Saarike - 3 in Kannada Thriller by Shrathi J books and stories PDF | ಸಾರಿಕೆ - 3

Featured Books
  • प्रेम और युद्ध - 5

    अध्याय 5: आर्या और अर्जुन की यात्रा में एक नए मोड़ की शुरुआत...

  • Krick और Nakchadi - 2

    " कहानी मे अब क्रिक और नकचडी की दोस्ती प्रेम मे बदल गई थी। क...

  • Devil I Hate You - 21

    जिसे सून मिहींर,,,,,,,,रूही को ऊपर से नीचे देखते हुए,,,,,अपन...

  • शोहरत का घमंड - 102

    अपनी मॉम की बाते सुन कर आर्यन को बहुत ही गुस्सा आता है और वो...

  • मंजिले - भाग 14

     ---------मनहूस " मंज़िले " पुस्तक की सब से श्रेष्ठ कहानी है।...

Categories
Share

ಸಾರಿಕೆ - 3

ಸಾರಿಕೆ ಮರುದಿವಸ ಮಧ್ಯಹ್ನದ ಹೊತ್ತಿಗೆ ಕಣ್ಣು ತೆರೆದಳು . ಅಲ್ಲೇ ಹತ್ತಿರದಲ್ಲಿ ನಿಂತು ಅವಳ ಪ್ರಜ್ಞೆ ಬರುವುದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಅದನ್ನು ನೋಡಿ ಮೃದು ಧ್ವನಿಯಲ್ಲಿ

" ಇಷ್ಟು ಹೊತ್ತು ಬೇಕಾಯಿತಾ ಎದ್ದೇಳಲು"

ಎಂಬ ದ್ವನಿ ಅವಳ ಕಿವಿಗಳಿಗೆ ಸುಳಿದ ಹಾಗೆ ಅನಿಸಿತು . ದ್ವನಿ ಬಂದ ಕಡೆಗೆ ಸಾರಿಕೆ ನೋಡಿದಳು , ಅಲ್ಲಿ ಒಬ್ಬ ಮನುಷ್ಯ ನಗುತ್ತಾ ನಿಂತ್ತಿದ್ದ . ಅವನ ಮುಖವನ್ನು ಸುರಭಿಯು ಇಲ್ಲಿ ತನಕ ನೋಡಿರಲಿಕ್ಕೆ ಇಲ್ಲ , ಹಾಗಾಗಿ ಸುರಭಿಯ ನೆನಪಿನ ಪುಟಗಳಲ್ಲಿ ಅವನ ಬಗ್ಗೆ ಯಾವುದೇ ದಾಖಲೆಗಳು ಇರಲ್ಲಿಲ್ಲ , ಹಾಗಾಗಿ ಸಾರಿಕೆ ಅವನನ್ನು ಗುರುತಿಸಲು ಸಾದ್ಯವಾಗಲ್ಲಿಲ .





ಆ ಮನುಷ್ಯ ನೋಡಲು ಶ್ವೇತ ವರ್ಣದವನು , ದೃಢ ಕಾಯದ ಮನುಷ್ಯ , ಕಾಂತಿಯುಕ್ತವಾದ ಮುಖ , ಬಲಿಷ್ಟವಾದ ಭುಜಗಳು , ಅಷ್ಟೇ ಅಲ್ಲದೆ ಅವನ ಕಡು ನೀಲಿ ಕಣ್ಣುಗಳಲ್ಲಿ ಯಾವುದೋ ರೀತಿಯ ಸೆಳೆತವಿತ್ತು .

ಅದೇ ಸಮಯಕ್ಕೆ ಸರಿಯಾಗಿ ದೊಡಪ್ಪಾ ಪಾರ್ಥ ಸೇನಾ ಸುರಭಿಯನ್ನು ನೋಡಲು ಅಲ್ಲಿಗೆ ಬರುತ್ತಾನೆ . ಅಲ್ಲಿ ಸುರಭಿಗೆ ಪ್ರಜ್ಞೆ ಬಂದಿರುದನ್ನು ನೋಡಿ ತುಂಬಾ ಖುಷಿಯಿಂದ , ತನ್ನ ತಂದೆ ಅರುಣಾ ದೇವನ್ನನ್ನು ಕರೆಯುತ್ತಾನೆ . ಮಗನ ದ್ವನಿಯನ್ನು ಕೇಳಿದ ಅರುಣಾ ದೇವ ಅಲ್ಲಿಗೆ ಗಾಬರಿಯಿಂದ ಬಂದನು , ಅವನ ಮುಖದಲ್ಲಿ ಇದ್ದ ಖುಷಿಯನ್ನು ನೋಡಿ , ಅರುಣಾ ದೇವ ತಿಳಿದುಕೊಂಡನು ಸಾರಿಕೆ ಕ್ಷೇಮವಾಗಿದಳೆಂದು


ನಂತರ ಅವರಿಬ್ಬರು ಸಾರಿಕೆಯ ಬಳಿ ಬಂದು ಕುಳಿತರು . ಅಲ್ಲೇ ನಿಂತಿದ್ದ ಆರ್ಯನ್ನನು ನೋಡಿ

" ನೀನು ರಾತ್ರಿ ಇಡೀ ಸುರಭಿಯ ರಕ್ಷಣೆಗಾಗಿ ಇಲ್ಲೇ ಕಾಯುತ್ತಿದ್ದೆ , ನಿನ್ನ ಈ ಸಹಾಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೆ " .

ಅದಕ್ಕೆ ಆ ದೃಢ ಕಾಯದ ಮನುಷ್ಯ ಮುಗುಳು ನಗುತ್ತಾ .

" ನನ್ನ ಅತ್ತೆ ಮಗಳನ್ನು ನೋಡಿಕೊಳ್ಳಲು , ನೀವು ನನಗೆ ಕೃತಜ್ಞತೆ ಸಲ್ಲಿಸ್ ಬೇಕಾ , ಇದು ನನ್ನ ಕರ್ತವ್ಯವಾಗಿದೆ.

ಎಂದು ಹೇಳಿ ಅಲ್ಲಿಂದ ಹೊರಟು ಹೋದ . ಸುರಭಿಯು ಆ ಮನುಷ್ಯನ ಕಣ್ಣುಗಳನ್ನು ಗಮನಿಸುತ್ತಿದ್ದಳು , ಮೊದಲ ಸಲ ಅವನ ಕಣ್ಣುಗಳನ್ನು ನೋಡಿದಾಗ ಕಡು ನೀಲಿ ಬಣ್ಣದ್ದಲ್ಲಿ ಇತ್ತು . ಆದರೆ ನಂತರ ದೊಡ್ಡಪ್ಪನ ಬಳಿ ಮಾತಡುವಾಗ
ಆ ಕಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗಿತ್ತು , ಅದು ಅವಳಿಗೆ ಆಶ್ಚರ್ಯ ಮೂಡಿಸುತ್ತಿತ್ತು .

ಸುರಭಿಯು ಅರ್ಯನನ್ನೆ ದಿಟ್ಟಿಸಿ ನೋಡುವುದನ್ನು ಅರುಣಾ ದೇವ ಗಮನಿಸಿದ .

" ಏನಾಯ್ತು ಮಗಳೆ , "

ಅದಕ್ಕೆ ಸುರಭಿಯು ಅವನನ್ನು ತೋರಿಸಿ ,

" ಅವನು ಯಾರು ತಾತ , ಅವನನ್ನು ಇಲ್ಲಿ ತನಕ ನೋಡಿದ ನೆನಪು ಆಗುತ್ತಿಲ್ಲ " .

ಅರುಣಾ ದೇವಾ ನಗುತ್ತಾ ಉತ್ತರಿಸುತ್ತಾನೆ ,

" ಮಗಳೇ , ಅದು ನನ್ನ ಮಗಳ ಮಗ ; ನೀನು ಇಲ್ಲಿ ತನಕ ಅವನನ್ನು ನೋಡಿರಲಿಕ್ಕಿಲ್ಲ . ಸಂಬಂಧದಲ್ಲಿ ನೀನು ಅವನಿಗೆ ಅತ್ತೆಯ ಮಗಳು ಅಗುತ್ತಿಯ ".

ಅದನ್ನು ಕೇಳಿ ಸಮಾಧಾನವಾದಂತೆ ತಲೆ ಆಡಸಿದಳು ,

**********
ಸುರಭಿಗೆ ಬೇಗಾ ಗಾಯಗಳು ಒಣಗಿ ಹೋಗಿ ಆರೋಗ್ಯವಾಗುವಳು , ಅವಳು ಗುಣ ಅದುದು ಎಲ್ಲರಿಗೂ ಖುಷಿಯನ್ನು ನೀಡಿತ್ತು .

ಅವತ್ತು ಬೆಳಗ್ಗೆ ಬೇಗ ಎದ್ದು ಅವಳ ನಿತ್ಯ ಕರ್ಮಗಳನ್ನು ಮುಗಿಸಿ , ತುಂಬಾ ದಿನಗಳ ನಂತರ ಹೊರಗೆ ಬರುತ್ತಾಳೆ .







ಮೊದಲು ಸುರಭಿಯು ತಂದೆಯನ್ನು ನೋಡ ಬೇಕು ಎಂದು , ಅವರ ಕೊನೆಯ ಕಡೆಗೆ ಹೋಗುತ್ತಾಳೆ . ಅರೆ ಕ್ಷಣದಲ್ಲಿ ಸುರಭಿಯು ವಾಸುದೇವನ ಕೊನೆಗೆ ತಲುಪುತ್ತಲೇ.

ಕೋಣೆಯ ದ್ವಾರವನ್ನು ತೆರೆದು ತಂದೆಯ ಹತ್ತಿರ ಬಂದು ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತಾಳೆ .

ವಾಸುದೇವ ಅವಳನ್ನು ಕಂಡು ಖುಷಿಯಿಂದ ,

" ಎಗಿದಿಯಾ ಮಗಳೇ , ನಿನ್ನನ್ನು ನೋಡಿ ತುಂಬಾ ದಿನ ಆಯ್ತು . ನಿನ್ನನ್ನು ನೋಡಲು ತುಂಬಾ ಆಸೆ ಆಗುತ್ತಿತ್ತು , ನಿನಗೆ ಏನೋ ತೊಂದರೆ ಆಗಿದೆ ಅಂತ ಭಯ ಆಗಿತ್ತು ಮಗಳೇ . ಈಗ ನಿನ್ನನ್ನು ನೋಡಿ ಸಮಾಧಾನ ಆಯ್ತು ."

ಅವರ ಮಾತುಗಳ ಕೇಳಿ ಸುರಭಿಯು ಮುಗುಳು ನಗುತ್ತಾ ;

ತಾತ ಮತ್ತು ದೊಡ್ಡಪ್ಪ ಇರುವಾಗ , ಯಾರು ನನಗೇನು ಮಾಡಲು ಸಾಧ್ಯ ಇಲ್ಲ . ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳುತ್ತಿದಿರಿ ,ನಿಮ್ಮ ಆಶೀರ್ವಾದ ಇರುವರೆಗು ನನಗೆ ಏನು ಆಗುವುದಿಲ್ಲ .

ಸರಿ ನೀವು ಇನ್ನೂ ವಿಶ್ರಾಂತಿ ತೆಗೆದುಕೊಳ್ಳಿ ನಾನು ಹೊರಗೆ ಹೋಗುತ್ತೇನೆ .

ಎಂದು ಹೇಳಿ ತಂದೆಯ ಅಪ್ಪಣೆ ತೆಗೆದುಕೊಂಡು ಹೊರಗೆ ಹೋಗುತ್ತಾಳೆ , ಅಲ್ಲಿಂದ ಸುರಭಿ ನೇರವಾಗಿ ತಾತನ ಬಳಿ ಹೋಗುತ್ತಾಳೆ .

[ ಸುರಭಿಯ ದೇಹದಲ್ಲಿ ಇರುವ ಸಾರಿಕೆಗೆ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬರುತ್ತಿತ್ತು . ಅಲ್ಲಿ ಸಾರಿಕೆಗೆ ತಂದೆಯ ಅವಸ್ಥೆ ನೋಡಿ ಅವರನ್ನು ಮೊದಲಿನಂತೆ ಮಾಡುವ ಬಯಕೆ ಮೂಡಿತು . ]

ಸುರಭಿಯು ತಾತನ ಕೊನೆಯ ಕಡೆ ಬಂದು ತಲುಪಿದಳು , ಆದರೆ ಅಲ್ಲಿ ನೋಡಿದರೆ ತಾತ ಇರಲ್ಲಿಲ್ಲ . ನಂತರ ಅವಳು ಶಸ್ತ್ರಾಸ್ತ್ರ ಕೋಣೆಗೆ ಬರುತ್ತಾಳೆ , ಅಲ್ಲಿ ತಾತ ಶಸ್ತ್ರಾಸ್ತ್ರವನ್ನು ಪರೀಕ್ಷೆ ಮಾಡುತ್ತಾ ನಿಂತಿದರು .

ಸುರಭಿ ನೇರವಾಗಿ ತಾತನ ಬಳಿ ಹೋಗಿ ;

" ತಾತ "
ಎಂದು ಕರೆಯುತ್ತಾಳೆ .

ಸುರಭಿಯ ದ್ವನಿ ಕೇಳಿದ ಅರುಣಾ ದೇವ ಅವಳು ಇರುವ ಕಡೆ ತಿರುಗಿ .

" ಏನು ಮಗಳೇ "

ಸುರಭಿ ಸಣ್ಣ ಕಂಠದಲ್ಲಿ ,

" ತಾತ ಅದು , ನಿಮಗೆ ಏನು ತೊಂದರೆ ಇಲ್ಲದಿದ್ದರೆ , ನಿಮ್ಮ ಬಳಿ ಒಂದು ಕೇಳಬೇಕ " .


ಅರುಣಾ ದೇವ ಅವಳ ಮಾತು ಕೇಳಿ ಆಶ್ಚರ್ಯದಿಂದ
ಹೇಳುತ್ತಾನೆ ,

" ಏನು ಬೇಕು ಮಗಳೇ , ಪೀಠಿಕೆ ಹಾಕುವುದನ್ನು ನಿಲ್ಲಿಸಿ ವಿಷಯ ಹೇಳು " .


ಸುರಭಿಯು ಸಂಕೋಚದಿಂದ ,


" ತಾತ ಅದು , ನನಗೆ ವೈದ್ಯಕೀಯದ ಬಗ್ಗೆ ಕಲಿಯಲು ಆಸಕ್ತಿ ಮೂಡಿದೆ ಅದಕ್ಕಾಗಿ ನೀವು ಅದಕ್ಕೆ ಬೇಕಾದ ಪುಸ್ತಕ ಭಂಡಾರ ಮತ್ತು ಸಾಮಗ್ರಿಗಳನ್ನು ಒದಗಿಸಬಹುದ " .


ಸುರಭಿಯ ಮಾತು ಕೇಳಿ ಅರುಣಾ ದೇವ ನಗುತ್ತಾ

" ಸರೀ ಮಗಳೇ , ನಿನಗೆ ಬೇಕಾದ ಎಲ್ಲಾ ವಸ್ತುಗಳು ನಾಳೆ ಬೆಳಗ್ಗೆ ನಿನ್ನ ಎದುರಿಗೆ
ಇರುತ್ತದೆ " .


ಆ ಮಾತುಗಳು ಕೇಳಿ ಖುಷಿಯಿಂದ ಸುರಭಿಯು , ತಾತನಿಗೆ ವಂದನೆ ಸಲ್ಲಿಸಿ ಅಲ್ಲಿಂದ ಹೋಗಿ ಅವಳ ಕೋಣೆಗೆ ಹೋಗುತ್ತಾಳೆ . ತುಂಬಾ ಆಯಾಸವಾದ ಕಾರಣ ಅವಳು ಹೋಗಿ ಮಲಗುತ್ತಾಳೆ ..