She came unwillingly... - 10 in Kannada Drama by Kavya Pattar books and stories PDF | ಬಯಸದೆ ಬಂದವಳು... - 10

Featured Books
Categories
Share

ಬಯಸದೆ ಬಂದವಳು... - 10



ಅಧ್ಯಾಯ 10 : "ಒಬ್ಬನ ಬಣ್ಣ ಮತ್ತೊಬ್ಬಳ ಮಾಯೆ "

ಸ್ವಲ್ಪ ಸಮಯದ ನಂತರ ಎಲ್ಲರೂ ಬ್ಲ್ಯಾಕ್ ಅಕಾಡಮಿಕ್ ಗೌನ್ ಅನ್ನು ಹಾಕಿಕೊಂಡು ಬ್ಯಾಚುಲರ್ ಆಫ್ ಡಿಗ್ರಿ ಇನ್ B.E🎓 ಸರ್ಟಿಫಿಕೆಟ್ ತೆಗೆದುಕೊಳ್ಳುತ್ತಾರೆ ಅದಾದ ನಂತರ ಎಲ್ಲ ಪ್ರೊಫೆಸರ್ಗಳು , ಪ್ರಿನ್ಸಿಪಾಲ್,ಸ್ಟೂಡೆಂಟ್ಸ್ ಎಲ್ಲರೂ ಸೇರಿ ಗ್ರೂಪ್ ಆಫ್ ಫೋಟೊ ಸೆಷನ್ ಅನ್ನು ಮುಗಿಸಿಕೊಳ್ಳುತ್ತಾರೆ

ಹಾಗೆ ಸ್ವಲ್ಪ ಸಮಯ ಎಲ್ಲರೂ ಫ್ರೆಂಡ್ಸ್ ಗಳೊಂದಿಗೆ ಪ್ರೊಫೆಸೆರ್ಸಗಳೊಂದಿಗೆ ತಬ್ಬಿಕೊಳ್ಳುವುದರ ಮೂಲಕ ವಿದಾಯವನ್ನು ಹೇಳುತ್ತಿರುತ್ತಾರೆ 

"ಕಾರ್ತಿಕ್ ಮೊಗದಲ್ಲಿ ಒಂದು ಮಂದಹಾಸ  ಫೈನಲಿ ನಾವೆಲ್ಲರೂ ಎಂಜಿನರಿಂಗ್ ನಾ ಮುಗಿಸಿದ್ವಿ ಅಲ್ಲವೇನ್ರೋ "

"ಸೂರ್ಯ ನು ಒಂದು ಸಣ್ಣದಾದ ನಗುವೊಂದಿಗೆ ಹೌದು ಕಣ್ರೋ ಮೊದಮೊದಲು ಯಾವಾಗದ್ರು ಕಾಲೇಜ್ ಮುಗಿಯುತ್ತೋ ಅಂತಾ ಅನಸ್ತಿತ್ತು ಈಗ ನೋಡಿ ಮುಗದೆ ಹೋಯ್ತು  ಪಾಪ ನಮ್ಮ ಪ್ರಿನ್ಸಿಪಾಲ್ ಮತ್ತೆ ಪ್ರೊಫೆಸರ್ಸ್ ನಾ ತುಂಬಾ ಗೋಳು ಹೋಯ್ಕೊಂದ್ವಿ" ,  

ಜೆಕೆ : " ಇನ್ಮೇಲೆ ಇಡೀ ಕಾಲೇಜ್ ಅಲ್ಲಿ ಎಲ್ಲಿನೋಡಿದರು ನಮ್ಮ ನೆನಪುಗಳಷ್ಟೇ"  
"ಅಷ್ಟರಲ್ಲಿ ಜೂನಿಯರ್ಸ್ ಹುಡುಗ,ಹುಡುಗಿಯರೆಲ್ಲರು ಜೆಕೆ ಹತ್ರ ಬರ್ತಾರೆ ಅದರಲ್ಲಿ ಒಬ್ಬ ಬ್ರೋ ನೀವು ನಮಗೆಲ್ಲ ಎಷ್ಟು ಹೆಲ್ಪ್ ಮಾಡ್ತಿದ್ರಿ ನಮ್ಗೆ ಇದು ವರೆಗೂ ಯಾರಿಂದಾನು ತೊಂದ್ರೆ ಆಗದಂಗೆ ನೀವೆಲ್ಲ ನೋಡ್ಕೊಂಡಿದಿರ ನಿಮ್ಮನ್ನ ಕಳಿಸೋಕೆ ಮನಸೇ ಬರ್ತಿಲ್ಲ".    

"ಜೆಕೆ ಒಂದು ತುಂಟಣಗುವನ್ನು ಬೀರುತ್ತಾ  ಹಾಗಂತ ನಿಮ್ಮ ಜೂನಿಯರ್ಸ್ ಗೆ ಏನಾದ್ರೂ ತೊಂದ್ರೆ ಕೊಡೋದು ಗೊತ್ತಾಯ್ತು ಅಂದ್ರೆ ನಾನ್ ಮಾತ್ರ ಸುಮ್ನೆ ಇರೋಲ್ಲ  ನೆನಪಿರಲಿ"  

"ಅಯ್ಯೋ ಇಲ್ಲ ಸೀನಿಯರ್ ಅಂತಾ ಅಲ್ಲಿರುವ ಹುಡುಗರು ಹೇಳುತ್ತಾರೆ ಹಾಗೆ ಇನ್ನೊಬ್ಬ ಜೂನಿಯರ್ ಹುಡಗಿ ನಿಮ್ಮ ಜೊತೆ ಒಂದು ಫೋಟೋ ತೆಕ್ಕೊಳ್ಬಹುದ ಪ್ಲೀಜ್" 

ಪ್ರವೀಣ್ ಹಲ್ಲುಗಳನ್ನು ಕಿರಿಯುತ್ತಾ"ಅಯ್ಯೋ.. ಹುಡಗಿರು ಕೇಳಿದ್ರೆ ಪ್ರಾಣಾನೆ ಕೊಡ್ತಾರಂತೆ ಇನ್ನೂ ಆಫ್ಟ್ರಾಲ್ ಫೋಟೋ ಕೊಡಲ್ವಾ"

ಸ್ವಾತಿ ( ಛೇಡಿಸುತ್ತಾ): "ಅವಳು ಕೇಳಿದ್ದು ಜೆಕೆ ಜೊತೆ ಫೋಟೋ ನಾ ನಿನ್ನ ಜೊತೆ ಅಲ್ಲ ಕಣೋ ಅಂತಾ ಪ್ರವೀಣ್ ನಾ ಗೇಲಿ ಮಾಡಿ ನಗೋದಕ್ಕೆ ಸ್ಟಾರ್ಟ್ ಮಾಡ್ತಾರೆ"

ಹಾಗೆ ಎಲ್ಲರೂ ಎಂಜಾಯ್ ಮಾಡ್ತಾ ಮಾಡ್ತಾ ಸಾಯಂಕಾಲ ಆಗುತ್ತೆ , ಆಲ್ಮೋಸ್ಟ್ ಎಲ್ಲಾ ಸ್ಟೂಡೆಂಟ್ಸ್ ಹೋಗಿರ್ತಾರೆ ಪ್ರಿನ್ಸಿಪಾಲ್ ಪ್ರೊಫೆಸರ್,ಮತ್ತೆ ಫೈನಲ್ ಇಯರ್ ಸ್ಟೂಡೆಂಟ್ಸ್ ಸ್ವಲ್ಪ ಜನ ಇರ್ತಾರೆ
ಸೂರ್ಯನು ನಡೆಯುತ್ತಾ ಸ್ವಾತಿ ಹತ್ರ ಬರ್ತಾನೆ ಸ್ವಾತಿ ಜೆಕೆ , ನಾ ಎಲ್ಲಾದ್ರೂ ನೋಡಿದ್ಯಾ ?  

ಸ್ವಾತಿ : "ಇಲ್ಲ ಕಣೋ May be ಕಾರ್ತಿಕ್ ಜೊತೆ ಇರ್ಬೇಕು ಅನ್ಸುತ್ತೆ"  

"ಆಗ ಸೂರ್ಯ ತನ್ನ ಮನಸಲ್ಲಿ ಕಾರ್ತಿಕ್ ಮತ್ತು ಪ್ರವೀಣ್ ಇಬ್ಬರು ಎಲ್ಲಿ ಹೋದರೂ ಟೈಮ್ ಸೆನ್ಸ್ ಅನ್ನೋದೇ ಇಲ್ಲ  ಇವರಿಗೆ ,ಅಲ್ಲಿ ಎಲ್ಲಾ ಪ್ರಿಪರೇಷನ್ ಮಾಡ್ಕೊಂಡು ಇದ್ರೆ  ಇಲ್ಲಿ ನಮ್ಮ ಹೀರೋ ನು ಕಾಣಸ್ತಿಲ್ಲ ಹಾಗೆ ಇವರು ಕಾಣಸ್ತಿಲ್ಲ"

"ಸ್ವಾತಿ ನೀನು ಇಲ್ಲೇ ಫ್ರೆಂಡ್ಸ್ ಹತ್ರ ಇರು ನಾನು ಮೂರು ಜನನ್ನು ನೋಡ್ಕೊಂಡು ಬರ್ತೀನಿ ಅಂತಾ ಸೂರ್ಯ ಅಲ್ಲಿಂದ ಹೋಗ್ತಾನೆ"...

---- 

"ಇನ್ನು ಈ ಕಡೆ   ಪೂರ್ವಿ ಒಂದು ಗಂಭೀರ ನಗೆಯನ್ನು ಬೀರುತ್ತಾ ರಾಜೇಶ್ ಎಲ್ಲಾ ಪ್ಲಾನ್ ಓಕೆ ನಾ" ?   

ರಾಜೇಶ್ : "ಹಾ! ಓಕೆ ಪೂರ್ವಿ ಸರಿ ನೀನು ಆಕ್ಟ್ ಮಾಡೋಕೆ ರೆಡಿ ಆಗು" , 

"ಸ್ವಲ್ಪ ಅಹಂಕಾರದಲ್ಲಿ ಪೂರ್ವಿ I am always ರೆಡಿ" ಸರಿ ಅಂತ ಅದಾದಮೇಲೆ ರಾಜೇಶ್ ಮತ್ತು ಪೂರ್ವಿ ಅಲ್ಲಿಂದ ಹೋರಡ್ತಾರೆ, 

"ಇನ್ನು ಈ ಕಡೆ ಜೆಕೆ ತಮ್ಮ ಪ್ರೊಫೆಸರ್  ಆದ ಗುರು ಜೊತೆ ಮಾತಾಡಿ ಅಲ್ಲಿಂದ ಬರ್ತಿರುವಾಗ  ಅಲ್ಲಿ ಒಬ್ಬ ಓಡುತ್ತಾ ಏದುಸಿರನ್ನು ಬಿಡುತ್ತಾ ಬ್ರೋ.. ಅಂತಾ ಗಾಬರಿ ಯಲ್ಲಿ ಕರಿತಾನೆ"    

ಜೆಕೆ : "ಹೆ! ಎನ್ ಆಯ್ತು ಯಾಕೆ ಹೀಗೆ ಓಡಿ ಬಂದೆ" ? ಆಗ ಆ ಹುಡುಗ ಅದು..   ಆ ಕಾರ್ನರ್ ಹತ್ರ ಇರೋ ಕಂಪ್ಯೂಟರ್ ಲ್ಯಾಬ್ ನಲ್ಲಿ ಒಂದು ಹುಡುಗಿ ಬಿದ್ದಿದ್ದಾಳೆ ನಂಗೆ ಏನು ಮಾಡ್ಬೇಕು ಅಂತಾ ಗೊತ್ತಾಗದೆ ಯಾರಾದ್ರೂ ಇದ್ರೆ ಹೇಳ್ಬೇಕು ಅಂತ ಬಂದೆ "

"ಜೆಕೆ ಆಶ್ಚರ್ಯದಿಂದ ಏನು ಹುಡುಗಿನ  ಮನೆಗೆ ಹೋಗೊ ಟೈಮ್ ನಲ್ಲಿ ಅಲ್ಲಿ ಎನ್ ಮಾಡ್ತಿದಾಳೆ.. ಸರಿ ಬೇಗ ಬಾ ಹೋಗಿ ಎನ್ ಆಗಿದೆ ಅಂತ ನೋಡೋಣ"

"ಆಗ ಆ ಹುಡುಗ ಸ್ವಲ್ಪ ಬಯದಲ್ಲೇ ತೊದಲುಸ್ತಾ  ಆ.. ಅದು.. ನಾನು ಹೋಗಿ ಯಾರನ್ನಾದ್ರೂ ಕರೆದುಕೊಂಡು ಬರ್ತೀನಿ ನೀವು ಹೋಗಿ ನೋಡಿ ಪ್ಲೀಜ್.. ಬೇಗ ಹೋಗಿ"  

ಜೆಕೆ  : "ಹಾ! ಸರಿ ನೀನು ಬೇಗ ಹೋಗಿ ಕರ್ಕೊಂಡು ಬಾ ನಾನು ಹೋಗಿ ನೋಡ್ತೀನಿ. ಹಾಗೆ ಅವನ ಮನಸಲ್ಲಿ ಇದು ಯಾರು ಇವನ್ನ ಇಲ್ಲಿವರೆಗೂ ಎಲ್ಲಿ ನೋಡೇ ಇಲ್ವಲ್ಲ ,ಅಂತ ಅಂದುಕೊಂಡು ಅದನ್ನ ನೆಗಲೆಟ್ ಮಾಡ್ತಾನೆ " 

"ಜೆಕೆ ಲ್ಯಾಬ್ ಕಡೆ ಹೆಜ್ಜೆಗಳನ್ನು ಹಾಕ್ತಾನೆ ಹಾಗೆ ಲ್ಯಾಬ್ ಡೋರ್ ಅನ್ನು ಓಪನ್ ಮಾಡಿ ಒಳಗೆ ಹೋಗಿ ನೋಡ್ತಾನೆ ಒಂದು ಹುಡಗಿ ಪ್ರಜ್ಞೆ ತಪ್ಪಿ ಬಿದ್ದೀರ್ತಾಳೆ ,ಆದರೆ ಅವಳು ಜೆಕೆ ಕಡೆಗೆ ಬೆನ್ನು ಮಾಡಿ ಬಿದ್ದಿರೋದ್ರಿಂದ ಅವನಿಗೆ ಯಾರು ಅಂತಾ ಗೊತ್ತಾಗಲ್ಲ ಆಗ ಜೆಕೆ  ಅವಳನ್ನು ಎಬ್ಬಿಸೋಕೆ ಟ್ರೈ ಮಾಡ್ತಾನೆ ಹಲೋ ಮೇಡಂ.. ಎದ್ದೇಳಿ ಅಂತಾ ಅವಳನ್ನು ತನ್ನ ಕಡೆ ಮುಖ ಮಾಡಿದಾಗಲೇ ಗೊತ್ತಾಗುತ್ತದೆ ಅವಳು ಪೂರ್ವಿ, ಅವಳನ್ನು ನೋಡಿ ಜೆಕೆ ಪೂರ್ವಿ.. ಪೂರ್ವಿ ಅಂತ ಅವಳನ್ನು ಎಷ್ಟೇ ಎಬ್ಬಿಸಲು ಟ್ರೈ ಮಾಡಿದ್ರೂ ಅವಳು ಏಳೋದೇ ಇಲ್ಲ ಆಗ ಜೆಕೆ ಸ್ಪಲ್ಪ ಗಾಬರಿಯಾಗಿ  ಅಲ್ಲೇ ಎಲ್ಲಾದರೂ ನೀರು ಸಿಗುತ್ತಾ ಅಂತ ಹುಡಕ್ತೀರ್ತಾನೆ ಆಗ ಟೇಬಲ್ ಮೇಲೆ ನೀರಿನ ಬಾಟಲ್ ಇರೋದನ್ನ ನೋಡಿ ಬಾಟಲ್ ತೆಗೆದುಕೊಂಡು ಬಂದು ನೀರನ್ನ ಅವಳ ಮೇಲೆ ಚುಮಕಿಸ್ತಾನೆ ಆಗ ಪೂರ್ವಿ ಸ್ಪಲ್ಪ ಸ್ಪಲ್ಪ ಕಣ್ಣನ್ನು ತೆಗೆದು ಜೆಕೆ ನೀನಾ.. ಥ್ಯಾಂಕ್ ಯು ಸೋ ಮುಚ್ ನನಗೆ ಹೆಲ್ಪ್ ಮಾಡಿದ್ದಕ್ಕೆ ಅಂತ ಸಣ್ಣಧ್ವನಿಯಲ್ಲಿ ಹೇಳ್ತಾಳೆ"

ಜೆಕೆ : "ಅದು ಬಿಡು ಈಗ ನೀನು ಆರಾಮಾಗಿ ಇದೀಯಾ ? ನೀನು ಇಲ್ಲೇನಕ್ಕೆ ಬಂದೆ" ?  

ಪೂರ್ವಿ : "ಜೆಕೆ ನಂಗೆ ಮಾತಾಡೋಕೆ ಕಷ್ಟ ಆಗ್ತಿದೆ ನಂಗೆ ಒಂದು ಹೆಲ್ಪ್ ಮಾಡ್ತೀಯಾ ಪ್ಲೀಜ್ ನನ್ನ ಎತ್ತಿಕೊಂಡು ಆಗ ಚೇರ್ ಮೇಲೆ ಕೂರಿಸಿ ಯಾರನ್ನಾದ್ರೂ ಕರ್ಕೊಂಡು ಬರ್ತೀಯಾ ನಂಗೆ ಏಳೋದಕ್ಕೂ ಆಗ್ತಿಲ್ಲ "  

"ಜೆಕೆ ಅವಳ ಮೇಲೆ ಕನಿಕರದಿಂದ ಸರಿ ಅಂತ ಅವಳನ್ನು ಎತ್ತಿಕೊಳ್ಳೋಕೆ ಹೋದಾಗ ಪೂರ್ವಿ ಜೆಕೆ ಯ ಬೇಕಂತಲೇ ಬ್ಯಾಲೆನ್ಸ್ ತಪ್ಪಿಸಿ ಅವನನ್ನು ತನ್ನ ಮೇಲೆ ಬೀಳುವಂತೆ ಮಾಡ್ತಾಳೆ".. 

( ಆಗ ಅಲ್ಲೇ ಅವಿತುಕೊಂಡ ರಾಜೇಶ್ ಫ್ರೆಂಡ ವರುಣ್ ಜೆಕೆ ಗೆ ಗೊತ್ತಾಗದ ರೀತಿ ಫೋಟೋಗಳನ್ನು ತೆಗೆದುಕೊಳ್ತೀರ್ತಾನೆ  )

ಪೂರ್ವಿ ಮನದೊಳಗೆ ನಗುತ್ತಾ "ಅಯ್ಯೋ sorry ಜೆಕೆ ನಿನ್ನ ಬ್ಯಾಲೆನ್ಸ್ ಮಿಸ್ ಮಾಡಿದ್ದಕ್ಕೆ"  

ಜೆಕೆ : "ಪರವಾಗಿಲ್ಲ ಅಂತ ಹೇಳಿ ಅವಳನ್ನು ಎತ್ತಿಕೊಂಡು ಇನ್ನೇನು ಅವಳನ್ನು ಚೇರ್ ಮೇಲೆ ಕುರಿಸಬೇಕು"....

ಅಷ್ಟರಲ್ಲಿ ರಾಜೇಶ್ ತನ್ನೊಂದಿಗೆ ಪ್ರಿನ್ಸಿಪಾಲ್, ಪ್ರೊಫೆಸರ್ಸ್ ,ಸೂರ್ಯ,ಕಾರ್ತಿಕ್,ಪ್ರವೀಣ್ ಸ್ವಾತಿ ಹಾಗೆ ಅಲ್ಲಿರುವ ಎಲ್ಲರನ್ನು ಕರೆದು ಕೊಂಡು ಬಂದಿರ್ತಾನೆ ಸರ್ ನೋಡಿ ಇಲ್ಲಿ ಜೆಕೆ ನಾ ತುಂಬಾ ಒಳ್ಳೆ ಹುಡುಗ ಅಂತಿದ್ರಿ ಅಲ್ವಾ ನೋಡಿ ಇಲ್ಲಿ ಇಬ್ಬರು ರೋಮಾನ್ಸ್ ಮಾಡ್ತಾ ಇದ್ದಾರೆ , ಇದು ಕಾಲೇಜ್ ಅನ್ನೋ ಸ್ಪಲ್ಪ ಕಾಮನ್ ಸೇನ್ಸ್ ಇಲ್ಲ ಇವರಿಗೆ, ಇವರಿಬ್ಬರೂ ರೂಮ್ ಒಳಗೆ ಬರ್ತಿದ್ದನ್ನ ನಾನು ನೋಡಿನೇ ನಿಮ್ಮನ್ನೆಲ್ಲ ಕರ್ಕೊಂಡು ಬಂದೆ

"ಆಗ ಸೂರ್ಯ ಕೋಪದಲ್ಲಿ ರಾಜೇಶ್ mind your tongueಜೆಕೆ ಬಗ್ಗೆ ಇನ್ನೊಂದು ಕೆಟ್ಟ ಮಾತಾಡಿದ್ರು ನಾನ್ ಮಾತ್ರ ನಿನ್ನ ಸುಮ್ನೆ ಬಿಡೋಲ್ಲ," 

"ಆಗ ಕಾರ್ತಿಕ್ ಕೂಡಾ ನಂಗೆ ಗೊತ್ತು ಕಣೋ ನಿಂಗೆ ಅವನಂದ್ರೆ ಆಗೋಲ್ಲ ಅದಕ್ಕೆ ಹೀಗೆಲ್ಲ ಹೇಳ್ತಿದೀಯ "  

ರಾಜೇಶ್ : "ಅದೇನೋ ಮಾಡ್ಕೋತಿರಾ ಇರೋದನ್ನೆ ಹೇಳ್ತಿರೋದು ಜೆಕೆ ಪೂರ್ವಿ ಲವ್ ಮ್ಯಾಟರ್ ಬಗ್ಗೆ ಇಡೀ ಕಾಲೇಜ್ ಗೆ ಗೊತ್ತು"

"ಇದನ್ನು ಕೇಳಿದ ತಕ್ಷಣ  ಪ್ರಿನ್ಸಿಪಾಲ್ ಮತ್ತೆ ಪ್ರೊಫೆಸರ್ಸ್ ಎಲ್ಲರೂ ಗಾಬರಿ ಆಗ್ತಾರೆ " 

ಪ್ರಿನ್ಸಿಪಾಲ್ : "ರಾಜೇಶ್ ಏನು ಮಾತಾಡ್ತಿದ್ದಿಯ ?ಏನು ನಡಿತಿದೆ ಇಲ್ಲಿ ಅಂತಾ ಪ್ರೊಫೆಸರ್ ಗಳ ಕಡೆಗೆ ನೋಟವನ್ನು ಬಿರ್ತಾನೆ ಆಗ  ಪ್ರೊಫೆಸರ್  ರಾಜೇಶ್ವರಿ ಭಯದಿಂದ sorry ಸರ್ ಇದರ ಬಗ್ಗೆ ನಮ್ಗೆ ಏನು ಗೊತ್ತಿಲ್ಲ ಹಾಗೆ ಎಲ್ಲ ಪ್ರೊಫೆಸೆರ್ ಗಳು ಅದನ್ನೇ ಹೇಳ್ತಾರೆ".   

"ಪ್ರಿನ್ಸಿಪಾಲ್ ಕೋಪದಲ್ಲಿ ಜೆಕೆ ಇದೆಲ್ಲ ಏನು ? ನೀವಿಬ್ಬರೂ ಇಲ್ಲೇನು ಮಾಡ್ತಿದ್ದಿರಾ" ?    

ಜೆಕೆ  : "ಸರ್ ನಾನು ಯಾವ ತಪ್ಪು ಮಾಡಿಲ್ಲ ಅದು

ಪೂರ್ವಿ"ಅಂತ ಹೇಳುವಷ್ಟರಲ್ಲಿ  ರಾಜೇಶ್ ಮದ್ಯ ವಹಿಸಿ ಸರ್ ಇವನು ತನ್ನ ಬಣ್ಣ ಎಲ್ಲಿ ಬಯಲಾಗತ್ತೋ ಅಂತಾ ಏನೇನೋ ಕಥೆ ಹೇಳಿ ನಿಮ್ಮನ್ನ ನಂಬಸ್ತಾನೆ  ಅವನ ಮಾತನ್ನ ನಂಬಬೇಡಿ"  
ಆಗ ಕಾರ್ತಿಕ್, ಪ್ರವೀಣ್,ಸೂರ್ಯ ,ಸ್ವಾತಿ ಎಲ್ಲರೂ ರಾಜೇಶ್ ಮೇಲೆ ಕೋಪದಿಂದ ನೋಟವನ್ನು ಬಿರ್ತಾರೆ. 

ಸ್ವಾತಿ : "ರಾಜೇಶ್ ಬಾಯಿ ಇದೆ ಅಂತ ಏನೇನೋ ಹೇಳ್ಬೇಡ ಜೆಕೆ ಏನು ಅಂತಾ ಎಲ್ಲರಿಗೂ ಗೊತ್ತು. ಹಾಗೆ ಜೆಕೆ ಪೂರ್ವಿ ಯಾವ ಪ್ರೀತಿನು ಮಾಡ್ತಿಲ್ಲ ಸುಮ್ನೆ ಇಲ್ದೆ ಇರೋದನ್ನ ಹಬ್ಬಿಸ್ಬೇಡ"..


"ರಾಜೇಶ್ ಹುಸಿನಗೆಯನ್ನು ಬೀರುತ್ತಾ ಓ.. ನಾನು ಇರೋದನ್ನೇ ಹೇಳ್ತಿದೀನಿ ಅದೇನೋ ಅಂತಾರಲ್ಲ ಇರೋದನ್ನ ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಓದ್ರಂತೆ " ಅಲ್ವೆನ್ರೊ ಅಂತಾ ರಾಜೇಶ್ ಮತ್ತೆ ಅವನ ಫ್ರೆಂಡ್ಸ್ ಎಲ್ಲಾ ನಗೋಕೆ ಸ್ಟಾರ್ಟ್ ಮಾಡ್ತಾರೆ  
ಅದನ್ನ ಸೂರ್ಯ,ಪ್ರವೀಣ್ ಮತ್ತೆ ಕಾರ್ತಿಕ್ ಹಾಗೆ ಜೆಕೆ ಕ್ಲಾಸ್ಮೇಟ್ ಗಳೆಲ್ಲ ಅದನ್ನು ಸಹಿಸಲಾಗದೆ ರಾಜೇಶ್ ಜೊತೆ ಜಗಳ ಮಾಡೋಕೆ ಸ್ಟಾರ್ಟ್ ಮಾಡ್ತಾರೆ ಆಗ ಇಲ್ಲಿ ರಾಜೇಶ್ ಮತ್ತು ಕಾರ್ತಿಕ್ ಟೀಮ್ ಮದ್ಯ ಬಿರುಸಾದ ಜಗಳ ನಡೆಯಬೇಕೆನ್ನುವಾಗ 

"ಪ್ರಿನ್ಸಿಪಾಲ್ ತಮ್ಮ ಗಡುಸು ಧ್ವನಿಯನ್ನು ಎತ್ತಿ ಏನು ಮಾಡ್ತಿದ್ದೀರ ಎಲ್ಲರೂ ಅವರಿಗೂ ಹೇಳೋಕೆ ಅವಕಾಶ ಕೊಡಿ ಬರಿ ನಿಮ್ಮ ಮಾತುಗಳನ್ನೇ ಕೇಳೋದೇ ಆಯ್ತು ರಾಜೇಶ್ ನೀನು ಇನ್ನೂ ಒಂದು ಮಾತು ಹೆಚ್ಚಿಗೆ ಆಡಿದ್ರೆ ನಾನು ಬೇರೆ ಆಕ್ಷನ್ ತಗೋಬೆಕಾಗತ್ತೆ"

"ಜೆಕೆ ನೀನು ಹೇಳು ನೀವಿಬ್ಬರೂ ಇಲ್ಲಿ ಏನ್ಮಾಡ್ತಿದ್ದೀರಾ" ?   

"ಜೆಕೆ ಯಾವುದೇ ಭಯವಿಲ್ಲದೆ ನೇರವಾದ ನೋಟದಲ್ಲಿ ಸರ್ ಒಬ್ಬ ಹುಡುಗ ಬಂದು ಲ್ಯಾಬ್ ನಲ್ಲಿ ಒಂದು ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ನೀನು ಹೋಗಿ ಹೆಲ್ಪ್ ಮಾಡು ನಾನು ಎಲ್ಲರನ್ನೂ ಕರೆದುಕೊಂಡು ಬರ್ತೀನಿ ಅಂತ ಹೇಳಿದ ಆಗ ನಾನು ಹೆಲ್ಪ್ ಮಾಡೋಕೆ ಅಂತ ಬಂದೆ ಅಷ್ಟೆ ನಂಗೆ ಅದು ಪೂರ್ವಿ ಅಂತ ಗೊತ್ತಿರ್ಲಿಲ್ಲ  ಅವಳಿಗೆ ಪ್ರಜ್ಞೆ ಇಲ್ದೆ ಇರೋದ್ರಿಂದ ಟೇಬಲ್ ಮೇಲಿರೋ ಬಾಟಲ್ ತೆಗೆದುಕೊಂಡು ಅವಳ ಮುಖಕ್ಕೆ ನೀರು ಹಾಕಿ ಎಬ್ಬಿಸಿ ಅವಳು ಚೇರ್ ಮೇಲೆ ಕೂರಿಸೂ ಅಂದ್ಲು ಅದಕ್ಕೆ ಅವಳನ್ನ ಎತ್ತಿಕೊಂಡು ಕುರಸ್ತಾ ಇದ್ದೆ ಇಷ್ಟೇ ನಡೆದದ್ದು"..

ಪ್ರಿನ್ಸಿಪಾಲ್  : "ಪೂರ್ವಿ ಜೆಕೆ ಹೇಳ್ತಿರೋದು ನಿಜಾನಾ ಅಂತಾ ಕೇಳಿದಾಗ ಪೂರ್ವಿ ಏನನ್ನೂ ಹೇಳದೆ ಮೌನವಾಗಿ ನಿಂತುಬಿಡ್ತಾಳೆ"  

"ಪ್ರಿನ್ಸಿಪಾಲ್ ನ ಕೋಪ ಹೆಚ್ಚಾಗಿ ಪೂರ್ವಿ ನಿನ್ನನ್ನೇ ಕೇಳ್ತಿರೋದು.. ಜೆಕೆ ನೀನು ಅವಳಿಗೆ ಹೆಲ್ಪ್ ಮಾಡೋಕೆ ಬಂದಿದ್ದೆ ಆದರೆ ಅವಳು ಯಾಕೆ  ಏನೂ ಮಾತಾಡ್ತಿಲ್ಲ" ಮತ್ತೆ ಜೆಕೆ ಗೆ ಪ್ರಶ್ನೆ ಮಾಡ್ತಾರೆ

ಜೆಕೆ : "ಕೋಪದಿಂದ ಚೂಪಾದ ನೋಟವನ್ನು ಪೂರ್ವಿ ಕಡೆಗೆ ಬೀರುತ್ತಾ ನಿಂಗೆ ಹೇಳ್ತಿರೋದು ಏನು ನಡೀತು ಅಂತ ಹೇಳು"

"ಜೆಕೆ ಯ ಕಣ್ಣುಗಳಲ್ಲಿರುವ ಕೋಪವನ್ನು ನೋಡುತ್ತಾ ನಿಂತಲ್ಲೇ ಪೂರ್ವಿ ಹೆದರಿ ಬೆವರಲು ಶುರುಮಾಡ್ತಾಳೆ"  

ಪ್ರೊಫೆಸರ್ ಗುರು : "ಜೆಕೆ ನೀನು ಸ್ವಲ್ಪ ಕೋಪ ನಾ ಕಡಿಮೆ ಮಾಡು ನಿನ್ನ ನೋಡಿ ಅವಳು ತುಂಬಾ ಹೆದರ್ಕೊಂಡಿದಾಳೆ" 

ಆಗ ರಾಜೇಶ್ ಫ್ರೆಂಡಗಳಲ್ಲಿ ಒಬ್ಬ : "ಸರ್ ಜೆಕೆ ಹೆಲ್ಪ್ ಮಾಡೋಕೆ ಬಂದಿದ್ದೆ ಆದರೆ ಅವಳು ಹೇಳ್ತಿದ್ಲೂ ಅಲ್ವಾ" ?

ಪ್ರಿನ್ಸಿಪಾಲ್  :" ಜೆಕೆ ಇದೆಲ್ಲ ಏನು ನಡಿತಿದೆ??.. 
ಜೆಕೆ : "ಸರ್ ನಾನು ಏನು ಹೇಳಿದ್ನೋ ಅದೆಲ್ಲ ನಿಜ ನನ್ನ ಕೋಪ ನಾ ತುಂಬಾ ಕಂಟ್ರೋಲ್ ಮಾಡ್ಕೋತಾ ಇದೀನಿ ಇವಳು ಇನ್ನು ನನ್ನ ತಾಳ್ಮೆ ನಾ ಪರೀಕ್ಷೆ ಮಾಡಿದ್ರೆ ಕಂಡಿತಾ ನಾನು ಎನ್ ಮಾಡ್ತೀನಿ ಅಂತ ನಂಗೆ ಗೊತ್ತಿಲ್ಲ"..  

"ಆಗ ಸ್ವಾತಿ ಜೆಕೆ ಹತ್ರ ಬರ್ತಾಳೆ ಜೆಕೆ ಸ್ಪಲ್ಪ ಕೋಪ ಕಂಟ್ರೋಲ್ ಮಾಡ್ಕೋ  ಪೂರ್ವಿ ಪ್ಲೀಜ್ ಏನು ನಡೀತು ಅಂತ ಹೇಳು ಯಾಕೆ ನೀನು ಸೈಲೆಂಟ್ ಆಗಿದಿಯಾ ಅಂತ ಕೋಪದಿಂದ ಪೂರ್ವಿ ಕಡೆ ನೋಟ ಹಾಯಿಸ್ತಾಳೆ "

ಪೂರ್ವಿ :ಅದು.. ಜೆಕೆ ಅಂತ ಹೇಳುವಷ್ಟರಲ್ಲಿ "ರಾಜೇಶ್ ಮತ್ತೆ ತನ್ನ ಮಾತುಗಳಿಂದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾ ಸರಿ ನೀನು ಪೂರ್ವಿ ಗೆ ಹೆಲ್ಪ್ ಮಾಡೋಕೆ ಬಂದೆ ಅಂತಾ ಅಂದುಕೊಳ್ಳೋಣ  ನಿನ್ನನ್ನ ಕರಿಯೋಕ್ ಬಂದ ಹುಡುಗ ಎಲ್ಲಿ "?  

"ಆಗ ಜೆಕೆ ಅವನನ್ನು ಇದು ವರೆಗೂ ಕಾಲೇಜ್ ನಲ್ಲಿ ಎಲ್ಲಿ ನೋಡೇ ಇಲ್ಲ  ಅವನು ಹೇಳಿದಾಗ ಜಸ್ಟ್ ನನ್ನ ತಲೇಲಿ ಬಂದಿದ್ದು ಹೆಲ್ಪ್ ಮಾಡ್ಬೇಕು ಅಂತಾ ಅಷ್ಟೆ"..

"ರಾಜೇಶ್ ತನ್ನ ಅಪಹಾಸ್ಯದ ನಗುವನ್ನು ಬೀರುತ್ತಾ ವಾ! ಜೆಕೆ ವಾ! ಎಷ್ಟು ನಾಟಕ ಮಾಡ್ತೀಯಾ ಯಾರೋ ಹುಡುಗ ಬಂದು ಹೇಳಿದನಂತೆ ಇವನು ಹೆಲ್ಪ್ ಮಾಡೋಕೆ ಹೋದನಂತೆ ಆದರೆ ಆ ಹುಡುಗ ಯಾರು ಅಂತಾ ನಿಂಗೆ ಗೊತಿಲ್ವಂತೆ ಆಗ ಅಲ್ಲಿರುವ ರಾಜೇಶ್ ಫ್ರೆಂಡ್ ನಮ್ಮ ಕಿವಿಗೆ ಹೂವು ಇಡತಿದ್ದಾನೆ ಕಣ್ರೋ ಅಂತ ರಾಜೇಶ್ ಫ್ರೆಂಡ್ಸ್ ಎಲ್ಲರೂ ಮತ್ತೆ ತಮ್ಮ ನಗುವಿನ ಮೂಲಕ ಜೆಕೆ ಯನ್ನು ಅಪಹಾಸ್ಯಮಾಡಲು ಶುರುಮಾಡ್ತಾರೆ.  

ರಾಜೇಶ್  : "ಅದು ಹೋಗ್ಲಿ ಬಿಡು ನೀನು ಅವಳ ಮುಖಕ್ಕೆ ನೀರು ಹಾಕಿ ಎಬ್ಬಿಸಿದೆ ಅಂದೆ ಅಲ್ವಾ ಹಾಗಾದ್ರೆ ಆ ನೀರಿನ ಬಾಟಲ್ ಇಲ್ಲೇ ಇರಬೇಕು ಅಲ್ವಾ ಎಲ್ಲಿ ಇದೆ" ?   

"ಜೆಕೆ ಕೋಪದಿಂದ ನಿನ್ನ ಕಣ್ಣ ಮುಂದೆ ಇದ್ರು ಕಾನಸ್ತಿಲ್ಲ ನಿಂಗೆ ಅಂತ ತನ್ನ ಕೈಗಳನ್ನು ಕಡೆಗೆ ಹಾಯಿಸ್ತಾನೆ . ಆಗ  ಪ್ರೊಫೆಸರ್ ಶಾನ್ ಅನ್ನೋರು ಅಲ್ಲಿ ಏನು ಇಲ್ಲ  ನಿಜ ಹೇಳು ಏನು ನಡೀತು ಇಲ್ಲಿ ಅಂತಾ"?

ಜೆಕೆ : "ಇಲ್ಲೇ ಇದೆ ಅಲ್ವಾ ಅಂತ ಧೈರ್ಯದಿಂದ ಆಕಡೆ ಕಣ್ಣುಗಳನ್ನು ಹಾಯಿಸಿದಾಗ ಅಲ್ಲಿ ಬಾಟಲ್ ಇರೋದೇ ಇಲ್ಲ" ..

( ಸ್ನೇಹಿತರೇ ಇದು ರಾಜೇಶ್,ರಾಜೇಶ್ ಪ್ರೆಂಡ್ ಹಾಗೆ ಪೂರ್ವಿ ಎಲ್ಲರೂ ಸೇರಿ ಪ್ಲಾನ್ ನಾ ಮೊದಲೇ ಹಾಕಿರ್ತಾರೆ ಅದೆ ರೀತಿ ಈಗ ಮಾಡ್ತೀರ್ತಾರೆ )

ಇಲ್ಲೇ ಇತ್ತು ಸರ್ ಪಕ್ಕಾ ಇದು ಪೂರ್ವಿ ಪ್ಲಾನ್ ಅಂತ ಪೂರ್ವಿ ಕಡೆ ನೋಡಿ ಪೂರ್ವಿ ನಿಂಗೆ ಲಾಸ್ಟ್ ಚಾನ್ಸ್ ಕೊಡ್ತಿದೀನಿ ಏನು ನಡೀತು ಅಂತ ಹೇಳ್ಬೀಡು 

"ಆಗ ಪ್ರೊಫೆಸರ್ ರಾಜೇಶ್ವರಿ ಮದ್ಯವಹಿಸಿ ಜೆಕೆ I know you are Good person ಆದರೆ ಒಂದು ಹುಡಗಿ ಹತ್ರ ನೀನು ಈ ರೀತಿ ಮಾತಾಡೋದು ಸರಿ ಅಲ್ಲ  ಅಂತ ಪೂರ್ವಿ ನಾ ತಮ್ಮ ಕಡೆ ಎಳೆದುಕೊಳ್ತಾರೆ"  

"ಪ್ರಿನ್ಸಿಪಾಲ್ ತಲೆ ಸಿಡಿದಂತೆ ಆಗಿ ಪೂರ್ವಿ ನೀನು ಯಾರು  ಕೇಳಿದ್ರು ಏನೂ ಯಾಕೆ ಮಾತಾಡ್ತಿಲ್ಲಾ ಅಂದ್ರೆ ಇವರೆಲ್ಲ ಹೇಳ್ತಿರೋದು ನಿಜಾನಾ ನೀನು ಮತ್ತೆ ಜೆಕೆ ಇಬ್ಬರೂ ಪ್ರೀತಿ ಮಾಡ್ತಿದ್ದಿರಾ" ? 

"ಪೂರ್ವಿ ಮತ್ತೆ ಏನು ಹೇಳದೆ ತನ್ನ ಅಳುವ ನಾಟಕವನ್ನು ಶುರು ಮಾಡ್ತಾಳೆ " 

ರಾಜೇಶ್ : "ಸರ್! ಯಾವ ಹುಡಗಿ ತಾನೇ ತಾನು ರೂಮ್ ಗೆ ರೋಮಾನ್ಸ್ ಮಾಡೋಕೆ ಬಂದಿದ್ದನ್ನ ಹೇಳ್ತಾಳೆ ಎಲ್ಲಾ ವಿಷಯ ಬಯಲಿಗೆ ಬಂತು ಅಂತಾ ಬಯಕ್ಕೆ ಅಳ್ತಿದಾಳೆ"  

ಜೆಕೆ ಯ ಕಣ್ಣೆಲ್ಲಾ ಕೋಪದಿಂದ  ಕೆಂಪಾಗಿರುವುದನ್ನು ಸ್ವಾತಿ ಗಮನಿಸ್ತಾಳೆ ಅದೆ ಸಮಯಕ್ಕೆ ಸ್ವಾತಿ ಗೆ ಏನೋ ನೆನಪಾಗುತ್ತೆ  ಸರ್ ಕಂಪ್ಯೂಟರ್ ಲ್ಯಾಬ್ ನಲ್ಲಿ ಸಿಸಿ ಟಿವಿ ಇರಲೇಬೇಕಲ್ವಾ ಅದನ್ನ ಚೆಕ್ ಮಾಡಿಸಿ ಆಗ ಏನು ನಡೀತು ಅಂತಾ ಎಲ್ಲಾ ಗೊತ್ತಾಗುತ್ತೆ"  

ಜೆಕೆ : "ಹೌದು ಈಗಲೇ ಓಪನ್ ಮಾಡ್ಸೋಣ ಬನ್ನಿ.. ಆಗ ಕಾರ್ತಿಕ್,ಸೂರ್ಯ,ಪ್ರವೀಣ್ ಹಾಗೆ ಎಲ್ಲ ಫ್ರೆಂಡ್ಸ್ ಕೂಡಾ ಹೌದು ಬನ್ನಿ ಈಗ ಇದುಕ್ಕೆ ಕ್ಲೈಮ್ಯಾಕ್ ಸಿಗುತ್ತೆ ಅಂತ ಎಲ್ಲರೂ ಹೋಗೋಕೆ ರೆಡಿ ಆಗ್ತಾರೆ" 

"ಆದರೆ ಪೂರ್ವಿಯ ಮುಖದಲ್ಲಿ ಭಯ ಸ್ಟಾರ್ಟ್ ಆಗುತ್ತೆ ಮನಸಲ್ಲಿ ಅಯ್ಯೋ... ಇದೇನು ಮಾಡ್ದೆ ನಾನು ಇದರ ಬಗ್ಗೆ ಯೋಚನೆ ಮಾಡೋದೇ ಮರೆತು ಹೋಯ್ತು ಎಲ್ಲಾ ಮುಗೀತು ಜೆಕೆ ಕೈಯಲ್ಲಿ ಗ್ಯಾರಂಟಿ ಸತ್ತೆ ಇವತ್ತು ಅಂತ ಗಾಬರಿಯಿಂದ ರಾಜೇಶನತ್ತ ನೋಟವನ್ನು ಹಾಯಿಸ್ತಾಳೆ", 
ಅಂದರೆ ಪೂರ್ವಿ ಸಿಕ್ಕಿಹಾಕಿಕೊಳ್ತಾಳಾ? ಅಥವಾ ಇದರಿಂದ ಪರಾಗ್ತಾಳ? ಅನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ..

           ಮುಂದುವರೆಯುವುದು...

---

🌸ಲೇಖಕರ ನೋಟ🌸:
ಸತ್ಯ ಸಿಡಿಲಂತೆ ಬಡಿದೇಳುವ ಮೊದಲು ಕಳ್ಳನ ನಾಟಕವೇ ಹಾಸ್ಯವಾಗಿ ತೋರುತ್ತದೆ. ಈ ಕಥಾಭಾಗ ನಿಮಗೆ ಹೇಗನಿಸಿತು?
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಮತ್ತು ಮುಂದಿನ ಭಾಗಕ್ಕಾಗಿ ಫಾಲೋ ಮಾಡಿಕೊಳ್ಳಿ!

– ಕಾವ್ಯಾ ಪತ್ತಾರ್