Mahi - 28 in Kannada Love Stories by S Pr books and stories PDF | ಮಹಿ - 28

The Author
Featured Books
  • जहाँ से खुद को पाया - 1

    Part .1 ‎‎गाँव की सुबह हमेशा की तरह शांत थी। हल्की धूप खेतों...

  • उड़ान (5)

    दिव्या की ट्रेन नई पोस्टिंग की ओर बढ़ रही थी। अगला जिला—एक छ...

  • The Great Gorila - 2

    जंगल अब पहले जैसा नहीं रहा था। जहाँ कभी राख और सन्नाटा था, व...

  • अधुरी खिताब - 52

    एपिसोड 52 — “हवेली का प्रेत और रक्षक रूह का जागना”(सीरीज़: अ...

  • Operation Mirror - 6

    मुंबई 2099 – डुप्लीकेट कमिश्नररात का समय। मरीन ड्राइव की पुर...

Categories
Share

ಮಹಿ - 28

  ಕಾರ್ ಅಲ್ಲಿ ನಾನು ಅಕಿರಾ ಹೋಗ್ತಾ ಇದ್ವಿ. ಅಕಿರಾ ಮಾತಾಡ್ತಾ ಮಹಿ ಇಷ್ಟು ದಿನ ಮೈಸೂರ್ ಅಲ್ಲಿ ಏನ್ ಮಾಡ್ತಾ ಇದ್ದೆ. ಸಡನ್ ಆಗಿ ಬೆಂಗಳೂರು ಅಲ್ಲಿ ಅದು ನಮ್ ಕಂಪನಿ ಗೆ ಕ್ಲೈಂಟ್ಸ್ ಆಗಿ ಬಂದೆ. ನೋಡು ನನ್ನಿಂದ ನಿನಗೆ ಈ ಕೆಲಸ ಕೂಡ ಹೋಗೋ ಹಾಗೇ ಆಯ್ತು. ನನಗೆ ಹೆಲ್ಪ್ ಮಾಡೋ ಪ್ರತಿ ಸರಿ ನಿನ್ನಿಂದ ಏನಾದ್ರು ಒಂದು ದೂರ ಆಗ್ತಾನೆ ಇರುತ್ತೆ ಅವಮಾನ ಆಗ್ತಾನೆ ಇರುತ್ತೆ. ಅಂತ ಸ್ವಲ್ಪ ಬೇಜಾರಲ್ಲೇ ಹೇಳಿದ್ಲು. ನಾನು ನಗ್ತಾ ಅಕಿರಾ ಒಬ್ಬ ವ್ಯಕ್ತಿ ಯಿಂದ ಸಿಗೋದು ದೂರ ಆಗೋದು ಅನ್ನೋದು ನಿಜಾನೆ ಆಗಿದ್ರೆ  ಎಲ್ಲರೂ ಒಳ್ಳೆ ಲಾಭಗಳು ಸಿಗೋ ವ್ಯಕ್ತಿ ಗಳನ್ನೇ ಪಕ್ಕದಲ್ಲಿ ಇಟ್ಕೊತಾ ಇದ್ರು. ಆಗ ಯಾರಿಗೂ ಸೋಲು ಅನ್ನೋದೇ ಇರ್ತಾ ಇದ್ದಿಲ್ಲ. ನೀನು ಕೂಡ ನನ್ನ ಪಕ್ಕದಲ್ಲಿ ಈಗೆ ಕುರ್ತಾ ಇದ್ದಿಲ್ಲ ಅಂತ ಹೇಳ್ದೆ. ಮಹಿ ಅದು ಆಗಲ್ಲಾ ಕಣೋ ನನಗೆ ಹೆಲ್ಪ್ ಮಾಡೋಕೆ ಬಂದ ಪ್ರತಿ ಸರಿ ನಿನಗೆ ಏನಾದ್ರು ಒಂದು ಪ್ರಾಬ್ಲಮ್ ಆಗ್ತಾನೆ ಇರುತ್ತೆ ಅಲ್ವಾ ಅದಕ್ಕೆ ಹಾಗೇ ಹೇಳ್ದೆ ಸಾರೀ. ಸರಿ ನನ್ನ ಮನೆಗೆ ಡ್ರಾಪ್ ಮಾಡು ನಾನ್ ಮನೆಗೆ ಹೋಗ್ತೀನಿ ಅಂತ ಹೇಳಿದ್ಲು.  ನಾನು ಅಕಿರಾ ಕಡೆಗೆ ನೋಡ್ತಾ ಹಲೋ ಮಿಸ್ ಅಕಿರಾ ಅವರೇ ನಿನ್ನ ಮನೆ ಹತ್ತಿರ ಡ್ರಾಪ್ ಮಾಡಬೇಕು ಅಂದ್ರೆ ನಾನು ನಿಮ್ ಮನೆ ಹತ್ತಿರ ಬರಬೇಕು. ನಿಮ್ ಮನೆ ಹತ್ತಿರ ಬಂದ್ರೆ ನಿಮ್ ಮನೆಗೆ ಬರಬೇಕು. 6 7 ತಿಂಗಳು ಆದಮೇಲೆ ನಿಮ್ ಮನೆಗೆ ಬರ್ತಾ ಇದ್ದೀನಿ ಬರಿ ಕೈಲಿ ಬಂದ್ರೆ. ನಿಮ್ ಅಪ್ಪ ಅಮ್ಮ ನೋಡು ಮನೆಗೆ ಅಳಿಯ ಆಗೋವ್ನು ಇಷ್ಟು ದಿನ ಆದಮೇಲೆ ಮನೆಗೆ ಬಂದಿದ್ದಾನೆ ಅದು ಬರಿ ಕೈಲಿ. ಮನೆಗೆ ಬಂದವನು ಕಡೆ ಪಕ್ಷ ಅಕಿರಾ ಗೆ ಕೂಡ ಏನು ಗಿಫ್ಟ್ ತಂದಿಲ್ಲ ಅಂತ ಬೈಕೋತಾರೆ. ಬೇಕಾ ಅವೆಲ್ಲಾ ನನಗೆ ಹೇಳು ಅಂತ ಹೇಳ್ದೆ. ಅಕಿರಾ ಬೇಡ ಮಹಿ ಮನೇಲಿ ಅಪ್ಪ ಅಮ್ಮನಿಗೆ ನಿಜ ಹೇಳಿ ಬಿಡ್ತೀನಿ ಧ್ರುವ್ ನ ವಿಷಯವಾಗಿ ನಿಮ್ ಹತ್ತಿರ ನಾಟಕ ಮಾಡಿದೆ ಅಂತ ಹೇಳಿದ್ಲು. ನಾನು ನಗ್ತಾ ನೀನು ಹೇಳೋಕು ಮೊದಲೇ ವಿನೋದ್ ನಿಮ್ ಮನೇಲಿ ಹೇಳಿರ್ತಾನೆ ಅಂತ ಹೇಳೋ ಅಷ್ಟರಲ್ಲಿ ಅಕಿರಾ ಮೊಬೈಲ್ ರಿಂಗ್ ಆಯ್ತು. ಅಕಿರಾ ಮೊಬೈಲ್ ಕಡೆಗೆ ನೋಡ್ತಾಳೆ  ಅಪ್ಪ ಕಾಲ್. ಅಕಿರಾ ಕಾಲ್ ನೋಡಿ ಭಯ ಬಿದ್ದು ಮಹಿ ಅಪ್ಪ ಕಾಲ್ ಅಂತ ಹೇಳಿದ್ಲು. ನಾನು ನೋಡಿದ ಅಂತ ಹೇಳಿ ಮೊಬೈಲ್ ತಗೊಂಡು ಕಾಲ್ ಪಿಕ್ ಮಾಡಿ ಲೌಡ್ ಸ್ಪೀಕರ್ ಅಲ್ಲಿ ಇಟ್ಟು ಹಲೋ ಅಂತ ಹೇಳ್ದೆ.  ಅಂಕಲ್ ಮಾತಾಡ್ತಾ ಹಲೋ ಯಾರ್ ಮಾತಾಡೋದು ಅಂತ ಕೇಳಿದ್ರು. ಸರ್ ನಾನು ಮಹಿ ಮಾತಾಡ್ತಾ ಇರೋದು ಅಂತ ಹೇಳ್ದೆ. ಅಂಕಲ್ ಮಹಿ ಅಕಿರಾ ಎಲ್ಲಿ ಅಂತ ಕೇಳಿದ್ರು. ಅಂಕಲ್ ಇಲ್ಲೇ ನನ್ನ ಜೊತೆಗೆ ಇದ್ದಾಳೆ, ಬೆಂಗಳೂರಿಗೆ ಇವತ್ತೇ ಬಂದೆ ಅಕಿರಾ ನ ನೋಡಬೇಕು ಅನ್ನಿಸ್ತು ಅದಕ್ಕೆ ಒಂದು ಸರಿ ನೋಡ್ಕೊಂಡು ಮಾತಾಡಿಸಿಕೊಂಡು ಹೋಗೋಣ ಅಂತ ಜೊತೆ ಕರ್ಕೊಂಡು ಬಂದೆ. ಯಾಕ್ ಅಂಕಲ್ ಏನಾಯ್ತು ಅಂತ ಕೇಳ್ದೆ.  ಅಂಕಲ್ ಮಾತಾಡ್ತಾ ಮಹಿ ವಿನೋದ್ ಕಾಲ್ ಮಾಡಿದ್ದ ಆಫೀಸ್ ಅಲ್ಲಿ ಏನೋ ಗಲಾಟೆ ಆಯ್ತು ಅಂತೇ ಜಾಬ್ ಗೆ ರಿಸೈನ್ ಮಾಡಿದ್ಲು. ಮಹಿ ಅಕಿರಾ ಇಬ್ರು ಲವ್ ಮಾಡ್ತಾ ಇಲ್ಲಾ ಅವರು ಡ್ರಾಮಾ ಮಾಡ್ತಾ ಇದ್ದಾರೆ, ಅಷ್ಟೇ ಅಲ್ಲ ನನ್ನ ವೈರಿ ಮಗ ಧ್ರುವ್ ನ ಲವ್ ಮಾಡ್ತಾ ಇದ್ದಾಳೆ ಅಂತ ಏನೇನೋ ಹೇಳ್ದ ನಿಜಾನಾ ಅಂತ ಕೇಳಿದ್ರು. ಅದನ್ನ ಕೇಳಿ ಅಕಿರಾ ಗೆ ಭಯ ಆಗೋಕೆ ಶುರು ಆಯ್ತು.

    ಏನ್ ಅಂಕಲ್ ಯಾವನೋ ಏನೋ ಹೇಳ್ದ ಅಂತ ನೀವು ಭಯ ಬಿದ್ದು ಈಗೆ ಕಾಲ್ ಮಾಡಿದ್ರೆ ಹೇಗೆ. ಅಕಿರಾ ಗೆ ನಾನೆ ಜಾಬ್ ಗೆ ರಿಸೈನ್ ಮಾಡು ಅಂತ ಹೇಳಿದ್ದು. ಅದಕ್ಕೆ ಅವಳು ಜಾಬ್ ಗೆ ರಿಸೈನ್ ಮಾಡಿದ್ದು. ಇನ್ನು ಗಲಾಟೆ ಅಂತೀರಾ ವಿನೋದ್ ಗೆ ನನ್ನ ನೋಡಿದ್ರೆ ಮೊದಲಿಂದ ಆಗೋದೇ ಇಲ್ಲಾ. ನನ್ನ ಅಲ್ಲಿ ನೋಡಿ ಅವನೇ ಗಲಾಟೆ ಶುರು ಮಾಡಿದ. ಅವನು ನಿಮ್ ಹತ್ತಿರ ಒಳ್ಳೆಯವನು ಆಗೋಕೆ ಈ ರೀತಿ ಹೇಳಿದ್ದಾನೆ. ಇನ್ನೊಂದು ವಿಷಯ ನಾನು ಅಕಿರಾ ಲವ್ ಮಾಡೋದು ಡ್ರಾಮಾ ಅಂತ ಅವನಿಗೆ ಗೊತ್ತಿದ್ರೆ ಮೊದಲೇ ಏನಕ್ಕೆ ಹೇಳ್ತಾ ಇದ್ದಿಲ್ಲ. ನಿಮ್ ವೈರಿ ಮಗನನ್ನ ಲವ್ ಮಾಡೋ ವಿಷಯ ಕೂಡ ಏನಕ್ಕೆ ನಿಮ್ಮಿಂದ ಮುಚ್ಚಿಟ್ಟ ಮೊದಲೇ ಹೇಳಬಹುದಾಗಿತ್ತು ಅಲ್ವಾ ಈಗ ಹೇಳೋಕೆ ಕಾರಣ ಏನು ನೀವೇ ಯೋಚ್ನೆ ಮಾಡಿ ಅಂತ ಹೇಳ್ದೆ. ಅಂಕಲ್ 1 ನಿಮಿಷ ಮೌನವಾಗಿದ್ದು ಹೌದು ಮಹಿ ನೀನು ಹೇಳೋದು ನಿಜ. ಸಾರೀ ಮಹಿ ಅವನು ಏನೋ ಹೇಳ್ದ ಅಂತ ಕಾಲ್ ಮಾಡಿದೆ ಸಾರೀ ಅಂತ ಹೇಳಿದ್ರು. ಪರ್ವಾಗಿಲ್ಲ ಸರ್ ನಿಮಗೆ ಮಗಳ ಮೇಲೆ ಇರೋ ಪ್ರೀತಿ ನ ನಾನು ಅರ್ಥ ಮಾಡ್ಕೋತೀನಿ ಅಂತ ಹೇಳ್ದೆ.      ಸರಿ ಮಹಿ ಅಕಿರಾ ನ ಮಾತಾಡಿಸಿಕೊಂಡು ಹಾಗೇ ಹೋಗಬೇಡ ಮನೆಗೆ ಬಾ ಅಂತ ಅಂಕಲ್ ಹೇಳಿದ್ರು. ಸರಿ ಅಂಕಲ್ ತುಂಬಾ ದಿನ ಆದಮೇಲೆ ಮೀಟ್ ಮಾಡ್ತಾ ಇದ್ದೀನಿ ಅಲ್ವಾ ಶಾಪಿಂಗ್ ಕರ್ಕೊಂಡು ಹೋಗಿ ಮನೆಗೆ ಖಂಡಿತ ಬರ್ತೀನಿ ಅಂತ ಹೇಳ್ದೆ. ಅಕಿರಾ ಅವರ ಅಮ್ಮ ಮಾತಾಡ್ತಾ. ಮಹಿ ನೀನು ಬಂದಿದ್ದು ತುಂಬಾ ಸಂತೋಷ ಆಯ್ತು ನೀನು ಹೋದಾಗಿನಿಂದ ಅಕಿರಾ ತುಂಬಾ ಡಲ್ ಆಗಿ ಇದ್ದಾಳೆ ಟೈಮ್ ಸರಿಯಾಗಿ ಊಟ ಮಾಡ್ತಾ ಇಲ್ಲಾ ಅವಳಿಗೆ ಸ್ವಲ್ಪ ನೀನಾದ್ರೂ ಹೇಳಪ್ಪ ಅಂತ ಹೇಳಿದ್ರು. ಸರಿ ಅಮ್ಮ ನಾನ್ ಅವಳಿಗೆ ಹೇಳ್ತಿನಿ ಇನ್ಮುಂದೆ ಹಾಗೇ ಇರೋದಿಲ್ಲ ಅಂತ ಹೇಳ್ದೆ. ಸರಿ ಹುಷಾರು ಮಹಿ ಅಂತ ಹೇಳಿ ಕಾಲ್ ಕಟ್ ಮಾಡಿದ್ರು. 

   ನಾನು ಮೊಬೈಲ್ ನ ಅಕಿರಾ ಕೈಗೆ ಕೊಟ್ಟು ಅವಳ ಮುಖ ನೋಡಿದೆ. ಅವಳ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಇನ್ನೇನು ಹೊರಗೆ ಬರೋತರ ಇದೆ. ನಾನ್ ಅವಳನ್ನ ನೋಡಿ ಇವಾಗ ಏನಾಯ್ತು ಅಂತ ಈಗಿದ್ದಿಯಾ ಅಂತ ಕೇಳ್ದೆ. ಯಾಕೋ ಅವರಿಗೆ ನಿಜ ಹೇಳಬೇಕಾಗಿತ್ತು ಅಲ್ವಾ  ಅಂತ ಕೇಳಿದ್ಲು. ಅಲ್ವೇ  ಚಿಕ್ ವಿಷಯ ನ ಇಷ್ಟು ದೊಡ್ಡದ್ದು ಮಾಡಿದ್ದು ನೀನು. ನಾನ್ ಏನಾದ್ರು ನಿನಗೆ ಕಾಲ್ ಮಾಡಬೇಡ ನಿನ್ನಿಂದ ನನಗೆ ಪ್ರಾಬ್ಲಮ್ ಆಯ್ತು ಅಂತ ಹೇಳಿದ್ನ. ನೀನು ಯಾವಾಗ ಧ್ರುವ್ ನ ಪರಿಚಯ ಮಾಡಿಸಿದ್ದೋ ಅವತ್ತೇ ನನಗೆ ಅರ್ಥ ಆಯ್ತು  ಅವನ ಆಲೋಚನೆ ಬೇರೆ ಇದೆ ಅಂತ. ಅವಾಗ ನಾನು ಹೇಳಿದ್ರು ನೀನು ನನ್ನೇ ತಪ್ಪಾಗಿ ನೋಡ್ತಾ ಇದ್ದೆ. ಅದಕ್ಕೆ ಸುಮ್ನೆ ಇದ್ದೆ. ನಾನು ಇಲ್ಲಿಂದ ಹೋಗೋವಾಗಾ ನಿನಗೆ ಹಾಗೇ ಹೇಳಿ ಹೋಗೋ ಕಾರಣ ಕೂಡ ಇದೆ.  ನಿನಗೆ ಇನ್ನೊಂದು ವಿಷಯ ಗೊತ್ತಾ  ವಿನೋದ್ ಧ್ರುವ್ ಇಬ್ಬರು ಫ್ರೆಂಡ್ಸ್. ವಿನೋದ್ ಗೆ ಈ ರೀತಿ ಮಾಡೋದಕ್ಕೆ ಹೇಳಿದ್ದೆ ಧ್ರುವ್ ಅಂತ ಹೇಳ್ದೆ. ಅಕಿರಾ ಗೆ ನಾನ್ ಹೇಳಿದ್ದನ್ನ ಕೇಳಿ ಶಾಕ್ ಆಯ್ತು. ಏನೋ ಹೇಳ್ತಾ ಇದ್ದಿಯಾ ಅಂತ ಕೇಳಿದ್ಲು. ಹೌದು ಅಕಿರಾ, ನಿಮ್ಮಪ್ಪನ ಮೇಲೆ ಇರೋ ದ್ವೇಷಕ್ಕೆ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ನಿನ್ನ ಲವ್ ಮಾಡೊತರ ನಾಟಕ ಮಾಡಿದ. ವಿನೋದ್ ಗೆ ಹೇಳಿ ನಿಮ್ ಮನೆಗೆ ಮದುವೆ ಪ್ರಪೋಸಲ್ ತಂದ. ನೀನು ನನ್ನ ಬಗ್ಗೆ ಹೇಳ್ತಿಯ ಅಂತ ಅವನಿಗೆ ಚೂರು ಐಡಿಯಾ ಕೂಡ ಇದ್ದಿಲ್ಲ. ಯಾವಾಗ ನೀನು ನನ್ನ ಪರಿಚಯ ಮಾಡಿಸಿದೋ ಅವನ ಪ್ಲಾನ್ ಉಲ್ಟಾ ಆಯ್ತು.  ಅವಾಗ ವಿನೋದ್ ನ ನನ್ನ ಮೇಲೆ ಚು ಬಿಟ್ಟ.  ನೋಡೋಣ ಇವರ ನಾಟಕ ಎಲ್ಲಿ ತನಕ ಅಂತ ನಾನು ಸುಮ್ನೆ ಇದ್ದೆ. ನಿನಗೆ ಅವನ ಬಗ್ಗೆ ಗೊತ್ತಾಗಬೇಕು ಅನ್ನೋ ಕಾರಣಕ್ಕೆ ಸುಮ್ಮನೆ ಇದ್ದೆ. ಇಲ್ಲಾ ಅಂದಿದ್ರೆ ಇವತ್ತು ಅವನ ಕುತ್ತಿಗೆ ಇಡಿದ ಹಾಗೇ ಅವತ್ತೇ ಅವನ ಕುತ್ತಿಗೆ ಇಡಿದು ನಾಲಕ್ಕು ಬಾರಿಸ್ತಾ ಇದ್ದೆ. ಇಲ್ಲಿ ತನಕ ಬರೋಕೆ ಬಿಡ್ತಾ ಇದ್ದಿಲ್ಲ ಅಂತ ಹೇಳ್ದೆ. ಸಾರೀ ಕಣೋ ನನ್ನಿಂದ ನೀನು ಅಂತ ಇನ್ನು ಏನೋ ಹೇಳೋಕೆ ಬಂದ್ಲು. ಲೇ ಸಾಕು ಬಿಡೆ ಎಷ್ಟು ಸರಿ ಸಾರೀ ಸಾರೀ ಅಂತ ಹೇಳ್ತಿಯ ಕೇಳಿ ಕೇಳಿ ಬೇಜಾರಾಗಿದೆ ಅಂತ ಹೇಳ್ದೆ. ಅಕಿರಾ ಕಣ್ಣು ದೊಡ್ಡದ್ದು ಮಾಡಿಕೊಂಡು ನನ್ನ ಕಡೆಗೆ ನೋಡ್ತಾ ಏನೋ ನನ್ನೇ ಲೇ ಅಂತ ಇದ್ದಿಯಾ ನಿನ್ನ ಅಂತ ಹೊಡಿಯೋಕೆ ಬಂದ್ಲು. ನಾನು ಅವಳ ಕೈ ತಡೆದು ಮತ್ತೆ ಪದೇ ಪದೇ ಸಾರೀ ಸಾರೀ ಅಂತ ಹೇಳ್ತಾ ಇದ್ರೆ ಇನ್ನೇನ್ ಮಾಡ್ಲಿ ಅಂತ ಹೇಳ್ದೆ. 

  ಅಕಿರಾ ಸೈಲೆಂಟಾಗಿ. ಮತ್ತೆ ಮಾತಾಡ್ತಾ ಸರಿ ಇವಾಗ ಹೇಳು ಎಲ್ಲಿ ವರ್ಕ್ ಮಾಡ್ತಾ ಇದ್ದಿಯಾ. ಈಗ ಎಲ್ಲಿ ಇದ್ದಿಯಾ ಅಂತ ಕೇಳಿದ್ಲು. ಸದ್ಯಕ್ಕೆ ಈಗ ಬೆಂಗಳೂರಲ್ಲೆ ವರ್ಕ್. ವೀಕ್ಲಿ 3 ಟೈಮ್ಸ್ ಮೈಸೂರ್ ಹೋಗಿ ಬರಬೇಕು ಅಂತ ಹೇಳ್ದೆ. ಹೌದ ಏನ್ ಜಾಬ್ ಅಂತ ಕೇಳೋ ಅಷ್ಟರಲ್ಲಿ  ನನಗೆ ಕಾಲ್ ಬಂತು. ಮೊಬೈಲ್ ಕಾರ್ ಬ್ಲೂ ಟೂತ್ ಗೆ ಕನೆಕ್ಟ್ ಆಗಿತ್ತು. ಕಾರ್ ಡಿಸ್ಪ್ಲೇ ನಲ್ಲಿ  ಜಿರಳೆ ಅಂತ ನೇಮ್ ಡಿಸ್ಪ್ಲೇ ಆಯ್ತು. ಅಕಿರಾ ಅದನ್ನ ನೋಡಿ ಸೈಲೆಂಟ್ ಆದ್ಲು. ನಾನು ಕಾಲ್ ಪಿಕ್ ಮಾಡಿ. ಹೇಳೇ ಅಂತ ಹೇಳ್ದೆ.. ಶಿಲ್ಪಾ. ಲೋ ಎಲ್ಲಿದ್ದೀಯ ಯಾವಾಗ ಬರ್ತೀಯ ಮೈಸೂರ್ ಗೆ ತಾತ ನಿನ್ನ ನೋಡಬೇಕು ನಿನ್ನ ಜೊತೆಗೆ ಮಾತಾಡಬೇಕು ಅಂತ ಹೇಳಿದ್ರು ಅಂತ ಹೇಳುದ್ಲು. ಹೌದ  ಸಂಜೆ ಇಲ್ಲಾ ನಾಳೆ ಬರ್ತೀನಿ ಹೇಳ್ಬಿಡು ತಾತನಿಗೆ ಅಂತ ಹೇಳ್ದೆ. ಸರಿ ಹೇಳ್ತಿನಿ ಅಕಿರಾ ನ ಮೀಟ್ ಮಾಡಿದ ಅಂತ ಕೇಳಿದ್ಲು.  ಲೇ ನನಗೆ ಬೇಕಾದ್ರೆ ನಾನ್ ಹೋಗಿ ಮೀಟ್ ಮಾಡ್ತೀನಿ ನಿನಗೆ ಯಾಕೆ, ನಿನಗೆ ಅವಳ ಮೇಲೆ ಅಷ್ಟು ಪ್ರೀತಿ ಇದ್ರೆ ಹೋಗಿ ನೀನೇ ಮೀಟ್ ಮಾಡು ಅಂತ ಹೇಳ್ದೆ. ಶಿಲ್ಪಾ ನನಗು ಅವಳನ್ನ ಮೀಟ್ ಮಾಡಬೇಕು ಅನ್ನೋ ಆಸೆ ಇದೆ ಕಣೋ ಅದ್ರೆ ಅವತ್ತು ನಿನಗೆ ಹೆಲ್ಪ್ ಮಾಡಿ ನೀನು ಪ್ರಾಬ್ಲಮ್ ಅಲ್ಲಿ ಇರೋವಾಗ ಏನು ಮಾತಾಡದೆ ಸುಮ್ನೆ ಇದ್ಲು ಅನ್ನೋ ಕೋಪ ಅದು ಅಲ್ಲದೆ ಇಲ್ಲಿ ವರ್ಕ್ ಬೇರೆ ಹೋಗೋಣ ಮೀಟ್ ಮಾಡೋಣ ಅಂತ ಅಂದ್ರು ಟೈಮ್ ಸಿಗ್ತಿಲ್ಲ. ಪ್ಲೀಸ್ ನನಗೋಸ್ಕರ ಹೋಗಿ ಅವಳನ್ನ ಮೀಟ್ ಮಾಡಿ ಬರೋ ಎಷ್ಟೇ ಆದ್ರು ಅವಳು ನನ್ನ ಬೆಸ್ಟ್ ಫ್ರೆಂಡ್. ನೀನು ಅವಳನ್ನ ಮಾತಾಡಿಸದೆ ಇದ್ರು ಪರ್ವಾಗಿಲ್ಲ ಹೇಗಿದ್ದಾಳೆ ಅಂತ ನೋಡಿ ಹೇಳೋ ಸಾಕು ಅಂತ ಸ್ವಲ್ಪ ನೋವಿನಿಂದ ಹೇಳಿದ್ಲು. 

ಶಿಲ್ಪಾ ಮಾತನ್ನ ಕೇಳಿ ಅಕಿರಾ ಕಣ್ಣಲ್ಲಿ ಕಣ್ಣೀರು ತುಂಬಿ ಹೊರಗೆ ಬರೋಕೆ ಶುರುವಾಯ್ತು. ನಾನು ಶಿಲ್ಪಾ ಹತ್ತಿರ ಮಾತಾಡ್ತಾ ಲೇ ಅಷ್ಟೇನು ಫೀಲ್ ಆಗಬೇಡ ಇಲ್ಲೇ ಪಕ್ಕದಲ್ಲಿ ಇದ್ದಾಳೆ ಮಾತಾಡು ಅಂತ ಹೇಳ್ದೆ. ಶಿಲ್ಪಾ ಶಾಕ್ ಆಗಿ ಏನು ಪಕ್ಕದಲ್ಲೇ ಇದ್ದಾಳ ಕೊಡು ಮಾತಾಡ್ತೀನಿ ಅಂತ ಹೇಳ್ದೆ.  ಅವಳು ಆವಾಗಿನಿಂದ ನೀನು ಮಾತಾಡೋದನ್ನ ಕೇಳಿಸಿ ಕೊಳ್ತಾ ಇದ್ದಾಳೆ ಮಾತಾಡು ಅಂತ ಹೇಳಿ ಸೈಲೆಂಟ್ ಅದೇ. ಶಿಲ್ಪಾ ಅಕ್ಕಿ ಹೇಗಿದ್ದೀಯ ಅಂತ ಕೇಳಿದ್ಲು. ಅಕಿರಾ ಅಳ್ತಾ ಸಾರೀ ಕಣೆ ಹೇಳ್ದೆ ಬಿಟ್ಟು ಹೋದೆ ಅಂತ ನಿನ್ನ ಮೇಲೆ ಕೋಪ ಮಾಡ್ಕೊಂಡು ನಿನ್ನ ಜೊತೆಗೆ ಮಾತಾಡಲೇ ಬಾರ್ದು ಅಂತ ನಿರ್ಧಾರ ಮಾಡಿದೆ. ಬಟ್ ಅವತ್ತು ನಾನ್ ಮಾಡಿದ್ದೂ ತಪ್ಪು ಅಂತ ಗೊತ್ತಾಗಿ ಯಾವ್ ಮುಖ ಇಟ್ಕೊಂಡು ನಿನ್ನ ಹತ್ತಿರ ಮಾತಾಡ್ಲಿ ಅಂತ ಸೈಲೆಂಟ್ ಆಗೋದೇ ನನ್ನ ಕ್ಷಮಿಸಿ ಬಿಡೆ ಅಂತ ಹೇಳಿದ್ಲು. ಶಿಲ್ಪಾ ಬಿಡೆ ನಾನೆ ನಿನ್ನ ಹತ್ತಿರ ಸಾರೀ ಕೇಳಬೇಕು ನಾನು ಕೂಡ ಸ್ವಲ್ಪ ಹಠ ಮಾಡಿದೆ ನನ್ನ ಕೂಡ ಕ್ಷಮಿಸಿ ಬಿಡು. ನಿನ್ನ ಜೊತೆಗೆ ಮಾತಾಡಿ ತುಂಬಾ ಸಂತೋಷ ಆಗ್ತಾ ಇದೆ, ನಿನ್ನ ನೋಡ್ಬೇಕು ನಿನ್ನ ಜೊತೆಗೆ ಮಾತಾಡಬೇಕು ಅಂತ ಅನ್ನಿಸ್ತಾ ಇದೆ ಮಹಿ ಜೊತೆಗೆ ಮೈಸೂರ್ ಗೆ ಬಾ ಅಂತ ಹೇಳಿದ್ಲು. ಅಕಿರಾ ಕಣ್ಣೀರು ಹೊರೆಸಿಕೊಳ್ತಾ ನನಗು ಬರಬೇಕು ಅಂತ ಅನ್ನಿಸ್ತಾ ಇದೆ, ಅದ್ರೆ ಅಪ್ಪ ಅಮ್ಮ. ಅಂತ ಹೇಳಿ ಸ್ಟಾಪ್ ಮಾಡ್ತಾಳೆ. ಶಿಲ್ಪಾ ನಿಮ್ ಅಪ್ಪ ಅಮ್ಮ ನ ಹತ್ತಿರ ಅವರ ಅಳಿಯ ಮಾತಾಡ್ಕೋತಾನೆ ನೀನು ಅವನ ಜೊತೆಗೆ ಮೈಸೂರ್ ಬಾ ಅಂತ ಹೇಳಿ. ಲೋ ಬರೋವಾಗ ಅಕ್ಕಿ ನ ಕರ್ಕೊಂಡು ಬಾ ಜೊತೆಗೆ ಅಂತ ನನಗೆ ಹೇಳ್ತಾಳೆ. ಲೇ ಕರ್ಕೊಂಡು ಬರೋದು ದೊಡ್ಡ ವಿಷಯ ಅಲ್ಲ ಅದ್ರೆ ಅಂತ ಹೇಳಿ ಸ್ಟಾಪ್ ಮಾಡಿದೆ. ಶಿಲ್ಪಾ ನೀನು ಮುಚ್ಕೊಂಡು ಅವಳನ್ನ ಕರ್ಕೊಂಡು ಬಾ ಅಷ್ಟೇ ಅಂತ ಹೇಳಿದ್ಲು. ಸರಿ ಕರ್ಕೊಂಡು ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿದೆ. 

   ಅಕಿರಾ ನನ್ನ ಭುಜ ನ ಇಡ್ಕೊಂಡು ಅದರ ಮೇಲೆ ಅವಳ ತಲೆ ಇಟ್ಟು ಥ್ಯಾಂಕ್ಸ್ ಕಣೋ ಮಹಿ ಅಂತ ಹೇಳಿದ್ಲು. ಅಲ್ವೇ ಬಾಯಿ ಬಿಟ್ರೆ ಸಾರೀ ಥ್ಯಾಂಕ್ಸ್ ಇದೇನಾ ಬರೋದು ನಿನಗೆ ಬೇರೆ ಏನು ಮಾತಾಡೋದಕ್ಕೆ ಬರೋದೇ ಇಲ್ವಾ ಅಂತ ಕೇಳ್ದೆ. ಅದಕ್ಕೆ ಅವಳು ನನ್ನ ಬಿಟ್ಟು ನನ್ನ ಕಡೆಗೆ ಕೋಪದಿಂದ ನೋಡ್ತಾ ಇನ್ನೇನು ಹೇಳಬೇಕು ಅಂತ ಕೇಳಿ. ಹೌದು ಅವಳು ನಿನಗೆ ಏನಕ್ಕೆ ಕಾಲ್ ಮಾಡಿದ್ಲು. ಅಂದ್ರೆ ನೀವಿಬ್ರು ಟಚ್ ಅಲ್ಲೇ ಇದ್ದೀರಾ ಕೇಳಿದ್ಲು. ನಾನು ಅದಕ್ಕೆ ಟಚ್ ಅಲ್ಲಿ ಅಲ್ಲ ಬಾ  ಹೇಳ್ತಿನಿ ಅಂತ ಕಾರ್ ನ ಸ್ಟಾಪ್ ಮಾಡಿದೆ. ಕಾರ್ ಸ್ಟಾಪ್ ಆಗಿದ್ದೆ ನನ್ನ ಕಡೆಗೆ ನೋಡ್ತಾ ಏನಕ್ಕೆ ನಿಲ್ಲಿಸಿದೆ ಅಂತ ಕೇಳಿದ್ಲು. ಅವಳ ಕಡೆಗೆ ನೋಡ್ತಾ ಏನಕ್ಕೆ ಅಂದ್ರೆ ಶಾಪಿಂಗ್ ಗೆ ಅಂತ ಹೇಳ್ದೆ. ಅಕಿರಾ,, ಮೊದಲು ನಾನ್ ಕೇಳಿದಕ್ಕೆ ಉತ್ತರ ಕೊಡು ಅಂತ ಕೇಳಿದ್ಲು. ಕಾರ್ ಡೋರ್ ಓಪನ್ ಮಾಡಿಕೊಂಡು ಹೇಳ್ತಿನಿ ಬಾ ಅಂತ ಹೇಳಿ ಇಳಿದು ಹೊರಗೆ ಬಂದೆ. ಅಕಿರಾ ಕಾರ್ ಇಳಿದು ಹೊರಗೆ ಬಂದು ಶಾಪಿಂಗ್ ಮಾಲ್ ನೋಡಿದ್ಲು. ಶಬರಿ ಶಾಪಿಂಗ್ ಮಾಲ್ ಬೋರ್ಡ್ ಕಾಣಿಸ್ತು.

   ಅಕಿರಾ ನ ನೋಡಿ ಬಾ ಅಂತ ಹೇಳ್ದೆ. ಅಕಿರಾ ಜೊತೆಗೆ ಬರ್ತಾ  ಹೇಳು ಅಂತ ಕೇಳಿದ್ಲು. ಲೇ ಏನೇ ನೀನು ಹೇಳ್ತಿನಿ ಅಂತ ಹೇಳ್ದೆ ಅಲ್ವಾ ಬಾ ಸುಮ್ನೆ ಅಂತ ಹೇಳ್ತಾ ಶಾಪಿಂಗ್ ಮಾಲ್ ಒಳಗೆ ಹೋದ್ವಿ. ಒಬ್ಬ ವ್ಯಕ್ತಿ ಬಂದು ಸರ್ ಗುಡ್ ಮಾರ್ನಿಂಗ್ ಅಂತ ಹೇಳಿದ. ನಾನ್ ಅವನಿಗೆ ಗುಡ್ ಅಂತ ವಿಶ್ ಮಾಡಿ ಮುಂದೆ ಹೋಗ್ತಾ. ನಿನಗೆ ಏನ್ ಬೇಕೋ ತಗೋ ಅಂತ ಹೇಳ್ದೆ. ಅಕಿರಾ ತಗೋಬೇಕು ಅಂತ ಅಂದ್ರೆ ಇಡೀ ಮಾಲ್ ನೇ ತಗೋಬೇಕು. ಅಷ್ಟು ಚೆನ್ನಾಗಿ ಇರುತ್ತೆ ಇಲ್ಲಿ ಕಲೆಕ್ಷನ್ ಅಂತ ಹೇಳಿದ್ಲು. ಹೌದ ಆಗಿದ್ರೆ ಇಡೀ ಮಾಲ್ ನೇ ತಗೋ ಅಂತ ಮುಂದೆ ಹೋದೆ. ಒಬ್ಬ ಲೇಡಿ ಬಂದು ಗುಡ್ ಮಾರ್ನಿಂಗ್ ಸರ್ ಅಂತ ಹೇಳಿದ್ಲು. ಗುಡ್ ಮಾರ್ನಿಂಗ್ ಸನಾ  ಅಂತ ಹೇಳಿ ಅಕಿರಾ ಕಡೆಗೆ ನೋಡಿದೆ. ಅಕಿರಾ ನನ್ನ ಕಡೆಗೆ ನೋಡಿ ಯಾರು ಅಂತ ಕೇಳಿದ್ಲು.  ಸನಾ ಅಂತ ಈ ಮಾಲ್ ನ ಫ್ಲೋರ್ ಮ್ಯಾನೇಜರ್ ಅಂತ ಹೇಳಿ. ಸನಾ ಕಡೆಗೆ ನೋಡಿ ಸನಾ ಹೋಗಿ asm ನ ಬರೋಕೆ ಹೇಳು ಅಂತ ಹೇಳಿದೆ. ಓಕೆ ಸರ್ ಅಂತ ಹೇಳಿ ಹೊರಟು ಹೋದಳು. ಅಕಿರಾ ನೋಡ್ತಾ ಹಾಗೇ ಇದ್ದು ಬಿಟ್ಟಳು. ಅವಳ ಕಡೆಗೆ ನೋಡ್ತಾ ನೋಡಿದ್ದು ಸಾಕು ಬಾ ಅಂತ ಹೇಳಿ  ಒಂದು ಕಡೆಗೆ ಕರ್ಕೊಂಡು ಹೋಗಿ ನಿನಗೆ ಏನೇನ್ ಬೇಕೋ ತಗೋ ಅಂತ ಹೇಳಿದೆ. ಅಲ್ಲಿ ಇದ್ದಾ ಸೇಲ್ಸ್ ಗರ್ಲ್ ಬಂದು ಗುಡ್ ಮಾರ್ನಿಂಗ್ ಸರ್ ಅಂತ ವಿಶ್ ಮಾಡಿದ್ಲು. ಗುಡ್ ಮಾರ್ನಿಂಗ್  ಮಣಿ  ಇವರು ಅಕಿರಾ ಅಂತ ಇವರಿಗೆ ಏನೇನ್ ಬೇಕೋ ಕೇಳಿ ಹಾಗೇ ಬಂದಿರೋ ಲೇಟೆಸ್ಟ್ ಡಿಸೈನ್ ನ ತೋರಿಸು ಅಂತ ಹೇಳಿದೆ.. 

  ಅಕಿರಾ  ಲೋ ಏನೋ ಎಲ್ಲರೂ ನಿನಗೆ ಪರಿಚಯ ಇರೋ ಹಾಗೇ ಮಾತಾಡ್ತಾ ಇದ್ದಾರೆ, ನಿನಗೆ ಸರ್ ಅಂತ ವಿಶ್ ಮಾಡ್ತಾ ಇದ್ದಾರೆ ನೀನು ಹೇಳೋದನ್ನ ಕೇಳ್ತಾ ಇದ್ದಾರೆ. ನೀನು ಇಲ್ಲೇ ವರ್ಕ್ ಮಾಡ್ತಾ ಇದ್ದಿಯಾ, ಅಂತ ಕೇಳಿದ್ಲು. ಅಷ್ಟರಲ್ಲಿ asm ಬಂದು ಗುಡ್ ಮಾರ್ನಿಂಗ್ ಸರ್ ಅಂತ ಹೇಳಿದ್ಲು. ನಾನು ಗುಡ್ ಮಾರ್ನಿಂಗ್ ಜೆನ್ನಿ ,  ಅಂತ ಹೇಳಿ. ಅಕಿರಾ ಕಡೆಗೆ ನೋಡಿ ಅಕಿರಾ ನೀನು ಸೆಲೆಕ್ಟ್ ಮಾಡ್ತಾ ಇರು ಬರ್ತೀನಿ ಅಂತ ಹೇಳಿ  ಜೆನ್ನಿ ಜೊತೆಗೆ ಹೊರಟು ಹೋದೆ.

ಸೇಲ್ಸ್ ಗರ್ಲ್ ಬಂದು ಮೇಡಂ ಡ್ರೆಸ್ ನೋಡಿ ಅಂತ ಹೇಳಿದ್ಲು. ಅಕಿರಾ ಅ ಕಡೆಗೆ ತಿರುಗಿ ಡ್ರೆಸ್ ನೋಡೋಕೆ ಶುರು ಮಾಡಿದ್ಲು..

****************************************


P. S