Neutral Point - 4 in Kannada Drama by Danger Writer books and stories PDF | ತಟಸ್ಥ ಬಿಂದು - 4

Featured Books
Categories
Share

ತಟಸ್ಥ ಬಿಂದು - 4

ಬೆಳಿಗ್ಗೆ ಬ್ಯಾಂಕ್ ತೆರೆಯುವಾಗ ಕಂಡ ದೃಶ್ಯ ಅತ್ಯಂತ ಆಘಾತಕಾರಿಯಾಗಿತ್ತು. ಮುಖ್ಯ ಖಜಾನೆ ಕೋಣೆಯ ಬೀಗಗಳು ಇನ್ನೂ ಭದ್ರವಾಗಿಯೇ ಇದ್ದವು, ಆದರೆ ಹಿಂದೆ ಗಣೇಶಪ್ಪ ತ್ಯಾಜ್ಯ ತೆಗೆಯುವ ಬಾಗಿಲು" ಎಂದು ನಿರ್ಲಕ್ಷಿಸಿದ್ದ ಸಣ್ಣ ಬಾಗಿಲು ಮುರಿದು ಹೋಗಿತ್ತು. ಕಳ್ಳರು ಮುಖ್ಯ ಬೀಗಗಳನ್ನು ಮುರಿಯುವ ಕಷ್ಟವನ್ನು ತೆಗೆದುಕೊಳ್ಳದೆ, ದುರ್ಬಲ ಬಿಂದುವಿನ ಮೂಲಕ ಪ್ರವೇಶಿಸಿದ್ದರು. ಖಜಾನೆಯಿಂದ ನಗದು ಕಳುವಾಗಿರಲಿಲ್ಲ, ಆದರೆ ಹಲವಾರು ಪ್ರಮುಖ ದಾಖಲೆಗಳು ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿ ಮಾಯವಾಗಿತ್ತು. ಕಳ್ಳರು ಸಂಪತ್ತಿಗಿಂತ ಗೌಪ್ಯತೆಯನ್ನು ಗುರಿಯಾಗಿಸಿಕೊಂಡಿದ್ದರು.
ಗಣೇಶಪ್ಪ ಮತ್ತು ರಾಜಪ್ಪ (ಇನ್ನೂ ಅಮಾನತಿನಲ್ಲಿದ್ದರೂ) ಸ್ಥಳಕ್ಕೆ ಧಾವಿಸಿದರು. ಇಬ್ಬರೂ ಬಲಿಷ್ಠ ಬೀಗಗಳನ್ನು ದಿಟ್ಟಿಸಿ ನೋಡಿದರು. ಬೀಗಗಳ ಮೇಲಿನ ಅವರ ಸಂಪೂರ್ಣ ಅವಲಂಬನೆ ಹೀಗೆ ಹಾಸ್ಯಾಸ್ಪದವಾಗಿ ವಿಫಲವಾಗಿತ್ತು.
ಕಾವಲುಗಾರ ಕೃಷ್ಣಪ್ಪ ಸಂಪೂರ್ಣ ಕುಸಿದುಹೋಗಿದ್ದ. ಅವನ ನಿಷ್ಠೆ ಮತ್ತು ಜವಾಬ್ದಾರಿ ಇಡೀ ರಾತ್ರಿ ಮುಖ್ಯ ದ್ವಾರದಲ್ಲಿದ್ದವು.
ಗಣೇಶಪ್ಪ ಕೋಪದಿಂದ ಕೃಷ್ಣಪ್ಪನ ಮೇಲೆ ಕೆರಳಿ, ಕೃಷ್ಣಪ್ಪ, ನೀನು ರಾತ್ರಿ ಕಾವಲಿದ್ದದ್ದು ನಿಜವೋ ಸುಳ್ಳೋ? ಆ ಸಣ್ಣ ಬಾಗಿಲು ಮುರಿದಿದ್ದು ಹೇಗೆ ನಿನ್ನ ಕಣ್ಣಿಗೆ ಬೀಳಲಿಲ್ಲ?

ಕೃಷ್ಣಪ್ಪ ಕಣ್ಣೀರು ಹಾಕಿದ: ನಾನು ರಾತ್ರಿಪೂರ್ತಿ ಈ ಮುಖ್ಯ ಬೀಗಗಳ ಮೇಲೆ ಮಾತ್ರ ನನ್ನ ಗಮನ ಇಟ್ಟಿದ್ದೆ ಸರ್. ನೀವು ಹೇಳಿದ್ದು, ಈ ಕಬ್ಬಿಣವೇ ಭದ್ರತೆ' ಎಂದು. ಯಾರು ತಾನೇ ಆ ಚಿಕ್ಕ ಬಾಗಿಲಿಗೆ ಬೀಗ ಹಾಕದೆ ಇರುತ್ತಾರೆ ಎಂದು ನಾನು ಊಹಿಸಲೇ ಇಲ್ಲ. ನನ್ನ ಕಣ್ಣು ಬೀಗವನ್ನು ಮಾತ್ರ ನೋಡುತ್ತಿತ್ತು, ಸಂಪೂರ್ಣ ಚಿತ್ರಣವನ್ನಲ್ಲ.
ಗಣೇಶಪ್ಪ: ಅಂದರೆ, ನೀನು ನಿರ್ಲಕ್ಷ್ಯ ಮಾಡಿದ್ದೀಯಾ! ನಿನ್ನ ಕೆಲಸಕ್ಕೆ ನೀನು ಲಾಯಕ್ ಅಲ್ಲ.
ವಿಶ್ವಾಸ್ ಬೆಂಗಳೂರಿನಿಂದ ಬಂದವರೇ ಮಧ್ಯಪ್ರವೇಶಿಸಿದರು. "ಯಕೃಷ್ಣಪ್ಪನನ್ನು ದೂಷಿಸಬೇಡಿ ಗಣೇಶಪ್ಪ. ನೀವು ಕೃಷ್ಣಪ್ಪನಿಗೆ ಕಬ್ಬಿಣದ ಬೀಗವನ್ನು ನಂಬಲು ಕಲಿಸಿದ್ದೀರಿ. ಆದರೆ ನಿಮ್ಮ ಸ್ವಂತ ಕಣ್ಣು, ಯಾವುದೇ ಬೀಗವಿಲ್ಲದ ಜಾಗವನ್ನು ನಿರ್ಲಕ್ಷಿಸಿದೆ. ಬೀಗದ ಯುಗದಲ್ಲಿ, ಭದ್ರತೆಯೆಂದರೆ ಕೇವಲ ಮುಚ್ಚಿ ಹಾಕುವುದು. ಆದರೆ ಕಳ್ಳತನ ಎಂದರೆ ತೆರೆದಿರುವ ರಹಸ್ಯವನ್ನು ಬಳಸುವುದು.
ವಿಶ್ವಾಸ್, ಗಣೇಶಪ್ಪನಿಗೆ ಹಳೆಯ 'ಧರ್ಮಸಂಕೇತ' ಕೇಂದ್ರದ ಕಥೆಯನ್ನು ನೆನಪಿಸಿದರು. ನಂಬಿಕೆಯ ಯುಗದಲ್ಲಿ, ಎಲ್ಲವೂ ತೆರೆದಿತ್ತು, ಆದರೂ ಕಳ್ಳತನ ಅಪರೂಪ. ಏಕೆಂದರೆ ನಂಬಿಕೆಯು ಊರ ಜನರ ಮನಸ್ಸಿನಲ್ಲಿ ಬೀಗವಾಗಿತ್ತು. ಬೀಗ ಬಂದ ಮೇಲೆ, ನಾವು ಕೇವಲ ಆ ಬೀಗವನ್ನೇ ನಂಬಿದೆವು, ಮನುಷ್ಯರ ನಂಬಿಕೆಯ ಬಗ್ಗೆ ಯೋಚಿಸಲಿಲ್ಲ. ನೀವು ನಂಬಿಕೆಯ ಕೊರತೆಯಿಂದ ಚಿಲಕ ಹಾಕಿದ್ದೀರಿ, ಆದರೆ ನಿಮ್ಮದೇ ನಿರ್ಲಕ್ಷ್ಯದಿಂದ ಬೀಗವೇ ಒಂದು ಸುಳ್ಳು ಆಯಿತು.
ಗಣೇಶಪ್ಪನಿಗೆ ತಾನೇ ಮಾಡಿದ ತಪ್ಪು ಅರಿವಾಯಿತು. ಚಿಲಕ ವೈಫಲ್ಯವಾದಾಗ ಜಮೀನು ಪತ್ರವನ್ನು ಕದ್ದಿದ್ದು ತಾನೆಂದು ಒಪ್ಪಿಕೊಂಡಿದ್ದರು. ಈಗ, ಅಪನಂಬಿಕೆಯ ಯುಗದಲ್ಲಿ, ಅವರದೇ ಅಹಂಕಾರದಿಂದಾಗಿ ಸಣ್ಣ ಬಾಗಿಲಿಗೆ ಬೀಗ ಹಾಕದೇ ನಿರ್ಲಕ್ಷಿಸಿದ್ದರಿಂದ ಇಡೀ ಬ್ಯಾಂಕಿಗೆ ನಷ್ಟವಾಗಿತ್ತು.
ಕಳ್ಳತನದ ನಂತರ, ಕೃಷ್ಣಪ್ಪನ ಮಾನವೀಯ ನಿಷ್ಠೆಗಿಂತ ಯಾಂತ್ರಿಕ ಭದ್ರತೆಯ ವೈಫಲ್ಯವೇ ದೊಡ್ಡದಾಯಿತು. ಕೃಷ್ಣಪ್ಪನನ್ನು ಕೆಲಸದಿಂದ ವಜಾ ಮಾಡಲಾಯಿತು.

ಕೃಷ್ಣಪ್ಪ ಕೊನೆಯ ಬಾರಿಗೆ ಬಾಗಿಲುಗಳಿಗೆ ಹಾಕಲಾಗಿದ್ದ ಬೃಹತ್ ಬೀಗಗಳನ್ನು ಮುಟ್ಟಿ, ದುಃಖದಿಂದ ವಿಶ್ವಾಸ್‌ಗೆ ಹೇಳಿದ, ಈ ಬೀಗಗಳು ತುಂಬಾ ಶಕ್ತಿಯುತ. ಇವುಗಳನ್ನು ಕದಿಯುವ ಧೈರ್ಯ ಯಾವ ಕಳ್ಳನಿಗೂ ಇಲ್ಲ. ಆದರೆ ಇವು ಕದಿಯಲು ಬಯಸಿದವರಿಗೆ ಕೇವಲ ಅಡಚಣೆ ಮಾತ್ರ. ನಿಜವಾದ ಅಪಾಯ ಬೀಗಗಳ ಹಿಂದೆ ನಿಂತಿರುವವರ ನಿರ್ಲಕ್ಷ್ಯದಲ್ಲಿತ್ತು. ನನ್ನ ಕಾವಲು ಬೀಗದ ಮೇಲಿನ ನಂಬಿಕೆಯನ್ನು ಮಾತ್ರ ಅವಲಂಬಿಸಿತ್ತು.
ಕೃಷ್ಣಪ್ಪ ಹಳ್ಳಿಯನ್ನು ತೊರೆಯಲು ನಿರ್ಧರಿಸಿದ. ಬೀಗದ ಯುಗವು ನಿಷ್ಠಾವಂತ ಕಾವಲುಗಾರನನ್ನುಅಪರಾಧಿಯನ್ನಾಗಿ ಮಾಡಿತ್ತು.
ಕೃಷ್ಣಪ್ಪ ಹೋದ ಮೇಲೆ, ಬ್ಯಾಂಕಿನ ಹೊಸ ಭದ್ರತಾ ಕ್ರಮಗಳನ್ನು ಚರ್ಚಿಸಲು ಅಧಿಕಾರಿಗಳು ಸಭೆ ಸೇರಿದರು. ಗಣೇಶಪ್ಪನ ಬೀಗದ ಮೇಲಿನ ವಿಶ್ವಾಸ ಸಂಪೂರ್ಣ ನಾಶವಾಗಿತ್ತು.
ಗಣೇಶಪ್ಪ ತಲೆ ಬಗ್ಗಿಸಿ ಕುಳಿತು, ಇನ್ನು ಬೀಗಗಳು ಸಾಲದು. ಬೀಗಗಳು ಕೇವಲ ಹೊರಗೆ ಮುಚ್ಚಿಡುತ್ತವೆ, ಆದರೆ ಒಳಗೆ ಏನಾಗುತ್ತಿದೆ ಎಂದು ತೋರಿಸುವುದಿಲ್ಲ. ನಮಗೆ ಬೇಕು ಕಣ್ಣು. ಅವನು ಮೊದಲ ಬಾರಿಗೆ, ಬೀಗಗಳ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ‌ ಎಲ್ಲವನ್ನೂ ದಾಖಲಿಸುವ ಒಂದು ಹೊಸ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದ. ಕಬ್ಬಿಣದ ಬೀಗಗಳ ಯುಗ ಮುಗಿದು, ಮೌನದ ದಾಖಲೆಗಳ ಯುಗ ಆರಂಭವಾಗುವ ಲಕ್ಷಣ ಗೋಚರಿಸಿತು.

ಕೃಷ್ಣಪ್ಪ ಕೆಲಸ ಕಳೆದುಕೊಂಡು ಹಳ್ಳಿ ಬಿಟ್ಟು ಹೋಗಿ ಹಲವು ವರ್ಷಗಳೇ ಕಳೆದಿದ್ದವು. 'ಭದ್ರ ಕೋಟೆ' ಬ್ಯಾಂಕಿನಲ್ಲಿ ನಡೆದ ದಾಖಲೆಗಳ ಕಳ್ಳತನವು ಬೀಗಗಳ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಅಲುಗಾಡಿಸಿತ್ತು. ಬೀಗಗಳು ವಿಫಲವಾದಾಗ, ಅವು ಕೇವಲ ಲೋಹದ ತುಂಡುಗಳಾದವು. ಆ ನಷ್ಟವನ್ನು ಭರಿಸಲು, ಗಣೇಶಪ್ಪ ಮತ್ತು ಬ್ಯಾಂಕ್ ಆಡಳಿತ ಮಂಡಳಿ ಹೊಸ, ಮತ್ತು ಅತ್ಯಂತ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಂಡಿತು.
ವಿಶ್ವಾಸ್ (ಈಗ ಪ್ರಸಿದ್ಧ ಪ್ರಾಧ್ಯಾಪಕರು), ತಮ್ಮ ತರಗತಿಗಳನ್ನು ಮುಗಿಸಿ ಹಳ್ಳಿಗೆ ಮರಳಿದ್ದರು. ಗಣೇಶಪ್ಪ ಆತನನ್ನು ಬ್ಯಾಂಕಿನೊಳಗೆ ಕರೆದುಕೊಂಡು ಹೋದರು.
ಗಣೇಶಪ್ಪ: ವಿಶ್ವಾಸ್, ನಮ್ಮ ತಪ್ಪುಗಳೇನು ಅಂತ ಅರ್ಥವಾಯ್ತು. ಬೀಗಗಳು ಕೇವಲ ಮುಚ್ಚುತ್ತವೆ, ಆದರೆ ನೋಡುವುದಿಲ್ಲ. ಅದಕ್ಕೆ ನಾವು ಇನ್ನು ಮುಂದೆ ಪ್ರತಿಯೊಂದು ಮೂಲೆಯನ್ನೂ ನೋಡಲು ವ್ಯವಸ್ಥೆ ಮಾಡಿದ್ದೇವೆ. ಬ್ಯಾಂಕಿನ ಗೋಡೆಗಳ ಮೇಲೆ, ಛಾವಣಿಯ ಮೂಲೆಗಳಲ್ಲಿ, ಎದುರಿನ ಗೇಟ್‌ನ ಮೇಲೆ ಸಣ್ಣ, ಕಪ್ಪು ವೃತ್ತಾಕಾರದ ಉಪಕರಣಗಳು ಕಾಣುತ್ತಿದ್ದವು. ಅವುಗಳ ಹೆಸರು CCTV (Closed-Circuit Television) ಕ್ಯಾಮೆರಾಗಳು.
ವಿಶ್ವಾಸ್: ಇವು ಏನು ಮಾಡುತ್ತವೆ?
ಗಣೇಶಪ್ಪ: ಇವು ನೋಡುತ್ತವೆ,  24 ಗಂಟೆಗಳ ಕಾಲ ರೆಕಾರ್ಡ್ ಮಾಡುತ್ತವೆ. ಕಳ್ಳ ಬಾಗಿಲು ಮುರಿದರೂ, ಬೀಗ ಹಾಕದಿದ್ದರೂ, ಅವನ ಮುಖವನ್ನು ಇದು ದಾಖಲಿಸುತ್ತದೆ. ಇನ್ನು ಮುಂದೆ ನಮಗೆ ಯಾರ ಮೇಲೂ ನಂಬಿಕೆ ಇಡಬೇಕಾದ ಅವಶ್ಯಕತೆ ಇಲ್ಲ. ಈ ಕ್ಯಾಮೆರಾಗಳು ನಮಗೆ ಸಾಕ್ಷಿ ಕೊಡುತ್ತವೆ.
ವಿಶ್ವಾಸ್ ಆ ಕ್ಯಾಮೆರಾಗಳನ್ನು ದಿಟ್ಟಿಸಿ ನೋಡಿದರು. ಗಣೇಶಪ್ಪ, ನಂಬಿಕೆಯ ಯುಗದಲ್ಲಿ ನಾವು ಹೊರಗಿನ ಶತ್ರುಗಳಿಗೆ ಹೆದರುತ್ತಿದ್ದೆವು. ಬೀಗದ ಯುಗದಲ್ಲಿ ನಮ್ಮ ನಮ್ಮವರಿಗೆ ಹೆದರಿ ಬೀಗ ಹಾಕಿದೆವು. ಈಗ ಈ ಕ್ಯಾಮೆರಾಗಳು ಬಂದ ಮೇಲೆ, ನಾವು ನಿಜವಾಗಿಯೂ ಯಾರನ್ನೂ ನಂಬುತ್ತಿಲ್ಲ ಎಂದು ಒಪ್ಪಿಕೊಳ್ಳುತ್ತಿದ್ದೇವೆ."

ಕ್ಯಾಮೆರಾಗಳು ಬಂದ ನಂತರ, ಕಾವಲುಗಾರರ ಪಾತ್ರವೂ ಬದಲಾಯಿತು. ಕೃಷ್ಣಪ್ಪನ ಮೊಮ್ಮಗಳು ಪಾರ್ವತಿ  ಮುಂದೆ ದೊಡ್ಡ ಟೆಕ್ನಿಷಿಯನ್ ಆಗಿ ಬೆಳೆಯಬೇಕೆಂದು ಕೃಷ್ಣಪ್ಪ ಬಯಸಿದ್ದರು. ಆಕೆಗೆ ಈ ಕ್ಯಾಮೆರಾಗಳು ಒಂದು ಹೊಸ ಆಕರ್ಷಣೆಯಾಗಿತ್ತು. ಅವಳ ಅಜ್ಜ ಬೀಗಗಳನ್ನು ನಂಬಿ ಸೋತಿದ್ದ, ಆದರೆ ಈ 'ಕಣ್ಣುಗಳು' ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಅವಳು ಭಾವಿಸಿದ್ದಳು.

ಅದೇ ಸಂಜೆ, ವಿಶ್ವಾಸ್ ಮತ್ತು ಗಣೇಶಪ್ಪ ಹಳೆಯ 'ಧರ್ಮಸಂಕೇತ' ಕೇಂದ್ರದ ಸ್ಥಳಕ್ಕೆ ಹೋದರು. ವಿಶ್ವಾಸ್ ಹಳೆಯ ನೆನಪಿನಲ್ಲಿದ್ದಾಗ, ಗಣೇಶಪ್ಪ ಕೊನೆಗೂ ಮೊದಲ ಕಳುವಿನ ಸಂಪೂರ್ಣ ಸತ್ಯವನ್ನು ಒಪ್ಪಿಕೊಂಡರು.
ವಿಶ್ವಾಸ್, ಆ ಚಿನ್ನದ ಚೀಲ ಕಳ್ಳತನವಾದದ್ದು ನನಗೆ ಗೊತ್ತು ಎಂದು ಹಿಂದೆ ಸುಳ್ಳು ಹೇಳಿದ್ದೆ. ಆದರೆ ನನ್ನನ್ನು ಕ್ಷಮಿಸು, ನಾನು ಆ ಜಮೀನು ಪತ್ರವನ್ನು ನಾನೇ ಕದ್ದೆ, ಆದರೆ ಮೊದಲ ಚಿನ್ನದ ಚೀಲವನ್ನು ತೆಗೆದವನು ನಾನಲ್ಲ.
ಹಾಗಾದರೆ ಯಾರು? ವಿಶ್ವಾಸ್ ತಾಳ್ಮೆ ಕಳೆದುಕೊಂಡಿದ್ದರು.
ಗಣೇಶಪ್ಪ ನೋವಿನಿಂದ ನಕ್ಕರು. ಅದು ಆ ಸಾಧುವೇ! ಆ ಚಿನ್ನದ ನಾಣ್ಯಗಳ ಚೀಲ ಅವನದ್ದಾಗಿರಲಿಲ್ಲ, ಅದು ನನ್ನದು ನನ್ನ ಆಸ್ತಿಯನ್ನು ಕದಿಯಲು ಬಂದಿದ್ದ ಕಳ್ಳನನ್ನು ತಡೆಯಲು, ನಾನು ಸಾಧುವಿನ ವೇಷ ಹಾಕಿದ್ದೆ. ಆದರೆ ಅಂದು ಬಾಗಿಲು ಇಲ್ಲದಿದ್ದರೂ, ನಂಬಿಕೆ ಇದ್ದ ಕಾರಣ, ನಾನು ನನ್ನದೇ ಚೀಲವನ್ನು ಕದಿಯಲು ಹೆದರಿದೆ. ಸಾಧುವಿನ ವೇಷದಲ್ಲಿ ಗಣೇಶಪ್ಪ, ತನ್ನದೇ ಹಣವನ್ನು ಕದಿಯಲು ಹೋಗಿ, ನಂಬಿಕೆ ಉಳಿಸಿಕೊಳ್ಳಲು ಅಲ್ಲಿಯೇ ಬಿಟ್ಟು ಬಂದಿದ್ದರು. ರಾತ್ರಿ, ಸಾಧು ವೇಷ ಕಳಚುವಾಗ, ಹಣವನ್ನು ಕೇಂದ್ರದಲ್ಲಿ ಬಿಟ್ಟು ಹೊರಟುಹೋದ. ಅಲ್ಲಿ ಕಳುವಾಗಿದ್ದೇ ಇಲ್ಲ. ನಂಬಿಕೆಯ ಯುಗದಲ್ಲಿ, ಕಳುವಾದ ವಿಷಯ ಸುಳ್ಳು, ಆದರೆ ಕಳುವಾಗಿದೆ ಎಂಬ ಅಪವಾದ ಇಡೀ ಊರಿನ ಮನಸ್ಸಿನಲ್ಲಿ ಉಳಿದುಹೋಗಿತ್ತು.
ವಿಶ್ವಾಸ್ ಆಘಾತದಿಂದ ದೀರ್ಘವಾಗಿ ನಿಟ್ಟುಸಿರು ಬಿಟ್ಟರು. "ಅಂದರೆ, ನಂಬಿಕೆ ಸತ್ತಿದ್ದು ಕಳ್ಳತನದಿಂದಲ್ಲ, ಗಣೇಶಪ್ಪ. ಕಳ್ಳತನ ಆಗದಿರುವ ವಿಷಯಕ್ಕೆ ನಾವೇ ಅನುಮಾನಪಟ್ಟು ಸಾಯಿಸಿದೆವು.
ಗಣೇಶಪ್ಪ ತಲೆಯೆತ್ತಿ, ಆ ಕ್ಯಾಮೆರಾಗಳನ್ನು ನಿರ್ದೇಶಿಸಿ ಹೇಳಿದರು. ಈಗ ಈ ಕಣ್ಣುಗಳು ಸುಳ್ಳು ಹೇಳುವುದಿಲ್ಲ ವಿಶ್ವಾಸ್. ಇನ್ನು ಮುಂದೆ ಕಳುವಾಗುತ್ತೋ, ಇಲ್ಲವೋ, ಸತ್ಯವನ್ನು ದಾಖಲಿಸುತ್ತವೆ.

ವಿಶ್ವಾಸ್ ಹಳೇ ಕೇಂದ್ರದ ಗೋಡೆ ಮೇಲೆ ರಾಮಣ್ಣ ಗೀಚಿದ ಚಿಲಕದ ಗುರುತಿದ್ದ ಜಾಗದಲ್ಲಿ ಈಗ ಕಬ್ಬಿಣದ ಸಣ್ಣ ಬಾಗಿಲು  ಇತ್ತು. ಆ ಚಿಕ್ಕ ಬಾಗಿಲಿಗೆ ಈಗ ಬಲವಾದ ಬೀಗ ಹಾಕಲಾಗಿತ್ತು. ಇದು ಮೊದಲು ಕಳ್ಳರು ನುಗ್ಗಿದ್ದ ದಾರಿ ಕೂಡ.
ವಿಶ್ವಾಸ್: ನಾವು ನಂಬಿಕೆಯ ಮೇಲೆ ಬಾಗಿಲು ಹಾಕಿದೆವು. ಬೀಗ ವಿಫಲವಾದಾಗ, ಕ್ಯಾಮೆರಾಗಳ ಮೇಲೆ ಅವಲಂಬಿಸಿದೆವು. ಆದರೆ ಈ ಚಿಕ್ಕ ಬಾಗಿಲು ಮತ್ತು ಅದರ ಹಿಂದಿನ ಬೀಗ, ನಮ್ಮ ಕಳೆದುಹೋದ ನಂಬಿಕೆಯ ಕೊನೆಯ ಸ್ಮಾರಕ.
ವಿಶ್ವಾಸ್ ಹೊರಟುಹೋದರು. ಹಿಂದೆ ತಿರುಗಿದ ಗಣೇಶಪ್ಪ, ಬ್ಯಾಂಕಿನ ಗೋಡೆ ಮೇಲೆ ಅಳವಡಿಸಲಾದ ಹೊಸ CCTV ಕ್ಯಾಮೆರಾವನ್ನು ನೋಡಿದರು. ಆ ಕ್ಯಾಮೆರಾ ಯಾವುದೇ ಭಾವನೆಯಿಲ್ಲದೆ, ತಟಸ್ಥವಾಗಿ ಇಡೀ ಪರಿಸರವನ್ನು ರೆಕಾರ್ಡ್ ಮಾಡುತ್ತಿತ್ತು. ನಂಬಿಕೆಯ ಜಾಗದಲ್ಲಿ 'ತಟಸ್ಥ ದೃಷ್ಟಿ (Neutral View) ಸ್ಥಾನ ಪಡೆಯಿತು.
ಬೀಗದ ಯುಗ ಮುಗಿಯಿತು. ಈಗ ಇಡೀ ಹಳ್ಳಿ ಮತ್ತು ಬ್ಯಾಂಕ್, 'ಕಣ್ಣುಗಳ ನೆಟ್‌ವರ್ಕ್'ಗೆ ಒಳಪಟ್ಟಿತ್ತು.

                                ಮುಂದುವರೆಯುವುದು.