ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಮೌನ ಆವರಿಸಿತ್ತು. ತನ್ನ ಕೋಣೆಯಲ್ಲಿ ಶ್ರಾವ್ಯ ಗಾಢ ನಿದ್ರೆಯಲ್ಲಿದ್ದಳು. ಕಿಟಕಿಯ ಪರದೆಯ ಸಂದುಗಳಿಂದ ಬೀದಿ ದೀಪದ ಮಸುಕಾದ ಬೆಳಕು ಕೋಣೆಯೊಳಗೆ ನುಸುಳಿ, ನೆಲದ ಮೇಲೆ ವಿಚಿತ್ರವಾದ ನೆರಳುಗಳನ್ನು ಸೃಷ್ಟಿಸುತ್ತಿತ್ತು. ಪಕ್ಕದ ಮೆಜಿನ ಮೇಲಿದ್ದ ಡಿಜಿಟಲ್ ಗಡಿಯಾರದಲ್ಲಿ ಕೆಂಪು ಅಕ್ಷರಗಳು ತೋರುತ್ತಿದ್ದವು: 3:23. ಇದ್ದಕಿದ್ದಂತೆ ಶ್ರಾವ್ಯಳಿಗೆ ಎಚ್ಚರವಾಯಿತು. ಆದರೆ, ಇದೊಂದು ಸಹಜವಾದ ಎಚ್ಚರವಾಗಿರಲಿಲ್ಲ.
ಧ್ವನಿ: ಒಳರಿವಿನ ಹೊಳಹುಗಳು - ಮೊದಲ ಧ್ವನಿ
ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಆವರಿಸಿತ್ತು.ತನ್ನ ಕೋಣೆಯಲ್ಲಿ ಶ್ರಾವ್ಯ ಗಾಢ ನಿದ್ರೆಯಲ್ಲಿದ್ದಳು. ಕಿಟಕಿಯ ಪರದೆಯ ಸಂದುಗಳಿಂದ ಬೀದಿ ದೀಪದ ಮಸುಕಾದ ಬೆಳಕು ಕೋಣೆಯೊಳಗೆ ನುಸುಳಿ, ನೆಲದ ಮೇಲೆ ವಿಚಿತ್ರವಾದ ನೆರಳುಗಳನ್ನು ಸೃಷ್ಟಿಸುತ್ತಿತ್ತು. ಪಕ್ಕದ ಮೆಜಿನ ಮೇಲಿದ್ದ ಡಿಜಿಟಲ್ ಗಡಿಯಾರದಲ್ಲಿ ಕೆಂಪು ಅಕ್ಷರಗಳು ತೋರುತ್ತಿದ್ದವು: 3:23.ಇದ್ದಕಿದ್ದಂತೆ ಶ್ರಾವ್ಯಳಿಗೆ ಎಚ್ಚರವಾಯಿತು. ಆದರೆ, ಇದೊಂದು ಸಹಜವಾದ ಎಚ್ಚರವಾಗಿರಲಿಲ್ಲ.ಅವಳ ಕಣ್ಣುರೆಪ್ಪೆಗಳು ಇನ್ನೂ ಮುಚ್ಚಿದ್ದವು. ಆದರೆ ಮನಸ್ಸು ಮಾತ್ರ ಥಟ್ಟನೆ ಸಂಪೂರ್ಣ ಎಚ್ಚರಗೊಂಡಿತ್ತು. ಎಷ್ಟರಮಟ್ಟಿಗೆಂದರೆ, ಕೋಣೆಯ ಫ್ಯಾನು ತಿರುಗುವ ಸದ್ದು, ಗೋಡೆ ಗಡಿಯಾರದ 'ಟಿಕ್-ಟಿಕ್' ಶಬ್ದ ಎಲ್ಲವೂ ಸ್ಪಷ್ಟವಾಗಿ ಕೇಳಿಸುತ್ತಿತ್ತು. "ಎದ್ದೇಳು ಶ್ರಾವ್ಯ" ಎಂದು ತನಗೆ ತಾನೇ ಆಜ್ಞೆ ಮಾಡಿಕೊಂಡಳು.ಆದರೆ... ಒಡಲು ಕಲ್ಲಾದಂತಿತ್ತು!ಕೈಬೆರಳುಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದಳು, ಆಗಲಿಲ್ಲ. ಕಾಲುಗಳನ್ನು ಎತ್ತಲು ನೋಡಿದಳು, ಶಕ್ತಿಯೇ ಇಲ್ಲದಂತಾಗಿತ್ತು. ಯಾರೋ ತನ್ನ ಇಡೀ ದೇಹವನ್ನು ಹಗ್ಗದಲ್ಲಿ ಬಿಗಿದು ಕಟ್ಟಿ ಹಾಕಿದಂತೆ, ...Read More
ಧ್ವನಿ: ಒಳರಿವಿನ ಹೊಳಹುಗಳು - ಭಾಗ 2( part 2)
ಪರೀಕ್ಷಾ ಕೊಠಡಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನವಿತ್ತು. ಆದರೆ ಶ್ರಾವ್ಯಳ ತಲೆಯಲ್ಲಿ ಮಾತ್ರ ಬಿರುಗಾಳಿ ಬೀಸುತ್ತಿತ್ತು.ಅವಳ ಮುಂದಿದ್ದ ಪ್ರಶ್ನೆ ಪತ್ರಿಕೆಯ ಮೇಲಿನ ಅಕ್ಷರಗಳು ಅವಳನ್ನು ಅಣಕಿಸುವಂತೆ 3: ಮಾರ್ಚಿಯಾಫಾವಾ-ಬಿಗ್ನಾಮಿ ಕಾಯಿಲೆಯ ರೋಗ ಲಕ್ಷಣಗಳೇನು?ಶ್ರಾವ್ಯಳ ಕೈ ನಡುಗುತ್ತಿತ್ತು. "ಇದು ಅಸಾಧ್ಯ... ಇದು ಸಂಭವಿಸಲೇಬಾರದು," ಎಂದು ಅವಳ ವೈಜ್ಞಾನಿಕ ಮಿದುಳು ಕಿರುಚುತ್ತಿತ್ತು. "ಜಗತ್ತಿನಲ್ಲಿ ಕಾಕತಾಳೀಯ ಘಟನೆಗಳು ನಡೆಯುತ್ತವೆ, ನಿಜ. ಆದರೆ ಇಂತಹ ಕಾಕತಾಳೀಯ ಘಟನೆ? ಇದು ಗಣಿತಶಾಸ್ತ್ರದ ಪ್ರಕಾರವೂ ಅಸಂಭವ!"ಅವಳು ಅಕ್ಕಪಕ್ಕ ನೋಡಿದಳು. ಅವಳ ಸಹಪಾಠಿಗಳು ತಲೆ ಕೆರೆದುಕೊಳ್ಳುತ್ತಿದ್ದರು. ಕೆಲವರು ಪೆನ್ನಿನ ತುದಿಯನ್ನು ಕಚ್ಚುತ್ತಾ, ಆಕಾಶ ನೋಡುತ್ತಾ ಉತ್ತರಕ್ಕಾಗಿ ಪರದಾಡುತ್ತಿದ್ದರು. ನ್ಯೂರಾಲಜಿಯ ಅತ್ಯಂತ ಕಠಿಣವಾದ ಪ್ರಶ್ನೆ ಪತ್ರಿಕೆ ಇದಾಗಿತ್ತು.ಆದರೆ ಶ್ರಾವ್ಯ?ಅವಳು ದೀರ್ಘವಾಗಿ ಉಸಿರು ತೆಗೆದುಕೊಂಡಳು. ನಿಧಾನವಾಗಿ ಪೆನ್ನು ಎತ್ತಿಕೊಂಡಳು.ಪೆನ್ನು ಕಾಗದವನ್ನು ಸ್ಪರ್ಶಿಸುತ್ತಿದ್ದಂತೆ, ಒಂದು ವಿಚಿತ್ರ ವಿದ್ಯಮಾನ ನಡೆಯಿತು. ಅವಳ ಕೈ ತಾನಾಗಿಯೇ ಚಲಿಸಲು ಶುರುಮಾಡಿತು. ಉತ್ತರಗಳು... ಅವಳು ಬೆಳಗಿನ ಜಾವ 4 ಗಂಟೆಗೆ ಓದಿದ ಆ ಸಾಲುಗಳು... ಅವಳ ಮನಸ್ಸಿನಲ್ಲಿ ಸರಾಗವಾಗಿ ಹರಿದು ...Read More
ಧ್ವನಿ: ಒಳರಿವಿನ ಹೊಳಹುಗಳು - ಭಾಗ 3( part 3)
ಬೆಳಗಿನ ಜಾವದ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಗದ್ದಲ ಶುರುವಾಗಿತ್ತು. ಶ್ರಾವ್ಯ. ಅವಳು ತನ್ನ ಸೀನಿಯರ್ ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ಡಾಕ್ಟರ್ ಆದ ಡಾ. ಶರ್ಮಾ ಅವರ ಜೊತೆ ರೌಂಡ್ಸ್' ನಲ್ಲಿದ್ದಳು.ಅವರು ಬೆಡ್ ನಂ. 12 ರ ಬಳಿ ಬಂದು ನಿಂತರು. ಅಲ್ಲಿ ಮಿಸ್ಟರ್ ದೇಸಾಯಿ ಎಂಬ ಮಧ್ಯವಯಸ್ಸಿನ ವ್ಯಕ್ತಿ ಮಲಗಿದ್ದರು. ಅವರನ್ನು ನ್ಯುಮೋನಿಯಾ (Pneumonia) ಕಾರಣದಿಂದ ದಾಖಲಿಸಲಾಗಿತ್ತು.ಡಾ. ಶರ್ಮಾ ರೋಗಿಯ ಚಾರ್ಟ್ ಮತ್ತು ಇತ್ತೀಚಿನ ವರದಿಗಳನ್ನು ಪರಿಶೀಲಿಸಿದರು."ಗುಡ್..." ಡಾ. ಶರ್ಮಾ ತೃಪ್ತಿಯಿಂದ ತಲೆಯಾಡಿಸಿದರು. "ಮಿಸ್ಟರ್ ದೇಸಾಯಿ, ನಿಮ್ಮ ವೈಟಲ್ಸ್ (Vitals) ಎಲ್ಲವೂ ಸ್ಟೇಬಲ್ ಇವೆ. ಎದೆಯ ಎಕ್ಸ್-ರೇ ಕೂಡ ಮೊದಲಿಗಿಂತ ಸುಧಾರಿಸಿದೆ. ರಕ್ತದಲ್ಲಿನ ಬಿಳಿ ರಕ್ತಕಣಗಳ ಸಂಖ್ಯೆ (WBC count) ಕಡಿಮೆಯಾಗಿದೆ. ಸೋಂಕು ಹತೋಟಿಗೆ ಬಂದಿದೆ."ನಂತರ ಅವರು ರೆಸಿಡೆಂಟ್‌ಗಳ ಕಡೆ ತಿರುಗಿ ಸೂಚನೆ ನೀಡಿದರು: "ಇದೇ ಆಂಟಿಬಯೋಟಿಕ್ ಅನ್ನು ಮುಂದುವರಿಸಿ. ಹೀಗೆ ಚೇತರಿಸಿಕೊಂಡರೆ, ಇನ್ನು 2-3 ದಿನಗಳಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಬಹುದು."ತಂಡ ಮುಂದಿನ ಬೆಡ್‌ಗೆ ಹೋಗಲು ಸಿದ್ಧವಾಯಿತು. ಮಿಸ್ಟರ್ ದೇಸಾಯಿ ಕೂಡ ...Read More