Mahi - 37 in Kannada Love Stories by S Pr books and stories PDF | ಮಹಿ - 37

The Author
Featured Books
Categories
Share

ಮಹಿ - 37

    ಫ್ಯಾಮಿಲಿ ಎಲ್ಲರ ಜೊತೆಗೆ ಮಾತಾಡ್ತಾ ಮಧ್ಯಾಹ್ನ ಆಗಿ ಬಿಡ್ತು. ಅಸಿಸ್ಟೆಂಟ್ ಬಂದು ಸರ್ ಲಂಚ್ ರೆಡಿ ಆಗಿದೆ ಅಂತ ಹೇಳಿದ್ರು. ತಾತ ಅವರನೆಲ್ಲ ಕಳಿಸಿ, ಶ್ವೇತಾ ಅಕಿರಾ ನೀಲಾ ಶಿಲ್ಪಾ ರೋಹಿಣಿ ಮದನ್, ಇರೋಕೆ ಹೇಳಿದೆ. ಅಜ್ಜಿ ಏನಕ್ಕೆ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಅಂತ ಹೇಳಿದ್ರು. ತಾತ ಅವರು ಬರ್ತಾರೆ ನಾವು ಹೋಗೋಣ ನಡೀರಿ ಅಂತ ಹೇಳಿ ಎಲ್ಲರನ್ನು ಕರ್ಕೊಂಡು ಹೋದರು. ಅವರೆಲ್ಲಾ ಹೋದಮೇಲೆ ಶ್ವೇತಾ ಹತ್ತಿರ ಮಾತಾಡ್ತಾ ಅಕ್ಕ ಸಡನ್ನಾಗಿ ಬಂದು ನಿನಗೆ ಈ ರೀತಿ ಹೇಳಿದಕ್ಕೆ ನನ್ನ ಮೇಲೆ ಏನಾದ್ರು ಕೋಪ ನ ಅಂತ ಕೇಳ್ದೆ. ಶ್ವೇತಾ ನಗ್ತಾ ಇಲ್ವೋ,  ತುಂಬಾ ಖುಷಿ ಆಗ್ತಾ ಇದೆ, ನನ್ನ ಖುಷಿಗೋಸ್ಕರ ನಾನ್ ಹೇಳಿದೆ ಅಂತ ನನ್ನ ಮಾತಿಗೆ ಬೆಲೆ ಕೊಟ್ಟು ಕಂಪನಿ ಗೆ ಬಂದು ವರ್ಕ್ ಮಾಡಿದೆ. ಈಗ ನೀನು ಬಂದು ಅಕ್ಕ ಈ ವರ್ಕ್ ಮಾಡು ಅಂತ ಹೇಳ್ತಾ ಇದ್ದಿಯಾ ಅದು ನಮ್ ಕಂಪನಿ ಫ್ಯಾಕ್ಟರಿ ಅಲ್ಲಿ, ಇಂಫ್ಯಾಕ್ಟ್ ನಾನೆ ನಿನ್ನ ಕೇಳೋಣ ಅಂತ ಇದ್ದೆ ಎಲ್ಲೋ ಹೋಗಿ ಯಾರ್ ಕಂಪನಿ ಗೆ ವರ್ಕ್ ಮಾಡೊಬದಲು ನಮ್ ಫ್ಯಾಕ್ಟರಿ ಅಲ್ಲೇ ವರ್ಕ್ ಮಾಡಿದ್ರೆ, ನನಗು ಸಂತೋಷ ಆಗುತ್ತೆ ಫ್ಯಾಮಿಲಿ ಗು ಹೆಲ್ಪ್ ಆಗುತ್ತೆ ಅಂತ ಅನ್ಕೊಂಡು ಇದ್ದೆ. ಲಕ್ಕಿಲಿ ನೀನೇ ಬಂದು ಕೇಳಿದೆ ತುಂಬಾ ಥ್ಯಾಂಕ್ಸ್ ಕಣೋ ಅಂತ ಹೇಳಿದ್ಲು. ಥ್ಯಾಂಕ್ಸ್ ಎಲ್ಲಾ ಏನಕ್ಕೆ ಬಿಡಕ್ಕ ನಿನಗೆ ಏನೇ ಡೌಟ್ ಇದ್ರು ಮದನ್ ಶಿಲ್ಪಾ ನೀಲಾ ರೋಹಿಣಿ ತಾತಂದ್ರು ಇರ್ತಾರೆ ಕೇಳು, ನೀನು ಮೈಸೂರ್ ಗೆ ಬಂದಾಗ ಶಿಲ್ಪಾ ಅವರ ಮನೇಲಿ ಇಲ್ಲಾ ತಾತ ನ ಮನೇಲಿ ಇರಬಹುದು.

   ಮೀಟಿಂಗ್ ಗೆ ಏನಾದ್ರು ಹೋಗಬೇಕು ಅಂದ್ರೆ ಇಲ್ಲಾ ಬೆಂಗಳೂರು ಹೋಗಬೇಕು ಅಂದ್ರೆ ಹೊರಗಡೆ ಒಂದು ಕಾರ್ ಇದೆ. ಒಬ್ಬರು ps, ಒಬ್ಬರು ಲೇಡಿ ಡ್ರೈವರ್ ಒಬ್ಬರು ಲೇಡಿ ಸೆಕ್ಯೂರಿಟಿ ಇರ್ತಾರೆ. ನನಗೆ ಗೊತ್ತಿರೋ ಹಾಗೇ ನಿನಗೆ ಲೇಡಿ ಸೆಕ್ಯೂರಿಟಿ ಬೇಡ ಅನ್ನಿಸುತ್ತೆ. ಆದ್ರು ಏನಕ್ಕೆ ಇಟ್ಟಿದ್ದೀನಿ ಅಂದ್ರೆ, ನಿನ್ನ ಕರಾಟೆ ಕುಂಗ್ ಫು ನ ಸ್ವಲ್ಪ ದಿನ ಕಂಟ್ರೋಲ್ ಮಾಡ್ಕೋ ಅಂತ ಹೇಳ್ದೆ. ಶಿಲ್ಪಾ ಶ್ವೇತಾ ನ ನೋಡಿ ಶ್ವೇತಾ ನಿನಗೆ ಕರಾಟೆ ಕುಂಗ್ ಫು ಬರುತ್ತಾ ಅಂತ ಕೇಳಿದ್ಲು. ಶ್ವೇತಾ ನಗ್ತಾ, ಹ್ಮ್ ಬರುತ್ತೆ ನಿನ್ ಫ್ರೆಂಡ್ ಮಹಿ ನೇ ನನಗೆ ಗುರು ಅಂತ ಹೇಳಿದ್ಲು. ರೋಹಿಣಿ ಪರ್ವಾಗಿಲ್ಲ ಅಕ್ಕ ನೀನು ನಿನ್ ತಮ್ಮನಿಗೆ ಫ್ಯೂಚರ್ ಬಗ್ಗೆ ಹೇಳಿ ಕೊಟ್ರೆ. ನಿನ್ ತಮ್ಮ ನಿನಗೆ ರಕ್ಷಣೆ ಮಾಡಿಕೊಳ್ಳೋ ವಿದ್ಯೆ ನ ಹೇಳಿ ಕೊಟ್ಟಿದ್ದಾನೆ ಅಂತ ಹೇಳಿದ್ಲು. ಮಧ್ಯ ನಾನು ಮಾತಾಡ್ತಾ ಈ ಟಾಪಿಕ್ ನ ಇಲ್ಲಿಗೆ ಬಿಡಿ. ನಿಮಗೆ ಒಂದು ಮುಖ್ಯವಾದ ವಿಷಯ ಹೇಳೋಕೆ ನಿಮ್ಮನ್ನ ಇರೋಕೆ ಹೇಳ್ದೆ. ಎಲ್ಲರೂ ಸೀರಿಯಸ್ ಆದ್ರು. ನಾನು ಮತ್ತೆ ಮಾತಾಡ್ತಾ. ನೋಡಿ ನಾನ್ ಸ್ವಲ್ಪ ದಿನಗಳ ಕಾಲ ಹೊರಗೆ ಹೋಗ್ತಾ ಇದ್ದೀನಿ. ಬರೋದಕ್ಕೆ ಸ್ವಲ್ಪ ಲೇಟ್ ಆಗಬಹುದು. ಅದು ಯಾಕೆ ಏನು ಅಂತ ಸದ್ಯಕ್ಕೆ ಹೇಳೋಕೆ ಆಗಲ್ಲಾ. ಈ ವಿಷಯ ನ ಎಲ್ಲರ ಮುಂದೆ ಹೇಳಿದ್ರೆ ಸಾವಿರ ಪ್ರಶ್ನೆ ಕೇಳ್ತಾರೆ. ಅದಕ್ಕೆ ನಿಮಗೆ ಮಾತ್ರ ಹೇಳ್ತಾ ಇದ್ದೀನಿ. ನಾನು ದೂರ ಹೋದ್ರು ನಿಮ್ ಜೊತೆಗೆ ಕಾಂಟಾಕ್ಟ್ ಅಲ್ಲಿ ಇರ್ತೀನಿ. ಏನೇ ಸಿಚುಯೇಷನ್ ಇದ್ರು ನನಗೆ ಕಾಲ್ ಮಾಡಿ ನಾನು ಸಿಗ್ತೀನಿ. ಮದನ್ ಶಿಲ್ಪಾ ರೋಹಿಣಿ ನೀಲಾ. ಅಕಿರಾ ಶ್ವೇತಾ ಗೆ ಈ ಕೆಲಸ ಹೊಸದು ಸೋ ಅವರಿಗೆ ಪ್ರತಿಯೊಂದು ವಿಷಯ ನ ಅರ್ಥ ಮಾಡಿಸಿ ಹೇಳಿ ಅಂತ ಹೇಳ್ದೆ. ನಾಲಕ್ಕು ಜನ ಸರಿ ಅಂತ ಹೇಳಿದ್ರು. ಸರಿ ನಡೀರಿ ಎಲ್ಲರೂ ನಮಗೋಸ್ಕರ ಕಾಯ್ತಾ ಇರ್ತಾರೆ ಅಂತ ಹೇಳಿ ಎಲ್ಲರೂ ಲಂಚ್ ಮಾಡೋಕೆ ಹೋದ್ವಿ.  ಎಲ್ಲರೂ ಒಟ್ಟಿಗೆ ಲಂಚ್ ಮಾಡಿದ್ವಿ. ಎಲ್ಲರೂ ಹ್ಯಾಪಿ ಆಗಿ ಇದ್ರು. ಶಿಲ್ಪಾ ಅವರ ತಾತ ಇನ್ನು ಹ್ಯಾಪಿ ಆಗಿ ಇದ್ರು ಮಗಳು ಅಳಿಯ ಬಂದಿದ್ದಕ್ಕೆ. 

    ಎಲ್ಲರೂ ಮಾತಾಡ್ತಾ ಕೂತಿರೋವಾಗ ಮದನ್ ಬಂದು ಮಹಿ ನಿನ್ ಜೊತೆಗೆ ಸ್ವಲ್ಪ ಮಾತಾಡಬೇಕು ಅಂತ ಹೇಳಿದ. ಸರಿ ಅಂತ ಎದ್ದು ಅವನ ಜೊತೆಗೆ ಹೋದೆ. ಫ್ಯಾಕ್ಟರಿ ಯಿಂದ ಹೊರಗೆ ಬಂದು ಹೇಳು ಮದನ್ ಏನ್ ವಿಷಯ ಅಂತ ಕೇಳ್ದೆ. ಮದನ್ ನಗ್ತಾ ಏನಿಲ್ಲಾ ಮಹಿ ದಮ್ ಹೊಡಿಬೇಕು ಅಲ್ವಾ ಒಬ್ನೇ ಹೇಗೆ ಎಲ್ಲರ ಮುಂದೆ ಬರೋದು ಅಂತ ಹಾಗೇ ಹೇಳ್ದೆ ಅಂತ ಹೇಳಿ ಒಂದು ಸಿಗರೇಟ್ ನನಗೆ ಕೊಟ್ಟ. ಇಬ್ರು ಹಾಗೇ ಮಾತಾಡ್ತಾ ಸಿಗರೇಟ್ ಸೇದ್ತಾ ಇರೋವಾಗ ಶಿಲ್ಪಾ, ಅಕಿರಾ ನೀಲಾ ಮೂರು ಜನ ಅಲ್ಲಿಗೆ ಬಂದು. ಶಿಲ್ಪಾ ಮದನ್ ಸಿಗರೇಟ್ ಸೇದೋದನ್ನ ನೋಡಿ ಲೋ ಲೋ ನೀನು ಹಾಳಾಗೋದು ಅಲ್ಲದೆ ಮಹಿ ನ ಕೂಡ ಹಾಳು ಮಾಡ್ತಾ ಇದ್ದಿಯಾ ಅಂತ ಬೈಯ್ಯೋಕೆ ಶುರು ಮಾಡಿದ್ಲು. ಮದನ್ ಲೇ ಸ್ಟೇಟ್ಮೆಂಟ್ ನ ಚೇಂಜ್ ಮಾಡು ನನ್ನಿಂದ ಅವನು ಹಾಳಾಗಿಲ್ಲ, ಆಲ್ರೆಡಿ ಹಾಳಾಗಿದ್ದವನು ಬಂದು ನನ್ನ ಜೊತೆಗೆ ಸೇರ್ಕೊಂಡ ಅಂತ ಹೇಳಿದ. ನೀಲಾ ನನ್ನ ಕೈಲಿ ಇದ್ದಾ ಸಿಗರೇಟ್ ನ ನೋಡಿ ಎಷ್ಟನೇದು ಅಂತ ಕೇಳಿದ್ಲು , ಇದೆ ಮೊದಲನೇದು ಅಂತ ಹೇಳ್ದೆ. ನೀಲಾ ಬೆಳ್ಳಿಗೆ ಯಿಂದ ಫುಲ್ ಕಂಟ್ರೋಲ್ ಮಾಡ್ಕೊಂಡು ಇದ್ದಿಯಾ ಅಂತ ಅನ್ನಿಸುತ್ತೆ, ಆರಾಮಾಗಿ ಸೇದು ಅಂತ ಹೇಳಿದ್ಲು. ಅಕಿರಾ ನೀಲಾ ಹೇಳೋದನ್ನ ಕೇಳಿ ಲೇ ಸೇದಬೇಡ ಅಂತ ಹೇಳೋದು ಬಿಟ್ಟು ನೀನೇ ಸಪೋರ್ಟ್ ಮಾಡ್ತಾ ಇದ್ದಿಯಾ ಅಂತ ಕೇಳಿದ್ಲು. ಶಿಲ್ಪಾ ಹಾಗೇ ಕೇಳೇ ಅಂತ ಅವಳಿಗೆ ಸಪೋರ್ಟ್ ಆಗಿ ಬಂದ್ಲು. ನೀಲಾ ನಗ್ತಾ ಹಲೋ ಮೈ ಡಿಯರ್ ಸಿಸ್ಟರ್ಸ್, ಮಹಿ ಏನು ಅದೇ ಕೆಲಸದಲ್ಲಿ ಇಲ್ಲಾ. ಅಭ್ಯಾಸ ಇದ್ರು ಅದು ಕಂಟ್ರೋಲ್ ಅಲ್ಲಿ ಇದೆ, ಅದನ್ನ ನಾವು ಫುಲ್ ಕಂಟ್ರೋಲ್ ಮಾಡಬಾರದು, ಹುಡುಗರು ಸ್ಮೋಕಿಂಗ್ ಡ್ರಿಂಕಿಂಗ್ ನ ಕಂಟ್ರೋಲ್ ಅಲ್ಲಿ ಲಿಮಿಟ್ ಅಲ್ಲಿ ಇಟ್ಕೊಂಡು ಇದ್ದಾರೆ ಅಂದ್ರೆ ಸಂತೋಷ ಪಡಿ. ನೀವು ಫುಲ್ ಕಂಟ್ರೋಲ್ ಮಾಡೋಕೆ ಹೋದ್ರೆ ಅಷ್ಟೇ, ನಾವು ಒಂದು ಸರಿ ಬ್ಯೂಟಿ ಪಾರ್ಲರ್ ಗೆ ಹೋಗಿ ಮಾಡೋ ಬಿಲ್. ಅವರು ಸಿಗರೇಟ್ ಗೆ ಡ್ರಿಂಕ್ಸ್ ಗೆ ತಿಂಗಳು ಪೂರ್ತಿ ಮಾಡೋ ಬಿಲ್, ನಮ್ ಬಿಲ್ ಗಿಂತ ಕಮ್ಮಿ ಇರುತ್ತೆ. ಇರೋ ಲೆಕ್ಕಾ ನೋಡಿದ್ರೆ ನಾವೇ ಕಂಟ್ರೋಲ್ ಅಲ್ಲಿ ಇರಬೇಕು ಅಂತ ಹೇಳ್ತಾಳೆ. 

  ಶಿಲ್ಪಾ ಲೇ ನಾವು ಬ್ಯೂಟಿ ಪಾರ್ಲರ್ ಗೆ ಹೋಗೋದು ಅವರಿಗೆ ಚೆನ್ನಾಗಿ ಕಾಣಿಸೋಕೆ ತಾನೇ ಅಂತ ಹೇಳಿದ್ಲು.  ನೀಲಾ ನಗ್ತಾ ಅಕ್ಕ ಭಾವ ನಿನ್ನ ಮೂಗಲ್ಲಿ ತುಪ್ಪ ಸುರಿಸಿಕೊಂಡು ಕೋತಿ ತರ ಆಡ್ತಾ ಇದ್ದಾ ವಯಸ್ಸಿನಿಂದ ಇಲ್ಲಿ ತನಕ ನೋಡ್ಕೊಂಡು ಬಂದಿದ್ದಾನೆ.  ನೀನು ತಿಂಗಳಿಗೆ ಇಲ್ಲಾ ಅಂದ್ರು 2 ಸರಿ ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೀಯ, ಅದ್ರೆ ಭಾವ ನಿನ್ನ ನೋಡಿದ ಪ್ರತಿಸರಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದಿಯಾ ಅಂತ ಹೇಳ್ತಾನೆ. ಅಕ್ಕ 99% ಹುಡುಗರಿಗೆ ಅವನ ಹುಡುಗಿ ನ್ಯಾಚುರಲ್ ಆಗಿ ಕಾಣಿಸಿದ್ರೇನೆ ತುಂಬಾ ಇಷ್ಟ ಪಡ್ತಾರೆ. ಅದು ಗೊತ್ತಿಲ್ದೆ ನಾವೇ ಸುಮ್ನೆ ಬ್ಯೂಟಿ ಪಾರ್ಲರ್ ಅದು ಇದು ಅಂತ ಇರ್ತೀವಿ. ಶಿಲ್ಪಾ ಕೈ ಮುಗಿದು ಅಮ್ಮ ತಾಯಿ ನಿಲ್ಲಿಸು ಸಾಕು ಬುದ್ದಿ ಇಲ್ಲದೆ ಹೇಳಿ ಬಿಟ್ಟೆ ಅಂತ ಹೇಳಿದ್ಲು. ಮದನ್ ಜೋರಾಗಿ ನಗ್ತಾ ಥ್ಯಾಂಕ್ಸ್ ಕಣೆ ನೀಲಾ ನಾನ್ ಮಾಡದೇ ಇರೋ ಕೆಲಸ ನ ನೀನು ಮಾಡಿ ನಿಮ್ ಅಕ್ಕ ನ ಬಾಯಿ ಮುಚ್ಚಿಸಿದೆ ನನಗಂತೂ ತುಂಬಾ ಖುಷಿ ಆಗ್ತಾ ಇದೆ ಅಂತ ಹೇಳ್ತನೇ. ಶಿಲ್ಪಾ ಮದನ್ ಕಡೆಗೆ ಕೋಪದಿಂದ ನೋಡ್ತಾ ನಡಿ ಮಗನೆ ನಿನ್ನ ಎಲ್ಲಿ ವಿಚಾರಿಸಿ ಕೊಳ್ಳಬೇಕೋ ಅಲ್ಲೇ ವಿಚಾರಿಸಿ ಕೊಳ್ತೀನಿ ಅಂತ ಹೇಳಿದ್ಲು. ಮದನ್ ನಗ್ತಾ ಇದ್ದವನು ಸೈಲೆಂಟ್ ಶಿಲ್ಪಾ ಮಾತಿಗೆ.  ಅಷ್ಟ್ರಲ್ಲಿ ಶಿಲ್ಪಾ ಮೊಬೈಲ್ ರಿಂಗ್ ಆಯ್ತು ಶಿಲ್ಪಾ ಮೊಬೈಲ್ ನೋಡಿ ಲೋ ಅಪ್ಪ ಕಾಲ್ ಬನ್ನಿ ಹೋಗೋಣ ಅಂತ ಹೇಳಿದ್ಲು. ನೀಲಾ ಅಕ್ಕ ನೀವು ಹೋಗಿ ನಾವು ಆಮೇಲೆ ಬರ್ತೀವಿ ಅಂತ ಹೇಳಿ ಅವರಿಬ್ಬರನ್ನ ಕಳಿಸಿ ಬಿಟ್ಟಳು. 

     ಅಕಿರಾ ನೀಲಾ ಇಬ್ಬರು ನನ್ನ ಕೈ ಇಡ್ಕೊಂಡು ಬಾ ಕುತ್ಕೋ ಅಂತ ಹೇಳಿದ್ರು. ಅಲ್ಲೇ ಇದ್ದಾ ಬೆಂಚ್ ಮೇಲೆ ಕುತ್ಕೊಂಡೆ. ಒಂದು ಕಡೆಗೆ ಅಕಿರಾ ಒಂದು ಕಡೆಗೆ ನೀಲಾ ಕೂತ್ಕೊಂಡು ಅಕಿರಾ ಮಾತಾಡ್ತಾ. ಮಹಿ ಯಾವಾಗ ಹೊರಡ್ತೀಯ ಅಂತ ಕೇಳಿದ್ಲು. ಅಕಿರಾ ಕಡೆಗೆ ನೋಡ್ತಾ ನಾಳೆ ನಿನ್ನ ಬೆಂಗಳೂರಲ್ಲಿ ಬಿಟ್ಟು  ಹೊರಡ್ತೀನೀ ಅಂತ ಹೇಳ್ದೆ. ನೀಲಾ  ನನ್ನ ಕೈ ಇಡ್ಕೊಂಡು ಭುಜದ ಮೇಲೆ ತಲೆ ಇಟ್ಟು ಮತ್ತೆ ನಿನ್ನ ನೋಡೋದು ಯಾವಾಗ ಭಾವ ಅಂತ ಕೇಳಿದ್ಲು. ನಾನು ಅವಳ ಕಡೆಗೆ ನೋಡ್ತಾ ಲೇ ನಾನೇನು ದೇಶಾಂತರ ಹೋಗ್ತಾ ಇದ್ದೀನ? ಕೆಲಸದ ಮೇಲೆ ಹೊರಗೆ ಹೋಗ್ತಾ ಇದ್ದೀನಿ. ದಿನ ಕಾಲ್ ಮೆಸೇಜ್ ಗೆ ಸಿಗ್ತೀನಿ ಅಂತ ಹೇಳ್ದೆ. ಅಕಿರಾ ಅದು ಆಗಲ್ವೋ ನಿನ್ನ ನೋಡದೆ ಹೇಗೆ ಇರೋದು ಅಂತ ಕೇಳಿದ್ಲು. ನೋಡದೆ ಏನಕ್ಕೆ ಇರ್ತೀರ ಫ್ರೀ ಆದಾಗ ನಾನೆ ವಿಡಿಯೋ ಕಾಲ್ ಮಾಡ್ತೀನಿ ಅಲ್ವಾ ಅಂತ ಹೇಳ್ದೆ.  ನೀಲಾ ಭಾವ ನೋಡದೆ ಅಂತ ಅಂದ್ರೆ ಈ ರೀತಿ ನಿನ್ನ ಜೊತೆಗೆ ಇರೋಕೆ ಆಗಲ್ಲಾ ಅಲ್ವಾ ಅಂತ ಅರ್ಥ ಆಯ್ತಾ ಅಂತ ಹೇಳಿದ್ಲು. ಸಾರೀ ಈ ವಿಷಯ ದಲ್ಲಿ ಮಾತ್ರ ನಿಮ್ ಹತ್ತಿರ ಸಾರೀ ಕೇಳ್ತೀನಿ ಅಂತ ಹೇಳ್ದೆ. ಅಕಿರಾ ಮಿಸ್ ಮಾಡ್ಕೋತಿನೋ ಅಂತ ಸ್ವಲ್ಪ ನೋವಿನಿಂದ ಹೇಳಿದ್ಲು. ನೀಲಾ ಕೂಡ ನಾನು ಕೂಡ ತುಂಬಾ ಮಿಸ್ ಮಾಡ್ಕೋತೀನಿ ಭಾವ ಅಂತ ಸ್ವಲ್ಪ ನೋವಿನಿಂದ ಹೇಳಿದ್ಲು. ಅವರಿಗೆ ಏನ್ ಹೇಳಬೇಕೋ ನನಗೆ ಅರ್ಥ ಆಗಲಿಲ್ಲ. ಸ್ವಲ್ಪ ಸಮಯ ಮೂರು ಜನ ಹಾಗೇ ಇದ್ವಿ. ಮೊಬೈಲ್ ರಿಂಗ್ ಅದ ಸದ್ದಿಗೆ ಮೊಬೈಲ್ ತೆಗೆದು ನೋಡಿದೆ. ತಾತ ಕಾಲ್. ಪಿಕ್ ಮಾಡಿ ಮಾತಾಡಿ ನಡೀರಿ ಅಂತ ಹೇಳಿ ಮೂರು ಜನ ಫ್ಯಾಕ್ಟರಿ ಒಳಗೆ ಹೋದ್ವಿ.  

     ತಾತ ಅಜ್ಜಿ ಎಲ್ಲರೂ ನಾವು ಹೊರಡ್ತೀವಿ ಅಂತ ಹೇಳಿದ್ರು. ಅಪ್ಪ ಅಮ್ಮನಿಗೆ ಶ್ವೇತಾ ಸ್ವಲ್ಪ ದಿನ ಶಿಲ್ಪಾ ಅವರ ತಾತನ ಮನೇಲಿ ಇರ್ತಾಳೆ ಅಂತ ಹೇಳ್ದೆ. ಅವರು ಸರಿ ಅಂತ ಹೇಳಿದ್ರು. ಅಕಿರಾ ನಾಳೆ ನಾನೆ ಬೆಂಗಳೂರು ಕರ್ಕೊಂಡು ಬರ್ತೀನಿ ಅಂತ ಅವರ ಅಪ್ಪ ಅಮ್ಮನಿಗೆ ಹೇಳ್ದೆ. ರೋಹಿಣಿ ತಾತ ಎಲ್ಲರೂ ಇದ್ದಿವಿ ಅಲ್ವಾ ಒಂದು ಫ್ಯಾಮಿಲಿ ಟ್ರಿಪ್ ಹೋಗೋಣ್ವಾ ಅಂತ ಕೇಳಿದ್ಲು.  ತಾತ ಇನ್ನೊಂದು ಸರಿ ಪ್ಲಾನ್ ಮಾಡ್ಕೊಂಡು ಹೋಗೋಣ ಈಗ ಎಲ್ಲರೂ ಅವರವರ ಕೆಲಸ ಬಿಟ್ಟು ಬಂದಿದ್ದಾರೆ ಈಗ ಪ್ಲಾನ್ ಟ್ರಿಪ್ ಅಂತ ಅಂದ್ರೆ ಅವರ ಕೆಲಸಕ್ಕೂ ತೊಂದರೆ ಆಗುತ್ತೆ ಅಂತ ಹೇಳ್ತಾರೆ. ರೋಹಿಣಿ ಸರಿ ತಾತ ನಿನ್ ಹೇಗೆ ಹೇಳಿದ್ರೆ ಹಾಗೇ ಅಂತ ಸುಮ್ಮನೆ ಆಗ್ತಾಳೆ. ಎಲ್ಲರೂ ವಾಪಸ್ಸು ಮನೆ ಕಡೆಗೆ ಹೋಗ್ತಾರೆ. ಮದನ್ ಶಿಲ್ಪಾ ಬೈ ಹೇಳಿ ಫ್ಯಾಕ್ಟರಿ ಕಡೆಗೆ ಹೋಗ್ತಾರೆ. ನಾನು ಶ್ವೇತಾ ಅಕಿರಾ ನೀಲಾ ರೋಹಿಣಿ ಫ್ಯಾಕ್ಟರಿ ಒಳಗೆ ಹೋಗ್ತಾ. ಅಕ್ಕ ಬಾ ನಿನಗೆ ಫ್ಯಾಕ್ಟರಿ ತೋರಿಸ್ತಿನಿ ಅಂತ ಹೇಳಿದೆ. ರೋಹಿಣಿ ಅಣ್ಣ ಅಕ್ಕ ನ ನಾನು ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ಲು. ಶ್ವೇತಾ ಕೂಡ ನಾನು ರೋಹಿಣಿ ಜೊತೆಗೆ ಹೋಗ್ತೀನಿ ಅಂತ ಹೇಳಿ ಹೊರಟು ಹೋದಳು.

     ಮೂರು ಜನ ಮಾತಾಡಿಕೊಂಡು ನನ್ನ ಆಫೀಸ್ ರೂಮ್ ಗೆ ಹೋದ್ವಿ. ಸ್ವಲ್ಪ ಸಮಯದ ನಂತರ ರೋಹಿಣಿ ಶ್ವೇತಾ ಇಬ್ಬರು ಬಂದರು ಆಫೀಸ್ ರೂಮ್ ಒಳಗೆ. ನಂತರ ರೋಹಿಣಿ ನೀಲಾ ಅವರ ವರ್ಕ್ ಮಾಡೋದಕ್ಕೆ ಅವರ ಕ್ಯಾಬಿನ್ ಗೆ ಹೋದರು. ನಾನು ಶ್ವೇತಾ ಗೆ ವರ್ಕ್ ಬಗ್ಗೆ ಹೇಳ್ತಾ ಕೂತೆ ಅಕಿರಾ ಕೂಡ ನಾನು ಹೇಳೋದನ್ನ ಕೇಳ್ತಾ ಕುತ್ಕೊಂಡ್ಲು. ಸಂಜೆ ಅಕಿರಾ ನೀಲಾ ರೋಹಿಣಿ ಶ್ವೇತಾ ಗೆ ನೀವು ಹೋಗಿ ನಾನು ಬರ್ತೀನಿ ಅಂತ ಹೇಳಿ ಮನೆಗೆ ಕಳಿಸಿದೆ.  ಪೆಂಡಿಂಗ್ ಇದ್ದಾ ವರ್ಕ್ ನ ಮುಗಿಸಿಕೊಂಡು ಮನೆಗೆ ಹೋದೆ. ಫ್ರೆಶ್ ಅಪ್ ಆಗಿ ಮನೆಯವರ ಜೊತೆಗೆ ಮಾತಾಡ್ತಾ ನೈಟ್ ಡಿನ್ನರ್ ಮುಗಿಸಿಕೊಂಡು ರೂಮ್ ಹೋಗಿ ನಿದ್ದೆ ಮಾಡಿದೆ. ಬೆಳಿಗ್ಗೆ ಎದ್ದು ರೆಡಿ ಆಗಿ ನನ್ನ ಲಗೇಜ್ ನ ತೆಗೆದುಕೊಂಡು ಕಾರ್ ಅಲ್ಲಿ ಇಟ್ಟು ಮನೆ ಒಳಗೆ ಹೋದೆ ಅಕಿರಾ ಕೂಡ ರೆಡಿ ಆಗಿ ಹಾಲ್ ಅಲ್ಲಿ ಕೂತಿದ್ಲು. ತಿಂಡಿ ತಿಂದು ಮನೆಯವರ ಜೊತೆಗೆ ಮಾತಾಡಿ ಎಲ್ಲರಿಗೂ ಬೈ ಹೇಳಿ ನಾನು ಅಕಿರಾ ಬೆಂಗಳೂರು ಬಂದ್ವಿ. ಅಕಿರಾ ನ ರೆಡಿ ಆಗಿ ಇರು ಅಂತ ಹೇಳಿ ಮನೆಗೆ ಬಂದೆ ಅಪ್ಪ ಅಮ್ಮ ನ ಜೊತೆಗೆ ಮಾತಾಡಿ ಅವರಿಗೆ ಹೇಳಿ. ಮತ್ತೆ ಅಕಿರಾ ಮನೆ ಹತ್ತಿರ ಬಂದು ಅಕಿರಾ ಕರ್ಕೊಂಡು ಶಬರಿ ಶಾಪಿಂಗ್ ಮಾಲ್ ಗೆ ಹೋದ್ವಿ. ಅಕಿರಾ ನ ಮತ್ತೆ ಸ್ಟಾಫ್ ಗೆ ಪರಿಚಯ ಮಾಡಿಸಿ ವರ್ಕ್ ಬಗ್ಗೆ ಎಲ್ಲಾ ತಿಳಿಸಿ ಕೊಟ್ಟು. ಜೆನ್ನಿ ಗೆ ನಾನು ಬರೋತನಕ ಯಾವುದೇ ಪ್ರಾಬ್ಲಮ್ ಬರದೇ ಇರೋ ಹಾಗೇ ನೋಡ್ಕೋಬೇಕು. ಅಕಿರಾಗೆ ಗೊತ್ತಿರದೆ ಇರೋ ವಿಷಯ ನ ಬಿಡಿಸಿ ಹೇಳು. ಏನೇ ಪ್ರಾಬ್ಲಮ್ ಇದ್ರು ನನಗೆ ಕಾಲ್ ಮಾಡಿ ಹೇಳು ಅಂತ ಹೇಳ್ದೆ. ಅಕಿರಾ ಜೊತೆಗೆ ಮಧ್ಯಾಹ್ನ ಲಂಚ್ ಮಾಡಿ ಮತ್ತೆ ಮಾಲ್ ಗೆ ಹೋಗಿ ಅಕಿರಾ ಗೆ ವರ್ಕ್ ಬಗ್ಗೆ ಹೇಳಿಕೊಟ್ಟು ಸಂಜೆ ಕಾರ್ ಅಲ್ಲಿ ಮನೆಗೆ ಕರ್ಕೊಂಡು ಬಂದೆ  . ಅಕಿರಾ ಅವರ ಅಪ್ಪ ಅಮ್ಮ ನ ಜೊತೆಗೆ ಸ್ವಲ್ಪ ಹೊತ್ತು ಮಾತಾಡಿ. ನಂತರ ಅವರಿಗೆ ಬೈ ಹೇಳಿ. ಹೊರಗೆ ಬಂದೆ ಅಕಿರಾ ಕೂಡ ನನ್ನ ಜೊತೆಗೆ ಹೊರಗೆ ಬಂದು ನನ್ನ ಅಪ್ಪಿಕೊಂಡು ಹುಷಾರು ದಿನ ಕಾಲ್ ಮಾಡ್ತಾ ಇರ್ತೀನಿ ಅಂತ ಹೇಳಿದ್ಲು. ಅಕಿರಾ ಮುಖ ನ ನೋಡಿದೆ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತ್ತು. ಅವಳ ಹಣೆಮೇಲೆ ಕಿಸ್ ಮಾಡಿ ನನ್ನ ಬಗ್ಗೆ ಯೋಚ್ನೆ ಬಿಡು ವರ್ಕ್ ಮಾಡಿಕೊಂಡು ಆರಾಮಾಗಿ ಇರು, ಅಂತ ಹೇಳಿ ಅವಳಿಗೆ ಬೈ ಹೇಳಿ ಕಾರ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋದೆ.

****************************************