Mahi - 7 in Kannada Love Stories by S Pr books and stories PDF | ಮಹಿ - 7

The Author
Featured Books
  • કાળી ટીલીનું પ્રાયશ્ચિત

    ઓહોહો... વાત જ જાણે એવી હતી કે આખા ગામની છાતી પર જાણે કાળો ડ...

  • અપેક્ષા

       જીવન મળતા ની સાથે આપણે અનેક સબંધ ના સંપર્ક માં આવીએ છીએ....

  • આયનો - 2

    ​️ કેદ થયા પછીની સ્થિતિ: ધૂંધળી દુનિયા​આયનાની અંદરનો કારાવાસ...

  • ટેલિપોર્ટેશન - 3

    ટેલિપોર્ટેશન: વિલંબનું હથિયાર​અધ્યાય ૭: વિલંબનો અભ્યાસ અને ન...

  • The Madness Towards Greatness - 5

    Part 5 :" મારી વિદ્યા માં ઊણપ ના બતાવ , તારા કાળા કર્મો યાદ...

Categories
Share

ಮಹಿ - 7

ಬೆಳಿಗ್ಗೆ ಎದ್ದು ಆಫೀಸ್ ರೆಡಿ ಆಗಿ ಬೈಕ್ ಅಲ್ಲಿ ಹೋಗ್ತಾ ಇದ್ದೆ,  ಸಡನ್ ಆಗಿ ಬೈಕ್ ಪಂಚರ್ ಆಯ್ತು, ಸೈಡ್ ಗೆ ನಿಲ್ಲಿಸಿ ಏನಾಯ್ತು ಅಂತ ನೋಡಿದೆ,  ನಾಲಕ್ಕು ಇಂಚಿನ ಮೊಳೆ  ಫ್ರಂಟ್ ಟೈಯರ್ ಗೆ ಚುಚ್ಚಿ ಕೊಂಡಿತ್ತು , ಗ್ಯಾರೇಜ್ ಹತ್ತಿರ ಹೋಗೋವರೆಗೂ ಇದಕ್ಕೆ ಕಾರಣ ಅದಾವನನ್ನ ಬರಿ ಸಂಸ್ಕೃತ ದಲ್ಲೇ ನೆನೆಸಿಕೊಂಡು ಹೋದೆ, ಬೈಕ್ ನಾ ಪಂಚರ್ ಹಾಕಿಸಿಕೊಂಡು ಆಫೀಸ್ ಗೆ ಹೋದೆ, ಶಿಲ್ಪಾ ನನ್ನ ನೋಡಿ ಗುಡ್ ಮಾರ್ನಿಂಗ್ ಕಣೋ ಅಂತ ವಿಶ್ ಮಾಡಿದ್ಲು. ನಾನು ನಗ್ತಾ ಬ್ಯಾಡ ಮಾರ್ನಿಂಗ್ ಅಂತ ಹೇಳಿ ನನ್ನ ಪ್ಲೇಸ್ ಅಲ್ಲಿ ಕೂತ್ಕೊಂಡು ವರ್ಕ್ ಮಾಡೋಕೆ ಶುರು ಮಾಡಿದೆ. ಶಿಲ್ಪಾ ಏನ್ ಇವನು ಇವತ್ತು ಇಷ್ಟು ಮೂಡ್ ಆಫ್ ಅಲ್ಲಿ ಇದ್ದಾನೆ ಅಂತ ಅನ್ಕೊಂಡು ಸರಿ ಆಮೇಲೆ ಕೇಳೋಣ ಅಂತ ವರ್ಕ್ ಮಾಡೋಕೆ ಶುರು ಮಾಡಿದ್ಲು. ಅಕಿರಾ  ಸೈಲೆಂಟ್ ಆಗಿ ನನ್ನ ನೋಡಿ ಏನು ಕೇಳ್ದೆ ಅವಳ ಪಾಡಿಗೆ ಅವಳು ವರ್ಕ್ ಮಾಡೋಕೆ ಶುರು ಮಾಡಿದ್ಲು.  ವರ್ಕ್ ಮಾಡ್ತಾ ಇರೋವಾಗ ಶ್ವೇತಾ ಕಾಲ್ ಮಾಡಿದ್ಲು. ನಾನು ಪಿಕ್ ಮಾಡಿ ಅ ಮೇಡಂ ಹೇಳಿ ಅಂತ ಹೇಳ್ದೆ. ಶ್ವೇತಾ ಲೋ ನೆಕ್ಸ್ಟ್ ವೀಕ್ ಅಲ್ಲಿ ಒಳ್ಳೇ ದಿನ ಇದೆ ಅಂತೇ ಅವತ್ತು ಹರಿಣಿ ಗೆ ಸೀಮಂತ ಮಾಡಬೇಕು ಅಂತ ಫಿಕ್ಸ್ ಮಾಡಿದ್ದೀವಿ, ಅಂತ ಒಂದು ಡೇಟ್ ಹೇಳಿ ಏನೇನ್ ಬೇಕೋ ಲಿಸ್ಟ್ ರೆಡಿ ಮಾಡ್ತಾ ಇದ್ದಿವಿ  ಸಂಜೆ ಬೇಗ ಬಾ ಅಂತ ಹೇಳಿದ್ಲು. ನಾನು ಸರೆ ಮೇಡಂ ಅಂತ ಹೇಳಿ ಕಾಲ್ ಕಟ್ ಮಾಡಿದೆ. ವರ್ಕ್ ಕಡೆ ಗಮನ ಕೊಟ್ಟೆ.. 

ಮಧ್ಯಾಹ್ನ ಲಂಚ್ ಗೆ ಶಿಲ್ಪಾ ಕರೆದ್ಲು. ನಾನು ದಿನ ಇವರ ಜೊತೆಗೆ ಹೋಗಿ ಹೋಗಿ ಮಧ್ಯಾಹ್ನ ಸಿಗರೇಟ್ ನಾ ಮಿಸ್ ಮಾಡ್ಕೋತ ಇದ್ದೀನಿ ಅಂತ ಅನ್ಕೊಂಡು, ಶಿಲ್ಪಾ ನಾನ್ ಹೊರಗಡೆ ಹೋಗ್ತಾ ಇದ್ದೀನಿ  ಅಲ್ಲೇ ಲಂಚ್ ಮಾಡಿ ಬರ್ತೀನಿ ನೀವ್ ಹೋಗಿ ಅಂತ ಹೇಳ್ದೆ.  ಶಿಲ್ಪಾ ಸರಿ ಕಣೋ ಅಂತ ಹೇಳಿ ಅಕಿರಾ ಜೊತೆಗೆ ಲಂಚ್ ಗೆ ಹೋದ್ಲು. ನಾನು ಆಫೀಸ್ ನಿಂದ ಹೊರಗೆ ಬಂದು ಬೈಕ್ ಅಲ್ಲಿ ಹೊರಗಡೆ ಹೋಗಿ ಲಂಚ್ ಮಾಡಿಕೊಂಡು ಒಂದು ದಮ್ ಹೊಡೆದು ಆಫೀಸ್ ಗೆ ಬಂದು ವರ್ಕ್ ಮಾಡೋಕೆ ಶುರು ಮಾಡಿದೆ.  ಶಿಲ್ಪಾ ಅಕಿರಾ ಜೊತೆಗೆ ಯಾರೋ ಒಬ್ಬ ಮಾತಾಡ್ಕೊಂಡು ನಾವು ಇದ್ದಾ ಪ್ಲೇಸ್ ಗೆ ಬಂದು ಮೂರು ಜನ ನಗ್ತಾ ಮಾತಾಡ್ತಾ ನಿಂತಿದ್ರು. ನಾನು ಅವರ ಬಗ್ಗೆ ಗಮನ ಕೊಡದೆ ವರ್ಕ್ ಮಾಡ್ತಾ ಇದ್ದೆ .  ಶಿಲ್ಪಾ ಮಹಿ ಅಂತ ಕರೆದ್ಲು. ನಾನು ಅವಳ ಮಾತಿಗೆ ವರ್ಕ್ ಮಾಡೋದನ್ನ ಬಿಟ್ಟು ತಿರುಗಿ ನೋಡಿದೆ. ಶಿಲ್ಪಾ  ಇವರು ವಿನೋದ್    ಅಂತ ಅಕಿರಾ ರಿಲೇಟಿವ್ ಈ ಕಂಪನಿ ಅಲ್ಲೇ ಹೊಸದಾಗಿ ಎಕ್ಸಕ್ಯೂಟಿವ್ ಮ್ಯಾನೇಜರ್ ಆಗಿ ಜಾಯಿನ್ ಆಗಿದ್ದಾರೆ ಅಂತ ಪರಿಚಯ ಮಾಡಿಸಿದ್ಲು, ನಾನು ಹಾಯ್ ಬ್ರದರ್ ಅಂತ ಕೈ ಕೊಟ್ಟೆ ಅವನು ಸಿಂಪಲ್ ಆಗಿ ಹಾಯ್ ಮಾಡಿದ. ನನಗೆ ಎಲ್ಲೋ ಉರೀತು ನಾನು ಮತ್ತೇನು ಮಾತನಾಡದೆ ತಿರುಗಿ ವರ್ಕ್ ಮಾಡೋಕೆ ಶುರು ಮಾಡಿದೆ. ವಿನೋದ್ ಅಕಿರಾ ಹತ್ತಿರ ಮಾತಾಡ್ತಾ, ನಿಮ್ ಟೀಂ ಅಲ್ಲಿ ಆಲ್ಮೋಸ್ಟ್ ಎಲ್ಲರೂ ಹುಡುಗಿರೆ ಇರೋದು, ಬಟ್ ಒಬ್ಬನೇ ಹುಡುಗ ಇದ್ದಾನೆ ಯಾಕೆ ಅಂತ ಕೇಳಿದ. ಅಕಿರಾ ಇಂಟರ್ನರ್ ವಿನಿ ಎಲ್ಲೂ ಪ್ಲೇಸ್ಮೆಂಟ್ ಇದ್ದಿಲ್ಲ ಸೋ ನಮ್ ಟೀಂ ಅಲ್ಲಿ ಅದೇ ಟೈಮ್ ಗೆ ಒಂದು ಹುಡುಗಿ ಜಾಬ್ ಬಿಟ್ಟಿದ್ಲು  ಸೋ ಅ ಪ್ಲೇಸ್ ನಾ ರಿಪ್ಲೇಸ್ ಮಾಡಿದ್ರು ಅಂತ ಹೇಳಿದ್ಲು. ವಿನಿ ಮಾತಾಡ್ತಾ ಏನಾದ್ರು ಪ್ರಾಬ್ಲಮ್ ಮಾಡ್ತಾನ, ವರ್ಕ್ ಹೇಗೆ ಮಾಡ್ತಾನೆ ಅಂತ ಕೇಳಿದ. ಪ್ರಾಬ್ಲಮ್ ಏನು ಮಾಡೋದಿಲ್ಲ ವರ್ಕ್ ಕೂಡ ಚೆನ್ನಾಗಿ ಮಾಡ್ತಾನೆ  ಅಂತ ಅಕಿರಾ ಹೇಳಿದ್ಲು. ವಿನಿ ಇಷ್ಟು ಎಕ್ಸ್ಪೀರಿಯೆನ್ಸ್ ಇರೋ ಟೀಂ ಅಲ್ಲಿ ಒಬ್ಬ ಇಂಟರ್ನರ್ ಅಂದ್ರೆ ನಾಳೆ ಏನಾದ್ರು ಪ್ರಾಬ್ಲಮ್ ಅದ್ರೆ ಅವನಿಂದ ಇಡೀ ಟೀಂ ಬ್ಯಾಡ ನೇಮ್ ತಗೋ ಬೇಕಾಗುತ್ತೆ, ನಾನ್ ಮಾತಾಡಿ ಚೇಂಜ್ ಮಾಡೋಕೆ ಹೇಳ್ತಿನಿ ಅಂತ ಹೇಳಿದ. ಅಕಿರಾ ಇವಾಗ ಏನು ಆಗಿಲ್ಲ ಅಲ್ವಾ ಬಿಡು ಅಂತ ಹೇಳಿದ್ಲು. ವಿನಿ ಆಗಿಲ್ಲ ಅಂತ ಬಿಟ್ರೆ ದೊಡ್ಡದಾಗಿ ಏನಾದ್ರು ಮಾಡ್ತಾರೆ ಸೋ ಅದಕ್ಕೂ ಮೊದಲೇ ಚೇಂಜ್ ಮಾಡಿದ್ರೆ ಬೆಸ್ಟ್ ಅಲ್ವಾ ಅಂತ ಹೇಳಿದ. ಅಕಿರಾ ಹ್ಮ್ ನಿನ್ ಇಷ್ಟ ಕಣೋ ವಿನಿ ಅಂತ ಹೇಳಿದ್ಲು. ವಿನಿ ಸರಿ ಬೈ ಏನಾದ್ರು ಇದ್ರೆ ಕಾಲ್ ಮಾಡು ಅಂತ ಹೇಳಿ ಅಲ್ಲಿಂದ ಹೊರಟು ಹೋದ.

ಶಿಲ್ಪಾ ಅವನು ಹೋದಮೇಲೆ ಏನೇ ಇವನು ಹೀಗೆ ಮಾತಾಡಿ ಹೋಗ್ತಾ ಇದ್ದಾನೆ ಮಹಿಗೆ ಗೊತ್ತಾದ್ರೆ ಎಷ್ಟು ಫೀಲ್ ಆಗ್ತಾನೆ ಗೊತ್ತಾ ಅಂತ ಕೇಳಿದ್ಲು. ಅಕಿರಾ ಬಿಡೆ ಅವನ ಬಗ್ಗೆ ನಿನಗೆ ಗೊತ್ತು ಅಲ್ವಾ  ಸುಮ್ನೆ  ಆಯ್ತು ನಿನ್ ಇಷ್ಟ ಅಂದ್ರೆ ಸೈಲೆಂಟ್ ಆಗ್ತಾನೆ ಇಲ್ಲಾ ಅಂದ್ರೆ ಏನಾದ್ರು ಒಂದು ಇಶ್ಯೂ ಮಾಡ್ತಾನೆ, ಅದಕ್ಕೆ ನಿನ್ ಇಷ್ಟ ಅಂತ ಹೇಳ್ದೆ. ಆದ್ರೂ ಅವನು ಹೇಳಿದ್ರಲ್ಲೂ ಸ್ವಲ್ಪ ಸತ್ಯ ಇದೆ, ಇದುವರೆಗೂ ನಮ್ ಟೀಂ ಯಾವ ರಿಮಾರ್ಕ್ ಇಲ್ಲದೆ ವರ್ಕ್ ಮಾಡ್ತಾ ಇದೆ, ಇಂಟರ್ನ್ ನಿಂದ ಪ್ರಾಬ್ಲಮ್ ಅದ್ರೆ ಎಲ್ಲರೂ ತಲೆ ಬಗ್ಗಿಸಬೇಕು, ಅದೇ ಅವನ ಭಯ. ಶಿಲ್ಪಾ ಭಯ ಇಲ್ಲಾ ನಿನ್ ಮೇಲೆ ಲವ್ ಅ ಅಂತ ಕೇಳಿದ್ಲು. ಅಕಿರಾ ಹಲೋ ಅಷ್ಟೊಂದು ಏನು ಇಲ್ಲಾ ಇಲ್ಲಿ ಸರಿನಾ ಅಂತ ಹೇಳಿದ್ಲು. ಅಷ್ಟಿಲ್ಲದೇ ಇಷ್ಟೆಲ್ಲಾ ಮಾಡೋಕೆ ಸಾಧ್ಯನೇ ಇಲ್ಲಾ, ನಿಮ್ ಮನೆಯಲ್ಲಿ ವಿನಿ ಬಗ್ಗೆ ಒಳ್ಳೇದು ಅಭಿಪ್ರಾಯ ಇದೆ, ಅದು ಅಲ್ಲದೆ ಒಳ್ಳೇ ಪೊಸಿಷನ್ ಅಲ್ಲಿ ಇದ್ದಾನೆ, ನೋಡೋಕು ಚೆನ್ನಾಗಿ ಇದ್ದಾನೆ  ಇನ್ನೇನ್ ಬೇಕು ಹೇಳು ನಿನಗೆ ಜೋಡಿ ಆಗೋಕೆ ಅಂತ ಹೇಳಿದ್ಲು. ಅಕಿರಾ ಅದು ಆದಾಗ ನೋಡೋಣ ಮೊದಲು ವರ್ಕ್ ಮಾಡು ಅಂತ ಹೇಳಿದ್ಲು. ಶಿಲ್ಪಾ ಅವಳ ಪ್ಲೇಸ್ ಗೆ ಬಂದು ವರ್ಕ್ ಮಾಡೋಕೆ ಶುರು ಮಾಡಿದ್ಲು.  ಬಟ್ ಅವರು ಅನ್ಕೊಂಡು ಇರೋದು ಮೆಲ್ಲಗೆ ಮಾತಾಡಿದ್ರೆ ಕೇಳೋದಿಲ್ಲ ಅಂತ ಬಟ್ ಅವರಿಗೆ ಗೊತ್ತಿಲ್ಲ ನಮ್ದು ಹಾವಿನ ಕಿವಿಗಳು ಅಂತ. ಸೋ ಆಗಲೇ ನಿರ್ಧಾರ ಮಾಡಿದೆ ಇಬ್ಬರಿಂದ ಸ್ವಲ್ಪ ದೂರಾನೇ ಇರಬೇಕು ಅಂತ. 

ಸಂಜೆ ವರ್ಕ್ ಮುಗಿಸಿಕೊಂಡು, ಹೋಗೋವಾಗ ಶಿಲ್ಪಾ ಗೆ ಅಕಿರಾ ಗೆ ಅವರು ಕೊಟ್ಟಿದ್ದ ದುಡ್ಡನ್ನ ಆನ್ಲೈನ್ ಟ್ರಾನ್ಸ್ಫರ್ ಮಾಡಿ ಬ್ಯಾಂಕಿಂಗ್ ಅಪ್ ನಾ ಡಿಲೀಟ್ ಮಾಡಿ  ಅಲ್ಲಿಂದ ಹೊರಟು ಹೋದೆ.  ಶಿಲ್ಪಾ ಮೊಬೈಲ್ ಅಲ್ಲಿ ಮೆಸೇಜ್ ನಾ ನೋಡಿ ಲೇ ಅಕಿರಾ ಇಲ್ಲಿನೊಡೆ ಮಹಿ ದುಡ್ಡನ್ನ ವಾಪಸ್ಸು ಕೊಟ್ಟಿದ್ದಾನೆ ಅಂತ ಮೊಬೈಲ್ ಅಲ್ಲಿ ಬಂದಿದ್ದ ಮೆಸೇಜ್ ನಾ ನೋಡಿ ಅಕೌಂಟ್ ಚೆಕ್ ಮಾಡಿದ್ಲು . ಅಕಿರಾ ಅವಳ ಮೊಬೈಲ್ ತೆಗೆದು ಚೆಕ್ ಮಾಡಿದ್ಲು. ಅವಳ ಅಕೌಂಟ್ ಗೆ ದುಡ್ಡು ಬಂದಿರೋ ಮೆಸೇಜ್ ನಾ ನೋಡಿ. ಹೌದು ಕಣೆ ಅಮೌಂಟ್ ನಾ ರಿಟರ್ನ್ ಮಾಡಿದ್ದಾನೆ ಅಂತ ಹೇಳಿದ್ಲು. ಶಿಲ್ಪಾ ಲೇ ಮೊನ್ನೆ ತಾನೇ ಇಲ್ಲಾ ಅಂತ ಇದ್ದಾ ಇವಾಗ ಕಳಿಸಿರೋ ಅಷ್ಟು ದುಡ್ಡನ್ನು ವಾಪಸ್ಸು ಕಳಿಸಿದ್ದಾನೆ, ಒಂದು ವೇಳೆ ನಾವು ಮಾತಾಡಿದೂ ಏನಾದ್ರು ಕೇಳಿಸಿಕೊಂಡು ಅವನಿಗೆ ಏನಾದ್ರು ಬೇಜಾರ್ ಆಯ್ತಾ ಅಂತ ಕೇಳಿದ್ಲು. ಅಕಿರಾ ಗೊತ್ತಿಲ್ಲ ಕಣೆ ಬಟ್ ನಾವು ನಿಧಾನಕ್ಕೆ ಅಲ್ವಾ ಮಾತಾಡಿದ್ದು ಅದು ಅಲ್ಲದೆ ಅವನು ವರ್ಕ್ ಮಾಡ್ತಾ ಬ್ಯುಸಿ ಆಗಿ ಇದ್ದಾ ಅಂತ ಹೇಳಿ ನಾಳೆ ಕೇಳೋಣ ಬಿಡು ಸಿಗ್ತಾನೆ ಅಲ್ವಾ ಅಂತ ಅನ್ಕೊಂಡು ಅಲ್ಲಿಂದ ಹೊರಟು ಹೋದ್ರು.

ನಿಜ ಹೇಳಬೇಕು ಅಂದ್ರೆ ನನಗೆ ಅವರು ಮಾತಾಡಿಕೊಂಡ ವಿಷಯ ಕ್ಕೆ ಬೇಜಾರಾಗಿ ದುಡ್ಡನ್ನ ವಾಪಸ್ಸು ಕಳಿಸಿಲ್ಲ. ಸುಮ್ನೆ ನನ್ನ ಕಾರಣದಿಂದ ಅವರ ಮಧ್ಯ ಸಮಸ್ಯೆ ಬೇಡ ಅಂತ ಅನ್ಕೊಂಡು ದುಡ್ಡನ್ನ ರಿಟರ್ನ್ ಮಾಡಿದೆ ಅಷ್ಟೇ.

ಮನೆಗೆ ಬಂದೆ ಫ್ರೆಷ್ ಅಪ್ ಆಗಿ ಹಾಲ್ ಗೆ ಹೋದೆ ಅಮ್ಮ ಕಾಫಿ ಕೊಟ್ಟು ಅಮ್ಮ ಕೂಡ ಸೀಮಂತ ಮಾಡೋದರ ಬಗ್ಗೆ ಹೇಳ್ತಾ ಕೂತ್ರು. ನಾನು ಕೇಳ್ತಾ ಕಾಫಿ ಕುಡಿತಾ ಇದ್ದೆ.  ಶ್ವೇತಾ ಹರಿಣಿ ಇಬ್ಬರು ರೂಮ್ ನಿಂದ ಹೊರಗೆ ಬರ್ತಾ ಹರಿಣಿ ಅಮ್ಮ ನನ್ನ ಹತ್ತಿರ ಮಾತಾಡ್ತಾ ಇರೋದನ್ನ ನೋಡಿ, ಸಾರೀ ಮಹಿ ನನ್ನಿಂದ ನಿನಗೆ ತುಂಬಾ ತೊಂದ್ರೆ ಆಗ್ತಾ ಇದೆ ಅಂತ ಹೇಳ್ತಾ ಬಂದು ಸೋಫಾ ಮೇಲೆ ಕುತ್ಕೊಂಡ್ಲು. ನಾನು ಅಕ್ಕ ನಿನಗೆ ಮಾಡದೇ ಇನ್ಯಾರಿಗೆ ಮಾಡಬೇಕು ಹೇಳು, ನನಗೆ ಏನು ತೊಂದ್ರೆ ಇಲ್ಲಾ ನಿನ್ ಹಾಗೆಲ್ಲ ಯೋಚ್ನೆ ಮಾಡಬೇಡ ಸರಿ ನಾ ಅಂತ ಹೇಳಿ, ಅಮ್ಮ ಏನೇನ್ ಬೇಕೋ ಸರಿಯಾಗಿ ನೋಡಿ ಲಿಸ್ಟ್ ರೆಡಿ ಮಾಡಿ ನಾಳೆ ಸಂಜೆ ಹೋಗಿ ಏನೇನ್ ಬೇಕೋ ಆರ್ಡರ್ ಕೊಟ್ಟು ಫಂಕ್ಷನ್ ದಿನ ತಗೋ ಬರ್ತೀನಿ ಅಂತ ಹೇಳಿ ಬೈಕ್ ತೆಗೆದುಕೊಂಡು ಹೊರಗೆ ಹೋದೆ. 

ರಾತ್ರಿ ಮನೆಗೆ ಸ್ವಲ್ಪ ಲೇಟ್ ಆಗಿ ಬಂದೆ ಅಮ್ಮ ಡೋರ್ ಓಪನ್ ಮಾಡಿ ಅವರು ಹೊರಟು ಹೋದ್ರು ನಾನು ಅಡುಗೆ ಮನೆಗೆ ಹೋಗಿ ಊಟ ಬಡಿಸಿಕೊಂಡು ಹಾಲ್ ಗೆ ಬಂದು ಸೋಫಾ ಮೇಲೆ ಕುತ್ಕೊಂಡು ಊಟ ಮಾಡ್ತಾ ಇದ್ದೆ. ಮೊಬೈಲ್ ಗೆ ಮೆಸೇಜ್ ಬಂತು ಶಿಲ್ಪಾ ಕಡೆ ಯಿಂದ ರಿಪ್ಲೇ ಮಾಡೋಕೆ ಹೋಗಿಲ್ಲ. ಊಟ ಮಾಡಿಕೊಂಡು ರೂಮ್ ಹೋಗಿ ಮಲಗಿ ಕೊಂಡೆ.  ಬೆಳಿಗ್ಗೆ ಆಫೀಸ್ ಗೆ ಹೋಗಿ ನನ್ನ ಪ್ಲೇಸ್ ಅಲ್ಲಿ ಕೂತು ವರ್ಕ್ ಮಾಡ್ತಾ ಇದ್ದೆ  ಶಿಲ್ಪಾ ಅಕಿರಾ ಬಂದ್ರು, ಶಿಲ್ಪಾ ನನ್ನ ನೋಡಿ ಗುಡ್ ಮಾರ್ನಿಂಗ್ ಹೇಳಿದ್ಲು. ನಾನು ವಿಶ್ ಮಾಡಿ ವರ್ಕ್ ಮಾಡೋಕೆ ಶುರು ಮಾಡಿದೆ. ಶಿಲ್ಪಾ ಮಾತಾಡ್ತಾ ಮಹಿ ದುಡ್ಡನ್ನ ಏನಕ್ಕೆ ಇಷ್ಟು ಬೇಗ ವಾಪಸ್ಸು ಕಳಿಸಿದೆ ನಾನೇನಾದ್ರೂ ನಿನ್ನ ಕೇಳಿದ್ನಾ ಅಂತ ಕೇಳಿದ್ಲು. ನಾನು ಕೇಳಿಲ್ಲ ಬಟ್ ತುಂಬಾ ದಿಸಾ ಸಾಲ ಇಟ್ಕೊಳ್ಳೋದು ಕೂಡ ಒಳ್ಳೇದು ಅಲ್ಲ ಅಲ್ವಾ. ಡ್ರೈವರ್ ಆಗಿ ಮಾಡೋ ಹತ್ತಿರ ಅಡ್ವಾನ್ಸ್ ತಗೊಂಡೆ ಅದಕ್ಕೆ ರಿಟರ್ನ್ ಮಾಡಿದೆ. ಥ್ಯಾಂಕ್ಸ್ ಕೇಳೋಕೂ ಮೊದಲೇ ಕೊಟ್ಟಿದ್ದಕ್ಕೆ ಅಂತ ಹೇಳಿದೆ.  ಶಿಲ್ಪಾ ಏನೋ ಫ್ರೆಂಡ್ಸ್ ಮಧ್ಯ ಸಾರೀ ಥ್ಯಾಂಕ್ಸ್ ಇರಲ್ಲ ಅಂತ ಏನೇನೋ ಹೇಳ್ತಾ ಇದ್ದೆ ಇವಾಗ ನೀನೇ ಥ್ಯಾಂಕ್ಸ್ ಹೇಳ್ತಾ ಇದ್ದಿಯಾ ಅಂತ ಕೇಳಿದ್ಲು. ದುಡ್ಡು ಕೊಡದೆ ಮಾಡೋ ಹೆಲ್ಪ್ ಗೆ ಥ್ಯಾಂಕ್ಸ್ ಹೇಳೋದು ಬೇಕಾಗಿಲ್ಲ, ಅದ್ರೆ ದುಡ್ಡಿನ ವಿಷಯ ದಲ್ಲಿ ಥ್ಯಾಂಕ್ಸ್ ಹೇಳಲೇ ಬೇಕು ಅಂತ ಹೇಳಿ ವರ್ಕ್ ಮಾಡೋಕೆ ಶುರು ಮಾಡಿದೆ. 

ಮಧ್ಯಾಹ್ನ ಲಂಚ್ ಗೆ ಶಿಲ್ಪಾ ಕರೆದ್ಲು. ಇಲ್ಲಾ ವರ್ಕ್ ಇದೆ  ನೀವ್ ಹೋಗಿ ಅಂತ ಹೇಳಿ ಕಳಿಸಿ ಬಿಟ್ಟು ಹೊರಗೆ ಹೋದೆ . ಲಂಚ್ ಮಾಡಿಕೊಂಡು ಬರೋವಾಗ ಫ್ರೆಂಡ್ ಕಾಲ್ ಮಾಡಿ ಮಗ ಬೈಕ್ ಕೊಡೊ ಸ್ವಲ್ಪ ಅರ್ಜೆಂಟ್ ಅಂತ ಹೇಳ್ದ, ನಾನು ಸರೆ ಆಫೀಸ್ ಹತ್ತಿರ ಡ್ರಾಪ್ ಮಾಡಿ ತಗೊಂಡು ಹೋಗು ಅಂತ ಹೇಳ್ದೆ ಅವನು ನನ್ನ ಆಫೀಸ್ ಹತ್ತಿರ ಡ್ರಾಪ್ ಮಾಡಿ ಬೈ ಹೇಳಿ ಹೊರಟು ಹೋದ. ಅಕಿರಾ ಶಿಲ್ಪಾ ಜೊತೆಗೆ ವಾಕ್ ಮಾಡ್ತಾ ಇದ್ದಾ ವಿನೋದ್ ನಾನ್ ಬೈಕ್ ಇಳಿದು ನಡ್ಕೊಂಡು ಹೋಗ್ತಾ ಇದ್ದಿನ್ನ ನೋಡಿ, ಶಿಲ್ಪಾ ಹತ್ತಿರ ನಿಮ್ ಟೀಂ ಅವನ ಹತ್ತಿರ ಒಂದು ಬೈಕ್ ಕೂಡ ಇಲ್ವಾ ಅಂತ ಕೇಳಿದ. ಶಿಲ್ಪಾ ಸದ್ಯಕ್ಕೆ ಇಲ್ಲಾ ಅಂತ ಹೇಳಿದ ಅಂತ ಹೇಳಿದ್ಲು. ವಿನೋದ್ ನಗ್ತಾ  ಒಬ್ಬ ಸಾಫ್ಟ್ವೇರ್ ಎಂಪ್ಲೋಯ್ ಹತ್ತಿರ ಸ್ವಂತ ಬೈಕ್ ಕೂಡ ಇಲ್ವಾ, ಅಯ್ಯೋ ಪಾಪ ಅಂತ ಗೇಲಿ ಮಾಡ್ಕೊಂಡು ನಗೋಕೆ ಶುರು ಮಾಡಿದ. ನಾನು ಹತ್ತಿರ ಹೋಗ್ತಾ ಇದ್ದಾ ಹಾಗೇ ವಿನೋದ್ ಇನ್ನು ಸ್ವಲ್ಪ ಜೋರಾಗಿ ಕಿಂಡಲ್ ಮಾಡ್ಕೊಂಡು ನಗೋಕೆ ಶುರು ಮಾಡಿದ. ಶಿಲ್ಪಾ ಅಕಿರಾ ಇಬ್ಬರು ವಿನೋದ್ ಇದು ಯಾಕೋ ತುಂಬಾ ಜಾಸ್ತಿ ಆಯ್ತು ನಿಂದು ಹೋಗ್ಲಿ ಪಾಪ ಅಂತ ಸುಮ್ನೆ ಇದ್ರೆ ಒಬ್ಬ ವ್ಯಕ್ತಿ ಬಗ್ಗೆ ಇಷ್ಟು ಚಿಪ್ ಆಗಿ ಮಾತಾಡ್ತೀಯಾ ಅಲ್ವಾ ಇದು ನಿನಗೆ ಸರಿ ಅನ್ನಿಸುತ್ತೆ ಏನೋ ಬಟ್ ನಮಗಲ್ಲ ಅಂತ ಇಬ್ಬರು ಅಲ್ಲಿಂದ ಹೊರಟು ಹೋದ್ರು. ವಿನೋದ್ ಗೆ ಇಗೋ ಹರ್ಟ್ ಆಯ್ತು ಅಂತ ಅನ್ನಿಸುತ್ತೆ ಅವನ ಬುದ್ದಿ ತೋರಿಸೋಕೆ ಪ್ಲಾನ್ ಮಾಡೋಕೆ ಶುರು ಮಾಡಿದ.  

ಶಿಲ್ಪಾ ಅಲ್ವೇ ಅವನಿಗೆ ಎಷ್ಟು ಕೊಬ್ಬು ಇದ್ರೆ ಮಹಿ ಮುಂದೇನೆ ಅ ರೀತಿ ಮಾತಾಡಿದ ಪಾಪ ಮಹಿಗೆ ಎಷ್ಟು ಹರ್ಟ್ ಆಗಿರೋದಿಲ್ಲ, ಅವನೇನು ಇವನ ಹಂಗಲ್ಲಿ ಬದುಕುತ್ತಾ ಇದ್ದಾನ, ಇಲ್ಲಾ ಅಲ್ವಾ ಇವನೇ ಅಪ್ಪನ ಹೆಸರು ಹೇಳ್ಕೊಂಡು ಬದುಕುತ್ತಾ ಇರೋದು ಇವಗ ಈ ಜಾಬ್ ಕೂಡ ಅವರ ಅಪ್ಪನ ಭಿಕ್ಷೆ, ಸೀರಿಯಸ್ ಆಗಿ ಹೇಳ್ತಾ ಇದ್ದೀನಿ ಇನ್ನೊಂದು ಸರಿ ಏನಾದ್ರು ಅವನು ಮಹಿ ಬಗ್ಗೆ ಮಾತಾಡಿದ್ರೆ ನಾನ್ ಮಾತ್ರ ಸುಮ್ನೆ ಇರೋದಿಲ್ಲ ಅಂತ ಕೋಪದಲ್ಲೇ ಹೇಳಿದ್ಲು.  ಅಕಿರಾ ಲೇ ಅವನು ಮಾಡಿದ್ದು ಸರಿ ಅಂತ ನಾನ್ ಏನಾದ್ರು ಹೇಳಿದ್ನ ನಾನು ಅವನಿಗೆ ಬೈದೆ ಬಂದೆ ಅಲ್ವಾ, ನಿನ್ ನೆನ್ನೆ ಹೇಳಿದೆ ಅಲ್ವಾ ಯಾಕ್ ಅವನ ಮೇಲೆ ಇಂಟ್ರೆಸ್ಟ್ ಇಲ್ವಾ ಅಂತ ಈ ಕಾರಣಕ್ಕೆ ದುಡ್ಡು ಇದೆ ಅನ್ನೋ ದುರಂಕಾರ, ಈ ಆಫೀಸ್ ಅಲ್ಲಿ ಅವರ ಅಪ್ಪ ಒನ್ ಆಫ್ ದಿ ಬೋರ್ಡ್ ಮೆಂಬರ್ ಅನ್ನೋ ಕೊಬ್ಬು, ಯಾರಿಗೂ ಮರ್ಯಾದೆ ಕೊಡೋದಿಲ್ಲ ಚಿಪ್ ಆಗಿ ಮಾತಾಡ್ತಾನೆ ಅದಕ್ಕೆ ಅವನು ಅಂದ್ರೆ ಇಷ್ಟ ಇಲ್ಲಾ, ನೆನ್ನೆ ನೇ ಹೇಳೋಣ ಅನ್ಕೊಂಡೆ ಅವನಿಗೆ ಆಫೀಸ್ ಅಲ್ವಾ ಸುಮ್ನೆ ಸಿನ್ ಕ್ರಿಯೇಟ್ ಆಗುತ್ತೆ ಅಂತ ಸೈಲೆಂಟ್ ಆಗಿ ಇದ್ದೆ ಅಷ್ಟೇ, ಪಾಪ ಮಹಿ ಅಲ್ಲಿ ಎಷ್ಟು ಹರ್ಟ್ ಆಗಿ ಇದ್ದಾನೋ , ಬಾ ಹೋಗಿ ಸಮಾಧಾನ ಮಾಡೋಣ ಅಂತ ಇಬ್ರು ವರ್ಕ್ ಮಾಡೋ ಪ್ಲೇಸ್ ಹತ್ತಿರ ಬಂದ್ರು.

ವರ್ಕ್ ಮಾಡ್ತಾ ಕೂತಿದ್ದ ನನ್ನ ನೋಡಿ ಅಕಿರಾ ಬಂದು ಮಹಿ ಐಮ್ ರಿಯಲಿ ಸಾರೀ ಅವನು ಹಾಗೇ ಮಾತಾಡ್ತಾನೆ ಅಂತ ಅನ್ಕೊಂಡು ಇರಲಿಲ್ಲ ಪ್ಲೀಸ್ ಅವನ ಮಾತನ್ನ ನೀನು ಮನಸ್ಸಿಗೆ ಹಚ್ಕೋಬೇಡ ಅಂತ ಸ್ವಲ್ಪ ನೋವಿನಿಂದನೆ ಹೇಳಿದ್ಲು. ಶಿಲ್ಪಾ ಕೂಡ ಹೌದು ಮಹಿ ಪ್ಲೀಸ್ ನಿನ್ ಏನು ಬೇಜಾರ್ ಆಗಬೇಡ ಪ್ಲೀಸ್ ಅವನ ಪರವಾಗಿ ನಾನ್ ಸಾರೀ ಕೇಳ್ತೀನಿ ಅಂತ ಅವಳು ಕೂಡ ನೋವಿನಿಂದ ಹೇಳಿದ್ಲು.  ನಾನು ಪ್ಲೀಸ್ ಶಿಲ್ಪಾ ಯಾರೋ ಮಾತಾಡಿದಕ್ಕೆ ನೀವ್ ಸಾರೀ ಕೇಳೋದು ನನಗೆ ಇಷ್ಟ ಇಲ್ಲಾ, ಅವನೇನು ಇಲ್ದೆ ಇರೋದನ್ನ ಹೇಳಿಲ್ಲಾ ಅಲ್ವಾ ನಾನ್ ಹೇಗೆ ಇದ್ದೀನಿ ಅಂತ ಹೇಳ್ತಾ ಇದ್ದಾನೆ ಅಷ್ಟೇ ಅಲ್ವಾ, ಅವನು ಹೇಳೋದ್ರಲ್ಲಿ ತಪ್ಪಿಲ್ಲ, ನಾನು ನನ್ನ ಯೋಗ್ಯತೆ ಏನು ಅನ್ನೋದನ್ನ ಹೇಳಿದ್ದಾನೆ  ಅಷ್ಟೇ, ಹೊಟ್ಟೆ ತುಂಬಿ ಇರೋವ್ರು ಮಾತಾಡ್ತಾರೆ ನಾವು ಕೇಳಬೇಕು, ನೋಡಿ ಸುಮ್ನೆ ನೀವು ನನಗೋಸ್ಕರ ಅವನ ಹತ್ತಿರ ವಾದ ಮಾಡೋಕೆ ಹೋಗಬೇಡಿ, ಅವನಿಗೆ ಇರೋ ಪವರ್ ಗೆ ನನ್ನ ಜಾಬ್ ಬೇಕಾದ್ರು ಕಿತ್ಕೊತಾನೆ ಪ್ಲೀಸ್ ಈ ಜಾಬ್ ಹೋದ್ರೆ ನನಗೆ ತುಂಬಾ ಕಷ್ಟ ಆಗುತ್ತೆ, ನನಗೆ ಏನಾದ್ರು ಹೆಲ್ಪ್ ಮಾಡಬೇಕು ಅಂತ ಇದ್ರೆ, ದಯವಿಟ್ಟು ನೀವು ನನ್ನ ಪರ ಮಾತಾಡೋದನ್ನ ಬಿಟ್ಟು ನಿಮ್ ಕೆಲಸ ನೀವು ನೋಡ್ಕೊಳ್ಳಿ ಅಂತ ಹೇಳಿ ನನ್ನ ಕೆಲಸದ ಕಡೆ ಗಮನ ಕೊಟ್ಟೆ.


ಶಿಲ್ಪಾ ಅಕಿರಾ ಇಬ್ಬರು ನೋವಿನಿಂದ ಸಾರೀ ಕಣೋ ಅಂತ ಹೇಳಿ ಅವರ ಪ್ಲೇಸ್ ಗೆ ಹೋಗಿ ಬಿಟ್ರು 


***************************************


P. S.