Mahi - 30 in Kannada Love Stories by S Pr books and stories PDF | ಮಹಿ - 30

The Author
Featured Books
Categories
Share

ಮಹಿ - 30

   ಶೀತಲ್ ಮಹಿ ಹೇಳಿದ ವಿಷಯ ನ ಕೇಳಿ ಒಂದು ಕಡೆ ಭಯ ಬಿದ್ದು ನೇರವಾಗಿ ಅ ಕಂಪನಿ ಯ ಡೈರೆಕ್ಟರ್ ಹತ್ತಿರ ಹೋಗ್ತಾಳೆ. ಡೈರೆಕ್ಟರ್ ಕ್ಯಾಬಿನ್ ಒಳಗೆ ಪರ್ಮಿಷನ್ ಇಲ್ಲದೆ ಡೋರ್ ಓಪನ್ ಮಾಡಿಕೊಂಡು ಹೋಗ್ತಾಳೆ. ಶೀತಲ್ ಬಂದಿದ್ದನ್ನ ನೋಡಿ ಕಂಪನಿ ಡೈರೆಕ್ಟರ್ ಶೀತಲ್ ನ ನೋಡ್ತಾನೆ ಅವಳ ಮುಖದಲ್ಲಿ ಗಾಬರಿ ಭಯ ನ ನೋಡಿ ಶೀತಲ್ ಏನಾಯ್ತು ಯಾಕ್ ಇಷ್ಟು ಗಾಬರಿ ಆಗಿದ್ದೀಯಾ ಅಂತ ಕೇಳ್ತಾಳೆ. ಅಲ್ಲೇ ಇದ್ದಾ ಇನ್ನೊಬ್ಬ ವ್ಯಕ್ತಿ ಅದೇ ಮಹಿ ಹೊರಟು ಹೋಗು ಅಂತ ಹೇಳಿದ ವ್ಯಕ್ತಿ ಶೀತಲ್ ನ ನೋಡಿ ಶೀತಲ್ ಏನಾಯ್ತು ಅಂತ ಕೇಳ್ತಾಳೆ. ಶೀತಲ್ ತೊದಳುತ್ತ ಸರ್ ಈ ಕಂಪನಿ ಆಲ್ಮೋಸ್ಟ್ ಕ್ಲೋಸ್ ಆಗೋ ಸ್ಥಿತಿಗೆ ಬಂದು ನಿಂತಿದೆ.  ಪ್ಲೀಸ್ ಏನಾದ್ರು ಮಾಡಿ ಅಂತ ಕೇಳ್ತಾಳೆ. ಕಂಪನಿ ಡೈರೆಕ್ಟರ್ ಅಶೋಕ್ ವರ್ಮಾ, ವಾಟ್ ಶೀತಲ್ ಏನ್ ಹೇಳ್ತಾ ಇದ್ದಿಯಾ ಅಂತ ಕೂತಿದ್ದವರು ಎದ್ದು ನಿಂತು ಕೇಳಿದ್ರು. ಅಶೋಕ್ ವರ್ಮಾ ಮಗಳು ಕೃತಿ ವರ್ಮಾ ( ಮಹಿ ನ ಹೊರಟು ಹೋಗು ಅಂತ ಹೇಳಿದವಳು ) ಶೀತಲ್ ಏನ್ ಹೇಳ್ತಾ ಇದ್ದಿಯಾ ಸರಿಯಾಗಿ ಹೇಳು ಅಂತ ಹೇಳ್ತಾಳೆ. ಮೇಡಂ ಅದು ನೀವು ಮಹಿ ನ ಈ ಕಂಪನಿ ಎಕ್ಸ್ ಎಂಪ್ಲೋಯ್ ಅಂತ ಅವರ ಜೊತೆಗೆ ಮೀಟಿಂಗ್ ಕ್ಯಾನ್ಸಲ್ ಮಾಡಿ ಅವರನ್ನ ಕಳಿಸಿ ಬಿಟ್ಟು ಅವರ ಕಂಪನಿ ಬಾಸ್ ಹತ್ತಿರ ವಿಷಯ ಹೇಳಿ ಮತ್ತೆ ಮೀಟಿಂಗ್ ಗೆ ಅಪ್ಪೋಯಿಂಟ್ಮೆಂಟ್ ತಗೋಳಿ ಅಂತ ಹೇಳಿದ್ರಿ ಅಲ್ವಾ. ಕೃತಿ ಹೌದು ಹೇಳಿದೆ ಅದಕ್ಕೂ ಇದಕ್ಕೂ ಏನ್ ಸಂಬಂಧ ಅಂತ ಕೇಳಿದ್ರು.  ಮೇಡಂ  ಅ ಕಂಪನಿ ಬಾಸ್ ಹತ್ತಿರ ಮಾತಾಡೋಣ ಅಂತ ಡೈರೆಕ್ಟ್ ಅವರ ps ಗೆ ಕಾಲ್ ಮಾಡಿದೆ. ಬಟ್ ಕಾಲ್ ಪಿಕ್ ಮಾತಾಡಿದ್ದು ಬೇರೆ ಯಾರು ಅಲ್ಲ ಮಹಿ ನೇ ಅಂತ ಹೇಳಿದ್ಲು. ಕೃತಿ ಶಾಕ್ ಆಗಿ ವಾಟ್ ಏನ್ ಹೇಳ್ತಾ ಇದ್ದಿಯಾ ನೀನು ಅಂತ ಕೇಳಿದ್ಲು. ಹೌದು ಮೇಡಂ ನನಗು ಮೊದಲು ಅನುಮಾನ ಬಂತು ಬಟ್ ಅವರು ಮಾತಾಡಿದ ರೀತಿ ನೋಡಿ ನನಗೆ ತುಂಬಾ ಭಯ ಆಯ್ತು. ಇನ್ಮುಂದೆ ಭೂಪತಿ ಗ್ರೂಪ್ ಆಫ್ ಕಂಪನಿ ಕಡೆಯಿಂದ ನಮಗೆ ಯಾವುದೇ ಪ್ರಾಜೆಕ್ಟ್ ಸಿಗೋದಿಲ್ಲ ಹಾಗೇ ನಮ್ ಕಂಪನಿ ನ ಬ್ಲಾಕ್ ಲಿಸ್ಟ್ ಮಾಡೋದು ಅಲ್ಲದೆ ಈಗ ಅವರು ನಮಗೆ ಕೊಟ್ಟಿರೋ ಅಷ್ಟು ಪ್ರಾಜೆಕ್ಟ್ ನ ಡ್ರಾಪ್ ಮಾಡ್ತಾರೆ ಅಂತ ಹೇಳಿದ್ರು. ಕೃತಿ ಇನ್ನು ಶಾಕ್ ಆಗಿ ವಾಟ್ ಶೀತಲ್ ಏನ್ ಹೇಳ್ತಾ ಇದ್ದಿಯಾ ನೀನು. ನಮ್ ಕಂಪನಿ ಅಲ್ಲಿ ವರ್ಕ್ ಮಾಡ್ತಾ ಇದ್ದಾ ಲೊ ಲೆವೆಲ್ ಎಕ್ಸ್ ಎಂಪ್ಲೋಯ್ ನಮ್ ಕಂಪನಿ ನೇ ಕ್ಲೋಸ್ ಮಾಡೋ ಅಷ್ಟು ಪೊಸಿಷನ್ ಅಲ್ಲಿ ಇದ್ದಾನ, ನಿನಗೆ ತಲೆ ಏನಾದ್ರು ಕೆಟ್ಟಿದೆಯಾ. ನಾನ್ ಹೇಳಿದ್ದು ಅ ಕಂಪನಿ ಬಾಸ್ ಗೆ ಕಾಲ್ ಮಾಡು ಅಂತ ನೀನು ಕನ್ಫ್ಯೂಸ್ ಆಗಿ ಮಹಿ ಗೆ ಕಾಲ್ ಮಾಡಿರ್ತೀಯ ಒಂದು ಸರಿ ಚೆಕ್ ಮಾಡಿ ನೋಡಿ ಅಂತ ಹೇಳ್ತಾಳೆ. ಇಲ್ಲಾ ಮೇಡಂ ನಾನು ಮೇಲ್ ಕಂಪನಿ ವೆಬ್ ಸೈಟ್ ಎಲ್ಲಾ ಕಡೆ ನೋಡಿ ಚೆಕ್ ಮಾಡಿ ಕಾಲ್ ಮಾಡಿದ ನಂಬರ್ ನೋಡಿದೆ ಒಂದೇ ನಂಬರ್ ಅಂತ ಹೇಳಿದ್ಲು.

     ಕೃತಿ ವಾಟ್ ಲೆಟ್ಸ್ ಮೀ ಚೆಕ್ ಅಂತ ಹೇಳಿ ಲ್ಯಾಪ್ ಕಡೆಗೆ ನೋಡ್ತಾಳೆ. ಶೀತಲ್ ತೊದಲುತ್ತ ಮೇಡಂ ಇನ್ನೊಂದು ಇಂಪಾರ್ಟೆಂಟ್ ವಿಷಯ. ಭೂಪತಿ ಗ್ರೂಪ್ ಆಫ್ ಕಂಪನಿಯ ಫೌಂಡರ್ ಬಂದು ರಘುನಂದನ್ ಭೂಪತಿ ರಾವ್ ಮತ್ತೆ ceo ಬಂದು ಮಹೇಂದ್ರ ಭೂಪತಿ ರಾವ್. ಇವತ್ತು ಮೀಟಿಂಗ್ ಗೆ ಬಂದಿದ್ದು ಮಹಿ ಅಂತ ಹೇಳ್ತಾಳೆ. ಕೃತಿ ಅ ವಿಷಯ ಕೇಳಿ ಶಾಕ್ ಆಗ್ತಾಳೆ. ವಾಟ್ ಶೀತಲ್ ಏನ್ ಹೇಳ್ತಾ ಇದ್ದಿಯಾ ಅಂತ ಕೇಳ್ತಾಳೆ. ಹೌದು ಮೇಡಂ ಶೀತಲ್ ಹೇಳ್ತಾ ಇರೋದು ನಿಜ ಅಂತ ಹೇಳ್ತಾ ಒಬ್ಬ ವ್ಯಕ್ತಿ ಬರ್ತಾನೇ. ಕೃತಿ ಅ ವ್ಯಕ್ತಿ ಕಡೆಗೆ ನೋಡ್ತಾಳೆ. ಅ ವ್ಯಕ್ತಿ ಬೇರೆ ಯಾರು ಅಲ್ಲ. ಮ್ಯಾನೇಜರ್ ಮುಕುಂದ . ಕೃತಿ ಅವರ ಕಡೆಗೆ ನೋಡಿ ಅಂಕಲ್ ಏನ್ ಹೇಳ್ತಾ ಇದ್ದೀರಾ ನೀವು ಅಂತ ಕೇಳ್ತಾಳೆ. ಹೌದಮ್ಮ ಕೃತಿ ಮಹಿ ಪೂರ್ತಿ ಹೆಸರು ಮಹೇಂದ್ರ ಭೂಪತಿ. ಈ ವಿಷಯ ಕೇವಲ ನನಗೆ ಒಬ್ಬನಿಗೆ ಗೊತ್ತು. ಬಟ್ ಈ ವಿಷಯ ನ ಯಾರಿಗೂ ಹೇಳಬಾರ್ದು ಅಂತ ನನ್ನ ಹತ್ತಿರ ಪ್ರಾಮಿಸ್ ತಂಗೊಂಡು ಇದ್ದಾ.  ಬೆಳಿಗ್ಗೆ ನೀವು ಅ ವಿನೋದ್ ಮತ್ತೆ ಅವರ ತಂದೆ ಮಾತನ್ನ ಕೇಳಿ ಅವನಿಗೆ ಅವಮಾನ ಮಾಡಿ ಕಳಿಸಿ ಬಿಟ್ರಿ. ಬಟ್ ನಿಮಗೆ ಗೊತ್ತಿಲದ ವಿಷಯ ಇನ್ನೊಂದು ಏನು ಅಂದ್ರೆ ಅ ವಿನೋದ್ ಕ್ಯಾರೆಕ್ಟರ್ ಸರಿ ಇಲ್ಲಾ. ಇದನ್ನ ಹೇಳೋಣ ಅಂತ ಅಂದ್ರೆ ಅವರ ತಂದೆ ಬೋರ್ಡ್ ಆಫ್ ಡೈರೆಕ್ಟರ್ಸ್ ಅಲ್ಲಿ ಒಬ್ರು.  ಮಹಿ ಜಾಬ್ ಹೋಗೋಕೆ ಕಾರಣ ಅವರೇ. ಅವನು ಜಾಬ್ ಬಿಟ್ಟು ಹೋದಮೇಲೆ ಅ ವಿನೋದ್ ಅಕಿರಾ ಹತ್ತಿರ ತುಂಬಾ ತಪ್ಪಾಗಿ ನಡ್ಕೊಳ್ಳೋಕೆ ಶುರು ಮಾಡಿದ, ಎಷ್ಟರ ಮಟ್ಟಿಗೆ ಅಂದ್ರೆ ಆಫೀಸ್ ಅಲ್ಲಿ ವರ್ಕ್ ಮಾಡೋ ಅಷ್ಟು ಜನ ಅವಳ ಕ್ಯಾರೆಕ್ಟರ್ ಬಗ್ಗೆ ತಪ್ಪಾಗಿ ಮಾತಾಡಿಕೊಳ್ಳೋ ಅಷ್ಟು. ಮಹಿ ಇಲ್ಲಿಗೆ ವರ್ಕ್ ಮಾಡೋಕೆ ಬಂದಿದ್ದೆ ಅವಳಿಗೋಸ್ಕರ ಅಷ್ಟು ಇಷ್ಟ ಅಕಿರಾ ಅಂದ್ರೆ ಅವನಿಗೆ. ಅವಳಿಗೋಸ್ಕರ ಅವನ ಅಸ್ತಿ ಅಂತಸ್ತು ಎಲ್ಲಾ ಬಿಟ್ಟು ಇಲ್ಲಿ ವರ್ಕ್ ಮಾಡೋಕೆ ನಿಂತ. ಎಷ್ಟೋ ಸರಿ ಅವನನ್ನ ಅವಮಾನ ಮಾಡಿದ್ರು ಅದ್ರೆ ಅದನ್ನ ಯಾವತ್ತೂ ಮನಸ್ಸಿಗೆ ತಗೊಂಡು ಇಲ್ಲಾ. ಬಟ್ ಅವನು ಇವತ್ತು ಇಷ್ಟು ರಿಯಾಕ್ಟ್ ಆಗೋಕೆ ಕಾರಣ ಅಕಿರಾ ಗೆ ಅದ ಅವಮಾನ ಮತ್ತೆ ನೀವು ಅವನಿಗೆ ಮಾಡಿದ ಅವಮಾನ. ಅದಕ್ಕೆ ಈಗ ಈ ಕಂಪನಿಗೆ ಈ ಪ್ರಾಬ್ಲಮ್ ಬಂದಿರೋದು. ತಗೋಳಿ ಇದು ನನ್ನ ರಿಸೈನ್ ಲೆಟರ್ ಅಂತ ಹೇಳಿ ಟೇಬಲ್ ಮೇಲೆ ಇಟ್ಟು ಹೊರಟು ಹೋದ. ಶೀತಲ್ ಕೂಡ ಮೇಡಂ ಇದು ನನ್ನ ರಿಸೈನ್ ಲೆಟರ್ ಅಂತ ಹೇಳಿ ಟೇಬಲ್ ಮೇಲೆ ಇಟ್ಟು ಹೊರಟು ಹೋದಳು. 

     ಕೃತಿ ಅವರ ಅಪ್ಪನ ಕಡೆಗೆ ನೋಡ್ತಾಳೆ. ಅಶೋಕ್ ವರ್ಮಾ ಚೇರ್ ಮೇಲೆ ಕೂತು ತಲೆ ಮೇಲೆ ಕೈ ಇಟ್ಕೊಂಡು ಕೂತಿರೋದನ್ನ ನೋಡಿ ಅಪ್ಪ ಅಂತ ಕರೀತಾಳೆ. ಅಶೋಕ್ ವರ್ಮಾ ಕೋಪದಿಂದ ನನ್ನ ಅಪ್ಪ ಅಂತ ಕರಿಬೇಡ  ಇಷ್ಟು ವರ್ಷದಿಂದ ಹಗಲು ರಾತ್ರಿ ಅನ್ನದೆ ಕಷ್ಟ ಪಟ್ಟು ಈ ಕಂಪನಿ ನ ಕಟ್ಟಿದೆ ಅದನ್ನ ನೀನು ಒಂದೇ ದಿನದಲ್ಲಿ ನೆಲಸಮ ಮಾಡಿ ಬಿಟ್ಟೆ. ಈಗ ಸಂತೋಷ ಆಗ್ತಾ ಇದೆಯಾ. ಮಗಳು ಅಂತ ತಂದು ತಲೆ ಮೇಲೆ ಕೂರಿಸಿಕೊಂಡೆ ಅಲ್ವಾ ನನಗೆ ಆಗಬೇಕಿತ್ತು. ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಹತ್ತಿ ಬಂದಿದ್ರೆ ಗೊತ್ತಾಗಿ ಇರೋದು ಈ ಪೊಸಿಷನ್ ಗೆ ಬರೋಕೆ ಎಷ್ಟು ಕಷ್ಟ ಅಂತ. ಯಾರು ಏನು ಅಂತ ತಿಳ್ಕೊಳ್ದೆ ಅವಮಾನ ಮಾಡಿ ಕಳಿಸಿದೆ ಅಲ್ವಾ ನಿನಗೆ ಸ್ವಲ್ಪ ಆದ್ರು ಬುದ್ದಿ ಇದೆಯಾ. ನಾನ್ ನಿನಗೆ ಅಷ್ಟು ಸರಿ ಹೇಳಿದ್ದೀನಿ ಈ ಮೀಟಿಂಗ್ ತುಂಬಾ ಇಂಪಾರ್ಟೆಂಟ್ ಅಂತ ಯಾವನೋ ಏನೋ ಹೇಳ್ದ ಅಂತ ನಂಬಿ ಅವಮಾನ ಮಾಡಿ ಕಳಿಸಿದೆ. ಈಗ ನೋಡು ಏನಾಯ್ತು ಅಂತ. ನೋಡು ನನಗೆ ಕಂಪನಿ ಮಗಳು ಮುಖ್ಯ ನ ಇಲ್ಲಾ ಕಂಪನಿ ಮುಖ್ಯ ನ ಅಂತ ಕೇಳಿದ್ರೆ ನಾನು ಕಂಪನಿ ನೇ ಅಂತ ಹೇಳ್ತಿನಿ. ಏನ್ ಮಾಡ್ತೀಯೋ ಗೊತ್ತಿಲ್ಲ ಮಹಿ ನ ಮೀಟ್ ಮಾಡಿ ಸಾರೀ ಕೇಳಿ ನನ್ನ ಕಂಪನಿ ನ ನನಗೆ ವಾಪಸ್ಸು ಕೊಡೊ ಹಾಗೇ ಮಾಡು ಇಲ್ಲಾ ನನ್ನ ಹೆಣ ನೋಡ್ತೀಯ ಅಂತ ಹೇಳ್ತಾರೆ. ಕೃತಿ ಅಳ್ತಾ ಅಪ್ಪ ಅಂತ ಹತ್ತಿರ ಬರ್ತಾಳೆ. ಅಶೋಕ್ ವರ್ಮಾ ಮುಟ್ಟ ಬೇಡ ನನ್ನ . ಈಗ ನಾನು ನಿನ್ನ ಅಪ್ಪ ಅಲ್ಲ ಈ ಕಂಪನಿ ಓನರ್ ನಿನಗೆ ಅಪ್ಪ ಬೇಕು ಅಂದ್ರೆ ನನ್ನ ಕಂಪನಿ ನ ವಾಪಸ್ಸು ತಂದು ನನಗೆ ಕೊಡು ಅಲ್ಲಿವರೆಗೂ ನನಗೆ ನಿನ್ನ ಮುಖ ತೋರಿಸ ಬೇಡ ಹೊರಟು ಹೋಗು ಅಂತ ಹೇಳ್ತಾರೆ. ಕೃತಿ ಅಪ್ಪ ಅಂತ ಹೇಳಿ ಅಳ್ತಾ ಕ್ಯಾಬಿನ್ ನಿಂದ ಹೊರಗೆ ಬರ್ತಾಳೆ. ಅಲ್ಲಿಂದ ಸೀದಾ ವಿನೋದ್ ಇದ್ದಾ ಕ್ಯಾಬಿನ್ ಗೆ ಬರ್ತಾಳೆ. ವಿನೋದ್ ಚೇರ್ ಮೇಲೆ ಕೂತು ಒಬ್ಬ ಲೇಡಿ ಎಂಪ್ಲೋಯ್ ಹತ್ತಿರ ನಗ್ತಾ ಏನೋ ಮಾತಾಡ್ತಾ ಅವಳ ಕೈ ಇಡ್ಕೊಂಡು ಇರ್ತಾನೆ. ಬಟ್ ಅ ಲೇಡಿ ಆಲ್ಮೋಸ್ಟ್ ಅಳೋ ಸ್ಟೇಜ್ ಅಲ್ಲಿ ಇರ್ತಾಳೆ. 

    ಕೃತಿ ಡೈರೆಕ್ಟ್ ಕ್ಯಾಬಿನ್ ಡೋರ್ ಓಪನ್ ಮಾಡ್ಕೊಂಡು ಒಳಗೆ ಹೋಗಿ ವಿನೋದ್ ಕುತ್ತಿಗೆ ಪಟ್ಟಿ ಇಟ್ಕೊಂಡು ಹೊರಗೆ ಎಳ್ಕೊಂಡು ಬರ್ತಾಳೆ. ವಿನೋದ್ ಗೆ ಏನ್ ನಡೀತಿದೆ ಅನ್ನೋದೇ ಅರ್ಥ ಆಗಲ್ಲಾ. ಕೃತಿ ಅವನ ಕೆನ್ನೆಗೆ ಬಾರಿಸ್ತಾ ಹುಡುಗೀರು ಅಂದ್ರೆ ಏನೋ ಅನ್ಕೊಂಡು ಇದ್ದಿಯಾ ಯಾರು ಕೇಳೋವ್ರು ಇಲ್ಲಾ ಅಂತ ಇಷ್ಟ ಬಂದ ಹಾಗೇ ನಡ್ಕೊತೀಯ ಅಂತ ಹೇಳ್ತಾ ಎದ್ವ ತದ್ವ ಬಾರಿಸಿ ಹೊಡಿತಾಳೆ. ಅಲ್ಲಿ ನಡೀತಾ ಇರೋ ಗಲಾಟೆ ನೋಡಿ ವಿನೋದ್ ಅವರ ಅಪ್ಪ ಬರ್ತಾನೇ  ಮಗನ್ನ ಹೊಡಿತಾ ಇರೋದನ್ನ ನೋಡಿ ಹತ್ತಿರ ಬಂದು ನನ್ನ ಮಗನನ್ನೇ ಹೊಡಿತಿಯ ಎಷ್ಟೇ ಕೊಬ್ಬು ನಿನಗೆ ಅಂತ ಹೊಡಿಯೋಕೆ ಹೋಗ್ತಾನೆ ಕೃತಿ ಅವನ ಕೈ ತಡೆದು ಅವನಿಗೂ ಬಾರಿಸೋಕೆ ಶುರು ಮಾಡ್ತಳೇ. ಮಗ ತಪ್ಪು ಮಾಡ್ತಾ ಇದ್ರೆ ಬುದ್ದಿ ಹೇಳೋದನ್ನ ಬಿಟ್ಟು ಹಿಂದೆ ಹಾಕೊಂಡು ಬರ್ತೀಯ ಅಂತ ಹೇಳಿ ಹೊಡಿಯೋಕೆ ಶುರು ಮಾಡ್ತಾಳೆ. ವಿನೋದ್ ಅವರ ಅಪ್ಪನಿಗೆ ಹೊಡಿಯೋದನ್ನ ನೋಡಿ ಕೃತಿ ನ ಹೊಡಿಯೋಕೆ ಹೋಗ್ತಾನೆ. ಅಷ್ಟರಲ್ಲಿ ಅವನ ಕೆನ್ನೆಗೆ ರಪ್ ಅಂತ ಒಂದು ಬೀಳುತ್ತೆ. ವಿನೋದ್ ಅ ಕಡೆಗೆ ನೋಡ್ತಾನೆ ಇಷ್ಟೋತ್ತು ಕ್ಯಾಬಿನ್ ಅಲ್ಲಿ ಅವನು ಕೈ ಇಡ್ಕೊಂಡು ಇದ್ದಾ ಹುಡುಗಿ. ವಿನೋದ್ ಗೆ ಸರಿಯಾಗಿ ಬಾರಿಸ್ತಾಳೆ.  ಅವರಿಬ್ಬರೂ ಹಾಗೇ ಒದೆ ತಿನ್ನೋದನ್ನ ನೋಡಿ ಅಲ್ಲಿ ಇದ್ದಾ ಹುಡುಗಿಯರಿಗೆಲ್ಲ ತುಂಬಾ ಖುಷಿ ಆಗುತ್ತೆ. 

   ಅಲ್ಲಿಗೆ ಸೆಕ್ಯೂರಿಟಿ ಜೊತೆಗೆ ಪೊಲೀಸ್ ಕೂಡ ಬರ್ತಾರೆ. ಕೃತಿ ಅವರಿಬ್ಬರನ್ನು ಪೊಲೀಸ್ ಗೆ ಒಪ್ಪಿಸಿ. ಎಲ್ಲರನ್ನು ವರ್ಕ್ ಮಾಡ್ಕೊಳ್ಳೋಕೆ ಹೇಳಿ. ಆಫೀಸ್ ನಿಂದ ಹೊರಗೆ ಬರ್ತಾ ಮಹಿ ನಂಬರ್ ಗೆ ಕಾಲ್ ಮಾಡ್ತಾಳೆ. ಕನೆಕ್ಟ್ ಆಗೋದಿಲ್ಲ. ಛೇ ಅಂತ ಅನ್ಕೊಂಡು ಕಾರ್ ಪಾರ್ಕಿಂಗ್ ಕಡೆಗೆ ಹೋಗ್ತಾಳೆ. 

******


ಅಕಿರಾ ಮನೇಲಿ. ಏನಪ್ಪಾ ಮಹಿ ಇವಾಗ ಇದಕೆಲ್ಲ ಏನ್ ಅವಸರ ಇತ್ತು ಅಂತ ಅಕಿರಾ ಅವರ ಅಮ್ಮ ಕೇಳಿದ್ರೆ. ಅಮ್ಮ ತಗೋಳಿ ತುಂಬಾ ದಿನ ಆದಮೇಲೆ ಈ ಮನೆಗೆ ಬರ್ತಾ ಇದ್ದೀನಿ ಬರಿ ಕೈಲಿ ಬರೋಕೆ ಮನಸ್ಸು ಬರಲಿಲ್ಲ ಅದು ಅಲ್ಲದೆ  ಅಕಿರಾಗು ಇದುವರೆಗೂ ಏನು ಕೊಡಿಸೋಕೆ ಆಗಲಿಲ್ಲ ಅದಕ್ಕೆ ಅವಳಿಗೂ ಕೊಡಿಸಿ ನಿಮಗೂ ಕೊಡೋಣ ಅಂತ ತಗೊಂಡು ಬಂದೆ ಅಂತ ಹೇಳಿದೆ. ಅಕಿರಾ ಅವರ ತಂದೆ ವಿವೇಕ್. ತುಂಬಾ ಥ್ಯಾಂಕ್ಸ್ ಮಹಿ. ತುಂಬಾ ಖುಷಿ ಆಗ್ತಾ ಇದೆ ನಿನ್ನ ನೋಡಿ, ಇವಾಗ ಏನ್ ಮಾಡ್ಕೊಂಡು ಇದ್ದಿಯಾ ಎಲ್ಲಿ ಇದ್ದಿಯಾ ಅಂತ ಕೇಳಿದ್ರು. ಅಕಿರಾ ಅಪ್ಪ ಸಾಹೇಬ್ರು ಈಗ ಬೇರೆ ಲೆವೆಲ್ ಅಲ್ಲಿ ಇದ್ದಾರೆ. ಲಾಸ್ಟ್ ಟೈಮ್ ಅಮ್ಮ ನ ಕರ್ಕೊಂಡು ಒಂದು ಶಾಪಿಂಗ್ ಮಾಲ್ ಗೆ ಹೋಗಿದ್ದೆ ನೆನಪಿದೆಯಾ ಅಂತ ಕೇಳಿದ್ಲು. ಹೌದು ಶಬರಿ ಶಾಪಿಂಗ್ ಮಾಲ್. ಇದನ್ನ ನೀವು ಕೂಡ ಅಲ್ಲಿಂದಾನೆ ಅಲ್ವಾ ತಂದಿರೋದು ಅಂತ ಹೇಳಿದ್ರು. ಅಕಿರಾ ಹೌದಪ್ಪ ಅಲ್ಲಿಂದಾನೆ ತಂದಿದ್ದು. ಅದ್ರೆ ಅ ಶಾಪಿಂಗ್ ಮಾಲ್ ನ ನೋಡ್ಕೋತ ಇರೋದು ಮಹಿ ನೇ. ಅದು ಅಲ್ಲದೆ ಇವತ್ತಿಂದ ಅ ಶಾಪಿಂಗ್ ಮಾಲ್ ಗೆ ನಾನೆ ಮ್ಯಾನೇಜರ್ ನಿಮ್ ಅಳಿಯ ನೇ ನನಗೆ ಅಪ್ಪೋಯಿಂಟ್ಮೆಂಟ್ ಲೆಟರ್ ಕೊಟ್ಟಿದ್ದು ಅಂತ ಹೇಳಿದ್ಲು. ವಿವೇಕ್ ಖುಷಿಯಾಗಿ ಏನಮ್ಮ ನೀನು ಹೇಳೋದು. ಹೌದಪ್ಪ ಬೇಕಿದ್ರೆ ನೋಡಿ ಅಂತ ಅಪ್ಪೋಯಿಂಟ್ಮೆಂಟ್ ಲೆಟರ್ ತೋರಿಸ್ತಾಳೆ. ವಿವೇಕ್ ಅಪ್ಪೋಯಿಂಟ್ಮೆಂಟ್ ಲೆಟರ್ ನ ನೋಡಿ ಖುಷಿಯಾಗಿ ತುಂಬಾ ಸಂತೋಷ ಆಗ್ತಾ ಇದೆ ಮಹಿ. ಅವತ್ತು ನಿನ್ನ ಕೆಲಸಾನ ಒಬ್ರು ಕಿತ್ಕೊಂಡ್ರು ಅದ್ರೆ ಇವತ್ತು ನೀನೇ ಒಬ್ಬರಿಗೆ ಕೆಲಸ ಕೊಡೊ ಸ್ಟೇಜ್ ಗೆ ಬಂದು ನಿಂತಿದ್ದೀಯ ತುಂಬಾ ಸಂತೋಷ ಆಗ್ತಾ ಇದೆ ಅಂತ ಹೇಳಿದ್ರು. ಸರ್ ಹಾಗೇನಿಲ್ಲ ಅಕಿರಾ ಫ್ರೆಂಡ್ ಶಿಲ್ಪಾ ಇದ್ದಾಳೆ ಅಲ್ವಾ ಅವರ ತಾತ ಈ ಶಬರಿ ಟೆಕ್ಸ್ಟ್ ಟೈಲ್ ಬಿಸಿನೆಸ್ ಅಲ್ಲಿ ಒನ್ ಆಫ್ ದಿ ಪಾರ್ಟ್ನರ್ ಸೋ ನನಗೆ ಬೆಂಗಳೂರು ಬ್ರಾಂಚ್ ನ ನೋಡ್ಕೊಳ್ಳೋ ಕೆಲಸ ಕೊಟ್ಟಿದ್ದಾರೆ. ಅದು ಅಲ್ಲದೆ ನಾನು ಅವಾಗವಾಗ ಮೈಸೂರ್ ಕೂಡ ಹೋಗಿ ಬರಬೇಕು. ಇಲ್ಲಿಗೆ ಒಬ್ಬರು ಮ್ಯಾನೇಜರ್ ಬೇಕು ಅಂತ ಶಿಲ್ಪಾ ಅಕಿರಾ ಗೆ ಕೇಳೋಣ ಅಂತ ಇದ್ಲು. ಅದಕ್ಕೆ ನಾನೆ ಅಕಿರಾ ನ ಕೇಳಿದೆ ಓಕೆ ಮಾಡ್ತೀನಿ ಅಂತ ಹೇಳಿದ್ಲು. ಅಷ್ಟೇ ಇದರಲ್ಲಿ ನನ್ನದೇನು ಇಲ್ಲಾ ಅಂತ ಹೇಳ್ದೆ. 

   ಕೋಮಲಿ.. ಹೇಗೋ ಫ್ರೆಂಡ್ಸ್ ಎಲ್ಲಾ ಒಂದೇ ಹತ್ತಿರ ಒಬ್ಬರಿಗೊಬ್ಬರು ಸಪೋರ್ಟ್ ಮಾಡ್ಕೊಂಡು ಕೆಲಸ ಮಾಡ್ತಾ ಇದ್ದೀರಾ ಬೆಳಿತಾ ಇದ್ದೀರಾ ಅಷ್ಟು ಸಾಕು ಯಾವಾಗ್ಲೂ ಈಗೆ ಇರಿ. ಅಕಿರಾ ಮಹಿ ಗೆ ರೂಮ್ ತೋರ್ಸು ಹೋಗಿ ಫ್ರೆಷ್ ಅಪ್ ಆಗಿ ಬರಲಿ ಊಟ ಮಾಡೋಣ ಅಂತ ಹೇಳಿದ್ರು. ಸರಿ ಅಮ್ಮ ಅಂತ ಹೇಳಿ ಮಹಿ ಬಾ ಅಂತ ಹೇಳಿ ರೂಮ್ ಕಡೆಗೆ ಕರ್ಕೊಂಡು ಹೋದ್ಲು. ನನಗೆ ಗೆಸ್ಟ್ ರೂಮ್ ತೋರಿಸಿ ಹೋಗಿ ಫ್ರೆಷ್ ಅಪ್ ಆಗಿ ಬಾ ಅಂತ ಹೇಳಿ ಅವಳ ರೂಮ್ ಕಡೆ ಹೋದ್ಲು.  ರೂಮ್ ಗೆ ಬರ್ತಾ ಇದ್ದಾ ಹಾಗೇ ನನ್ನ ಮೊಬೈಲ್ ಗೆ ಒಂದು ಕಾಲ್ ಬಂತು. ಮೊಬೈಲ್ ನೋಡಿದ್ರೆ ಅನ್ನೋನ್ ನಂಬರ್ ಕಾಲ್ ಪಿಕ್ ಮಾಡಿ ಹಲೋ ಅಂತ ಹೇಳ್ದೆ. ಮಿಸ್ಟರ್ ಮಹೇಂದ್ರ ಭೂಪತಿ ಅಂತ ಕೇಳಿದ್ಲು. ಯಸ್ ಅಂತ ಹೇಳ್ದೆ. ದಿಸ್ ಇಸ್ ಕೃತಿ ವರ್ಮಾ ಡಾಟರ್ ಆಫ್ ಅಶೋಕ್ ವರ್ಮಾ ಅಂತ ಹೇಳಿದ್ಲು.  ನಾನು ರೂಮ್ ಡೋರ್ ಕ್ಲೋಸ್ ಮಾಡಿ . ಅ ಹೇಳಿ ಅಂತ ಹೇಳ್ದೆ. ಸರ್ ನಿಮ್ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು ನಿಮ್ ಅಪ್ಪೋಯಿಂಟ್ಮೆಂಟ್ ಬೇಕಾಗಿತ್ತು ಅಂತ ಕೇಳಿದ್ಲು. ಓಕೆ ಈವನಿಂಗ್ 4 ಕ್ಲಾಕ್ ಫ್ರೆಂಡ್ಸ್ ಕೆಫೆ ಗೆ ಬನ್ನಿ ಅಂತ ಹೇಳಿ ಕಾಲ್ ಕಟ್ ಮಾಡಿ ಫ್ರಶ್ ಅಪ್ ಆಗೋಕೆ ಹೋದೆ. 

ನಂತರ ಡೈನಿಂಗ್ ಟೇಬಲ್ ಗೆ ಹತ್ತಿರ ಬಂದು ಎಲ್ಲರೂ ಕೂತು ಒಟ್ಟಿಗೆ ಊಟ ಮಾಡಿದ್ವಿ. ಆಮೇಲೆ ಹಾಲ್ ಅಲ್ಲಿ ಕೂತು ಮಾತಾಡ ಸರ್ ಅಕಿರಾ ನ ಮೈಸೂರ್ ಗೆ ಕರ್ಕೊಂಡು ಬಾ ಅಂತ ಶಿಲ್ಪಾ ಹೇಳಿದ್ಲು ನೀವು ಪರ್ಮಿಷನ್ ಕೊಟ್ರೆ ಕರ್ಕೊಂಡು ಹೋಗ್ತೀನಿ ಅಂತ ಹೇಳ್ದೆ. ವಿವೇಕ್ ನೀವು ಲವ್ ಮಾಡ್ತಾ ಇದ್ರು ನಾವು ಅದನ್ನ ಒಪ್ಕೊಂಡು ಇದ್ರು ಕರ್ಕೊಂಡು ಹೋಗೋಕೆ ನಮ್ ಪರ್ಮಿಷನ್ ತಗೋತಾ ಇದ್ದಿಯಾ ತುಂಬಾ ಸಂತೋಷ. ಕರ್ಕೊಂಡು ಹೋಗು ಮಹಿ ಅಂತ ಹೇಳಿದ್ರು. ತುಂಬಾ ಥ್ಯಾಂಕ್ಸ್ ಸರ್ ಅಂತ ಹೇಳಿ. ಅಕಿರಾ ಕಡೆಗೆ ನೋಡಿ ಅಕಿರಾ ರೆಡಿ ಆಗಿರು 3 ಡೇಸ್ ಗೆ ಆಗೋ ಅಷ್ಟು ಬಟ್ಟೆ ನ ಪ್ಯಾಕ್ ಮಾಡ್ಕೋ. ನನಗೆ ಸ್ವಲ್ಪ ಕೆಲಸ ಇದೆ ಹೋಗಿ ಮುಗಿಸಿಕೊಂಡು ಬರ್ತೀನಿ ಅಂತ ಹೇಳ್ದೆ. ಅಕಿರಾ ಸರಿ ಮಹಿ ಅಂತ ಹೇಳಿದ್ಲು. ನಾನು ಎಲ್ಲರಿಗೂ ಬೈ ಹೇಳಿ ಹೊರಗೆ ಬಂದು ಕಾರ್ ಸ್ಟಾರ್ಟ್ ಮಾಡಿಕೊಂಡು ಕೆಫೆ ಕಡೆಗೆ ಹೋದೆ. 


****************************************