ಕೃತಿ ನ ಮೀಟ್ ಮಾಡೋಕೆ ಬರೋಕೆ ಹೇಳಿ ಫ್ರೆಂಡ್ಸ್ ಕೆಫೆ ಗೆ ಹೋದೆ. ಅವಳಿಗೆ ಬರೋಕೆ 4 ಗಂಟೆಗೆ ಹೇಳಿದೆ. ನಾನು ಫ್ರೆಂಡ್ಸ್ ಕೆಫೆ ಹತ್ತಿರ ಅದಕ್ಕಿಂತ ಮೊದಲೇ ಬಂದೆ 3 ಆಗಿತ್ತು ಕೃತಿ ಬರೋಕೆ ಇನ್ನು 1 ಗಂಟೆ ಬಾಕಿ ಇತ್ತು. ಕಾರ್ ನ ಪಾರ್ಕಿಂಗ್ ಅಲ್ಲಿ ನಿಲ್ಲಿಸಿ ಕೆಫೆ ಒಳಗೆ ಹೋದೆ. ಅಲ್ಲಿದ್ದ ಸೂಪರ್ವೈಸರ್ ನನ್ನ ನೋಡಿ ಗುಡ್ ಈವನಿಂಗ್ ಸರ್ ಹೇಗಿದ್ದೀರ ಅಂತ ಕೇಳಿದ್ರು. ಸೂಪರ್ ಸರ್ ನೀವು ಹೇಗಿದ್ದೀರ ಅಂತ ಕೇಳ್ದೆ. ನಾನ್ ಚೆನ್ನಾಗಿ ಇದ್ದೀನಿ ಸರ್. ಸರ್ ಒಳಗೆ ಇದ್ದಾರೆ ಅಂತ ಹೇಳಿದ್ರು. ಹೌದ ಒಬ್ನೇ ಇದ್ದಾನ ಅಂತ ಕೇಳ್ದೆ. ಅವರು ಇಲ್ಲಾ ಸರ್ ಅಂತ ಹೇಳಿದ್ರು. ಹೌದ ಸರಿ ಅಂತ ಹೇಳಿ ಹೋಗಿ ಕಾಫಿ ಶಾಪ್ ಕೌಂಟರ್ ಒಳಗೆ ಹೋಗಿ ಕೂತುಕೊಂಡೆ. ಸೂಪರ್ವೈಸರ್ ಸರ್ ಇಲ್ಲಿ ಏನಕ್ಕೆ ಕುತ್ಕೊಂಡ್ರಿ ಬನ್ನಿ ಅಲ್ಲಿ ಸೋಫಾ ಮೇಲೆ ಕೂತ್ಕೊಳ್ಳಿ ಅಂತ ಹೇಳಿದ್ರು. ಪರ್ವಾಗಿಲ್ಲ ಬಿಡಿ ಸರ್ ನಮ್ದೇ ಅಲ್ವಾ ಕಾಫಿ ಶಾಪ್ ಅಂತ ಹೇಳಿ ಅಲ್ಲೇ ಕುತ್ಕೊಂಡೆ. ಕೌಂಟರ್ ಒಳಗೆ ಇದ್ದಾ ಇಬ್ಬರು ಹುಡುಗೀರು ಒಬ್ಬ ಹುಡುಗ ನನ್ನ ನೋಡಿ ಗುಡ್ ಈವನಿಂಗ್ ಸರ್ ಅಂತ ಹೇಳಿದ್ರು ನಾನು ಅವರಿಗೆ ವಿಶ್ ಮಾಡಿದೆ. ಅದರಲ್ಲಿ ಇದ್ದಾ ದೃತಿ ಅನ್ನೋ ಹುಡುಗಿ ಸರ್ ಏನ್ ಕೊಡಲಿ ನಿಮಗೆ ಅಂತ ಕೇಳಿದ್ಲು. ಥ್ಯಾಂಕ್ಸ್ ಏನು ಬೇಡ ದೃತಿ ಜಸ್ಟ್ ಈಗಷ್ಟೇ ಲಂಚ್ ಮಾಡಿಕೊಂಡು ಬಂದೆ ಅಂತ ಹೇಳಿದೆ. ಅವರು ನಿಂತು ಮಾತಾಡೋದು ನಾನು ಕೂತು ಮಾತಾಡೋದು ಯಾಕೋ ಸರಿ ಅಂತ ಕಾಣಿಸಲಿಲ್ಲ ಎದ್ದು ನಿಂತು ಅವರ ಜೊತೆಗೆ ಮಾತಾಡೋಕೆ ಶುರು ಮಾಡಿದೆ. ಕಾಫಿ ಶಾಪ್ ಬಗ್ಗೆ ಅವರ ಸ್ಟಡೀಸ್ ಬಗ್ಗೆ ಹೀಗೆ ಕೆಲವು ತಮಾಷೆ ವಿಷಯಗಳನ್ನ ಮಾತಾಡ್ತಾ ಇದ್ವಿ. ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ. ಕೌಂಟರ್ ಅಲ್ಲಿ ಮಾತಾಡ್ಕೊಂಡು ಇರೋವಾಗ ಫ್ರೆಂಡ್ ಬಂದ ಅವನ ಕ್ಯಾಬಿನ್ ನಿಂದ ಅವನ ಗರ್ಲ್ ಫ್ರೆಂಡ್ ಜೊತೆಗೆ ಹೊರಗೆ. ನನ್ನ ನೋಡಿ ಮಚ್ಚಾ ಯಾವಾಗ ಬಂದೆ ಅಂತ ಕೇಳ್ದ. ನಾನ್ ಬಂದು ತುಂಬಾ ಹೊತ್ತಾಯ್ತು ಅಂತ ಹೇಳಿದೆ. ಹೌದ ಮತ್ತೆ ಒಳಗೆ ಬರಲೇ ಇಲ್ಲಾ ಅಂತ ಕೇಳಿದ. ಗರ್ಲ್ ಫ್ರೆಂಡ್ ಜೊತೆಗೆ ಟೈಮ್ ಸ್ಪೆಂಡ್ ಮಾಡ್ತಾ ಇದ್ದೆ ಅಲ್ವಾ ಅದಕ್ಕೆ ನಾನು ಯಾಕೆ ಸುಮ್ನೆ ಇರೋದು ಅಂತ ಕೌಂಟರ್ ಅಲ್ಲಿ ಇದ್ದಾ ಹುಡುಗೀರ ಕಡೆಗೆ ನೋಡಿ. ನನ್ನ ಈ ಇಬ್ಬರು ಗರ್ಲ್ ಫ್ರೆಂಡ್ಸ್ ಜೊತೆಗೆ ಮಾತಾಡ್ತಾ ಇದ್ದೆ. ಹಾಗೇ ನಮ್ ಲಕ್ಕಿ ಬ್ರೋ ಗೆ ಫ್ಯೂಚರ್ ಬಗ್ಗೆ ಐಡಿಯಾ ಕೊಡ್ತಾ ಇದ್ದೆ ಅಂತ ಹೇಳಿದೆ.
ಜೀವಾ ಲಕ್ಕಿ ಕಡೆಗೆ ನೋಡಿ ಲೋ ಹೋಗಿ ಹೋಗಿ ಅವನ ಐಡಿಯಾ ನ ಫಾಲೋ ಮಾಡಿ ಬಿಟ್ಟಿಯ. ಸನ್ಯಾಸಿ ಸಾವಾಸ ಮಾಡಿ ಸಂಸಾರಿ ಕೆಟ್ಟ ಅನ್ನೋ ಹಾಗೇ ಅವನ ಸಾವಾಸ ಮಾಡಿದ್ರೆ ಅಷ್ಟೇ ನೀನು . ನನ್ನ ಮಾತು ಕೇಳು ಯಾರ್ ಸಾವಾಸ ಆದ್ರು ಮಾಡು ಇವನ ಸಾವಾಸ ಮಾತ್ರ ಮಾಡಬೇಡ ಓಕೆ ಅಂತ ಹೇಳಿದ್ರೆ. ಲಕ್ಕಿ ಇಲ್ಲಾ ಸರ್ ಮಹಿ ಸರ್ ತುಂಬಾ ಒಳ್ಳೆಯವರು ಒಬ್ಬ ಒಳ್ಳೆ ಫ್ರೆಂಡ್ ಆಗಿ ಟಿಪ್ಸ್ ಕೊಡ್ತಾ ಫ್ಯೂಚರ್ ನ ಯಾವ ರೀತಿ ಪ್ಲಾನ್ ಮಾಡ್ಕೋಬೇಕು ಅಂತ ಹೇಳ್ತಾ ಇದ್ರು ಅಂತ ಹೇಳಿದ. ದೃತಿ ಕೂಡ ಹೌದು ಸರ್ ಮಹಿ ಸರ್ ಗುಡ್ ಹಾರ್ಟ್ ಪರ್ಸನ್ ಅಂತ ಹೇಳಿದ್ಲು. ಜೀವಾ ಬಾಯಿ ಬಿಟ್ಕೊಂಡು ನೋಡ್ತಾ ಲೋ ಏನೋ ಹೇಳಿದೆ ಅವರಿಗೆ ನಿನ್ನ ಈ ರೀತಿ ಹಿಂದೆ ಆಕೊಂಡು ಬರ್ತಾ ಇದ್ದಾರೆ ಅಂತ ಹೇಳಿ ನಾನ್ ಹೇಳೋದು ಹೇಳಿದ್ದೀನಿ ಇನ್ನ ನಿಮ್ ಇಷ್ಟ ಅಂತ ಹೇಳಿದ ಅವರಿಬ್ಬರಿಗೆ. ನಾನು ಅವರಿಬ್ಬರನ್ನು ನೋಡ್ತಾ ಅವನು ಹಾಗೇ ಹೇಳ್ತಾನೆ ಅವನ ಮಾತನ್ನ ಕೇಳಬೇಡಿ ಅಂತ ಹೇಳ್ದೆ. ದೃತಿ ನಗ್ತಾ ಓಕೆ ಸರ್ ಅಂತ ಹೇಳಿದ್ಲು. ಜೀವಾ ಸರಿ ಬಾ ಒಳಗೆ ಕೂತು ಮಾತಾಡೋಣ ಅಂತ ಹೇಳಿದ. ನೀನು ಹೋಗಿ ನಿಮ್ ಹುಡುಗಿ ಜೊತೆಗೆ ಕೂತು ಆರಾಮಾಗಿ ಮಾತಾಡು ನಾನು ಇಲ್ಲೇ ಇರ್ತೀನಿ ಅಂತ ಹೇಳ್ದೆ. ಜೀವಾ ಅಂದ್ರೆ ನೀನು ನನ್ನ ಜೊತೆಗೆ ಮಾತಾಡೋಕೆ ಬರಲಿಲ್ವಾ ಅಂತ ಕೇಳ್ದ. ಇಲ್ವೋ ಫ್ರೆಂಡ್ ಒಬ್ಬಳು ಬರ್ತೀನಿ ಅಂತ ಹೇಳಿದ್ಲು ಅದಕ್ಕೆ ಬಂದೆ.
ಜೀವಾ ಏನು ನಿನ್ನ ಮೀಟ್ ಮಾಡೋಕೆ ಹುಡುಗಿ ಬರ್ತಾ ಇದ್ದಾಳ ಬೆಳಿಗ್ಗೆ ಒಂದು ಹುಡುಗಿ ಬಂದ್ಲು ಇವಾಗ ಇನ್ನೊಂದು ಹುಡುಗಿ. ಕಿಲಾಡಿ ಕಣೋ. ಲೋ ಲಕ್ಕಿ ನಾನ್ ಹೇಳಿಲ್ವಾ ಅವನ ಸಾವಾಸ ಸರಿ ಇಲ್ಲಾ ಅಂತ ಇವಾಗ ಆದ್ರು ಅರ್ಥ ಆಯ್ತಾ ಅಂತ ಕೇಳಿದ. ಲಕ್ಕಿ ಸರ್ ವಿಷಯ ಪೂರ್ತಿ ಗೊತ್ತಿಲ್ದೆ ಹಾಗೆಲ್ಲ ಮಾತಾಡಬಾರದು ಸರ್ ಅಂತ ರಿಟರ್ನ್ ಕೌಂಟರ್ ಕೊಟ್ಟ. ದೃತಿ ಹೌದು ಸರ್ ಅಂತ ಹೇಳಿದ್ರೆ. ಜೀವಾ ಹೌದ ಹಾಗಾದ್ರೆ ನಾನು ಇಲ್ಲೇ ಇರ್ತೀನಿ ನೋಡ್ತೀನಿ ಅದೇನ್ ಮಾತಾಡ್ತಾನೆ ಅಂತ ಹೇಳಿ ಅವನ ಹುಡುಗಿಗೂ ಇಲ್ಲೇ ಇರೋಕೆ ಹೇಳ್ತಾ ಅಲ್ಲೇ ಕೌಂಟರ್ ಹತ್ರ ನಿಂತ್ಕೋಳ್ತಾನೆ. ನಾನು ಅವನನ್ನ ನೋಡಿ ಲೋ ಏನಕ್ಕೆ ನಿಂತಿದ್ದೀಯ ಅಲ್ಲಿ ಚೇರ್ ಇಲ್ವಾ ತಗೋ ಬಂದು ಆರಾಮಾಗಿ ಕುತ್ಕೋ ಅಂತ ಹೇಳಿದೆ. ಹಾಗೇ ಎಕ್ಸ್ಟ್ರಾ ಚೇರ್ ಕೂಡ ತಗೋ ಬಾ ಅಂತ ಹೇಳಿದೆ. ಸೂಪರ್ವೈಸರ್ ಸರ್ ನಾನ್ ತಗೋಬರ್ತೀನಿ ಅಂತ ಹೇಳಿ ಮೂರು ಚೇರ್ ನ ತಂದು ಕೊಟ್ಟ.
ಸರಿಯಾಗಿ 4 ಗಂಟೆಗೆ ಕೃತಿ ಕಾಫಿ ಶಾಪ್ ಒಳಗೆ ಬಂದ್ಲು. ಕೌಂಟರ್ ಕಡೆಗೆ ನೋಡದೆ ಸುತ್ತಾ ನೋಡಿ ಮೊಬೈಲ್ ತಗೊಂಡು ಕಾಲ್ ಮಾಡಿದ್ಲು. ನಾನು ಮೊಬೈಲ್ ನ ನೋಡಿ ಡೋರ್ ಕಡೆಗೆ ನೋಡಿದೆ ಕೃತಿ ನಿಂತು ಇದ್ಲು. ನಾನು ಅವರನ್ನ ನೋಡಿ ಮೇಡಂ ಬನ್ನಿ ಅಂತ ಹೇಳ್ದೆ. ಅವರು ನನ್ನ ಕಡೆಗೆ ನೋಡಿ ಕೌಂಟರ್ ಹತ್ತಿರ ಬಂದ್ರು. ನಾನು ಕೌಂಟರ್ ಒಳಗೆ ನಿಂತು ಇರೋದನ್ನ ನೋಡಿ ಸರ್ ನೀವು ಇಲ್ಲಿ ಅಂತ ಕೇಳಿದ್ರು. ನಾನು ಕೃತಿ ನ ನೋಡಿ ಸರ್ ಬೇಡ ಮಹಿ ಅಂತ ಕರೀರಿ ಸಾಕು ದಯವಿಟ್ಟು ಕೂತ್ಕೊಳ್ಳಿ ಅಂತ ಚೇರ್ ತೋರಿಸಿದೆ. ದೃತಿ ಲಕ್ಕಿ ಜೀವಾ ಅವನ ಗರ್ಲ್ ಫ್ರೆಂಡ್ ಸೂಪರ್ವೈಸರ್ ಇರೋದನ್ನ ನೋಡಿ ಓಕೆ ಮಹಿ ಥ್ಯಾಂಕ್ಸ್ ಅಂತ ಹೇಳಿ ಚೇರ್ ಮೇಲೆ ಕುತ್ಕೊಂಡ್ಲು. ಜೀವಾ ನನ್ನ ಕಡೆಗೆ ನೋಡ್ತಾ ಮಚ್ಚಾ ಕಾಫಿ ಶಾಪ್ ಕ್ಲೋಸ್ ಮಾಡ್ಲಾ ಅಂತ ಕೇಳ್ದ. ಬೇಡ ಮಚ್ಚಾ ಅಂತ ಹೇಳಿ. ಹೇಳಿ ಮೇಡಂ ಏನ್ ತಗೋತೀರಾ ಅಂತ ಕೇಳ್ದೆ. ಕೃತಿ ಕಾಫಿ ಅಂತ ಹೇಳಿದ್ಲು. ಲಕ್ಕಿ ಮೇಡಂ ಗೆ ಕಾಫಿ ಒಂದು ಕೊಡು ಅಂತ ಹೇಳಿದೆ. ಲಕ್ಕಿ ಓಕೆ ಬ್ರೋ ಅಂತ ಹೇಳಿ. ಕೃತಿ ಕಡೆಗೆ ನೋಡಿ. ಜೀವಾ ನ ತೋರಿಸಿ ಇವನು ನನ್ನ ಫ್ರೆಂಡ್ ಜೀವಾ ಅವರು ಅವನ ಗರ್ಲ್ಫ್ರೆಂಡ್ ಇವರು ನಮ್ಮ ಸೂಪರ್ವೈಸರ್ ಸರ್ ಇವಳು ನನ್ನ ಹೊಸ ಗರ್ಲ್ಫ್ರೆಂಡ್ ದೃತಿ ಅಂತ ಹೇಳಿದೆ. ದೃತಿ ಶಾಕ್ ಆಗಿ ಸರ್ ಏನ್ ಹೇಳ್ತಾ ಇದ್ದೀರಾ ಅಂತ ಹೇಳಿದ್ಲು. ಸುಮ್ನೆ ಅಂತ ಹೇಳಿ ದೆ ಎಲ್ಲರಿಗೂ ಹಾಯ್ ಮಾಡಿದ್ಲು. ಲಕ್ಕಿ ಮೇಡಂ ಕಾಫಿ ಅಂತ ಕೃತಿ ಗೆ ಕೊಟ್ಟ. ಮೇಡಂ ಇವನು ಲಕ್ಕಿ ಅಂತ ಪರಿಚಯ ಮಾಡಿಸಿದೆ. ಕೃತಿ ಲಕ್ಕಿ ಗೆ ಹಾಯ್ ಮಾಡಿ ಮಹಿ ನೀವು ಇಷ್ಟು ಸರಿ ನನ್ನ ಮೇಡಂ ಮೇಡಂ ಅಂತ ಕರಿಬೇಡಿ ಜಸ್ಟ್ ಕಾಲ್ ಮೀ ಕೃತಿ ಅಂತ ಹೇಳಿದ್ಲು. ಓಕೆ ಕೃತಿ ಹೇಳಿ ಏನೋ ಮಾತಾಡಬೇಕು ಅಂತ ಹೇಳಿ ಕಾಲ್ ಮಾಡಿದ್ರಿ ಏನ್ ವಿಷಯ ಅಂತ ಕೇಳ್ದೆ. ಕೃತಿ ಸುತ್ತಾ ಎಲ್ಲರೂ ಇರೋದನ್ನ ನೋಡಿ ಮಹಿ ಅದು ಅಂತ ವಿಷಯ ನ ಹೇಳೋಕೆ ಹಿಂದೆ ಮುಂದೆ ನೋಡಿದ್ಲು. ನಾನು ಕೃತಿ ಗೆ ಪರ್ವಾಗಿಲ್ಲ ಹೇಳಿ ಇಲ್ಲಿ ಹೊರಗಿನವರು ಯಾರು ಇಲ್ಲಾ ಅಂತ ಹೇಳ್ದೆ.
ಕೃತಿ ಮಹಿ ಅದು ಬೆಳಿಗ್ಗೆ ನೀವು ಯಾರು ಏನು ಅಂತ ಗೊತ್ತಿಲ್ದೆ ನಿಮ್ ಹತ್ತಿರ ತುಂಬಾ ರುಡ್ ಆಗಿ ಮಾತಾಡಿಬಿಟ್ಟೆ ಐಮ್ ರಿಯಲಿ ಸಾರೀ. ಬಟ್ ಅದಕ್ಕೆ ನೀವು ಈ ರೀತಿ ಕಂಪನಿ ಮೇಲೆ ಸೇಡು ತೀರಿಸಿ ಕೊಳ್ಳೋದು. ಕಂಪನಿ ನ ಬ್ಲಾಕ್ ಲಿಸ್ಟ್ ಮಾಡ್ತೀನಿ ಅಂತ ಹೇಳೋದು ಸರಿ ಅಲ್ಲ. ತಪ್ಪು ಮಾಡಿದ್ದು ನಾನು ನೀವು ನನಗೆ ಏನ್ ಶಿಕ್ಷೆ ಬೇಕಾದ್ರು ಕೊಡಿ ನಾನು ಅನುಭವಿಸ್ತೀನಿ ಬಟ್ ಅಪ್ಪನಿಗೆ ಕಂಪನಿ ಅಂದ್ರೆ ಪ್ರಾಣ ತುಂಬಾ ಕಷ್ಟ ಪಟ್ಟು ಕಂಪನಿ ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಇವಾಗ ಕಂಪನಿ ಇಲ್ಲಾ ಅಂದ್ರೆ ಅವರು ಕಂಪನಿ ಯಿಂದ ಅಲ್ಲದೆ ನನ್ನಿಂದ ಕೂಡ ಶಾಶ್ವತ ವಾಗಿ ದೂರ ಆಗಿ ಬಿಡ್ತಾರೆ ಅಂತ ಕಣ್ಣೀರು ಹಾಕಿಕೊಂಡು ಹೇಳಿದ್ರು. ಕೃತಿ ನಿಮ್ ಕಂಪನಿ ನ ಬ್ಲಾಕ್ ಲಿಸ್ಟ್ ಮಾಡೋದು ನನ್ನ ಉದ್ದೇಶ ಅಲ್ವೇ ಅಲ್ಲ. ನಿಮಗೆ ನಿಮ್ ತಂದೆ ಬಗ್ಗೆ ಗೊತ್ತಿರೋ ಅಷ್ಟು ನನಗೆ ಗೊತ್ತಿಲ್ಲಾ ಅದ್ರೆ ನಿಮ್ ತಂದೆ ಅ ಕಂಪನಿಗೋಸ್ಕರ ಎಷ್ಟು ಕಷ್ಟ ಬಿದ್ದಿದ್ದಾರೆ ಅಂತ ನನಗೆ ಗೊತ್ತು.. ಬರಿ 2000 ಇಟ್ಕೊಂಡು ಬೆಂಗಳೂರಿಗೆ ಬಂದವರು ಇವತ್ತೂ ನೂರಾರು ಜನಕ್ಕೆ ಕೆಲಸ ಕೊಟ್ಟು ಅವರಿಗೆ ಒಳ್ಳೆ ದಾರಿ ಮಾಡಿ ಕೊಟ್ಟಿದ್ದಾರೆ. ಅದ್ರೆ ಅಡ್ಡದಾರಿಲಿ ಬಂದ ಕೆಲವು ಜನ ನಿಮ್ ಕಂಪನಿ ಅಲ್ಲಿ ಸೇರಿಕೊಂಡು ಕಂಪನಿ ಬೆಲೆ ಗೊತ್ತಿಲ್ಲದೇ ಹಾಳು ಮಾಡೋಕೆ ನೋಡ್ತಾ ಇದ್ರು. ಅವರು ನನ್ನ ವಿಷಯಕ್ಕೆ ಬಂದಾಗಲೇ ಅವರಿಗೆ ಬುದ್ದಿ ಕಲಿಸೋಕೆ ನನಗೆ ತುಂಬಾ ಟೈಮ್ ಏನು ಬೇಕಾಗಿರಲಿಲ್ಲ ಅದ್ರೆ ಅದು ನನ್ನ ಉದ್ದೇಶ ಆಗಿರಲಿಲ್ಲ. ಅವರಿಗೆ ನೀವೇ ಬುದ್ದಿ ಕಲಿಸಬೇಕು ಅಂತ ಈ ರೀತಿ ನಾಟಕ ಮಾಡಿದೆ. ನಾನು ಆಲ್ರೆಡಿ ನಿಮ್ ತಂದೆ ಹತ್ತಿರ ಮಾತಾಡಿ ನಿಮಗೆ ಹೇಳೋಕೆ ಹೇಳಿ ಅಂತ ಹೇಳ್ದೆ. ಬಟ್ ಅವರೇ ಬೇಡ ಮಹಿ ಅವಳ ತಪ್ಪಿಗೆ ನಿನ್ನ ಹತ್ತಿರ ಬಂದು ನೇರವಾಗಿ ಕ್ಷಮೆ ಕೇಳೋದೇ ಸರಿ ಅಂತ ಹೇಳಿ ನನ್ನು ಇಲ್ಲಿಗೆ ಬರೋ ಹಾಗೇ ಮಾಡಿದ್ರು.
ಸೋ ಕೃತಿ ನಿಮ್ ತಂದೆ ಇಷ್ಟದಂತೆ ಬಂದೆ ನೀವು ಸಾರೀ ಕೇಳಿದ್ರಿ ನಾನು ಇಟ್ಸ್ ಓಕೆ ಅಂತ ಹೇಳಿದೆ. ಸೋ ಇಲ್ಲಿಗೆ ಈ ಟಾಪಿಕ್ ಮುಗಿತು. ಇನ್ನ ಇದರ ಬಗ್ಗೆ ನೀವು ಮರೆತು ಬಿಡಿ. ಆರಾಮಾಗಿ ಕಾಫಿ ಕುಡೀರಿ ಅಂತ ಹೇಳಿ ಲಕ್ಕಿ ಮೇಡಂ ಗೆ ಒಂದು ಚಾಕಲೇಟ್ ಕೊಡೊ ಅಂತ ಹೇಳಿದೆ. ಕೃತಿ ಬೇಡ ಮಹಿ ಅಂತ ಹೇಳಿದ್ಲು. ತಗೋಳಿ ಕೃತಿ ನೀವೇನು ಬಿಲ್ ಪೆ ಮಾಡಬೇಡಿ. ಅದು ಅಲ್ಲದೆ ನೀವು ಇಲ್ಲಿತನಕ ಬಂದು ಸಾರೀ ಬೇರೆ ಕೇಳಿದ್ದೀರಾ. ಸಾರೀ ಕೇಳಿದ ಹುಡುಗಿಗೆ ಸ್ವೀಟ್ ಚಾಕಲೇಟ್ ನ ಕೊಡದೆ ಹೋದ್ರೆ ಹೇಗೆ ತಗೋಳಿ ಅಂತ ಹೇಳ್ದೆ. ಲಕ್ಕಿ ಚಾಕಲೇಟ್ ನ ತೆಗೆದು ಕೃತಿ ಗೆ ಕೊಟ್ಟ. ಕೃತಿ ಥ್ಯಾಂಕ್ ಯು ಅಂತ ಹೇಳಿ ಕಾಫಿ ಕುಡಿಯೋಕೆ ಶುರು ಮಾಡಿದ್ಲು. ಜೀವಾ ಲೋ ಲಕ್ಕಿ ನಾನ್ ಆಗ್ಲೇ ಹೇಳಿಲ್ವಾ ಸರಿ ಇಲ್ಲಾ ಇವನು ಇವನ ಸಾವಾಸ ಮಾಡಬೇಡ ಅಂತ ಇವನು ಹಾಳಾಗೋದು ಅಲ್ಲದೆ ಅವನನ್ನ ಕೂಡ ಹಾಳು ಮಾಡ್ತಾ ಇದ್ದಾನೆ ಅಂತ ಹೇಳಿದ್ರೆ. ಕೃತಿ ಅವನ ಕಡೆಗೆ ನೋಡ್ತಾಳೆ. ಜೀವಾ ಗರ್ಲ್ಫ್ರೆಂಡ್ ಇವನಿಗೆ ಸ್ವಲ್ಪ ಲೂಸ್ ನೀವು ಕಾಫಿ ಕುಡೀರಿ ಅಂತ ಹೇಳ್ತಾ ಜೀವಾ ಕಡೆಗೆ ಒಂದು ಲುಕ್ ಕೊಡ್ತಾಳೆ ಅಷ್ಟೇ ಅವನು ಸೈಲೆಂಟ್ ಆಗಿ ಬಿಡ್ತಾನೆ.
ಕೃತಿ ಕಾಫಿ ಕುಡಿದು ಮಹಿ ತುಂಬಾ ತುಂಬಾ ಥ್ಯಾಂಕ್ಸ್ ಕಾಫಿ ಗೆ ಈ ಚಾಕಲೇಟ್ ಗೆ ಮತ್ತೆ ಮುಖ್ಯವಾಗಿ ನಾನು ಮಾಡಿದ ತಪ್ಪನ್ನ ಕ್ಷಮಿಸಿ ದಕ್ಕೆ ಅಂತ ಹೇಳಿದ್ಲು. ಓಕೆ ಕೃತಿ ನೀವು ಪದೇ ಪದೇ ಕೇಳಬೇಕಾಗಿಲ್ಲ ಅಂತ ಹೇಳಿದೆ. ಕೃತಿ ಓಕೆ ಬೈ ಅಂತ ಹೇಳಿ ಅಲ್ಲಿಂದ ಹೊರಟು ಹೋದಳು. ಜೀವಾ ಯಾರೋ ಮಚ್ಚಾ ಈ ಹುಡುಗಿ ಅಂತ ಕೇಳಿದ. ಅದೇ ಕಣೋ 24 ಕಂಪನಿ ಓನರ್ ಮಗಳು ಅಂತ ಹೇಳ್ದೆ. ಜೀವಾ ಗರ್ಲ್ಫ್ರೆಂಡ್ ಸೂಪರ್ ಬ್ರೋ ನೀವು ತಪ್ಪು ಮಾಡಿದ್ದು ಅ ಹುಡುಗಿ ನೇ ಅಂತ ಗೊತ್ತಿದ್ರು ಅವಳಿಗೆ ಹರ್ಟ್ ಮಾಡದೇ ಅವಳ ಸಾರೀ ನ ಒಪ್ಕೊಂಡು ಖುಷಿಯಾಗಿ ಕಳಿಸಿದ್ರಿ ಅಲ್ವಾ ಯು ರ್ ರಿಯಲಿ ಗ್ರೇಟ್. ನಾನು ಜೀವಾ ಕಡೆಗೆ ನೋಡಿ ಓಕೆ ಮಚ್ಚಾ ಮೈಸೂರು ಹೋಗಬೇಕು ಮತ್ತೆ ಯಾವಾಗಾದ್ರೂ ಸಿಗ್ತೀನಿ ಅಂತ ಹೇಳ್ದೆ. ಅವನು ಹ್ಮ್ ಹ್ಯಾಪಿ ಆಗಿ ಹೋಗಿ ಬಾ ಮಚ್ಚಾ ಅಂತ ಹೇಳಿದ. ಎಲ್ಲರಿಗೂ ಬೈ ಹೇಳಿ. ಹೊರಗಡೆ ಬಂದು ಕಾರ್ ಹತ್ತಿರ ಬಂದೆ. ಯಾರೋ ಮಹಿ ಅಂತ ಕರೆದ ಹಾಗೇ ಆಯ್ತು ತಿರುಗಿ ನೋಡಿದೆ ಕೃತಿ.
ಕೃತಿ ಹತ್ತಿರ ಬಂದು ಹಾಯ್ ಮಹಿ ಅಂತ ಹೇಳಿದ್ಲು. ಹಾಯ್ ನೀವು ಇನ್ನು ಹೋಗಿಲ್ವಾ ಅಂತ ಕೇಳ್ದೆ. ಇಲ್ಲಾ ಮಹಿ ನಿಮ್ ಹತ್ತಿರ ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕಿತ್ತು ಸೋ ಅದಕ್ಕೆ ನಿಮಗೋಸ್ಕರ ಕಾಯ್ತಾ ಇದ್ದೆ ಅಂತ ಹೇಳಿದ್ಲು. ಹೌದ ಹೇಳಿ ಏನ್ ವಿಷಯ ಅಂತ ಕೇಳ್ದೆ. ಕೃತಿ ಇಫ್ ಯು ಡೋಂಟ್ ಮೈಂಡ್ ನನ್ನ ಜೊತೆ ಬರ್ತೀರಾ ಅಂತ ಕೇಳಿದ್ಲು. ಓಕೆ ಬರ್ತೀನಿ ಬಟ್ ನನ್ನ ಕಾರ್ ಇದೆ. ತುಂಬಾ ದೂರ ಹೋಗಬೇಕಾ ಅಂತ ಕೇಳ್ದೆ. ಇಲ್ಲಾ ಇಲ್ಲೇ ಪಕ್ಕದಲ್ಲಿ ಇರೋ ಪಾರ್ಕ್ ತನಕ ಅಷ್ಟೇ ಅಂತ ಕೇಳಿದ್ಲು. ಹೌದ ಸರಿ ನಡೀರಿ ವಾಕ್ ಮಾಡ್ತಾ ಹಾಗೇ ಮಾತಾಡ್ಕೊಂಡು ಹೋಗೋಣ ಅಂತ ಹೇಳ್ದೆ. ಕೃತಿ ಸ್ಮೈಲ್ ಮಾಡಿ ಥ್ಯಾಂಕ್ಸ್ ನಡೀರಿ ಅಂತ ಹೇಳಿದ್ಲು. ಇಬ್ರು ವಾಕ್ ಮಾಡ್ತಾ ಪಾರ್ಕ್ ಕಡೆಗೆ ಹೋದ್ವಿ. ವಾಕ್ ಮಾಡ್ತಾ ಹೇಳಿ ಏನ್ ಮಾತಾಡಬೇಕಿತ್ತು ಅಂತ ಕೇಳ್ದೆ. ಕೃತಿ ಮಾತಾಡ್ತಾ ಇಂಡಿಯಾದಲ್ಲಿ ಟಾಪ್ 5 ಕಂಪನಿಗಳಲ್ಲಿ ನಿಮ್ದು ಒಂದು ಭೂಪತಿ ಗ್ರೂಪ್ ಆಫ್ ಕಂಪನಿಸ್. ಅಷ್ಟು ದೊಡ್ಡ ಕಂಪನಿ ಗೆ ceo ನೀವು ಮಹೇಂದ್ರ ಭೂಪತಿ, ಬಟ್ ಇಷ್ಟು ಸಿಂಪಲ್ ಆಗಿ ಕಾಮನ್ ಮ್ಯಾನ್ ತರ ಇದ್ದೀರಾ ಎಲ್ಲರ ಜೊತೆಗೆ ಖುಷಿಯಾಗಿ ಇರ್ತೀರ, ಒಂದು ಹುಡುಗಿ ಗೋಸ್ಕರ ನಮ್ ಕಂಪನಿ ಗೆ ಜಾಯಿನ್ ಆದ್ರಿ. ಅವಮಾನ ಪಟ್ರಿ. ಏನಕ್ಕೆ ಇದೆಲ್ಲಾ ಅಂತ ಕೇಳಿದ್ಲು . ತುಂಬಾ ಸಿಂಪಲ್ ಕೃತಿ ನನಗೆ ಹೇಗೆ ಇರಬೇಕು ಅನ್ನಿಸ್ತೋ ಹಾಗೇ ಇದ್ದೀನಿ. ನಾನು ಇದು ನಾನು ಅದು ಅಂತ ತೋರಿಸಿಕೊಂಡು ಪಬ್ಲಿಸಿಟಿ ತಗೋಳೋಕೆ ಇಷ್ಟ ಇಲ್ಲಾ. ಬಿ ಹ್ಯಾಪಿ ಬಿ ಸಿಂಪಲ್. ಇನ್ನ ನಿಮ್ ಕಂಪನಿ ಗೆ ಬರೋಕೆ ಕಾರಣ ಆಲ್ರೆಡಿ ನಿಮಗೆ ಗೊತ್ತು. ಅಕಿರಾ ನೋಡಿದ ತಕ್ಷಣ ಇಷ್ಟ ಅದ ಹುಡುಗಿ. ನಾನು ಇಷ್ಟ ಪಟ್ಟ ಹುಡುಗಿ ನನ್ನನ್ನ ಇಷ್ಟ ಪಟ್ಟು ಲವ್ ಮಾಡಿದ್ರೆ ಸಾಕು ಅಂತ ಆಸೆ ಪಟ್ಟು ನಿಮ್ ಕಂಪನಿ ಜಾಯಿನ್ ಅದೇ. Ceo ಅನ್ನೋದನ್ನ ಕಂಪನಿಗೆ ಮಾತ್ರ ಸೀಮಿತ ಮಾಡಿ ಈ ರೀತಿ ಸಿಂಪಲ್ ಆಗಿ ಬದುಕ್ತಾ ಇದ್ದೀನಿ ಅಂತ ಹೇಳ್ದೆ.
ಕೃತಿ ಈ ವಿಷಯ ಅಕಿರಾ ಗೆ ಐ ಮೀನ್ ನೀವು ceo ಅನ್ನೋದು ಅಕಿರಾಗೆ ಗೊತ್ತಾ ಅಂತ ಕೇಳಿದ್ಲು. ಜಸ್ಟ್ ಎಂಪ್ಲೋಯ್ ಅಂತ ಗೊತ್ತು. ಅದೇ ಶೀತಲ್ ಹತ್ತಿರ ಮಾತಾಡೋವಾಗ ಕೇಳಿಸಿಕೊಂಡು ಕೇಳಿದ್ಲು. ನಾನು ಜಸ್ಟ್ ಎಂಪ್ಲೋಯ್ ಅಂತ ಹೇಳಿದೆ. ಹೌದ ಅಂತ ಸೈಲೆಂಟ್ ಆದ್ಲು. ಕೃತಿ ಸೀರಿಯಸ್ಲಿ ಕಂಪನಿ ಬಾಸ್ ತರ ಮಾತಾಡಿದನ್ನ ಕೇಳಿಸಿಕೊಂಡು ಕೂಡ ನೀನು ಜಸ್ಟ್ ಎಂಪ್ಲೋಯ್ ಅಂತ ಹೇಳಿದ್ರೆ ನಂಬಿ ಬಿಟ್ರ ಅಂತ ಕೇಳಿದ್ಲು. ಅವಳು ಕೊಡೊ ಟ್ರೈನಿಂಗ್ ತಗೊಂಡು ಅವಳ ಟೀಂ ಅಲ್ಲೇ ವರ್ಕ್ ಮಾಡ್ತಾ ಪಕ್ಕ ಜೂನಿಯರ್ ತರ ಇದ್ದು ಅವಳ ಹತ್ತಿರ ಬೈಸ್ಕೊಂಡು ವರ್ಕ್ ಮಾಡ್ತಾ ಇದ್ದವನು. ಒಂದು ಸ್ಟೆಪ್ ಮೇಲೆ ಹೋಗಿದ್ದೀನಿ ಅಂತ ಹೇಳಿದ್ರೆ ನಮ್ಮದೇ ಇರ್ತಾಳ. Ceo ಕೃತಿ ಯಾರಿಗೆ ಯಾವ ರೀತಿ ಹೇಳಿದ್ರೆ ಅರ್ಥ ಮಾಡಿಕೊಂಡು ನಂಬುತಾರೋ ಹಾಗೇ ಹೇಳ್ತಿನಿ ಅಂತ ಹೇಳ್ದೆ. ಕೃತಿ ನಗ್ತಾ ನನ್ನ ನೋಡ್ತಾ ಇದ್ರೆ ನನಗೆ ಕೋಪ ಬರ್ತಾ ಇದೆ ಮಹಿ ಕಂಪನಿ ಓನರ್ ಮಗಳು ಬೋರ್ಡ್ ಆಫ್ ಡೈರೆಕ್ಟರ್ ಅಲ್ಲಿ ಒಬ್ಬಳು ಅನ್ನೋ ಕೊಬ್ಬು ಸ್ವಲ್ಪ ಇತ್ತು. ಅದಕ್ಕೆ ಬೆಳಿಗ್ಗೆ ಹಾಗೇ ನಿನ್ನ ಹತ್ತಿರ ಮಾತಾಡಿದೆ. ಬಟ್ ಅಪ್ಪ ಯಾವಾಗ ಮಗಳಿಗಿಂತ ಕಂಪನಿ ಮುಖ್ಯ, ಈ ಕಂಪನಿ ಇಲ್ಲಾ ಅಂದ್ರೆ ನಾನು ಇರೋದಿಲ್ಲ ಅಂತ ಹೇಳಿದ್ರೋ ಅ ಕ್ಷಣ ನಾನು ಸತ್ತೇ ಹೋದೆ ಅಂತ ಅನ್ನಿಸ್ತು. ನನ್ನಲ್ಲಿ ಇದ್ದಾ ಕೊಬ್ಬು ಅಹಂಕಾರ ಎಲ್ಲಾ ಅಲ್ಲೇ ಸತ್ತೇ ಹೋದ್ವು. ನನಗೆ ಕೇವಲ ಅಪ್ಪ ಮಾತ್ರ ಬೇಕು ಅಂತ ಅನ್ನಿಸ್ತು. ನಾನು ಮಾಡಿದ ತಪ್ಪಿಗೆ ನಿನ್ನ ಹತ್ತಿರ ಬಂದು ಕ್ಷಮೆ ಕೇಳಿ ನೀನು ಒಪ್ಪದೇ ಹೋದ್ರೆ ನನ್ನನ್ನ ನಿನಗೆ ಅರ್ಪಿಸಿ ಕೊಂಡು ಆದ್ರು ಅಪ್ಪ ನ ಈ ಕಂಪನಿ ನ ಉಳಿಸ್ಕೊಬೇಕು ಅಂತ ನಿರ್ಧಾರ ಮಾಡಿ ಬಂದೆ ಇಲ್ಲಿಗೆ. ಅದ್ರೆ ನೀನು ನನ್ನ ಆಲೋಚನೆ ಗಳನೆಲ್ಲ ಉಲ್ಟಾ ಮಾಡಿದೆ. ಫ್ರೆಂಡ್ಸ್ ಜೊತೆಗೆ ಕೂತು ಮಾತಾಡೋ ಹಾಗೇ ನನ್ನ ನಿನ್ನ ಫ್ರೆಂಡ್ಸ್ ಜೊತೆಗೆ ಕೂರಿಸಿಕೊಂಡು ಒಬ್ಬ ಫ್ರೆಂಡ್ ಆಗಿ ತಪ್ಪನ್ನ ತಿದ್ದಿ. ನಾನು ಬರೋಕು ಮೊದಲೇ ನಮ್ ತಂದೆ ಹತ್ತಿರ ಮಾತಾಡಿ ವಿಷಯ ಹೇಳಿದ್ದು. ನನ್ನ ತಂದೆ ಬಗ್ಗೆ ನನಗೆ ಹೇಳಿ ನನ್ನ ಕಣ್ಣು ತೆರೆಸಿ. ಸಾರೀ ಹೇಳಿದಕ್ಕೆ ಚಾಕಲೇಟ್ ಕೊಟ್ಟು ಕಳಿಸಿದೆ. ಬರೋವಾಗ ಎಷ್ಟೋ ಆಲೋಚನೆ ಗಳೊಂದಿಗೆ ಬಂದೆ ಅದ್ರೆ ಹೋಗೋವಾಗ ತುಂಬಾ ಹ್ಯಾಪಿ ಆಗಿ ಹೋಗ್ತಾ ಇದ್ದೀನಿ. ತುಂಬಾ ಥ್ಯಾಂಕ್ಸ್ ಮಹಿ ಅಂತ ಹೇಳಿದ್ಲು. ಇಟ್ಸ್ ಓಕೆ ಕೃತಿ ಅದನ್ನೆಲ್ಲಾ ತಲೆಗೆ ಹಾಕ್ಕೋಬೇಡ ಆರಾಮಾಗಿ ಮನೆಗೆ ಹೋಗು ಬಿ ಹ್ಯಾಪಿ ಅಂತ ಹೇಳಿ ಅವಳನ್ನ ಕಾರ್ ಹತ್ತಿಸಿ ಕಳಿಸಿ ಕೊಟ್ಟು. ನಾನು ಕಾರ್ ತಗೊಂಡು ಅಕಿರಾ ಮನೆ ಕಡೆಗೆ ಹೋದೆ.
****************************************