Mahi - 39 in Kannada Love Stories by S Pr books and stories PDF | ಮಹಿ -39

The Author
Featured Books
Categories
Share

ಮಹಿ -39

    ನನ್ನ ಲೈಫ್ ಅಲ್ಲಿ  ಯಾವತ್ತೂ ಅನ್ಕೊಂಡು ಇರಲಿಲ್ಲ ಅಮ್ಮನ ಬಿಟ್ಟು ಇಷ್ಟು ದೂರ ಬರ್ತೀನಿ ಅಂತ. ವಸು ನನಗೆ ತಾಯಿ ಆದ್ರು ಯಾವಾಗ್ಲೂ  ಸ್ನೇಹಿತೆ ಆಗಿ ಜೊತೆಗೆ ಇರ್ತಾ ಇದ್ಲು, ಇದ್ದಾಳೆ ಕೂಡ. ಬಿಟ್ಟು ಇರೋದು ಕಷ್ಟ ಬಟ್ ಬೇರೆ ದಾರಿ ಇಲ್ಲಾ. ಅವಳ ಆಲೋಚನೆಯಲ್ಲೇ ಇದ್ದಾ ನನಗೆ ವಾಸ್ತವಕ್ಕೆ ಕರ್ಕೊಂಡು ಬಂದಿದ್ದು ರೈಲ್ವೆ ಸ್ಟೇಷನ್ ಅಲ್ಲಿ ಸ್ಪೀಕರ್ ಅಲ್ಲಿ ಬರ್ತಾ ಇದ್ದಾ ಧ್ವನಿ. ಲಗೇಜ್ ಎಲ್ಲಾ ತೆಗೆದುಕೊಂಡು ಟ್ರೈನ್ ಇಳಿದು ರೈಲ್ವೆ ಸ್ಟೇಷನ್ ಯಿಂದ ಹೊರಗೆ ಬಂದೆ. ಅದು ಇಂಡಿಯಾದ ಕ್ಯಾಪಿಟಲ್ ದೆಹಲಿ. ರೈಲ್ವೆ ಸ್ಟೇಷನ್ ಹೊರಗೆ ಬಂದು ದೆಹಲಿ ಅಲ್ಲಿ ಕೆಲವು ದಿನಗಳ ಹಿಂದೆ ಪರಿಚಯ ಅದ ಒಬ್ಬನಿಗೆ ಕಾಲ್ ಮಾಡಿದೆ ಅವನು ಕಾಲ್ ಪಿಕ್ ಮಾಡಿ ಮಾತಾಡಿದ ಅವನಿಗೆ ನಾನು ಇದ್ದಾ ಪ್ಲೇಸ್ ಹೇಳಿದೆ, 10 ನಿಮಿಷ ಅಂತ ಹೇಳಿ ಕಾಲ್ ಕಟ್ ಮಾಡಿದ. ಅವನ ಹೆಸರು ದೀಪಕ್ ವರ್ಮಾ ಅಲಿಯಾಸ್ ದೀಪು. ಹೇಳಿದ ಹಾಗೇ 10 ನಿಮಿಷದಲ್ಲಿ ನಾನ್ ಇದ್ದಾ ಪ್ಲೇಸ್ ಗೆ ಟ್ಯಾಕ್ಸಿ ಅಲ್ಲಿ ಬಂದ. ನನ್ನ ನೋಡಿ ಹಾಯ್ ಮಹಿ ಅಂತ ಹೇಳಿ ಬಂದು ಕೈ ಕೊಟ್ಟು ವಿಶ್ ಮಾಡಿ ವೆಲ್ಕಮ್ ಟು ದೆಹಲಿ ಅಂತ ಹೇಳಿದ ಅವನ ಜೊತೆ ಮಾತಾಡಿ ಲಗೇಜ್ ನ ಟ್ಯಾಕ್ಸಿ ಅಲ್ಲಿ ಇಟ್ಟು ಇಬ್ಬರು ಟ್ಯಾಕ್ಸಿ ಅಲ್ಲಿ ಕೂತು ಹೊರಟ್ವಿ. IIT ಕ್ಯಾಂಪಸ್ ಒಳಗೆ ಬಂದು ಟ್ಯಾಕ್ಸಿ ಇಳಿದು, ಟ್ಯಾಕ್ಸಿ ಬಿಲ್ ಪೆ ಮಾಡಿ ಲಗೇಜ್ ತಗೊಂಡು ಹೊರಟ್ವಿ. ದೀಪು ದ ಫೈನಲ್ ಇಯರ್, ಏನು ತಿಳಿದೇ ಯಾವುದೊ ಊರಿಗೆ ಹೋಗಿ ಇರೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ, ಸೋ ಇಲ್ಲಿಗೆ ಬರಬೇಕು ಅಂತ ನಿರ್ಧಾರ ಮಾಡಿದಾಗ, ಫೇಸ್ಬುಕ್ ಅಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿ ದೀಪಕ್ ವರ್ಮಾ, ಹಳ್ಳಿ ಯಿಂದ ಬಂದ ವ್ಯಕ್ತಿ, ನನ್ನ ಬಗ್ಗೆ ಹೇಳಿದಾಗ ಅವನಿಗೆ ಇಷ್ಟ ಆಗಿ ಕುದ್ದು ಆತನೇ ಬಂದು ನನ್ನ ಇಲ್ಲಿಗೆ ಕರ್ಕೊಂಡು ಬಂದ. ದೀಪು ಮಾತಾಡ ಮಹಿ ನಿನ್ ಇರೋ ರೂಮ್ ಅಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದಾನೆ ರಾಜಸ್ತಾನ್ ನಿಂದ ಬಂದವನು ಅವನ ಹೆಸರು   B.N. ಸಿಂಗ್. ಒಳ್ಳೆ ಹುಡುಗನೇ ಚೆನ್ನಾಗಿ ಓದ್ತಾ ಇದ್ದಾನೆ ಕೂಡ.

   3 ಟೈಮ್ಸ್ ಒಳ್ಳೆ ಫುಡ್ ಸಿಗುತ್ತೆ ಹಾಸ್ಟೆಲ್ ಅಲ್ಲಿ. ಮಧ್ಯಾಹ್ನ ಲಂಚ್ ಹಾಸ್ಟೆಲ್ ಗೆ ಬಂದು ಬೇಕಾದ್ರು ಮಾಡಬಹುದು ಇಲ್ಲಾ ಕ್ಯಾಂಪಸ್ ಕ್ಯಾಂಟೀನ್ ಅಲ್ಲಿ ಬೇಕಾದ್ರು ಮಾಡಬಹುದು. ನೀನು ಅವರಿಗೆ ಯಾವ್ ಟೈಮ್ ಅಲ್ಲಿ ಎಲ್ಲಿ ಊಟ ಮಾಡ್ತಿಯಾ ಅಂತ ಹೇಳಿದ್ರೆ ಅದಕ್ಕೆ ತಕ್ಕ ಹಾಗೇ ನಿನಗೆ ಫುಡ್ ಅರೇಂಜ್ ಮಾಡ್ತಾರೆ. ಕಾಲೇಜ್ ಕ್ಯಾಂಪಸ್ ಒಳಗೆ ರಾಗಿಂಗ್ ಅನ್ನೋದು ಫುಲ್ ಬ್ಯಾನ್ ಮಾಡಿದೆ ಮ್ಯಾನೇಜ್ಮೆಂಟ್. ಬಟ್ ಹಾಸ್ಟೆಲ್ ಅಲ್ಲಿ ತಮಾಷೆಗೆ ಸೀನಿಯರ್ಸ್ ಸ್ವಲ್ಪ ರಾಗಿಂಗ್ ಮಾಡ್ತಾರೆ ಸೋ ಲೈಟ್ ಆಗಿ ತಗೋ. ನನ್ನ ಜೊತೆಗೆ ನೋಡಿದ್ರು ಅಲ್ವಾ ಸೋ ನಿನ್ನ ಏನು ಮಾತಾಡಿಸೋದಿಲ್ಲ. ನೈಟ್ 10 ಗೆ ಹಾಸ್ಟೆಲ್ ಗೇಟ್ ಕ್ಲೋಸ್ ಮಾಡ್ತಾರೆ. ಕೆಲವೊಂದು ಸರಿ ಏನಾದ್ರು ಲೇಟ್ ಅದ್ರೆ ಸೆಕ್ಯೂರಿಟಿ ನ ಸ್ವಲ್ಪ ನೋಡ್ಕೋ ನಿನಗೆ ಏನು ಪ್ರಾಬ್ಲಮ್ ಇರೋದಿಲ್ಲ. ಇರೋ ಲೆಕ್ಕದಲ್ಲಿ ನಾನ್ ಇದೆಲ್ಲಾ ನಿನಗೆ ಹೇಳಬಾರ್ದು ಬಟ್ ಏನಕ್ಕೆ ಹೇಳ್ತಾ ಇದ್ದೀನಿ ಅಂದ್ರೆ ನೀನು ನನಗೆ ಹೇಳಿದ ವಿಷಯ ಹೇಳಿದ ರೀತಿ ತುಂಬಾ ಇಷ್ಟ ಆಯ್ತು ಅದಕ್ಕೆ ನಿನಗೆ ಹೇಳ್ತಾ ಇದ್ದೀನಿ. ಕ್ಯಾಂಪಸ್ ಒಳಗೆ ಯಾರನ್ನು ಎನಿಮಿ ಮಾಡ್ಕೊಳ್ಳೋಕೆ ಹೋಗಬೇಡ, ಕೆಲವೊಂದು ಸಲ ನಿನ್ನ ತಪ್ಪಿಲ್ಲ ಅಂದ್ರು ತಲೆ ಬಗ್ಗಿಸಿ ಬಿಡು ಹೋಗೋದು ಏನೂ ಇಲ್ಲಾ . ಮೊದಲು ನಾವು ಬಂದ ಕರ್ತವ್ಯ ಗುರಿ ಅದನ್ನ ಮುಟ್ಟೋದರ ಬಗ್ಗೆ ಫೋಕಸ್ ಮಾಡು ಅಂತ ಹೇಳಿ ರೂಮ್ ಹತ್ತಿರ ಕರ್ಕೊಂಡು ಬಂದು ಇದೆ ನಿನ್ನ ರೂಮ್ ಅಂತ ತೋರಿಸಿದ್ರು. ನಂತರ ಇಬ್ಬರು ರೂಮ್ ಒಳಗೆ ಬಂದ್ವಿ ರೂಮೇಟ್ ಸಿಂಗ್ ನ ಪರಿಚಯ ಮಾಡಿಸಿದ. ಇನ್ನೊಬ್ಬ ರೂಮೇಟ್ ಬರಬೇಕು ಬಂದ್ರೆ ನೀವೇ ಪರಿಚಯ ಮಾಡಿಕೊಳ್ಳಿ. ಎನಿ ವೆ ಆಲ್ ದಿ ಬೆಸ್ಟ್ ಅಂತ ಮತ್ತೆ ವಿಶ್ ಮಾಡಿದ್ರು. ನಾನು ತುಂಬಾ ಥ್ಯಾಂಕ್ಸ್ ಬ್ರದರ್ ಅಂತ ಕೈ ಕೊಟ್ಟು ಹೇಳಿದೆ.  ದೀಪು ಇಷ್ಟಕ್ಕೆಲ್ಲ ಥ್ಯಾಂಕ್ಸ್ ಏನಕ್ಕೆ ಮಹಿ, ನಾನು ಯಾವಾಗಾದ್ರೂ ಬೆಂಗಳೂರು ಬರ್ತೀನಿ ಅಲ್ವಾ ಆಗ ನೀನು ನನಗೆ ಹೆಲ್ಪ್ ಮಾಡು ಅಂತ ಹೇಳಿದ. ಖಂಡಿತ ಬ್ರದರ್ ಬೆಂಗಳೂರು ಬಂದಾಗ ನಿಮಗೆ ಏನ್ ಹೆಲ್ಪ್ ಬೇಕೋ ನಾನ್ ಮಾಡ್ತೀನಿ ಅಂತ ಮಾತು ಕೊಟ್ಟೆ. ನಂತರ ದೀಪು ಹೊರಟು ಹೋದ. ನಾನು ನನ್ನ ಲಗೇಜ್ ನ ಎಲ್ಲಾ ಸೈಡ್ ಗೆ ಇಟ್ಟು ಫ್ರೆಷ್ ಅಪ್ ಆಗೋಕೆ ಹೋದೆ. 

  ಸಿಂಗ್ ತುಂಬಾ ಒಳ್ಳೆ ವ್ಯಕ್ತಿ. ನನ್ನ ಜೊತೆಗೆ ಬಂದು ಹಾಸ್ಟೆಲ್, ಕ್ಯಾಂಪಸ್, ಕ್ಲಾಸ್ ರೂಮ್ ಎಲ್ಲಾನು ತೋರಿಸಿ ಮತ್ತೆ ಹೊರಗೆ ಕರ್ಕೊಂಡು ಬಂದು ಸುತ್ತ ಮುತ್ತ ಏರಿಯಾ ನ ತೋರಿಸಿದ. ಸಂಜೆ ವಾಪಸ್ಸು ಹಾಸ್ಟೆಲ್ ಗೆ ಬಂದ್ವಿ. ಊಟ ಊಟ ಮಾಡಿ ಆರಾಮಾಗಿ ಮಲಗಿ ಕೊಂಡೆ. ಒಂದು ವಾರ ಕಾಲೇಜ್ ಅದು ಇದು ಅಂತ ಫುಲ್ ಬ್ಯುಸಿ ಆಗೋದೇ. ಫ್ರೆಂಡ್ಸ್ ಅಂತ ಜಾಸ್ತಿ ಯಾರನ್ನು ಪರಿಚಯ ಮಾಡಿಕೊಂಡಿಲ್ಲ. ಸಿಂಗ್ ಬಿಟ್ರೆ ಸೀನಿಯರ್ ದೀಪು ಅಷ್ಟೇ ಸದ್ಯಕ್ಕೆ ನನಗೆ ಫ್ರೆಂಡ್ಸ್ ಅಂತ ಇರೋದು. ಈ ಒಂದು ವಾರದಲ್ಲಿ ಬ್ಯಾಕ್ ಬೆಂಚ್ ಸ್ಟೂಡೆಂಟ್ ಗೆ ಉಪಯೋಗ ಆಗೋ ಅಂತ ವಿಷಯ ಗಳನ್ನ ಚೆನ್ನಾಗಿ ತಿಳ್ಕೊಂಡೆ. ಮೈಂಡ್ ಅಲ್ಲಿ ಸ್ಟೋರ್ ಮಾಡಿ ಇಟ್ಟುಕೊಂಡೆ. ಯಾಕಂದ್ರೆ ಬಂದಿರೋ ಉದ್ದೇಶ ಬೇರೆ ಅಲ್ವಾ ಅದಕ್ಕೆ. 

   ನೆಕ್ಸ್ಟ್ ಕ್ಲಾಸ್ ಇಲ್ದೆ ಇರೋದ್ರಿಂದ ಕ್ಲಾಸ್ ಅಲ್ಲಿ ಇರೋದು ಏನಕ್ಕೆ ಅಂತ ಕ್ಯಾಂಟೀನ್ ಗೆ ಹೋಗಿ ಟೀ ಕುಡಿತಾ ಅಮ್ಮನಿಗೆ ಕಾಲ್ ಮಾಡಿದೆ. ಅಮ್ಮ 2 ನೇ ರಿಂಗ್ ಗೆ ಕಾಲ್ ಪಿಕ್ ಮಾಡಿ ಏನು ಮಾತನಾಡದೆ ಸೈಲೆಂಟ್ ಆಗಿ ಇದ್ರು. ನನಗೆ ಅರ್ಥ ಆಯ್ತು ಅಮ್ಮ ಕೋಪ ಮಾಡ್ಕೊಂಡು ಇದ್ದಾಳೆ ಒಂದು ವಾರದ ಮೇಲೆ ಆಯ್ತು ನಾನು ಅಮ್ಮ ಮಾತಾಡಿ.  ಸಾರೀ ವಸು, ಕಾಲೇಜ್ ಹಾಸ್ಟೆಲ್ ಕ್ಲಾಸ್ ಅದು ಇದು ಅಂತ ಬ್ಯುಸಿ ಆಗೋದೇ. ನಿನ್ನ ಹತ್ತಿರ ಮಾತಾಡೋಕೆ ಆಗಲಿಲ್ಲ.  ಅಷ್ಟಕ್ಕೂ ನೀನೇ ಅಲ್ವಾ ಹೇಳಿದ್ದು ಅಲ್ಲಿಗೆ ಹೋಗಿ ಎಲ್ಲಾ ಸರಿ ಹೋದಮೇಲೆ ನೀನು ಫ್ರೀ ಆದಮೇಲೆ ಕಾಲ್ ಮಾಡು ಆರಾಮಾಗಿ ಮಾತಾಡು ಅಂತ ಹೇಳಿದ್ದು. ನೋಡು ಇವಾಗ ಫುಲ್ ಫ್ರೀ ಎಷ್ಟೋತ್ತು ಬೇಕಾದ್ರು ಮಾತಾಡಬೋದು ಇಬ್ಬರು ಅಂತ ಹೇಳ್ದೆ. ಅಮ್ಮ ನಿಜವಾಗ್ಲೂ ನ ಅಂತ ತುಂಬಾ ಖುಷಿಯಾಗಿ ಮಾತಾಡೋಕೆ ಶುರು ಮಾಡಿದ್ರು. ಅಮ್ಮನ ನಗು ಅವರ ಸಂತೋಷ ನೋಡಿ ಅಮ್ಮ ವಿಡಿಯೋ ಕಾಲ್ ಮಾಡ್ತೀನಿ ಅಂತ ಹೇಳ್ದೆ. ಅಮ್ಮ ಇನ್ನು ಖುಷಿ ಆಗಿ ವಿಡಿಯೋ ಕಾಲ್ ಗೆ ಬಂದ್ರು. ಅಮ್ಮ ನನ್ನ ಮುಖ ನೋಡಿ ಏನೋ ಒಂದೇ ವಾರಕ್ಕೆ ಇಷ್ಟು ಡಲ್ ಆಗಿ ಇದ್ದಿಯಾ ಫುಡ್ ಸೆಟ್ ಆಯ್ತಾ ಅಂತ ಕೇಳಿದ್ರು. ವಸು ಎಲ್ಲೇ ಹೋದ್ರು ಏನೇ ತಿಂದ್ರು ನಿನ್ನ ಕೈ ರುಚಿ ಅಷ್ಟು ಇರೋದಿಲ್ಲ ಅದಕ್ಕೆ ಹೀಗೆ ಕಾಣ್ತಾ ಇದ್ದೀನಿ ಅಂತ ಹೇಳ್ದೆ. ಅಮ್ಮ ನಗ್ತಾ ಸರಿ ಅಲ್ಲಿ ಸೌತ್ ಸ್ಟೈಲ್ ಫುಡ್ ಸಿಗೋ ಅಂತ ಹೋಟೆಲ್ ಯಾವುದು ಇಲ್ವಾ ಅಂತ ಕೇಳಿದ್ರು. ಇದೆ ವಸು ಬಟ್ ದೂರ ಹೋಗಬೇಕು. ಇವಾಗ ಚಪಾತಿ ಆಲೂಗಡ್ಡೆ ಗೆ ಬಾಡಿ ಅಡ್ಜಸ್ಟ್ ಆಗಿದೆ ಬಿಡು. ಸಾರೀ ನಿನ್ನ ಹತ್ತಿರ ಮಾತಾಡೋ ಖುಷಿ ಲಿ ನಿನ್ ಹೇಗಿದ್ದೀಯ ಅಂತ ಕೇಳೋದೇ ಮರೆತೇ ಹೇಗಿದ್ದೀಯ ಅಂತ ಕೇಳ್ದೆ. ನಾನ್ ಸೂಪರ್ ಕಣೋ ನಿಮ್ ಅಕ್ಕ ನೇ ಪಾಪ ಡಲ್ ಆಗಿ ಇದ್ದಾಳೆ. ನಿನ್ ಇದ್ದಿದ್ರೆ ನಿನ್ ಜೊತೆಗೆ ಜಗಳ ಮಾಡ್ಕೊಂಡು ರೇಗಿಸಿಕೊಂಡು ಇರ್ತಾ ಇದ್ಲು. ಈಗ ಒಬ್ಳೆ ಅಲ್ವಾ. ಅದು ಅಲ್ಲದೆ ನಿನ್ ಬೇರೆ ನಂಬರ್ ಚೇಂಜ್ ಮಾಡಿದ್ದಿಯ. ನಿನ್ನ ಹೊಸ ನಂಬರ್ ಅವಳಿಗೆ ಗೊತ್ತಿಲ್ಲ. ದಿನ ನನ್ನ ಕೇಳ್ತಾ ಇದ್ದಾಳೆ ಅಮ್ಮ ಮಹಿ ಕಾಲ್ ಮಾಡಿದ್ನ ಮಾಡಿದ್ನ ಅಂತ. ನಾನು ಇಲ್ಲಾ ಮಾಡಿಲ್ಲ ಮಾಡಿದ್ರೆ ನಾನ್ ಯಾಕೆ ಈಗೆ ಸೈಲೆಂಟ್ ಆಗಿ ಇರ್ತಾ ಇದ್ದೆ ಅಂತ. ಪಾಪ ಕಣೋ ಅವಳಿಗೆ ಕಾಲ್ ಮಾಡಿ ಒಂದು ಸರಿ ಮಾತಾಡು ಅವಳನ್ನ ನೋಡ್ತಾ ಇದ್ರೆ ಅಯ್ಯೋ ಅಂತ ಅನ್ನಿಸುತ್ತೆ ಅಂತ ಹೇಳಿದ್ರು. ಸರಿ ವಸು ನಾನು ಆಮೇಲೆ ಕಾಲ್ ಮಾಡಿ ಮಾತಾಡ್ತೀನಿ ಅಂತ ಹೇಳಿ. ಕಾಲೇಜ್ ಕ್ಯಾಂಪಸ್ ಕ್ಯಾಂಟೀನ್ ಎಲ್ಲಾ ತೋರಿಸಿಕೊಂಡು ಮಾತಾಡ್ಕೊಂಡು ಇದ್ದು ಬಿಟ್ಟೆ. ಸುಮಾರು ಒಂದು ಗಂಟೆ ಮೇಲೆ ಮಾತಾಡಿದ್ವಿ. ಮೊಬೈಲ್ ಬ್ಯಾಟರಿ ಲೊ ಅಂತ ಬಂತು. ವಸು ಚಾರ್ಜ್ ಖಾಲಿ ಆಗಿದೆ ಮತ್ತೆ ಫ್ರೀ ಆದಾಗ ಕಾಲ್ ಮಾಡ್ತೀನಿ ಅಂತ ಹೇಳಿ ಬೈ ಹೇಳಿ ಕಾಲ್ ಕಟ್ ಮಾಡಿದೆ. 

    ಮೊಬೈಲ್ ಚಾರ್ಜ್ ಹಾಕೋಣ ಅಂತ ಹೋಗ್ತಾ ಇದ್ದೆ. ಅಷ್ಟರಲ್ಲಿ ಯಾರೋ ಕರೆದ ಹಾಗೇ ಆಯ್ತು. ನಾನು ಯಾರನ್ನೋ ಅಂತ ಅನ್ಕೊಂಡು ತಲೆ ಕೆಡಸಿಕೊಳ್ಳ ದೆ ಮುಂದೆ ಹೋದೆ. ನಿಮಿಷದ ನಂತರ ಒಂದು ಧ್ವನಿ ತುಂಬಾ ಹತ್ತಿರ ಬಂದು ರೀ ನಿಮ್ಮನೆ ಕರೀತಾ ಇರೋದು ಅಂತ ಕನ್ನಡದಲ್ಲಿ ಹೇಳೋದನ್ನ ಕೇಳಿ ತಿರುಗಿ ನೋಡಿದೆ. ಸುಂದರ ವಾಗಿ ಇರೋ ಹುಡುಗಿ ಎದುರಿಗೆ ನಿಂತಿದ್ಲು. ನಾನು ಅವರನ್ನ ನೋಡಿ ನೀವು ನನ್ನನ್ನೇ ನ ಕರೆದಿದ್ದು ಅಂತ ಕೇಳಿದೆ. ಹೌದು ನಿಮ್ಮನ್ನೇ ಅಂತ ಹೇಳಿದ್ಲು. ಸರಿ ಹೇಳಿ ಏನ್ ವಿಷಯ ಅಂತ ಕೇಳ್ದೆ. ಅ ಹುಡುಗಿ ಕೈ ನ ಮುಂದೆ ಚಾಚಿ ಹಾಯ್ ಐಮ್ ಸೀತಾ ಅಂತ ಅಂದ್ಲು. ನಾನು ಕೈ ಕೊಟ್ಟು ವಿಶ್ ಮಾಡಿ ಹಲೋ ಐಮ್ ಮಹಿ ಅಂತ ಹೇಳ್ದೆ. ಸೀತಾ ಮಾತಾಡ್ತಾ ಸಾರೀ ನಾನು ಕೂಡ ನಿಮ್ ಕ್ಲಾಸ್ ಬಟ್ ನೀವು ಕನ್ನಡದವರು ಅಂತ ನನಗೆ ಗೊತ್ತಾಗಲಿಲ್ಲ. ನೀವು ಸ್ವಲ್ಪ ಹೊತ್ತಿಗೂ ಮುಂಚೆ ಕ್ಯಾಂಟೀನ್ ಅಲ್ಲಿ ಮೊಬೈಲ್ ಅಲ್ಲಿ ಮಾತಾಡೋವಾಗ ನಾನು ನಿಮ್ ಪಕ್ಕದ ಟೇಬಲ್ ಅಲ್ಲೇ ಕೂತಿದ್ದೆ. ನೀವು ಮಾತಾಡೋದನ್ನ ಕೇಳಿ ಕನ್ನಡದವರು ಅಂತ ಗೊತ್ತಾಯಿತು ಅದಕ್ಕೆ ಮಾತಾಡಿಸೋಣ ಅಂತ ಹಿಂದೇನೆ ಬಂದೆ ಬಟ್ ನೀವು ಮೊಬೈಲ್ ಅಲ್ಲಿ ಯಾರ್ ಜೊತೆನೋ ಮಾತಾಡ್ಕೊಂಡು ತುಂಬಾ ಬ್ಯುಸಿ ಆಗಿ ಇದ್ರಿ ಅದಕ್ಕೆ, ನೀವು ಮಾತಾಡೋದನ್ನ ಮುಗಿಸೋ ತನಕ ಕಾಯ್ತಾ ಇದ್ದೆ ಅಂತ ಹೇಳಿದ್ಲು. ಐಮ್ ರಿಯಲಿ ಸಾರೀ ಅಮ್ಮ ಜೊತೆಗೆ ಮಾತಾಡ್ತಾ ಇದ್ದೆ ನೀವು ನನ್ನ ಹಿಂದೆ ಬರೋದು ನನಗೋಸ್ಕರ ಕಾಯ್ತಾ ಇದ್ದಿದ್ದು ಗಮನಿಸಿಲ್ಲ ಅಂತ ಹೇಳ್ದೆ. 

   ಪರ್ವಾಗಿಲ್ಲ, ಹುಡುಗರಿಗೆ ತಂದೆ ಗಿಂತ ತಾಯಿ ಜೊತೆ ನೇ ತುಂಬಾ ಅಟ್ಯಾಚ್ಮೆಂಟ್ ಇರುತ್ತೆ ಅಂತ ಕೇಳಿದ್ದೆ ಬಟ್ ಇವತ್ತು ನಿಮ್ಮನ್ನ ನೋಡಿ ನಿಜ ಅನ್ನಿಸ್ತು. ಹೌದು ನಿಮ್ಮ ನೇಟಿವ್ ಯಾವುದು ಅಂತ ಕೇಳಿದ್ಲು.  ನಂದು ಸ್ವಂತ ಬೆಂಗಳೂರು. ಇಲ್ಲಿಗೆ ಬಂದು 10 ದಿನ ಆಯ್ತು. ನೀವು ಅಂತ ಕೇಳ್ದೆ. ಸೀತಾ ಮಾತಾಡ್ತಾ ತಾತ ಅಪ್ಪ ಕನ್ನಡದವರೇ ತುಮಕೂರು, ಬಟ್ ಇಲ್ಲಿಗೆ ಬಂದು ಸೆಟ್ಟಲ್ ಆಗಿದ್ದಾರೆ. 20 ವರ್ಷ ಆಯ್ತು ಅಂತ ಹೇಳಿದ್ಲು. ಹೌದ ಮತ್ತೆ ನೀವು ಕನ್ನಡ ಅಂತ ಕೇಳ್ದೆ.  ಊರು ಬಿಟ್ಟು ಬಂದ್ರು ಮಾತೃ ಭಾಷೆ ನ ಬಿಡೋಕೆ ಆಗುತ್ತಾ. ಮನೇಲಿ ಮಾತಾಡೋದು ಕನ್ನಡ ನೇ ಅಂತ ಹೇಳಿದ್ಲು. ಹೌದ ಸಾರೀ ಅವಾಗಿಂದ ನಿಂತೇ ಮಾತಾಡ್ತಾ ಇದ್ದೀರಾ ಬನ್ನಿ ಎಲ್ಲಾದ್ರೂ ಹೋಗಿ ಕುತ್ಕೊಂಡು ಮಾತಾಡೋಣ ಅಂತ ಹೇಳ್ದೆ. ಸೀತಾ,,,ಇಲ್ಲಾ ನೆಕ್ಸ್ಟ್ ಕ್ಲಾಸ್ ಇದೆ ಸೋ ಹೋಗಬೇಕು ಅಂತ ಹೇಳಿದ್ಲು. ಏನು ಕ್ಲಾಸ್ ಇದೆಯಾ ಅದಕ್ಕೆ ಇನ್ನು ಟೈಮ್ ಇದೆ ಅಲ್ವಾ ಅಂತ ಕೇಳ್ದೆ. ಸೀತಾ,,,, ನೀವು ನಿಮ್ ಅಮ್ಮನ ಜೊತೆ ತುಂಬಾ ಹೊತ್ತು ಮಾತಾಡಿದ್ರಿ ಇನ್ನೇನು ಲಂಚ್ ಬ್ರೇಕ್ ಮುಗಿತ ಬಂತು ಅಂತ ಹೇಳಿದ್ಲು. ಹೌದ ಸಾರೀ ಗೊತ್ತಾಗಲಿಲ್ಲ ನಡೀರಿ ಅಂತ ಹೇಳ್ದೆ. ಇಬ್ಬರು ನಡ್ಕೊಂಡು ಕ್ಲಾಸ್ ಕಡೆಗೆ ಹೋದ್ವಿ. 

     ಕ್ಲಾಸ್ ಕಡೆಗೆ ಹೋಗ್ತಾ ಹೌದು ನೀವು ಹಾಸ್ಟೆಲ್ ಅಲ್ಲೇ ನ ಇರೋದು ಅಂತ ಕೇಳಿದ್ಲು. ಹೌದು ಹಾಸ್ಟೆಲ್ ಅಲ್ಲೇ ಇರೋದು ನಿಮ್ ತರ ಇದೆ ಊರಾಗಿದ್ರೆ ಸ್ವಂತ ಮನೇಲೆ ಇರ್ತಾ ಇದ್ದೆ ಅಂತ ಹೇಳ್ದೆ. ಸೀತಾ,,, ಪರ್ವಾಗಿಲ್ಲ ಚೆನ್ನಾಗಿ ಮಾತಾಡ್ತಿರ ಅಂತ ಹೇಳಿದು. ಇಷ್ಟು ದಿನ ಬರದೇ ಇರೋ ಹಿಂದಿ ಭಾಷೇಲಿ ಮಾತಾಡಿ ಮಾತಾಡೋದನ್ನೇ ಕಮ್ಮಿ ಮಾಡಿಬಿಟ್ಟೆ. ಈಗ ಕನ್ನಡ ಮಾತಾಡೋವ್ರು ಸಿಕ್ಕಿರೋವಾಗ ಹೇಗೆ ಸುಮ್ಮೆ ಇರೋಕೆ ಆಗುತ್ತೆ ಅಂತ ಹೇಳ್ದೆ. ಸೀತಾ,, ಹ್ಮ್ ಇನ್ಮೇಲೆ ಸಿಕ್ತ ಇರ್ತೀವಿ ಅಲ್ವಾ ಎಷ್ಟು ಬೇಕೋ ಅಷ್ಟು ಮಾತಾಡಿ ಅಂತ ಹೇಳಿದ್ಲು. ಇಬ್ರು ಮಾತಾಡ್ಕೊಂಡು ಕ್ಲಾಸ್ ರೂಮ್ ಒಳಗೆ ಹೋದ್ವಿ. ಸೀತಾ ಹೋಗಿ ಅವಳ ಪ್ಲೇಸ್ ಅಲ್ಲಿ ಕೂತ್ಕೊಂಡು. ಪಕ್ಕದ ಚೇರ್ ತೋರಿಸಿ ಕೂತ್ಕೊಳ್ಳಿ ಅಂತ ಹೇಳಿದ್ಲು. ಪರ್ವಾಗಿಲ್ಲ ನಾನು ನನ್ನ ಪ್ಲೇಸ್ ಅಲ್ಲೇ ಕೂತ್ಕೋತೀನಿ ಅಂತ ಎದ್ದು ಲಾಸ್ಟ್ ಹೋಗಿ ಗೋಡೆಗೆ ಹೊರಗಿ ಕುತ್ಕೊಂಡೆ.  2 ನಿಮಿಷದ ನಂತರ ಸೀತಾ ಅವಳು ಕೂತಿದ್ದ ಜಾಗದಿಂದ ಎದ್ದು ಬಂದು ನನ್ನ ಪಕ್ಕ ಚೇರ್ ಅಲ್ಲಿ ಕೂತ್ಕೊಂಡು. ಯಾಕ್ರೀ ಅಲ್ಲೇ ಕೂತ್ಕೋಬೋದಾಗಿತ್ತು ಅಲ್ವಾ ಯಾಕೆ ಹುಡುಗೀರ ಪಕ್ಕದಲ್ಲಿ ಕೂತ್ಕೋಳ್ಳೋಕೆ ನಾಚಿಕೆ ನ ಇಲ್ಲಾ ಸುತ್ತಾ ಹುಡುಗಿರೆ ಇದ್ರೆ ಸ್ಟಡೀಸ್ ಮೇಲೆ ಫೋಕಸ್ ಮಾಡೋಕೆ ಆಗಲ್ಲ ಅಂತಾನಾ ಅಂತ ಕೇಳಿದ್ಲು.

  ನಾನು ನಗ್ತಾ ಎರಡು ಅಲ್ಲ. ನೀವು ಕುತ್ತಿರೋ ಪ್ಲೇಸ್ ಬೋರ್ಡ್ ಗೆ ತುಂಬಾ ಹತ್ತಿರ ಇದೆ. ನನಗೆ ಪ್ರಾಬ್ಲೆಮ್ಸ್ ನ ಅಷ್ಟು ಹತ್ತಿರದಿಂದ ನೋಡೋಕೆ ಇಷ್ಟ ಇಲ್ಲಾ. ಯಾಕಂದ್ರೆ ಆಗ ಪ್ರಾಬ್ಲೆಮ್ಸ್ ತುಂಬಾ ದೊಡ್ಡದಾಗಿ ಕಾಣುತ್ತೆ. ಅದಕ್ಕೆ ಲಾಸ್ಟ್ ಗೆ ಬಂದು ಕುತ್ಕೊಂಡೆ. ಇಲ್ಲಿಂದ ನೋಡಿದ್ರೆ ಬೋರ್ಡ್ ಕೂಡ ದೂರ ಇದೆ ಪ್ರಾಬ್ಲೆಮ್ಸ್ ಕೂಡ ಚಿಕ್ಕದಾಗಿ ಕಾಣುತ್ತೆ. ಯಾವುದೇ ಟೆನ್ಶನ್ ಇರಲ್ಲ. ಮೈಂಡ್ ಫ್ರೀ ನಾವು ಫ್ರೀ ಅಂತ ಹೇಳಿ ಹೌದು ನೀವು ಏನಕ್ಕೆ ಅಲ್ಲಿಂದ ಎದ್ದು ಇಲ್ಲಿಗೆ ಬಂದ್ರಿ ಅಂತ ಕೇಳ್ದೆ. ಸೀತಾ,, ತಲೆ ಕೆಟ್ಟು ಅಂತ ಹೇಳಿ ಎದ್ದು ಅವಳ ಪ್ಲೇಸ್ ಗೆ ಹೋದ್ಲು ನಂತರ ಕ್ಲಾಸ್ ಶುರುವಾಯ್ತು. ಕ್ಲಾಸೆಸ್ ಮುಗಿದ ಮೇಲೆ ಎಲ್ಲರೂ ಎದ್ದು ಹೊರಗೆ ಹೊದು ಸೀತಾ ಕೂಡ ನನ್ನ ಕಡೆಗೆ ತಿರುಗಿ ನೋಡದೆ ಹೊರಟು ಹೋದಳು. ನಾನ್ ಯಾವುದಕ್ಕೂ ತಲೆ ಕೆಡಸಿ ಕೊಳ್ಳದೆ. ಹಾಸ್ಟೆಲ್ ಕಡೆಗೆ ಹೋದೆ..


****************************************