ನಾನು ಸೀತಾ ಗೆ ಅಣ್ಣ ಅಂತ ಗೊತ್ತಾಗಿದ್ದೇ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು ಸ್ವಲ್ಪ ಹೊತ್ತು ಅಪ್ಪಿಕೊಂಡು ಅಳ್ತಾ ನೇ ಇದ್ದಳು . ನಾನು ಅವಳಿಗೆ ಸಮಾಧಾನ ಮಾಡಿ ಕರ್ಕೊಂಡು ಹೋಗಿ ಸೋಫಾ ಮೇಲೆ ಕೂರಿಸಿ ಕುಡಿಯೋಕೆ ನೀರನ್ನ ಕೊಟ್ಟೆ. ಅವಳು ನೀರನ್ನ ಗಟ ಗಟ ಅಂತ ಕುಡಿದು ನನ್ನ ಕೈ ಇಡ್ಕೊಂಡ್ ಅಣ್ಣ ಬಾ ಈ ವಿಷಯ ನಾ ಮನೇಲಿ ಹೋಗಿ ಅಪ್ಪ ಅಮ್ಮ ತಾತನಿಗೆ ಹೇಳೋಣ ಅಂತ ಎದ್ದು ನಿಂತಳು. ನಾನು ಅವಳ ಕೈ ಇಡಿದು ಈಗಲ್ಲ ಕುತ್ಕೋ ಅಂತ ಹೇಳ್ದೆ. ಸೀತಾ ಅಣ್ಣ ಏನ್ ಹೀಗೆ ಹೇಳ್ತಾ ಇದ್ದಿಯಾ ನೀನು ಅವರ ಮಗ ಅಂತ ಗೊತ್ತಾದ್ರೆ ಎಷ್ಟು ಖುಷಿ ಪಡ್ತಾರೆ ಅಂತ ನಿನಗೆ ಗೊತ್ತಿಲ್ಲ ಅಣ್ಣ ಬಾ ಅಂತ ಕೇಳಿ ಕೊಂಡಳು. ನಾನು ಸೀತಾ ಮಾತಿಗೆ ಅವರು ಎಷ್ಟು ಖುಷಿ ಪಡ್ತಾರೋ ಗೊತ್ತಿಲ್ಲ ಅದ್ರೆ, ನಿಮ್ ಮಾವ, ನಿಮ್ ಚಿಕ್ಕಪ್ಪ ತುಂಬಾ ಖುಷಿ ಪಡ್ತಾರೆ. ಅವರಿಗೆ ಒಬ್ಬ ಮಗ ಇದ್ದಾನೆ ನಿನಗೆ ಒಬ್ಬ ಅಣ್ಣ ಇದ್ದಾನೆ ಅಂತ ಗೊತ್ತಾದ್ರೆ. ಇಷ್ಟು ವರ್ಷ ಕಷ್ಟ ಪಟ್ಟು ಕಟ್ಟಿದ ಕಂಪನಿ. ನಾವು ಪಟ್ಟ ಶ್ರಮ ಎಲ್ಲಾ ಹೆಸರಿಲ್ಲದೆ ಹೋಗಿ ಬಿಡುತ್ತೆ ಅಂತ ಹೇಳ್ದೆ. ಸೀತಾ ನಾನ್ ಹೇಳೋದನ್ನ ಕೇಳಿ ಅಣ್ಣ ಏನ್ ಹೇಳ್ತಾ ಇದ್ದಿಯಾ ಅಂತ ಕೇಳಿದ್ಲು. ನಿಜ ಸೀತಾ. ಅಂತ ಹೇಳಿ ನನ್ನ ಪರ್ಸ್ ಅಲ್ಲಿ ಇದ್ದಾ ಅಮ್ಮ ನಾ ಫೋಟೋ ನಾ ಅವಳಿಗೆ ತೋರಿಸಿದೆ. ಈ ಫೋಟೋ ನಾ ಎಲ್ಲಾದ್ರೂ ನೋಡಿದ್ದೀಯಾ ಅಂತ ಕೇಳಿದೆ. ಸೀತಾ ಫೋಟೋ ನೋಡಿ ಎರಡು ನಿಮಿಷ ಯೋಚ್ನೆ ಮಾಡಿ ಅ ನೋಡಿದ್ದೀನಿ. ಇದೆ ಫೋಟೋ ಅಮ್ಮನ ಹತ್ತಿರ ಇತ್ತು. ಯಾರು ಅಂತ ಕೇಳಿದಕ್ಕೆ ಕಾಲೇಜ್ ಫ್ರೆಂಡ್ ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ರು ಅಂತ ಹೇಳಿದ್ಲು.
ಹೌದು ಸೀತಾ ನಮ್ಮಮ್ಮ ನಿಮ್ಮಮ್ಮ ಇಬ್ರು ಕಾಲೇಜ್ ಯಿಂದ ಬೆಸ್ಟ್ ಫ್ರೆಂಡ್ಸ್ ಬಟ್ ಮದುವೆ ಆದಮೇಲೆ ದೂರ ಆದ್ರು. ಮೊದಲು ನಮ್ಮಮ್ಮನಿಗೆ ಮದುವೆ ಆದಮೇಲೆ 2 ವರ್ಷ ಕ್ಕೆ ನಿಮ್ಮಮ್ಮನಿಗೆ ಮದುವೆ ಆಗಿದ್ದು. ಅಕ್ಕ ಹುಟ್ಟಿದ ಮೇಲೆ ಅಮ್ಮ ಅಪ್ಪ ಬೆಂಗಳೂರು ಬಂದ್ರು. ನಮ್ಮಮ್ಮ ಎರಡೇ ಸರಿ ತಾಯಿ ಆದಾಗ ಡೆಲಿವೆರಿ ಗೆ ಅಂತ ಹಾಸ್ಪಿಟಲ್ ಗೆ ಸೇರಿಸಿದ್ರು ಅದೇ ಹಾಸ್ಪಿಟಲ್ ಅಲ್ಲಿ ನಿಮ್ ಅಮ್ಮನಾ ಕೂಡ ಡೆಲಿವೆರಿ ಗೆ ಸೇರಿಸಿದ್ರು. ಇಬ್ಬರಿಗೂ ಒಂದೇ ಟೈಮ್ ಅಲ್ಲಿ ಡೆಲಿವೆರಿ ಪೈನ್ಸ್ ಬಂದ ಕಾರಣ ಒಂದೇ ವಾರ್ಡ್ ಒಳಗೆ ಕರ್ಕೊಂಡು ಹೋದರು. ಅಮ್ಮನ ಡೆಲಿವೆರಿ ಟೈಮ್ ಅಲ್ಲಿ ಮಗು ಹೊಟ್ಟೆಲೆ ಸತ್ತು ಹೋಗಿದೆ ಅಂತ ಗೊತ್ತಾಯಿತು. ಅದೇ ಟೈಮ್ ಅಲ್ಲಿ ನಿಮ್ ಅಮ್ಮನಿಗೆ ಒಂದು ಗಂಡು ಮಗು ಆಯಿತು. ಅದೇ ಸಮಯಕ್ಕೆ ಒಂದು 4 ಆಕ್ಸಿಡೆಂಟ್ ಕೇಸ್ ಬಂತು ಡಾಕ್ಟರ್ ನರ್ಸ್ ಗೆ ಹೇಳಿ ಆಕ್ಸಿಡೆಂಟ್ ಕೇಸ್ ನೋಡೋಕೆ ಹೊರಟು ಹೋದ್ರು ಹೋಗ್ತಾ ನಮ್ ಅಜ್ಜಿಗೆ ನರ್ಸ್ ಗೆ ಹೆಲ್ಪ್ ಮಾಡೋಕೆ ಹೇಳಿ ಒಳಗೆ ಕಳಿಸಿದಿದ್ರು. ಅಜ್ಜಿ ನಾ ನೋಡಿ ನರ್ಸ್ ಅಜ್ಜಿಗೆ ನೋಡ್ಕೊಳ್ತಾ ಇರಿ 2 ನಿಮಿಷ ಬಂದೆ ಅಂತ ಹೇಳಿ ಡ್ರೆಸ್ಸಿಂಗ್ ರೂಮ್ ಗೆ ಹೋದ್ರು. ಅಜ್ಜಿ ಅಮ್ಮನ ಪಕ್ಕದಲ್ಲಿ ಇದ್ದಾ ಮಗು ನಾ ನೋಡಿ ಅನುಮಾನ ಬಂದು ಚೆಕ್ ಮಾಡಿದ್ರು ಮಗು ಉಸಿರಾಡ್ತಾ ಇಲ್ಲಾ ಅಂತ ಗೊತ್ತಾಗಿ ಭಯ ಬಿದ್ದು ಡಾಕ್ಟರ್ ನಾ ಕರಿಯೋಣ ಅಂತ ಹೋದ್ರು. ಅಷ್ಟರಲ್ಲಿ ಅಜ್ಜಿ ನಾ ನೋಡಿ ನಿಮ್ಮಮ್ಮ ಅಮ್ಮ ಅಂತ ಕರೆದ್ರು. ಅಜ್ಜಿ ನಿಮ್ಮಮ್ಮನ ನಾ ನೋಡಿ ನೀನು ಇಲ್ಲೇ ಇದ್ದಿಯಾ ಮಗಳೇ ಅಲ್ಲಿ ನಿನ್ನ ಸ್ನೇಹಿತೆ ಮಗು ಉಸಿರಾಡ್ತಾನೆ ಇಲ್ಲಾ ಅಂತ ಕಣ್ಣೀರು ಹಾಕೋಕೆ ಶುರು ಮಾಡಿದ್ರು. ವಿಷಯ ಕೇಳಿ ನಿಮ್ಮಮ್ಮನಿಗೆ ಮನಸ್ಸಿಗೆ ತುಂಬಾ ನೋವಾಯ್ತು. ನಿಮ್ಮಮ್ಮ ನೋವನ್ನ ತಡ್ಕೊಂಡು ಅಮ್ಮ ನನಗೆ ಒಂದು ಸಹಾಯ ಮಾಡಿ. ನನ್ನ ಮಗು ನಾ ನೋಡಿದ್ರೆ ಅ ರಾಕ್ಷಸರು ಕೊಂದೆ ಬಿಡ್ತಾರೆ. ದಯವಿಟ್ಟು ನನ್ನ ಮಗು ನಾ ಕಾಪಾಡಿ ಅಂತ ಬೇಡಿಕೊಂಡರು. ಅಜ್ಜಿಗೆ ನಿಮ್ಮಮ್ಮ ಹೇಳೋದು ಒಂದು ಅರ್ಥ ಆಗಲಿಲ್ಲ ಅದ್ರೆ ಮಗುಗೆ ಪ್ರಾಣಪಾಯ ಇದೆ ಅಂತ ಮಾತ್ರ ಅರ್ಥ ಆಯ್ತು. ಅಜ್ಜಿಗೆ ಏನ್ ಮಾಡಬೇಕು ಅಂತ ಅರ್ಥ ಆಗಲಿಲ್ಲ. ನಿಮ್ಮಮ್ಮ ಅಮ್ಮ ನರ್ಸ್ ಬಂದು ಬಿಡ್ತಾರೆ ಏನಾದ್ರು ಮಾಡಿ ನನ್ನ ಮಗು ನಾ ಕಾಪಾಡಿ ಅಂತ ಬೇಡ್ಕೊಂಡ್ರು. ಅಜ್ಜಿ ಎರಡು ಮಕ್ಕಳನ್ನ ನೋಡಿದ್ರು. ಇಬ್ಬರು ಗಂಡು ಮಕ್ಕಳೇ. ಅಜ್ಜಿಗೆ ಗೊತ್ತು ಅವಳ ಮಗಳಿಗೆ ಹುಟ್ಟಿದ ಮಗು ಸತ್ತು ಹೋಗಿದೆ ಅಂತ. ಅದಕ್ಕೆ ಮನಸನ್ನ ಸಾಯಿಸಿಕೊಂಡು ಬೇರೆ ದಾರಿ ಇಲ್ಲದೆ ಮಕ್ಕಳನ್ನ ಅದಲು ಬದಲು ಮಾಡಿ. ನಿಮ್ಮಮ್ಮನಿಗೆ ನಾನ್ ಇದ್ದೀನಿ ಅನ್ನೋ ಧೈರ್ಯ ಕೊಟ್ಟು. ಹೋಗಿ ಅಮ್ಮನ ಪಕ್ಕ ನಿಂತು ಕೊಂಡಳು.
ನರ್ಸ್ ಬಂದಾಗ ನಿಮ್ಮಮ್ಮ ನರ್ಸ್ ಹತ್ತಿರ ನರ್ಸ್ ನನ್ನ ಮಗು ಎಲ್ಲಿ ಅಂತ ಕೇಳಿದ್ಲು. ನರ್ಸ್ ಮಗು ನಾ ಎತ್ಕೊಂಡು ಕೊಡೋಕೆ ಹೋದಾಗ ಅನುಮಾನ ಬಂದು ಚೆಕ್ ಮಾಡಿ ಭಯ ಬಿದ್ದು ಮೇಡಂ ನಿಮ್ ಮಗು ಉಸಿರಾಡ್ತಾ ಇಲ್ಲಾ ಅಂತ ಹೇಳಿ ಮಗುನ ತಾಯಿ ಕೈಗೆ ಕೊಟ್ಟು ಡಾಕ್ಟರ್ ನಾ ಕರ್ಕೊಂಡು ಬರೋಕೆ ಹೋದ್ಲು. ಒಂದು ಕಡೆ ಹೆತ್ತ ಮಗು ದೂರಾದ ನೋವು ಇನ್ನೊಂದು ಕಡೆ ಪ್ರಾಣ ಸ್ನೇಹಿತೆ ಮಗು ಸತ್ತು ಹೋಗಿದೆ ಅನ್ನೋ ನೋವು. ಮಗುನ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದ್ರು. ಇದೆಲ್ಲಾ ನೋಡ್ತಾ ಇದ್ದಾ ಅಜ್ಜಿ ಏನು ಮಾಡದೇ ಇರೋ ಪರಿಸ್ಥಿತಿ ಅಲ್ಲಿ ಇದ್ಲು. ಡಾಕ್ಟರ್ ಬಂದು ಮಗು ನಾ ಚೆಕ್ ಮಾಡಿ ಸಾರೀ ಮೇಡಂ ಮಗು ಸತ್ತೋಗಿದೆ ಅಂತ ಹೇಳಿದ್ರು. ಈ ವಿಷಯ ನಾ ನಿಮ್ ತಾತ ಗೆ ನಿಮ್ ತಂದೆಗೆ ವಿಷಯ ತಿಳಿಸಿದ್ರು ಅವರು ತುಂಬಾ ನೋವನ್ನ ಅನುಭವಿಸಿ ಕಣ್ಣೀರು ಹಾಕಿದ್ರು.
ಡಾಕ್ಟರ್ ಬಂದು ಅಮ್ಮನ ಚೆಕ್ ಮಾಡಿ ಮಗು ನ ಚೆಕ್ ಮಾಡಿ. ಪ್ರಜ್ಞೆ ಬರೋಕೆ ಸ್ವಲ್ಪ ಟೈಮ್ ಇಡಿಯುತ್ತೆ ವಾರ್ಡ್ ಗೆ ಶಿಫ್ಟ್ ಮಾಡಿದ್ರು. ನಿಮ್ ತಾಯಿ ನಾ ಕೂಡ ಅದೇ ವಾರ್ಡ್ ಗೆ ಶಿಫ್ಟ್ ಮಾಡಿ ಸ್ವಲ್ಪ ಹೊತ್ತು. ನಿಮ್ ತಾತ ನಿಮ್ ಅಪ್ಪ ಎಲ್ಲರೂ ಬಂದು ನಿಮ್ಮಮ್ಮನಿಗೆ ಸಮಾಧಾನ ಮಾಡಿ ಹೊರಗೆ ಹೋದ್ರು. ಅ ವಾರ್ಡ್ ಅಲ್ಲಿ ಅಜ್ಜಿ ನಮ್ಮಮ್ಮ ನಿಮ್ಮಮ್ಮ ಈ ಮೂರು ಜನರನ್ನ ಬಿಟ್ಟು ಬೇರೆ ಯಾರು ಇದ್ದಿಲ್ಲ. ಆಗ ಅಮ್ಮ ಕೇಳಿದ್ರು ನಿಮ್ಮಮ್ಮ ನಾ ಏನಕ್ಕೆ ಹೀಗೆ ಮಾಡಿದೆ ಅಂತ. ಅಮ್ಮನಿಗೆ ಇಬ್ಬರು ಮಾತಾಡಿಕೊಳ್ಳೋ ಮೊದಲೇ ಎಚ್ಚರ ಆಗಿತ್ತು. ಇಬ್ಬರು ಮಾತಾಡೋದನ್ನ ಕೇಳಿ ಏನು ಮಾತನಾಡದೆ ಎಲ್ಲಾ ಕೇಳಿಸಿ ಕೊಳ್ತಾ ಇದ್ರು. ಅಮ್ಮ ಹಾಗೇ ಕೇಳಿದಾಗ ನಿಮ್ಮಮ್ಮ ಎಲ್ಲಾ ವಿಷಯ ಹೇಳಿದ್ರು. ನಿಮ್ ಚಿಕ್ಕಪ್ಪ, ನಿಮ್ ಮಾವ ನಾ ಬುದ್ದಿ ಗೊತ್ತಾಗಿ ನಿಮ್ ತಾತ ಅಸ್ತಿ ನಾ ಯಾರಿಗೆ ಎಷ್ಟು ಕೊಡಬೇಕೋ ಅಂತ ನಿರ್ಧಾರ ಮಾಡಿ ವಿಲ್ ಬರೆದು ಇಟ್ಟಿದ್ರು. ನಿಮ್ ತಂದೆಗೆ ಆಸ್ತಿಲಿ ಜಾಸ್ತಿ ಪಾಲು ಕೊಟ್ಟಿದ್ದಾರೆ ಅಂತ ಗೊತ್ತಾಗಿ ಪಿತೂರಿ ಮಾಡೋಕೆ ಶುರು ಮಾಡಿದ್ರು. ನಿಮ್ ತಂದೆ ಅಸ್ತಿ ನಾ ಹುಟ್ಟೋದು ಗಂಡು ಮಗು ಅದ್ರೆ ಅವನಿಗೆ ಸೇರುತ್ತೆ ಹೆಣ್ಣು ಮಗು ಅದ್ರೆ ಅವಳ ಮಕ್ಕಳಿಗೆ ಸೇರೋ ಹಾಗೇ ತಾತ ನಿಗೆ ಹೇಳಿ ಬರೆಸಿದ್ರು. ಈ ವಿಷಯ ಅವರಿಗೆ ಗೊತ್ತಾಗಿ ಹುಟ್ಟೋ ಮಗುನ ಹೇಗಾದ್ರು ಮಾಡಿ ಸಾಯಿಸಬೇಕು ಇಲ್ಲಾ ಮಗುನ ಅವರ ಇಷ್ಟದಂತೆ ಅವರಿಗೆ ಬೇಕಾದ ರೀತಿ ಬೆಳಿಸಿ ಕೊಳ್ಳೋ ಪ್ಲಾನ್ ಮಾಡಿದ್ರು. ಇದು ಗೊತ್ತಾಗಿ. ಒಂದು ಕಡೆ ಗಂಡನಿಗೆ ಹೇಳೋಕೆ ಆಗದೆ ಬೇರೆ ಯಾರಿಗೂ ಹೇಳೋಕೆ ಆಗದೆ ತುಂಬಾ ಭಯ ಬಿದ್ದು ಅವರಿಗೆ ಮಗು ಹೆಣ್ಣೋ ಗಂಡೋ ಅಂತ ಗೊತ್ತಾಗದೆ ಹಾಗೇ ನೋಡ್ಕೊಂಡ್ರು. ಪ್ರತಿಯೊಂದು ವಿಷಯ ನಾ ಹೇಳಿ ತುಂಬಾ ನೋವನ್ನ ಪಟ್ಟರು. ಅಜ್ಜಿ ಅದನ್ನೆಲ್ಲಾ ಕೇಳಿ ಕಣ್ಣೀರು ಸುರಿಸಿಕೊಂಡು. ಎದ್ದು ಹೋಗಿ ವಾರ್ಡ್ ಡೋರ್ ನಾ ಕ್ಲೋಸ್ ಮಾಡಿ ಲಾಕ್ ಮಾಡಿ ಮಗು ನಾ ತೆಗೆದುಕೊಂಡು ಹೋಗಿ ನಿಮ್ ತಾಯಿಗೆ ಕೊಟ್ಟರು. ಅಮ್ಮ ಅಜ್ಜಿ ನಿಮ್ ತಾಯಿಗೆ ಒಂದು ಮಾತು ಕೊಟ್ಟರು. ಇನ್ಮೇಲಿಂದ ಈ ಮಗು ನಮ್ ಮನೆ ಮಗು. ನೀನೇನು ಯೋಚ್ನೆ ಮಾಡಬೇಡ ಅಂತಾ. ನಿಮ್ಮಮ್ಮ ಅವರ ಮಗನಿಗೆ ಎದೆಹಾಲು ಕುಡಿಸಿ ಅಪ್ಪಿ ಮುದ್ದಾಡಿ ಕೊನೆಗೆ ಕಣ್ಣೀರಿಟ್ಟು ಅಮ್ಮನ ಕೈಗೆ ಕೊಟ್ಟು ಇಬ್ಬರಿಗೂ ಕೈ ಮುಗಿದರು.
ಆಮೇಲೆ ನಿಮ್ ತಂದೆ ನಿಮ್ ಅಮ್ಮ ನಾ ಕರ್ಕೊಂಡು ಮನೆಗೆ ಹೋದರು. ಅಪ್ಪ ಕೂಡ ಅಮ್ಮ ನಾ ಕರ್ಕೊಂಡು ಮನೆಗೆ ಹೋದರು. ನಾನು ಸ್ನೇಹಿತೆ ಮಗ ಅಂತ ಗೊತ್ತಿದ್ರು ಕೂಡ ಯಾವತ್ತೂ ಒಂದು ದಿನ ಒಂದು ಕ್ಷಣ ಕೂಡ ನನ್ನ ಮಗ ಅಲ್ಲ ಅಂತ ಅನ್ಕೊಂಡು ಇಲ್ಲಾ. ಅವರ ಮಗನಿಗಿಂತ ಹೆಚ್ಚಾಗಿ ನನ್ನ ಸಾಕಿದ್ರು. ಅಕ್ಕ ಅಂತು ಹೇಳೋದೇ ಬೇಕಾಗಿಲ್ಲ. ನನಗೆ ಎರಡನೇ ತಾಯಿ ಆಗಿ ಬಿಟ್ಲು. ಹೈಸ್ಕೂಲ್ ಮುಗಿದ ಮೇಲೆ ಅಜ್ಜಿ ಅಮ್ಮ ನನಗೆ ಈ ವಿಷಯ ಹೇಳಿದ್ರು. ಹೇಳೋಕೆ ಕಾರಣ ಕೂಡ ಹೇಳಿದ್ರು. ಒಂದಲ್ಲ ಒಂದು ದಿನ ನಿನ್ನ ತಂದೆ ತಾಯಿಗೆ ನಿನ್ನ ಸಹಾಯ ಬೇಕಾಗುತ್ತೆ ಅಂತ. ಆಮೇಲೆ ಅವರ ಬಗ್ಗೆ ತಿಳ್ಕೊಳ್ಳೋಕೆ ಹುಡುಕೋಕೆ ಶುರು ಮಾಡಿದೆ. 1 ವರ್ಷ ಆದಮೇಲೆ ಗೊತ್ತಾಯಿತು ಅವರು ಇಲ್ಲಿ ಇದ್ದಾರೆ ಅಂತ. ಇಲ್ಲಿಗೆ ಬಂದು ಅವರನ್ನ ನೋಡಿಕೊಂಡು ವಾಪಸ್ಸು ಹೋದೆ. ಪ್ರತಿ ದಿನ ಈ ಕಂಪನಿ ಬಗ್ಗೆ ತಿಳ್ಕೊಳ್ತಾ ಇದ್ದೆ. ಕಂಪನಿ ಡೌನ್ ಆಗ್ತಾ ಇದೆ ಅಂತ ಗೊತ್ತಾಯಿತು. ಕಾರಣ ಏನು ಅಂತ ನೋಡಿದಾಗ ಗೊತ್ತಾಗಿದ್ದು. ಚಿಕ್ಕಪ್ಪ ಮಾವ ಅಂತ. ಅದಕ್ಕೆ ವಿಷಯ ನಾ ಅಮ್ಮನಿಗೆ ಹೇಳಿದಾಗ ತುಂಬಾ ಸಂತೋಷ ಪಟ್ಟರು. ಇಲ್ಲಿಗೆ ಬಂದಾಗ ಹೇಗೆ ಅ ಮನೆ ಗೆ ಸೇರೋದು ಅಂತ ಯೋಚ್ನೆ ಮಾಡ್ತಾ ಇದ್ದಾಗಲೇ ನೀನೇ ಬಂದು ಮಾತಾಡಿಸಿದೆ. ಅಪ್ಪ ಕೂಡ ಅವರಾಗೆ ಬಂದು ಕೇಳಿದ್ರು. ಆಮೇಲೆ ನಡೆದಿದ್ದು ನಿನಗೆ ಗೊತ್ತಿದೆ ಅಂತ ಹೇಳಿ ಸೈಲೆಂಟ್ ಅದೇ.
ಸೀತಾ ನಾನ್ ಹೇಳಿದ್ದನ್ನ ಕೇಳಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು. ನಾನ್ ಅವಳಿಗೆ ಸಮಾಧಾನ ಮಾಡಿ. ನೋಡು ಈ ವಿಷಯ ಸದ್ಯಕ್ಕೆ ನಮ್ ಮಧ್ಯ ನೇ ಇರಬೇಕು ಅಂತ ಹೇಳ್ದೆ. ಸೀತಾ ಕಣ್ ಹೊರೆಸಿಕೊಂಡು ಸರಿ ಅಣ್ಣ ನಿನ್ ಹೇಗೆ ಹೇಳ್ತೀಯೋ ಹಾಗೇ ಅಂತ ಹೇಳಿದ್ಲು. ಸರಿ ನಾನ್ ಹೋಗಿ ಫ್ರೆಷ್ ಅಪ್ ಆಗಿ ಬರ್ತೀನಿ ಕಾಲೇಜ್ ಹೋಗೋಣ ಅಂತ ಹೇಳ್ದೆ. ಸರಿ ನಾನು ಹೋಗಿ ಫೇಸ್ ವಾಶ್ ಮಾಡ್ಕೊಂಡು ಬರ್ತೀನಿ ಅಂತ ಹೇಳಿ ಗೆಸ್ಟ್ ರೂಮ್ ಗೆ ಹೋದಳು. ಸ್ವಲ್ಪ ಸಮಯದ ನಂತರ ರೆಡಿ ಆಗಿ ಬಂದೆ. ಸೀತಾ ಹಾಲ್ ಅಲ್ಲಿ ಮೊಬೈಲ್ ನೋಡ್ಕೊಂಡು ಕೂತಿದ್ಲು. ಅವಳನ್ನ ನೋಡಿ ಹೋಗೋಣ್ವಾ ಅಂತ ಕೇಳಿದೆ. ಸೀತಾ ಅಣ್ಣ ಮನೆ ಹತ್ತಿರ ಹೋಗಿ ಆಮೇಲೆ ಕಾಲೇಜ್ ಹೋಗೋಣ ಅಂತ ಹೇಳಿದ್ಲು. ನಾನು ಸರಿ ಅಂತ ಹೇಳಿ ಬೈಕ್ ಅಲ್ಲಿ ಇಬ್ಬರು ಸೀತಾ ಮನೆ ಕಡೆಗೆ ಹೊರಟ್ವಿ.
****************************************
P. S