Mahi - 21 in Kannada Love Stories by S Pr books and stories PDF | ಮಹಿ - 21

The Author
Featured Books
Categories
Share

ಮಹಿ - 21

  ನೀಲಾ ಗೆ ನಾನು ವಾಚ್ ಮ್ಯಾನ್ ಮಾತಾಡಿದ ರೀತಿಗೆ ಅವಳಿಗೆ ಒಂದು ರೀತಿ ಶಾಕ್ ಆಯ್ತು. ನನ್ನ ನೋಡ್ತಾ ಹಾಗೇ ಇದ್ದು ಬಿಟ್ಟಳು. ನಾನು ಕಾರ್ ಡ್ರೈವ್ ಮಾಡ್ತಾ ಗೇಟ್ ಯಿಂದ ಬಂಗಲೆ ಕಡೆಗೆ ಕಾರ್ ನಾ ಡ್ರೈವ್ ಮಾಡಿದೆ. ಬಂದು ಬಂಗಲೆ ಮುಂದೆ ಕಾರ್ ನಾ ನಿಲ್ಲಿಸಿದೆ. ನೀಲಾ ನನ್ನ ನೋಡ್ತಾ ಇರೋದನ್ನ ನೋಡಿ ನೋಡಿದ್ದು ಸಾಕು ಕಾರ್ ಇಳಿ ಅಂತ ಹೇಳ್ದೆ. ನೀಲಾ ವಾಸ್ತವಕ್ಕೆ ಬಂದು ಕಾರ್ ಡೋರ್ ಓಪನ್ ಮಾಡಿಕೊಂಡು ಹೊರಗೆ ಇಳಿದು ಬಂಗಲೆ ಕಡೆಗೆ ನೋಡಿದ್ಲು ಕಣ್ಣು ದೊಡ್ಡದು ಮಾಡಿಕೊಂಡು ಹಾಗೇ ನೋಡ್ತಾ ಇದ್ದು ಬಿಟ್ಟಳು. ನಾನು ಕಾರ್ ಇಳಿದು ಹೊರಗೆ ಬಂದು ನೀಲಾ ಹಾಗೇ ನೋಡ್ತಾ ಇರೋದನ್ನ ನೋಡಿ ಅವಳ ಹತ್ತಿರ ಹೋಗಿ ನೋಡಿದ್ದು ಸಾಕು ಬಾ ಅಂತ ಹೇಳಿ ಕೈ ಇಡ್ಕೊಂಡ್ ಮೇನ್ ಡೋರ್ ಕಡೆಗೆ ಹೆಜ್ಜೆ ಇಟ್ಟೆ. ನೀಲಾ ನಾನ್ ಹಾಗೇ ಕೈ ಇಡ್ಕೊಂಡ್ ಕರ್ಕೊಂಡು ಹೋಗೋದನ್ನ ನೋಡ್ತಾನೆ ಇದ್ದು ಬಿಟ್ಟಳು. ಮೇನ್ ಡೋರ್ ಹತ್ತಿರ ಹೋದೆ ಒಳಗೆ ಹೆಜ್ಜೆ ಇಡಬೇಕು ಅಷ್ಟರಲ್ಲಿ. ಲೋ ಅಲ್ಲೇ ನಿಂತ್ಕೋ ಅನ್ನೋ ಧ್ವನಿ ಕೇಳಿಸ್ತು. ನೀಲಾ ನನ್ನ ನೋಡ್ತಾ ಇದ್ದವಳು ಅ ಧ್ವನಿ ಕೇಳಿ ಅ ಕಡೆಗೆ ತಿರುಗಿ ನೋಡಿದ್ಲು. ಒಬ್ಬ ವಯಸ್ಸಾದವರು ಮತ್ತೆ ಇಬ್ಬರು ಮಧ್ಯ ವಯಸ್ಸಿನ ಮಹಿಳೆಯರು ಆರತಿ  ತಟ್ಟೆ ಜೊತೆಗೆ ಬರೋದನ್ನ ನೋಡಿ ನನ್ನ ಕಡೆಗೆ ನೋಡಿದ್ಲು. ನಾನು ಜಸ್ಟ್ ಒಂದು ಸ್ಮೈಲ್ ನಾ ಮಾಡಿದೆ. ಮೂರು ಜನ ನಮ್ ಹತ್ತಿರ ಬಂದು. ವಯಸ್ಸಾದ ಮಹಿಳೆ ಮಾತಾಡ್ತಾ ಏನೋ ಮೊದಲ ಸರಿ ಈ ಮನೆ ಮಹಾಲಕ್ಷ್ಮಿ ಜೊತೆಗೆ ಬರ್ತಾ ಇದ್ದಿಯಾ ಹಾಗೇ ಮನೆ ಒಳಗೆ ಬರ್ತಾರಾ ಅಂತ ಬೈದು  ಆರತಿ ಮಾಡೋಕೆ ಶುರು ಮಾಡಿದ್ರು. ಆಮೇಲೆ ಇಬ್ಬರ ಹಣೆಗೆ ಬೊಟ್ಟು ಇಟ್ಟು. ಮೊದಲ ಸರಿ ಮನೆಗೆ ಬರ್ತಾ ಇದ್ದಿಯಾ ಬಲಗಾಲಿಟ್ಟು ಒಳಗೆ ಬಾಮ್ಮ ಅಂತ ಹೇಳಿದ್ರು. ನೀಲಾ ನನ್ನ ಕಡೆಗೆನೇ ನೋಡ್ತಾ ಇರೋದನ್ನ ನೋಡಿ, ವಯಸ್ಸಾದ ಮಹಿಳೆ ಅವನ ಕಡೆಗೆ ಏನ್ ನೋಡ್ತೀಯ ನೀನು ಬಲಗಾಲಿಟ್ಟು ಒಳಗೆ ಬಾಮ್ಮ ಅಂತ ಹೇಳಿದ್ರು. ನೀಲಾ ಬಲಗಾಲಿಟ್ಟು ಒಳಗೆ ಹೆಜ್ಜೆ ಇಟ್ಟು ಒಳಗೆ ಹೋದಳು. ನಾನ್ ಕೂಡ ಹಾಗೇ ಬರಬೇಕಾ ಅಂತ ಕೇಳ್ದೆ. ಅದಕ್ಕೆ ಮಧ್ಯ ವಯಸ್ಸಿನ ಮಹಿಳೆ ಮಾತಾಡ್ತಾ ನೀನು ಉರುಳು ಸೇವೆ ಮಾಡ್ಕೊಂಡು ಬಾ ನಮಗೇನು ಅಂತ ಹೇಳಿದ್ರು. ನಾನು ಇನ್ನೇನು ಮಾತನಾಡದೆ ಒಳಗೆ ಹೋದೆ. ನೀಲಾ ಇನ್ನು ಶಾಕ್ ಅಲ್ಲೇ ಇರೋದನ್ನ ನೋಡಿ ವಯಸ್ಸಾದ ಮಹಿಳೆ ಮಾತಾಡ್ತಾ ಲೋ ಇವಳಿಗೆ ಏನು ಹೇಳಿಲ್ವಾ ಅಂತ ಕೇಳಿದ್ರು. ಅದಕ್ಕೆ ಇನ್ನೊಬ್ಬ ಮಹಿಳೆ ಮಾತಾಡ್ತಾ ಈ ಹುಡುಗಿ ಇರೋ ರೀತಿ ನೋಡಿದ್ರೆ ಗೊತ್ತಾಗಲ್ವಾ ಇವನು ಏನು ಹೇಳಿರಲ್ಲ ಅಂತ ಹೇಳಿದ್ರು. 


  ವಯಸ್ಸಾದ ಮಹಿಳೆ ನಗ್ತಾ ನಿನ್ ಹೆಸರು ಏನು ಅಂತ ಕೇಳಿದ್ರು ನೀಲಾ ನಾ. ನೀಲಾ ತಡವರಿಸ್ತಾ ನೀಲಾ ಅಂತ ಹೇಳಿದ್ಲು.. ಅದಕ್ಕೆ ಮೂರು ಜನ ನಕ್ಕು. ನೋಡಮ್ಮ ನೀಲಾ ಇವನು ನನ್ನ ಮೊಮ್ಮಗ ಇವರಿಬ್ಬರು ಅವನಿಗೆ ಚಿಕ್ಕಮ್ಮಂದಿರು. ದಾಕ್ಷಾಯಣಿ , ಶ್ರುತಿ . ಅಂತ ಹೇಳಿ ಪರಿಚಯ ಮಾಡಿಸಿ ಬಾಮ್ಮ ಕುತ್ಕೋ ಅಂತ ಹೇಳಿ ಕರ್ಕೊಂಡು ಹೋಗಿ ಸೋಫಾ ಮೇಲೆ ಕೂರಿಸಿಕೊಂಡರು. ನಾನು ಹೋಗಿ ಸೋಫಾ ಮೇಲೆ ಕೂತ್ಕೊಂಡು. ಶಬರಿ ( ಅಜ್ಜಿ ನಾನ್ ಕರಿಯೋ ಮುದ್ದು ಹೆಸರು ) ಎಲ್ಲಿ ಯಾರು ಕಾಣಿಸ್ತಾ ಇಲ್ಲಾ ಅಂತ ಕೇಳ್ದೆ. ಎಲ್ಲಾ ಕೆಲಸ ಮೇಲೆ ಹೋಗಿದ್ದಾರೆ  ಇನ್ನೇನು ಊಟದ ಟೈಮ್ ಆಯ್ತು ಅಲ್ವಾ ಬರ್ತಾರೆ ಅಂತ ಹೇಳಿದ್ರು.  ಮತ್ತೆ ಕೋತಿಗಳು ಎಲ್ಲಿ ಅಂತ ಕೇಳ್ದೆ. ನಿನ್ ಬರೋದು ಅವರಿಗೆ ಗೊತ್ತಿಲ್ಲ ಅದಕ್ಕೆ ಕಾಲೇಜ್ ಗೆ ಸ್ಕೂಲ್ ಗೆ ಹೋಗಿದ್ದಾರೆ ಅವರು ಬರೋದು ಸಂಜೆ ನೇ ಅಂತ ಶ್ರುತಿ ಚಿಕ್ಕಮ್ಮ ಹೇಳಿದ್ರು. ನಾವು ಮಾತಾಡ್ತಾ ಇರೋವಾಗ ಅಡುಗೆ ಮನೆಯಿಂದ 2 ಲೋಟ ನೀರು ತಗೋ ಬರ್ತಾ ಒಬ್ಬ ಮಹಿಳೆ ಬಂದ್ರು. ಅವರನ್ನ ನೋಡಿ ಅಮ್ಮ ಹೇಗಿದ್ದೀರ ಅಂತ ಕೇಳ್ದೆ. ನಾನ್ ಚೆನ್ನಾಗಿ ಇದ್ದೀನಿ ಮಗ ನಿನ್ ಹೇಗ್ ಇದ್ದಿಯಾ ಅಂತ ಸಂತೋಷ ವಾಗಿ ಹೇಳ್ತಾ ಕುಡಿಯೋಕೆ ನೀರನ್ನ ಕೊಟ್ರು. ನಾನ್ ನೀರಿನ ಲೋಟ ತೆಗೆದುಕೊಳ್ತಾ ಚೆನ್ನಾಗಿ ಇದ್ದೀನಿ ಅಂತ ಹೇಳ್ದೆ ಆಮೇಲೆ ಅವರು ಹೋಗಿ ನೀಲಾ ಗೆ ಕುಡಿಯೋಕೆ ನೀರನ್ನ ಕೊಟ್ಟು ಅಡುಗೆ ಮನೆ ಕಡೆಗೆ ಹೆಜ್ಜೆ ಇಟ್ರು. ನಾನು ಮೈ ಡಿಯರ್ ಅನ್ನಪೂರ್ಣೇಶ್ವರಿ ಏನ್ ಸ್ಪೆಷಲ್ ಇವತ್ತು ಅಂತ ಕೇಳ್ದೆ. ನಿನ್ ಬರ್ತೀಯ ಅಂತ ಸೋಮಣ್ಣ ನಾಟಿ ಕೋಳಿ ನಾ ತಂದ್ರು ಅಂತ ಹೇಳಿದ್ರು. ಹೌದ ಸೋಮಣ್ಣ ಎಲ್ಲಿ ಅಂತ ಕೇಳ್ದೆ. ಅವರು ಅಡುಗೆ ಮನೇಲಿ ಇದ್ದಾರೆ ಅಂತ ಹೇಳಿದ್ರು. ಹೌದ ನಡಿ ಅಂತ ಅವರ ಜೊತೆಗೆ ನಾನು ಅಡುಗೆ ಮನೆ ಕಡೆಗೆ ಹೋದೆ.

    ನೀಲಾ ನಾನ್ ಹೋಗೋದನ್ನೇ ನೋಡ್ತಾ ಇರೋದನ್ನ ನೋಡಿ ಅಜ್ಜಿ, ಏನಮ್ಮ ನೀಲಾ ಅವನು ನಿನಗೆ ಏನು ಹೇಳಿಲ್ವಾ ಅಂತ ಕೇಳಿದ್ರು. ನೀಲಾ ಅಜ್ಜಿ ಕಡೆಗೆ ನೋಡ್ತಾ ಇಲ್ಲಾ ಅನ್ನೋ ತರ ತಲೆ ಆಡಿಸಿದ್ಲು. ಚಿಕ್ಕ ವಯಸ್ಸಿನಿಂದ ಅವನು ಹಾಗೇನೇ, ಈ ಮನೆಗೆ ಇರೋ ಒಬ್ಬನೇ ವಾರಸುದಾರ, ಯಾವತ್ತೂ ದುಡ್ಡು ಇದೆ ಅಸ್ತಿ ಇದೆ ಅನ್ನೋ ಅಹಂ ನಾ ತಲೆಗೆ ಹಾಕಿಕೊಂಡಿಲ್ಲ. ಮನೆ ವಾಚ್ ಮ್ಯಾನ್ ಯಿಂದ ಇಡಿದು ಅವರ ತಾತ ನಾ ತನಕ ಎಲ್ಲರನ್ನು ನನ್ನವರೇ ಅಂತ ಅನ್ಕೊಂಡು ಬೆಳೆದವನು. ಯಾರಿಗೂ ಒಂದು ಮಾತು ಅಪ್ಪಿ ತಪ್ಪಿ ಮಾತಾಡೋಕೆ ಹೋದವನು ಅಲ್ಲ. ಎಲ್ಲರನ್ನು ಪ್ರೀತಿ ಯಿಂದ ಮಾತಾಡಿಸ್ತಾನೆ ಅಷ್ಟೇ ಸಂತೋಷ ವಾಗಿ ಅವರ ಜೊತೆ ಇರ್ತಾನೆ. ನೂರಾರು ಜನಕ್ಕೆ ಕೆಲಸ ಹೇಳಬೇಕಾದವನು ಒಬ್ಬರ ಹತ್ತಿರ ಕೆಲಸಕ್ಕೆ ಏನಕ್ಕೆ ಹೋಗ್ತಿಯ ಅಂತ ಕೇಳಿದ್ರೆ, ಇದು ನೀವು ಸಂಪಾದನೆ ಮಾಡಿರೋದು ನನಗೆ ಬೇಡ, ನಾನು ನಿಮ್ಮಷ್ಟು ಸಂಪಾದನೆ ಮಾಡ್ತಿನೋ ಇಲ್ವೋ ಅದ್ರೆ ನನ್ನನ್ನ ನಾನು ಏನು ಅಂತ ನಿರೂಪಿಸ್ತೀನಿ , ನನ್ನ ನಂಬಿ ಬರೋವಳನ್ನ ಉಪವಾಸ ಇಡದೆ ಅವಳು ಕೇಳಿದನ್ನ ಕೊಡಿಸಿ ಸಂತೋಷ ವಾಗಿ ನೋಡಿಕೊಳ್ಳೋ ಅಷ್ಟು ಸಂಪಾದನೆ ಆದ್ರೂ ಮಾಡ್ತೀನಿ ಅಂತ ಹೇಳಿ ಎಲ್ಲವನ್ನೂ ಬೇಡ ಅಂತ ಹೇಳಿದ.  ಮೊನ್ನೆ ನಿನ್ನ ಬಗ್ಗೆ ಹೇಳಿದ. ನಮಗೆ ತುಂಬಾ ಸಂತೋಷ ಆಯ್ತು ಯಾಕಂದ್ರೆ ಗಂಡಸ್ಸಿನ ಸಂಪಾದನೆ ನಾ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗೋವ್ರು ಸಿಗೋದು ತುಂಬಾ ಕಮ್ಮಿ. ಅದರಲ್ಲೂ ಈ ಜನರೇಶನ್ ಅಲ್ಲಿ ಸಿಗೋದು ತುಂಬಾ ಕಷ್ಟ. ನಿನ್ ಅವನಿಗೆ ಸಿಕ್ಕಿದ್ದೀಯ, ಅವನನ್ನ ಅರ್ಥ ಮಾಡ್ಕೊಂಡು ಇದ್ದಿಯಾ. ನಮಗಂತೂ ತುಂಬಾ ಸಂತೋಷ ಆಗ್ತಾ ಇದೆ ಅಂತ ಹೇಳಿದ್ರು. 

   ಅತ್ತೆ ಪಾಪ ಈಗ್ಲೇ ನನ್ನ ಸೊಸೆ ಶಾಕ್ ಅಲ್ಲಿ ಇದ್ದಾಳೆ ನಿನ್ ಇನ್ನು ಅವನ ಬಗ್ಗೆ ಹೇಳಿದ್ರೆ ಹೇಗೆ ಅಂತ ದಾಕ್ಷಾಯಣಿ ಅವರು ಹೇಳಿದ್ರು. ಅಜ್ಜಿ ಮೇನ್ ಡೋರ್ ನಿಂದ ಯಾರೋ ಬರೋ ಶಬ್ದ ನಾ ಕೇಳಿ ಮಾತನ್ನ ನಿಲ್ಲಿಸಿ ಅ ಕಡೆಗೆ ನೋಡ್ತಾರೆ. ಬರೋವರನ್ನ ನೋಡಿ. ಎದ್ದು  ನಿಂತು  ತಾತ ನಾ ಕಡೆಗೆ ನೋಡ್ತಾರೆ. ತಾತ ಅಜ್ಜಿ ಪಕ್ಕದಲ್ಲಿ ಕೂತಿರೋ ನೀಲಾ ನಾ ನೋಡಿ. ಬಂದ್ನ ಅವನು ಅಂತ ಕೇಳಿದ್ರು. ಅಜ್ಜಿ ಹ್ಮ್ ಬಂದಿದ್ದಾನೆ ಅಡುಗೆ ಮನೆ ಲಿ ಇದ್ದಾನೆ ಅಂತ ಹೇಳಿ. ಮಹಿ ನಿಮ್ ತಾತ ಬಂದ್ರು ಅಂತ ಹೇಳಿದ್ರು. 

ಅಡುಗೆ ಮನೇಲಿ ಸೋಮಣ್ಣ ನಾ ಜೊತೆಗೆ ಮಾತಾಡ್ತಾ ಇದ್ದಾ ನಾನು ತಾತ ಬಂದ್ರು ಅನ್ನೋದನ್ನ ಕೇಳಿ. ಅಲ್ಲಿಂದ ಓಡೋಕೆ ಶುರು ಮಾಡಿದೆ. ನಾನ್ ಓಡೋದನ್ನ ನೋಡಿ ಅಜ್ಜಿ ಚಿಕ್ಕಮ್ಮಂದಿರು ನಗ್ತಾ ಇದ್ರೆ. ನೀಲಾ ಏನಕ್ಕೆ ಇವನು ಹೀಗೆ ಓಡ್ತಾ ಇದ್ದಾನೆ ಅಂತ ನನ್ನೇ ನೋಡೋಕೆ ಶುರು ಮಾಡಿದ್ಲು. ನಾನು  ಓಡ್ತಾ ಮೇನ್ ಡೋರ್ ಕಡೆಗೆ ಹೋದೆ ಮೇನ್ ಡೋರ್ ಸಡನ್ ಆಗಿ ಕ್ಲೋಸ್ ಆಯ್ತು. ನಾನು ಯಾರ್ ಕ್ಲೋಸ್ ಮಾಡಿದ್ದೂ ಅಂತ ನೋಡಿದ್ರೆ ಚಿಕ್ಕಪ್ಪಂದಿರು ಇಬ್ರು ಡೋರ್ ನಾ ಕ್ಲೋಸ್ ಮಾಡಿ ನಿಂತ್ಕೊಂಡು ಇದ್ದಾರೆ. ಇಬ್ರು ಬಂದು ನನ್ನ ಲಾಕ್ ಮಾಡಿ ಇಡ್ಕೊಂಡು ಇವಾಗ ಎಲ್ಲಿಗೆ ಓಡ್ತಿಯ ಅಂತ ಕೇಳಿದ್ರು. ಅಯ್ಯೋ ಚಿಕ್ಕಪ್ಪ ನಿಮ್ ತಮ್ಮಯ್ಯ ಅಂತೀನಿ ಬೇಕಾದ್ರೆ ನಿಮ್ ಕಾಲಿಗೆ ಬೀಳ್ತೀನಿ ಪ್ಲೀಸ್ ನನ್ನ ಬಿಟ್ಟು ಬಿಡಿ ಟೈಗರ್ ಈಗ್ಲೇ ಕೋಪದಲ್ಲಿ ಇದೆ ಸಿಕ್ಕಕೊಂಡ್ರೆ ತಿಂದು ಬಿಸಾಕಿ ಬಿಡುತ್ತೆ ನನ್ನ ಮೂಳೆಗಳು ಕೂಡ ಸಿಗೋದಿಲ್ಲ ಪ್ಲೀಸ್ ನನ್ನ ಬಿಟ್ಟು ಬಿಡಿ ಅಂತ ಅವರಿಬ್ಬರನ್ನು ಕೇಳಿಕೊಂಡೆ. ಅವರು ಕರುಣೆ ಇಲ್ಲದೆ ಇರೋ ಹಾಗೇ ಎತ್ಕೊಂಡು ನನ್ನ ತಾತ ನಾ ಮುಂದೆ ನಿಲ್ಲಿಸಿದ್ರೂ. ತಾತ ಇವಾಗ ಎಲ್ಲಿಗೆ ಹೋಗ್ತಿಯ ಅಂತ ವ್ಯಂಗ್ಯ ವಾಗಿ ನಗ್ತಾ ಹೇಳಿದ್ರು. ನಾನು ಐಮ್ ಸರೆಂಡರ್ ಅಂತ ಕೈ ಕಟ್ಟಿ ನಿಂತೇ. ತಾತ ಕೂಲ್ ಆಗಿ ಅಪ್ಪಿಕೊಂಡು ಹೇಗಿದ್ದೀಯ ಅಂತ ಕೇಳಿದ್ರು, ನಾನು ಸ್ಮೈಲ್ ಮಾಡ್ತಾ ನಿನ್ ಇರಬೇಕಾದ್ರೆ ನನಗೆ ಏನು ಅಂತ ನಗ್ತಾ ಖುಷಿಯಾಗಿ ಹೇಳ್ದೆ. ಅಜ್ಜಿ ಆಮೇಲೆ ಬೇಕಾದ್ರೆ ಕೂತು ಆರಾಮಾಗಿ ಮಾತಾಡಬಹುದು ಹೋಗಿ ಕೈ ಕಾಲು ತೊಳೆದುಕೊಂಡು ಬನ್ನಿ ಊಟ ಮಾಡಿಯುವಿರಂತೆ ಅಂತ ಹೇಳಿ. ನೀಲಾ ಬಾಮ್ಮ ನನ್ನ ಜೊತೆಗೆ ಅಂತ ಹೇಳಿ ನೀಲಾ ನಾ ಗೆಸ್ಟ್ ರೂಮ್ ಕಡೆಗೆ ಕರ್ಕೊಂಡು ಹೋದರು. ಸ್ವಲ್ಪ ಸಮಯದ ನಂತರ ಎಲ್ಲರೂ ಡೈನಿಂಗ್ ಟೇಬಲ್ ಹತ್ತಿರ ಬಂದು ಊಟಕ್ಕೆ ಕುತ್ಕೊಂಡ್ವಿ. ಅಜ್ಜಿ ಎಲ್ಲರಿಗೂ ಊಟ ಬಡಿಸೋಕೆ ಶುರು ಮಾಡಿದಳು. ಎಲ್ಲರೂ ಒಟ್ಟಿಗೆ ಕೂತು ಮಾತಾಡ್ಕೊಂಡು ಊಟ ಮಾಡಿದ್ವಿ.

   ಎಲ್ಲರೂ ಊಟ ಮಾಡಿಕೊಂಡು ಬಂದು ಹಾಲ್ ಅಲ್ಲಿ ಸೋಫಾ ಮೇಲೆ ಕುತ್ಕೊಂಡ್ವಿ.  ತಾತ ಮಾತಾಡ್ತಾ ಹೇಳು ಮಹಿ ಏನೋ ಮಾತಾಡಬೇಕು ಅಂತ ಅಜ್ಜಿ ಹತ್ತಿರ ಹೇಳ್ದೆ ಅಂತೇ ಏನ್ ವಿಷಯ ಅಂತ ಕೇಳಿದ್ರು. ಎಲ್ಲರೂ ನಾನ್ ಏನ್ ಹೇಳ್ತಿನಿ ಅಂತ ನನ್ನ ಕಡೆಗೆ ನೋಡಿದ್ರು. ತಾತ ನಾನು ಟೆಕ್ಸ್ಟ್ ಟೈಲ್ ಬಿಸಿನೆಸ್ ಮಾಡಬೇಕು ಅಂತ ಇದ್ದೀನಿ ಅಂತ ಹೇಳ್ದೆ. ತಾತ ಅಜ್ಜಿ ಎಲ್ಲರೂ ಖುಷಿ ಆದ್ರೂ ತಾತ ಅಷ್ಟೇ ತಾನೇ ನಿನಗೆ ಎಷ್ಟು ಬೇಕು ಹೇಳು ಈಗ್ಲೇ ಇಲ್ಲೇ ಕೊಡ್ತೀನಿ ಅಂತ ಹೇಳಿದ್ರು. ತಾತ ನೀವು ನನಗೆ ಕೊಡ್ತೀರಾ ಅಂತ ನನಗೆ ಗೊತ್ತು ಅದ್ರೆ ನಾನು ನಿಮ್ ಹತ್ತಿರ ದುಡ್ಡು ಕೇಳ್ತಾ ಇಲ್ಲಾ ಅಂತ ಹೇಳ್ದೆ. ತಾತ ದುಡ್ಡು ಅಲ್ಲದೆ ಮತ್ತೆ ಇನ್ನೇನು ಬೇಕು ಅಂತ ಕೇಳಿದ್ರು. ತಾತ ಮೈಸೂರ್ ಅಲ್ಲಿ ನೀವು ಮೊದಲು ಅಜ್ಜಿ ಹೆಸರಲ್ಲಿ ಶುರು ಮಾಡಿದ ಟೆಕ್ಸ್ಟ್ ಟೈಲ್ ಫ್ಯಾಕ್ಟರಿ ಈಗ ಅಪ್ಪ ಚಿಕ್ಕಪ್ಪ ಬೇರೆ ಬೇರೆ ಬಿಸಿನೆಸ್ ಸ್ಟಾರ್ಟ್ ಮಾಡಿದ್ರು ನೀವು ಹೊಸ ಹೊಸ ಟೆಕ್ಸ್ಟ್ ಟೈಲ್ ಕಂಪನಿ ಗಳು ಬಂದ್ವು ಅಂತ ಫ್ಯಾಕ್ಟರಿ ನಾ ಕ್ಲೋಸ್ ಮಾಡಿ,   ಅಜ್ಜಿ ಗೋಸ್ಕರ ಮೊದಲು ಶುರು ಮಾಡಿದ ಫ್ಯಾಕ್ಟರಿ ಅಂತ  ಯಾರಿಗೂ ಮಾರೋಕೆ ಹೋಗಿಲ್ಲ. ನೀವು ಹೋಗೋದು ಇಲ್ಲಾ ಅಂತ ನನಗೆ ಗೊತ್ತು ಎಲ್ಲರಿಗೂ ಗೊತ್ತು. ಅದಕ್ಕೆ ಯಾರು ಅದರ ಬಗ್ಗೆ ಮಾತು ಕೂಡ ಆಡೋಕೆ ಹೋಗಲಿಲ್ಲ.  ನೀಲಾ ಅವರ ತಾತನವರದ್ದು ಕೂಡ ಟೆಕ್ಸ್ಟ್ ಟೈಲ್ ಬಿಸಿನೆಸ್. ಈಗ ಅವರು ಬಿಸಿನೆಸ್ ನಾ ದೊಡ್ಡದು ಮಾಡಬೇಕು ಅಂತ ಇದ್ದಾರೆ, ಅದ್ರೆ ಇನ್ವೆಸ್ಟ್ಮೆಂಟ್ ಮಾಡೋವ್ರು ಯಾರು ಸಿಗ್ತಾ ಇಲ್ಲಾ. 


  ನಾನು ಮೈಸೂರ್ ಗೆ ಹೋದಾಗಿನಿಂದ ಅಲ್ಲಿ ಪ್ರತಿಯೊಂದು ಕೆಲಸ ನಾ ಹತ್ತಿರದಿಂದ ನೋಡಿದ್ದೀನಿ ಕಲಿತಿದ್ದೀನಿ ಕೂಡ, ಚಿಕ್ಕ ವಯಸ್ಸಲ್ಲಿ ಅಜ್ಜಿ ಜೊತೆ ಆಟ ಆಡೋವಾಗ ಅವರ ಮಡಿಲಲ್ಲಿ ಮಲಗೋವಾಗ ಅವರಿಗೋಸ್ಕರ ನೀವೇ ನಿಮ್ಮ ಕೈಯಾರ ಸೀರೆಗಳನ್ನ ನೈದು ಅಜ್ಜಿಗೆ ತಂದು ಕೊಡ್ತಾ ಇದ್ರಿ, ಅಜ್ಜಿ ಅ ಸೀರೆಗಳನ್ನ ಹುಟ್ಟಿಕೊಂಡ ಪ್ರತಿ ಸರಿ ನೀವು ಅವರನ್ನ ಮೊದಲ ಸರಿ ನೋಡೋಕೆ ಹೋದಾಗ ನಿಮಗೋಸ್ಕರ ಮೊದಲ ಸರಿ ಸೀರೆ ಹುಟ್ಟಿಕೊಂಡು ನಿಮ್ ಮುಂದೆ ಬಂದು ನಿಂತಾಗ ಎಷ್ಟು ನಾಚಿಕೊಳ್ತಾ ಸಂತೋಷ ಪಡ್ತಾ ಇದ್ರೋ ಅಷ್ಟೇ ನಾಚಿಕೆ ಸಂತೋಷ ನೀವು ಕೊಡೊ ಸೀರೆ ನಾ ಹುಟ್ಟಿಕೊಂಡ ಪ್ರತಿ ಸರಿ ಪಡ್ತಾ ಇದ್ರು. ಇದನ್ನ ಅಜ್ಜಿ ನನಗೆ ಎಷ್ಟೋ ಸರಿ ಹೇಳಿದ್ದಾಳೆ. ಅ ವಯಸ್ಸಲ್ಲಿ ನನಗೆ ಅದರ ಬಗ್ಗೆ ಗೊತ್ತಿರದೆ ಇರಬಹುದು ಅದ್ರೆ ಅದರ ಸ್ಪರ್ಶ ಅ ಫೀಲಿಂಗ್ ನನಗೆ ತುಂಬಾ ಚೆನ್ನಾಗಿ ಗೊತ್ತು. ಅದೇ ಫೀಲಿಂಗ್ ನನಗೆ ಇವರು ತಯಾರು ಮಾಡೋ ಬಟ್ಟೆ ಗಳಲ್ಲಿ ಸಿಕ್ತು. ಒಂದು ಕಾಲದಲ್ಲಿ ಶಬರಿ ಟೆಕ್ಸ್ಟ್ ಟೈಲ್ ಬಟ್ಟೆ ಗಳು ಅಂದ್ರೆ ಜನ ಪ್ರಶ್ನೆ ಮಾಡದೇ ತಗೋತಾ ಇದ್ರು. ಅಷ್ಟು ನಂಬಿಕೆ ಇತ್ತು. ಈಗ ಮತ್ತೆ ಅದನ್ನ ಜನರಿಗೆ ಪರಿಚಯ ಮಾಡಿಸಬೇಕು. ಮುಚ್ಚಿ ಹೋಗಿರೋ ಶಬರಿ ಟೆಕ್ಸ್ಟ್ ಟೈಲ್ ಕಂಪನಿ ಮತ್ತೆ ಪುನರ್ಜನ್ಮ ಪಡೆದು ನೀಲಾ ಅವರ ತಾತನ ಕಂಪನಿ ಜೊತೆ ಕೈ ಜೋಡಿಸಿದ್ರೆ ಎರಡು ಕಂಪನಿ ಗಳು ಒಂದು ಸಾಮ್ರಾಜ್ಯ ನೇ ಕಟ್ಟಬಹುದು ಅಂತ ಹೇಳ್ದೆ.  ನನ್ನ ಮಾತು ಕೇಳಿ ಎಲ್ಲರಿಗೂ ಸಂತೋಷ ಆಯ್ತು. ತಾತ ನಿಗೆ ಎಷ್ಟು ಸಂತೋಷ ಆಗ್ತಾ ಇದೆ ಅಂತ ಅವರ ಕಣ್ಣಲ್ಲಿ ತುಂಬಿ ಕೊಂಡಿರೋ ಕಣ್ಣೀರೇ ಹೇಳ್ತಾ ಇದೆ. ತಾತ ಎದ್ದು ನನ್ನ ಮುಂದೆ ಬಂದು ನಿಂತರು. ನಾನು ಎದ್ದು ಅವರ ಮುಂದೆ ನಿಂತೇ. ತಾತ ನನ್ನ ತಬ್ಬಿಕೊಂಡು ನಾನು ಶುರು ಮಾಡಿದ ಫ್ಯಾಕ್ಟರಿ ನನ್ನ ಕಣ್ಣ ಮುಂದೆ ಅ ರೀತಿ ಆಯ್ತು ಅಂತ ಮನಸಲ್ಲಿ ಎಲ್ಲೋ ಒಂದು ಕಡೆ ಅ ನೋವು ಹಾಗೇ ಇತ್ತು, ಅದ್ರೆ ಅ ನೋವನ್ನ ನೀನು ದೂರ ಮಾಡಿಬಿಟ್ಟೆ. ಎಷ್ಟು ಬೇಕಾದ್ರು ತಗೋ ಮಗ ನಾನ್ ಸಂಪಾದನೆ ಮಾಡಿದನ್ನೆಲ್ಲ ನಿನ್ ಕಾಲ ಹತ್ತಿರ ಹಾಕ್ತಿನಿ ತಗೋ  ಏನ್ ಮಾಡಬೇಕು ಅಂತ ಇದ್ದಿಯಾ ಮಾಡು ಅಂತ ಹೇಳಿದ್ರು.  ಅಜ್ಜಿ ಬಂದು ನನ್ನ ಅಪ್ಪಿಕೊಂಡು ಅಳೋಕೆ ಶುರು ಮಾಡಿದ್ರು. ಚಿಕ್ಕಪ್ಪಂದಿರು ಇಬ್ಬರು ಬಂದು ಮಹಿ ನಾವು ಅವರ ಮಕ್ಕಳೇ ಆದ್ರೂ ಅಪ್ಪ ಅ ಫ್ಯಾಕ್ಟರಿ ನಾ ಮುಚ್ತಿನಿ ಅಂತ ಹೇಳಿದಾಗ ನಾವು ಸುಮ್ನೆ ಹಾಗಿ ಬಿಟ್ವಿ ಕಾರಣ ನಮಗೆ ಅದರ ಬಗ್ಗೆ ಏನು ಅಂದ್ರೆ ಏನು ಗೊತ್ತಿಲ್ಲ, ಅವರ ಸಂತೋಷ ಕ್ಕೆ ನಾವು ನಡೆಸ್ತೀವಿ ಅಂತ ಹೇಳೋದು ಆಮೇಲೆ ಹೆಸರಿಗೆ ಇರೋ ಗೌರವ ನಾ ಕೇಡಸೋದು ಇಷ್ಟ ಇರಲಿಲ್ಲ. ಈಗ ನೀನು ನಾನ್ ಇದ್ದೀನಿ ಅಂತ ಹೇಳ್ತಾ ಇದ್ದಿಯಾ. ತಗೋ ಎಷ್ಟು ಬೇಕಾದ್ರು ತಗೋ ನಾವು ನಿನ್ನ ಜೊತೆ ಇರ್ತೀವಿ ಅಂತ ಹೇಳಿದ್ರು.  ನೀಲಾ ಗೆ ಏನ್ ಮಾತಾಡಬೇಕೋ ಒಂದು ಅರ್ಥ ಆಗದೆ ಹಾಗೇ ನೋಡ್ತಾ ಇದ್ದು ಬಿಟ್ಟಳು. ಅಜ್ಜಿ ಕಣ್ಣೀರು ಹೊರೆಸಿಕೊಂಡು ಹಣೆಗೆ ಮುತ್ತಿಟ್ಟು ಅವರ ಹತ್ತಿರ ಇದ್ದಾ ಕೀ ನಾ ನನ್ನ ಕೈಗೆ ಇಟ್ಟು ತಗೋ ಹೋಗು ಮಗ ನಿನಗೆ ಏನ್ ಬೇಕೋ ತಗೋ ಹೋಗು ಅಂತ ಹೇಳಿದ್ರು. ನಾನು ಅಜ್ಜಿ ಕೈಗೆ ವಾಪಸ್ಸು ಕಿ ನಾ ಕೊಟ್ಟು ಅಜ್ಜಿ ನನಗೆ ಏನು ಬೇಡ ನನಗೆ ಅ ಫ್ಯಾಕ್ಟರಿ ಕೀ ನಾ ಕೊಡು ಸಾಕು ಅಷ್ಟೇ ಅಂತ ಹೇಳ್ದೆ. 

  ಅಜ್ಜಿ ಅವರ ರೂಮ್ ಗೆ ಹೋಗಿ  5 ನಿಮಿಷದ ನಂತರ ವಾಪಸ್ಸು ಹಾಲ್ ಗೆ ಬಂದು ನನ್ನ ಪಕ್ಕದಲ್ಲಿ ಕೂತು ನನ್ನ ಕೈ ಇಡ್ಕೊಂಡು ಅವರ ಕೈಲಿ ಇದ್ದಾ ಡಾಕ್ಯುಮೆಂಟ್ಸ್ ನಾ ಫ್ಯಾಕ್ಟರಿ ಕೀ ನಾ ನನ್ನ ಕೈಗೆ ಇಟ್ಟು, ನಿನಗೆ ನಮ್ಮಿಂದ ಏನು ತಗೋಳೋದಕ್ಕೆ ಇಷ್ಟ ಇಲ್ಲಾ ಅಂತ ಗೊತ್ತು ಬರಿ ಫ್ಯಾಕ್ಟರಿ ಕೀ ಕೇಳ್ತಾ ಇದ್ದಿಯಾ, ಫ್ಯಾಕ್ಟರಿ ಕೀ ಜೊತೆಗೆ ಫ್ಯಾಕ್ಟರಿ ನಾ ಕೂಡ ನಿನಗೆ ಕೊಡ್ತಾ ಇದ್ದೀನಿ ಈ ಅಜ್ಜಿ ಮೇಲೆ ಪ್ರೀತಿ ಏನಾದ್ರು ಇದ್ರೆ ಇದನ್ನ ಬೇಡ ಅಂತ ಹೇಳದೆ ತಗೋ ಅಂತ ಹೇಳಿದ್ರು. ಅಜ್ಜಿ ಮಾತಿಗೆ ಬೇಡ ಅಂತ ಹೇಳೋಕೆ ಮನಸ್ಸು ಬರಲಿಲ್ಲಾ ತೆಗೆದುಕೊಂಡು ಸರಿ ತಗೋತೀನಿ ಅಂತ ಹೇಳಿ ತೆಗೆದುಕೊಂಡೆ. ಅಜ್ಜಿ ತಬ್ಬಿಕೊಂಡು ಕೆನ್ನೆಗೆ ಕಿಸ್ ಮಾಡಿ ಬಂಗಾರ ಕಣೋ ನೀನು ಅಂತ ಅವರ ಸಂತೋಷ ನಾ ವ್ಯಕ್ತಪಡಿಸಿದ್ರು.

****************************************

P. S.