ಜೆನ್ನಿ ಜೊತೆಗೆ ಆಫೀಸ್ ಗೆ ಬಂದೆ. ಜೆನ್ನಿ ಗೆ ಜೆನ್ನಿ ವಿವರ ಹೇಳಿ ಅಪ್ಪೋಯಿಂಟ್ಮೆಂಟ್ ಲೆಟರ್ ಟೈಪ್ ಮಾಡಿ ತಗೋಬರೋಕೆ ಹೇಳಿ. ಸ್ಟಾಫ್ ನೆಲ್ಲಾ ಮಾತಾಡಿಸಿಕೊಂಡು ನನ್ನ ಕ್ಯಾಬಿನ್ ಗೆ ಹೋದೆ. ಇಂಪಾರ್ಟೆಂಟ್ ಫೈಲ್ಸ್ ನ ಚೆಕ್. ಮಾಡಿ ಅದನ್ನ ಫಿನಿಷ್ ಮಾಡಿದೆ. ಅಷ್ಟರಲ್ಲಿ ಜೆನ್ನಿ ಬಂದ್ಲು ಅಪ್ಪೋಯಿಂಟ್ಮೆಂಟ್ ಲೆಟರ್ ತಗೊಂಡು ಬಂದು ಸರ್ ಅಂತ ಹೇಳಿದ್ಲು. ಜೆನ್ನಿ ನ ನೋಡಿ ಜೆನ್ನಿ ಲೆಟರ್ ತಗೊಂಡು ಸ್ಟಾಫ್ ನೆಲ್ಲಾ ಬರೋಕೆ ಹೇಳಿ ಅಂತ ಅಕಿರಾ ಹತ್ತಿರ ಹೋದೆ. 30 ನಿಮಿಷ ಆಗಿತ್ತು. ಅಕಿರಾ ಹತ್ತಿರ ಹೋದೆ. ಅಕಿರಾ ಸೈಲೆಂಟ್ ಆಗಿ ಕೂತ್ಕೊಂಡು ಇರೋದನ್ನ ನೋಡಿ ಯಾಕೆ ಏನು ತಗೊಂಡು ಇಲ್ವಾ ಅಂತ ಕೇಳ್ದೆ. ಏನೋ ತಗೊಳ್ಳೋದು ಎಲ್ಲಾ ಡ್ರೆಸ್ ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಇದೆ ಎಲ್ಲಾನು ದಿ ಬೆಸ್ಟ್ ಅನ್ನೋತರ ಇದೆ ಯಾವುದನ್ನ ತಗೋಬೇಕು ಅನ್ನೋದೇ ಕನ್ಫ್ಯೂಸ್ ಆಗಿದೆ. ಬೇರೆ ಶಾಪಿಂಗ್ ಮಾಲ್ ಗೆ ಹೋಗಿದ್ರೆ ಸೆಲೆಕ್ಟ್ ಮಾಡ್ತಾ ಇದ್ದೆ ಅಂತ ಹೇಳಿದ್ಲು. ನನಗೆ ಅವಳ ಪರಿಸ್ಥಿತಿ ನೋಡಿ ನಗು ಬಂತು. ನಗು ನ ಕಂಟ್ರೋಲ್ ಮಾಡ್ಕೊಂಡು ನಾನೆ ಅವಳಿಗೆ 4 ಡ್ರೆಸ್ 2 ಸೀರೆ ನ ಸೆಲೆಕ್ಟ್ ಮಾಡಿ ಅವಳಿಗೆ ತೋರಿಸಿ ಇವ್ವು ಓಕೆ ನ ಅಂತ ಕೇಳ್ದೆ. ಅಕಿರಾ ಥ್ಯಾಂಕ್ಸ್ ಕಣೋ ಬಟ್ ಇಷ್ಟು ಬೇಡ ಅಂತ ಹೇಳಿದ್ಲು. ನಾನು ಸೇಲ್ಸ್ ಗರ್ಲ್ ಮಣಿ ಗೆ ಕಾರ್ಡ್ ಕೊಟ್ಟು ಇವನ್ನ ಬಿಲ್ ಮಾಡಿ ಪ್ಯಾಕ್ ಮಾಡಿ ಕಾರ್ ಅಲ್ಲಿ ಇಡೋಕೆ ಹೇಳು ಅಂತ ಹೇಳಿದೆ. ಅವಳು ಸರಿ ಸರ್ ಅಂತ ಹೇಳಿ ಹೊರಟು ಹೋದಳು.
ಜೆನ್ನಿ ಬಂದು ಸರ್ ಎಲ್ಲರೂ ಬಂದ್ರು ಅಂತ ಹೇಳಿದೆ. ಅಲ್ಲಿಗೆ ಬಂದ ಜನರನ್ನ ನೋಡಿ ಕೂತಿದ್ದ ಅಕಿರಾ ಎದ್ದು ನಿಂತಳು. ಜೆನ್ನಿ ಅಪ್ಪೋಯಿಂಟ್ಮೆಂಟ್ ಲೆಟರ್ ಕೈಗೆ ಕೊಟ್ಟಳು. ನಾನು ಅದನ್ನ ತೆಗೆದುಕೊಂಡು ಗೈಸ್ ಮೊದಲಿಗೆ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ ತಕ್ಷಣ ಬಂದಿದ್ದಕ್ಕೆ, ವಿಷಯ ಸಿಂಪಲ್ ನಿಮಗೆ ಗೊತ್ತು ನಾನು ಎಷ್ಟು ಬ್ಯುಸಿ ಇರ್ತೀನಿ ಇಲ್ಲಿಗೆ ಪ್ರತಿದಿನ ಬರೋದಕ್ಕೆ ಆಗೋದಿಲ್ಲ ಅಂತ, ಸೋ ಅದಕ್ಕೆ ಇಷ್ಟು ದಿನ ಪೆಂಡಿಂಗ್ ಇದ್ದಾ ಮ್ಯಾನೇಜರ್ ಪೋಸ್ಟ್ ಗೆ ಒಬ್ಬ ವ್ಯಕ್ತಿ ನ ಅಪ್ಪೋಯಿಂಟ್ಮೆಂಟ್ ಮಾಡ್ತಾ ಇದ್ದೀನಿ ಅಂತ ಹೇಳಿ ಅಕಿರಾ ಕಡೆಗೆ ನೋಡ್ತಾ. ಇವರು ಅಕಿರಾ ಅಂತ ಹೊಸದಾಗಿ ಅಪ್ಪೋಯಿಂಟ್ಮೆಂಟ್ ಆಗ್ತಾ ಇರೋ ಮ್ಯಾನೇಜರ್, 3 4 ಡೇಸ್ ಅಲ್ಲಿ ಬಂದು ಜಾಯಿನ್ ಆಗ್ತಾರೆ. ಅವರಿಗೆ ನಿಮ್ ಸಪೋರ್ಟ್ ಕೊಡಿ. ಹಾಗೇ ಇನ್ಮುಂದೆ ಏನೇ ವಿಷಯ ಇದ್ರು ಇವರಿಗೆ ರಿಪೋರ್ಟ್ ಮಾಡಿ. ಜೆನ್ನಿ ಇನ್ಮೇಲೆ ನಾನಿಲ್ಲ ಅನ್ನೋ ಟೆನ್ಶನ್ ಇರಲ್ಲ ನಿನಗೆ, ಆರಾಮಾಗಿ ನಿನ್ನ ವರ್ಕ್ ನ ಮಾಡಬಹುದು ಅವತ್ತಿನ ಕೆಲಸ ಅವತ್ತೇ ಮುಗಿಸಬಹುದು ಅಂತ ಹೇಳ್ದೆ. ಜೆನ್ನಿ ಥ್ಯಾಂಕ್ಸ್ ಸರ್ ಅಂತ ಹೇಳಿದ್ಲು. ಓಕೆ ಗೈಸ್ ಕರೆದ ತಕ್ಷಣ ಬಂದ್ರಿ ತುಂಬಾ ಥ್ಯಾಂಕ್ಸ್ ಹೋಗಿ ನಿಮ್ ವರ್ಕ್ ನ ಮಾಡಿಕೊಳ್ಳಿ ಅಂತ ಹೇಳಿದೆ. ಎಲ್ಲರೂ ಹೊರಟು ಹೋದ್ರು. ಫ್ಲೋರ್ ಮ್ಯಾನೇಜರ್ ಬಂದು ಒಂದು ಕವರ್ ನ ಕೊಡ್ತಾ ಸರ್ ತಗೋಳಿ ಅಂತ ಕೊಟ್ಟು ಹೊರಟು ಹೋದ್ರು. ನಾನು ಕವರ್ ನ ಇಡ್ಕೊಂಡು ಅಕಿರಾ ಕಡೆಗೆ ನೋಡ್ತಾ ಹೋಗೋಣ್ವಾ ಅಂತ ಕೇಳ್ದೆ. ಅಕಿರಾ ನಾನ್ ಕೊಟ್ಟ ಶಾಕ್ ನಿಂದ ಇನ್ನು ಹೊರಗೆ ಬಂದಿಲ್ಲ ಅಂತ ಅನ್ನಿಸುತ್ತೆ ಹಾಗೇ ನಿಂತು ಬಿಟ್ಟಿದ್ದಳು. ಸ್ವಲ್ಪ ಜೋರಾಗಿ ಅಕಿರಾ ಅಂತ ಕರೆದೆ. ಆಗ ಅಕಿರಾ ವಾಸ್ತವಕ್ಕೆ ಬಂದು ನನ್ನ ನೋಡ್ತಾ ಲೋ ಏನೋ ಹೇಳ್ದೆ ಈ ಮಾಲ್ ಗೆ ನಾನು ಮ್ಯಾನೇಜರ್ ಅ ಅದು ನೀನು ಅಪ್ಪೋಯಿಂಟ್ಮೆಂಟ್ ಮಾಡ್ತಾ ಇದ್ದಿಯಾ, ನಿಜ ಹೇಳು ನೀನು ಈ 7 ತಿಂಗಳಿಂದ ಏನ್ ಮಾಡ್ಕೊಂಡು ಇದ್ದೆ ಅಂತ ಕೇಳಿದ್ಲು. ನಾನು ಮೈಸೂರ್ ಗೆ ಬಂದು ನಿನ್ನ ಫ್ರೆಂಡ್ ಶಿಲ್ಪಾ ನ ಕೇಳು ಅಂತ ಹೇಳಿ ಮುಂದೆ ಹೋದೆ. ಅಕಿರಾ ಲೋ ಏನೋ ಹೇಳ್ತಾ ಇದ್ದಿಯಾ ಶಿಲ್ಪಾ ನ ಕೇಳಬೇಕಾ ಅಂದ್ರೆ ಅವಳು. ಛೇ ಎಲ್ಲಾ ಸಸ್ಪೆನ್ಸ್ ಅಲ್ಲೇ ಇಡ್ತಾ ಇದ್ದಾನೆ ಇವನನ್ನ ಅಂತ ಕೋಪದಲ್ಲೇ ಹಿಂದೇನೆ ಬಂದಳು. ನಾನು ಮಣಿ ಹತ್ತಿರ ಕಾರ್ ಕಿ ಕಾರ್ಡ್ ತಗೊಂಡು ಜೆನ್ನಿ ಗೆ ಮಣಿ ಗೆ ಬೈ ಹೇಳಿ ಕಾರ್ ಹತ್ತಿರ ಬಂದೆ.
ಅಕಿರಾ ಹಿಂದೇನೆ ಬಂದು ಕಾರ್ ಅಲ್ಲಿ ಕೂತ್ಕೊಂಡು ಲೋ ಹೇಳೋ ಅವತ್ತು ಜಾಬ್ ನ ಬಿಟ್ಟು ಹೋದವನು ಇವತ್ತು ನನಗೆ ಜಾಬ್ ಕೊಡೊ ಲೆವೆಲ್ ಗೆ ಬೆಳೆದ್ದಿದ್ದೀಯಾ. ಪ್ಲೀಸ್ ಹೇಳೋ ಅಂತ ಕೇಳಿದ್ಲು. ನಾನ್ ಅಕಿರಾ ಕಡೆಗೆ ನೋಡ್ತಾ ಮೇಡಂ ನೀವು ನನ್ನ ಬಗ್ಗೆ ತುಂಬಾ ದೂರ ಯೋಚ್ನೆ ಮಾಡ್ತಾ ಇದ್ದಿಯಾ ಅಷ್ಟೇನು ಇಲ್ಲಾ. ಶಿಲ್ಪಾ ಅವರ ತಾತ ಟೆಕ್ಸ್ಟ್ ಟೈಲ್ ಬಿಸಿನೆಸ್ ಮಾಡ್ತಾ ಇದ್ದಾರೇ ಅಂಡ್ ಅವರ ಫ್ರೆಂಡ್ ಕೂಡ ಜಾಯಿನ್ ಆಗಿ ಪಾರ್ಟ್ನರ್ ಷಿಪ್ ಅಲ್ಲಿ ಈ ಶಬರಿ ಟೆಕ್ಸ್ಟ್ ಟೈಲ್ ಬಿಸಿನೆಸ್ ಶುರು ಮಾಡಿದ್ರು. ಶಿಲ್ಪಾ ಅವರ ತಾತ ನ ಫ್ರೆಂಡ್ ಇದ್ದಾರೆ ಅಲ್ವಾ ಅವರ ಮೊಮ್ಮಗ ಫಾರಿನ್ ಅಲ್ಲಿ ಇದ್ದಾರೆ ಅವರು ಬರೋ ತನಕ ಈ ಬೆಂಗಳೂರು ಬ್ರಾಂಚ್ ನೋಡಿಕೊಳ್ಳೋ ಕೆಲಸ ಕೊಟ್ಟಿದ್ದಾರೆ. ಅದಕ್ಕೆ ನೋಡ್ಕೋತ ಇದ್ದೀನಿ ನಿನ್ನ ಅಪ್ಪೋಯಿಂಟ್ಮೆಂಟ್ ಮಾಡಿದ್ದು ನಾನಲ್ಲ ಶಿಲ್ಪಾ ಅವರ ತಾತ, ಇಲ್ಲಿ ಬ್ರಾಂಚ್ ಓಪನ್ ಮಾಡಿದ ಮೇಲೆ ಇದನ್ನ ನೋಡಿಕೊಳ್ಳೋಕೆ ಯಾರಾದ್ರೂ ಗೊತ್ತಿರೋವ್ರು ನಂಬಿಕೆ ಇರೋವ್ರು ಬೇಕು ಅಂತ ನೋಡಿದಾಗ ಶಿಲ್ಪಾ ಗೆ ನಿನ್ನ ನೆನಪು ಬಂತು ಅದಕ್ಕೆ ಬೆಂಗಳೂರು ಹೋದಾಗ ನಿನ್ನ ಮೀಟ್ ಮಾಡಿ ವಿಷಯ ಮಾತಾಡೋಕೆ ಹೇಳಿದ್ಲು. ಒಪ್ಪಿಕೊಂಡ್ರೆ ಮ್ಯಾನೇಜರ್ ಆಗಿ ಅಪ್ಪೋಯಿಂಟ್ಮೆಂಟ್ ಮಾಡಿ ಬೆಂಗಳೂರು ಬ್ರಾಂಚ್ ನ ಅವಳಿಗೆ ಕೊಡೋಣ ಅವಳಿಗೆ ಲೀಡರ್ಷಿಪ್ ಕ್ವಾಲಿಟಿ ಇದೆ ಅವಳಿಗೆ ಇಂಟ್ರೆಸ್ಟ್ ಇದ್ರೆ ಫ್ಯೂಚರ್ ಅಲ್ಲಿ ಪಾರ್ಟ್ನರ್ ಆಗಿ ಮಾಡಿಕೊಳ್ಳೋಣ ಅಂತ ಹೇಳಿದ್ಲು. ಸೋ ಲಕ್ಕಿಲಿ ನೀನು ಒಪ್ಕೊಂಡೆ ಅದೇ ವಿಷಯ ನ ಹೇಳಿದೆ ಅವಳಿಗೂ ಖುಷಿ ಆಯ್ತು. ಅಷ್ಟು ಬಿಟ್ರೆ ಇದರಲ್ಲಿ ನನ್ನದೇನು ಇಲ್ಲಾ ನಾನು ಜಸ್ಟ್ ಎಂಪ್ಲೋಯ್ ಅಷ್ಟೇ. ಅಂತ ಹೇಳಿದೆ.
ಅಕಿರಾ ವಿಷಯ ಎಲ್ಲಾ ಕೇಳಿ ಮತ್ತೆ ಅವರೆಲ್ಲಾ ನಿನಗೆ ಅಷ್ಟು ಮರ್ಯಾದೆ ಕೊಡ್ತಾ ಇದ್ರು. ಅ ಅಪ್ಪೋಯಿಂಟ್ಮೆಂಟ್ ಲೆಟರ್ ಕೊಟ್ಟ ಹುಡುಗಿ ಹೆಸರೇನು.. ಅ ಜೆನ್ನಿ ನಿನ್ನ ನೋಡಿ ತುಂಬಾ ಖುಷಿ ಆಗಿ ತಿನ್ನೋ ಹಾಗೇ ನೋಡ್ತಾ ಇದ್ಲು ನೀನು, ಏನು ಕ್ರಶ್ ಅ ಅಂತ ಕೇಳಿದ್ಲು. ನಾನು ನಗ್ತಾ ಅಲ್ವೇ ಶಿಲ್ಪಾ ನನಗೆ ಫ್ರೆಂಡ್ ಬಾಸ್ ಮೊಮ್ಮಗಳ ಫ್ರೆಂಡ್ ಅದು ಅಲ್ಲದೆ ಅ ಬ್ರಾಂಚ್ ಗೆ ಇಂಚಾರ್ಜ್ ಆಗಿ ನೋಡ್ಕೋತ ಇದ್ದೀನಿ ಅದಕ್ಕೆ ಸ್ವಲ್ಪ ಮಾರ್ಯದೆ ಕೊಡ್ತಾರೆ ಅಷ್ಟೇ. ಇನ್ನ ಜೆನ್ನಿ ಅಂತೀಯಾ ತುಂಬಾ ಒಳ್ಳೆ ಹುಡುಗಿ ನಾನು ಇಲ್ಲದೆ ಇದ್ರು ನನ್ನ ಕೆಲಸಾನ ಅವಳೇ ನೋಡ್ಕೋತ ಇದ್ದಾಳೆ ಅಷ್ಟು ಕೆಲಸ ಮಾಡ್ತಾ ಇದ್ದಾಳೆ. ಇವಾಗ ಮ್ಯಾನೇಜರ್ ಅಂತ ಒಬ್ರು ಬಂದ್ರು ಅಂತ ಖುಷಿಯಾಗಿ ಇದ್ದಾಳೆ ಅಷ್ಟೇ ಅದು ಬಿಟ್ರೆ ಇನ್ನೇನು ಇಲ್ಲಾ ಅಂತ ಹೇಳ್ದೆ. ಅಕಿರಾ ಅನುಮಾನದಿಂದ ನನ್ನ ಕಡೆಗೆ ನೋಡ್ತಾ ನನ್ನ ಮ್ಯಾನೇಜರ್ ಆಗಿ ಮಾಡೋ ಬದಲು ನಿನ್ನೆ ಮ್ಯಾನೇಜರ್ ಆಗಿ ಮಾಡಬಹುದಿತ್ತು ಅಲ್ವಾ ಯಾಕ್ ಮಾಡಿಲ್ಲ ಅಂತ ಕೇಳಿದ್ಲು. ನಾನು ಅವಳ ಕಡೆಗೆ ನೋಡ್ತಾ ಅನ್ಕೊಂಡೆ ಯಾಕ್ ನೀನು ಇನ್ನು ಈ ಪ್ರಶ್ನೆ ಕೇಳಿಲ್ಲ ಅಂತ. ನಿಜ ಏನು ಅಂದ್ರೆ ಶಿಲ್ಪಾ ಮೊದಲೇ ಈ ಆಫರ್ ಕೊಟ್ಲು ನಾನೆ ಬೇಡ ಅಂತ ಹೇಳಿದೆ ಕಾರಣ ಇಷ್ಟೇ ಅಮ್ಮಮ್ಮ ಅಂದ್ರೆ ಇನ್ನ 4 5 ತಿಂಗಳು ಅಷ್ಟೇ ನಾನು ಇಲ್ಲಿ ಅಂದ್ರೆ ಬೆಂಗಳೂರಲ್ಲಿ ಇರೋದು. ಆಮೇಲೆ ನನ್ನ ಊರಿಗೆ ನಾನು ಹೋಗ್ತಾ ಇರ್ತೀನಿ. ಕೆಲವೊಂದು ಪರ್ಸನಲ್ ಪ್ರಾಬ್ಲಮ್ಸ್ ಇರೋದ್ರಿಂದ ಇಲ್ಲಿ ವರ್ಕ್ ಮಾಡ್ತಾ ಇದ್ದೀನಿ ಅದು ಕ್ಲಿಯರ್ ಆಗ್ತಾ ಇದ್ದಾ ಹಾಗೇ ಊರಿಗೆ ಹೋಗಿ ನೆಮ್ಮದಿ ಆಗಿ ಜೀವನ ಮಾಡ್ತೀನಿ ನನಗೆ ಈ ಸಿಟಿ ಲೈಫ್ ಇಷ್ಟ ಇಲ್ಲಾ ಅಂತ ಹೇಳಿದೆ. ಅಕಿರಾ ಗೆ ನಾನು ಹೇಳಿದ ವಿಷಯ ಕೇಳಿ ಬೇಜಾರಾಯಿತು ಅಂತ ಅನ್ನಿಸುತ್ತೆ ಏನು ಮಾತನಾಡದೆ ಸೈಲೆಂಟ್ ಆಗಿ ಇದ್ದು ಬಿಟ್ಲು. ಯಾಕೆ ಡಲ್ ಆಗೋದೇ ಏನಾಯ್ತು ಅಂತ ಕೇಳ್ದೆ. ಅಕಿರಾ ಏನು ಇಲ್ಲಾ ಬಿಡೋ ಅಂತ ಹೇಳಿ ಮತ್ತೆ ಸೈಲೆಂಟ್ ಆದ್ಲು. ಕಾರ್ ನ ಸೈಡ್ ಗೆ ಪಾರ್ಕ್ ಮಾಡಿ, ಅಕಿರಾ ಪ್ಲೀಸ್ ನೋಡು ನಾನ್ ಏನಾದ್ರು ತಪ್ಪಾಗಿ ಮಾತಾಡಿದ್ರೆ ಐಮ್ ರಿಯಲಿ ಸಾರೀ ಅದ್ರೆ ನೀನು ಈ ರೀತಿ ಡಲ್ ಆಗಿ ಇರಬೇಡ ಪ್ಲೀಸ್ ಏನಾದ್ರು ಮಾತಾಡು ಅಂತ ಹೇಳ್ದೆ.
ಅಕಿರಾ ಅಳ್ತಾ ಏನೋ ಮಾತಾಡ್ಲಿ. ಏನ್ ಮಾತಾಡ್ಲಿ ಹೇಳು 1 ಇಯರ್ ಬ್ಯಾಕ್ ಒಬ್ಬ ಹುಡುಗ ನನ್ನ ನೋಡಿದ ನೋಡಿ ಇಷ್ಟ ಪಟ್ಟು ನನಗೆ ಗೊತ್ತಿಲ್ದೇನೆ ನನ್ನ ಲವ್ ಮಾಡೋಕೆ ಶುರು ಮಾಡಿದ, ಆಮೇಲೆ ನಾನು ವರ್ಕ್ ಮಾಡೋ ಆಫೀಸ್ ಗೆ ಜಾಯಿನ್ ಆಗಿ ಬಂದ ನನ್ನ ನೋಡಿ ತುಂಬಾ ಖುಷಿ ಪಟ್ಟ. ನಾನು ಕೋಪ ಮಾಡ್ಕೊಂಡು ಅಷ್ಟು ಜನರ ಮುಂದೆ ಬೈದ್ರು ಸುಮ್ನೆ ಇದ್ದಾ ನಾನು ಒಬ್ಬನ್ನನ್ನ ಲವ್ ಮಾಡ್ತಾ ಇದ್ದೀನಿ ಅಂತ ಗೊತ್ತಾದ ಮೇಲೆ ನೋವು ಪಟ್ಟ ಕಣ್ಣೀರು ಹಾಕಿದ. ಆದ್ರು ನಾನು ಹೆಲ್ಪ್ ಮಾಡು ಅಂತ ಒಂದು ಮಾತು ಕೇಳಿದಕ್ಕೆ, ಹಿಂದೆ ಮುಂದೆ ಯೋಚ್ನೆ ಮಾಡದೇ ಒಪ್ಪಿಕೊಂಡು ನನಗೋಸ್ಕರ ಅವಮಾನ ಪಟ್ಟ ಬೈಸ್ಕೊಂಡ ಜಾಬ್ ಕಳ್ಕೊಂಡ. ನಾನ್ ಲವ್ ಮಾಡ್ತಾ ಇದ್ದವನು ಮೋಸಗಾರ ಅಂತ ಗೊತ್ತಿದ್ರು ನನಗೆ ಹೇಳದೆ ನನ್ನಾಗಿಯೇ ಅವನ ಬಗ್ಗೆ ಸತ್ಯ ಏನು ಅಂತ ತಿಳ್ಕೊಳ್ಳೋ ಹಾಗೇ ಮಾಡಿದ . ಇವತ್ತು ಕೂಡ ನನ್ನ ನೋಡಿ ಅವನು ಬಂದ ಕೆಲಸ ಮರೆತು ನನ್ನ ಕಣ್ಣೀರಿಗೆ ಕಾರಣ ಆದವನನ್ನ ಸಾಯಿಸೋಕೆ ಹೋದ. ನೋವಲ್ಲಿ ಇರೋ ನನಗೆ ಸಮಾಧಾನ ಮಾಡಿದ. ಧೈರ್ಯ ಹೇಳಿದ. ಧ್ರುವ್ ಜೊತೆಗೆ ಗಲಾಟೆ ಆದಾಗ ಯಾವ ಧೈರ್ಯದ ಮೇಲೆ ಅವನಿಗೆ ನಿನ್ನ ಲವ್ ಮಾಡೋಕ್ಕಿಂತ ಮಹಿ ಜೊತೆಗೆ ಮಲಗಿದಾಗ ತುಂಬಾ ಸಂತೋಷ ವಾಗಿ ಇರ್ತೀನಿ ಅಂತ ಹೇಳಿದ್ನೋ ಗೊತ್ತಿಲ್ಲ. ಹೇಳಿದ ಮೇಲೆ ಯಾಕ್ ಹೀಗೆ ಹೇಳಿದೆ ಅಂತ ತುಂಬಾ ಯೋಚ್ನೆ ಮಾಡಿದೆ. ಅವಾಗ ನನ್ನ ಮನಸ್ಸಿಗೆ ಅನ್ನಿಸಿತು ನನಗೆ ಗೊತ್ತಿಲ್ದೆ ನನ್ನನ್ನ ಒಬ್ಬ ನನ್ನಗಿಂತ ಹೆಚ್ಚಾಗಿ ನನ್ನ ಪ್ರೀತಿ ಮಾಡ್ತಾ ಇದ್ದಾನೆ ಅದಕ್ಕೆ ನನಗೆ ಅಷ್ಟು ಧೈರ್ಯ ಬಂದು ಹಾಗೇ ಹೇಳಬೇಕು ಅಂತ ಅನ್ನಿಸ್ತು ಅಂತ ಗೊತ್ತಾಯ್ತು. ಅದು ನಿಜಾನಾ ಸುಳ್ಳ ಅಂತ ತಿಳ್ಕೊಬೇಕು ಅಂತ ನಿನ್ನ ಫ್ರೆಂಡ್ ವಿಜಿ ನ ಮೀಟ್ ಮಾಡಿ ವಿಷಯ ಹೇಳ್ದೆ. ಅವಾಗ ನನಗೆ ನಿಜ ಗೊತ್ತಾಯ್ತು ನನಗೆ ನೀನು ಪರಿಚಯ ಆಗೋಕೂ ಮೊದಲಿಂದಾನು ನನ್ನ ಲವ್ ಮಾಡ್ತಾ ಇದ್ದಿಯಾ ಅಂತ. ಆಗ ನನಗೆ ಎಷ್ಟು ಸಂತೋಷ ಆಯ್ತು ಅಂದ್ರೆ ಅ ಕ್ಷಣ ನನ್ನಷ್ಟು ಖುಷಿಯಾಗಿ ಈ ಭೂಮಿ ಮೇಲೆ ಯಾರು ಇಲ್ಲಾ ಅಂತ ಅನ್ನಿಸ್ತು, ಅದ್ರೆ ನಿನ್ನ ಹತ್ತಿರಾನೆ ನನ್ನ ಲವ್ ಗೆ ಹೆಲ್ಪ್ ಕೇಳಿ ಮತ್ತೆ ಬಂದು ನಾನ್ ನಿನ್ನ ಲವ್ ಮಾಡ್ತಾ ಇದ್ದೀನಿ ಅಂತ ಹೇಳಿದ್ರೆ ನೀನೆಲ್ಲಿ ನನ್ನ ಬಗ್ಗೆ ತಪ್ಪಾಗಿ ತಿಳ್ಕೋತಿಯೋ ಅಂತ ಅನ್ನಿಸಿತು. ನಾನು ನಿನಗೆ ನೋವು ಮಾಡಿದರ ಮುಂದೆ ನನಗೆ ಅದ ನೋವು ತುಂಬಾ ಚಿಕ್ಕದು ಅಂತ ಅನ್ನಿಸ್ತು. ನಿನಗೆ ನನ್ನ ಲವ್ ಬಗ್ಗೆ ಹೇಳಿ ದೂರ ಆಗೋಕ್ಕಿಂತ ಹೇಳ್ದೆನೆ ಇದ್ದು ಬಿಡೋಣ ಅಂತ ನಿರ್ಧಾರ ಮಾಡಿದೆ. ಇವತ್ತು ನಿನ್ನ ಆಫೀಸ್ ಅಲ್ಲಿ ನೋಡಿದಾಗ ತಡ್ಕೊಂಡಿದ್ದ ನೋವೆಲ್ಲಾ ಕಣ್ಣೀರಿನ ಜೊತೆಗೆ ಹೊರಗೆ ಬಂತು. ಅಷ್ಟೇ ಸಂತೋಷ ಕೂಡ ಆಯ್ತು. ನನ್ನ ಖುಷಿಗೋಸ್ಕರ ಯಾರ್ ಹತ್ತಿರ ಅವಮಾನ ಪಟ್ಟೋ ನನ್ನ ಕಣ್ಣೀರನ್ನ ನೋಡಿ ಅವನನ್ನೇ ಸಾಯಿಸೋಕೆ ಹೋದೆ. ಕಾಫಿ ಶಾಪ್ ಅಲ್ಲಿ ಕೂಡ ನಿನಗೆ ನನ್ನ ಪ್ರೀತಿ ನ ಹೇಳೋದಕ್ಕಿಂತ ನಿನ್ನ ಜೊತೆ ಫ್ರೆಂಡ್ ಆಗಿ ಇದ್ದು ಬಿಡೋಣ ನಿನ್ನ ಜೊತೆಗೆ ಇರೋಣ ದೂರ ಆಗೋದು ಬೇಡ ಅಂತ ಅನ್ಕೊಂಡೆ. ಅದ್ರೆ ಇವಾಗ ಮತ್ತೆ ನೀನು ನನ್ನಿಂದ ದೂರ ಆಗ್ತೀಯಾ ಅಂತ ಗೊತ್ತಾಗಿ ಹೇಗೋ ತಡ್ಕೊಳ್ಳಿ. ಹೇಗೋ ಬದುಕಿರಲಿ. ಈಗ್ಲೂ ಕೂಡ ನಿನ್ನ ಗಟ್ಟಿಯಾಗಿ ತಬ್ಬಿಕೊಂಡು ಮಹಿ ನಾನು ನಿನ್ನ ಲವ್ ಮಾಡ್ತಾ ಇದ್ದೀನಿ ಪ್ಲೀಸ್ ನನ್ನ ಬಿಟ್ಟು ಹೋಗಬೇಡ ಕಣೋ ಅಂತ ಹೇಳಿ ಅಳಬೇಕು ಅಂತ ಅನ್ನಿಸ್ತಾ ಇದೆ. ಅದ್ರೆ ಎಲ್ಲಿ ನನ್ನ ತಪ್ಪಾಗಿ ತಿಳ್ಕೊಂಡು ದೂರ ಮಾಡ್ತೀಯ ಅಂತ ಭಯ ಆಗ್ತಾ ಇದೆ ಅಂತ ಹೇಳಿ ಅಳೋಕೆ ಶುರು ಮಾಡಿದ್ಲು.
ಅವಳ ಕೈ ಇಡ್ಕೊಂಡು ಹತ್ತಿರ ಕರೆದುಕೊಂಡು ಗಟ್ಟಿಯಾಗಿ ತಬ್ಬಿಕೊಂಡೆ. ಅಕಿರಾ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಅಳ್ತಾ ಮಹಿ ಪ್ಲೀಸ್ ನನ್ನ ಬಿಟ್ಟು ಹೋಗಬೇಡವೋ ಐ ಲವ್ ಯು ಕಣೋ. ಐ ಲವ್ ಯು ಅಂತ ಹೇಳಿ ಅಳೋಕೆ ಶುರು ಮಾಡಿದ್ಲು. ತುಂಬಾ ಥ್ಯಾಂಕ್ಸ್ ಕಣೆ ಈಗಲಾದ್ರೂ ಹೇಳಬೇಕು ಅಂತ ಅನ್ನಿಸಿತು ಅಲ್ವಾ, ಎಲ್ಲಿ ಹೇಳದೆ ಹಾಗೇ ಇದ್ದು ಬಿಡ್ತೀಯ ಅಂತ ಭಯ ಬಿದ್ದೆ ಲವ್ ಯು ಟು ಅಂತ ಹೇಳಿದೆ. ಅಕಿರಾ ಇನ್ನು ಅಳೋಕೆ ಶುರು ಮಾಡಿದ್ಲು. ಇಬ್ರು ಹಾಗೇ ಎಷ್ಟೋತ್ತು ಇದ್ವಿ ಅನ್ನೋದೇ ಗೊತ್ತಾಗಲಿಲ್ಲ. ಮೊಬೈಲ್ ರಿಂಗ್ ಅದ ಸೌಂಡ್ ಗೆ ಇಬ್ಬರು ವಾಸ್ತವಕ್ಕೆ ಬಂದ್ವಿ. ಅಕಿರಾ ನ ಅಪ್ಪುಗೆ ಯಿಂದ ದೂರ ಮಾಡಿ ಅವಳ ಮುಖ ನೋಡಿದೆ. ತುಂಬಾ ಮುದ್ದಾಗಿ ಕಾಣಿಸ್ತಾ ಇದ್ಲು ಅಣೆಮೇಲೆ ಕಿಸ್ ಮಾಡಿ ಥ್ಯಾಂಕ್ಸ್ ಮೈ ಡಿಯರ್ ಕೊನೆಗೂ ನನ್ನ ಪ್ರೀತಿ ನ ಅರ್ಥ ಮಾಡಿಕೊಂಡಿದ್ದಕ್ಕೆ ಅಂತ ಹೇಳಿ ಮತ್ತೆ ಕಿಸ್ ಮಾಡೋಕೆ ಹೋದೆ ಅಕಿರಾ ಕಣ್ ಮುಚ್ಚಿ ಕಿಸ್ ಗೋಸ್ಕರ ಅವಳು ಕಾಯ್ತಾ ಇದ್ಲು. ಇಬ್ಬರಲ್ಲೂ ಏನೋ ಒಂತರಾ ಫೀಲ್ ಅಕಿರಾ ಳ ತುಟಿಗಳು ನಡಗುತ್ತ ನನ್ನ ಕಿಸ್ ಗೋಸ್ಕರ ಕಾಯ್ತಾ ಇದೆ. ಹತ್ತಿರ ಬಂದಷ್ಟು ಇಬ್ಬರಲ್ಲೂ ಹಾರ್ಟ್ ಬೀಟ್ ಜಾಸ್ತಿ ಆಗ್ತಾ ಇದೆ. ಇಬ್ಬರ ಉಸಿರಲ್ಲೂ ಬಿಸಿ ಜಾಸ್ತಿ ಆಗ್ತಾ ಇದೆ. ಕೊನೆಗೂ ಇಬ್ಬರ ತುಟಿಗಳು ಒಂದಾದವು. ಏನೋ ಒಂತರಾ ಫೀಲ್. ಹಾಗೇ ಎಷ್ಟೋತ್ತು ಕಿಸ್ ಮಾಡ್ಕೊಂಡು ಇದ್ವೋ ಗೊತ್ತಿಲ್ಲ. ಮತ್ತೆ ಮೊಬೈಲ್ ರಿಂಗ್ ಅದ ಸದ್ದಿಗೆ ಇಬ್ಬರು ವಾಸ್ತವಕ್ಕೆ ಬಂದ್ವಿ. ಇಬ್ಬರ ತುಟಿಗಳು ದೂರ ಆದವು. ಅಕಿರಾ ಕಣ್ಣುಗಳನ್ನ ನೋಡಿದೆ. ಅವಳು ನನ್ನ ನೋಡು ನಾಚಿಕೊಂಡು ತಲೆ ಬಗ್ಗಿಸಿದಳು. ಮೊಬೈಲ್ ರಿಂಗ್ ಆಗ್ತಾನೆ ಇರೋದನ್ನ ನೋಡಿ. ಕೋಪ ಬಂದು ಡಿಸ್ಪ್ಲೇ ಕಡೆಗೆ ನೋಡಿ ಮನಸಲ್ಲೇ ಬೈಕೊಂಡು. ಕಾಲ್ ಪಿಕ್ ಮಾಡಿದೆ.
ಅಮ್ಮ ಕಾಲ್. ಕಾಲ್ ಪಿಕ್ ಮಾಡಿ ಹೇಳು ಅಮ್ಮ. ಲೋ ಎಲ್ಲಿದ್ದೀಯ ಊಟಕ್ಕೆ ಬರ್ತೀನಿ ಅಂತ ಹೇಳ್ದೆ ಟೈಮ್ ಆಗಿಲ್ವಾ ಅಂತ ಕೇಳಿದ್ರು. ಅಮ್ಮ ಸ್ವಲ್ಪ ವರ್ಕ್ ಇದೆ ಮುಗಿಸಿ ಸಂಜೆ ಬರ್ತೀನಿ ಅಂತ ಹೇಳ್ದೆ. ಸರಿ ಹುಷಾರು ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ಅಕಿರಾ ಯಾರು ಅಮ್ಮ ನ ನನಗು ಅವರನ್ನ ನೋಡಬೇಕು ಅಂತ ಅನ್ನಿಸ್ತಾ ಇದೆ ಕರ್ಕೊಂಡು ಹೋಗೋ ಅಂತ ಕೇಳಿದ್ಲು. ಸರಿ ಕರ್ಕೊಂಡು ಹೋಗ್ತೀನಿ ಅಂತ ಹೇಳಿ ಕಾರ್ ಸ್ಟಾರ್ಟ್ ಮಾಡಿಕೊಂಡು ಅಕಿರಾ ಮನೆ ಕಡೆಗೆ ಡ್ರೈವ್ ಮಾಡಿದೆ.
**************************************
P. S