Mahi - 49 in Kannada Love Stories by S Pr books and stories PDF | ಮಹಿ - 49

The Author
Featured Books
Categories
Share

ಮಹಿ - 49

      ಸೀತಾ ತಿಂಡಿ ತಿಂದ ಮೇಲೆ  ಡಾಕ್ಟರ್ ಕೊಟ್ಟ  ಮೆಡಿಸಿನ್ ತಗೊಂಡು,  ತಾತನ ಹತ್ತಿರ  ಸಾರೀ ತಾತಾ ನನ್ನಿಂದ ನಿಮಗೆ.

ರಘುನಂದನ್... ಇಲ್ಲಾ ಸೀತಾ  ನಿನಗೆ ಸಡನ್ ಆಗಿ ಹುಷಾರು ಇಲ್ದೆ ಆಯಿತಲ್ಲ ಅದಕ್ಕೆ ಎಲ್ಲರಿಗೂ ಸ್ವಲ್ಪ ಟೆನ್ಶನ್ ಆಯಿತು ಈಗ ನೀನು ಸರಿ ಹೋದೆ ಅಲ್ವಾ ನಮಗೆ ಇನ್ನೇನು ಭಯ ಇಲ್ಲಾ   ನಿನ್ ಹೋಗಿ ಆರಾಮಾಗಿ ರೆಸ್ಟ್ ಮಾಡು  ನಾನ್ ನಿಮ್ ಅಪ್ಪ ಅಮ್ಮ ಗೆ ಕಾಲ್ ಮಾಡಿ ವಿಷಯ ಹೇಳ್ತಿನಿ. ಅವರು ನಿನ್ನ ಬಗ್ಗೆ ನೇ ಯೋಚ್ನೆ ಮಾಡ್ತಾ ಇದ್ದಾರೆ ಅಂತ ಹೇಳಿ ಅವರನ್ನ ರೂಂ ಕಡೆಗೆ ಕಳಿಸಿ  ಮೊಬೈಲ್ ತಗೊಂಡು ಮಗ ಸೊಸೆ ಗೆ ಕಾಲ್ ಮಾಡಿ ವಿಷಯ ಹೇಳ್ತಾರೆ.

ಧಮಯಂತಿ, ಸುಧೀರ್ ವಿಷಯ ಕೇಳಿ ತುಂಬಾ ಸಂತೋಷ ಪಡ್ತಾರೆ. ಹಾಗೇ ಖುಷಿ ಗೆ ಥ್ಯಾಂಕ್ಸ್ ಹೇಳಿ ಅಂತ ಹೇಳಿ.  ವರ್ಕ್ ಕಡೆಗೆ ಗಮನ ಕೊಡ್ತಾರೆ.

                  *************


ಖುಷಿ... ಈಗ ಹೇಳೇ  ಏನು ಲವ್ ಅ. ಯಾವಾಗಿಂದ  

ಸೀತಾ.... ಲೇ ನೀನು ಲವ್ ಅದು ಇದು ಅಂತ ಏನೇನೋ ತಪ್ಪಾಗಿ ತಿಳ್ಕೋಬೇಡ.  ಈಗ್ಲೇ ಹೇಳ್ತಾ ಇದ್ದೀನಿ ಆಮೇಲೆ  ನೀನೇ  ತಪ್ಪಾಗಿ ತಿಳ್ಕೊಂಡೆ ಅಂತ ಪಶ್ಚತ್ತಾಪ ಪಡ್ತೀಯ ನೋಡ್ಕೋ.

ಖುಷಿ... ಮತ್ತೆ ಏನೇ   ಅವನು ಕಾಣಿಸಿಲ್ಲ ನೋಡಿಲ್ಲ ಮಾತಾಡಿಲ್ಲ ಅಂತ  ಫೀಲ್ ಆಗಿ ಈ ರೀತಿ  ಆಗೋಗಿದ್ದೀಯ.   ಅವನ ಕಾಲ್ ಬಂದಿದ್ದೆ  ಏನು ಹಾಗೇ ಇಲ್ಲ ಅನ್ನೋ ರೀತಿ ಇದ್ದಿಯಾ . ಲವ್ ಅಂತ ಕೇಳಿದ್ರೆ  ಈ ರೀತಿ ಹೇಳ್ತಾ ಇದ್ದಿಯಾ, ಸೀರಿಯಸ್ಲಿ  ನನಗೆ ಒಂದು ಅರ್ಥ ಆಗ್ತಿಲ್ಲ. 

ಸೀತಾ... ನಕ್ಕು ತುಂಬಾ ಯೋಚ್ನೆ ಮಾಡಿ ಅರ್ಥ ಮಾಡ್ಕೊಳ್ಳೋಕೆ ಹೋಗಬೇಡ ಮೆಂಟಲ್ ಆಗಿ ಹೋಗ್ತಿಯ.  ನನಗೆ ನಿದ್ದೆ ಬರ್ತಿದೆ  ನಾನ್ ಮಲ್ಕೊತಿನಿ ನೀನು ಯೋಚ್ನೆ ಮಾಡೋದನ್ನ ಬಿಟ್ಟು  ಆರಾಮಾಗಿ ರೆಸ್ಟ್ ಮಾಡು.  ಇಲ್ಲಾ ಹೋಗ್ತೀನಿ ಅಂದ್ರೆ ಹೋಗು  ನನಗೇನು  ಬೇಜಾರ್ ಇಲ್ಲ. 

ಖುಷಿ...  ನಿನಗೆಲ್ಲೆ ಬೇಜಾರ್ ಆಗುತ್ತೆ.  ವಿಷಯ ತಿಳಿದು ಕಾಲೇಜ್ ಬಿಟ್ಟು ಬಂದೆ ನೋಡು ಒಳ್ಳೆ ಮರ್ಯಾದೆ ಕೊಟ್ಟೆ.  ನಿನಗೋಸ್ಕರ ಅಲ್ದೆ ಇದ್ರು. ಅವನಿಗೋಸ್ಕರ ಇರ್ತೀನಿ ಎಷ್ಟೊಂದು ಮಾತಾಡಿದ. ಅವನನ್ನ ಮಾತ್ರ ನಾ ಸುಮ್ನೆ ಬಿಡೋದಿಲ್ಲ.  ಗಂಡ ಅಂತನಾ ಬರ್ಲಿ  ಪಾದ ಪೂಜೆ ಮಾಡಿ ನಾನ್ ಏನು ಅಂತ ಅವನಿಗೆ ತೋರಿಸ್ತಿನಿ ಅಂತ ಕೋಪದಲ್ಲಿ ಹೇಳ್ತಾಳೆ.

ಸೀತಾ... ನಕ್ಕು ಏನಾದ್ರೂ ಮಾಡ್ಕೋ  ಬಟ್ ಸೈಲೆಂಟ್ ಆಗಿ ಇರು. 

ಖುಷಿ ತುಸುಕೋಪದಿಂದ  ಸೀತಾ ಕುತ್ತಿಗೆ ಇಡ್ಕೊಂಡು ನಿನ್ನ ಸುಮ್ನೆ ಬಿದ್ಕೊ ಅಂತ ಹೇಳಿ    ಪಕ್ಕದಲ್ಲಿ ಮಲಗಿ ಕೊಳ್ತಾಳೆ. 

                    ******

ಲೋಕೇಶ್...  ಪ್ರಾಜೆಕ್ಟ್  ನಮಗೆ ಬರುತ್ತೆ ಅಲ್ವಾ...

ಜನಾರ್ಧನ್....  ನೂರಕ್ಕೆ ನೂರು ಈ ಪ್ರಾಜೆಕ್ಟ್ ನಮಗೆ ಬರೋದು. ಯಾವುದೇ ಕಾರಣಕ್ಕೂ   ಅ ರಘುನಂದನ್ ಕೈಗೆ ಸೇರೋದಿಲ್ಲ.  

ಲೋಕೇಶ್.... ನೋಡು ಜನ  ಬೇಕಿದ್ರೆ ಇನ್ನು ಸ್ವಲ್ಪ ದುಡ್ಡು ಖರ್ಚು ಮಾಡು. ಬಟ್ ನಮಗೆ ಈ ಪ್ರಾಜೆಕ್ಟ್ ಬರಲೇ ಬೇಕು.. ಈ ಪ್ರಾಜೆಕ್ಟ್ ಬಂದ್ರೆ ನಾವು ರಘುನಂದನ್ ಗಿಂತ ಒಂದು  ಸ್ಟೆಪ್ ಮೇಲೆ ಹೋಗ್ತಿವಿ.

ಜನಾರ್ಧನ್.... ಅ ಸುಧೀರ್ ಪ್ರಾಜೆಕ್ಟ್ ಅಲ್ಲೇ ನಮ್ಮವರು ಇದ್ದಾರೆ ನಿನ್ ಏನು ಯೋಚ್ನೆ ಮಾಡಬೇಡ.   ಪ್ರಾಜೆಕ್ಟ್ ನಾ ಪಿನ್ ಟು ಪಿನ್ ಡೀಟೇಲ್ಸ್ ನಮ್ ಹತ್ತಿರ ಇದೆ.  ಈ ಸಲ ಈ  ನ್ಯಾಷನಲ್ ಹೈವೇ ಕಾಂಟ್ರಾಕ್ಟ್  ನಮಗೆ ಬರೋದು. 

ಲೋಕೇಶ್.... ಹ್ಮ್ಮ್.


                    ********

ಸಂಜೆ  ಧಮಯಂತಿ. ಸುಧೀರ್  ಆಫೀಸ್ ನಿಂದ ಮನೆಗೆ ಬರ್ತಾರೆ.   ಸೀತಾ ಖುಷಿ ರಘುನಂದನ್ ಮಾತಾಡ್ತಾ ಕುತ್ಕೊಂಡು ಇರೋದನ್ನ ನೋಡಿ..  ಸಂತೋಷ ಪಡ್ತಾ   ಧಮಯಂತಿ ಸೀತಾ ನಾ ಅಪ್ಪಿಕೊಂಡು ಹೇಗಿದ್ದೀಯ ಬಂಗಾರ ಅಂತ ಕೇಳ್ತಾರೆ... 

ಸೀತಾ.... ಇವಾಗ ಪರ್ವಾಗಿಲ್ಲ ಅಮ್ಮ ಆರಾಮಾಗಿ ಇದ್ದೀನಿ. ಖುಷಿ ಬಂದ್ಲು ಅಲ್ವಾ ಇನ್ನೇನ್ ಭಯ ನನಗೆ. 

ಧಮಯಂತಿ... ಖುಷಿ ಕಡೆ ನೋಡಿ ಥ್ಯಾಂಕ್ಸ್ ಖುಷಿ. 2 ದಿಂದ ಮನೆ ಮನೆ ತರಾನೇ ಇದ್ದಿಲ್ಲಿ  . ಥ್ಯಾಂಕ್ ಯು ಸೋ ಮಚ್.

ಖುಷಿ.... ಅತ್ತೆ ಇದರಲ್ಲಿ ಥ್ಯಾಂಕ್ಸ್ ಹೇಳೋದು ಏನಿದೆ. ನಾನ್ ಬಂದೆ ಅಲ್ವಾ  ಇವಳು ಹುಷಾರಾಗೋ ವರೆಗೂ ನಾನ್ ಜೊತೆಗೆ ಇದ್ದು. ಆಮೇಲೆ  ಹೋಗ್ತೀನಿ ಮನೆಗೆ.

ಸುಧೀರ್... ಈ ಮಾತು ಹೇಳ್ದೆ ಅಲ್ವಾ ಖುಷಿ ಅಷ್ಟು ಸಾಕು. 


ರಘುನಂದನ್... ಅಮ್ಮ ಧಮಯಂತಿ  ಪ್ರಾಜೆಕ್ಟ್ ಗೆ ಸರಿಯಾಗಿ  ಟೆಂಡರ್ ಹಾಕಿದ್ದೀರಿ ಅಲ್ವಾ. 

ಧಮಯಂತಿ... ಹಾಕಿದ್ದೀರಿ ಮಾವ.  ಗವರ್ನಮೆಂಟ್ ಪ್ರಾಜೆಕ್ಟ್.  ಎಷ್ಟೋ ಕಂಪನಿಗಳು ತುಂಬಾ ಪ್ರೆಸ್ಟೀಜ್ ಆಗಿ ತಗೊಂಡು  ಟೆಂಡರ್ ನಾ ಹಾಕಿದ್ದಾರೆ.   ಪೈಪೋಟಿ ಸ್ವಲ್ಪ ಜಾಸ್ತಿ ನೇ ಇದೆ  ನೋಡೋಣ  ಇನ್ನು ಎರಡು ದಿನ ಗೊತ್ತಾಗುತ್ತೆ. 

ಸುಧೀರ್..  ನಮ್ ಪ್ರಯತ್ನ ನಾವ್ ಮಾಡಿದ್ದೀವಿ ನೋಡೋಣ.   ಸ್ವಲ್ಪ ಕಾಫಿ ಹೇಳು ಅಂತ ಹೇಳ್ತಾರೆ.

ಖುಷಿ... ಅತ್ತೆ ನೀವ್ ಕೂತ್ಕೊಳ್ಳಿ ನಾನ್ ತಗೊಂಡು ಬರ್ತೀನಿ ಅಂತ  ಹೇಳಿ ಎದ್ದು ಅಡುಗೆ ಮನೆಗೆ ಹೋಗ್ತಾಳೆ..

ಸ್ವಲ್ಪ ಸಮಯದ ನಂತರ  ಖುಷಿ ನಾಲಕ್ಕು 5 ಕಪ್ ಕಾಫಿ ಜೊತೆಗೆ ಹಾಲ್ ಗೆ ಬರ್ತಾಳೇ  ಎಲ್ಲರಿಗೂ ಕಾಫಿ ಕೊಟ್ಟು   ಅವಳು ಕಾಫಿ ಕಪ್ ನಾ ಇಡ್ಕೊಂಡು ಕೂತ್ಕೋತಾಳೆ.

ಧಮಯಂತಿ... ಮಾವ ಮಹಿ ಏನಾದ್ರೂ ಕಾಲ್ ಮಾಡಿದ್ನ?

ರಘುನಂದನ್.... ಇಲ್ಲಮ್ಮ ಧಮಯಂತಿ.

ಸೀತಾ... ಅಮ್ಮ  ಮಹಿ ಫ್ರೆಂಡ್ಸ್ ಜೊತೆಗೆ   ಟ್ರಿಪ್ ಹೋಗಿದ್ದಾನೆ ಅಂತೇ. ಕಾಲ್ ಮಾಡಿ ಹೇಳೋಕೆ  ನೆಟ್ವರ್ಕ್ ಸಿಗಲಿಲ್ಲ ಅಂತೇ.  ಮೆಸೇಜ್ ಮಾಡಿದ್ದ. 

ಸುಧೀರ್...  ಹ್ಮ್  ಅದೃಷ್ಟವಂತ,   ಗಂಡಸರ ಎಂಜೋಯ್ಮೆಂಟ್ ಲೈಫ್ ಏನಿದ್ರೂ ಮದುವೆಗೂ ಮೊದಲೇ. ಮದುವೆ ಆದಮೇಲೆ   ಎಲ್ಲ  .

ಧಮಯಂತಿ..  ಕೋಪದಿಂದ ನೋಡ್ತಾ ಕೇಳಿಸ್ತಾ ಇದೆ.

ಸುಧೀರ್... ಲೇ ನಾನ್ ನನ್ನ ಬಗ್ಗೆ ಹೇಳ್ತಾ ಇಲ್ಲ. ಹುಡುಗರ  ಕಾಲೇಜ್ ಲೈಫ್ ಎಂಜೋಯ್ಮೆಂಟ್ ಲೈಫ್ ಬಗ್ಗೆ ಹೇಳ್ತಾ ಇದ್ದೀನಿ ಅಂತ ಹೇಳಿ  ಕಾಫಿ ಕಪ್ ನಾ ಇಟ್ಟು ರೂಂ ಕಡೆಗೆ ಹೋಗ್ತಾರೆ.

ಸೀತಾ... ಅಪ್ಪನ ಅವಸ್ಥೆ ಕಂಡು. ನಕ್ಕು. ಅಮ್ಮ ಪಾಪ ಅಪ್ಪ. ನಿನ್ ಈ ರೀತಿ  ಭಯ ಬೀಳಿಸಿದ್ರೆ ಹೇಗಾಮ್ಮ ನೋಡು ಹೇಗೆ ಎದ್ದು ಹೋದ್ರು . 

ಧಮಯಂತಿ....  ನಿಮ್ಮಪ್ಪ ಕಾಲೇಜ್ ಲೈಫ್ ಅಲ್ಲಿ ಆಡಿದ ಆಟ ಇಲ್ಲ. ಕೇಳು ನಿಮ್ ತಾತಾ ನಾ ಹೇಳ್ತಾರೆ.  ಮೂರು ಗಂಟು ಹಾಕಿದ ಮೇಲೆ ಮೂಗುದಾರ ಹಾಕಿ  ಕಟ್ಟಾಕಿದ್ದೀನಿ. ಇಲ್ಲ ಅಂದಿದ್ರೆ  ಅಷ್ಟೇ. ಪಾಪ ಅಂತೇ ಪಾಪ. ಅಂತ ಹೇಳಿ ಎದ್ದು ರೂಂ ಗೆ ಹೋಗ್ತಾರೆ.


ಖುಷಿ.... ಏನ್ ತಾತಾ ಮಾವ ಅಷ್ಟೊಂದು ಕ್ರೇಜಿ ಆಗಿ ಇದ್ರ.

ರಘುನಂದನ್... ಅದ್ಯಾಕಮ್ಮ ಕೇಳ್ತಿಯಾ. ನಾನು ಬಿಸಿನೆಸ್ ಅಲ್ಲಿ ತಲೆ ಕೆಡಿಸಿಕೊಳ್ಳೋಕಿಂತ ಇವನ ವಿಷಯ ದಲ್ಲೇ ಜಾಸ್ತಿ ತಲೆ ಕೆಡಸಿ ಕೊಂಡಿದ್ದು.   ಗ್ಯಾಂಗ್ ಕಟ್ಕೊಂಡು  ಜಗಳ ಅಂತ  ದಿನ ಒಂದೊಂದು  ಕಂಪ್ಲೇಂಟ್ ತರ್ತಾ ಇದ್ದ. ವಯಸ್ಸಿನ ಹುಡುಗ ಅಂತ ನಾನು ಸುಮ್ನೆ ಇದ್ದೆ.  ಫ್ರೆಂಡ್ ಯಾರೋ ಪೊಲಿಟಿಷಿಯನ್ ಮಗಳನ್ನ ಲವ್ ಮಾಡ್ತಾ ಇದ್ದಾನೆ ಅಂತ ಹೇಳಿ .  ನೈಟ್ ನೈಟ್  ಅ ಹುಡುಗಿನ ಕಿಡ್ನಾಪ್ ಮಾಡಿ   ನಾರ್ತ್ ಈಸ್ಟ್ ಸ್ಟೇಟ್ ಗೆ ಕರ್ಕೊಂಡು ಹೋಗಿ ಅಲ್ಲಿ ಅವರಿಬ್ಬರಿಗೂ ಮದುವೆ ಮಾಡಿಸಿ ಏನು ಗೊತ್ತಿಲ್ಲದೇ ಇರೋವನ ಹಾಗೇ ಮನೆಗೆ ಬಂದ...  15 ದಿನ ಆದಮೇಲೆ  ಅ ಪೊಲಿಟಿಷಿಯನ್  ನಮ್ ಮನೆ ಬಾಗಿಲ ಮುಂದೆ  ನಿಂತು ಕೊಂಡಿದ್ದ.  ನನಗೂ  ಅ ಪೊಲಿಟಿಷಿಯನ್ ಪರಿಚಯ ಆಗಿ ಇರೋದ್ರಿಂದ ಸಮಾಧಾನ ವಾಗಿ ಕೂತು ಮಾತಾಡಿ.   ವಿಷಯ ಹೇಳಿದ  ಅ ಹುಡುಗ  ರಾಜಸ್ತಾನದಲ್ಲಿ ಒಳ್ಳೆ ಹೆಸರು ಮಾಡಿರೋ ಚಿನ್ನದ ವ್ಯಾಪಾರಿ ಮಗ ಅಂತ ಗೊತ್ತಾಗಿ ಇವರು ಕೂಡ   ಸಮಾಧಾನ ಆದ್ರು.  ಇಲ್ಲಾ ಅಂದಿದ್ರೆ ಅವತ್ತು ಏನೇನ್ ಆಗಿರೋದೋ.  ಅವತ್ತು ಇವನು ಕರ್ಕೊಂಡು ಹೋಗಿ ಮದುವೆ ಮಾಡಿಸಿದ ಹುಡುಗ ಇವತ್ತು ಸೆಂಟ್ರಲ್ ಹೋಮ್ ಮಿನಿಸ್ಟರ್.   ಇವನು ಅಂದ್ರೆ ಪ್ರಾಣ ಬಿಡ್ತಾನೆ.. 

ಖುಷಿ.... ನಿಜ್ವಾಗ್ಲೂ..  ಅಬ್ಬೊ ಮಾವ ನಾ ಏನೋ ಅನ್ಕೊಂಡು ಇದ್ವಿ.   ಈ ರೀತಿ ಫ್ಲ್ಯಾಶ್ ಬ್ಯಾಕ್ ಇದೆ ಅಂತ ಗೊತ್ತಿರಲಿಲ್ಲ. ಹಾಗಿದ್ರೆ   ಮಾವನಿಗೆ ಪೊಲಿಟಿಕಲ್ ಸಪೋರ್ಟ್ ತುಂಬಾ ಸ್ಟ್ರಾಂಗ್ ಆಗಿ ಇದೆ ಅಂತ ಆಯ್ತು.

ರಘುನಂದನ್.... ಅವನಿಗೆ ಗೆಳೆಯರ ಬಳಗ ತುಂಬಾ ದೊಡ್ಡದು ಇದೆ.   ಕೆಲವರು ಬಿಸಿನೆಸ್ ಅಲ್ಲಿ. ಕೆಲವರು ರಾಜಕೀಯದಲ್ಲಿ.   ಕೆಲವರು  ವಿದೇಶದಲ್ಲಿ   ಒಳ್ಳೆ ಪೊಸಿಷನ್ ಅಲ್ಲಿ ಒಳ್ಳೆ ಹೆಸರು ಮಾಡ್ಕೊಂಡು ಇದ್ದಾರೆ.  ನಿಮ್ ಅತ್ತೆ ಬಂದಿದ್ದೆ   ಎಲ್ಲದಕ್ಕೂ   ಮೂಗುದಾರ ಹಾಕಿ   ಕಂಟ್ರೋಲ್ ಅಲ್ಲಿ ಇಟ್ಟಿದ್ದಾಳೆ..

ಖುಷಿ.... ಮದುವೆ ಆದಮೇಲೆ ಗಂಡನನ್ನ ಹೇಗೆ ಕಂಟ್ರೋಲ್ ಅಲ್ಲಿ ಇಡಬೇಕು ಅಂತ ಅತ್ತೆ ಹತ್ತಿರ ಟ್ರೇನಿಂಗ ತಗೋಬೇಕು.

ಸೀತಾ..  ಹ್ಮ್ ತಗೋ ತಗೋ. ಫ್ಯೂಚರ್ ಅಲ್ಲಿ ನಿನಗೂ ಬೇಕಾಗುತ್ತೆ.  ಬರ್ತಾ ಇರೋ ಗಂಡ ನನ್ನ ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳೋಕೆ. ಈಗ್ಲೇ ಹೀಗೆ ಇದ್ದಾನೆ.

ಖುಷಿ... ಕೋಪದಿಂದ ಸೀತಾ ನೋಡ್ತಾ ನಿನ್ನ, 2 ದಿನ ಆಮೇಲೆ ನೋಡು ಅಂತ ಎದ್ದು ರೂಂ ಕಡೆ ಹೋಗ್ತಾಳೆ. 


                      ******

ಸೀತಾ ರೂಂ ಒಳಗೆ ಬರ್ತಾ ಯಾಕೆ ಕೋಪ ಬಂತ  ಗಂಡ....... ನಾ ಬಗ್ಗೆ ಹೇಳಿ..... ದಕ್ಕೆ  ಅಂತ ಹೇಳ್ತಾ ಬೆಡ್ ಮೇಲೆ ಕೂತ್ಕೋತಾಳೆ.

ಖುಷಿ...  ಮೊಬೈಲ್ ತಗೊಂಡು  ಅವನ ನಂಬರ್ ಕೊಡೆ ಅಂತಾಳೆ.  

ಸೀತಾ... ಹೊರಗಡೆ ಹೋಗಿದ್ದಾನೆ ಅಂತ ಹೇಳ್ದ ಅಲ್ವಾ   ಬಂದಮೇಲೆ  ಮಾತಾಡ್ಕೊ. ಈಗ ಬೇಡ.

ಖುಷಿ.... ಸೀತಾ ಮೊಬೈಲ್ ತಗೊಂಡು  ಇವಾಗ ಕೊಡ್ತೀಯಾ ಇಲ್ವಾ. ಅಷ್ಟೆಳು.

ಸೀತಾ... ಯಾಕ್ ಹಾಗೇ ಆಡ್ತೀಯ ಕೊಡಿಲ್ಲಿ ಕೊಡ್ತೀನಿ ಅಂತಾಳೆ..

ಖುಷಿ... ನಂಬೋಕೆ ಆಗಲ್ಲಾ.  ನನ್ನ ಮುಂದೇನೆ ಓಪನ್ ಮಾಡಿ  ನಂಬರ್ ತೋರಿಸು ನಾನೇ ತಗೋತೀನಿ..

ಸೀತಾ... ನಿನಗೆ ಅವನೇ ಸರಿ ಕಣೇ ಅಂತ ಹೇಳಿ.  ಅವಳ ಪಕ್ಕ ಕೂತು ಮೊಬೈಲ್ ನಾ ಓಪನ್ ಮಾಡಿ.  ಸೇವ್ ಮಾಡಿರೋ  ಮಹಿ ನಂಬರ್ ನಾ ಓಪನ್ ಮಾಡ್ತಾ ತಗೋ ಅಂತಾಳೆ.

ಖುಷಿ.... ಹೆಸರನ್ನ ನೋಡಿ. ನಾನ್ ಕೇಳಿದ್ದು ನಿನ್ನ "my❤️ world 🌍 " ನಂಬರ್ ಅಲ್ಲ. ಮಹಿ ನಂಬರ್.

ಸೀತಾ... ಇದೆ ಅವನ ನಂಬರ್. 

ಖುಷಿ..... ಸೀತಾ ಕಡೆ ನೋಡಿ  ಸೀರಿಯಸ್ಲಿ. ಲವ್  ಇಲ್ಲಾ ಅಂತ ಹೇಳ್ದೆ.. ಲವರ್ ಅಲ್ಲ ಅಂತ ಹೇಳ್ದೆ.

ಸೀತಾ.... ಲೇ ಮತ್ತೆ ಅದನ್ನೇ ಹೇಳಿದ್ರೆ ಫ್ರೆಂಡ್ ಅಂತ ಕೂಡ ನೋಡಲ್ಲ ಹೊಡೆದು ಬಿಡ್ತೀನಿ. 

ಖುಷಿ.... ಸೀತಾ ಕೋಪ ನಾ ನೋಡಿ.  ಸಾರೀ ಕಣೇ.  ರಿಯಲಿ ಸಾರೀ ಕಣೇ. ಪ್ರಾಮಿಸ್ ನೆಕ್ಸ್ಟ್ ಟೈಮ್ ಈ ರೀತಿ ಮಾತಾಡಲ್ಲ.  ಐಮ್ ಸಾರೀ. 

ಸೀತಾ... ಇದೆ ಲಾಸ್ಟ್ ವಾರ್ನಿಂಗ್ ನಿನಗೆ.  ನನ್ನ ಹತ್ತಿರ ಹೇಳಿದ ಹಾಗೇ ಅವನ ಹತ್ತಿರಾ ಹೇಳಿ ಬಿಟ್ಟೆಯಾ. ಹುಡುಗಿ ಅಂತ ನೋಡಲ್ಲ.  ಹೊಡೆದೆ ಬಿಡ್ತಾನೆ.

ಖುಷಿ.. ಹ್ಮ್ ಹೌದ ನೋಡ್ತೀನಿ ಯಾರು ಯಾರನ್ನ ಹೊಡೀತಾರೆ ಅಂತ ಹೇಳಿ..  ನಂಬರ್ ತಗೊಂಡು ಕಾಲ್ ಮಾಡಿ  ಸ್ಪೀಕರ್ ಅಲ್ಲಿ ಇಡ್ತಾಳೆ..


ಬೈಕ್ ಡ್ರೈವ್ ಮಾಡ್ತಾ ಇದ್ದಾ ನನಗೆ ಮೊಬೈಲ್ ರಿಂಗ್ ಅದ ಸೌಂಡ್ ಗೆ ಬೈಕ್ ನಾ ಸ್ಲೋ ಮಾಡಿ. ಸೈಡ್ ಗೆ ನಿಲ್ಲಿಸಿ.  ಮೊಬೈಲ್ ತೆಗೆದು ನಂಬರ್ ನೋಡಿ. ಕಾಲ್ ಪಿಕ್ ಮಾಡಿ ಹೇಳೇ ಅಂದೇ.

ಖುಷಿ.... ಏನು ಹೇಳೇ ನಾ?

ನಾನು.... ಹೆಂಡ್ತಿ ನಾ ಹಾಗೇ ತಾನೇ ಕರಿಯೋದು.

ಸೀತಾ ಕೇಳಿಸಿಕೊಂಡು ನಗ್ತಾಳೆ.

ಖುಷಿ... ಕೋಪದಿಂದ ನೋಡು ಹೆಂಡ್ತಿ ಗಿಂಡತಿ ಅಂದ್ರೆ ಅಷ್ಟೇ ನೋಡ್ಕೋ. 

ನಾನು... ಹೆಂಡ್ತಿ ನಾ ಹೆಂಡ್ತಿ ಅನ್ನದೆ ಇನ್ನೇನ್ ಅಂತ ಕರಿಬೇಕು.   ಹೇಳೇ ಹೆಂಡ್ತಿ.

ಖುಷಿ... ಲೋ ನೋಡು ಇದು ತುಂಬಾ ಅತೀ ಆಯ್ತು.   ಅತ್ತೆ ಫ್ರೆಂಡ್ ಮಗ ಅಂತ ಸುಮ್ನೆ ಇದ್ದೀನಿ ಇಲ್ಲಾ ಅಂದಿದ್ರೆ.

ನಾನು... ಇಲ್ಲಾ ಅಂದಿದ್ರೆ ಏನ್ ಮಾಡ್ತಿದ್ದೆ.   ನಿಮ್ ಅಪ್ಪ. ಐ ಮೀನ್ ನನ್ನ ಮಾವನಿಗೆ ಹೇಳ್ತಾ ಇದ್ದಾ.  ನಿಮ್ ಅಪ್ಪನಿಗೆ ಹೇಳು   ಒಳ್ಳೆ ಮುಹೂರ್ತ ನೋಡಿ ಡೇಟ್ ಫಿಕ್ಸ್ ಮಾಡ್ಕೊಳ್ಳೋಕೆ...

ಖುಷಿ...  ಕೋಪದಿಂದ ಬಾರೋ ನೀನು. ಮುಗಿತು ನಿನ್ನ ಕಥೆ. ನನ್ನ ಸುದ್ದಿಗೆ ಬಂದಿದ್ದು ಅಲ್ಲದೆ ನಮ್ ಅಪ್ಪನ ಸುದ್ದಿಗೂ ಬಂದೆ ಅಲ್ವಾ  ನಿನ್ನ ಮಾತ್ರ ಸುಮ್ನೆ ಬಿಡೋದಿಲ್ವೋ.

ನಾನು...  ನೀನು ಸುಮ್ನೆ ಬಿಡಲ್ಲ ಅಂತಾನೆ ಅಲ್ವಾ. ನಿನ್ನ ಹೆಂಡ್ತಿ ಆಗಿ ಮಾಡ್ಕೊಂಡು ಇರೋದು. 

ಖುಷಿ... ಮತ್ತೆ ಮತ್ತೆ ಹೆಂಡತಿ ಅಂತ ಕರಿಬೇಡ. ಸರಿ ಇರಲ್ಲ ನೋಡ್ಕೋ.  ಎಲ್ಲೋ ಜರ್ಮನಿ ಯಿಂದ ಬಂದಿರೋ ಈ ಕೋತಿಗೆ ನಾನ್ ಹೆಂಡತಿ ಅಂತೇ ಒಂದು ಸಲ ನಿನ್ನ ಮುಖ ನೋಡ್ಕೋ.  ನನ್ನ ಹೆಂಡ್ತಿ ಆಗಿ ಪಡೆಯೋಕೆ  ಅದೃಷ್ಟ ಮಾಡಿರಬೇಕು.  ನಿನಗೆ ಅ ಅದೃಷ್ಟ ನು ಇಲ್ಲಾ ಅ ಯೋಗ್ಯತೆ ನು ಇಲ್ಲಾ..

ನಾನು... ಅಬ್ಬೊ ಏನ್ ಇವಳು  ದೇವಲೋಕ ದಿಂದ ಬಂದ ಅಪ್ಸರೆ.  ಅದೃಷ್ಟ ಯೋಗ್ಯತೆ ಬೇಕು ಅಂತೇ.   ಹೋಗಿ ಒಂದು ಸಲ ಕನ್ನಡಿ ನೋಡ್ಕೊಂಡು ಮಾತಾಡು.  ಇರೋದು ಮೂರಡಿ.  ಕಾಲ್ ಕೆಜಿ ಮಾಂಸ ಇಲ್ಲಾ.   ಏನೋ ಅತ್ತೆ ಮಗಳು ಪಾಪ ಲೈಫ್ ಕೊಡೋಣ ಅಂತ ದೊಡ್ಡ ಮನಸ್ಸು ಮಾಡ್ಕೊಂಡು ಹೆಂಡ್ತಿ ಅಂದ್ರೆ ಪೋಸ್ ಕೊಡ್ತಾ ಇದ್ದಿಯಾ.


ಖುಷಿ... ಲೋ.. ಬೇಡ ನೋಡಿ ತುಂಬಾ ಜಾಸ್ತಿ ಮಾತಾಡ್ತಾ ಇದ್ದಿಯಾ. ಪರಿಣಾಮ ನೆಟ್ಟಗೆ ಇರೋದಿಲ್ಲ..

ನಾನು... ನಾನ್ ಕೂಡ ಇದನ್ನೇ ಹೇಳಿದ್ದೆ  ನಿಮ್ಮಮ್ಮ ಗೆ ಅತ್ತೆ ಇವಳು ಸ್ವಲ್ಪ ಮೆಂಟಲ್.  ಕಟ್ಕೊಂಡ್ರೆ  ನನ್ನ ಲೈಫ್ ಬರ್ಬಾದ್ ಆಗಿ ಬಿಡುತ್ತೆ.  ಬೇಡ ಅತ್ತೆ ಅಂತ.  ಅದ್ರೆ ನಿಮ್ ಅಮ್ಮ ಅಳಿಮಯ್ಯ ನೀನೇ ಹೀಗೆ ಅಂದ್ರೆ ಹೇಗೆ ಅಂತ ಹೇಳಿ ಕಣ್ಣೀರು ಹಾಕಿದಕ್ಕೆ  ಕಟ್ಕೊಂಡೆ. ಇಲ್ಲಾ ಅಂದಿದ್ರೆ ನಾನ್ ಯಾಕ್ ನಿನ್ನ ಕಟ್ಕೊಂಡು  ಈ ನರಕ ಅನುಭವಿಸ್ತಾ ಇದ್ದೆ. ಗಂಡ ಅನ್ನೋ ಮರ್ಯದೆ ಇಲ್ಲಾ.

ಖುಷಿ.... ಕೋಪದಿಂದ.. ಹೌದೋ ನಾನ್ ಕೊಡಲ್ಲ ಏನಿವಾಗ  ಹೇಳು.  ಅತ್ತೆ ಹೇಳಿದ್ಲು ಮಾವ ಹೇಳಿದ ಅಂತ ಕಟ್ಕೊಳ್ಳೋದು ಅಲ್ಲ  ಕಟ್ಕೊಂಡ ಮೇಲೆ ಅವಳಿಗೆ ಏನ್ ಬೇಕು ಏನ್ ಬೇಡ ಅನ್ನೋದನ್ನ  ತಿಳ್ಕೊಂಡು ಅವಳನ್ನ ಸಂತೋಷ ವಾಗಿ ನೋಡ್ಕೋ ಬೇಕು.  ಅವಾಗ ಹೆಂಡ್ತಿ ಹೆಂಡ್ತಿ ತರ ಇರ್ತಾಳೆ. ನಿನ್ ನನ್ನ ಬಿಟ್ಟು  ಎಲ್ಲೋ  ಫ್ರೆಂಡ್ಸ್ ಟ್ರಿಪ್ ಅಂತ ಹೋಗ್ತಾ ಇದ್ರೆ ಯಾವಳ್ ನಿನಗೆ ಮರ್ಯದೆ ಕೊಡ್ತಾಳೆ..  ಟ್ರಿಪ್ ಗೆ ಹೋದೋವ್ನು ನನಗೆ ಹೇಳಿ ಹೋದ. ಅಯ್ಯೋ ಕಟ್ಕೊಂಡು ಇರೋವ್ಳು ಒಬ್ಬಳು ಇದ್ದಾಳೆ ಅವಳಿಗೆ ಹೇಳೋನಾ  ಪರ್ಮಿಷನ್ ತಗೋಳ್ಳೋಣ.  ಮನೇಲಿ ಒಬ್ಳೆ ಇರ್ತಾಳೆ  ಅನ್ನೋ ಭಯ ಇಲ್ಲಾ.  ಫ್ರೆಂಡ್ಸ್ ಕರೆದ್ರು ಅಂತೇ ಇವನು ಅಲ್ಲಾಡಿಸಿಕೊಂಡು ಹೋದ ಅಂತೇ.   ನೋಡೋ ನನಗೆ ನಿನ್ನಂತವನ ಜೊತೆಗೆ ಸಂಸಾರ ಮಾಡೋಕೆ ಇಷ್ಟ ಇಲ್ಲಾ. ನನಗೆ ಡಿವೋರ್ಸ್ ಬೇಕು ಅಷ್ಟೇ. ಡಿವೋರ್ಸ್ ಕೊಟ್ಟ ಮೇಲೆ ನಿನ್ ದಾರಿ ನಿಂದು ನನ್ನ ದಾರಿ ನಂದು.


ನಾನು...  ಈ ವಿಷಯ  ಸಂಸಾರ ಮಾಡೋಕು ಮೊದಲೇ ಹೇಳಬೇಕಿತ್ತು.  ಇವಾಗ ನಿನಗೆ ಡಿವೋರ್ಸ್ ಕೊಟ್ರೆ ಜನ ನನ್ನ ಏನ್ ಅಂತ ಅನ್ಕೋಳ್ಳೋದಿಲ್ಲ..  ನೋಡು  5 ತಿಂಗಳ ಗರ್ಭಿಣಿ   ಈ ಟೈಮ್ ಅಲ್ಲಿ ಡಿವೋರ್ಸ್ ಕೊಡ್ತಾ ಇದ್ದಾನೆ ಅಲ್ವಾ   ಡಿವೋರ್ಸ್ ಕೊಟ್ರೆ ಅವಳು ಒಬ್ಬಳೇ ಹೇಗೆ ಜೀವನ ಮಾಡ್ತಾಳೆ ಮಗು ನಾ ಹೇಗೆ ಸಾಕ್ತಾಳೆ. ಅಂತ ನನ್ನ ಬೈಕೊಳ್ಳೋದಿಲ್ವಾ...

ಖುಷಿ... ಅದು ನಿನ್ನ ಪ್ರಾಬ್ಲಮ್  ನನ್ನ ಪ್ರಾಬ್ಲಮ್ ಅಲ್ಲ ಈ ಆಲೋಚನೆ ಈ ಯೋಚ್ನೆ ಮೊದಲೇ ಇರಬೇಕಾಗಿತ್ತು. ಗೊತ್ತು ಅಲ್ವಾ ನಾನ್ 5 ತಿಂಗಳ ಗರ್ಭಿಣಿ ಅಂತ  ಗೊತ್ತಿದ್ರು ನನ್ನ  ಒಬ್ಬಳನ್ನೇ ಬಿಟ್ಟು ಹೋಗಿದ್ದೀಯ  ನಿನಗೆ ಸ್ವಲ್ಪ ಆದ್ರು ಮನುಷತ್ವ ಬೇಡ. ನನಗೆ ಏನಾದ್ರೂ ಹೆಚ್ಚು ಕಮ್ಮಿ ಆಯ್ತು  ಯಾರೋ ನೋಡ್ಕೋತಾರೆ ನನ್ನ. ಮದುವೆ ಆಗೋವಾಗ ನಿನ್ನ ಹಾಗೇ ನೋಡ್ಕೋತೀನಿ ಹೀಗೆ ನೋಡ್ಕೋತೀನಿ ಅಂತ ಹೇಳಿ ನಂಬಿಸಿ.  ನನ್ನ ಜೊತೆಗೆ ಸಂಸಾರ ಮಾಡಿ ಈಗ ದೇಶ ಸುತ್ತೋಕೆ ಹೋಗಿದ್ದೀಯ. ಈಗ ನಿನ್ನ ಮರ್ಯಾದೆ ಹೋಗಲ್ಲಾ ನಾನ್ ಡಿವೋರ್ಸ್ ಕೇಳಿದ ತಕ್ಷಣ ನಿನಗೆ ಮರ್ಯಾದೆ ಹೋಗಿ ಬಿಡುತ್ತಾ.

ನಾನು... ಲೇ ನಾನ್ ಎಲ್ಲೇ ನಿನ್ನ ಒಂಟಿಯಾಗಿ ಬಿಟ್ಟು ಬಂದೆ. ನಿನ್ನ ಜೊತೆಗೆ ನನ್ನ ತಂಗಿ ಇದ್ದಾಳೆ. ನಿಮ್ಮತ್ತೆ ಇದ್ದಾಳೆ.  ನಾನ್ ಏನು ಸುಮ್ನೆ ಬಂದಿಲ್ಲ ಕೆಲಸದ ಮೇಲೆ ಬಂದಿರೋದು.. ನಿನಗೆ ಹೇಳಿದ್ರೆ ಅಷ್ಟು ದೂರ ಕಲಿಸಲ್ಲ ಅಂತ ನೇ ಹೇಳ್ದೆ ಬಂದೆ. ಅದಕ್ಕೆ ನಿನ್ ಈ ರೀತಿ ಡಿವೋರ್ಸ್ ಬೇಕು ಅಂದ್ರೆ.

ಖುಷಿ.. ಲೋ ನನ್ನ ನಿನ್ ಕಟ್ಕೊಂಡು ಬಂದ ಇಲ್ಲಾ ನಿನ್ ತಂಗಿ ನಿಮ್ ಅಮ್ಮ ಕಟ್ಕೊಂಡು ಬಂದ್ರ?

ನಾನು.... ನಾನೇ ಕಟ್ಕೊಂಡು ಬಂದಿದ್ದು.

ಖುಷಿ... ಅಲ್ವಾ  ಆಗಿದ್ದಮೇಲೆ ನನ್ನ ಜವಾಬ್ದಾರಿ ಯಾರ್ದು ನಿಂದೆ ಅಲ್ವಾ.. ತುಂಬಾ ದೂರ  ನನ್ನ ಬಿಟ್ಟು ಹೋಗೋವ್ನು ನನಗೆ ಹೇಳಿ ಒಪ್ಪಿಸಿ ಆಮೇಲೆ ಹೋಗಬೇಕಾಗಿತ್ತು..  ಪ್ರೀತಿ ಮಾಡೋವಾಗ ಎಲ್ಲಾ ಚಿನ್ನು ಮುದ್ದು ಬಂಗಾರಿ ಪ್ಯಾರಿ ಅಂತ ಹೇಳಿ ಒಪ್ಪಿಸಿ ಪರ್ಮಿಷನ್ ತಗೊಂಡು ಹೋಗ್ತಾ ಇದ್ದೆ. ಇವಾಗ  ಪರ್ಮಿಷನ್ ಕೇಳೋಕೂ ಕಷ್ಟ ಆಯ್ತಾ ನಿನಗೆ. ಅಂದ್ರೆ  ನಾನ್ ನಿನಗೆ ಕಷ್ಟ ಆಗೋಗಿದ್ದೀನಿ. ಇಲ್ಲಾ ಬೇರೆ ಯಾವಳ್ ಜೊತೆನೋ ನಿನಗೆ ಸಂಬಂಧ ಇದೆ ಅದಕ್ಕೆ ನಾನ್ ಈ ಪರಿಸ್ಥಿತಿ ಅಲ್ಲಿ ಇದ್ರು ನನ್ನ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದೀಯ.. ನನಗೆ ಅರ್ಥ ಆಯ್ತು  ಹೇಳು ಯಾವಳ್ ಜೊತೆಗೆ ಹೋಗಿದ್ದೀಯ ಎಷ್ಟು ದಿನದಿಂದ ನಡೀತಾ ಇದೆ ನಿನ್ನ ಅವಳ ಈ ವ್ಯವಹಾರ  ನನಗೆ ಈಗ್ಲೇ ಗೊತ್ತಾಗಬೇಕು. ಹೇಳು ಯಾರ್ ಅವಳು.. ಕಾಲೇಜ್ ಅಲ್ಲಿ  ನಿನ್ ಹಿಂದೇನೆ ಮಹಿ.. ಮಹಿ ಅಂತ ಬರ್ತಾ ಇದ್ದವಳ. ಇಲ್ಲಾ  ಆಫೀಸ್ ಅಲ್ಲಿ  ನಿನಗೆ ಮದುವೆ ಆಗಿದೆ ಅಂತ ಗೊತ್ತಿದ್ರು ನಿನಗೆ ಲೈನ್ ಹಾಕ್ತಾ ಇದ್ಲು ಅಲ್ವಾ ಅವಳ... ಹೇಳು ನನಗೆ ಈಗ್ಲೇ ಗೊತ್ತಾಗಬೇಕು... ಹೇಳೋ ಅಂತಾಳೆ.

ಜೋರಾಗಿ  ಲಾರಿ ಹೊರನ್ ಸೌಂಡ್ ಕೇಳಿಸುತ್ತೆ...  ಕಾಲ್ ಕಟ್ ಆಗಿ ಬಿಡುತ್ತೆ...

@@@@@@@@@@@@@@@@@@@@@@@@@@@@@@@@@@@