Abhinayanaa - 5 in Kannada Love Stories by S Pr books and stories PDF | ಅಭಿನಯನಾ - 5

The Author
Featured Books
  • वेदान्त 2.0 - भाग 19

       अध्याय 28 :Vedānta 2.0 𝓐𝓰𝓎𝓪𝓣 𝓐𝓰𝓎𝓪𝓷𝓲  -वर्ग धर्म संतुलन —...

  • उस बाथरूम में कोई था - अध्याय 5

    नदी तक जाने वाला रास्ता गाँव से थोड़ा बाहर निकलकर जंगल की ओर...

  • REBIRTH IN NOVEL

    एक कमरा है जहां सलीके से सामान रखा था वहां दो बेड रखे थे उसम...

  • उजाले की राह

    उत्तराखंड के छोटे से शहर कोटद्वार में अमन का बचपन एक साधारण...

  • Adhura sach...Siya

    ज़िंदगी में कभी-कभी ऐसी घटनाएँ घट जाती हैं जो हमारी अक़्ल और...

Categories
Share

ಅಭಿನಯನಾ - 5

     ಪ್ರಿಯಾ ಅಭಿ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾ ನಯನಾ ಗೆ ಒಂದು ರೀತಿ ಭಯ ಆಗೋಕೆ ಶುರುವಾಯ್ತು. ಅದ್ರೆ ಅದನ್ನೆಲ್ಲಾ ಕಂಟ್ರೋಲ್ ಮಾಡಿಕೊಳ್ಳೋಕೆ ಶುರು ಮಾಡಿದಳು. ಚೇರ್ ಗೆ ತಲೇನ ಹೊರಗಿಸಿಕೊಂಡು, ಕಣ್ ಮುಚ್ಚಿಕೊಂಡು ಯೋಚ್ನೆ ಮಾಡೋಕೆ ಶುರು ಮಾಡಿದಳು. ನಾನ್ ಯಾಕ್ ಅವರ ಬಗ್ಗೆ ಅಭಿ ಬಗ್ಗೆ ಇಷ್ಟೆಲ್ಲಾ ಯೋಚ್ನೆ ಮಾಡ್ತಾ ಇದ್ದೀನಿ. ರಾತ್ರಿ ನೇ ಅವನಿಗೆ ಅಷ್ಟೆಲ್ಲ ಹೇಳಿ ಈಗ ನಾನೆ, ಛೇ ಇಲ್ಲಾ ಯಾವುದೇ ಕಾರಣಕ್ಕೂ ಅವನು ನನ್ನ ಗಂಡ ಅಲ್ಲ, ಆಗೋದು ಇಲ್ಲಾ. ಆಗೋಕೆ ಸಾಧ್ಯ ಕೂಡ ಇಲ್ಲಾ. ನಾನೇನು ಅವನನ್ನ ಇಷ್ಟ ಪಟ್ಟು ಮದುವೆ ಆಗಿಲ್ಲ. ಅವನು ಕೂಡ ಅಷ್ಟೇ ಕೇವಲ ನನ್ನ ಮದುವೆ ಆಗಿದ್ದು ದುಡ್ಡಿಗೋಸ್ಕರ, ಹೌದು ದುಡ್ಡಿಗೋಸ್ಕರ ನೇ ಅಭಿ ನನ್ನ ಮದುವೆ ಆಗಿದ್ದು, ಅಪ್ಪ ನಾ ಹತ್ತಿರ ಮಾತಾಡಿದ್ದನ್ನ ನಾನೆ ಕೇಳಿದ್ದೀನಿ. ಅಂತ ದುಡ್ಡಿನ ದುರಾಸೆ ಇರೋ ಅವನು ನನಗೆ ಗಂಡ ಆಗೋಕೆ ಸಾಧ್ಯ ಇಲ್ಲಾ, ನನ್ನ ಮಗಳಿಗೆ ಅಪ್ಪ ಹಾಗೋ ಯೋಗ್ಯತೆ ಇಲ್ಲಾ, ಹೀಗೆ ಯೋಚ್ನೆ ಮಾಡ್ತಾ ಇದ್ದು ಬಿಡ್ತಾಳೆ.

  ಸ್ವಲ್ಪ ಸಮಯದ ನಂತರ ಡೋರ್ ಬಡಿದ ಶಬ್ದ ಆಗುತ್ತೆ. 

ನಯನಾ,,,, ಕಣ್ ಬಿಟ್ಟು ಡೋರ್ ಕಡೆಗೆ ನೋಡ್ತಾಳೆ ಪ್ರಿಯಾ.. ಬಾ ಪ್ರಿಯಾ.

ಪ್ರಿಯಾ,, ಕೆಲವೊಂದು ಪೇಪರ್ ಫೈಲ್ ಕೊಡ್ತಾ,  ನಯನಾ ಇದು ಇವತ್ತಿನ ಸ್ಟಾಕ್ ಬಂದ ಫೈಲ್, ನಿನ್ನ ಸೈನ್ ಬೇಕಾಗಿತ್ತು.

ನಯನಾ,,, ಹೌದ ಕೊಡು ಅಂತ ಹೇಳಿ ತೆಗೆದುಕೊಂಡು ಸೈನ್ ಮಾಡಿ ವಾಪಸ್ಸು ಕೈ ಗೆ ಕೊಡ್ತಾ. ಪ್ರಿಯಾ ನೀನು ಏನು ಅನ್ಕೋಳ್ಳೋಲ್ಲ ಅಂದ್ರೆ ನಿನ್ನ ಒಂದು ವಿಷಯ ಕೇಳ್ಳ?.

ಪ್ರಿಯಾ,,, ಹ್ಮ್ ಕೇಳು ನಯನಾ.

ನಯನಾ,,, ಅಭಿ ನಿನಗೆ ಎಷ್ಟು ದಿನದಿಂದ ಪರಿಚಯ, ಅಂದ್ರೆ ಅವನ ಜೊತೆಗೆ ಅಷ್ಟು ಕ್ಲೋಸ್ ಆಗಿ ಅಷ್ಟು ಕೇರ್ ಮಾಡೋದು ನೋಡಿ ಕೇಳಬೇಕು ಅಂತ ಅನ್ನಿಸ್ತು. ಅದು ಅಲ್ಲದೆ ನಿನ್ನ ಕಾಲೇಜ್ ಟೈಮ್ ಯಿಂದ ನೋಡ್ತಾ ಇದ್ದೀನಿ. ಯಾವ್ ಹುಡುಗನ ಜೊತೆಗೂ ಇಷ್ಟು ಕ್ಲೋಸ್ ಆಗಿ, ಈ ರೀತಿ ಇರೋದನ್ನ ನಾನು ನೋಡಲೇ ಇಲ್ಲಾ. ಸೋ ಅದಕ್ಕೆ ಕೇಳ್ದೆ.

ಪ್ರಿಯಾ,,, ನಗ್ತಾ ಅಭಿ ಇಲ್ಲಿಗೆ ಕೆಲಸಕ್ಕೆ ಬಂದ ಮೇಲೆ ಪರಿಚಯ ಆಗಿದ್ದು, ಮೊದಲು ಜಸ್ಟ್ ಹಾಯ್ ಬಾಯ್ ಅನ್ನೋ ತರಾನೇ ಇದ್ವಿ. ಬಟ್ ಏನೋ ಗೊತ್ತಿಲ್ಲ, ಅವನ ಕ್ಯಾರೆಕ್ಟರ್ ಗುಡ್ ಅನ್ನಿಸ್ತು, 2 ವರ್ಷ ಆಯ್ತು ಪರಿಚಯ ಆಗಿ, ಈಗ್ಲೂ ನನ್ನ ಹತ್ತಿರ ಎಷ್ಟು ಬೇಕೋ ಅಷ್ಟೇ ಮಾತಾಡ್ತಾನೆ, ನನ್ನ ಹತ್ತಿರಾನೆ ಅಲ್ಲ, ಮೇಘ, ತೇಜು ಹತ್ತಿರ ಕೂಡ. ಇನ್ನ ನಿರಂಜನ್ ರಾಜ್ ಹತ್ತಿರ ಅಂತು ಹೇಳೋದೇ ಬೇಡ, ಮೊದಲು ಮಾತಿಗೆ ಶುರುವಾದ ಅವರ ಪರಿಚಯ ಈಗ ಚಡ್ಡಿ ದೋಸ್ತ್ ಲೆವೆಲ್ ಗೆ ಹೋಗಿ ಬಿಟ್ಟಿದೆ. ಆದ್ರು ಅಭಿ ಅಂದ್ರೆ ಇಬ್ಬರಿಗೂ ಸ್ವಲ್ಪ ಭಯ. ಅವನ ಜೊತೆಗೆ ಟೈಮ್ ಸ್ಪೆಂಡ್ ಮಾಡ್ತಾ ಇದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ, ಸರ್ ಕೂಡ ಅಷ್ಟೇ ಅವನು ಬಂದ ಮೇಲೆ ಎಲ್ಲಾ ಕೆಲಸಾನು ಅವನನ್ನೇ ನೋಡ್ಕೊಳ್ಳೋಕೆ ಹೇಳಿ ಬಿಟ್ರು. ಅವನು ಕೂಡ ಅಷ್ಟೇ ನಂಬಿಕೆ ಯಿಂದ ಕೆಲಸ ಮಾಡ್ತಾ ಇದ್ದಾನೆ. ಬಟ್ ಏನೋ ಗೊತ್ತಿಲ್ಲ ಇಷ್ಟು ವರ್ಷ ದ ಪರಿಚಯ ದಲ್ಲಿ ಅವನ ಮೇಲೆ ಯಾವಾಗ ನನಗೆ ಇಷ್ಟ ಶುರುವಾಯ್ತೋ ಗೊತ್ತಿಲ್ಲ. ತುಂಬಾ ಇಷ್ಟ ಆಗೋಕೆ ಶುರು ಮಾಡಿದ.  ಒಂದು ರೀತಿ ಹೇಳಬೇಕು ಅಂದ್ರೆ ಪ್ರೀತಿ ನೇ ಶುರುವಾಗಿದೆ ಅವನ ಮೇಲೆ. ಬಟ್ ಹೇಳ್ಕೊಳ್ಳೋ ಧೈರ್ಯ ಇನ್ನು ಬರಲಿಲ್ಲಾ. ಒಂದು ಸರಿ ನಿರಂಜನ್ ಕೇಳಿದ ಯಾಕೋ ನಿನಗೆ ಗರ್ಲ್ಫ್ರೆಂಡ್ ಯಾರು ಇಲ್ವಾ ಅಂತ. ಅವನು ಹೇಳಿದ್ದು ಒಂದೇ ಮಾತು, ನಾನೆ ಕೇರ್ ಆಫ್ ಫುಟ್ಬಾತ್, ತಿಂಗಳು ಬಂತು ಅಂದ್ರೆ ಜೇಬಲ್ಲಿ ಒಂದು ರೂಪಾಯಿ ಇರೋದಿಲ್ಲ. ಅಂತ ಸ್ಥಿತಿ ಅಲ್ಲಿ ಇರೋ ನಾನು, ಗರ್ಲ್ಫ್ರೆಂಡ್ ನಾ ನೋಡ್ಕೊಬೇಕ ಅಂತ ಹೇಳಿದ . ಅವತ್ತು ನಾನು ತಮಾಷೆ ಗೆ ಹೇಳಿದ ಅನ್ಕೊಂಡೆ. ಬಟ್ ಅದು ನಿಜ, ಅವನ ಫ್ಯಾಮಿಲಿ ಪರಿಸ್ಥಿತಿ ಮೊದಲು ಅಷ್ಟೇನು ಚೆನ್ನಾಗಿ ಇರಲಿಲ್ಲ. ಸ್ವಲ್ಪ ಸಾಲ ಇದೆ ಅದನ್ನ ತೀರಿಸ್ತಾ ಇದ್ದಾನೆ ಈಗ್ಲೂ ಕೂಡ. ತಿಂಗಳಿಗೆ ಎರಡು ರಜೆ ತಗೋತಾನೆ. ಹೋಗಿ ಅಮ್ಮ ನಾ ನೋಡ್ಕೊಂಡ್ ಬರ್ತಾನೇ. ಇಂತ ಪರಿಸ್ಥಿತಿ ಅಲ್ಲಿ ಇರೋ ಅವನ ಹತ್ತಿರ ಹೋಗಿ ಪ್ರೀತಿ ಮಾಡ್ತಾ ಇದ್ದೀನಿ ಅಂದ್ರೆ ಒಪ್ಕೋತಾನ ಹೇಳು.  ಎಲ್ಲಿ ಹೋಗ್ತಾನೆ ಕಾಯ್ತಿನಿ,  ಅವನ ಪರಿಸ್ಥಿತಿ ಸರಿ ಹೋಗಲಿ ಆಮೇಲೆ ನಾನೆ ಅವನಿಗೆ ನನ್ನ ಪ್ರೀತಿ ವಿಷಯ ನಾ ಹೇಳ್ತಿನಿ. 

ನಯನಾ,,,, ಪ್ರಿಯಾ ಹೇಳಿದ್ದನ್ನ ಕೇಳಿ. ನಿನಗೆ ಅವನ ಫ್ಯಾಮಿಲಿ ಬಗ್ಗೆ ಗೊತ್ತಾ, ನೋಡಿದ್ದೀಯಾ ಅವರನ್ನ.

ಪ್ರಿಯಾ,,,, ನಾನ್ ನೋಡಿಲ್ಲ ನಿರಂಜನ್ ರಾಜ್ ನೋಡಿದ್ದಾರೆ, ಅವರೇ ಹೇಳಿದ್ದು. ಅವನ ಫ್ಯಾಮಿಲಿ ಬಗ್ಗೆ. ಅಮ್ಮ ಅಕ್ಕ ಇಬ್ಬರೇ ಇರೋದು. ಅಪ್ಪ ಕೆಲವು ವರ್ಷಗಳ ಹಿಂದೆ ಡೆತ್ ಆದ್ರು ಅಂತೇ. ಬ್ರದರ್ ಒಬ್ಬ ಇದ್ದಾನೆ ಅವನ ಲೈಫ್ ಅವನ ಫ್ಯಾಮಿಲಿ ಅವನು ಅಂತ ಇದ್ದು ಬಿಟ್ಟಿದ್ದಾರೆ ಅಂತೇ. 2 ವರ್ಷದ ಹಿಂದೆ ತಂಗಿ ಗೆ ಮದುವೆ ಮಾಡಿ ಕಳಿಸಿದ್ದಾನೆ. ಈಗ ಅವರ ಮನೇಲಿ ಇವನು ಅವರ ಅಮ್ಮ ಅವರ ಅಕ್ಕ ಮೂರು ಜನ ಅಷ್ಟೇ ಇರೋದು ಅಂತೇ. ಈ ಮಿಡ್ಲ್ ಕ್ಲಾಸ್ ಹುಡುಗರ ಲೈಫ್ ಒಂತರಾ ವಿಚಿತ್ರ ಕಣೆ. ಒಂದು ಏಜ್ ಬರೋವರೆಗೂ ಅಮ್ಮ, ಅಮ್ಮ ಅನ್ಕೊಂಡು ಅವರ ಜೊತೆಗೆ ಇದ್ದು  ಬಿಡ್ತಾರೆ. ಬಟ್ ಜವಾಬ್ದಾರಿ ಅನ್ನೋದು ಒಂದು ಸರಿ ಅವರ ಹೆಗಲು ಹತ್ತಿ ಬಿಟ್ರೆ ಅಷ್ಟೇ ಮುಗಿತು. ಅವರನ್ನೇ ಅವರು ಮರೆತು ದುಡಿಯೋಕೆ ಶುರು ಮಾಡಿ ಬಿಡ್ತಾರೆ. ನೀನೇ ನೋಡಿದೆ ಅಲ್ವಾ ಅಷ್ಟು ಜ್ವರ ಇಟ್ಟ್ಕೊಂಡು, ಕೆಲಸಕ್ಕೆ ಬಂದಿರೋದು. ಪಾಪ ಕಣೆ ಈ ಸ್ಥಿತಿ ಅಲ್ಲಿ ಅವರ ಅಮ್ಮ ಅವನನ್ನ ನೋಡಿದ್ರೆ ಎಷ್ಟು ನೋವು ಪಡ್ತಾ ಇದ್ರು. ಇವನನ್ನ ಈ ರೀತಿ ಕೆಲಸಕ್ಕೆ ಕಳಿಸ್ತಾ ಇದ್ರ ಹೇಳು. ಹಣ ನಾ ಇವತ್ತಲ್ಲ ನಾಳೆ ಸಂಪಾದನೆ ಮಾಡಬಹುದು. ಮೊದಲು ನೀನು ಹುಷಾರಾಗು ಅಂತ ಹೇಳ್ತಾ ಇದ್ರು. ನನಗೆ ಮೊದಲೇ ಗೊತ್ತಿದ್ರೆ ಕೆಲಸಕ್ಕೆ ಬರಬೇಡ ಅಂತ ಹೇಳಿ ನಿರಂಜನ್ ನಾ ಅವನ ಜೊತೆಗೆ ಹಾಸ್ಪಿಟಲ್ ಗೆ ಕಳಿಸ್ತಾ ಇದ್ದೆ.  ಇಂತ ಹುಡುಗರು ಸಿಗೋದು ಕಷ್ಟ ಕಣೆ. ಅವರ ಹತ್ತಿರ ದುಡ್ಡು ಅನ್ನೋದು ಒಂದು ಇರೋದಿಲ್ಲ ಅಷ್ಟು ಬಿಟ್ರೆ. ಅವರ ಲೈಫ್ ಅಲ್ಲಿ ಇರೋವರನ್ನ ತುಂಬಾ ಚೆನ್ನಾಗಿ ನೋಡ್ಕೋತಾರೆ. ನಿನಗೂ ಗೊತ್ತು ನಾನ್ ಕೂಡ ಮಿಡ್ಲ್ ಕ್ಲಾಸ್ ಯಿಂದ ಎಲ್ಲಾ ನೋಡ್ಕೊಂಡು ಬಂದವಳು. ಇವಾಗ ಸ್ವಲ್ಪ ಪರ್ವಾಗಿಲ್ಲ. ನಾನ್ ಕೂಡ ಅದೇ ರೀತಿ ಪ್ರಾಬ್ಲಮ್ ನಾ ಫೇಸ್ ಮಾಡಿ ಬಂದಿರೋದಕ್ಕೆ ಏನೋ ಅವನು ನನಗೆ ಇಷ್ಟು ಇಷ್ಟ ಆಗಿರೋದು. ನೋಡೋಣ ಅವನಿಗೆ ನನ್ನ ಪ್ರೀತಿ ನಾ ಹೇಳೋ ಟೈಮ್ ಯಾವಾಗ ಬರುತ್ತೆ ಏನೋ ಅಂತ.

ನಯನಾ ಪ್ರಿಯಾ ಹೇಳೋದನ್ನ ಕೇಳ್ತಾ ಏನೋ ಯೋಚ್ನೆ ಅಲ್ಲಿ ಇರೋದನ್ನ ನೋಡಿ,, ಪ್ರಿಯಾ,,, ನಯನಾ ಅಂತ ಕರೀತಾಳೆ. 

ನಯನಾ,, ವಾಸ್ತವಕ್ಕೆ ಬಂದು, ಸಾರೀ ಕಣೆ ನಿನ್ನ ಪರ್ಸನಲ್ ವಿಷಯ ಕೇಳಿದಕ್ಕೆ.

ಪ್ರಿಯಾ,,, ಸಾರೀ ಏನಕ್ಕೆ. ಎಷ್ಟೇ ಆದ್ರು ನಿನ್ ನನ್ನ ಫ್ರೆಂಡ್ ಕೇಳೋ ಅಧಿಕಾರ ಇದೆ ಸರಿ ನಾನ್ ಇನ್ನ ಬರ್ತೀನಿ ವರ್ಕ್ ಇದೆ ಅಂತ ಹೇಳಿ ಎದ್ದು ನಿಂತು ಹೋಗೋಕೆ ಹೋಗ್ತಾಳೆ..

ನಯನಾ,,, ಪ್ರಿಯಾ ಫ್ರೆಂಡ್ ಆಗಿ ನನ್ನದೊಂದು ಸಲಹೆ. 

ಪ್ರಿಯಾ,,, ಹ್ಮ್ ಏನ್ ಹೇಳು.

ನಯನಾ,,, ಪ್ರೀತಿ ಅಂತ ಲೈಫ್ ನಾ ಹಾಳು ಮಾಡ್ಕೋಬೇಡ. ಎಲ್ಲರೂ ನೋಡೋ ಅಷ್ಟು ಒಳ್ಳೆಯವರಾಗಿ ಕಾಣೋದಿಲ್ಲ..

ಪ್ರಿಯಾ,,, ನಗ್ತಾ,,, 2 ಇಯರ್ಸ್  ಅವನ ಪಕ್ಕದಲ್ಲೇ ನಿಂತು ವರ್ಕ್ ಮಾಡ್ತಾ ಇದ್ದೀನಿ. ಒಂದು ಸರಿ ಕೂಡ ತಮಾಷೆಗೆ ನನ್ನ ಕೈ ಇಡ್ಕೊಂಡವನು ಅಲ್ಲ. ನನ್ನ ಬೇರೆ ದೃಷ್ಟಿ ಯಿಂದ ನೋಡಿದವನು ಅಲ್ಲ. ಅವನ ಮೇಲೆ ನನಗೆ ನನಗಿಂತ ಜಾಸ್ತಿ ನಂಬಿಕೆ ಇದೆ. ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾಳೆ.

ನಯನಾ,,, ಪ್ರಿಯಾ ಹೋದಮೇಲೆ ಅಭಿ ನಾ ನೆನೆಸ್ಕೊಂಡು ಏನ್ ಡ್ರಾಮಾ ಮಾಡ್ತೀಯೋ. ನನ್ನ ಲೈಫ್ ಗೆ ವಿಲನ್ ಆಗಿ ಅವಳ ಲೈಫ್ ಹೀರೋ ಆಗಿ ಬಿಟ್ಟೆ. ಏನೋ ಪಾಪ ಮಾಡಿದ್ದೆ ನಿನಗೆ ನಾನು. ನನ್ನ ಲೈಫ್ ನಾ ಈ ರೀತಿ ಮಾಡಿ ಇಟ್ಟೆ. ನೋಡ್ತೀನಿ ಅವಳ ಲೈಫ್ ಅಲ್ಲಿ ಎಷ್ಟು ದಿನ ಅಂತ ಹೀರೋ ಆಗಿ ಇರ್ತೀಯ ಅಂತ, ಒಂದಲ್ಲ ಒಂದು ದಿನ ನಿನ್ನ ನಿಜವಾದ ಮುಖವಾಡ ಅವಳಿಗೆ ಗೊತ್ತಾಗುತ್ತೆ. ಅಂತ ಅನ್ಕೊಂಡು ಅವಳ ಕೆಲಸ ಮಾಡೋಕೆ ಶುರು ಮಾಡ್ತಾಳೆ. 

 ####

ಅನಾ,,,, ಅಜ್ಜಿ ಪಪ್ಪಾ ಇವತ್ತು ಮನೆಗೆ ಬರೋದಿಲ್ವ ಅಂತ ಕೇಳ್ತಾಳೆ.

ಸುಭದ್ರ,,, ಪಪ್ಪಾ ಗೆ ಜಾಸ್ತಿ ವರ್ಕ್ ಇದೆ ಅಂತ ಅನ್ನಿಸುತ್ತೆ ಅದಕ್ಕೆ ಬಂದಿಲ್ಲ. ತಾತ ಬಂದಮೇಲೆ ಫೋನ್ ಮಾಡೋಕೆ ಹೇಳ್ತಿನಿ ಸರಿನಾ. 

ಅನಾ,,,, ಹ್ಮ್ ಸರಿ ಅಜ್ಜಿ.

ಸಂಜೆ ಹೊರಗಡೆ ಹೋಗಿದ್ದ ವಿಶ್ವನಾಥ್ ಮನೆಗೆ ಬರ್ತಾರೆ. 

ಸುಭದ್ರ ಗಂಡನಿಗೆ ಕುಡಿಯೋದಕ್ಕೆ ನೀರನ್ನ ಕೊಟ್ಟು ಹೋದ ಕೆಲಸ ಏನಾಯ್ತು.

ವಿಶ್ವ,,, ನೀರು ಕುಡಿದು ಹೋದ ಕೆಲಸ ಚೆನ್ನಾಗಿ ಆಯ್ತು. ಅಭಿ, ನಯನಾ ಸೂಪರ್ ಮಾರ್ಕೆಟ್ ಗೆ ಹೋದ್ರ.

ಸುಭದ್ರ,,, ಅಭಿ ಏನೋ ಗೊತ್ತಿಲ್ಲ. ನಯನಾ ಹೋದ್ಲು.

ವಿಶ್ವ,,,, ಗೊತ್ತಿಲ್ಲ ಅಂದ್ರೆ ಏನ್ ಅರ್ಥ 

ಸುಭದ್ರ,,, ಅಭಿ ರಾತ್ರಿ ಮನೆಗೆ ಬರಲಿಲ್ಲ. ನಯನಾ ನಾ ಕೇಳೋಣ ಅಂದ್ರೆ ಅವನ ಹೆಸರು ಕೇಳಿದ್ರೇನೇ ಇವಳಿಗೆ ಆಗೋದಿಲ್ಲ. ಅದು ಅಲ್ಲದೆ ಅನಾ ಪಪ್ಪಾ ಇವತ್ತು ಕೂಡ ಮನೆಗೆ ಬರೋದಿಲ್ವ ಅಂತ ಕೇಳಿದ್ಲು.

ವಿಶ್ವ,,, ಸರಿ ಕಾಫಿ ಕೊಡು ನಾನು ಸೂಪರ್ ಮಾರ್ಕೆಟ್ ಗೆ ಹೋಗಿ ನೋಡ್ತೀನಿ. 

ಸುಭದ್ರ,,, ಸರಿ ರಿ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋಗ್ತಾರೆ.

ವಿಶ್ವನಾಥ್ ಕಾಫಿ ಕುಡಿದು ಹೆಂಡತಿ ಗೆ ಹೇಳಿ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾರೆ. 

#####

8 ಗಂಟೆ ಸಮಯಕ್ಕೆ ಸರಿಯಾಗಿ ವಿಶ್ವನಾಥ್ ಸೂಪರ್ ಮಾರ್ಕೆಟ್ ಗೆ ಬರ್ತಾರೆ. ಅಭಿ ಪ್ರಿಯಾ ತೇಜು ಬಿಲ್ಲಿಂಗ್ ಕೌಂಟರ್ ಅಲ್ಲಿ ಬ್ಯುಸಿ ಆಗಿ ಇರ್ತಾರೆ. ಅಭಿ ನಾ ನೋಡ್ತಾರೆ ಸ್ವಲ್ಪ ಆಕ್ಟಿವ್ ಆಗಿ ಇರೋ ಹಾಗೇ ಕಾಣಿಸೋದಿಲ್ಲ. ಅಭಿ ಹತ್ತಿರ ಹೋಗಿ. ಅಭಿ ಯಾಕ್ ಡಲ್ ಇದ್ದಿಯಾ ಏನಾಯ್ತು ಹುಷಾರಾಗಿ ಇದ್ದಿಯಾ.

ಅಭಿ,,, ಸರ್ ನಾ ನೋಡಿ, ಸರ್ ನಾನ್ ಆರಾಮಾಗಿ ಇದ್ದೀನಿ.

ಪ್ರಿಯಾ,,, ಇಲ್ಲಾ ಸರ್ ಬೆಳ್ಳಿಗೆ ಲೇಟ್ ಆಗಿ ಬಂದ ಸ್ವಲ್ಪ ಡಲ್ ಇದ್ದಾ, ಯಾಕೆ ಅಂತ ಕೇಳಿದ್ರೆ. ಏನು ಇಲ್ಲಾ ಅಂತ ಹೇಳಿದ. ಡೌಟ್ ಬಂದು ಮೈ ಮುಟ್ಟಿ ನೋಡಿದೆ ಫುಲ್ ಜ್ವರ ಬಂದಿತ್ತು. ಆಮೇಲೆ ನಿರಂಜನ್ ಜೊತೆಗೆ ಹಾಸ್ಪಿಟಲ್ ಗೆ ಕಳಿಸಿದೆ. ಹಾಸ್ಪಿಟಲ್ ಯಿಂದ ಬಂದಮೇಲೆ ರೂಮ್ ಗೆ ಕಳಿಸೋಣ ಅಂದ್ರೆ ಮತ್ತೆ ಜ್ವರ ಬಂದ್ರೆ ಅಂತ ಇಲ್ಲೇ ಇರೋಕೆ ಹೇಳಿದೆ. ಸುಮ್ನೆ ರೆಸ್ಟ್ ಮಾಡೋ ಅಂದ್ರೆ ನನ್ನಾ ಮಾತು ಕೇಳ್ತಾನೆ ಇಲ್ಲಾ.

ವಿಶ್ವನಾಥ್,,, ಏನ್ ಅಭಿ ನೀನು ಅರೋಗ್ಯಕಿಂತ ಕೆಲಸಾನೇ ಮುಖ್ಯ ಆಯ್ತಾ ನಿನಗೆ. ಅಂತ ಹೇಳಿ ಪ್ರಿಯಾ ಕಡೆಗೆ ನೋಡಿ ಪ್ರಿಯಾ ಹೇಗಿದ್ರು ನೀನು ಮನೆಗೆ ಹೋಗೋ ಟೈಮ್ ಆಯ್ತು. ಅಭಿ ಜೊತೆಗೆ ಹಾಸ್ಪಿಟಲ್ ಗೆ ಹೋಗಿ ಚೆಕ್ ಮಾಡಿಸಿ ನನಗೆ ಕಾಲ್ ಮಾಡಿ.  ನೀನು ಮನೆಗೆ ಹೋಗು.

ಪ್ರಿಯಾ,,,, ಸರಿ ಸರ್.

ಅಭಿ,,,, ಸರ್ ನಾನ್ ಈಗ ಆರಾಮಾಗಿ ಇದ್ದೀನಿ. 

ವಿಶ್ವನಾಥ್,,,, ಅಭಿ ಅದೆಲ್ಲಾ ನೀನು ಹೇಳಬೇಡ ಓಕೆ ಮೊದಲು ಪ್ರಿಯಾ ಜೊತೆಗೆ ಹಾಸ್ಪಿಟಲ್ ಹೋಗು. ನಿನ್ ಫ್ರೆಂಡ್ಸ್ ಜೊತೆಗೆ ಹೋದ್ರೆ ಅವರಿಗೆ ಭಯ ಬೀಳಿಸಿ ಏನೋ ಒಂದು ಹೇಳ್ತಿಯ. ಮೊದಲು ಹೋಗು. ಪ್ರಿಯಾ ನಿನ್ನ ಬ್ಯಾಗ್ ತಗೊಂಡು ಕರ್ಕೊಂಡು ಹೋಗು. ಲೇಟ್ ಏನಾದ್ರು ಅದ್ರೆ ನನಗೆ ಕಾಲ್ ಮಾಡಿ ಹೇಳು. ಯಾರನ್ನಾದ್ರೂ ಕಳಿಸ್ತೀನಿ.

ಪ್ರಿಯಾ ಸರಿ ಸರ್ ಅಂತ ಹೇಳಿ ಅವಳ ಬ್ಯಾಗ್ ತಗೋ ಬರೋದಕ್ಕೆ ಹೋಗ್ತಾಳೆ.

5 ನಿಮಿಷ ದಲ್ಲಿ ಬ್ಯಾಗ್ ತಗೊಂಡು ಕೌಂಟರ್ ಹತ್ತಿರ ಬರ್ತಾಳೆ.

ವಿಶ್ವನಾಥ್,,, ಅಭಿ ಹೋಗು. ಹಾಸ್ಪಿಟಲ್ ಅಲ್ಲಿ ತೋರಿಸಿಕೊಂಡು ಮನೆಗೆ ಹೋಗು ನಾನ್ ಕ್ಲೋಸ್ ಮಾಡ್ಕೊಂಡು ಬರ್ತೀನಿ ಅಂತ ಹೇಳಿ ಅಭಿ ನಾ ಪ್ರಿಯಾ ಜೊತೆಗೆ ಕಳಿಸಿ ಕೊಟ್ಟು. ನಿರಂಜನ್ ಗೆ ರಾಜ್ ಗೆ ಕೌಂಟರ್ ನೋಡ್ಕೊಳ್ಳೋಕೆ ಹೇಳ್ತಾ. ಆಫೀಸ್ ಕಡೆಗೆ ಹೋಗ್ತಾರೆ.

ಆಫೀಸ್ ಒಳಗೆ ನಯನಾ ಏನೋ ವರ್ಕ್ ಮಾಡ್ತಾ ಇರೋದನ್ನ ನೋಡಿ. ನಯನಾ ಅಭಿ ಗೆ ಹುಷಾರಿಲ್ಲ ಅಂತ ನಿನಗೆ ಗೊತ್ತಿಲ್ವಾ ಅಂತ ಕೇಳ್ತಾರೆ 

ನಯನಾ,,, ಅಪ್ಪನ ಕಡೆಗೆ ನೋಡ್ತಾ, ಅವನ ಬಗ್ಗೆ ಅವನ ಆರೋಗ್ಯದ ಬಗ್ಗೆ ತಿಳ್ಕೊಂಡು ನನಗೆ ಏನು ಬೇಕಾಗಿಲ್ಲ. 

ವಿಶ್ವ,,,, ಏನು ನಿನಗೆ ಅವನ ಬಗ್ಗೆ ತಿಳ್ಕೊಂಡು ಏನು ಬೇಕಾಗಿಲ್ವಾ. ಅವನು ನಿನ್ನ ಗಂಡ ನಿನಗೆ ತಾಳಿ ಕಟ್ಟಿದವನು. ನಿನಗೆ ಒಂದು ಚೂರು ಮಾನವೀಯತೆ ಇಲ್ವಾ. ಅಲ್ಲ ಪಾಪ ಅವನು ಬೆಳಿಗ್ಗೆ ಯಿಂದ ಜ್ವರ ಇದ್ದು ಕೆಲಸ ಮಾಡ್ತಾ ಇದ್ದಾನೆ. ಹೇಗಿದ್ದಾನೆ ತಿಂದ್ನ ಇಲ್ವಾ ಅನ್ನೋ ಕೇಳೋ ಚೂರು ಕಾಳಜಿ ಕೂಡ ಇಲ್ಲಾ ಅಂದ್ರೆ ಛೇ. 

ನಯನಾ,,, ಕೋಪದಿಂದ ಅಪ್ಪ ನಾನೇನು ಅವನನ್ನ ಇಷ್ಟ ಪಟ್ಟು ಮದುವೆ ಆಗಿ ಈ ತಾಳಿ ನಾ ಕಟ್ಟಿಸಿ ಕೊಂಡಿಲ್ಲ. ಅಂತ ಹೇಳಿ ತಾಳಿ ನಾ ತೆಗೆದು ತೋರಿಸ್ತಾ. ಇದು ನೀನು ಅಮ್ಮ ಬಲವಂತ ಮಾಡಿದಕ್ಕೆ ನಾನು ನನ್ನ ಮನಸನ್ನ ಸಾಯಿಸಿ ಕೊಂಡು ಅವನ ಕೈಲಿ ಈ ತಾಳಿನ ಕಟ್ಟಿಸಿ ಕೊಂಡೆ ಅಷ್ಟೇ. ಅವನು ಕೂಡ ಏನು ನನ್ನ ಮೇಲೆ ಪ್ರೀತಿ ಇದ್ದು ಈ ತಾಳಿನ ನಾ ನನ್ನ ಕುತ್ತಿಗೆಗೆ ಕಟ್ಟಿಲ್ಲ. ನಿಮ್ ಹತ್ತಿರ ದುಡ್ಡು ತಗೊಂಡು ನನಗೆ ಈ ತಾಳಿ ನಾ ಕಟ್ಟಿರೋದು. ಅಂತವನು ಇದ್ರು ಒಂದೇ ಸತ್ರು ಒಂದೇ ನನ್ನ ಪಾಲಿಗೆ.

ವಿಶ್ವನಾಥ್,,, ಮಗಳ ಮಾತನ್ನ ಕೇಳಿ ಕೋಪಗೊಂಡು, ಅವಳಿಗೆ ಹೊಡಿಯೋಕೆ ಹೋಗ್ತಾರೆ. ಬಟ್ ಕೋಪ ನಾ ತಡ್ಕೊಂಡು, ಛೇ ನಿನ್ನ ನನ್ನ ಮಗಳು ಅಂತ ಹೇಳಿ ಕೊಳ್ಳೋಕೆ ನಾಚಿಕೆ ಆಗ್ತಾ ಇದೆ. ಒಂದಂತೂ ಸತ್ಯ ತಿಳ್ಕೊ. ಇವತ್ತು ಏನು ನನ್ನ ಅಪ್ಪ ಅನ್ಕೊಂಡು ನನ್ನ ಮುಂದೆ ಹೀಗೆ ಮಾತಾಡ್ತಾ ಇದ್ದಿಯೊ. ನಿನ್ನ ಅಮ್ಮ ಇವತ್ತಿಗೂ ಮುತ್ತೈದೆ ಆಗಿ ಇದ್ದಾಳೆ ಅಂದ್ರೆ ಅದು ಅವನಿಂದ. ಸತ್ತೋಗಿದ್ರು ಲೆಕ್ಕ ಇಲ್ಲಾ ಅಂತೇ. ಏನು ದುಡ್ಡು ತಗೊಂಡು ನಿನಗೆ ತಾಳಿ ಕಟ್ಟಿದ್ನ. ನಿನಗೆ ಒಂದು ವಿಷಯ ಗೊತ್ತಾ. ಅವನು ನನ್ನ ಹತ್ತಿರ ದುಡ್ಡು ತಗೊಂಡಿದ್ದು ನಿಜ, ಅದ್ರೆ ಅದು ನಿನಗೆ ತಾಳಿ ಕಟ್ಟೋಕೆ ಅಲ್ಲ. ನಾನ್ ಅವನಿಗೆ ಕೊಟ್ಟ ದುಡ್ಡನ್ನ ನನಗೆ ಯಾವಾಗಲೋ ವಾಪಸ್ಸು ಕೊಟ್ಟು ಬಿಟ್ಟ. ಈಗ ಅವನು ಮನೇಲಿ ಇರೋದು ನನಗೋಸ್ಕರನೋ ಇಲ್ಲಾ ನಿನಗೋಸ್ಕರನೋ ಅಲ್ಲ ನನ್ನ ಮೊಮ್ಮಗಳು ಅನಾ ಗೋಸ್ಕರ, ಅವಳಿಗೋಸ್ಕರ ಮಾತ್ರ. ಹೋಗಿ ಹೋಗಿ ಇವೆಲ್ಲಾ ನಿನಗೆ ಹೇಳ್ತಿನಿ ಅಲ್ವಾ ನನಗೆ ಬುದ್ದಿ ಇಲ್ಲಾ. ಅಂತ ಹೇಳಿ ಅಲ್ಲಿಂದ ಹೊರಟು ಬಿಡ್ತಾರೆ.

ಅಪ್ಪ ಹೇಳಿದ್ದನ್ನ ಕೇಳಿ ನಯನಾ ಚೇರ್ ಮೇಲೆ ಕೂತು ಬಿಡ್ತಾಳೆ. ಈಗ ಅವಳ ಮನಸಲ್ಲಿ ಅಭಿ ಮೇಲೆ ಇದ್ದಾ ಅಭಿಪ್ರಾಯಕ್ಕೆ ಬೆಂಕಿ ಬಿದ್ದ ಹಾಗೇ ಆಗುತ್ತೆ. ಯೋಚ್ನೆ ಮಾಡ್ತಾ ಹಾಗೇ ಇದ್ದು ಬಿಡ್ತಾಳೆ. 

#####

ಅಭಿ ಬೈಕ್ ಅಲ್ಲಿ ಇಬ್ಬರು ಹಾಸ್ಪಿಟಲ್ ಗೆ ಬರ್ತಾರೆ. ಡಾಕ್ಟರ್ ಅಭಿ ನಾ ಚೆಕ್ ಮಾಡಿ. ಫೀವರ್ ಇದೆ, ಸ್ವಲ್ಪ ಹುಷಾರು ಕೆಲಸ ಏನು ಮಾಡೋಕೆ ಹೋಗಬೇಡಿ. ಕೊಟ್ಟಿರೋ ಟ್ಯಾಬ್ಲೆಟ್ಸ್ ನಾ ಟೈಮ್ ಸರಿಯಾಗಿ ತಗೋಳಿ ಅಂತ ಹೇಳಿ ಇಬ್ಬರನ್ನು ಕಳಿಸ್ತಾರೆ. 

ಹಾಸ್ಪಿಟಲ್ ನಿಂದ ಹೊರಗೆ ಬರ್ತಾರೆ ಅಭಿ ಪ್ರಿಯಾ.

ಅಭಿ,,,, ನಡಿ ನಿನ್ನ ಮನೆ ಹತ್ತಿರ ಡ್ರಾಪ್ ಮಾಡ್ತೀನಿ.

ಪ್ರಿಯಾ,, ಹ್ಮ್ ಸರಿ ಅಂತ ಹೇಳಿ ಅಭಿ ಬೈಕ್ ಅಲ್ಲಿ ಕೂತ್ಕೋತಾಳೆ.

ಸ್ವಲ್ಪ ಸಮಯದ ನಂತರ ಅಭಿ ಪ್ರಿಯಾ. ಪ್ರಿಯಾ ಮನೆ ಹತ್ತಿರ ಬರ್ತಾರೆ.

ಪ್ರಿಯಾ ಬೈಕ್ ಇಳಿದು. ಡಾಕ್ಟರ್ ಹೇಳಿದ್ದು ನೆನಪಿದೆ ಅಲ್ವಾ. ಊಟ ಮಾಡಿ ಟ್ಯಾಬ್ಲೆಟ್ ತಗೋ. ಜ್ವರ ಕಮ್ಮಿ ಆಗೋವರೆಗೂ ಕೆಲಸಕ್ಕೆ ಬರಬೇಡ ಸರಿನಾ.

ಅಭಿ,,, ಹ್ಮ್ ಸರಿ ಅಂತ ಹೇಳಿ ಬೈ ಹೇಳಿ ರೂಮ್ ಬೈಕ್ ಸ್ಟಾರ್ಟ್ ಮಾಡಿಕೊಂಡು ರೂಮ್ ಕಡೆಗೆ ಹೋಗ್ತಾನೆ.

@@@@@@@@@@@@@@@@@@@@@@@@@