Mahi - 23 in Kannada Love Stories by S Pr books and stories PDF | ಮಹಿ - 23

The Author
Featured Books
Categories
Share

ಮಹಿ - 23

   ಇಬ್ರು ದಾರಿ ಉದ್ದಕ್ಕೂ ಮಾತಾಡ್ಕೊಂಡು  ಮನೆ ಹತ್ತಿರ ಬಂದ್ವಿ. ಅಷ್ಟೋತ್ತಿಗೆ ರಾತ್ರಿ 8 ಗಂಟೆ ಆಗಿತ್ತು. ನಾವು ಬಂದಿದ್ದನ್ನ ನೋಡಿ ಗಾರ್ಡನ್ ಅಲ್ಲಿ ಕೂತಿದ್ದ ಅಷ್ಟು ಜನ ಎದ್ದು ನಮ್ಮ ಕಡೆಗೆ ನೋಡ್ತಾ ನಿಂತರು. ನಾನು ನೀಲಾ ಕಾರ್ ಇಳಿದು ಲಗೇಜ್ ತಗೊಂಡು, ಅವರ ಹತ್ತಿರ ಬಂದ್ವಿ. ತಾತ ಮಾತಾಡ್ತಾ ಮಹಿ ಏನಾಯ್ತು ನಾಳೆ 2 ದಿನ ಆಗುತ್ತೆ ಅಂತ ಹೇಳಿ ಇಷ್ಟು ಬೇಗ ಬಂದ್ರಿ ಅಂತ ಕೇಳಿದ್ರು. ನೀಲಾ ತಾತ ಹೇಳ್ತಿವಿ ಬನ್ನಿ ಮನೆ ಒಳಗೆ ಹೋಗೋಣ ಅಂತ ಹೇಳಿದ್ಲು. ತಾತ, ಸರಿ ಬನ್ನಿ ಅಂತ ಹೇಳಿ ಎಲ್ಲರನ್ನು ಕರ್ಕೊಂಡು ಮನೆ ಒಳಗೆ ಬಂದ್ರು. ಅಡುಗೆ ಮನೇಲಿ ಇದ್ದಾ ಅಜ್ಜಿ ನೀಲಾ ಅವರ್ ಅಮ್ಮ ಅತ್ತೆ ನಾವು ಬಂದಿದ್ದನ್ನ ನೋಡಿ ಅಡುಗೆ ಮನೆಯಿಂದ ಹೊರಗೆ ಬರ್ತಾ. ಅಜ್ಜಿ ನೀಲಾ ಏನಾಯ್ತು 2 ದಿನ ಆಗುತ್ತೆ ಬರೋಕೆ ಅಂತ ಹೇಳಿ ಹೋದ್ರಿ ಇಷ್ಟು ಬೇಗ ಬಂದ್ರಿ ಹೋದ ಕೆಲಸ ಏನಾಯ್ತು ಅಂತ ಕೇಳಿದ್ಲು. 

    ನೀಲಾ ಹೇಳ್ತಿನಿ ಬಾ ಅಜ್ಜಿ ಅಂತ ಹೇಳಿ ಅಜ್ಜಿ ನಾ ಕರ್ಕೊಂಡು ಅಜ್ಜಿ ಬಾ ನಿನ್ನ ಹತ್ತಿರ ನನಗೆ ಸ್ವಲ್ಪ ಕೆಲಸ ಇದೆ ಅಂತ ಹೇಳಿ ಕರ್ಕೊಂಡು ಅಜ್ಜಿ  ಅವರ ರೂಮ್ ಗೆ ಹೋದ್ಲು. ನಾನು ಏನಕ್ಕೆ ಅವರನ್ನ ಕರ್ಕೊಂಡು ಹೋಗ್ತಾ ಇದ್ದಾರೆ ಅಂತ  ಯೋಚ್ನೆ ಮಾಡ್ತಾ ಇದ್ದೆ. ಮನೆಯವರೆಲ್ಲ ಏನಕ್ಕೆ ಅಂತ ಅವರು ಹೋದ ಕಡೆಗೆ ನೋಡ್ತಾ ಇದ್ರು.. 2 ನಿಮಿಷದ ನಂತರ ನೀಲಾ ಅಜ್ಜಿ ಜೊತೆಗೆ ರೂಮಿಂದ ಹೊರಗೆ ಬಂದ್ಲು. ಅಜ್ಜಿ ನಾ ನೋಡಿದೆ ನಾರ್ಮಲ್ ಆಗಿ ಇದ್ರು ನೀಲಾ ನಾ ನೋಡಿದೆ ಅವಳ ಕೈಲಿ ಎರಡು ಸೀರೆಗಳು ಇದ್ದವು. ಅದನ್ನ ಇಡ್ಕೊಂಡು ಬರ್ತಾ  ಹಾಲ್ ಗೆ ಬಂದಳು. ನೀಲಾ ಮಾತಾಡ್ತಾ ತಾತ ಈ ಸೀರೆ ನಿನಗೆ ನೆನಪಿದೆಯಾ ಅಂತ ಕೇಳಿದ್ರು. ತಾತ ಮಾತಾಡ್ತಾ ಯಾಕ್ ನೆನಪಿಲ್ಲ ತುಂಬಾ ಚೆನ್ನಾಗಿ ನೆನಪಿದೆ. ಮದುವೆ ಅದ ಹೊಸದರಲ್ಲಿ ನಿಮ್ ಅಜ್ಜಿನ ಸಿನಿಮಾಗೆ ಕರ್ಕೊಂಡು ಹೋಗಿ ಬರೋವಾಗ ಈ ಎರಡು ಸೀರೆನ ಅವಳಿಗೆ ಕೊಡಿಸಿದ್ದೆ ಅಂತ ಹೇಳಿದ್ರು. ನೀಲಾ ಯಾವಾಗೋ ಮದುವೆ ಹೊಸದರಲ್ಲಿ ಕೊಡಿಸಿದ್ರಿ ಆದ್ರು ಇಷ್ಟು ವರ್ಷ ಆದ್ರು ಈ ಸೀರೆಗಳು ಇನ್ನು ಹೊಸ ಸೀರೆತರ ಇದೆ ಯಾಕ್ ಹೇಳಿ ಅಂತ ಕೇಳಿದ್ಲು. ತಾತ ಮಾತಾಡ್ತಾ ಯಾಕೆ ಅಂತ ಹೇಳಿದ್ರೆ ಅ ಸೀರೆ ಕ್ವಾಲಿಟಿ ಹಾಗೇ ಇದೆ ಅಂತ ಹೇಳಿದ್ರು. ನೀಲಾ ಅಜ್ಜಿ ಹತ್ರ ಮಾತಾಡ್ತಾ ಅಜ್ಜಿ  ನಿನ್ ಎಷ್ಟೋ ಸೀರೆಗಳನ್ನ ಉಟ್ಟಿಕೊಂಡು ಇದ್ದಿಯಾ ಈ ಎರಡು ಸೀರೆಗಳನ್ನೇ ಯಾಕೆ ಇಷ್ಟು ಜೋಪಾನವಾಗಿ ಇಟ್ಕೊಂಡು ಇದ್ದಿಯಾ ಅಂತ ಕೇಳಿದ್ರು. ಅಜ್ಜಿ ಮಾತಾಡ್ತಾ ಯಾಕ್ ಅಂದ್ರೆ ಒಂದು ನಿಮ್ ತಾತ ಕೊಡಿಸಿದ್ದು. ಇನ್ನೊಂದು ಕಾರಣ ನಾನ್ ಎಷ್ಟೋ ಸೀರೆಗಳ್ಳನ್ನ ಉಟ್ಟಿಕೊಂಡು ಇದ್ದೀನಿ ಅದ್ರೆ ಈ ತರ ಕ್ವಾಲಿಟಿ ಈ ತರ ಸೀರೆ  ಈಗಿನ ಕಾಲದಲ್ಲಿ ಸಿಗೋದು ಇಲ್ಲಾ ಅಂತ ಹೇಳಿದ್ರು. ನೀಲಾ ತಾತ ನಾ ಕಡೆಗೆ ನೋಡ್ತಾ ಹೌದ ತಾತ ಈ ತರ ಸೀರೆ ಇವಾಗ ಸಿಗೋದು ಇಲ್ವಾ ಅಂತ ಕೇಳಿದ್ಲು. ತಾತ ಎಲ್ಲಮ್ಮ ಸಿಗುತ್ತೆ? ಅ ಕಾಲದಲ್ಲಿ ಈ ಸೀರೆ ಕಂಪನಿ ಗೆ ಇದ್ದಾ ಡಿಮ್ಯಾಂಡ್ ಬೇರೆ ಯಾವ ಸೀರೆಗಳಿಗೂ ಇದ್ದಿಲ್ಲ. ಏನಾಯ್ತೋ ಏನೋ ಅ ಕಂಪನಿ ಮುಚ್ಚಿ ಬಿಟ್ರು. ಅದು ನಮ್ ಮೈಸೂರ್ ಅಲ್ಲೇ ಇದ್ದಿದ್ದು, ನಾನು ಫ್ಯಾಕ್ಟರಿ ನಾ ಸ್ಟಾರ್ಟ್ ಮಾಡೋ ಮೊದಲು ಹೋಗಿ ಕೇಳೋಣ ಅಂತ ಇದ್ದೆ ಅದ್ರೆ ಅವರು ಇಲ್ಲಿ ಇಲ್ಲಾ ಅಂತ ಗೊತ್ತಾಯ್ತು, ಆಮೇಲೆ ನಾನು ಸುಮ್ಮನೆ ಆಗಿ ಬಿಟ್ಟೆ ಅಂತ ಹೇಳಿದ್ರು. ನೀಲಾ ಮಾತಾಡ್ತಾ ತಾತ ನಿನಗೆ ಅ ಕಂಪನಿ ಹೆಸರು ಗೊತ್ತಾ ಅಂತ ಕೇಳಿದ್ಲು. ತಾತ ಯಾಕ್ ಗೊತ್ತಿಲ್ಲ ಚೆನ್ನಾಗಿ ನೆನಪಿದೆ ಶಬರಿ ಟೆಕ್ಸ್ಟ್ ಟೈಲ್ಸ್ ಅಂತ ಹೇಳಿದ್ರು. ನೀಲಾ ಪರ್ವಾಗಿಲ್ಲ ತಾತ ಮುಚ್ಚಿ ಹೋಗಿರೋ ಕಂಪನಿ ಹೆಸರು ಇನ್ನು ನೆನಪು ಇದೆ ನಿನಗೆ ಅಂತ ಕೇಳಿದ್ರು. ತಾತ ಹೇಗಮ್ಮ ಮರಿಯೋಕೆ ಸಾಧ್ಯ ಆಗುತ್ತೆ ಅ ಕಂಪನಿ ಓನರ್ ನಾನು ಒಂದು ಕಾಲದಲ್ಲಿ ಒಂದೇ ಸ್ಕೂಲ್ ಅಲ್ಲಿ ಓದ್ತಾ ಇದ್ದವರು ಒಳ್ಳೆ ಸ್ನೇಹಿತ ನನಗೆ . ಏನೋ ಗೊತ್ತಿಲ್ಲ ಇದ್ದಕಿದ್ದ ಹಾಗೇ ಒಂದು ದಿನ ಬೇರೆ ಊರಿಗೆ ಹೋದ್ರು. ಮತ್ತೆ ಅವನ ಹೆಸರನ್ನ ಈ ಕಂಪನಿ ಬೋರ್ಡ್ ಅಲ್ಲಿ ನೋಡಿದೆ. ತುಂಬಾ ಖುಷಿ ಆಯ್ತು ಭೇಟಿ ಮಾಡೋ ಅವಕಾಶ ಸಿಗಲಿಲ್ಲ ನಾನು ನನ್ನ ಜೀವನ ಅಂತ ಇದರಲ್ಲಿ  ಇದ್ದು ಬಿಟ್ಟೆ.  ಕಂಪನಿ ಮುಚ್ಚಿ ಹೋಯ್ತು ಅಂತ ಗೊತ್ತಾಗಿ ಸ್ನೇಹಿತನ ಇಷ್ಟು ಒಳ್ಳೆ ಕಂಪನಿ ಮುಚ್ಚಿ ಹೋಗ್ಬಾರ್ದು ಅಂತ ಅವನನ್ನ ಭೇಟಿ ಮಾಡಿ ಕಾರಣ ತಿಳಿದು ಸಹಾಯ ಮಾಡೋಣ ಇಲ್ಲಾ ನಾನೆ ತಗೋಳನ ಅಂತ ಪ್ರಯತ್ನ ಪಟ್ಟೆ ಅದ್ರೆ ಅದು ಆಗಲಿಲ್ಲ ಅಂತ ಸ್ವಲ್ಪ ನೋವಿನ ಧ್ವನಿ ಅಲ್ಲಿ ಹೇಳಿದ್ರು. 

    ತಾತ ನಾ ಮಾತು ಕೇಳಿ ನನ್ನ ಮನಸ್ಸಿಗೆ ಯಾಕೋ ತುಂಬಾ ನೋವಾಯ್ತು. ನೀಲಾ ನನ್ನ ಸ್ಥಿತಿ ನಾ ಅರ್ಥ ಮಾಡಿಕೊಂಡು  ಕಣ್ಣಲ್ಲೇ ಸಮಾಧಾನ ಹೇಳ್ತಾ. ತಾತ ನಾ ಹತ್ತಿರ ಹೋಗಿ ಅವರ ಮುಂದೆ ಕೂತು ಅವರ ಕೈ ಇಡಿದುಕೊಂಡು ತಾತ ನಿಮ್ ಮನಸ್ಸಿನ ನೋವು ನನಗೆ ಅರ್ಥ ಆಗುತ್ತೆ. ಅದ್ರೆ ನೀವು ಈ ರೀತಿ ಇರೋದು ನೋಡೋಕೆ ನನಗೆ ಇಷ್ಟ ಇಲ್ಲಾ. ನೀವು ನೋವು ಪಡೋಕೆ ಹೋಗಬೇಡಿ. ಯಾಕಂದ್ರೆ ನೀವು ಯಾವ ಕಂಪನಿ ಮುಚ್ಚಿ ಹೋಯ್ತು ಯಾವ ಸ್ನೇಹಿತನಿಗೆ ಸಹಾಯ ಮಾಡೋಕೆ ಆಗಲಿಲ್ಲವೋ ಈಗ ಅದೇ ಸ್ನೇಹಿತ ಅದೇ ಕಂಪನಿ ನಮ್ ಜೊತೆ ಕೈ ಜೋಡಿಸೋಕೆ ಒಪ್ಪಿಕೊಂಡು ಇದೆ ಅಂತ ಹೇಳಿದ್ಲು. ತಾತ ನೀಲಾ ಮಾತಿಗೆ ಶಾಕ್ ಆಗಿ ನೀಲಾ ಮುಖ ನೋಡ್ತಾ ಏನಮ್ಮ ನೀನು ಹೇಳ್ತಾ ಇರೋದು ಅಂತ ಕೇಳಿದ್ರು. ನೀಲಾ ನಗ್ತಾ ಹೌದು ತಾತ ನಾವು ಹೋಗಿದ್ದು ಶಬರಿ ಟೆಕ್ಸ್ಟ್ ಟೈಲ್ಸ್ ಕಂಪನಿ ಓನರ್ ನಾ ಭೇಟಿ ಮಾಡೋಕೆ, ಮಹಿ ಅವರ ಹತ್ತಿರ ಅವರ ಕಂಪನಿ ಸೀರೆಗೆ ಇದ್ದಾ ಬೆಲೆ ಅದರ ಘನತೆ ಪ್ರತಿಯೊಂದು ವಿಷಯ ನಾ ಹೇಳಿ ಮಾತಾಡಿ ಅವರಿಗೆ ಅರ್ಥ ಮಾಡಿಸಿದ. ಅವರು ಕಾರಣಾಂತರಗಳಿಂದ ಕಂಪನಿ ನಾ ಮುಚ್ಚ ಬೇಕಾಯಿತು ಆದರೆ ಯಾರಿಗೂ ಮಾರೋದಕ್ಕೆ ಹೋಗಲಿಲ್ಲ ಮಹಿ ಹೇಳಿದ ಮೇಲೆ ಅವರು ಖುಷಿಯಾಗಿ ಒಪ್ಪಿಕೊಂಡು ಮತ್ತೆ ಕಂಪನಿ ನಾ ಶುರು ಮಾಡೋದಕ್ಕೆ ನಮ್ ಜೊತೆ ಕೈ ಜೋಡಿಸೋಕೆ ಶುರು ಮಾಡೋಕೆ ಒಪ್ಪಿ ಇನ್ವೆಸ್ಟ್ಮೆಂಟ್ ಮಾಡೋಕೆ ರೆಡಿ ಇದ್ದಾರೆ. ಒಳ್ಳೆ ದಿನ ನೋಡಿ ಬರೋಕೆ ಹೇಳ್ತಿವಿ ಅಂತ ಹೇಳಿ ಬಂದ್ವಿ ಅಂತ ಹೇಳಿದ್ಲು. ತಾತ ಖುಷಿಯಾಗಿ ಎದ್ದು ನನ್ನ ಹತ್ತಿರ ಬಂದು ತುಂಬಾ ಸಂತೋಷ ಆಗ್ತಾ ಇದೆ ಮಹಿ ನಿನಗೆ ಯಾವರೀತಿ ಥ್ಯಾಂಕ್ಸ್ ಹೇಳಬೇಕು ಅಂತಾನೆ ನನಗೆ ಗೊತ್ತಾಗ್ತಾ ಇಲ್ಲಾ ಅಂತ ಹೇಳಿದ್ರು. ಇದರಲ್ಲಿ ಥ್ಯಾಂಕ್ಸ್ ಹೇಳೋ ಅಂತದ್ದು ನಾನೇನು ಮಾಡಿಲ್ಲ ತಾತ ಹೋಗಿ ಅವರಿಗೆ ವಿಷಯ ಹೇಳಿದೆ ಖುಷಿಯಾಗಿ ಒಪ್ಪಿಕೊಂಡರು ಅಷ್ಟೇ ಅಂತ ತಾತನಿಗೆ ಹೇಳಿದೆ. ತಾತ ಇನ್ನು ಏನೋ ಮಾತಾಡೋಕೆ ಬಂದ್ರು ಅಜ್ಜಿ ಮಧ್ಯ ಮಾತಾಡ್ತಾ ರೀ ಮಹಿ ಎಲ್ಲೂ ಹೋಗೋದು ಇಲ್ಲಾ ಮತ್ತೆ ಅವನ ಜೊತೆ ಮಾತಾಡ ಬಹುದು ಮಕ್ಕಳು ಯಾವಾಗ ಊಟ ಮಾಡಿದ್ರೋ ಏನೋ ಮೊದಲು ಅವರನ್ನ ಕಳಿಸಿ ಕೊಡಿ ಹೋಗಿ ಕೈ ಕಾಲು ತೊಳೆದುಕೊಂಡು ಬರಲಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಅಂತ ಹೇಳಿದ್ರು. ತಾತ ಹ್ಮ್ ಸರಿ ಆಯ್ತು ಕಳಿಸ್ತೀನಿ ಅಂತ ಹೇಳಿ ಮಹಿ ಹೋಗಿ ಫ್ರೆಷ್ ಅಪ್ ಆಗಿ ಬಾ ಹೋಗು ಊಟ ಮಾಡ್ತಾ ಮಾತಾಡೋಣ ಅಂತ ಹೇಳಿದ್ರು. ನಾನು ಸರಿ ಅಂತ ಹೇಳಿ ಲಗೇಜ್ ತಗೊಂಡು ನನ್ನ ರೂಮ್ ಗೆ ಹೋದೆ. ರೂಮ್ ಗೆ ಬಂದು ಫ್ರೆಷ್ ಅಪ್ ಆಗಿ ಬಟ್ಟೆ ನಾ ಬದಲಿಯಿಸಿ ಕೊಂಡು ಊಟ ಮಾಡೋಕೆ ಹೋದೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದ್ವಿ. 

   ಗಾರ್ಡನ್ ಅಲ್ಲಿ ಸ್ವಲ್ಪ ಹೊತ್ತು ಕೂತು ಮಾತಾಡ್ಕೊಂಡ್ವಿ. ಅ ನಂತರ ನಾನು ಎದ್ದು ರೂಮ್ ಗೆ ಹೋಗಿ ಮಲಗಿ ಕೊಂಡೆ. ಮಾರನೇ ದಿನ ಎದ್ದು ಫ್ರೆಷ್ ಅಪ್ ಆಗಿ ಅಜ್ಜಿ ಕೊಟ್ಟಿದ್ದಾರೆ ಫ್ಯಾಕ್ಟರಿ ಕೀ ನಾ ತೆಗೆದುಕೊಂಡು ಹೊರಗೆ ಬಂದೆ. ನೀಲಾ ಕಾಲೇಜ್ ಗೆ ಹೋಗೋಕೆ ರೆಡಿ ಆಗಿದ್ಲು. ನನ್ನ ನೋಡಿ ಕಣ್ ಹೊಡೆದು ಗುಡ್ ಮಾರ್ನಿಂಗ್ ಹೇಳಿದ್ಲು. ನಾನು ಏನು ಮಾತನಾಡದೆ ಸೈಲೆಂಟ್ ಆಗಿ ಸೋಫಾ ಮೇಲೆ ಕುತ್ಕೊಂಡೆ ಅಜ್ಜಿ ಬಂದು ಮಹಿ ಏನ್ ಕುತ್ಕೊಂಡೆ ಬಾ ತಿಂಡಿ ಮಾಡು ಅಂತ ಹೇಳಿ ಕರ್ಕೊಂಡು ಡೈನಿಂಗ್ ಟೇಬಲ್ ಹತ್ತಿರ ಬಂದ್ರು ನಾನು ಕೂತ್ಕೊಂಡು ತಿಂಡಿ ತಿಂತ ಇದ್ದೆ. ನೀಲಾ ಬಂದು ನನ್ನ ಪಕ್ಕ ಕೂತು ಸುತ್ತ ಒಂದು ಸರಿ ನೋಡಿದ್ಲು ರೋಹಿಣಿ ಬಿಟ್ರೆ ಯಾರು ಇದ್ದಿಲ್ಲ ಹಾಲ್ ಅಲ್ಲಿ ನೀಲಾ ಅದೇ ಅವಕಾಶ ವಾಗಿ ತಗೊಂಡು ಜುಟ್ಟು ಇಡ್ಕೊಂಡು ಮಗನೆ ಕಣ್ ಹೊಡೆದು ಗುಡ್ ಮಾರ್ನಿಂಗ್ ಹೇಳಿದ್ರೆ ಪೋಸ್ ಕೊಡ್ತೀಯಾ, ಅಷ್ಟು ಕೊಬ್ಬ ನಿನಗೆ ಅಂತ ಹೇಳಿದ್ಲು. ಲೇ ಜುಟ್ಟು ಬಿಡೆ ನೋವ್ತಾ ಇದೆ ಅಂತ ಹೇಳ್ದೆ. ಹೌದ ನೋವ್ತಾ ಇದೆಯಾ ನನಗು ಕೂಡ ನಿನ್ ಮಾಡಿದಕ್ಕೆ ಮನಸ್ಸಿಗೆ ನೋವಾಯ್ತು ಅ ನೋವಿಗೆ ಈಗ ಒಂದು ಕಿಸ್ ಕೊಟ್ಟು ಸರಿ ಮಾಡು ಇಲ್ಲಾ ಅಂದ್ರೆ ತಲೇನಲ್ಲಿ ಇರೋ ಕೂದಲೆಲ್ಲ ಕಿತ್ತು ಬಿಸಾಕ್ತಿನಿ ಅಂತ ಹೇಳಿದ್ಲು. ಅದೇ ಟೈಮ್ ಗೆ ಶಿಲ್ಪಾ ಬಂದ್ಲು. ನಮ್ಮನ್ನ ನೋಡಿ ಲೇ ಬಿಡೆ ಅವನನ್ನ ಅಂತ ಹೇಳಿದ್ಲು. ನೀಲಾ ಶಿಲ್ಪಾ ನಾ ನೋಡ್ತಾ ಕೋಪದಿಂದ ಇವನು ಏನ್ ಮಾಡಿದ ಅಂತ ನಿನಗೆ ಗೊತ್ತಾ ಅಂತ ಕೇಳಿದ್ಲು. ಶಿಲ್ಪಾ ಏನೇ ಮಾಡಿರಲಿ ಮೊದಲು ಅವನ ಜುಟ್ಟನ್ನ ಬಿಡು ಅಂತ ಹೇಳಿದ್ಲು. ನೀಲಾ ಇಲ್ಲಾ ಕಣೆ ಬಿಡಲ್ಲ ಏನ್ ಮಾಡ್ತಿಯಾ ಅಂತ ಕೇಳಿದ್ಲು. ಶಿಲ್ಪಾ ನೀಲಾ ಹೇಳೋದು ಕೇಳು ಸುಮ್ನೆ ಬಿಡು ಅವನನ್ನ ಅಂತ ಸ್ವಲ್ಪ ಕೋಪದಲ್ಲಿ ಹೇಳಿದ್ಲು. ನೀಲಾ ಇಲ್ಲಾ ಕಣೆ ಬಿಡೋದು ಇಲ್ಲಾ ಅಂತ ಹೇಳಿ ಇನ್ನು ಗಟ್ಟಿಯಾಗಿ ಇಡ್ಕೊಂಡ್ ಎಳಿಯೋಕೆ ಶುರು ಮಾಡಿದ್ಲು. ಶಿಲ್ಪಾ ಹೇಳಿದಕ್ಕೆ ಅವಳಿಗೆ ಕೋಪ ಬಂತು ಅನ್ನಿಸುತ್ತೆ ಎಷ್ಟು ಜೋರಾಗಿ ಎಳೀತಾ ಇದ್ದಾಳೆ ಅನ್ನೋದೇ ಅವಳಿಗೆ ಗೊತ್ತಾಗ್ತಾ ಇಲ್ಲಾ, ನನಗೆ ಮಾತ್ರ ತುಂಬಾ ನೋವಾಗ್ತಾ ಇಡ್ಕೊಂಡ ಪ್ಲೇಸ್ ಅಲ್ಲಿ ಉರಿ ಬರೋಕೆ ಶುರುವಾಯ್ತು ಗಾಯ ಆಗಿ ರಕ್ತ ಬರ್ತಾ ಇದೆ ಅನ್ನಿಸ್ತು. ಇವಾಗ ಹೇಳಿದ್ರೆ ಎಲ್ಲಿ ಶಿಲ್ಪಾ ಇನ್ನು ಅವಳ ಮೇಲೆ ಜಗಳ ಮಾಡ್ತಾಳೆ ಬೈತಾಳೆ ಅಂತ ಅನ್ನಿಸಿ ಸೈಲೆಂಟ್ ಆಗಿ ಇದ್ದು ಬಿಟ್ಟೆ. ನೀಲಾ ಮಾತ್ರ ಕೋಪದಿಂದ ಜೋರಾಗೆ ಕೂದಲನ್ನ ಎಳೀತಾನೆ ಇದ್ಲು. ಅಡುಗೆ ಮನೆ ಯಿಂದ ಬಂದ ಅಜ್ಜಿ ನೀಲಾ ಶಿಲ್ಪಾ ಮಾತಾಡೋದನ್ನ ನೋಡಿ ನೀಲಾ ಮುಖದಲ್ಲಿ ಕೋಪ ಅವಳು ನನ್ನ ಜುಟ್ಟನ್ನ ಇಡ್ಕೊಂಡು ಎಳೀತಾ ಇರೋ ರೀತಿ ನನ್ನ ಮುಖ ನೋಡಿ ಕಣ್ ಫುಲ್ ಕೆಂಪಾಗಿ ಇರೋದನ್ನ ನೋಡಿ, ಓಡಿ ಬಂದು ನೀಲಾ ಕೈ ಮೇಲೆ ಒಂದು ಏಟು ಹಾಕಿ ಕೋಪದಿಂದ ಕೈ ತೇಗಿ ಅಂತ ಹೇಳಿದ್ಲು ಅಜ್ಜಿ ಹಾಗೇ ಕೋಪ ಮಾಡ್ಕೊಂಡು ಹೇಳೋದನ್ನ ಕೇಳಿ ನೀಲಾ ಭಯ ಬಿದ್ದು ಕೂದಲನ್ನ ಬಿಟ್ಟು ಬಿಟ್ಟಳು. ಅಜ್ಜಿ ನನ್ನ ತಲೆ ನೋಡ್ತಾ ನೀಲಾ ಇಡ್ಕೊಂಡ ಪ್ಲೇಸ್ ಅಲ್ಲಿ ನೋಡ್ತಾ ಗಾಬರಿ ಆಗಿ ವಸಂತ ಬೇಗ ಅರಶಿಣ ತಗೋ ಬಾ ಅಂತ ಜೋರಾಗಿ ಹೇಳಿದ್ರು ಅಜ್ಜಿ ಹಾಗೇ ಕೂಗಿದಕ್ಕೆ ಅಡುಗೆ ಮನೇಲಿ ಇದ್ದಾ ವಸಂತ ಅವರು ಅರಶಿಣ ತಗೊಂಡು ಓಡಿ ಬಂದರು. ಶಿಲ್ಪಾ ನೀಲಾ ಇಬ್ಬರು ಭಯ ಬಿದ್ದು ಗಾಬರಿ ಆಗಿ ಅಜ್ಜಿ ಏನಾಯ್ತು ಅಂತ ಕೇಳಿದ್ರು. ನೀಲಾ ಅವಳು ಇಡ್ಕೊಂಡ ಪ್ಲೇಸ್ ಅಲ್ಲಿ ರಕ್ತ ಬರ್ತಾ ಇರೋದನ್ನ ನೋಡಿ ಭಯ ಬಿದ್ದು ಅಳೋಕೆ ಶುರು ಮಾಡಿದ್ಲು. ಅಜ್ಜಿ ಅರಶಿಣ ತೆಗೆದುಕೊಂಡು ರಕ್ತ ಬರೋ ಜಾಗದಲ್ಲಿ ಹಚ್ಚೋಕೆ ಶುರು ಮಾಡಿದ್ರು. ಶಿಲ್ಪಾ ನೀಲಾ ನಾ ಬೈಯ್ಯೋಕ್ ಶುರು ಮಾಡಿದ್ಲು. ವಸಂತ ಅವರು ಕೂಡ ಶಿಲ್ಪಾ ಜೊತೆ ಸೇರಿ ಬೈಯ್ಯೋಕೆ ಶುರು ಮಾಡಿದ್ರು. ಅಮ್ಮ ಪ್ಲೀಸ್ ಶಿಲ್ಪಾ ಪ್ಲೀಸ್ ಇವಾಗ ಏನಕ್ಕೆ ಅವಳನ್ನ ಬೈತಾ ಇದ್ದೀರಾ ತಪ್ಪು ನನ್ನದು ನಾನ್ ಅವಳಿಗೆ ಹೇಳಿಲ್ಲ ಅವಳಿಗೆ ಗೊತ್ತಾಗಲಿಲ್ಲ ಇದರಲ್ಲಿ ಅವಳ ತಪ್ಪೇನು ಇಲ್ಲಾ ಪ್ಲೀಸ್ ಅವಳನ್ನ ಬೈಬೇಡಿ ಅಂತ ಹೇಳ್ದೆ. ಶಿಲ್ಪಾ ಅಲ್ಲ ಕಣೋ ಅದು ಅಂತ ಮುಂದೆ ಹೇಳೋಕೆ ಬಂದ್ಲು. ಪ್ಲೀಸ್ ಶಿಲ್ಪಾ ಅವಳ ತಪ್ಪಿಲ್ಲ ಅಂತ ಹೇಳ್ದೆ ಅಲ್ವಾ ಬಿಡು ಇನ್ನ ಅಂತ ಹೇಳ್ದೆ. ಶಿಲ್ಪಾ ವಸಂತ ಇಬ್ಬರು ಮತ್ತೆ ಏನು ಮಾತಾಡೋಕೆ ಹೋಗಲಿಲ್ಲ. 

  ನೀಲಾ ಅಳ್ತಾನೆ ಇದ್ಲು. ಅಜ್ಜಿ ಅರಶಿಣ ಹಚ್ಚೋದನ್ನ ಮುಗಿಸಿ. ತುಂಬಾ ನೋವಾಗ್ತಾ ಇದೆಯಾ ಮಗ ಅಂತ ಕೇಳಿದ್ರು. ಇಲ್ಲಾ ಅಜ್ಜಿ ಅಂತ ಹೇಳಿ ಎದ್ದು ಶಿಲ್ಪಾ ಫ್ಯಾಕ್ಟರಿ ಕೆಲಸದ ಮೇಲೆ ಹೋಗ್ತಾ ಇದ್ದೀನಿ ಸಂಜೆ ಬರೋದು ಲೇಟ್ ಆಗಬಹುದು, ಮದನ್ ಗೆ ಹೇಳು ಅಂತ ಹೇಳಿ ಅಲ್ಲಿಂದ ಹೊರಟು ಹೊರಗೆ ಬಂದು ಕಾರ್ ನಾ ಸ್ಟಾರ್ಟ್ ಮಾಡಿಕೊಂಡು ಫ್ಯಾಕ್ಟರಿ ಕಡೆಗೆ ಹೊರಟೆ.    ಅಜ್ಜಿ ನೀಲಾ ಅಳೋದನ್ನ ನೋಡಿ ಏನಕ್ಕೆ ಅಳ್ತಾ ಇದ್ದಿಯಾ ಅಂತ ಕೇಳಿದ್ರು. ನೀಲಾ ಅಳ್ತಾ ಅಜ್ಜಿ ನಿಜವಾಗ್ಲೂ ನನಗೆ ಗೊತ್ತಾಗಲಿಲ್ಲ ನಾನು ತಮಾಷೆಗೆ ಅವನ ಜುಟ್ಟು ಇಡ್ಕೊಂಡೇ ಆಗಲೇ ನೋವಾಗ್ತಾ ಇದೆ ಅಂತ ಹೇಳ್ದೆ ನಾನೆಲ್ಲೋ ತಮಾಷೆ ಗೆ ಹೇಳ್ತಾ ಇದ್ದಾನೆ ಅಂತ ಅನ್ಕೊಂಡೆ ಅದ್ರೆ ಶಿಲ್ಪಾ ಜೊತೆ ಜಗಳ ಮಾಡ್ತಾ ರಕ್ತ ಬರೋ ಅಷ್ಟು ಜೋರಾಗಿ ಎಳೆದೆ ಅಂತ ಗೊತ್ತಾಗಲಿಲ್ಲ ಅವನು ಕೂಡ ಹೇಳಿಲ್ಲ ಅಂತ ಹೇಳ್ತಾ ಅಳೋಕೆ ಶುರು ಮಾಡಿದ್ಲು. ಅಜ್ಜಿ ಹೇಗ್ ಹೇಳ್ತಾನೆ ಹೇಳಿದ್ರೆ ಶಿಲ್ಪಾ ಇನ್ನು ಬೈಯ್ಯೋಕೆ ಶುರು ಮಾಡ್ತಾ ಇದ್ಲು ಅದು ಅವನಿಗೆ ಇಷ್ಟ ಇರಲಿಲ್ಲ ಅದಕ್ಕೆ ಹೇಳಿಲ್ಲ. ನಿಂದೇನು ತಪ್ಪಿಲ್ಲ ತಪ್ಪೇಲ್ಲ ನಂದೇ ಅಂತ ಶಿಲ್ಪಾ ವಸಂತ ನಾ ತೋರಿಸಿ ಇವರಿಬ್ಬರ ಬಾಯಿ ಮುಚ್ಚಿಸಿದ. ಅದೃಷ್ಟ ಮಾಡಿದೆ ಅಂತ ಅನ್ನಿಸುತ್ತೆ ಅರ್ಥ ಮಾಡ್ಕೊಳ್ಳೋವ್ನು ನಿನಗೆ ಸಪೋರ್ಟ್ ಮಾಡೋವ್ನು ನಿನಗೆ ಸಿಕ್ಕಿದ್ದಾನೆ. ಅಳೋದನ್ನ ನಿಲ್ಲಿಸಿ ಕಾಲೇಜ್ ಗೆ ಹೋಗು ಅಂತ ಹೇಳಿದ್ರು. ನೀಲಾ ಅಲ್ಲಿಂದ ಹೊರಟು ಅವಳ ರೂಂ ಗೆ ಹೋದಳು. 

    ನಾನು ಕಾರ್ ಅಲ್ಲಿ ತಾತನ ಫ್ಯಾಕ್ಟರಿ ಹತ್ತಿರ ಬಂದೆ. ಗೇಟ್ ತೆಗೆದು ಕೊಂಡು ಒಳಗೆ ಬಂದೆ, ತುಂಬಾ ವರ್ಷಗಳ ಕಾಲ ಮುಚ್ಚಿ ಇರೋದ್ರಿಂದ ಫ್ಯಾಕ್ಟರಿ ಸುತ್ತಾ ಗಿಡಗಳೆಲ್ಲ ಬೆಳೆದು ನಿಂತಿದ್ವು. ನಾನು ಒಳಗೆ ಬರ್ತಾ ಇರೋದನ್ನ ನೋಡಿ ಒಬ್ಬ 50 ವರ್ಷದ ವ್ಯಕ್ತಿ ನನ್ನ ಹತ್ತಿರ ಬಂದು ನನ್ನ ನೋಡಿ ಯಾರ್ ನೀವು ಇಲ್ಲಿಗೆ ಏನಕ್ಕೆ ಬಂದ್ರಿ ಅಂತ ಕೇಳಿದ. ನಾನು ಅವರನ್ನ ನೀವ್ ಯಾರು ಅಂತ ಕೇಳ್ದೆ. ಅವರು ಈ ಫ್ಯಾಕ್ಟರಿ ವಾಚ್ ಮ್ಯಾನ್ ಅಂತ ಹೇಳಿದ. ಹೌದ ನಾನು ಈ ಫ್ಯಾಕ್ಟರಿ ಓನರ್ ನನ್ನ ಕಳಿಸಿದ್ರು ಅವರು ಮತ್ತೆ ಈ ಫ್ಯಾಕ್ಟರಿ ನಾ ಶುರು ಮಾಡ್ತಾರೆ ಅಂತೇ ಅದಕ್ಕೆ ಎಲ್ಲಾ ಕ್ಲೀನ್ ಮಾಡಿಸೋಕೆ ನನ್ನ ಕಳಿಸಿದ್ರು ಅಂತ ಹೇಳ್ದೆ. ಅವರು ಖುಷಿಯಾಗಿ ಹೌದ ಸರ್ ಬನ್ನಿ ನನ್ನ ಹೆಸರು ವೀರಣ್ಣ ಅಂತ, ಹತ್ತು ವರ್ಷದಿಂದ ಇಲ್ಲೇ ವಾಚ್ ಮ್ಯಾನ್ ಆಗಿ ಕೆಲಸ ಮಾಡ್ತಾ ಇದ್ದೀನಿ ಸರ್, ಅಂತ ಹೇಳಿದ್ರು.  ನಾನ್ ಅವರ ಹತ್ತಿರ ಸರಿ ವೀರಣ್ಣ ಇನ್ಮೇಲೆ ನೀವೇ ಈ ಫ್ಯಾಕ್ಟರಿ ಗೆ ಸೆಕ್ಯೂರಿಟಿ ಇಂಚಾರ್ಜ್, ಇವತ್ತಿಂದ ಕೆಲಸಗಳು ಶುರು ಆಗುತ್ತೆ, ಬೆಳಿಗ್ಗೆ ಹೊತ್ತು 7 ಜನ ಸೆಕ್ಯೂರಿಟಿ ಗಳು ರಾತ್ರಿ ಹೊತ್ತು 5 ಜನ ಸೆಕ್ಯೂರಿಟಿ ಗಳು ಬೇಕು. ನಿಮಗೆ ಪರಿಚಯ ಇರೋ ವ್ಯಕ್ತಿ ಗಳನ್ನ ಕರ್ಕೊಂಡು ಬನ್ನಿ, ನಿಮಗೆ ತಿಂಗಳಿಗೆ 25 ಸಾವಿರ, ನಿಮ್ ಜೊತೆ ಕೆಲಸ ಮಾಡಿವ್ರಿಗೆ 18 ಸಾವಿರ ಅಂತ ಹೇಳ್ದೆ. ವೀರಣ್ಣ ತುಂಬಾ ಖುಷಿಯಾಗಿ ಸರಿ ಸರ್ ಇವತ್ತೇ ಬರೋಕೆ ಹೇಳ್ತಿನಿ. ಅಂತ ಹೇಳಿ ಮೊಬೈಲ್ ತಗೊಂಡು ಸೈಡ್ ಗೆ ಹೋದ್ರು. ನಾನು ಫ್ಯಾಕ್ಟರಿ ಒಳಗೆ ಹೋದೆ..


******************-*********************