She came unwillingly... - 21 in Kannada Drama by Kavya Pattar books and stories PDF | ಬಯಸದೆ ಬಂದವಳು... - 21

Featured Books
  • 11 ટાસ્ક્સ - Chapter 43

    વર્તમાન:આશુતોષ આજે વહેલો ઑફિસેથી ઘરે આવી ગયો હતો. અનન્યા સાથ...

  • મારો માધવ

    મારા માધવ એટલે ભગવાન શ્રીકૃષ્ણ.મારા માટે માધવ માત્ર એક ભગવાન...

  • આદમખોરનું રહસ્ય : પ્રકરણ ૫

    આદમખોરનું રહસ્ય પ્રકરણ ૫: ઈવા અને પ્રાણી-મનોવિજ્ઞાનલેપટોપની...

  • રોકાણ - 6

    ભાગ ૬ — વધતું બેંક બેલેન્સકાશીની યાત્રા પૂરી કરીને રમેશભાઈ,...

  • શૂન્યની બહાર - 12

    ભાગ 12 — દરવાજાની બીજી બાજુ“આરવ... દરવાજો ખોલ.”બહારથી ફરી એ...

Categories
Share

ಬಯಸದೆ ಬಂದವಳು... - 21

ಅಧ್ಯಾಯ: ನಿರ್ಧಾರದ ಕ್ಷಣ

ಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣ

ಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.
“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನಾನು ಸೂರ್ಯನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದೀನಿ ದಯವಿಟ್ಟು ನಮ್ಮನ್ನಾ ದೂರ ಮಾಡ್ಬೇಡಿ.”

ಸುಧಾಕರ್ ಅವಳ ನೋವನ್ನು ನೋಡಲಾರದೇ, ತಲೆ ತಗ್ಗಿಸುತ್ತಾನೆ.

ಸೂರ್ಯನ ಕಣ್ಣೀರಿನ ಹನಿಯು ಅವನ ಕೆನ್ನೆಯನ್ನು ಇಳಿದು ಜಾರಿಹೋಗುತ್ತಿದ್ದಾಗ, ತನ್ನ ಅಸಹಾಯಕ ನೋಟದಿಂದ ತನ್ನ ಜೀವದ ಗೆಳೆಯನ ಮುಖವನ್ನೇ ನೋಡುತ್ತಾ ನಿಂತಿದ್ದ.

ಜೆಕೆಯ ಸಹನೆಯ ಕಟ್ಟೆ ಒಡೆದು ಕೋಪದಲ್ಲಿ ನೋಟವನ್ನು ಬೀರುತ್ತಾನೆ.
“ದೊಡ್ಡಪ್ಪ ಯಾಕೆ ನೀವು ಏನೂ ಮಾತಾಡ್ತೀಲ್ಲ..”

ಆದರೆ ಜೆಕೆಯ ಮುಖವನ್ನು ಕೂಡಾ ನೋಡದೆ ಶಶಿಧರ್ ಅಲ್ಲಿಂದ ತನ್ನ ರೂಮ್ ಗೆ ಹೋಗುತ್ತಾನೆ. ಜೆಕೆ ಕೂಡ ಅವರ ಹಿಂದೇನೆ ಹೋಗುತ್ತಾನೆ.

ಲಕ್ಕಿ ಗೊಂದಲದಲ್ಲಿ “ಅಯ್ಯೋ.. ಈ ಶಶಿ ಗೆ ಏನಾಗಿದೆ? ಸುಧಿ ಯಾಕೋ ಇವನು ಹೀಗೆ ಮಾಡ್ತೀದಾನೆ.. ಅಲ್ಲಾ ಈ ಮಕ್ಕಳ ಕಣ್ಣೀರು ಅವನಿಗೆ ಕಾಣಸ್ತಿಲ್ವಾ.. ಛೇ!”

ಶೇಖರ್ ಗಂಭೀರವಾಗಿ, “ಅತ್ತೆ ಇದರಲ್ಲಿ ಶಶಿಧರ್ ಮಾವಂದು ಏನು ತಪ್ಪಿಲ್ಲ, ತಪ್ಪೆಲ್ಲಾ ಇವರದೇ. ಇವರಿಬ್ಬರೂ ಪ್ರೀತಿ ಮಾಡ್ತಿರೋ ವಿಷಯನ ಮೊದಲೇ ಹೇಳಿದ್ರೆ, ಈ ವಿಷಯ ಇಲ್ಲಿವರೆಗೆ ಬರ್ತಾನೆ ಇರಲಿಲ್ಲ.”

ಯಶೋಧ, “ಹಾಗಂತ ಈಗ ಇವರಿಬ್ಬರನ್ನ ದೂರ ಮಾಡ್ತಿರಾ?”

ಸುಧಾಕರ್ ಸ್ವಲ್ಪ ಕೋಪದಲ್ಲಿ, “ಯಶೋಧ ನಿಂಗೆ ಯಾಕೆ ಅರ್ಥ ಆಗ್ತಿಲ್ಲ... ಸಾಕು ಸುಮ್ನಿರಿ ಸ್ವಲ್ಪ ಆ ಮಕ್ಕಳ ಮುಖವನ್ನಾದ್ರೂ ನೋಡಿ...”

ಸೂರ್ಯ ಸಿಡಿಲಿನಂತೆ ಲಕ್ಕಿ ಹತ್ತಿರ ಬಂದು ಅವಳನ್ನು ಅಪ್ಪಿಕೊಳ್ಳುತ್ತಾನೆ.
“ಅಜ್ಜಿ ಪ್ಲೀಸ್ ದೊಡ್ಡ ಮಾವನಿಗೆ ನೀವೇ ಹೇಳಿ, ಅಮ್ಮು ಇಲ್ಲ ಅಂದ್ರೆ ನಾನು...”

ಅವನು ಮಾತು ಮುಗಿಸುವ ಮುನ್ನವೇ ಲಕ್ಕಿ ಅವನ ಬಾಯಿಗೆ ಬೆರಳು ಇಟ್ಟು,
“ಹೇ! ಕತ್ತೆ ಯಾಕೋ ಹೆದರ್ಕೋತಿಯ. ನಿಮ್ಮ ಬೆಂಬಲಕ್ಕೆ ನಾವೆಲ್ಲಾ ಇದೀವಿ. ಯಾರು ಏನೇ ಹೇಳಿದ್ರೂ ನಿನ್ನ ಮತ್ತೆ ಅಮ್ಮು ನಾ ದೂರ ಮಾಡೋದಿಕ್ಕೆ ನಾನಂತು ಬಿಡೋಲ್ಲ...”

ಕಮಲಾ, ಯಶೋಧ, ಸುಮತಿ—ಎಲ್ಲರೂ ಸಹ ಇವರ ಪ್ರೀತಿಗೆ ಬೆಂಬಲವಾಗಿ ನಿಂತಿದ್ದರು.

ಮಾಧವ್ ಕಳವಳದಿಂದ, “ನನಗೆ ಎನ್ ಮಾಡ್ಬೇಕು ಅಂತ ಆರ್ಥಾನೆ ಆಗ್ತಿಲ್ಲ ಕಣೋ ಭುವಿ...”

ಭುವನ್, “ಜೆಕೆ ಅಪ್ಪನ ರೂಮ್ ಗೆ ಹೋಗಿದಾನೆ, ನನಗ್ಯಾಕೋ ಅಪ್ಪ ಅವನ ಮಾತನ್ನು ಕೇಳ್ತಾನೆ ಅನ್ನೋದೇ ಡೌಟ್...”

ಕಾರ್ತಿಕ್ ನಂಬಿಕೆಯಿಂದ, “ಜೆಕೆ ಸೂರ್ಯನಿಗೆ ಮಾತು ಕೊಟ್ಟಿದ್ದಾನೆ ಬ್ರೋ... ನೋಡ್ತೀರಿ ಅವನು ಅಂಕಲ್ ನಾ ಒಪ್ಸೆ ಒಪ್ಪಸ್ತಾನೆ...”

ಮನೆಯೆಲ್ಲ ನಿಶ್ಶಬ್ದ. ಎಲ್ಲರ ಮನದಲ್ಲೂ ಆತಂಕ.

ಈಕಡೆ ಜೆಕೆ ಶಶಿಧರ್ ರೂಮ್ ಗೆ ಪ್ರವೇಶಿಸುತ್ತಾನೆ.

ಶಶಿಧರ್, “ಜೆಕೆ ಸ್ವಲ್ಪ ನನ್ನ ಪಾಡಿಗೆ ನನ್ನ ಬಿಟ್ಬಿಡು ಪ್ಲೀಸ್...”

ಜೆಕೆ ಘಡಸು ದ್ವನಿಯಲ್ಲಿ, “ನೀವು ಸುಮ್ನೆ ಕೂತ್ರೆ ಸಮಸ್ಯೆ ಪರಿಹಾರ ಆಗಲ್ಲ ದೊಡ್ಡಪ್ಪ. ಫಸ್ಟ್ ಆ ನಿಮ್ಮ ಕೊಟ್ಟಿರೋ ಮಾತನ್ನ ಸೈಡ್ ಗೆ ಇಟ್ಟು ನಿಮ್ಮ ಮಗಳ ಜೀವನದ ಬಗ್ಗೆ ಯೋಚನೆ ಮಾಡಿ. ಒಂದ್ಸಲ ನಾದ್ರು ಅವಳಿಗೇ ಈ ಸಂಬಂಧ ಇಷ್ಟ ಇದೆಯಾ ಇಲ್ಲವಾ ಅಂತ ಕೇಳಿದ್ರಾ? ನಿಮಗೂ ಗೊತ್ತು ಮನೇಲಿ ನಿಮ್ಮ ಹಾಗೂ ಅಪ್ಪನ ಹತ್ರ ಏನಾದ್ರೂ ಹೇಳಬೇಕಾದ್ರೆ ನಾವೆಲ್ಲ ಸಾವಿರ ಸಲ ಯೋಚನೆ ಮಾಡ್ತೀವಿ. ಆದರೆ ನೀವು ಅಮ್ಮು ಮತ್ತೆ ಸೂರ್ಯನ ಜೀವನಕ್ಕಿಂತ ನಿಮ್ಮ ಆ ಹಾಳಾದ ಗೌರವ ಪ್ರತಿಷ್ಠೆ ಮುಖ್ಯನಾ? ನೀವು ತುಂಬಾ ದೊಡ್ಡ ತಪ್ಪು ಮಾಡ್ತಿದ್ದೀರಿ ದೊಡ್ಡಪ್ಪ...”

ಶಶಿಧರ್‌ನ ಮನಸ್ಸು ತೀವ್ರ ಸಂಘರ್ಷದಲ್ಲಿ ಮುಳುಗುತ್ತದೆ.
ಅವನ ಕಣ್ಣಲ್ಲಿ ನೀರು ಮೌನವಾಗಿ ಜಾರುತ್ತದೆ.

ಅದನ್ನು ನೋಡಿ ಜೆಕೆಯ ಹೃದಯ ಕತ್ತರಿಸಿದಂತಾಗುತ್ತದೆ.
ಅವನು ಮುಂದೆ ಹೋಗಿ ಶಶಿಧರ್ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತಾನೆ.

ಜೆಕೆ ಸಣ್ಣ ದ್ವನಿಯಲ್ಲಿ, “ದೊಡ್ಡಪ್ಪ... Sorry ದೊಡ್ಡಪ್ಪ ನಾನು ನಿಮಗೆ ಹರ್ಟ್ ಮಾಡ್ಬೇಕು ಅಂತ ಹೇಳ್ತಿಲ್ಲ...”

ಶಶಿಧರ್ ಮೃದುವಾಗಿ, “ಜೆಕೆ, ಕಂದ ನೀನು ಯಾಕೆ ತಲೆ ತಗ್ಗಿಸ್ತಿದ್ದೀಯಾ? ನೀನು ಯಾವ ತಪ್ಪು ಮಾಡಿಲ್ಲ. ನೀನು ಹೇಳೋದು ನಿಜ. ನಾನು ಗೌರವ ಪ್ರತಿಷ್ಠೆ ಅಂತ ನನ್ನ ದೃಷ್ಟಿಕೋನದಲ್ಲೇ ಯೋಚನೆ ಮಾಡ್ದೆ. ಪಾಪ ಆ ಕಂದಮ್ಮಗಳ ಮನಸ್ಸಿಗೆ ಅದೆಷ್ಟು ನೋವು ಕೊಟ್ಟೆ. ನಾನು ತುಂಬಾ ದೊಡ್ಡ ತಪ್ಪು ಮಾಡಿಬಿಡ್ತಿದ್ದೆ.”

ಜೆಕೆ ತಕ್ಷಣ, “ದೊಡ್ಡಪ್ಪ ಪ್ಲೀಸ್... ನೀವು ಯಾವತ್ತೂ ತಪ್ಪು ಮಾಡೋಲ್ಲ... ಅದು ಕೋಪದಲ್ಲಿ ನಾನೇ ಏನೇನೋ ಹೇಳ್ಬಿಟ್ಟೆ... ನನ್ನ ಕ್ಷಮಿಸಿಬಿಡಿ...”

ಶಶಿಧರ್ ತುಟಿಗಳನ್ನು ಅರಳಿಸಿ, “ಮಗನೆ, ಯಾವಾಗ ಒಬ್ಬ ಮನುಷ್ಯನಿಗೆ ಕೋಪ ಬರುತ್ತೋ ಆವಾಗಲೇ ಅವನು ಸತ್ಯ ನಾ ಹೇಳೋದು. ನೀನು ಹೇಳಿದ್ದು ತಪ್ಪಲ್ಲ. ನನಗೆ ನೀನು ಅಂದ್ರೆ ತುಂಬಾ ಇಷ್ಟ.”

ಜೆಕೆ ಆಶ್ಚರ್ಯದಿಂದ, “ದೊಡ್ಡಪ್ಪ... ನನಗೆ ಥ್ಯಾಂಕ್ಸ್ ಆದರೆ ಯಾಕೆ?”

ಶಶಿಧರ್ ನಿಧಾನವಾಗಿ, “ನಾನು ಎಷ್ಟೋ ದೊಡ್ಡ ಡಿಸಿಷನ್ ತಗೊಳೋವಾಗ ನೂರು ಸಲ ಯೋಚನೆ ಮಾಡ್ತಿದ್ದೆ. ಆದರೆ ಈ ವಿಷಯದಲ್ಲಿ ನನ್ನ ಬುದ್ಧಿ ಜಾರಿಬಿಟ್ಟಿತು. ಅಮ್ಮುಗೆ ಈ ಸಂಬಂಧ ಇಷ್ಟ ಇದೆಯೋ ಇಲ್ಲವೋ ಕೇಳೋ ಯೋಚನೆ ಕೂಡ ಬರಲಿಲ್ಲ. ನೀನೇ ನನ್ನ ಕಣ್ಣು ತೆರೆಸಿದೆ. ಗೌರವ ಪ್ರತಿಷ್ಠೆ ಅನ್ನೋದು ಕೇವಲ ತೋರಿಕೆ. ನಿಮ್ಮ ಭವಿಷ್ಯದ ಮುಂದೆ ಅದು ಏನೂ ಅಲ್ಲ...”

ಅವನು ಎದ್ದು ಜೆಕೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ.

ಜೆಕೆ ಕಳವಳದಿಂದ, “ದೊಡ್ಡಪ್ಪ... ಅಂದ್ರೆ ನೀವು ಅಮ್ಮು ಮತ್ತೆ ಸೂರ್ಯನ ಪ್ರೀತಿನಾ ಒಪ್ಗೊಂಡ್ರಾ?”

ಶಶಿಧರ್ ಸ್ಮಿತದಿಂದ, “ಹೌದು ಕಣೋ! ನಮ್ಮ ಅಮ್ಮು ಸರಿಯಾದ ಹುಡುಗನನ್ನೇ ಆಯ್ಕೆ ಮಾಡಿದಾಳೆ.”

ಜೆಕೆಗೆ ಖುಷಿಗೆ ಮಿತಿ ಇರೋದಿಲ್ಲ.
“ರಿಯಲಿ... ಥ್ಯಾಂಕ್ ಯು ದೊಡ್ಡಪ್ಪ!” ಎಂದು ಅವನು ಸಂತೋಷದಿಂದ ಅವನನ್ನು ಅಪ್ಪಿಕೊಳ್ಳುತ್ತಾನೆ.

ಶಶಿಧರ್ ನಗುತ್ತಾ, “ಏ.. ನಿಧಾನ ಕಣೋ! ಇಷ್ಟು ಜೋರಾಗಿ ಯಾರಾದ್ರೂ ಮುತ್ತು ಕೊಡ್ತಾರಾ? ನಾಳೆ ನಿನ್ನ ಹೆಂಡತಿ ಗತಿ ಏನು?”

ಜೆಕೆ ನಾಚಿಕೆಯಿಂದ ತಲೆ ತಗ್ಗಿಸುತ್ತಾನೆ.

ಅಷ್ಟರಲ್ಲಿ ಮಾಧವ್ ಬಂದು, “ದೊಡ್ಡಪ್ಪ ಮೋಹನ್ ರಾವ್ ಅವರು ಬಂದ್ರು, ನಿಮಗೆ ಅಪ್ಪ ಬರೋಕೆ ಹೇಳಿದ್ರು...”

ಶಶಿಧರ್ ಅಲ್ಲಿಂದ ಹೊರಡುತ್ತಾನೆ.

ಅವರು ಹೋಗುತ್ತಿದ್ದಂತೆ ಮಾಧವ್ ಆತಂಕದಲ್ಲಿ, “ಲೋ ಏನಾಯ್ತು? ದೊಡ್ಡಪ್ಪ ಏನು ಹೇಳಿದ್ರು?”

ಜೆಕೆ ಒಳಗೊಳಗೆ ನಗುತಾ, ಸ್ವಲ್ಪ ಎಮೋಷನಲ್ ಆಕ್ಟಿಂಗ್ ಮಾಡುತ್ತಾನೆ.
“ಬ್ರೋ... ದೊಡ್ಡಪ್ಪ ಒಪ್ಗೊಳಿಲ್ಲ...”

ಮಾಧವ್ ಬೆಚ್ಚಿಬಿದ್ದು, “ಏನು?..”

ಕಾರ್ತಿಕ್ ಬಂದು, “ಬೇಗ ಬನ್ನಿ... ಸೂರ್ಯನ ಸ್ಥಿತಿ ನೋಡುವಂತಿಲ್ಲ...”

ಹಾಲ್‌ನಲ್ಲಿ ಎಲ್ಲರೂ ಮೋಹನ್ ರಾವ್ ಫ್ಯಾಮಿಲಿಯನ್ನು ಸ್ವಾಗತಿಸುತ್ತಾರೆ.
ಹೊರಗೆ ಎಲ್ಲವೂ ಸಾಮಾನ್ಯವಾಗಿದ್ದರೂ, ಮನೆಯೊಳಗಿನ ಹೃದಯಗಳಲ್ಲಿ ಮಳೆ ಸುರಿಯುತ್ತಿತ್ತು.

ಶಶಿಧರ್ ಮುಂದೆ ಬಂದು, “ನಮಸ್ತೇ ಮೋಹನ್ ರಾವ್ ಅವರೇ...”

ಮೋಹನ್ ರಾವ್ ಮುಗುಳ್ನಗುತ್ತಾ, “ಮೊದಲು ದೇವರ ಒಪ್ಪಿಗೆ ತಗೋಬೇಕಲ್ವಾ...”

ಶಶಿಧರ್ ಮನಸ್ಸಿನಲ್ಲಿ ಕಳವಳ.

ಪವಿತ್ರಾ, ರೋಹನ್, ಸರಳಾ—ಎಲ್ಲರೂ ಪರಿಚಯವಾಗುತ್ತಾರೆ.

ಈ ನಡುವೆ ಸೂರ್ಯ ಆತಂಕದಿಂದ ಜೆಕೆಯ ಕೈ ಹಿಡಿದು,
“ಏನು ಹೇಳಿದರು? ನಮ್ಮ ಪ್ರೀತಿನಾ ಒಪ್ಗೊಂಡ್ರಾ?”

ಜೆಕೆ ಕಣ್ಣು ಹೊಡೆದು, “ಜಸ್ಟ್ ವೇಟ್ ಅಂಡ್ ವಾಚ್...”

ಸೂರ್ಯನ ಕಣ್ಣುಗಳಲ್ಲಿ ಆಶೆಯ ಬೆಳಕು ಹೊಳೆಯುತ್ತದೆ.

ಶಶಿಧರ್ ಕೊನೆಗೆ ಮುಂದೆ ಬಂದು, ಮಾತು ಆರಂಭಿಸುತ್ತಾನೆ

“ಮೋಹನ್ ಅವರೇ... ನಾನು ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಷಯ ಹೇಳ್ಬೇಕು...”

ಮುಂದುವರೆಯುವುದು...