸ್ತಿ ಏನು ಮಾತನಾಡದೆ ಅವಳು ಹೇಳಿದ ಹಾಗೇ ಮಾಡಿದೆ. ಸ್ವಲ್ಪ ಸಮಯದ ನಂತರ ಇಬ್ಬರು ದೇವಸ್ಥಾನಕ್ಕೆ ಬಂದ್ವಿ. ದೇವರಿಗೆ ಪೂಜೆ ಮಾಡಿಸಿಕೊಂಡು  ಒಳ್ಳೇದು ಆಗಲಿ ಅಂತ ಬೇಡಿಕೊಂಡು, ನೀಲಾ ನಾ ಹೊರಡೋಣವಾ ಅಂತ ಕೇಳ್ದೆ. ನೀಲಾ ಸರಿ ಹೊರಡೋಣ ಅಂತ ಹೇಳಿ ಇನ್ನೊಮ್ಮೆ ದೇವರಿಗೆ ಕೈ ಮುಗಿದು ಅಲ್ಲಿಂದ ಹೊರಟು ಕಾರ್ ಹತ್ತಿರ ಬಂದ್ವಿ. ನೀಲಾ ನನ್ನ ನೋಡಿ ಮಹಿ ಹೂ ಇಸ್ಕೊಡೋ ಅಂತ ತುಂಬಾ ಪ್ರೀತಿ ಯಿಂದ ಕೇಳಿದ್ಲು. ಸರಿ ಬಾ ಅಂತ ಹೇಳಿ ಹೋಗಿ ಅವಳಿಗೆ ಹೂ ನಾ ತೆಗೆದುಕೊಟ್ಟೆ ನೀನೇ ನಿನ್ನ ಕೈ ಯಾರ ಮುಡಿಸು ಅಂತ ಕೇಳಿದ್ಲು. ಅವಳ ಇಷ್ಟದಂತೆ ನಾನೆ ಅವಳಿಗೆ ಹೂ ನಾ ಮುಡಿಸಿದೆ. ತುಂಬಾ ಖುಷಿಯಾಗಿ  ಬಾ ಹೋಗೋಣ ಅಂತ ಹೇಳಿದ್ಲು. ಇಬ್ಬರು ಕಾರ್ ಅಲ್ಲಿ ಫ್ಯಾಕ್ಟರಿ ಹತ್ತಿರ ಬಂದ್ವಿ. 

  ವೀರಣ್ಣ ನಾನ್ ಬರೋದನ್ನ ನೋಡಿ ಸರ್ ಗುಡ್ ಮಾರ್ನಿಂಗ್ ಅಂತ ಹೇಳಿದ್ರು. ನಾನು ಅವರಿಗೆ ಗುಡ್ ಮಾರ್ನಿಂಗ್ ಹೇಳಿದೆ. ಆಮೇಲೆ ನೀಲಾ ನಾ ಅವರಿಗೆ ಪರಿಚಯ ಮಾಡಿಸಿದೆ.  ಆಮೇಲೆ ವೀರಣ್ಣ ಸರ್ ಮಧ್ಯಾಹ್ನ ಊಟದ ವ್ಯವಸ್ಥೆ ಗೆ ಟೆಂಟ್ ಹೌಸ್ ಅವರು ಬಂದು ಟೆಂಟ್ ಹಾಕಿ ಹೋದ್ರು. ಪೂಜಾರಿ ಅವರು ಬಂದಿದ್ದಾರೆ  ನೀವ್ ಹೇಳಿದ ಹಾಗೇ ಹೆಲ್ಪರ್ಸ್ ನಾ ಫ್ಯಾಕ್ಟರಿ ಕ್ಲೀನ್ ಮಾಡೋಕೆ ಹೇಳಿದ್ದೀನಿ. ಅಂತ ಕೆಲವೊಂದು ಮುಖ್ಯವಾದ ಕೆಲಸಗಳನ್ನ ಹೇಳಿದ್ರು. ನಾನು ಸರಿ ವೀರಣ್ಣ ನನ್ನಿಂದ ನಿಮಗೆ ತುಂಬಾ ತೊಂದ್ರೆ ಆಯಿತು ಇವತ್ತು ಒಂದು ದಿನ ಅಷ್ಟೇ ನಾಳೆಯಿಂದ ನಿಮಗೆ ಬರಿ ಸೆಕ್ಯೂರಿಟಿ ಇಂಚಾರ್ಜ್ ಕೆಲಸ ಅಷ್ಟೇ ಇರುತ್ತೆ ಅಂತ ಹೇಳ್ದೆ. ಅದಕ್ಕೆ ವೀರಣ್ಣ ಏನ್ ಸರ್ ಹೀಗೆ ಹೇಳ್ತೀರಾ ಎಷ್ಟೋ ಜನಕ್ಕೆ ಕೆಲಸ ಕೊಟ್ಟು ಅವರಿಗೆ ಒಂದು ದಾರಿ ಆಗಿದ್ದೀರಾ ಅಂತದ್ರಲ್ಲಿ ಈ ಕೆಲಸ ಮಾಡೋದ್ರಿಂದ ನನಗೇನು ಕಷ್ಟ ಇಲ್ಲಾ ಸರ್ ನೀವ್ ಹೋಗಿ ಸರ್ ನಾನ್ ನೋಡ್ಕೋತೀನಿ ಅಂತ ಹೇಳಿದ್ರು. ಸರಿ ಅಂತ ಹೇಳಿ ನಾನು ನೀಲಾ ಇಬ್ಬರು ಫ್ಯಾಕ್ಟರಿ ಒಳಗೆ ಬಂದ್ವಿ. ನೀಲಾ ಫ್ಯಾಕ್ಟರಿ ನಾ ನೋಡಿ ಮಹಿ ಮೊದಲು ಈ ಫ್ಯಾಕ್ಟರಿ ಹೇಗಿತ್ತೋ ಗೊತ್ತಿಲ್ಲ ಅದ್ರೆ ಇವಾಗ ಈ ಫ್ಯಾಕ್ಟರಿ ನಾ ನೋಡಿದ್ರೆ ಅಜ್ಜಿ ತಾತ ತುಂಬಾ ಖುಷಿ ಆಗ್ತಾರೆ ಅಂತ ಹೇಳಿದ್ಲು.  ನಂತರ ನೀಲಾ ಗೆ ಫ್ಯಾಕ್ಟರಿ ಬಗ್ಗೆ ಪ್ರತಿಯೊಂದು ವಿಷಯ ನಾ ಹೇಳ್ತಾ ತೋರಿಸಿದೆ. 

  ಸ್ವಲ್ಪ ಸಮಯದ ನಂತರ ವೀರಣ್ಣ ಕಾಲ್ ಮಾಡಿ ಸರ್ ಗೆಸ್ಟ್ ಗಳು ಬರೋಕೆ ಶುರು ಮಾಡಿದ್ರು ಅಂತ ಹೇಳಿದ್ರು. ನಾನು ನೀಲಾ ಇಬ್ಬರು ಗೇಟ್ ಹತ್ತಿರ ಹೋದ್ವಿ. ಬಂದ ಗೆಸ್ಟ್ ಗಳಿಗೆ ವೆಲ್ಕಮ್ ಮಾಡ್ತಾ ಅಲ್ಲೇ ಇದ್ವಿ. ಸ್ವಲ್ಪ ಹೊತ್ತಿಗೆ ಶಿಲ್ಪಾ ಅವರ ಅಪ್ಪ ಅಮ್ಮ ತಾತ ಅಜ್ಜಿ ಮದನ್ ಅವರ ಅಪ್ಪ ಅಮ್ಮ ರೋಹಿಣಿ ನೀಲಾ ಅವರ ಅಪ್ಪ ಅಪ್ಪ ಬಂದ್ರು. ನೀಲಾ ಅವರ ತಾತ ಫ್ಯಾಕ್ಟರಿ ನಾ ನೋಡಿ ತುಂಬಾ ಖುಷಿ ಆದ್ರು ನನ್ನ ತಬ್ಬಿಕೊಂಡು ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ ಅಂತ ಸಂತೋಷ ನಾ ವ್ಯಕ್ತಪಡಿಸಿದ್ರು. ಶಿಲ್ಪಾ ಅವರ ಅಪ್ಪ ಅಮ್ಮ ನನ್ನ ನೋಡಿ ತುಂಬಾ ಸಂತೋಷ ಆಗ್ತಾ ಇದೆ ಮಹಿ ನಿನ್ನ ನೋಡಿ ಮನೆಯವರು ಪ್ರತಿ ಒಬ್ಬರು ನಿನ್ನ ಬಗ್ಗೆ ಹೇಳೋವಾಗ ತುಂಬಾ ಹೆಮ್ಮೆ ಅನ್ನಿಸ್ತು ನನಗೆ ಅಂತ ಅವರ ಸಂತೋಷ ನಾ ವ್ಯಕ್ತ ಪಡಿಸಿದ್ರು. ನೀಲಾ ಗೆ ತಾತನ ಕರ್ಕೊಂಡು ಹೋಗಿ ಫ್ಯಾಕ್ಟರಿ ನಾ ತೋರಿಸು ಅಂತ ಹೇಳ್ದೆ. ಅಜ್ಜಿ ಫ್ಯಾಕ್ಟರಿ ಬಗ್ಗೆ ಹೇಳೋಕೆ ತೋರಿಸೋಕೆ ಶಿಲ್ಪಾ ಮದನ್ ಇದ್ದಾರೆ ಅವಳು ನಿನ್ನ ಜೊತೆ ನೇ ಇರಲಿ ಅಂತ ಹೇಳಿ ಅವರೆಲ್ಲಾ ಫ್ಯಾಕ್ಟರಿ ಒಳಗೆ ಹೋದ್ರು. ಸ್ವಲ್ಪ ಸಮಯದ ನಂತರ ತಾತ ಅಜ್ಜಿ ಚಿಕ್ಕಮ್ಮಂದಿರು ತಂಗಿರು ತಮ್ಮ ಚಿಕ್ಕಪ್ಪಂದಿರು ಬಂದ್ರು. ಹೋಗಿ ಅವರನ್ನ ರಿಸೀವ್ ಮಾಡ್ಕೊಂಡೆ, ಫ್ಯಾಮಿಲಿ ಅವರೆಲ್ಲಾ ಫ್ಯಾಕ್ಟರಿ ನಾ ನೋಡಿ ತುಂಬಾ ಸಂತೋಷ ಪಟ್ರು, ಅಜ್ಜಿ ತಾತ ಇಬ್ರು ಫ್ಯಾಕ್ಟರಿ ನಾ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಇಬ್ಬರು ನನ್ನ ಅಪ್ಪಿಕೊಂಡು ಅಳೋಕೆ ಶುರು ಮಾಡಿದ್ರು. ತಾತ ಸಾರ್ಥಕ ಆಯಿತು ಮೊಮ್ಮಗನೇ ನನ್ನ ಜೀವನ ಯಾವುದನ್ನ ಇನ್ನ ನಾನು ನೋಡೋದಕ್ಕೆ ಆಗೋದೇ ಇಲ್ಲಾ ಅಂತ ಅಂದುಕೊಂಡು ನೋವು ಪಡ್ತಾ ಇದ್ನೋ ಅದನ್ನ ಇವತ್ತು ನೀನು ದೂರ ಮಾಡಿಬಿಟ್ಟೆ ಅಂತ ತುಂಬಾ ದೊಡ್ಡ ದೊಡ್ಡ ಮಾತುಗಳನ್ನ ಹೇಳೋಕೆ ಶುರು ಮಾಡಿದ್ರು. ಅವರಿಗೆ ಸಮಾಧಾನ ಮಾಡಿ. ವೀರಣ್ಣ ಗೆ ಹೇಳಿ , ಫ್ಯಾಮಿಲಿ ನಾ ಫ್ಯಾಕ್ಟರಿ ತೋರಿಸೋಕೆ ಕರ್ಕೊಂಡು ಬಂದೆ. ಫ್ಯಾಕ್ಟರಿ ನೋಡ್ಕೊಂಡು ಬರ್ತಾ ಇದ್ದಾ ಶಿಲ್ಪಾ ಅವರ ತಾತ, ನಮ್ ತಾತ ನಾ ನೋಡಿ ನಮ್ ಹತ್ತಿರ ಬಂದು ತಾತ ನಾ ನೋಡಿ ಹೇಗಿದ್ದೀಲೇ ಬೆಟ್ಟ ಅಂತ ಕೇಳಿದ್ರು. ತಾತ ಶಿಲ್ಪಾ ಅವರ ತಾತ ನಾ ನೋಡಿ ಲೇ ಹನುಮ ನಿನ್ ಏನ್ಲ ಇಲ್ಲಿ ಹೇಗಿದ್ದಿಯೋ ನಿನ್ನ ನೋಡಿ ಎಷ್ಟು ವರ್ಷ ಆಯ್ತು ಅಂತ ಹೇಳಿ ಇಬ್ಬರು ಒಬ್ಬರನೊಬ್ಬರು ಅಪ್ಪಿಕೊಂಡರು. ಇಷ್ಟು ವರ್ಷ ಆದ್ರು ಅವರಲ್ಲಿ ಇರೋ ಸ್ನೇಹ ನಾ ನೋಡಿ ಎಲ್ಲರಿಗೂ ತುಂಬಾ ಸಂತೋಷ ಆಯ್ತು.

   ತಾತ ಏನ್ಲ ನಿನ್ ಇಲ್ಲಿ ಅಂತ ಕೇಳಿದ್ರು, ಶಿಲ್ಪಾ ಅವರ ತಾತ ಏನ್ಲ ಅಂದ್ರೆ ನೀಲಾ ನನ್ನ ಮೊಮ್ಮಗಳೇ, ಅಂತ ಹೇಳಿದ್ರು. ಹೌದ ಅಂತ ಹೇಳಿ ನನ್ನ ಕಡೆಗೆ ನೋಡ್ತಾ ನನಗೆ ಯಾಕ್ ಹೇಳಿಲ್ಲ ಅಂತ ಕೇಳಿದ್ರು. ನನಗೆ ಇಲ್ಲಿಗೆ ಬಂದಮೇಲೆ ನಿಮ್ ಬಗ್ಗೆ ಹೇಳಿದ ಮೇಲೆ ಗೊತ್ತಾಗಿದ್ದು, ಹೇಳೋದು ಏನಕ್ಕೆ ಸರ್ಪ್ರೈಸ್ ಕೊಡೋಣ ಅಂತ ಹೇಳಿಲ್ಲ ಅಂತ ಹೇಳ್ದೆ. ತಾತ ತುಂಬಾ ಖುಷಿ ಆದ್ರು. ನಂತರ ಇಬ್ಬರು ಅವರ ಫ್ಯಾಮಿಲಿ ಬಗ್ಗೆ ಪರಿಚಯ ಮಾಡಿಕೊಂಡರು. ನೀಲಾ ಗೆ ಫ್ಯಾಕ್ಟರಿ ತೋರಿಸೋಕೆ ಹೇಳಿ ನಾನು ವೀರಣ್ಣ ಕಾಲ್ ಮಾಡಿದ್ರು ಅಂತ ಹೇಳಿ ಅಲ್ಲಿಗೆ ಹೋದೆ. ಬೆಂಗಳೂರಿನಿಂದ ಅಪ್ಪ ಅಮ್ಮ ಬಂದ್ರು ಅಕ್ಕ ಬರಲಿಲ್ಲ ಹರಿಣಿ ಅಕ್ಕನ ಜೊತೆ ಗೆ ಇದ್ದು ಬಿಟ್ಟರು. ಅಪ್ಪ ಅಮ್ಮ ನನ್ನ ನೋಡಿ ತುಂಬಾ ಖುಷಿ ಆದರೂ ಅಪ್ಪ ಅಂತು ಅಪ್ಪಿಕೊಂಡು ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ ಕಣೋ, ಮನೆಗೆ ದೊಡ್ಡ ಮಗನಾಗಿ ಮಾಡದ ಕೆಲಸ ನಾ ಮೊಮ್ಮಗನಾಗಿ ನೀನು ಮಾಡಿದೆ ನಿನಗೆ ಯಾವ ರೀತಿ ಥ್ಯಾಂಕ್ಸ್ ಹೇಳಬೇಕು ಅಂತಾನೆ ಅರ್ಥ ಆಗ್ತಾ ಇಲ್ಲಾ ಅಂತ ಹೇಳಿದ್ರು. ಅಮ್ಮ ಅಂತು ಕಣ್ಣಲ್ಲಿ ಕಣ್ಣೀರು ತುಂಬಿ ಕೊಂಡು ನನ್ನ ಅಪ್ಪಿಕೊಂಡು ಅಳೋಕೆ ಶುರು ಮಾಡಿದರು. ಅಮ್ಮನಿಗೆ ಸಮಾಧಾನ ಮಾಡಿ, ನೀವು ಒಳಗೆ ನಡೀರಿ ನಾನು ಬರ್ತೀನಿ ಹಾಗೇ ಇನ್ನೊಂದು ವಿಷಯ ನಿಮ್ ಮಗ ಅಂತ ಹೇಳಬೇಡಿ ಅಂತ ಹೇಳಿ ಕಳಿಸಿದೆ. ಶಿಲ್ಪಾ ಅಪ್ಪ ಅಮ್ಮ ನಾ ನೋಡಿ ಶಾಕ್ ಆಗಿ ಆಂಟಿ ಅಂಕಲ್ ನೀವು ಇಲ್ಲಿ ಅಂತ ಕೇಳಿದ್ರು. ತಾತ ಅವನು ನನ್ನ ದೊಡ್ಡ ಮಗ ನನ್ನ ದೊಡ್ಡ ಸೊಸೆ ಅಂತ ಹೇಳಿ ನಿನಗೆ ಇವರು ಮೊದಲೇ ಗೊತ್ತಾ ಅಂತ ಕೇಳಿದ್ರು. ಅಮ್ಮ ಗೊತ್ತು ಮಾವ ಬೆಂಗಳೂರಲ್ಲಿ ಹರಿಣಿ ಫಂಕ್ಷನ್ ಮಾಡಿದಾಗ ಶ್ವೇತಾ ಪರಿಚಯ ಮಾಡಿ ಕೊಟ್ಟಿದ್ಲು ಅಂತ ಹೇಳಿದ್ರು. ನೀಲಾ ತಾತ ಬನ್ನಿ ಪೂಜೆ ಗೆ ಟೈಮ್ ಆಗುತ್ತೆ ಅಂತ ಮಹಿ ಕಾಲ್ ಮಾಡಿದ್ದ ಅಂತ ಹೇಳಿ ಎಲ್ಲರನ್ನ ಪೂಜೆ ಗೆ ಕರ್ಕೊಂಡು ಬಂದಳು. ತಾತ ಅಜ್ಜಿ ಕೈಲಿ ಪೂಜೆ ಮಾಡಿಸಿದ್ರು. ಯಾವ ಅಡ್ಡಿ ಆತಂಕ ಇಲ್ಲದೆ ಪೂಜೆ ಫ್ಯಾಕ್ಟರಿ ಓಪನಿಂಗ್ ನಡೆಯಿತು. ಕೆಲಸಗಳು ಶುರು ಆದವು. ಎರಡು ಫ್ಯಾಮಿಲಿ ಗಳು ಒಟ್ಟಿಗೆ ಕೂತು ಊಟ ಮಾಡಿದರು.  ಶಿಲ್ಪಾ ಅವರ ತಾತ, ನಮ್ ತಾತ ಹತ್ತಿರ ಮಾತಾಡ್ತಾ  ಈಗ ಈ ಫ್ಯಾಕ್ಟರಿ ನಾ ಈ ಬಿಸಿನೆಸ್ ನಾ ನೋಡಿಕೊಳ್ಳೋದು ಯಾರು ಅಂತ ಕೇಳಿದ್ರು. ತಾತ ಇನ್ಯಾರು ನನ್ನ ಮೊಮ್ಮಗನೇ ಅಂತ ಹೇಳಿದ್ರು. ಶಿಲ್ಪಾ ಅವರ ತಾತ ಹೌದ ನಿಮ್ ಮೊಮ್ಮಗ ನೋಡ್ಕೋತಾರ ಇಲ್ಲಿಗೆ ಬಂದಿದ್ದಾರಾ ಅಂತ ಕೇಳಿದ್ರು. ಅಜ್ಜಿ ಇಲ್ಲಾ ಅವನು ವಿದೇಶ ದಲ್ಲಿ ಇದ್ದಾನೆ, ಈ ಫಂಕ್ಷನ್ ಗೆ ಬರೋಕೆ ಆಗಲಿಲ್ಲ. ನನ್ನ ಮೊಮ್ಮಗನಿಗೆ ಮಹಿ ಮೇಲೆ ತುಂಬಾ ನಂಬಿಕೆ ಇದೆ, ಫ್ಯಾಕ್ಟರಿ ಬಿಸಿನೆಸ್ ನಾ ಮಹಿ ನೇ ನೋಡ್ಕೋತಾನೆ. ಅಂತ ಹೇಳಿ . ನನ್ನ ಹತ್ತಿರ ಬಂದು ಕೈಗೆ ಡಾಕ್ಯುಮೆಂಟ್ಸ್ ಇಡ್ತಾ ಇನ್ಮೇಲಿಂದ ಈ ಫ್ಯಾಕ್ಟರಿ ಬಿಸಿನೆಸ್ ಎಲ್ಲಾ ನಿಂದೆ ಮಗ, ಬದುಕೋದೇ ಇಲ್ಲಾ ಅನ್ನೋ ಜೀವಕ್ಕೆ ಮತ್ತೆ ಪ್ರಾಣ ನಾ ಕೊಟ್ಟು ಕಾಪಾಡಿದ್ದಿಯ, ಇದು ನಿನಗೆ ಸೇರಿದ್ದು  ನಾವು ಕೇವಲ ಹೆಸರಿಗಷ್ಟೇ ಅಂತ ಹೇಳಿ ಕೈಗೆ ಕೊಟ್ಟರು. ಅಜ್ಜಿ ನಾ ನೋಡ್ತಾ ಟೈಮ್ ನೋಡಿ ಲಾಕ್ ಮಾಡಿದೆ ನಿನ್ನ ವಿಚಾರಿಸಿ ಕೊಳ್ತೀನಿ ಅಂತ ಹೇಳಿ ಡಾಕ್ಯುಮೆಂಟ್ಸ್ ನಾ ತೆಗೆದುಕೊಂಡು ನಿಮ್ ನಂಬಿಕೆ ನಾ ನಾನು ಉಳಿಸಿ ಕೊಳ್ತೀನಿ ಅಂತ ಹೇಳ್ದೆ.  ನಂತರ ಸ್ವಲ್ಪ ಹೊತ್ತು ಎಲ್ಲರೂ ಮಾತಾಡ್ತಾ ಕುಳಿತು ಕೊಂಡರು. ನಾನು ಕೆಲಸಗಳು ಹೇಗೆ ನಡೀತಾ ಇದೆ ಅಂತ ನೋಡೋಕೆ ಹೊರಟು ಹೋದೆ. ನನ್ನ ಜೊತೆ ನೀಲಾ ಕೂಡ ಬಂದಳು.

   ನನ್ನ ಜೊತೆ ನೀಲಾ ಬರೋದನ್ನ ನೋಡಿ ಶಿಲ್ಪಾ ಹತ್ತಿರ ಈ ಹುಡುಗ ಲಾಸ್ಟ್ ಟೈಮ್ ನಮ್ ಮನೇಲಿ ಫಂಕ್ಷನ್ ನಡೆದಾಗ ಬಂದ ಹುಡುಗ ಅಲ್ವಾ ಅಂತ ಕೇಳಿದ್ರು. ಶಿಲ್ಪಾ ಹೌದು ಆಂಟಿ ಅಂತ ಹೇಳಿದ್ರು. ಅದಕ್ಕೆ ಈ ಹುಡುಗನನ್ನ ಎಲ್ಲೋ ನೋಡಿದ ಹಾಗೇ ಇದೆ ಅನ್ನಿಸ್ತು ಅದಕ್ಕೆ ಕೇಳ್ದೆ. ಅದು ಸರಿ ನಿನ್ ತಂಗಿ ಏನಕ್ಕೆ ಅ ಹುಡುಗನ ಹಿಂದೆ ನೇ ಜೊತೆಗೆ ಓಡಾಡ್ತಾ ಇದ್ದಾಳೆ ಅಂತ ಕೇಳಿದ್ರು. ಶಿಲ್ಪಾ ಆಂಟಿ ಅದು ಅವರಿಬ್ಬರೂ ಲವ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರು. ಅಮ್ಮ ಶಾಕ್ ಆಗಿ ಏನು ಇಬ್ರು ಲವ್ ಮಾಡ್ತಾ ಇದ್ದಾರಾ, ಈ ವಿಷಯ ನಿಮ್ ಮನೇಲಿ ಅ ಹುಡುಗನ ಮನೇಲಿ ಗೊತ್ತಾ ಅಂತ ಕೇಳಿದ್ರು. ಶಿಲ್ಪಾ ನಮ್ ಮನೇಲಿ ಎಲ್ಲರಿಗೂ ಗೊತ್ತು  ಎಲ್ಲರಿಗೂ ಮಹಿ ತುಂಬಾ ಇಷ್ಟ ಆಗಿ ಹೋದ. ಬಟ್ ಇನ್ನು ಮಹಿ ಅವರ ಮನೇಲಿ ಗೊತ್ತಿಲ್ಲ ಅಂತ ಅನ್ನಿಸುತ್ತೆ ಅಂತ ಹೇಳಿದ್ರು. ಅಮ್ಮ ಹೌದ ಅಂತ ಹೇಳಿ ಎದ್ದು ಅಜ್ಜಿ ಹತ್ತಿರ ಹೋಗಿ. ಅತ್ತೆ ನಿನ್ ಮೊಮ್ಮಗ ಅವನ ಜೊತೆಗೆ ಓಡಾಡ್ತಾ ಇರೋ ಹುಡುಗಿನ ಲವ್ ಮಾಡ್ತಾ ಇದ್ದಾನೆ ಅಂತೇ ನಿನಗೆ ಈ ವಿಷಯ ಗೊತ್ತಾ ಅಂತ ಕೇಳಿದ್ರು. ದಾಕ್ಷಾಯಣಿ ಶ್ರುತಿ ಚಿಕ್ಕಮ್ಮ ನಗ್ತಾ ಅಕ್ಕ ಅವನು ಒಂದು ತಿಂಗಳ ಹಿಂದೇನೆ ಅ ಹುಡುಗಿನ ಮನೆಗೆ ಕರ್ಕೊಂಡು ಬಂದು ನಮಗೆಲ್ಲ ಪರಿಚಯ ಮಾಡಿಸಿದ ಅಂತ ಹೇಳಿದ್ರು. ಅಮ್ಮ ಅವರ ಮಾತನ್ನ ಕೇಳಿ ಕೋಪ ಮಾಡಿಕೊಂಡು ಕೊನೆಗೂ ಅವನಿಗೆ ನನಗಿಂತ ನೀವೇ ಮುಖ್ಯ ಅಂತ ತೋರುಸಿ ಬಿಟ್ಟ ಅವನಿಗೆ ಇದೆ ಅಂತ ಹೇಳಿ  ಅಲ್ಲಿಂದ ಎದ್ದು ನನ್ನ ಹುಡುಕೊಂಡು ಬಂದರು. ನಾನು ನೀಲಾ ಆಫೀಸ್ ಅಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಜೊತೆಗೆ ಕೂತು ಫ್ಯಾಕ್ಟರಿ ವಿಷಯ ದ ಬಗ್ಗೆ ಮಾತಾಡ್ತಾ ಇದ್ವಿ ಅಮ್ಮ ಕೋಪದಿಂದ ಆಫೀಸ್ ಡೋರ್ ಓಪನ್ ಮಾಡಿಕೊಂಡು ಒಳಗೆ ಬಂದರು, ಅಮ್ಮನ ಮುಖದಲ್ಲಿ ಇದ್ದಾ ಕೋಪ ನಾ ನೋಡಿ ಮ್ಯಾನೇಜರ್ ಗೆ ಮೇಡಂ ನೀವು ಹೋಗಿ ಸದ್ಯಕ್ಕೆ ಈ ಕೆಲಸ ನೋಡಿ ಅಂತ ಹೇಳಿ ಕಳಿಸಿದೆ. ಅವರು ಹೊರಗೆ ಹೋದ ಮೇಲೆ. ನೀಲಾ ಅಮ್ಮ ನಾ ನೋಡಿ ಆಂಟಿ ನೀವು ಇಲ್ಲಿ ಬನ್ನಿ ಕೂತ್ಕೊಳ್ಳಿ ಅಂತ ಹೇಳಿದ್ರು. ಅಮ್ಮ ನನ್ನ ಕಡೆಗೆ ಕೋಪದಿಂದ ನೋಡಿ ನನ್ನ ಹತ್ತಿರ ಬಂದು ಟೇಬಲ್ ಮೇಲೆ ಇದ್ದಾ ಫೈಲ್ಸ್ ನಾನು ತೆಗೆದು ಕೊಂಡು ನನ್ನ ಹೊಡಿಯೋಕೆ ಶುರು ಮಾಡಿದ್ರು. ನೀಲಾ ಗ್ರೂಪ್ ಭಯ ಮತ್ತೆ ಶಾಕ್ ಆಯ್ತು ಏನಕ್ಕೆ ಹೊಡಿತಾ ಇದ್ದಾರೆ ಅಂತ ಗೊತ್ತಾಗದೆ ಆಂಟಿ ಏನಕ್ಕೆ ಹೊಡಿತಾ ಇದ್ದೀರಾ ಬಿಡಿ ಅವನನ್ನ ಅಂತ ತಡಿಯೋಕೆ ಬಂದ್ಲು. ಅಮ್ಮ ಅದನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ ಹೊಡೀತಾನೆ ಇದ್ಲು. ನೀಲಾ ಹಾಗೋ ಇಗೋ ಮಾಡಿ ಅಮ್ಮನ ತಡೆದು ಅವರನ್ನ ಪಕ್ಕಕ್ಕೆ ನಿಲ್ಲಿಸಿ ಇಬ್ಬರ ಮಧ್ಯ ನಿಂತು ಅಮ್ಮ ನಾ ನೋಡ್ತಾ ಆಂಟಿ ಏನಕ್ಕೆ ಅವನನ್ನ ಹೊಡಿತಾ ಇದ್ದೀರಾ ಏನ್ ಮಾಡಿದ ಅಂತ ಹೊಡಿತಾ ಇದ್ದೀರಾ ಅಂತ ಸ್ವಲ್ಪ ಕೋಪದಲ್ಲೇ ಕೇಳಿದ್ಲು. ಅಮ್ಮ ಅಷ್ಟೇ ಕೋಪದಿಂದ ಇವನನ್ನ ಹೊಡಿಯೋದು ಅಲ್ಲ ನನಗೆ ಬರ್ತಾ ಇರೋ ಕೋಪಕ್ಕೆ ಇವನನ್ನ ಇಲ್ಲೇ.. ಅಂತ ಏನೋ ಹೇಳೋಕೆ ಬಂದ್ರು. ನೀಲಾ ಅ ಏನ್ ಮಾಡ್ತೀರಾ ನೀವು ದೊಡ್ಡವರು ಅಂತ ಸುಮ್ನೆ ಇದ್ದೀನಿ ಇಲ್ಲಾ ಅಂದಿದ್ರೆ ಅಂತ ಏನೋ ಹೇಳೋಕೆ ಹೋದ್ಲು. ನಾನು ನೀಲಾ ಕಿವೀಲಿ ಸುಮ್ನೆ ಇರೆ ಅಮ್ಮ ಅಂತ ಹೇಳ್ದೆ. ನೀಲಾ ಅಮ್ಮ ಅದ್ರೆ ಏನೋ ಅಂತ ಕೋಪದಲ್ಲಿ ಹೇಳಿ ಸಡನ್ ಆಗಿ ನನ್ನ ಕಡೆಗೆ ತಿರುಗಿ ನೋಡಿ ನನ್ನ ಮುಖ ನೋಡ್ತಾ ಏನು ಅಮ್ಮ ನಾ ಅಂತ ಕೇಳಿದ್ಲು. ನಾನು ಹೋದು ಅನ್ನೋ ಹಾಗೇ ತಲೆ ಆಡಿಸಿದೆ. ನೀಲಾ ಎಂತ ಕೆಲಸ ಮಾಡಿದೆ ಕಣೋ ಅಂತ ಹೇಳಿ ನನ್ನ ಹಿಂದೆ ಬಂದು ಬಚ್ಚಿಟ್ಟು ಕೊಂಡು  ಅಮ್ಮ ನಾ ಮುಖ ನೋಡ್ತಾ ಸಾರೀ ಅಮ್ಮ ನೀವು ಇವನಿಗೆ ಅಮ್ಮ ಅಂತ ಗೊತ್ತಾಗಲಿಲ್ಲ ಅಂತ ಹೇಳಿ ಸಾರೀ ಕೇಳಿದ್ಲು. 

  ನಾನು ಅಮ್ಮ ಮುಂದೆ ನಿಂತು ಸಾರೀ ಅಮ್ಮ ನಿನಗೆ ಪರಿಚಯ ಮಾಡಿಸೋಣ ಅಂತ ಇದ್ದೆ ಅದ್ರೆ ಈ ಫ್ಯಾಕ್ಟರಿ ಕೆಲಸದಲ್ಲಿ ಬ್ಯುಸಿ ಆಗಿ ಪರಿಚಯ ಮಾಡಿಸೋಕೆ ಆಗಲಿಲ್ಲ ಅಂತ ಹೇಳಿ, ನೀಲಾ ಕಡೆಗೆ ನೋಡಿ ಬಾ ಇಲ್ಲಿ ಅಂತ ಹೇಳಿ ದೆ ನೀಲಾ ಸ್ವಲ್ಪ ಭಯ ದಲ್ಲೇ ಹತ್ತಿರ ಬಂದ್ಲು. ನೀಲಾ ಕಿವೀಲಿ ಏನೋ ಹೇಳಿ ಅಲ್ಲಿಂದ ಸ್ವಲ್ಪ ದೂರ ಸರಿದೆ. ನೀಲಾ ಅಮ್ಮ ನಾ ತಬ್ಬಿಕೊಂಡು ಕೆನ್ನೆ ಮುತ್ತೊಂದನ್ನ ಕೊಟ್ಟು ಸಾರೀ ಅಮ್ಮ ಅವನು ನಿಮ್ ಬಗ್ಗೆ ಹೇಳಿದ ಅದ್ರೆ ನೀವೇ ಅಂತ ಹೇಳಿಲ್ಲ ಸಾರೀ ಅಂತ ಸ್ವೀಟ್ ಆಗಿ ಕೇಳಿದ್ಲು. ಅಮ್ಮ ನಾ ಕೋಪ ದೂರ ಆಗಿ ನೀಲಾ ನಾ ಅಪ್ಪಿಕೊಂಡು. ಅವಳ ಕೆನ್ನೆಗೆ ಕಿಸ್ ಮಾಡಿ ನಿನಗೋಸ್ಕರ ಅವನನ್ನ ಸುಮ್ನೆ ಬಿಡ್ತಾ ಇದ್ದೀನಿ ಅಂತ ಹೇಳಿದ್ರು. ಆಮೇಲೆ ಅಮ್ಮ ನೀಲಾ ಸ್ವಲ್ಪ ಹೊತ್ತು ಕೂತು ಮಾತಾಡಿಕೊಂಡರು, ಸಂಜೆ ಆಗ್ತಾ ಇದ್ದಾ ಹಾಗೇ ತಾತ ಅಜ್ಜಿ ಅಪ್ಪ  ಎಲ್ಲರೂ ಹೊರಡ್ತೀವಿ ಅಂತ ಹೇಳಿದ್ರು ಎಲ್ಲರನ್ನ ಹತ್ತಿರ ಇದ್ದು ಕಳಿಸಿ ಕೊಟ್ಟೆ. ಶಿಲ್ಪಾ ಅವರ ಫ್ಯಾಮಿಲಿ ಕೂಡ ಹೊರಡ್ತೀವಿ ಅಂತ ಹೇಳಿದ್ರು.  ಅವರನ್ನು ಕಳಿಸಿ ಕೊಟ್ಟು ನಾನು ನೀಲಾ ರೋಹಿಣಿ ಫ್ಯಾಕ್ಟರಿ ಅಲ್ಲೇ ಇದ್ದು ಕೆಲಸಗಳ ಕಡೆಗೆ ಗಮನ ಕೊಟ್ವಿ..

***************************************

PS