ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ ನಮಗೆ ಬಹಳ ವಿಶೇಷವಾದ ದಿನ. ಮಕ್ಕಳ ದಿನವನ್ನು ಬಾಲ್ ದಿವಾಸ್ ಎಂದು ಕರೆಯುತ್ತಾರೆ. ಈ ದಿನವನ್ನು ನಾವು ನಮ್ಮ ಮೊದಲ ಪ್ರಧಾನಿಯಾದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನ ಎಂದು ಆಚರಿಸುತ್ತೇವೆ.

ಶಾಲೆಗಳು ಮತ್ತು ಕಾಲೇಜುಗಳಲ್ಲಿ,ಮಕ್ಕಳ ದಿನಾಚರಣೆಯನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ ಮತ್ತು ಅವರು ಮನೋರಂಜನೆ ಕಾರ್ಯಕ್ರಮವನ್ನು ಮಾಡುತ್ತಾರೆ ಮತ್ತು ಮಕ್ಕಳಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಕೊಡುತ್ತಾರೆ.

"ಇಂದಿನ ಮಕ್ಕಳು ನಾಳಿನ ಭಾರತವನ್ನು ಮಾಡುತ್ತಾರೆ. ಅವರನ್ನು ನಾವು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ" ಎಂದು ನೆಹರೂ ಬಲವಾಗಿ ನಂಬಿದ್ದರು.

ನೆಹರು ತಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಖಾತರಿಪಡಿಸುವ ಬದ್ಧತೆಯನ್ನು ನೀಡಿದ್ದರು. ಇದರಿಂದ ಎಲ್ಲ ವಲಯದ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಯಿತು.ಈ ದಿನದಂದು ಪ್ರತಿ ಮಗುವೂ ತಮ್ಮ ಹಕ್ಕಿನ ಸ್ವಾತಂತ್ರ್ಯವನ್ನು ತಿಳಿದುಕೊಳ್ಳಬೇಕು.ಈ ಸಮಸ್ಯೆಗಳನ್ನು ಹೋಗಲಾಡಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಶಿಕ್ಷಣವು ಪ್ರತಿ ಮಗುವಿಗೆ ಪ್ರಾಥಮಿಕ ಹಕ್ಕು, ಮತ್ತು ಪ್ರತಿ ಮಗುವಿಗೆ ಶಿಕ್ಷಣವನ್ನು ನೀಡಬೇಕು. ಮಕ್ಕಳೇ ದೇಶದ ನಿಜವಾದ ಭವಿಷ್ಯ ಎಂಬ ಅರಿವು ಮೂಡಿಸಲು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

Article By

Akshata Ningannavar

Brains Media Solutions.

Kannada  by Brains Media Solutions Pvt. Ltd. : 111844210

The best sellers write on Matrubharti, do you?

Start Writing Now