ಅಭಿ ಬೈಕ್ ನಿಲ್ಲಿಸಿ ಸೂಪರ್ ಮಾರ್ಕೆಟ್ ಒಳಗೆ ಬರ್ತಾನೇ,
ರಾಜ್,, ಅಭಿ ನಾ ನೋಡಿ ಏನೋ ಮಚ್ಚಾ ನೆನ್ನೆ ನನಗೆ ಹೇಳಿದಹಾಗೆ ಇತ್ತು,,, ಇವಾಗ ನೀನೇ ಈ ರೀತಿ ಬಂದಿದ್ದೀಯಾ ರಾತ್ರಿ ಅಷ್ಟು ಕುಡಿದ ಅಂತ ಸ್ವಲ್ಪ ರೇಗಿಸೋ ತರ ಹೇಳ್ತಾನೆ.
ಅಭಿ,,, ರಾಜ್ ಕಡೆಗೆ ಒಂದು ಲುಕ್ ಕೊಡ್ತಾನೆ.
ನಿರಂಜನ್ ಅಭಿ ನಾ ಸರಿಯಾಗಿ ಗಮನಿಸಿ ನೋಡ್ತಾನೆ ಅಭಿ ನಾರ್ಮಲ್ ಆಗಿ ಇಲ್ಲಾ ಅನ್ನೋದು ಅರ್ಥ ಆಗಿ. ರಾಜ್ ಗೆ ಮಚ್ಚಾ ಸೈಲೆಂಟ್ ಆಗಿ ಇರು, ಅಂತ ಹೇಳಿ ಅವನನ್ನ ಅಲ್ಲಿಂದ ಹೋಗೋಕೆ ಹೇಳ್ತಾನೆ.
ರಾಜ್ ನಿರಂಜನ್ ಮಾತಿಗೆ ಅಭಿ ನಾ ಸರಿಯಾಗಿ ನೋಡಿ ಅವನು ಹೇಳಿದ್ದು ಸರಿ ಅಂತ ಅಭಿ ಗೆ ಸಾರೀ ಮಚ್ಚಾ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾನೆ.
ಅಭಿ,,, ಸೀದಾ ಬಿಲ್ಲಿಂಗ್ ಕೌಂಟರ್ ಹತ್ತಿರ ಹೋಗಿ ಕೂತ್ಕೋತಾನೆ.
ತೇಜು,,, ಅಭಿ ನಾ ನೋಡಿ ಲೋ ಯಾಕೋ ಒಂತರಾ ಇದ್ದಿಯಾ ಏನಾಯ್ತು.
ಅಭಿ,,, ಏನಿಲ್ಲಾ ಬಿಡೆ ಅಂತ ಹೇಳಿ ಅವನ ಕೆಲಸದ ಕಡೆಗೆ ಗಮನ ಕೊಡ್ತಾನೆ
ಆಫೀಸ್ ಅಲ್ಲಿ ನಯನಾ ಜೊತೆಗೆ ಮಾತಾಡಿಕೊಂಡು ಕೌಂಟರ್ ಹತ್ತಿರ ಬಂದ ಪ್ರಿಯಾ, ಅಭಿ ನಾ ನೋಡಿ ಯಾಕೋ ಇವತ್ತು ಲೇಟ್ ಆಗಿ ಬಂದೆ, ಎಲ್ಲಾ ಓಕೆ ಅಲ್ವಾ ಅಂತ ಕೇಳ್ತಾಳೆ.
ಅಭಿ,,, ಹ್ಮ್ ಅಂತ ಅಷ್ಟೇ ಹೇಳಿ ವರ್ಕ್ ಮಾಡ್ತಾನೆ.
ಪ್ರಿಯಾ,,, ಲೋ ಏನ್ ಬರಿ ಹ್ಮ್ ಅಂತ ಹೇಳಿ ಸೈಲೆಂಟ್ ಆಗಿಬಿಟ್ಟೆ, ಏನಾದ್ರು ಪ್ರಾಬ್ಲಮ್ ಅ ಅಂತ ಅವನ ಹತ್ತಿರ ಹೋಗಿ ಕೈ ಇಡ್ಕೊಂಡು ಕೇಳ್ತಾಳೆ.
* ಆಫೀಸ್ ಅಲ್ಲಿ ವರ್ಕ್ ಮಾಡ್ತಾ ಇದ್ದಾ ನಯನಾ ಸಿಸಿಟಿವಿ ಕನೆಕ್ಟ್ ಮಾಡಿರೋ ಟಿವಿ ಕಡೆಗೆ ನೋಡ್ತಾಳೆ, ಹಾಗೇ ಎಲ್ಲಾ ಕ್ಯಾಮೆರಾ ಕಡೆಗೆ ಕಣ್ಣು ಆಡಿಸುತ್ತ ಬಿಲ್ಲಿಂಗ್ ಕೌಂಟರ್ ಕ್ಯಾಮೆರಾ ಕಡೆಗೆ ನೋಡ್ತಾಳೆ. ಪ್ರಿಯಾ ಅಭಿ ಕೈ ನಾ ಇಡ್ಕೊಳ್ಳೋಕೆ ಹೋಗ್ತಾ ಇರೋದನ್ನ ನೋಡಿ ಹಾಗೇ ನೋಡ್ತಾ ಇದ್ದು ಬಿಡ್ತಾಳೆ, ಪ್ರಿಯಾ ಅಭಿ ಕೈ ಇಡ್ಕೊಂಡು ಏನೋ ಕೇಳ್ತಾ ಇರೋ ಹಾಗೇ ಕಾಣುತ್ತೆ. ನಯನಾ ಗೆ ಏನ್ ಫೀಲ್ ಆಯಿತೋ ಗೊತ್ತಿಲ್ಲ ಅ ಸನ್ನಿವೇಶ ನೋಡಿ ವರ್ಕ್ ಮಾಡ್ತಾ ಇದ್ದವಳು ಅದನ್ನ ಸೈಡ್ ಗೆ ಇಟ್ಟು ಅಲ್ಲಿಂದ ಎದ್ದು ಬಿಲ್ಲಿಂಗ್ ಕೌಂಟರ್ ಕಡೆಗೆ ಹೆಜ್ಜೆ ಹಾಕ್ತಾಳೆ. *
ಪ್ರಿಯಾ,,, ಅಭಿ ಕೈ ಇಡ್ಕೊಂಡು ಲೋ ಏನಾಯ್ತು ಅಂತ ಕೇಳ್ತಾ ಇರೋವಾಗ, ಅಭಿ ಕೈ ಬಿಸಿ ಆಗಿ ಇರೋದನ್ನ ಫೀಲ್ ಆಗ್ತಾಳೆ. ತಕ್ಷಣ ಲೋ ಏನೋ ಕೈ ಇಷ್ಟೊಂದು ಬಿಸಿ ಆಗಿದೆ ಅಂತ ಹೇಳಿ, ಅವನ ಕತ್ತಿನ ಹತ್ತಿರ ಕೈ ಇಟ್ಟು ನೋಡಿ. ಶಾಕ್ ಆಗ್ತಾಳೆ. ಲೋ ಏನೋ ಮೈ ಇಷ್ಟೊಂದು ಬಿಸಿ ಆಗಿದೆ, ಜ್ವರ ಬಂದಿರೋ ಹಾಗೇ ಇದೆ.
ಅಭಿ,,, ಏನಿಲ್ಲಾ ಬಿಡೆ ವರ್ಕ್ ಮಾಡು ಅಂತ ಕೇಳಿ ಅವಳ ಕೈ ತೆಗಿತಾನೆ.
ಪ್ರಿಯಾ,,, ಇಷ್ಟೊಂದು ಜ್ವರ ಇಟ್ಕೊಂಡು ಏನು ಇಲ್ಲಾ ಅಂತ ಇದ್ದಿಯಾ, ನಿನ್ನ ಅಂತ ಅವನ ಕಡೆಗೆ ಕೋಪದಿಂದ ನೋಡ್ತಾ, ಲೋ ನಿರಂಜನ್ ಅಂತ ಜೋರಾಗಿ ಕರೀತಾಳೆ.
ಅಲ್ಲೇ ವರ್ಕ್ ಮಾಡ್ತಾ ಇದ್ದಾ ನಿರಂಜನ್ ಏನೇ ಅಂತ ಕೌಂಟರ್ ಕಡೆಗೆ ಬರ್ತಾನೇ.
ತೇಜು,,, ಲೇ ಪ್ರಿಯಾ ಏನಾಯ್ತು ಹಾಗೇ ಕರೀತಾ ಇದ್ದಿಯಾ ಅವನನ್ನ.
ಪ್ರಿಯಾ,,, ಅಭಿ ಗೆ ಜ್ವರ ಬಂದಿದೆ ಕಣೆ ಮೈ ಸುಡ್ತ ಇದೆ ಕೇಳಿದ್ರೆ ಏನು ಇಲ್ಲಾ ಅಂತ ಇದ್ದಾನೆ.
ತೇಜು,,, ಹೌದ ಅಂತ ಹೇಳಿ ಅವಳು ಅಭಿ ಮೈ ಮುಟ್ಟಿ ನೋಡಿ, ಲೋ ಏನೋ ಮೈ ಇಷ್ಟೊಂದು ಸುಡ್ತ ಇದೆ, ಅಂತ ಹೇಳಿ ಪ್ರಿಯಾ ಕಡೆಗೆ ನೋಡಿ ನಾನ್ ಬಂದಾಗಲೇ ಕೇಳ್ದೆ ಯಾಕೋ ಏನಾಯ್ತು ಅಂತ ಏನು ಇಲ್ಲಾ ಅಂತ ಹೇಳಿದ ಅಂತ ಹೇಳ್ತಾಳೆ.
ನಿರಂಜನ್ ಬಂದು ಲೇ ಏನಾಯ್ತು ಅಂತ ಕೇಳ್ತಾನೇ.
ಪ್ರಿಯಾ,,, ಲೋ ಅಭಿ ಗೆ ಜ್ವರ ಬಂದಿದೆ ಮೊದಲು ಅವನನ್ನ ಹಾಸ್ಪಿಟಲ್ ಗೆ ಕರ್ಕೊಂಡು ಹೋಗು.
ನಿರಂಜನ್ ಅಭಿ ಹತ್ತಿರ ಬಂದು ಅವನ ಮೈ ಮುಟ್ಟಿ, ಅನ್ಕೊಂಡೆ ಡಲ್ ಆಗಿ ಇದ್ದಿಯಾ ಯಾಕೆ ಅಂತ. ಬಾ ಹಾಸ್ಪಿಟಲ್ ಹೋಗಿ ಬರೋಣ ಅಂತ ಅವನ ಕೈ ಇಡ್ಕೊ ತಾನೇ..
ಅಭಿ,,, ಮಚ್ಚಾ ಏನು ಇಲ್ಲಾ ಬಿಡೋ ಸರಿ ಹೋಗುತ್ತೆ.
ನಿರಂಜನ್ ಮಚ್ಚಾ ನನ್ನ ಕೈಲಿ ಇವಾಗ ಸರಿಯಾಗಿ ತಿಂತೀಯಾ ಬಾ ಮುಚ್ಕೊಂಡು ಅಂತ ಹೇಳಿ ಬಲವಂತವಾಗಿ ಅವನ ಕೈ ಇಡಿದು ಕರ್ಕೊಂಡು ಹೋಗ್ತಾನೆ ಹೊರಗೆ.
ಅಭಿ ನಿರಂಜನ್ ಇಬ್ಬರು ಹೊರಗೆ ಹೋಗ್ತಾ ಇದ್ದಾ ಹಾಗೇ ನಯನಾ ಕೌಂಟರ್ ಹತ್ತಿರ ಬರ್ತಾಳೆ. ಅಲ್ಲಿ ಅಭಿ ಕಾಣಿಸೋದಿಲ್ಲ. ಅಲ್ಲೇ ಇದ್ದಾ ಪ್ರಿಯಾ ತೇಜು ನಾ ಡೈರೆಕ್ಟ್ ಆಗಿ ಕೇಳೋಕೆ ಆಗದೆ, ಪ್ರಿಯಾ ಇನ್ನು ಯಾರೋ ಒಬ್ಬರು ಬರಬೇಕು ಅಂತ ಹೇಳ್ದೆ ಅಲ್ವಾ ಬಂದ್ರ ಅಂತ ಕೇಳ್ತಾಳೆ.
ಪ್ರಿಯಾ,,, ಅ ನಯನಾ ಅಭಿ ಅಂತ ಬಂದಿದ್ದ ಬಟ್ ಅವನಿಗೆ ಫುಲ್ ಫೀವರ್, ಅದಕ್ಕೆ ನಿರಂಜನ್ ಜೊತೆಗೆ ಹಾಸ್ಪಿಟಲ್ ಗೆ ಕಳಿಸಿದೆ ಅಂತ ಹೇಳಿದ್ಲು.
ನಯನಾ ಗೆ ಪ್ರಿಯಾ ಹೇಳಿದ್ದನ್ನ ಕೇಳಿ. ಅವಳಿಗೆ ಗೊತ್ತಿಲ್ಲದ ಹಾಗೇ ಮನಸಲ್ಲಿ ಎಲ್ಲೋ ಒಂದು ಕಡೆ ಒಂದು ರೀತಿ ನೋವು ಆಗೋಕೆ ಶುರು ವಾಗುತ್ತೆ. ಅವಳಿಗೆ ಯಾಕೆ ಅಂತ ಅರ್ಥ ಆಗೋದೇ ಇಲ್ಲಾ. ಆಫೀಸ್ ಗೆ ಹೋಗದೆ ಅಲ್ಲೇ ಕೌಂಟರ್ ಹತ್ತಿರ ಹೋಗಿ ಕುತ್ಕೋ ಬಿಡ್ತಾಳೆ.
ಸುಮಾರು ಅರ್ಧ ಗಂಟೆ ಅಲ್ಲೇ ಕುಳಿತು ಬಿಡ್ತಾಳೆ. ಸ್ವಲ್ಪ ಸಮಯದ ನಂತರ ಅಭಿ ಮತ್ತೆ ನಿರಂಜನ್ ಸೂಪರ್ ಮಾರ್ಕೆಟ್ ಒಳಗೆ ಬರ್ತಾರೆ. ನಯನಾ, ಪ್ರಿಯಾ ತೇಜು ರಾಜ್ ಮೇಘ,, ಅವರಿಬ್ಬರನ್ನ ನೋಡ್ತಾರೆ.
ಪ್ರಿಯಾ,,, ಏನೋ ಹೇಳಿದ್ರು ಡಾಕ್ಟರ್.
ನಿರಂಜನ್,,, ಏನ್ ಹೇಳೋದು ಫೀವರ್ 104° ಇತ್ತು, ಇನ್ನು ಸ್ವಲ್ಪ ಜಾಸ್ತಿ ಆಗಿದ್ರೆ ಅಷ್ಟೇ ಕಥೆ. ಇಂಜೆಕ್ಷನ್ ಕೊಟ್ಟು ಟ್ಯಾಬ್ಲೆಟ್ಸ್ ಕೊಟ್ಟಿದ್ದಾರೆ. ತಿಂಡಿ ತಿಂದು ಮಾತ್ರೆ ನಾ ತಗೋಳೋಕೆ ಹೇಳಿದ್ರು.
ಪ್ರಿಯಾ,,,ಅಭಿ, ಕೈಗೆ ಮೆಲ್ಲಗೆ ಹೊಡೆದು ಕತ್ತೆ ಇಷ್ಟೊಂದು ಜ್ವರ ಇಟ್ಕೊಂಡು ಏನು ಇಲ್ಲಾ ಅಂತ ಇದ್ದಿಯಾ. ಬಾ ಅಂತ ಹೇಳಿ ಅವನ ಕೈ ಇಡ್ಕೊಂಡ್ ಕರ್ಕೊಂಡು ಹೋಗಿ ಕೌಂಟರ್ ಅಲ್ಲಿ ಇರೋ ಚೇರ್ ಮೇಲೆ ಕೂರಿಸಿ, ತಿಂಡಿ ತಿಂದ...
ನಿರಂಜನ್,, ಲೇ ನಿನಗೆ ಏನಾದ್ರು ಲೂಸ್ ಅ ಇಷ್ಟೊಂದು ಫೀವರ್ ಇಟ್ಕೊಂಡು ಯಾವನಾದ್ರು ಅಡುಗೆ ಮಾಡ್ತಾನ ತಿಂಡಿ ತಿಂದು ಬರ್ತಾನ.
ಪ್ರಿಯಾ,,, ತೇಜು ಕಡೆಗೆ ನೋಡಿ ಲೇ ನನ್ನ ಬ್ಯಾಗ್ ಅಲ್ಲಿ ಬಾಕ್ಸ್ ಇದೆ ತಗೋ ಬಾ ಅಂತ ಹೇಳಿ ಅವಳನ್ನ ಕಳಿಸ್ತಾಳೆ.
ಅಭಿ,,, ಲೇ ಬಿಡೆ ನನಗೆ ಏನು ಆಗಿಲ್ಲ, ಸುಮ್ನೆ ಓವರ್ ಮಾಡಬೇಡ್ರಿ ಅಂತ ಹೇಳಿ ಎದ್ದು ಸಿಸ್ಟಮ್ ಕಡೆಗೆ ಹೋಗ್ತಾನೆ.
ರಾಜ್,,, ಮಚ್ಚಾ ಓವರ್ ಮಾಡ್ತಾ ಇರೋದು ನೀನು ನಾವಲ್ಲ. ಇಷ್ಟೊಂದು ಜ್ವರ ಇಟ್ಕೊಂಡು ಕೆಲಸ ಮಾಡೋ ಅವಶ್ಯಕತೆ ಇದೆಯಾ ಅಂತ ಕೇಳ್ತಾನೆ..
ಅಭಿ,,, ರಾಜ್ ಕಡೆಗೆ ಒಂದು ವಾರ್ನಿಂಗ್ ಲುಕ್ ಕೊಡ್ತಾನೆ.
ರಾಜ್,,, ಮಚ್ಚಾ ಈ ಲುಕ್ ನಾ ನಾವು ಕೊಡ್ತೀವಿ ಸರಿನಾ. ನೀನೇನು ಕೆಲಸ ಮಾಡೋಕೆ ಹೋಗಬೇಡ ನಾವ್ ನೋಡ್ಕೋತೀವಿ ನೀನು ರೂಮ್ ಹೋಗಿ ರೆಸ್ಟ್ ಮಾಡು ಹೋಗು.
ನಿರಂಜನ್,,, ಅವನ ರೂಮ್ ಅಲ್ಲಿ ಅವನನ್ನ ನೋಡ್ಕೊಳ್ಳೋಕೆ ಯಾರೋ ಇದ್ದಾರೆ. ಇರೋದು ನಾವೇ ಅಲ್ಲಿ ಗೆ ಹೋದಮೇಲೆ ಮತ್ತೆ ಜ್ವರ ಬಂದ್ರೆ, ನಮ್ ಮುಂದೇನೆ ಏನು ಇಲ್ಲಾ ಅಂದವನು ಅಲ್ಲಿಗೆ ಹೋದಮೇಲೆ ಸತ್ರೆ ಸಾಯೋಣ ಬಿಡು ಅಂತ ಹಾಗೇ ಇದ್ರು ಇದ್ದು ಬಿಡ್ತಾನೆ.
ಪ್ರಿಯಾ,,, ತು ಏನೋ ಮಾತಾಡ್ತೀಯಾ ಬಿಡ್ತು ಅನ್ನೋ. ಅವನು ಎಲ್ಲೂ ಹೋಗೋದು ಬೇಡ ಇಲ್ಲೇ ಇರಲಿ, ಅಂತ ಹೇಳ್ತಾಳೆ. ಅಷ್ಟರಲ್ಲಿ ತೇಜು ಟಿಫನ್ ಬಾಕ್ಸ್ ನಾ ತಗೋ ಬಂದು ಪ್ರಿಯಾ ಕೈಗೆ ಕೊಡ್ತಾಳೆ.
ಪ್ರಿಯಾ ಬಾಕ್ಸ್ ನಾ ಇಸ್ಕೊಂಡು ಅಭಿ ಕಡೆಗೆ ನೋಡ್ತಾ ತಗೋ ತಿಂಡಿ ತಿನ್ನು ಅಂತ ಹೇಳ್ತಾಳೆ.
ಅಭಿ,,, ನನಗೆ ಏನು ಬೇಡ, ಹಸಿವಿಲ್ಲ.
ಪ್ರಿಯಾ,,, ಕೋಪದಿಂದ ಇದು ಯಾಕೋ ಓವರ್ ಆಯ್ತು ಅಂತ ಅವಳೇ ಬಾಕ್ಸ್ ನಾ ಓಪನ್ ಮಾಡಿ ಕೈ ತುತ್ತು ಮಾಡಿ ತಿನ್ನಿಸೋಕೆ ಕೈ ಮುಂದೆ ಮಾಡ್ತಾಳೆ.
ಅಭಿ,,, ಲೇ ಹೇಳಿದೆ ಅಲ್ವಾ ನನಗೆ ಬೇಡ ಅಂತ ಸುಮ್ನೆ ಇರು.
ಪ್ರಿಯಾ,,, ಒಂದು ಕೈಲಿ ಇದ್ದಾ ಬಾಕ್ಸ್ ನಾ ಪಕ್ಕಕ್ಕೆ ಇಟ್ಟು ಅಭಿ ನಾ ಎಳೆದು ಚೇರ್ ಮೇಲೆ ಕೂರಿಸಿ, ನಿನ್ ಹೇಳಿದ ತಕ್ಷಣ ಭಯ ಬಿದ್ದು ಸೈಲೆಂಟ್ ಆಗಿ ಇರೋಕೆ ನಾನೇನು ನಿರಂಜನ್ ಅಲ್ಲ ರಾಜ್ ಅಲ್ಲ. ಈ ಕೋಪ ಎಲ್ಲಾ ಅವರ ಹತ್ರ ಇಟ್ಕೋ ನನ್ನ ಹತ್ತಿರ ಅಲ್ಲ. ಇವಾಗ ಮುಚ್ಕೊಂಡು ತಿನ್ನು ಅಂತ ಹೇಳಿ ತಿನ್ನಿಸೋಕೆ ಹೋಗ್ತಾಳೆ.
ಅಭಿ,,, ಪ್ರಿಯಾ ಮುಖ ನಾ ನೋಡ್ತಾನೆ. ಅವಳ ಮಾತಲ್ಲಿ ಕೋಪ ಇದ್ರು ಕಣ್ಣಲ್ಲಿ ಕಣ್ಣೀರು ತುಂಬಿ ಕೊಂಡು ಇರೋದನ್ನ ನೋಡಿ, ಮತ್ತೆ ಏನು ಮಾತನಾಡದೆ ತಿನ್ನೋಕೆ ಶುರು ಮಾಡ್ತಾನೆ.
ಅಭಿ,,, ನಾನ್ ತಿಂತೀನಿ ಕೊಡು ಅಂತಾನೆ.
ಪ್ರಿಯಾ,,, ಇದನ್ನ ನಾನು ಕೊಟ್ಟಾಗಲೇ ಮಾಡಿದ್ದಿದ್ರೆ ನಿನಗೆ ಕೊಡ್ತಾ ಇದ್ದೆ ಬಾಕ್ಸ್ ನಾ ಇವಾಗ ಅ ಚಾನ್ಸ್ ಇಲ್ಲಾ ತಿನ್ನಿಸ್ತೀನಿ ತಿನ್ನು ಅಂತ ಹೇಳಿ ಮತ್ತೆ ಕೈ ತುತ್ತು ಮಾಡಿ ತಿನ್ನಿಸ್ತಾಳೆ.
ಅಭಿ ಬೇರೆ ದಾರಿ ಇಲ್ಲದೆ ತಿಂತಾನೆ.
ಅಲ್ಲೇ ನಿಂತಿದ್ದ ನಯನಾ ಅದನ್ನೆಲ್ಲಾ ಗಮನಿಸ್ತಾ ಇದ್ದು ಬಿಡ್ತಾಳೆ. ಅಭಿ ಒಂದು ಸರಿ ಕೂಡ ಅವಳ ಕಡೆಗೆ ತಿರುಗಿ ನೋಡೋದು ಇಲ್ಲಾ. ಅಲ್ಲಿ ನಯನಾ ಇದ್ದಾಳೆ ಅನ್ನೋದು ಕೂಡ ಅವನಿಗೆ ಗೊತ್ತಿಲ್ಲ. ನಯನಾ ಗೆ ಪ್ರಿಯಾ ತುಂಬಾ ಹಳೆ ಪರಿಚಯ. ಕಾಲೇಜ್ ಫ್ರೆಂಡ್ ಕೂಡ ಅವಳಿಗೆ, ಅವಳು ಯಾವ ಹುಡುಗನ ಹತ್ತಿರ ಇಷ್ಟು ಕ್ಲೋಸ್ ಆಗಿ ಫ್ರೀ ಆಗಿ ಈ ರೀತಿ ಕೇರ್ ಮಾಡೋದನ್ನ ನೋಡಲೇ ಇಲ್ಲಾ. ಇವಾಗ ಪ್ರಿಯಾ ಅಭಿ ಮೇಲೆ ಇಷ್ಟೊಂದು ಕೇರ್ ತೋರಿಸ್ತಾ ಇರೋದನ್ನ ನೋಡ್ತಾಳೆ. ಅವಳ ಕಣ್ಣಲ್ಲಿ ಅಭಿ ಮೇಲೆ ಒಂದು ರೀತಿ ಫೀಲಿಂಗ್ ಇರೋದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ಇಷ್ಟು ದಿನ ಅಭಿ ಅಂದ್ರೇನೆ ದ್ವೇಷ ಮಾಡ್ತಾ ಇದ್ದವಳು ಈ ಸನ್ನಿವೇಶ ನಾ ನೋಡಿ. ಅವಳ ಮನಸಲ್ಲಿ ಸಾವಿರ ಪ್ರಶ್ನೆ ಹುಟ್ಟಿಕೊಳ್ಳೋಕೆ ಶುರು ಮಾಡುತ್ತೆ. ಅವನ ಮೇಲೆ ಎಷ್ಟೇ ದ್ವೇಷ ಇರಲಿ. ಅದ್ರೆ ಅವನು ತಾಳಿ ಕಟ್ಟಿದ ಗಂಡ, ಅವಳ ಕತ್ತಲಿ ಇದ್ದಾ ಮಾಂಗಲ್ಯ ಅವಳ ಮನಸ್ಸಿಗೆ ಹೇಳ್ತಾ ಇದೆ ಅವನು ನಿನ್ನ ಗಂಡ ನಿನ್ನವನು ನಿನ್ನವನು ಅಂತ. ನಯನಾ ಗೆ ಅಲ್ಲಿ ಇರೋದಕ್ಕೆ ಆಗಲಿಲ್ಲ, ಅಲ್ಲಿಂದ ಸೀದಾ ಆಫೀಸ್ ರೂಮ್ ಕಡೆಗೆ ಹೋಗಿ ಬಿಡ್ತಾಳೆ.
ಪ್ರಿಯಾ ಅಭಿ ತಿಂಡಿ ತಿನ್ನಿಸಿ, ಕೈ ತೊಳೆದು ಕೊಂಡು ಬರ್ತೀನಿ ಟ್ಯಾಬ್ಲೆಟ್ ತಗೋ ಅಂತ ಹೇಳಿ ಹೋಗ್ತಾಳೆ.
ರಾಜ್,,, ಅಭಿ ಗೆ ಕೈಗೆ ಟ್ಯಾಬ್ಲೆಟ್ ಕೊಡ್ತಾ, ನಮ್ಮನ್ನ ಬೆದರಿಸೋ ಹಾಗೇ ಅನ್ಕೊಂಡ ಪ್ರಿಯಾ ನಾ ಬೆದರಿಸೋದು. ಅಂತ ಹೇಳಿ ನಗ್ತಾನೇ.
ನಿರಂಜನ್,,, ಮಚ್ಚಾ ಜಾಸ್ತಿ ಮಾಡಬೇಡ, ಗೊತ್ತಲ್ಲ ರಿಟರ್ನ್ ಹೇಗೆ ಕೊಡ್ತಾನೇ ಅಂತ.
ರಾಜ್,,, ನಗ್ತಾ ಪ್ರಿಯಾ ಇದ್ದಾಳೆ ನೋಡ್ಕೋತಾಳೆ ಬಿಡೋ ಮಚ್ಚಾ ಅಂತ ಹೇಳಿ ಮತ್ತೆ ನಗ್ತಾನೇ.
ಮೇಘ,,, ಹಾಗೇ ಅನ್ಕೋ ಬೇಡ್ವೊ, ಇಬ್ರು ಸೇರಿ ನಿನ್ನ ತಿಥಿ ನಾ ಮಾಡಿದ್ರು ಮಾಡಿ ಬಿಡ್ತಾರೆ.
ರಾಜ್,,, ಹೌದ ಸಂತೋಷ ಹೋಗಿ ನಿನ್ನ ಕೆಲಸ ನೋಡ್ಕೋ ಹೋಗೆ.
ಮೇಘ,,, ಕೋಪದಿಂದ ಮಗನೆ ಬಾ ನಿನಗೆ ಇದೆ ಅಂತ ಹೇಳಿ ವರ್ಕ್ ಮಾಡೋ ಕಡೆಗೆ ಹೋಗ್ತಾಳೆ.
ಪ್ರಿಯಾ,,, ಕೌಂಟರ್ ಗೆ ಬರ್ತಾ ಅಭಿ ನೀನು ರೆಸ್ಟ್ ತಗೋ ನಾವ್ ನೋಡ್ಕೋತೀವಿ.
ನಿರಂಜನ್,,, ಹೌದು ಮಚ್ಚಾ ನಾವ್ ನೋಡ್ಕೋತೀವಿ ನೀನು ರೆಸ್ಟ್ ತಗೋ.
ಅಭಿ,,, ನಿರಂಜನ್ ಕಡೆಗೆ ನೋಡಿ ಮೊದಲು ಹೋಗಿ ಸ್ಟಾಕ್ ಅನ್ಲೋಡ್ ಮಾಡೋ ಕೆಲಸ ನೋಡೋಗೋ ಅಂತ ಹೇಳಿ ಬೈದು ಕಳಿಸಿ, ಕೌಂಟರ್ ಹತ್ತಿರ ಹೋಗಿ ಚೇರ್ ಮೇಲೆ ಕೂತ್ಕೋತಾನೆ.
ಪ್ರಿಯಾ ಕೂಡ ಅವನ ಪಕ್ಕದಲ್ಲಿ ಚೇರ್ ಹಾಕಿಕೊಂಡು ಇನ್ನೊಂದು ಕೌಂಟರ್ ಹತ್ತಿರ ಕೂತ್ಕೋತಾಳೆ.
ಆಫೀಸ್ ಅಲ್ಲಿ ಕುತ್ಕೊಂಡು ಏನೋ ಯೋಚ್ನೆ ಮಾಡ್ತಾ ಇದ್ದಾ ನಯನಾ ಮತ್ತೆ ಸಿಸಿಟಿವಿ ಕಡೆಗೆ ನೋಡ್ತಾಳೆ. ಟಿವಿ ಲಿ ಅಭಿ ಪ್ರಿಯಾ ನಾ ನೋಡಿ ಹಾಗೇ ನೋಡ್ತಾ. ಪ್ರಿಯಾ ಏನಾದ್ರು ಅಭಿ ನಾ ಲವ್ ಮಾಡ್ತಾ ಇದ್ದಾಳ ಅನ್ನೋ ಆಲೋಚನೆ ಗೆ ಬರ್ತಾಳೆ. ಅ ರೀತಿ ಆಲೋಚನೆ ಅವಳ ಮನಸ್ಸಿಗೆ ಬಂದಿದ್ದೆ, ಎಲ್ಲೋ ಭಯ ಆಗೋಕೆ ಶುರುವಾಯ್ತು. ಕೈ ಕಾಲು ನಡುಗೋಕೆ ಶುರು ಮಾಡಿದವು.
@@@@@@@@@@@@@@@@@@@@@@@@@