Mahi - 6 in Kannada Love Stories by S Pr books and stories PDF | ಮಹಿ - 6

The Author
Featured Books
Categories
Share

ಮಹಿ - 6

ಮಧ್ಯಾಹ್ನ ಲಂಚ್ ಮಾಡಿ ಹೊರಗೆ ಬರ್ತಾ ಶಿಲ್ಪಾ ಗೆ ಹೇಳಿದೆ ಅಕಿರಾ ಜೊತೆ ಮಾತಾಡಬೇಕು ಅಂತ. ಶಿಲ್ಪಾ ಲೋ ಅದಕ್ಕೆ ನನ್ನ ಕೇಳೋದು ಏನಕ್ಕೆ ಮಾತಾಡು ಅಂತ ಹೇಳಿ ಮುಂದೆ ಹೋಗೋಕೆ ಹೋದ್ಲು. ನಾನ್ ಅವಳ ಕೈ ಇಡಿದು ಏನ್ ಕಾಮಿಡಿ ನಾ ಅಂತ ಕೇಳ್ದೆ ಅವಳನ್ನ. ಶಿಲ್ಪಾ ಏನೋ ನಿಂದು ಇವಾಗ ಏನು ಅವಳ ಜೊತೆ ಮಾತಾಡಬೇಕು ಅಷ್ಟೇ ಅಲ್ವಾ ಅಂತ ಹೇಳಿ ಮುಂದೆ ಹೋಗ್ತಾ ಇದ್ದಾ ಅಕಿರಾ ನಾ ಲೇ ಅಕಿರಾ ಮಹಿ ನಿನ್ ಹತ್ತಿರ ಏನೋ ಮಾತಾಡಬೇಕು ಅಂತೇ ಇರು ಅಂತ ಹೇಳಿದ್ಲು. ಅಕಿರಾ ಅ ಮಾತಿಗೆ ನಿಂತು ಹಿಂದೆ ತಿರುಗಿ ಕೈ ಕಟ್ಟಿಕೊಂಡು ನನ್ನ ನೋಡ್ತಾ ಏನ್ ಮಾತಾಡಬೇಕು ಅಂತ ಸ್ವಲ್ಪ ಸೀರಿಯಸ್ ಆಗಿ ನೋಡ್ತಾ ಕೇಳಿದ್ಲು. ನಾನ್ ಅವಳ ಮುಂದೆ ನಿಂತು ನನ್ನ ನಂಬರ್ ಗೆ ದುಡ್ಡು ಏನಕ್ಕೆ ಕಳಿಸಿದೆ ಅಂತ ಕೇಳ್ದೆ. ಅಕಿರಾ ಏನು ನಾನು ನಿನ್ ನಂಬರ್ ಗೆ ದುಡ್ಡು ಕಳಿಸಿದ್ನ ನಿನಗೆ ಏನಾದ್ರು ತಲೆ ಕೆಟ್ಟಿದೆಯಾ ಅಂತ ಕೇಳಿದ್ಲು. ನಾನು ಮೊಬೈಲ್ ಅಲ್ಲಿ ಬಂದ ಮೆಸೇಜ್ ಅಲ್ಲಿ ಇದ್ದಾ ನೇಮ್ ನಂಬರ್ ನಾ ತೋರಿಸಿ ಹೆಸರು ಯಾರ್ದು ನಂಬರ್ ಯಾರ್ದು ಅಂತ ಕೇಳ್ದೆ.  ಅಕಿರಾ ಸ್ವಲ್ಪ ಕೂಲ್ ಆಗಿ ಅದು, ನೀನು ಶಿಲ್ಪಾ ಹತ್ತಿರ ಮಾತಾಡೋದು ಕೇಳಿಸ್ತು ಸೋ ಅದಕ್ಕೆ ಕಳಿಸಿದೆ, ಆದ್ರೂ ಏನ್ ನೀನು ಅವಳು ಕೊಟ್ಟಾಗ ಏನು ಮಾತಾಡದೆ ತಗೊಂಡೆ ನಾನ್ ಕೊಟ್ರೆ ಮಾತ್ರ ಇಷ್ಟು ಪ್ರಶ್ನೆ ಕೇಳ್ತಾ ಇದ್ದಿಯಾ ಅಂತ ಕೇಳಿದ್ಲು.  ಅವಳು ನನ್ನ ಫ್ರೆಂಡ್ ಅದಕ್ಕೆ ಜಾಸ್ತಿ ಏನು ಮಾತಾಡಿಲ್ಲ ತಗೊಂಡೆ, ಬಟ್ ನೀವು ಟೀಂ ಲೀಡರ್ ನನಗಿಂತ ದೊಡ್ಡ ಪೊಸಿಷನ್ ಅಲ್ಲಿ ಇರೋವ್ರು ನನಗೆ ನಿಮ್ ಹತ್ತಿರ ದುಡ್ಡು ತಗೋಳೋಕೆ ಇಷ್ಟ ಇಲ್ಲಾ  ವಾಪಸ್ಸು ಕಳಿಸ್ತೀನಿ ಪ್ಲೀಸ್ ನನ್ನ ತಪ್ಪಾಗಿ ತಿಳ್ಕೊಬೇಡಿ ಅಂತ ಹೇಳಿ ಮೊಬೈಲ್ ಕಡೆಗೆ ನೋಡಿದೆ. ಅಕಿರಾ ಅದೇನ ನಿನ್ ಪ್ರಾಬ್ಲಮ್  ಒಂದು ಕೆಲಸ ಮಾಡು  ನನ್ನ ಕೂಡ ಶಿಲ್ಪಾ ತರಾನೇ ಅನ್ಕೋ ಅಂತ ಹೇಳಿದ್ಲು. ನಾನು ಮೊಬೈಲ್ ಬಿಟ್ಟು ಅಕಿರಾ ಕಡೆ ನೋಡ್ತಾ ಶಿಲ್ಪಾ ತರ ಅಂದ್ರೆ ಫ್ರೆಂಡ್ ಅಂತಾನಾ ಅಂತ ನಾನು ಮಾತು ಮುಗಿಸೋ ಮೊದಲೇ. ನಿಲ್ಸು ನಿನ್ನ ಬಾಯಿಂದ ನನ್ನ ಫ್ರೆಂಡ್ ಅಂತ ಕರಿಬೇಡ,  ನಿನಗೆ ಅ ಫೀಲ್ ಬರುತ್ತೆ ಏನೋ ನನಗಂತೂ ಸತ್ರು ಬರೋದಿಲ್ಲ, ಇವಾಗ್ಲೂ ಅವತ್ತು ನೀನು ಹೇಳಿದ ಮಾತು ನೆನಸ್ಕೊಂಡ್ರೆ ಎಷ್ಟು ಕೋಪ ಬರುತ್ತೆ ಗೊತ್ತಾ ನಿನ್ನ ಮೇಲೆ, ಫ್ರೆಂಡ್ ಗೆ ಯಾರಾದ್ರೂ ಜಾಸ್ತಿ ಮಾತಾಡಿದ್ರೆ ಕಿ... ಛೇ ಅ ರೀತಿ ಹೇಳ್ತರ. ಅವತ್ತು ಹೆಲ್ಪ್ ಮಾಡಿದ್ರು ಒಂದು ಥ್ಯಾಂಕ್ಸ್ ಹೇಳೋಕು ಭಯ ಆಯ್ತು ನಿನ್ ಹೇಳಿದ ಮಾತು ನೆನಪಿಗೆ ಬಂದು, ನೋಡು ನಿನ್ ದುಡ್ಡು ವಾಪಸ್ಸು ಕಳಿಸಿದ್ರು ಪರ್ವಾಗಿಲ್ಲ ಬಟ್ ನನ್ನ ನೀನು ಫ್ರೆಂಡ್ ಅಂತ ಮಾತ್ರ ಅನ್ಕೋಬೇಡ ನನಗೆ ಇಷ್ಟ ಆಗಲ್ಲಾ ಅಂತ ಹೇಳಿದ್ಲು. ಸರಿ ಬಿಡಿ ಸಿಸ್ ಅಂತ ಮಾತು ಮುಗಿಸೋ ಮೊದಲೇ ಅಕಿರಾ ಜೋರಾಗಿ ನನ್ನ ಹೊಟ್ಟೆಗೆ ಗುದ್ದಿದ್ಲು. ನಾನು ಅಮ್ಮ ಅಂತ ಹೊಟ್ಟೆ ಇಡ್ಕೊಂಡೇ. ಅಕಿರಾ ಮಗನೆ ಅ ವರ್ಡ್ ನಾ ಕನಸಲ್ಲಿ ಕೂಡ ನೆನೆಸ್ಕೊಬೇಡ, ಇದು ವಾರ್ನಿಂಗ್ ಆದ್ರೂ ಅನ್ಕೋ ಇಲ್ಲಾ ಏನಾದ್ರು ಅನ್ಕೋ ಇನ್ನೊಂದು ಸರಿ ಏನಾದ್ರು ಅ ಯೋಚ್ನೆ ಬಂತೋ  ಅಲ್ಲೇ ಕೊಂದು ಬಿಡ್ತೀನಿ ಹುಷಾರು ಅಂತ ಹೇಳಿ ಮುಂದೆ ಹೋದ್ಲು.

ಶಿಲ್ಪಾ ಕಣ್ ಬಿಟ್ಟು ನೋಡ್ತಾ ನಿಂತಿದ್ದವಳು ಅವಳು ಹೋದಮೇಲೆ, ಲೋ ನಿನಗೆ ಬೇಕಾಗಿತ್ತಾ ಹೇಳ್ದೆ ಅಲ್ವಾ ಅವಳು ರಾಕ್ಷಸಿ ಅಂತ  ನೋಡು ಈಗ ಏನಾಯ್ತು ಅಂತ ಹೇಳಿದ್ಲು. ನಾನು ಅವಳ ಕಡೆ ನೋಡ್ತಾ ಮನಸಲ್ಲೇ ನಿನ್ ಇಷ್ಟು ಟ್ಯೂಬ್ ಲೈಟ್ ಅಂತ ನನಗೆ ಇವತ್ತೇ ಗೊತ್ತಾಗಿದ್ದು ಅಂತ ಅನ್ಕೊಂಡು ನಾಟಕೀಯ ವಾಗಿ  ಹ್ಮ್ ನಿನ್ ಹೇಳಿದ್ದೆ ಸರಿ  ನಡಿ ಹೋಗೋಣ ಅಂತ ಹೇಳಿ ಆಫೀಸ್ ಒಳಗೆ ಬಂದು ವರ್ಕ್ ಮಾಡೋಕೆ ಶುರು ಮಾಡಿದೆ. ವರ್ಕ್ ಮಾಡ್ತಾ ಇರೋ ಟೈಮ್ ಅಲ್ಲಿ ಶ್ವೇತಾ ಕಾಲ್ ಮಾಡಿದ್ಲು, ನಾನು ಕಾಲ್ ಪಿಕ್ ಮಾಡಿ ಕಿವಿ ಹತ್ತಿರ ಇಟ್ಕೊಂಡು ಅ  ಹೇಳಿ ಅಂತ ಹೇಳ್ದೆ. ಶ್ವೇತಾ ಏನೋ ಅಷ್ಟು ಮರ್ಯಾದೆ ಅಂತ ಕೇಳಿದ್ಲು. ಆಫೀಸ್ ಅಂತ ಹೇಳ್ದೆ. ಸರಿ ಅಮ್ಮ ಕಾಲ್ ಮಾಡಿದ್ರು ನಾಳೆ ಹರಿಣಿ ನಾ ಕರ್ಕೊಂಡು ಬರೋಕೆ ಒಳ್ಳೇ ದಿನ ಅಂತೇ , ಸೋ ನಾಳೆ  ಆಫೀಸ್ ಗೆ ರಜೆ ನಿನ್  ಬಂದು ಡ್ರೈವರ್ ಕೆಲಸ ಮಾಡು ಅಂತ ಹೇಳಿದ್ಲು.  ಡ್ರೈವರ್ ಕೆಲಸಾನ ಸರಿ ಅಂತ ಹೇಳಿ ಕಾಲ್ ಕಟ್ ಮಾಡಿದೆ. 

ಶಿಲ್ಪಾ ನನ್ನ ನೋಡಿ ಏನೋ ಡ್ರೈವರ್ ಕೆಲಸ ಅಂತ ಇದ್ದಿಯಾ ಅಂತ ಕೇಳಿದ್ಲು, ನಾನು ನಾಳೆ ಆಫೀಸ್ ಹಾಲಿಡೇ ಅಲ್ವಾ ಸೋ ಒಂದು ಡ್ರೈವಿಂಗ್ ಜಾಬ್ ಸಿಗ್ತು ಸೋ ಅದಕ್ಕೆ. ಅಂದ್ರೆ ನೀನು ಪಾರ್ಟ್ ಟೈಮ್ ಜಾಬ್ ಕೂಡ ಮಾಡ್ತಿಯಾ ಅಂತ ಕೇಳಿದ್ಲು. ಹ್ಮ್ ಮಾಡ್ತೀನಿ ತಪ್ಪೇನು ಅಂತ ಕೇಳ್ದೆ , ತಪ್ಪೇನು ಇಲ್ವೋ ಈ ತರ ಹಾಲಿಡೇ ಸಿಗೋದೇ ಅಪರೂಪ ಅದರಲ್ಲೂ ಪಾರ್ಟ್ ಟೈಮ್ ಜಾಬ್ ಮಾಡ್ತಾಇದ್ದೀಯ ಅಲ್ವಾ ಅದಕ್ಕೆ ಕೇಳ್ದೆ ಸರಿ ವರ್ಕ್ ಮಾಡು ಅಂತ ಹೇಳಿ  ಅವಳು ಅವಳ ವರ್ಕ್ ಕಡೆಗೆ ಗಮನ ಕೊಟ್ಲು. ನಾನು ನನ್ನ ಪಾಡಿಗೆ ವರ್ಕ್ ಮಾಡ್ತಾ ಕೂತೆ. ಸಂಜೆ ವರ್ಕ್ ಮುಗಿದ ಮೇಲೆ ಶಿಲ್ಪಾ ಗೆ ಬೈ ಹೇಳಿ ಆಫೀಸ್ ನಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ ಹೋದೆ. ಮನೆಗೆ ಹೋಗೋ ಅಷ್ಟರಲ್ಲಿ ಪುರೋಹಿತರು ಅಪ್ಪ ಅಮ್ಮ ಅಕ್ಕ ಕೂತು ಮಾತಾಡ್ತಾ ಇದ್ರು, ಶ್ವೇತಾ ನನ್ನ ನೋಡಿ ಟೈಮ್ ಸರಿಯಾಗಿ ಬಂದೆ ಕಣೋ ನಿನ್ ಪರ್ಸ್ ಕೊಡು ಅಂತ ನನ್ನ ತೆಗೆದು ಕೊಡೋದನ್ನು ಕಾಯದೆ ಬಂದು ಪ್ಯಾಂಟ್ ಪಾಕೆಟ್ ಅಲ್ಲಿ ಇದ್ದಾ ಪರ್ಸ್ ನಾ ತೆಗೆದುಕೊಂಡು ಅದರಲ್ಲಿ ಇದ್ದಾ ದುಡ್ಡನ್ನ ತೆಗೆದು ಅಮ್ಮನ ಕೈಗೆ ಕೊಡೋಕೆ ಹೋದ್ಲು. ಶಿಲ್ಪಾ ನೆನಪಿಗೆ ಬಂದು, ಶ್ವೇತಾ ಅ ದುಡ್ಡು ಬೇಡ  ನಾನ್ ನಿನಗೆ ಕೊಡ್ತೀನಿ ಕೊಡು ಅಂತ ಹೇಳಿ ಅ ದುಡ್ಡನ್ನ ವಾಪಸ್ಸು ಪರ್ಸ್ ಅಲ್ಲಿ ಇಟ್ಕೊಂಡು ಬ್ಯಾಗ್ ಅಲ್ಲಿ ಇದ್ದಾ ದುಡ್ಡನ್ನ ತೆಗೆದು ಅವಳ ಕೈಗೆ ಕೊಟ್ಟೆ. ಶ್ವೇತಾ ದುಡ್ನ ತೆಗೆದುಕೊಂಡು ಅಮ್ಮನ ಕೈಗೆ ಕೊಟ್ರು ಅಮ್ಮ ಅದನ್ನ ಪದ್ಧತಿ ಪ್ರಕಾರವಾಗಿ ಪುರೋಹಿತರ ಕೈಗೆ ಕೊಟ್ಟು ಅವರನ್ನ ಕಳಿಸಿ ಕೊಟ್ಟರು. ಆಮೇಲೆ ಅಮ್ಮ ನನ್ನ ನೋಡಿ ಲೋ ಹೋಗಿ ಫ್ರೆಷ್ ಅಪ್ ಆಗಿ ಬಾ ನಾಳೆ  ಹರಿಣಿ ನಾ ಕರ್ಕೊಂಡು ಬರೋವಾಗ ಕೆಲವೊಂದು ಶಾಸ್ತ್ರ ಸಂಪ್ರದಾಯ ಇದೆ ಅದಕ್ಕೆಲ್ಲ ಕೆಲವು ವಸ್ತುಗಳು ಬೇಕು, ಲಿಸ್ಟ್ ಮಾಡಿ ಇಟ್ಟಿದ್ದೀನಿ  ಹೋಗಿ ತಗೊಂಡು ಬಾ ಅಂತ ಹೇಳಿದ್ರು ನಾನು ಸರಿ ಅಮ್ಮ ಅಂತ ಹೇಳಿ  ರೂಮ್ ಗೆ ಬಂದೆ, ಬಂದು ಫ್ರೆಶ್ ಅಪ್ ಆಗಿ ರೆಡಿ ಆಗಿ ಹಾಲ್ ಗೆ ಹೋದೆ. ಅಮ್ಮ ಕಾಫಿ ಕೊಟ್ರು ಕಾಫಿ ಕುಡಿತಾ  ಇದ್ದೆ. ಶ್ವೇತಾ ಬಂದು ಲೋ ನಾನು ಬರ್ತೀನಿ ನಿನ್ ಜೊತೆ ಅಂತ ಅಂದ್ಲು. ಅಮ್ಮ ಏನಕ್ಕೆ ನಿನ್ ಅವನ ಜೊತೆ ಏನು ಬೇಡ ಅವನೇ ಹೋಗಿ ತಗೋ ಬರ್ತಾನೇ ಅಂತ ಹೇಳಿದ್ರು. ಶ್ವೇತಾ ಅಮ್ಮ ಅವನಿಗೆ ವ್ಯಾಪಾರ ಮಾಡೋಕೆ ಬರೋದಿಲ್ಲ ಅಮ್ಮ ಯಾಮಾರಿಸ್ತಾರೆ ಅಂತ ಹೇಳಿದ್ಲು. ಅಮ್ಮ ನಗ್ತಾ ಅವನಿಗೆ.  ಯಾಮಾರಿಸೋದು, ಇವನು ಅವನಿಗೆ ಯಾಮಾರಿಸದೆ ಇದ್ರೆ ಸಾಕು ನಿನ್ ಏನು ಹೋಗೋದು ಬೇಡ, ಅವನೇ ಹೋಗ್ತಾನೆ ಅಂತ ಹೇಳಿ ಅಡುಗೆ ಮನೆಗೆ ಹೋದ್ರು. ನಾನು ಕಾಫಿ ಕುಡಿದು ಫ್ರೆಂಡ್ಸ್ ಕಾಲ್ ಮಾಡಿ ಅಮ್ಮ ಕೊಟ್ಟ ಲಿಸ್ಟ್ ನಾ ತೆಗೆದುಕೊಂಡು  ಬೈಕ್ ತಗೊಂಡು ಹೊರಗೆ ಹೋದೆ. ಅಮ್ಮ ಕೊಟ್ಟ ಲಿಸ್ಟ್ ನಾ ಶಾಪಿಂಗ್ ಮಾಡಿ ಬಾರೋ ಅಷ್ಟೋತ್ತಿಗೆ ರಾತ್ರಿ 8 ಆಗಿತ್ತು.  ಲಗೇಜ್ ಜಾಸ್ತಿ ಇದ್ರಿಂದ ಫ್ರೆಂಡ್ಸ್ ಕೂಡ ಬೈಕ್ ಅಲ್ಲಿ ಮನೆಗೆ ಬಂದ್ರು. ಮನೇಲಿ ಅಮ್ಮನಿಗೆ ಕೊಟ್ಟು ಎಲ್ಲಾ ಸರಿಯಾಗಿ ಇದೆಯಾ ಅಂತ ಚೆಕ್ ಮಾಡೋಕೆ ಹೇಳ್ದೆ ಅಮ್ಮ ಅಕ್ಕ ಇಬ್ರು 20 ನಿಮಿಷ ಕೂತು ಚೆಕ್ ಮಾಡಿ ಸರಿಯಾಗಿ ಇದೆ ಕಣೋ ಅಂತ ಹೇಳಿದ್ರು. ಸರಿ ಅಮ್ಮ ಫ್ರೆಂಡ್ಸ್ ನಾ ಬಿಟ್ಟು ಬರ್ತೀನಿ ಅಂತ  ಹೇಳಿ  ಫ್ರೆಂಡ್ಸ್ ಜೊತೆಗೆ ಹೊರಗೆ ಹೋದೆ, 2 ಬಿಯರ್ ನಾ ಫಿನಿಷ್ ಮಾಡಿ 10 ಗೆ ಮನೆಗೆ ಬರ್ತಾ ಇದ್ದೆ. ಮೊಬೈಲ್ ರಿಂಗ್ ಆಯ್ತು ಡ್ರೈವ್ ಮಾಡ್ತಾನೆ ಮೊಬೈಲ್ ನಾ ತೆಗೆದು ನೋಡಿದೆ, ಶಿಲ್ಪಾ ಕಾಲ್, ಪಿಕ್ ಮಾಡಿ ಹೇಳೇ ಅಂತ ಹೇಳ್ದೆ. ಶಿಲ್ಪಾ ಏನ್ ಮಾಡ್ತಾ ಇದ್ದಿಯಾ ಅಂತ ಕೇಳಿದ್ಲು. ನಾನ ಡ್ರೈವ್ ಮಾಡ್ತಾ ಇದ್ದೀನಿ ಯಾಕೆ  ಅಂತ ಕೇಳಿದೆ. Enu ಇಲ್ವೋ ತಿಂದ ಅಂತ ಕೇಳೋಕೆ ಕಾಲ್ ಮಾಡಿದೆ ಅಂತ ಹೇಳಿದ್ಲು. ಇನ್ನು ಇಲ್ಲಾ ಕಣೆ  ಡ್ರೈವ್ ಮಾಡ್ತಾ ಇದ್ದೀನಿ ಅಲ್ವಾ  ಆಮೇಲೆ ಮಾಡ್ತೀನಿ ನಿನ್ ಊಟ ಮಾಡಿದ ಅಂತ ಕೇಳ್ದೆ. ಹ್ಮ್ ಮಾಡಿದೆ ಕಣೋ ಅಂತ ಹೇಳಿದ್ಲು. ನಾನು ಸರಿ ಕಣೆ ಬೈ ಹುಷಾರು ಡ್ರೈವ್ ಮಾಡ್ತಾ ಇದ್ದೀನಿ ನಾಳೆ ಕಾಲ್ ಮಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಮನೆ ಕಡೆಗೆ ಹೊರಟೆ..

ಶಿಲ್ಪಾ ಇವಾಗಿಂದನೇ ಡ್ರೈವಿಂಗ್ ಮಾಡ್ತಾ ಇದ್ದಾನೆ ಕಣೆ ಪಾಪ, ಇನ್ನು ಊಟ ಕೂಡ ಮಾಡಿಲ್ಲ ಅಂತ ಹೇಳ್ದ ಅಂತ ಅಕಿರಾಗೆ ಹೇಳಿದ್ಲು. ಅಕಿರಾ ಏನು ಹೇಳದೆ ಮೊಬೈಲ್ ಕಡೆಗೆ ಗಮನ ಕೊಟ್ಲು.

ಮನೆಗೆ ಬಂದು ಊಟ ಮಾಡಿ ಹೋಗಿ ರೂಮ್ ಅಲ್ಲಿ ಮೊಬೈಲ್ ನಾ ಸೈಲೆಂಟ್ ಗೆ ಹಾಕಿ ಮಲಗಿಕೊಂಡೆ.


ಬೆಳಿಗ್ಗೆ ಅಮ್ಮ ಬಂದು ಲೋ ಮಹಿ ಎದ್ದೇಳೋ ಎದ್ದು ಬೇಗ ರೆಡಿ ಆಗು ಅಂತ ನನ್ನ ಎಬ್ಬಿಸಿ ಹೊರಗೆ ಹೋದ್ರು ನಾನು ಎದ್ದು ಫ್ರೆಷ್ ಅಪ್ ಆಗಿ  ರೆಡಿ ಆಗಿ ಹಾಲ್ ಗೆ ಬಂದೆ ಹಾಲ್ ಅಲ್ಲಿ ಅಕ್ಕ ಪಕ್ಕಾ ಮನೆ ಯ ಲೇಡಿಸ್ 5  ಜನ ಕೂತಿದ್ರು. ಅಮ್ಮನ ಕೇಳ್ದೆ ಯಾಕ್ ಅಂತ. ಅಮ್ಮ ಲೋ ಅದು ಸಂಪ್ರದಾಯ ಅವರು ನಮ್ ಜೊತೆಗೆ ಬರ್ತಾರೆ, ನೀನು ಅಪ್ಪನ ಕಾರ್ ತಗೋ ಅಪ್ಪ ಶ್ವೇತಾ ಕಾರ್ ತಗೋತಾರೆ ಅಂತ ಹೇಳಿದ್ರು. ನಾನು ಏನು ಬೇಡ ಫ್ರೆಂಡ್ ನಾ ಬರೋಕೆ ಹೇಳ್ತಿನಿ ಅಂತ ಹೇಳಿ ಫ್ರೆಂಡ್ ಗೆ ಕಾಲ್ ಮಾಡಿದೆ, ಅವನು ತಿಂಡಿ ಮಾಡಿ ಬರ್ತೀನಿ ಅಂತ ಹೇಳಿದ. ನಾನು ತಿಂಡಿ ಮಾಡ್ಕೊಂಡು ಹೊರಗೆ ಹೋಗಿ ಅಪ್ಪನ ಕಾರ್ ನಾ ರಿವರ್ಸ್ ಹಾಕಿ ಕಾರ್ ಡಿಕ್ಕಿ ಓಪನ್ ಮಾಡಿ ಅಮ್ಮ ಹೇಳಿದ ಎಲ್ಲಾ ವಸ್ತುಗಳನ್ನ ಕಾರ್ ಅಲ್ಲಿ ಇಟ್ಟೆ. ಫ್ರೆಂಡ್ ಬಂದ ಅವನಿಗೆ ಅಪ್ಪ ನಾ ಕಾರ್ ಕೀ ಕೊಟ್ಟೆ ಅವನು ಲೋ ನಿಮ್ಮಪ್ಪ ಕಾರ್ ಅಂದ್ರೆ ನಿಮ್ ಅಪ್ಪನು ಬರ್ತಾನೇ ನನಗೆ ಭಯ ನಾನು ಮಿಕ್ಕಿರೋ  ಲೇಡಿಸ್ ನಾ ಕರಕೊಂಡು ಶ್ವೇತಾ ಅಕ್ಕ ನಾ ಕಾರ್ ಅಲ್ಲಿ ಬರ್ತೀನಿ ನೀನು ನಿಮ್ ವಜ್ರಮುನಿ ನಾ ಕರ್ಕೊಂಡು ನಡಿ ಮುಂದೆ ಅಂತ ಹೇಳಿ ಎಸ್ಕೇಪ್ ಅದ.  ಅಮ್ಮ ಬಂದು ಲೋ ಟೈಮ್ ಆಗುತ್ತೆ ರಾಹುಕಾಲ ಬಾರೋ ಅಷ್ಟರಲ್ಲಿ ಅಲ್ಲಿ ಇರಬೇಕು  ಅಂತ ಹೇಳಿದ್ರು.  15 ನಿಮಿಷದಲ್ಲಿ ಎಲ್ಲರೂ ಕಾರ್ ಅಲ್ಲಿ ಕುತ್ಕೊಂಡ್ರು, ಕಾರ್ ನ ಸ್ಟಾರ್ಟ್ ಮಾಡಿ  ಅಲ್ಲಿಂದ ಹೊರಟ್ವಿ. ಹರಣಿ ಅಕ್ಕ ಮನೆಗೆ ಹೋಗೋ ಅಷ್ಟೋತ್ತಿಗೆ ಅವರ ಮನೆಯಲ್ಲಿ ನಮಗೋಸ್ಕರ ಕಾಯ್ತಾ ಇದ್ರು. ಅವರು ನಮ್ಮನ್ನ ತುಂಬಾ ಆತ್ಮೀಯ ವಾಗಿ ಬರಮಾಡಿಕೊಂಡ್ರು, ಶ್ವೇತಾ ಹರಿಣಿ ಇಬ್ರು ಸ್ವಲ್ಪ ಎಮೋಷನಲ್ ಆದ್ರೂ, ಆಮೇಲೆ ಅಮ್ಮ ನಾ ಹತ್ತಿರ ಆಶೀರ್ವಾದ ತಗೋಳೋಕೆ ಹೋದ್ರು ಅಮ್ಮ ಅವರನ್ನ ತಡೆದು ಇಂತ ಸಮಯದಲ್ಲಿ ಅಂತವೇನು ಬೇಡ, ಅಂತ ಹೇಳಿ ಪಕ್ಕದಲ್ಲಿ ಕೂರಿಸಿ ಕೊಂಡ್ರು.. ಹರಿಣಿ ಅಕ್ಕ ನನ್ನ ನೋಡಿ  ಹೇಗಿದ್ದಿಯೋ ಮಹಿ ಅಂತ ಕೇಳಿದ್ರು. ನಾನು ಹರಿಣಿ ಅಕ್ಕ ನಾ ನೋಡ್ತಾ ಗೊತ್ತಿದ್ದೂ ಗೊತ್ತಿದ್ದೂ ಒಬ್ಬ ವ್ಯಕ್ತಿ ನಾ ಇಷ್ಟೊಂದು ಹರ್ಟ್ ಮಾಡಿ ಸಂತೋಷ ಪಡಬಾರ್ದು ಅಂತ ಹೇಳಿ ಎದ್ದು ಹೊರಗೆ ಬಂದೆ. ಹರಿಣಿ ಅಕ್ಕ ನಗ್ತಾ ಶ್ವೇತಾ ಕಡೆಗೆ ನೋಡಿ ಪಾಪ ಕಣೆ ಅವನು  ಸ್ವಲ್ಪ ಕನಿಕರ ಆದ್ರೂ ತೋರ್ಸು ನಿನ್ ತಮ್ಮ ಅವನು ಅಂತ ಹೇಳಿದ್ಲು. ಶ್ವೇತಾ  ನಗ್ತಾ  ಒಬ್ನೇ ತಮ್ಮ ಅಲ್ವಾ ಅದಕ್ಕೆ ಕನಿಕರ ಬರ್ತಾ ಇಲ್ಲಾ  ಅಂತ ಹೇಳಿ ಅವಳ ಜೊತೆಗೆ ಶ್ವೇತಾ ಕೂಡ ನಕ್ಕಿದ್ಲು.

ಶಾಸ್ತ್ರ ಸಂಪ್ರದಾಯ ದ ಹಾಗೇ ಎಲ್ಲಾ ಕಾರ್ಯಕ್ರಮ ನಾ ಮುಗಿಸಿಕೊಂಡು ಹರಿಣಿ ಅಕ್ಕನ ಗಂಡನ ಫ್ಯಾಮಿಲಿ ಗೆ ಬೈ ಹೇಳಿ ಕಾರ್ ಅಲ್ಲಿ ಹರಿಣಿ ಅಕ್ಕ ನಾ ಕರ್ಕೊಂಡು ನಮ್ ಮನೆ ಕಡೆಗೆ ಹೊರಟ್ವಿ, ಬರೋವಾಗ ಸ್ವಲ್ಪ ನಿಧಾನಕ್ಕೆ ಬಂದೆ, ಮನೆಗೆ ಬಾರೋ ಅಷ್ಟೋತ್ತಿಗೆ ಸಂಜೆ ಆಗಿತ್ತು. ಅಮ್ಮ ಅಕ್ಕ ನಾ ಮನೆ ಒಳಗೆ ಬರಮಾಡಿಕೊಂಡ್ರು. ಶ್ವೇತಾ ಅಕ್ಕನ ರೂಮ್ ಗ್ರೌಂಡ್ ಫ್ಲೋರ್ ಅಲ್ಲೇ ಇರೋದ್ರಿಂದ ಹರಿಣಿ ಅಕ್ಕ ಶ್ವೇತಾ ರೂಮ್ ಗೆ ಶಿಫ್ಟ್ ಆದ್ಲು. ನಾನು ಅಡುಗೆ ಮನೆ ಅಲ್ಲಿ ಇದ್ದಾ ಅಮ್ಮ ನಾ ಹತ್ತಿರ ಹೋಗಿ, ಅಮ್ಮ ಇನ್ಮೇಲೆ ಹರಿಣಿ ಅಕ್ಕ ಇರೋವರೆಗೂ ಏನ್ ಬೇಕೋ ಕೇಳಿ ಮಾಡಿಕೊಡು ಯಾವುದೇ ಕಾರಣಕ್ಕೂ ಹರಿಣಿ ಅಕ್ಕನಿಗೆ ಇದು ಫ್ರೆಂಡ್ ಮನೆ ಅಂತ ಅನ್ನಿಸ ಬಾರ್ದು ಅವರ ಮನೆ ಅಂತ ಅನ್ನಿಸ ಬೇಕು. ಅಷ್ಟು ಚೆನ್ನಾಗಿ ನೋಡ್ಕೋ, ನಿನಗೆ ಕಷ್ಟ ಆಗುತ್ತೆ ಅಂದ್ರೆ ಹೇಳು ಅಕ್ಕನಿಗೆ ವರ್ಕ್ ಫ್ರಮ್ ಹೋಮ್ ಮಾಡೋಕೆ ಹೇಳ್ತಿನಿ ಅಂತ ಹೇಳ್ದೆ.  ಅಮ್ಮ ನಗ್ತಾ ಆಯ್ತು ಹೋಗೋ ದೊಡ್ಡದಾಗಿ ಹೇಳೋಕೆ ಬಂದ.  ಅಂತ ಬೈದು ಕಳಿಸಿದ್ರು.  ನಾನು ಶ್ವೇತಾ ರೂಮ್ ಡೋರ್ ಬಡಿದೇ, ಶ್ವೇತಾ ಲೋ ಓಪನ್ ಇದೆ ಒಳಗೆ ಬಾ ಅಂತ ಕರೆದ್ಲು. ನಾನು ಡೋರ್ ಓಪನ್ ಮಾಡಿಕೊಂಡು ಒಳಗೆ ಹೋದೆ, ಹರಿಣಿ ಅಕ್ಕ ಬೆಡ್ ಮೇಲೆ ಕೂತು ಶ್ವೇತಾ ಜೊತೆಗೆ ಮಾತಾಡ್ತಾ ಇದ್ರು. ನನ್ನ ನೋಡಿ ಶ್ವೇತಾ ಹೇಳೋ ಏನ್ ಬಂದಿದ್ದು ಅಂತ ಕೇಳಿದ್ಲು. ನಾನು ಹರಿಣಿ ಅಕ್ಕನ ಮೊಬೈಲ್ ತೆಗೆದುಕೊಂಡು ನನ್ನ ನಂಬರ್ ಸೇವ್ ಮಾಡಿ ಇದು ನನ್ನ ನಂಬರ್ ಅಕ್ಕ ನಿನಗೆ ಏನ್ ಬೇಕಿದ್ರೂ ಕೇಳು ತಂದು ಕೊಡ್ತೀನಿ ಅಂತ ಹೇಳ್ದೆ. ಶ್ವೇತಾ ಇವಾಗ ಅವಳಿಗೆ ಜೂಸ್ ಬೇಕಂತೆ ತಂದು ಕೊಡು ಅಂತ ಹೇಳಿದ್ಲು. ನಾನು ರೂಮ್ ಡೋರ್ ತನಕ ಹೋಗಿ, ಶ್ವೇತಾ ನಾ ನೋಡಿ ಮನೆ ಕೆಲಸದವಳು ನಿನ್ ಇರೋದು ಏನಕ್ಕೆ ಇದಕ್ಕೇನಾ ನಿನಗೆ ಸಂಬಳ ಕೊಟ್ಟು ಇಟ್ಕೊಂಡು ಇರೋದು, ಅಕ್ಕನಿಗೆ ಏನ್ ಬೇಕೋ ಹತ್ತಿರ ಇದ್ದು ನೋಡ್ಕೋ ಅಂತ ಹೇಳ್ದೆ. ಶ್ವೇತಾ ಕೋಪ ಮಾಡ್ಕೊಂಡು ಏನೋ ಬೊಗಳಿದೆ ನಾನ್ ಕೆಲಸದವಳ ಅಂತ ಎದ್ದು ಹೊಡಿಯೋಕೆ ಬಂದ್ಲು. ನಾನು ಉಸೆನ್ ಬೋಲ್ಟ್ ಗಿಂತ ಸ್ಪೀಡ್ ಆಗಿ ಮನೆಯಿಂದ ಹೊರಗೆ ಓಡಿದೆ. ಹರಿಣಿ ಅಕ್ಕ ನಾನ್ ಓಡಿದ ಸ್ಪೀಡ್ ನೋಡಿ ಜೋರಾಗಿ ನಗ್ತಾ, ಏನೇ ಇವನು ಇಷ್ಟು ಭಯ ಬೀಳ್ತಾನೆ ನಿನ್ನ ನೋಡಿದ್ರೆ ಅಂತ ಕೇಳ್ತಾಳೆ. ಶ್ವೇತಾ ಗೊತ್ತಿರೋದೇ ಅಲ್ವಾ  ಅವನ ಬಗ್ಗೆ  ಬಾ ಅಂತ ಹೇಳಿ ರೂಮ್ ಒಳಗೆ ಕರ್ಕೊಂಡು ಹೋಗ್ತಾಳೆ.


ನಾನು ಓಡಿ ಮನೆ ರೋಡ್ ಗೆ ಬಂದೆ, ಅಷ್ಟ್ರಲ್ಲಿ ರೋಡ್ ಅಲ್ಲಿ ಒಬ್ಬ ಬೈಕ್ ಅಲ್ಲಿ ಬರ್ತಾ ಇದ್ದಾ, ಅವನ ಬೈಕ್ ಹತ್ತಿ ಅಲ್ಲಿಂದ ಹೊರಟು ಹೋದೆ...


****************************************


P. S.