ರಾಮು ಒಂದು ಸಣ್ಣ ಹಳ್ಳಿಯ ಹುಡುಗ.
ಅವನು ದೊಡ್ಡ ಉದ್ಯಮಿಯಾಗಬೇಕೆಂಬ ಕನಸನ್ನು ಕಂಡಿದ್ದ. ಆದರೆ ಜೀವನ ಸುಲಭವಾಗಿರಲಿಲ್ಲ. ಅವನು ಮಾಡಿದ ಮೊದಲ ವ್ಯವಹಾರವೇ ನಷ್ಟದಲ್ಲಿ ಮುಗಿಯಿತು. ಗ್ರಾಮದ ಜನರು ನಕ್ಕರು, ನಿನಗೆ ಆಗೋದಿಲ್ಲ ಎಂದರು.
ಆ ರಾತ್ರಿ, ಅವನ ತಾಯಿ ಮುದ್ದಾಗಿ ಹೇಳಿದಳು:
ಮಗನೇ, ಬಿದ್ದರೆ ಎದ್ದೇಳು. ಬಿದ್ದಿಲ್ಲ ಅಂದ್ರೆ ನಡೆಯುವುದೇ ಕಲಿಯೋದಿಲ್ಲ.ಅದೇ ಮಾತು ರಾಮುಗೆ ದಾರಿ ತೋರಿಸಿತು.
ಅವನು ಮತ್ತೊಮ್ಮೆ ಪ್ರಯತ್ನಿಸಿದ. ಸಣ್ಣ ಸಣ್ಣ ಹೆಜ್ಜೆಗಳ ಸಹಾಯದಿಂದ ನಡೆದು ತಾನು ಕಂಡ ಕನಸಿನಂತೆ ದೊಡ್ಡ ಉದ್ಯಮಿಯಾದ.
ಈ ಕಥೆಯ ಸಂದೇಶ:
ಬಿದ್ದರೂ ಎದ್ದೇಳುವವನೇ ಗೆಲ್ಲುತ್ತಾನೆ.