ಅಧ್ಯಾಯ20 : ಪ್ರೀತಿ ಮತ್ತು ಪ್ರತಿಷ್ಠೆ
ಜೆಕೆ ಅಮ್ಮು ರೂಮ್ನಿಂದ ಸೂರ್ಯನನ್ನು ಕರೆದುಕೊಂಡು ಮಾಧವ್ ರೂಮ್ಗೆ ಬಂದನು. ಸೂರ್ಯ ಒಳಗೆ ಬರುತ್ತಿದ್ದಂತೆಯೇ, ಮಾಧವ್ ಅವನತ್ತ ನೋಡುತ್ತಾ,
“ಸೂರ್ಯ ನೀನು ಮಾಡಿದ್ದು ಸರಿನಾ??” ಎಂದು ಕೇಳಿದ.
ಅದಕ್ಕೆ ಸೂರ್ಯ ತಲೆತಗ್ಗಿಸಿಕೊಂಡು,
“sorry ಭಾವಾ ನನ್ನಿಂದ ತಪ್ಪಾಗೋಯ್ತು, ಈ ವಿಷಯ ನಾ ಯಾರಿಗೂ ಹೇಳ್ಬೇಡ ಅಂತಾ ನಾನೆ ಜೆಕೆ ಹತ್ರ ಪ್ರಾಮಿಸ್ ಮಾಡಸ್ಗೊಂಡಿದ್ದೆ ಇದರಲ್ಲಿ ಅವನದೇನು ತಪ್ಪಿಲ್ಲ” ಎಂದು ಬೇಸರದಿಂದ ಉತ್ತರಿಸಿದ.
ಅವರ ಮಾತುಗಳನ್ನು ಕೇಳುತ್ತಿದ್ದ ಭುವನ್,
“ನೀವು ತಪ್ಪು ಮಾಡಿಬಿಟ್ರಿ ಕಣ್ರೋ” ಎಂದು ಹೇಳಿದ.
ಆ ಮಾತು ಮೂವರಲ್ಲೂ ಸ್ವಲ್ಪ ಆತಂಕವನ್ನು ಉಂಟುಮಾಡಿತು.
ಅದನ್ನು ಕೇಳಿದ ಜೆಕೆ ತಕ್ಷಣ ಕೇಳಿದ,
“ಅಣ್ಣ ಯಾಕೆ ಹೀಗೆ ಹೇಳ್ತಿದ್ದಿಯಾ??, ಅಮ್ಮು ಮತ್ತೆ ಸೂರ್ಯ ಪ್ರೀತಿ ಮಾಡ್ತಿರೋದು ನಿಮಗೇನಾದ್ರೂ ಇಷ್ಟ ಆಗಲಿಲ್ಲವಾ”.
ಮಾಧವ್ ಶಾಂತವಾಗಿ ಉತ್ತರಿಸಿದ,
“ಅಲ್ಲ ಕಣೋ.. ನಮಗಂತೂ ತುಂಬಾ ಖುಷಿ ಆಯ್ತು ಆದರೆ ಈಗಾಗಲೇ ತುಂಬಾ ಲೇಟ್ ಆಯ್ತು ಅಂತ ಅನಸ್ತಿದೆ”.
ಅದಕ್ಕೆ ಸೂರ್ಯ ಕಳವಳದಿಂದ,
“ಎನ್ ಭಾವ ನೀವೇ ಹೀಗೆ ಹೇಳ್ಬಿಟ್ರೆ ನಮ್ಮಿಬ್ಬರ ಗತಿ ಏನು” ಎಂದು ಕೇಳಿದ.
ಜೆಕೆ ಬೇಡಿಕೊಳ್ಳುತ್ತಾ,
“ಪ್ಲೀಸ್ ಕಣ್ರೋ ಇವರಿಬ್ಬರ ಪ್ರೀತಿಗೆ ಸಪೋರ್ಟ್ ಮಾಡಿ.. ಹಾಗೆ ಇವತ್ತು ಈ ವಿಷಯ ನಾ ದೊಡ್ಡಪ್ಪನಿಗೆ ಹೇಳ್ಬೇಕು” ಎಂದು ಹೇಳಿದ.
ಭುವನ್ ಸ್ವಲ್ಪ ಕೋಪದಿಂದ,
“ನಮಗೇನಾದ್ರು ಮೊದಲೇ ಈ ವಿಷಯದ ಬಗ್ಗೆ ಗೊತ್ತಾಗಿತ್ತು ಅಂದ್ರೆ ಅಪ್ಪನ ಹತ್ರ ನಾವೇ ಮಾತಾಡ್ತಿದ್ವಿ.. ಆದರೆ ಈಗ ಅಪ್ಪ ಒಪ್ಪಿಕೊಳ್ತಾನೇ ಅನ್ನೋದೇ ಭಯ ನಮ್ಗೆ” ಎಂದು ಹೇಳಿದರು.
ಮಾಧವ್ ಕೂಡ ಅದನ್ನು ಒಪ್ಪಿಕೊಂಡು,
“ನಿಂಗೆ ದೊಡ್ಡಪ್ಪನ ಬಗ್ಗೆ ಗೊತ್ತು ತಾನೇ ಅವರು ಮಾತು ಕೊಟ್ರೆ ಮುಗೀತು ಅದನ್ನ ಉಳಿಸಿಕೊಳ್ಳೋಕೆ ಎನ್ ಬೇಕಾದ್ರೂ ಮಾಡ್ತಾರೆ ಇದು ದೊಡ್ಡಪ್ಪನ ಗೌರವದ ವಿಷಯ” ಎಂದು ಹೇಳಿದರು.
ಜೆಕೆ ನಿಧಾನವಾಗಿ ಭುವನ್ ಹತ್ತಿರ ಬಂದು ಅವನ ಕೈ ಹಿಡಿದು,
“ಅಣ್ಣ.. ಪ್ಲೀಸ್ ಕಣೋ ಈ ವಿಷಯ ನಾ ನೀನೇ ದೊಡ್ಡಪ್ಪನ ಹತ್ರಾ ಹೇಳೊ ಪ್ಲೀಸ್” ಎಂದು ಗೋಗರಿಸಿದ.
ಭುವನ್ ತಕ್ಷಣ ಹಿಂದಟ್ಟುತ್ತಾ,
“ಏನು! ನಾನಾ.. ಅದು.. ಇಲ್ಲ ನಾನಂತು ಹೇಳೋಲ್ಲ” ಎಂದು ಹೇಳಿದ.
ಸೂರ್ಯನ ಮುಖದಲ್ಲಿ ನಿರಾಶೆ ಸ್ಪಷ್ಟವಾಗಿ ಕಾಣಿಸಿತು. ಅದನ್ನು ಗಮನಿಸಿದ ಭುವನ್ ಮಾತನ್ನು ಮಾಧವ್ ಕಡೆ ತಳ್ಳುತ್ತಾ,
“ಹಾ!.. ಮಾಧವ್ ಹೇಳ್ತಾನೆ ಯಾಕಂದ್ರೆ ಅವನು ಪೊಲೀಸ್!! ಪೊಲೀಸ್ ಆದವರು ಯಾರ್ಗೂ ಹೆದರೊಲ್ಲ ಅಲ್ವಾ” ಎಂದು ಹೇಳಿದರು.
ಜೆಕೆ ಕೂಡ ಅದನ್ನು ಬೆಂಬಲಿಸಿ,
“ಹಾ.. ಕರೆಕ್ಟ್ ಬ್ರೋ ಮಾಧವ್ ಬ್ರೋ ಗೆ ಭಯ ಅದ್ರೇನೆ ಏನು ಅಂತಾನೇ ಗೊತ್ತಿಲ್ಲ” ಎಂದು ಹೇಳಿದರು.
ಅದಕ್ಕೆ ಮಾಧವ್ ಸ್ವಲ್ಪ ಕಂಗಾಲಾಗಿ,
“ಅಯ್ಯೋ ಇದೇನಿದು... ನಾನು ಯಾರ್ಗೂ ಹೆದೋರಲ್ಲ ನಿಜ ಆದರೆ ಅದು ಮನೆ ಹೊರಗೆ ಮನೆ ಒಳಗೆ ಅದೆಲ್ಲ ನಡೆಯೋಲ್ಲ.. ಅದರಲ್ಲೂ ದೊಡ್ಡಪ್ಪನ ಹತ್ರಾ ನಾ.. ಯಪ್ಪಾ!!” ಎಂದು ಹೇಳಿದರು. ನಂತರ,
“ನಮ್ಮ ಕಾರ್ತಿಕ್ ಇದ್ದಾನಲ್ಲ ಅವನು ಹೇಳ್ತಾನೆ” ಎಂದು ಸೇರಿಸಿದರು.
ಅದಕ್ಕೆ ಕಾರ್ತಿಕ್ ಬೆಚ್ಚಿಬಿದ್ದು,
“ಏನು!! ನಾನಾ ಅವರ ಹತ್ರ ಹೋಗಿ ನಿಂತುಕೊಳ್ಳೋಕು ಭಯ ಪಡುವ ನಾನು ಇನ್ನೂ ಈ ವಿಷಯ ನಾ ಹೇಳ್ತಿನಾ.. ಸಾಧ್ಯಾನೇ ಇಲ್ಲ” ಎಂದು ಹೇಳಿದ.
ಭುವನ್ ಮತ್ತೆ ಒತ್ತಾಯಿಸಿ,
“ಬ್ರೋ ಈ ಕೆಲಸಕ್ಕೆ ನೀನೇ ಕರೆಕ್ಟ್ ಒಪ್ಗೋ.. ಪ್ಲೀಜ್ ಕಣೋ” ಎಂದನು.
ಸೂರ್ಯ ಮನಸ್ಸಿನಲ್ಲಿ ಯೋಚಿಸಿ, ಎಮೋಷನಲ್ ಆಗಿ ಮಾತನಾಡಲು ಮುಂದೆ ಬಂದು,
“ಭಾವ ಈಗ ನೀನೆನಾದ್ರು ನನ್ನ ಲವ್ ಗೆ ಸಪೋರ್ಟ್ ಮಾಡ ಡಿದ್ರೆ.. ಇನ್ನೂ ಯಾರು ಮಾಡೋಕೆ ಸಾಧ್ಯ.. ಒಂದು ವಿಷಯ ನೆನಪಲ್ಲಿ ಇರಲಿ... ಇವತ್ತು ದೊಡ್ಡಮಾವ ಹತ್ರ ಏನಾದ್ರೂ ಈ ವಿಷಯ ಹೇಳ್ದೆ ಇದ್ರೆ.. ಅಮ್ಮು ಮದುವೆ ಅವನ ಜೊತೆ ಫಿಕ್ಸ್ ಆಗುತ್ತೆ... ಆಗ ನಾನು ದೇವದಾಸ ಆಗೋದಂತೂ ಪಕ್ಕಾ.. ಹಾಗೆ ನನ್ನ ಇಡೀ ಜೀವನ ಒಂಟಿಯಾಗಿ ಅವಳ ನೆನಪಲ್ಲೇ ಕಳಿತಾ ಕಳಿತಾ.. ಒಂದು ದಿನ ಸತ್ತು ಹೋಗ್ತೀನಿ” ಎಂದು ಹೇಳುತ್ತಾ ಅಳುವ ನಾಟಕ ಶುರುಮಾಡಿದ.
ಅವನ ಆಕ್ಟಿಂಗ್ ನೋಡಿದ ಜೆಕೆ ಒಳಗೊಳಗೇ ನಗುತ್ತಿದ್ದ. ಆದರೆ ಮಾಧವ್ ಅದಕ್ಕೆ ಕರಗಿ,
“ಅಯ್ಯೋ.. ಸೂರ್ಯ ನೀನು ಈ ತರ ಎಲ್ಲಾ ಅಳ್ಬೇಡ.. ನನಗೆ ನೋಡೋಕೆ ಆಗೋಲ್ಲ ಹೂ.. ಸರಿ ನಾನೆ ಮಾತಾಡ್ತೀನಿ ಆದರೆ ನೀವೆಲ್ಲರೂ ನನ್ನ ಹತ್ರಾನೆ ಇರ್ಬೇಕು ಎಲ್ಲಿ ಹೋಗಬಾರದು” ಎಂದು ಒಪ್ಪಿಕೊಂಡ.
ಅದನ್ನು ಕೇಳಿ ಮೂವರು ಸಮಾಧಾನದ ಉಸಿರೆಳೆದರು.
***************
ನಾಲ್ವರೂ ಒಟ್ಟಿಗೆ ಕೆಳಗಿನ ಮಹಡಿಗೆ ಇಳಿಯಲು ಶುರುಮಾಡಿದರು. ಮೆಟ್ಟಿಲು ಇಳಿಯುತ್ತಾ ಬರುತ್ತಿದ್ದಂತೆ, ಮಾಧವನ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು. ಹೊರಗೆ ಧೈರ್ಯವಾಗಿ ಕಾಣಲು ಪ್ರಯತ್ನಿಸಿದರೂ, ಒಳಗೆ ಅವನು ತುಂಬಾ ನರ್ವಸ್ ಆಗಿದ್ದ.
ಹಾಲ್ನಲ್ಲಿ ಸುಧಾಕರ್, ಶಶಿಧರ್, ಕೇಶವ್ ಹಾಗು ಶೇಖರ್ ಎಲ್ಲರೂ ಕೂತು ಮಾತಾಡುತ್ತಿದ್ದರು. ಇವರನ್ನು ಒಟ್ಟಿಗೆ ಬರುತ್ತಿರುವುದನ್ನು ನೋಡಿ ಸುಧಾಕರ್ ಆಶ್ಚರ್ಯದಿಂದ,
“ಎನ್ರೋ ಎಲ್ಲರೂ ಒಮ್ಮೆ ಬಂದುಬಿಟ್ಟಿದಿರಾ.. ಬನ್ನಿ ಇನ್ನೇನು ಬೀಗರು ಬರೋ ಸಮಯ ಕುಳಿತುಕೊಳ್ಳಿ” ಎಂದು ಹೇಳಿದರು.
ಅವರ ನಡೆನುಡಿಯನ್ನು ಗಮನಿಸಿದ ಕೇಶವ್,
“ಅಣ್ಣ ಅವರನ್ನ ನೋಡ್ತಾ ಇದ್ರೆ ಕುಳಿತುಕೊಳ್ಳೋಕೆ, ಅಲ್ಲ ಏನೋ ಹೇಳೋದಕ್ಕೆ ಬಂದವರ ತರ ಇದೆ...” ಎಂದು ಹೇಳಿದರು.
ಅದಕ್ಕೆ ಸೂರ್ಯ ಏನೋ ಹೇಳಲು ಮುಂದಾದ,
“ಹಾ! ಹೌದು ಮಾವ...” ಎಂದು ಹೇಳುತ್ತಿದ್ದಾಗಲೇ, ಮಾಧವ್ ಅವನತ್ತ ಕಣ್ಣಿನ ಸನ್ನೆ ಮಾಡುತ್ತಾ ಮಾತನ್ನು ನಿಲ್ಲಿಸಿದ.
ಶಶಿಧರ್ ನೇರವಾಗಿ ಪ್ರಶ್ನಿಸಿ,
“ಎನ್ರೋ ಅದು??...” ಎಂದು ಕೇಳಿದರು.
ಮಾಧವ್ ತಡಕಾಡುತ್ತಾ,
“ಅದು ದೊಡ್ಡಪ್ಪ.. ಏನಿಲ್ಲ ಅದು..” ಎಂದು ಹೇಳುತ್ತಿದ್ದಷ್ಟರಲ್ಲಿ, ಫೋನ್ ಕಾಲ್ ಬಂತು. ಶಶಿಧರ್ ಮಾತನಾಡಿ ಕಾಲ್ ಕಟ್ ಮಾಡಿದರು.
ಅದನ್ನು ನೋಡಿ ಶೇಖರ್ ಕೇಳಿದ,
“ಏನಾಯ್ತು ಭಾವಾ?? ಇನ್ನು ಏಷ್ಟೊತ್ತು ಅಂತೆ?..”
ಅದಕ್ಕೆ ಶಶಿಧರ್ ಶಾಂತವಾಗಿ,
“ಏನಿಲ್ಲ ಕಣೋ ಅವರ ಮನೆಯವರು ಬರೋದಕ್ಕೂ ಮುಂಚೆ ದೇವಸ್ಥಾನಕ್ಕೆ ಹೋಗ್ಬೇಕು ಅಂತೆ ಅದಕ್ಕೆ ಇನ್ನೊಂದು ಸ್ವಲ್ಪ ಹೊತ್ತು ಲೇಟ್ ಆಗುತ್ತೆ ಅಂತ ಹೇಳಿದ್ರು” ಎಂದು ಹೇಳಿದರು.
ಈ ಮಾತು ಕೇಳಿದ ಜೆಕೆ ಉಸಿರೆಳೆದಂತೆ,
“ಅಬ್ಬಾ.. ಇನ್ನೂ ಸ್ಪಲ್ಪ ಟೈಮ್ ಜಾಸ್ತಿ ಸಿಕ್ತು ಬೇಗ ಹೇಳು ಬ್ರೋ..” ಎಂದು ನಿಧಾನವಾಗಿ ಒತ್ತಾಯಿಸಿದ. ಉಳಿದವರು ಸಹ ಮಾಧವ್ ಮೇಲೆ ಒತ್ತಡ ಹಾಕಲು ಶುರುಮಾಡಿದರು.
ಮಾಧವ್ ಗಾಬರಿಯಿಂದ,
“ಇರೋ.. ನೀವೇ ನನ್ನ ಹೆದರಿಸಿ ಸಾಯಿ ಹೊಡೀತಿರಾ ಅನ್ಸುತ್ತೆ” ಎಂದು ಗುನುಗಿದ.
ಶಶಿಧರ್ ಮತ್ತೆ ಗಂಭೀರವಾಗಿ,
“ಮಾಧವ್ ಏನೋ ಹೇಳ್ಬೇಕು ಅಂತ ಇದ್ದೆ ಅಲ್ವಾ ಹೇಳು” ಎಂದು ಹೇಳಿದರು.
ಮಾಧವ್ ಇನ್ನೂ ತಡಕಾಡುತ್ತಾ,
“ಭಾವ... ಛೇ!! ಅದು ದೊಡ್ಡಪ್ಪ...” ಎಂದು ಹೇಳಿ, ಏಕಾಏಕಿ ತನ್ನ ಮೇಲೆ ಇದ್ದ ಹೊಣೆ ತಪ್ಪಿಸಿಕೊಳ್ಳಲು,
“ಹಾ!! ಜೆಕೆ ಏನೋ ಹೇಳ್ಬೇಕು ಅಂತ ಹೇಳ್ತಿದ್ದ ಅದಿಕ್ಕೆ ಕರ್ಕೊಂಡು ಬಂದೆ... ಹೇಳೊ ಜೆಕೆ ದೊಡ್ಡಪ್ಪ ಕೇಳ್ತಿದಾರಲ್ವ...” ಎಂದು ಹೇಳಿಬಿಟ್ಟ.
ಆ ಮಾತು ಕೇಳಿದ ಮೂವರು ಕ್ಷಣಕಾಲ ಶಾಕ್ ಆಗಿಬಿಟ್ಟರು. ಜೆಕೆಯ ಸ್ಥಿತಿ ಇನ್ನೂ ಕಷ್ಟಕರವಾಗಿತ್ತು. ಮನಸ್ಸಿನಲ್ಲಿ, “ಬ್ರೋ.. ಬ್ರೋ ಅಂತ ಹೇಳ್ಕೊಂಡು ಬೆನ್ನಿಗೆ ಚೂರಿ ಹಾಕ್ಬಿಟ್ಟೆಯಲ್ಲ” ಎಂದುಕೊಂಡನು.
ಆದರೂ, ತನ್ನನ್ನೇ ಸಮಾಧಾನಪಡಿಸಿಕೊಂಡು, ‘ಇದು ನಿನ್ನ ಸ್ನೇಹಿತನ ಮತ್ತು ತಂಗಿಯ ವಿಷಯ’ ಎಂದು ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡು ಮುಂದೆ ಬಂತು.
ಕೇಶವ್ ಸಹ ತ್ವರಿತವಾಗಿ,
“ಅದೇನು ಬೇಗ ಹೇಳೊ ಕಂದ” ಎಂದು ಒತ್ತಾಯಿಸಿದ.
ಕೊನೆಗೆ ಜೆಕೆ ಧೈರ್ಯವಾಗಿ,
“ದೊಡ್ಡಪ್ಪ ಅದು ಈ ಸಂಬಂಧ ಮುಂದುವರೆಸೋದು ಬೇಡ...” ಎಂದು ಹೇಳಿದ.
ಆ ಮಾತು ಕೇಳುತ್ತಿದ್ದಂತೆಯೇ, ಅಲ್ಲಿದ್ದ ಎಲ್ಲರೂ ಬೆಚ್ಚಿಬಿದ್ದು ಎದ್ದು ನಿಂತರು.
ಶಶಿಧರ್ ಕೋಪದಿಂದ,
“ಏನೂ!!.. ಏನೋ ಹೇಳ್ತಿದೀಯಾ ಅಂತ...” ಎಂದು ಜೋರಾಗಿ ಗದರಿಸಿದರು.
ಆ ಶಬ್ದ ಕೇಳಿ ಅಡುಗೆಮನೆಯಲ್ಲಿದ್ದವರು ಎಲ್ಲರೂ, ಲಕ್ಕಿ ಅಜ್ಜಿ ಸಹ ಹಾಲ್ಗೆ ಓಡಿಬಂದರು.
ಲಕ್ಕಿ ಗಾಬರಿಯಿಂದ,
“ಶಶಿಧರ್ ಏನಾಯ್ತೋ ಯಾಕೋ ಹಾಗೆ ಕಿರಚ್ತೀದಿಯ...” ಎಂದು ಕೇಳಿದರು.
ಜೆಕೆ ತಕ್ಷಣ ಶಾಂತವಾಗಿ,
“ದೊಡ್ಡಪ್ಪ ಕೋಪ ಮಾಡ್ಕೋಬೇಡಿ ನಾನು ಹೇಳೋದು ಪೂರ್ತಿ ಕೇಳಿ... ಸೂರ್ಯ ಹಾಗೆ ಅಮ್ಮು ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಡ್ತಿದ್ದಾರೆ.. ಅದು ಈಗಿನಿಂದ ಅಲ್ಲ ತುಂಬಾ ದಿನಗಳಿಂದ... ಅದಕ್ಕೆ ಪ್ಲೀಜ್ ಅವರಿಬ್ಬರನ್ನು ಒಂದು ಮಾಡಿ...” ಎಂದು ವಿನಂತಿಸಿದ.
ಈ ಮಾತು ಕೇಳಿ ಸುಧಾಕರ್ ಕೋಪದಿಂದ,
“ಲೋ.. ಕತ್ತೆ ನೀನು ಎನ್ ಹೇಳ್ತೀದಿಯಾ ಅನ್ನೋ ಅರಿವಿದೆ ಏನೋ ನಿಂಗೆ...” ಎಂದು ಗದರಿಸಿದರು.
ಲಕ್ಕಿ ಸೂರ್ಯನತ್ತ ತಿರುಗಿ,
“ಸೂರ್ಯ ಜೆಕೆ ಹೇಳ್ತಿರೋದು ನಿಜಾ ನಾ??” ಎಂದು ಕೇಳಿದರು.
ಸೂರ್ಯ ತಲೆ ಆಡಿಸುತ್ತಾ,
“ಹೌದು ಅಜ್ಜಿ ನಾನು ಅಮ್ಮು ತುಂಬಾ ದಿನಗಳಿಂದ ಪ್ರೀತಿ ಮಾಡ್ತೀದಿವಿ” ಎಂದು ಒಪ್ಪಿಕೊಂಡ.
ಸುಮತಿ ಗಾಬರಿಯಿಂದ,
“ಅಯ್ಯೋ.. ಎನ್ರೋ ಹೇಳ್ತಿದೀಯಾ... ನೋಡು ಇದು ತಮಾಷೆ ಮಾಡೊ ಸಮಯ ಅಲ್ಲ...” ಎಂದು ತಳ್ಳಿಹಾಕಲು ಪ್ರಯತ್ನಿಸಿದಳು.
ಆದರೆ ಮಾಧವ್ ಸ್ಪಷ್ಟವಾಗಿ,
“ಇಲ್ಲ ಅತ್ತೆ ಯಾವುದೇ ಹುಡುಗಾಟ ಮಾಡ್ತಿಲ್ಲ ಇದು ನಿಜಾನೇ” ಎಂದು ಹೇಳಿದರು.
ಇದನ್ನು ಕೇಳಿದ ಶಶಿಧರ್ ಕೋಪದಿಂದ,
“ಅಮ್ಮು.. ಅಮ್ಮು...” ಎಂದು ಜೋರಾಗಿ ಕರೆದರು.
ರೂಮ್ನಲ್ಲಿದ್ದ ಅಂಬ್ರುತಾ ಭಯದಿಂದ ಓಡಿ ಬಂದು, ತಲೆಬಾಗುತ್ತಾ ನಿಂತಳು.
ಸುಧಾಕರ್ ಅವಳನ್ನು ಪ್ರಶ್ನಿಸಿ,
“ಅಮ್ಮು ಇದೆಲ್ಲ ಏನು.. ನೀನು ಸೂರ್ಯ ನಿಜವಾಗ್ಲೂ ಪ್ರೀತಿ ಮಾಡ್ತೀದಿರಾ??” ಎಂದು ಕೇಳಿದರು.
ಅಂಬ್ರುತಾ ನಿಧಾನವಾಗಿ ತಲೆ ಆಡಿಸಿ ‘ಹೌದು’ ಎಂದು ಸೂಚಿಸಿದಳು.
ಆ ಕ್ಷಣಕ್ಕೆ ಮನೆ ತುಂಬಾ ಮೌನ ಆವರಿಸಿತು.
ಕಮಲಾ ಗೊಂದಲದಿಂದ,
“ಇದೆಲ್ಲ ಇದ್ದಕ್ಕಿದ್ದ ಹಾಗೆ ಏನು ನಡಿತಿದೆ...” ಎಂದು ಹೇಳಿದರು.
ಲಕ್ಕಿ ಬೇಸರದಿಂದ,
“ಈ ವಿಷಯ ನಾ ನಿಮಗೆ ಮೊದಲೇ ಹೇಳೋಕೆ ಏನಾಗಿತ್ತು...” ಎಂದು ಅಮ್ಮುವನ್ನು ಪ್ರಶ್ನಿಸಿದಳು.
ಭುವನ್ ತಕ್ಷಣ ಹೇಳಿದ,
“ಅಜ್ಜಿ.. ನೀವೆಲ್ಲ ಅವಳಿಗೆ ಒಂದು ಮಾತು ಸಹ ಕೇಳಿಲ್ಲ ನೀವು ಕೇಳ್ದೆ ಅವಳು ಹೇಗೆ ಹೇಳ್ತಾಳೆ” ಎಂದು.
ಈ ಮಾತು ಕೇಳಿದ ಶಶಿಧರ್ ಕೋಪದಿಂದ,
“ಅಂದ್ರೆ ಏನು ನಿನ್ನ ಮಾತಿನ ಅರ್ಥ.. ನಾವು ಮುಂದಾಲೋಚನೆ ಇಲ್ಲದೆ ನಿರ್ಧಾರಗಳನ್ನು ತಗೋತೀವಿ ಅಂತಾನ...” ಎಂದು ಗದರಿಸಿದರು.
ಶೇಖರ್ ಕೂಡ ಸೇರಿ,
“ಸೂರ್ಯ ನೀನು ಮಾಡ್ತಿರೋದು ದೊಡ್ಡ ಮಾವನವರ ಗೌರವದ ಪ್ರಶ್ನೆ” ಎಂದು ಹೇಳಿದರು.
ಶಶಿಧರ್ ಗಂಭೀರವಾಗಿ ಮುಂದುವರಿಸಿ,
“ನೀವು ಪ್ರೀತಿ ಮಾಡ್ತಾ ಇದ್ದದ್ದು ನಿಜ ಆಗಿದ್ರೆ ಮೊದಲೇ ಹೇಳಬಹುದಿತ್ತು... ಈಗ ಅವರು ಎಲ್ಲಾ ಒಪ್ಪಿಕೊಂಡಿದ್ದಾರೆ... ಈಗ ಈ ಸಂಬಂಧ ಬೇಡ ಅಂತ ಹೇಳಿದ್ರೆ ಅವರಿಗೆ ಅವಮಾನ ಆಗುತ್ತೆ...” ಎಂದು ಹೇಳಿದರು.
ಅವರ ಮಾತುಗಳಲ್ಲಿ ಕೋಪ ಮಾತ್ರವಲ್ಲ, ಗೌರವ ಕಾಪಾಡಬೇಕೆಂಬ ಒತ್ತಡವೂ ಸ್ಪಷ್ಟವಾಗಿತ್ತು.
ಮುಂದೆ ಏನಾಗುತ್ತದೆ?
ಪ್ರೀತಿ ಗೆಲ್ಲುತ್ತದಾ ಅಥವಾ ಕುಟುಂಬದ ಪ್ರತಿಷ್ಠೆ ಗೆಲ್ಲುತ್ತದಾ?
ಮುಂದುವರೆಯುವುದು…
ಈ ಕಥೆ ಇಷ್ಟವಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.. ನಾನು ಪ್ರತಿಲಿಪಿಯಲ್ಲಿ ಮುಂದಿನ ಅಧ್ಯಾಯಗಳನ್ನು ಅಪ್ಲೋಡ್ ಮಾಡಿದ್ದೇನೆ ನೀವು ಅಲ್ಲಿಯೂ ಸಹ ಕಥೆಯನ್ನು ಫಾಲೋ ಮಾಡಬಹುದು