ನೀನು ತಪ್ಪು ಮಾಡಿದರೆ ನಿನಗೆ ಶಿಕ್ಷೆಯಾಗುವುದು ಖಂಡಿತ .......
ಆದರೆ ನೀನು ತಪ್ಪು ಮಾಡದೆ ಇದ್ದರೆ ನಿನ್ನನ್ನು ಜೈಲಿಗೆ ಹಾಕುವುದಿಲ್ಲ ಆ ಮಾತು ನಿನಗೆ ನೆನಪಿರಲಿ ...
ಕೊನೆ ಪಕ್ಷ ಅಂತಹ ಸಂದರ್ಭ ಬಂದರೆ , ನೀನು ತಪ್ಪು ಮಾಡದೆ ಇದ್ದರೆ ನಿನ್ನನ್ನು ಜೈಲಿಗೆ ಹಾಕುವುದಕ್ಕೂ ನಾನು ಬಿಡುವುದಿಲ್ಲ ......
ಪೋಲಿಸರು ಅನುಮಾನ ಬಂದರೆ ಮಾತ್ರ ಅವರನ್ನು ವಿಚಾರ ಮಾಡುವುದು ಹೊರತು ....
ಅದನ್ನು ಬಿಟ್ಟು ಬೇರೆಯವರ ಗೊಡವೆಗಳಿಗೆ ಹೋಗುವ ಅಭ್ಯಾಸ ನಮಗೆ ಇಲ್ಲ ...
ಮತ್ತೆ ಬೇರೆಯವರ ನಿಷ್ಟುರಗಳನ್ನು ಕಟ್ಟಿಕೊಳ್ಳುವುದು ನಮಗೆ ಬೇಕಾಗಿಲ್ಲ ...?
ನಿನ್ನ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ...
ನಾನು ನಿನ್ನ ಬಗ್ಗೆ ಯೋಚನೆ ಮಾಡುವುದು ಕೂಡ ಇಲ್ಲ .....
ಸುಮ್ಮನೆ ಇಲ್ಲ ಸಲ್ಲದ ಅಪವಾದ ನಮಗೆ ಮಾಡಬೇಡಿ ನೀವು ...
ಮೊದಲೇ ಪೋಲಿಸ್ ಅನ್ನು ಕಂಡು ಕಾಲು ಎಳೆಯುತ್ತಾ ತಮಾಷೆ ಮಾಡುವ ಜನರಿಗೆ ಈ ಇಂತಹ ವಿಷಯ ಹೇಳಿ ದಾರಿ ತಪ್ಪಿಸ ಬೇಡಿ ...
ಅಂತ ಹೇಳಿ ಸುಮ್ಮನಾಗಿ ಬಿಟ್ಟರು ಅನುಜ್ ಸೂದ್ ....
ಹಾಗಾದ್ರೆ ನನ್ನ ಕಥೆ ಕೇಳಿ ...
ಮತ್ತು ನಾನು ಕೇಳುವ ಕೆಲವು ಪ್ರಶ್ನೆಗಳಿಗೆ ಸಮಾಧಾನ ಹೇಳಿ ...
ನನ್ನ ತಲೆಯಲ್ಲಿ ಇರುವ ಗೊಂದಲಗಳಿಗೆ ಮುಕ್ತಿ ನೀಡಿ ....
ಎಂದು ಅರುಣ್ ಕುಮಾರ್ ಹೇಳಿದ ...
ಸರಿ ...
ನಿನ್ನ ಕಥೆ ಹೇಳು ...
ನನಗೆ ಸಾದ್ಯವಾದರೆ ನಿನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತೇನೆ ...
ಎಂದು ಅನುಜ್ ಸೂದ್ ಹೇಳುತ್ತಾನೆ ...
(ಈ ರೀತಿಯಾದರು ಅರುಣ್ ಕುಮಾರ್ ನ ಬಗ್ಗೆ ತಿಳಿಯುವ , ಅವನ ವಿಚಿತ್ರ ವರ್ತನೆಗೆ ಕಾರಣ ಏನು ಎಂಬುವುದನ್ನು ತಿಳಿಯಬಹುದು ಮತ್ತು ಸಾದ್ಯವಾದರೆ ಅದಕ್ಕೆ ಪರಿಹಾರವನ್ನು ನೀಡಬಹುದು... )
ಎಂದು ಮನದಲ್ಲಿಯೇ ನೆನೆದು ಅವನ ಕಥೆ ಕೇಳಲು ಸಿದ್ಧನಾದ ಅನುಜ್ ಸೂದ್ ...
ಸರಿ ಕೇಳಿ ...
ಎಂದು ಅರುಣ್ ಕಥೆ ಪ್ರಾರಂಭ ಮಾಡುತ್ತಾನೆ ...
ಜೀವನದಲ್ಲಿ ಮೊದಲ ಬಾರಿ ಎಲ್ಲರನ್ನೂ ಬಿಟ್ಟು ಏಕಾಂಗಿಯಾಗಿ ದೀರ್ಘ ಕಾಲಾವಧಿಯ ಪ್ರವಾಸವನ್ನು ಮಾಡುತ್ತಿದ್ದೇನೆ .....

ಏಕಾಂಗಿ ಪ್ರಯಾಣವೆಂದರೆ ನಮಗೆ ನಾವೇ ನಿರ್ಮಿಸಿಕೊಂಡಂತಹ ಹಲವಾರು ಪರಿಮಿತಿಗಳಿಂದ ಮತ್ತು ಇತರರ ನಿರೀಕ್ಷೆಗಳಿಗೆ ಹೊಂದಿಸಿಕೊಂಡು ಬದುಕುವುದರಿಂದ ತಾತ್ಕಾಲಿಕ ಪಾರಾಗುವಿಕೆ ಆದರೆ ನನ್ನ ಜೀವನದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತಹ ಜೀವ ಯಾವುದು ಇರಲಿಲ್ಲ .......
ಮನೆಯವರ ಸಾಂಗತ್ಯವಂತು ಹುಟ್ಟುವಾಗಲೇ ಕಲೆದುಕೊಂಡು ಅನಾತನಾದೆ ...
ಜನಿಸಿದ ಕ್ಷಣವೆ ಮನೆ ಬಿಟ್ಟು ಆಶ್ರಮದ ಪಲಾದೇ ....

ಹೌದ ....
ನೀನು ಆಶ್ರಮದಲ್ಲಿ ಬೆಳೆದವನ ....
ಯಾವ ಆಶ್ರಮ ..?
ಎಂದು ಅನುಜ್ ಸೂದ್ ಕೇಳುತ್ತಾನೆ ....
ಆ ಹೌದು ....
ಸಾಬರಮತಿ ಆಶ್ರಮ .....
ಎಂದು ಅರುಣ್ ಕುಮಾರ್ ಹೇಳಿ ...
ನಿನ್ನ ನಿಜವಾದ ತಂದೆ ತಾಯಿಯ ಪರಿಚಯ ನಿನಗೆ ಇಲ್ಲವ ...
ಎಂದು ಅನುಜ್ ಸೂದ್ ಕೇಳುತ್ತಾನೆ ...
ನನಗೆ ಸರಿಯಾಗಿ ನೆನಪು ಇಲ್ಲ ಆದರೆ ಒಂದು ಘಟನೆ ಮಾತ್ರ ಈಗ ಕೂಡ ನೆನಪು ಬರುತ್ತೆ ...
ಆ ಘಟನೆ ನನ್ನ ತಂದೆ ತಾಯಿಯ ಬಗ್ಗೆಯ ಅಥವಾ ಬೇರೆ ಯಾರ ಬಗೆಯ ಎಂದು ಗೊತ್ತಿಲ್ಲ ..
ಎಂದು ಅರುಣ್ ಕುಮಾರ್ ಹೇಳುತ್ತಾನೆ ...
ಆ ಘಟನೆ ಯಾವುದು ಎಂದು ತಿಳಿಸುತ್ತಿಯ ನನಗೆ ...
ಸುಮ್ನೆ ಕ್ಯೂರಿಯಾಸಿಟಿ ಗೆ ಕೇಳುವುದು .. ಆ ಘಟನೆ ಹೇಳಲು ಇಷ್ಟ ಇಲ್ಲ ಅಂದ್ರೆ ಪರವಾಗಿಲ್ಲ ...
ಎಂದು ಅನುಜ್ ಸೂದ್ ಹೇಳುತ್ತಾನೆ ..
ಒಂದು ದೊಡ್ಡ ಏರ್ ಪೋರ್ಟ್ , ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಅಲ್ಲಿ ತುಂಬಾ ಜನ
ಗುಂಪು ಮಾಡಿಕೊಂಡು ನೋಡುತ್ತಿದ್ದರು ... ಅವರೆಲ್ಲ ಏನು ನೋಡುತ್ತಿದ್ದರು ಎಂದರೆ ಒಬ್ಬ ಗಂಡ ಹೆಂಡತಿಯನ್ನು ಪೊಲೀಸರು ಎಳೆದು ಕೊಂಡು ಹೋಗುತ್ತಾ ಇದ್ದರು ...
ಅವರನ್ನು ಎಳೆದು ಕೊಂಡು ಹೋಗುವುದನ್ನು ನೋಡಿ ಒಬ್ಬ ಮುದುಕನ ಕೈಯಲ್ಲಿ ಇದ್ದ ಕಂದ ಜೋರಾಗಿ ಅಳುತ್ತಾ ಇತ್ತು ...
ಆ ಪೊಲೀಸ್ ಎಳೆದು ಕೊಂಡು ಹೋಗುತ್ತಿದ್ದ ಮಹಿಳೆ ...
ಅರು ಪುಟ್ಟ ... ಅರು ಪುಟ್ಟ ...
ಎಂದು ಕರೆಯುತ್ತಾ ಇದ್ದರು ...
ಈಗೆ ಈ ಘಟನೆ ಮಾತ್ರ ನನ್ನ ಬಾಲ್ಯದಿಂದ ಇಲ್ಲಿ ತನಕ ನೆನಪು ಬರುತ್ತಾ ಇದೆ ..
ಆ ಮಗು ಯಾರು ... ?
ಆ ಮಗುವನ್ನು ಹಿಡಿದು ಕೊಂಡ ತಾತ ಯಾರು ...? ಆ ಪೊಲೀಸರು ಆ ಗಂಡ ಹೆಂಡತಿಯನ್ನು ಏಕೆ ಕರೆದು ಕೊಂಡು ಹೋಗುತ್ತಾ ಇದ್ದರು ... ?
ಅವರು ಮಾಡಿದ ತಪ್ಪು ಆದರೂ ಏನು ... ?
ಎಂಬುವುದು ಮಾತ್ರ ನನಗೆ ಈಗ ಕೂಡ ಗೊತ್ತಾಗುತ್ತಿಲ್ಲ ...
ಎಂದು ಹೇಳಿ ಅರುಣ್ ಕುಮಾರ್ ಸುಮ್ಮನಾದ ...
ಆ ಮಗು ನೀನೇ ಆಗಿರಬಹುದು ಅಲ್ಲ ...
ಅದಕ್ಕೆ ಆ ಘಟನೆ ನಿನಗೆ ನೆನಪು ಬರುತ್ತಾ ಇದೆ ..
ಎಂದು ಅನುಜ್ ಸೂದ್ ಹೇಳುತ್ತಾನೆ ...
ಆಗಿರ ಬಹುದು ಅಥವಾ
ಆಗಿರದೆ ಇರಬಹುದು ....
ಎಂದು ಅರುಣ್ ಕುಮಾರ್ ಹೇಳುತ್ತಾನೆ ....
ಅದು ಸರಿ ..
ಎಂದು ಅನುಜ್ ಸೂದ್ ಹೇಳುತ್ತಾನೆ ...
ಮತ್ತೆ ಅರುಣ್ ಕುಮಾರ್ ತನ್ನ ಆಶ್ರಮದ ಕಥೆಯನ್ನು ಮುಂದುವರಿಸಿದ ....
ಆ ಸಾಬರಮತಿ ಆಶ್ರಮದಲ್ಲಿ ನನ್ನ ಜೀವನ ಚೆನ್ನಾಗಿಯೇ ಸಾಗುತಿತ್ತು ...
ಅಲ್ಲಿ ನನ್ನಂತೆ ಇದ್ದ ಎಲ್ಲಾ ಮಕ್ಕಳೊಂದಿಗೆ ಬೆರೆತು ಖುಷಿಯಲ್ಲಿ ಇದ್ದೆ ...
ಅದರಲ್ಲಿ ನನಗೆ ತುಂಬಾ ಇಷ್ಟ ಆದವರು ಎಂದರೆ ಅವಿ , ಉಮಾ , ಅರಿ ಮತ್ತು ರಘು
ಅವರೊಂದಿಗೆ
ಆಟ ಪಾಠ ಎಲ್ಲ ಚೆನ್ನಾಗಿಯೇ ಸಾಗುತಿತ್ತು ...
ಆ ಖುಷಿ ನೆಮ್ಮದಿಯನ್ನು ದೇವರಿಗೆ ನೋಡಲು ಸಾದ್ಯವಾಗದೆ ನನ್ನ ಅಣೆಬರಹವನ್ನು ಅವನಿಗೆ ಬೇಕಾದ ಹಾಗೆ ಗೀಚಿದ ...
ಅದೊಂದು ದಿನ ನನ್ನ ಆ ಖುಷಿ ,
ನೆಮ್ಮದಿಗೆ ಪೂರ್ಣ ವಿರಾಮ ಬಿತ್ತು ...
ನನ್ನ ನೆಚ್ಚಿನ ಗೆಳತಿ ಅವಿ ಮತ್ತು ಉಮಾಳನ್ನು ಯಾರೋ ದತ್ತು ತೆಗೆದುಕೊಂಡು ಹೋದರು ಅವರು ಹೋಗುವಾಗ ಕೊನೆಯ ಬಾರಿ ಬೇಟಿ ಮಾಡಲು ಕೂಡ ಸಾಧ್ಯವಾಗಲಿಲ್ಲ ನನಗೆ ....
ಆಗ ಇನ್ನೂ ನನಗೆ ಎಂಟು ವರ್ಷ ಅವರು ಹೋದ ಎರಡೇ ದಿನಕ್ಕೆ ಯಾರೋ ಒಬ್ಬ ಪುಣ್ಯಾತ್ಮ ಬಂದು ನನ್ನನ್ನು ( ಅಂದರೆ ಅರುಣ್ ಕುಮಾರ್ ನನ್ನು )

ದತ್ತು ತೆಗೆದುಕೊಂಡು ಹೋದರು ...
ಎಂದು ಅರುಣ್ ಕುಮಾರ್ ಹೇಳುವಾಗ ... ಮದ್ಯದಲ್ಲಿ ಅನುಜ್ ಸೂದ್ ಪ್ರಶ್ನೆ ಕೇಳುತ್ತಾನೆ ...
ನಿನ್ನನ್ನು ಯಾರು ದತ್ತು ತೆಗೆದುಕೊಂಡು ಹೋದವರು ...
ಅವರ ಹೆಸರು ಏನು .... ?
ಎಂದು ಅನುಜ್ ಸೂದ್ ಕೇಳುತ್ತಾನೆ ...
ಟಾಪ್ ಮೋಸ್ಟ್ ಬ್ಯುಸಿನೆಸ್ ಮ್ಯಾನ್ ಮೋಹನ್ ಕುಮಾರ್ ....
ಅವರ ಹೆಸರು ಅಂತು ನೀವು ಕೇಳಿರಾ ಬಹುದು ...
ಅಷ್ಟು ದೊಡ್ಡ ಬ್ಯುಸಿನೆಸ್ ಮ್ಯಾನ್ ...
ಕಷ್ಟ ಅಂತ ಬಂದವರಿಗೆ ಖಾಲಿ ಕೈಯಲ್ಲಿ ಕಲಿಸದವರು ...
ಬಲಗೈಯಲ್ಲಿ ಮಾಡಿದ ದಾನ ಎಡ ಗೈ ಗೆ ತಿಳಿಯದಂತೆ ನೋಡಿ ಕೊಂಡವರು ...
ಎಂದು ಅರುಣ್ ಕುಮಾರ್ ಹೇಳಿದ ...
ನಿಮ್ಮನ್ನು ದತ್ತು ತೆಗೆದುಕೊಂಡದ್ದು ಮೋಹನ್ ಕುಮಾರ್ ಅವರ ...
ಎಂದು ಅನುಜ್ ಸೂದ್ ಬಾಯಿ ಬಿಟ್ಟು ಕೇಳುತ್ತಾನೆ ...
ನಿಮಗೆ ಯಾಕೆ ಇಷ್ಟೊಂದು
ಆಶ್ಚರ್ಯ ಆಯ್ತು ..
ಎಂದು ಅರುಣ್ ಕುಮಾರ್ ಕೇಳುತ್ತಾನೆ ...
ಈಗಿನ ಕಾಲದಲ್ಲಿ ಸ್ವಲ್ಪ ಹಣ ಇದ್ದರೆ ಕುಬೇರ ಎನ್ನುವಂತೆ ಶೋಕಿ ಮಾಡುವ ಈ ಜನರ ಮುಂದೆ ..
ಕೋಟಿ ಕೋಟಿ ಆಸ್ತಿಯ ಮಾಲಿಕನಾಗಿ ಬಸ್ಸ್ ನಲ್ಲಿ ಬರುತ್ತೀಯ ಅಲ್ಲ ..
ಗ್ರೇಟ್ ನೀನು ..
ಎಂದು ಅನುಜ್ ಸೂದ್ ಹೇಳುತ್ತಾನೆ ...
ಅದು ನನ್ನ ತಂದೆಯ ಹಣ ..
ಅದು ಕೇವಲ ಜನ ಸೇವೆಗೆ ಮಾತ್ರ ..
ಅದನ್ನು ಕರ್ಚು ಮಾಡುವ ಅಧಿಕಾರ ನನಗೆ ಎಲ್ಲ ...
ನನ್ನ ಕರ್ಚು ವೆಚ್ಚಕ್ಕಾಗಿ ನಾನು ದುಡಿಯುತ್ತೇನೆ .....
ಎಂದು ಹೇಳಿದ ಅರುಣ್ ಕುಮಾರ್ ತನ್ನ ಕಥೆಯನ್ನು ಮುಂದುವರಿಸಿದ ..
ಇನ್ನೊಂದು ಕಡೆ ಅನುಜ್ ಸೂದ್ ಅವನ ಎಲ್ಲಾ ಮಾತುಗಳನ್ನು ಸರಿಯಾಗಿ ಗಮನ ಕೊಟ್ಟು ಕೇಳುತ್ತಿದ್ದ ....
ಮೋಹನ್ ಕುಮಾರ್ ಅವರು ನನ್ನನ್ನು ತುಂಬಾ ಪ್ರೀತಿಯಿಂದ ಅಕ್ಕರೆಯಿಂದ ಬೆಳೆಸಿದರು ...
ಎಲ್ಲ ರೀತಿಯ ಶಿಕ್ಷಣದ ಅರಿವು ಮೂಡಿಸಿದರು , ದಿನಲೂ ಭಗವದ್ಗೀತೆಯ ಶ್ಲೋಕವನ್ನು ಪಠಿಸುವಂತೆ ಪ್ರೇರೆಪಿಸಿದರು ...
ಅದರೊಂದಿಗೆ ನೋವುಗಳನ್ನು ತೋರ್ಪಡಿಸಿಕೊಳ್ಳದಂತೆ ಭಾವನೆಗಳ ಹಿಡಿದುಳ್ಳುವುದನ್ನು ಹೇಳಿಕೊಟ್ಟರು ..
ಆಗುವುದಿಲ್ಲ ಎನ್ನುವ ಮಾತನ್ನು ನನ್ನ ಬಾಯಿಯಿಂದ ಓಡಿಸಿದರು , ಮಾತಿನಿಂದ ಕಲಿಯದ ವಿಷಯವನ್ನು ಪೆಟ್ಟಿನ ಮೂಲಕ ಕಳಿಸಿ ಕೊಟ್ಟರು ....
ಆ ವ್ಯಕ್ತಿ ನನ್ನ ಜೀವನವನ್ನು ತಾತ್ವಿಕತೆಯೊಂದಿಗೆ ಮೌಲ್ಯಗಳೊಂದಿಗೆ ಬೆಳೆಸಿದರು ,
ಕೇಳಿದ ಎಲ್ಲ ವಸ್ತುಗಳನ್ನು ತಂದು ಕೊಟ್ಟು ನನ್ನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರು ...
ನನ್ನನ್ನು ಒಂದು ಗಲಿಗೆ ಅವರಿಂದ ದೂರ ಮಾಡುತ್ತಿರಲಿಲ್ಲ ..
ಯಾವತ್ತೂ ನನ್ನನ್ನು ಕಡಿಮೆ ಅಂಕಗಳಿಗಾಗಿ ಬೈಯಲಿಲ್ಲ ಹೋಡೆಯಲಿಲ್ಲ ...
ಅವರ ವ್ಯಕ್ತಿತ್ವ ನನ್ನನ್ನು ಅವರಂತೆ ಬೆಳೆಯಲು ಪ್ರೇರೇಪಿಸಿತು ...
ಆದರೆ ನಾನು ಒಬ್ಬ ದುರದೃಷ್ಟದವನೂ ...
ನನ್ನ ಸಾಕು ತಂದೆಗೆ ಕೂಡ ಆ ನನ್ನ ದುರದೃಷ್ಟ ತಾಕಿತು ....
ನನ್ನೊಂದಿಗೆ ಇರುವುದು ಆ ದೇವರಿಗೆ ಇಷ್ಟವಾಗದೆ ಅವರನ್ನು ಕೂಡ ನನ್ನಿಂದ ದೂರ ಮಾಡಿದ...
ಈಗ ನಾನು ಒಬ್ಬನೇ ಹಾಗಾಗಿ ಯಾರ ನಿರೀಕ್ಷೆಯ ಭಾರವು ನನ್ನ ಮೇಲಿರಲಿಲ್ಲ ......
ಎಂದು ಅರುಣ್ ಕುಮಾರ್ ಕಥೆ ಹೇಳುತ್ತಾ ಇರುವಾಗ ಅನುಜ್ ಬಂದು ಮತ್ತೆ ಪ್ರಶ್ನೆ ಕೇಳುತ್ತಾನೆ ...
ನಿಮ್ಮ ಮನೆ ಹೇಗೆ ಇತ್ತು ...
ಎಂದು ಅನುಜ್ ಸೂದ್ ಹೇಳಿದ ...
ಆ ಹೇಳ್ತೀನಿ ..
ಕೇಳಿ .....
ಎಂದು ಅರುಣ್ ಕುಮಾರ್ ಹೇಳಿ ಮತ್ತೆ ತನ್ನ ಕಥೆಯನ್ನು ಮುಂದುವರಿಸಿದ
ಸಾಮಾನ್ಯವಾಗಿ ಮನೆಯೆಂಬುವುದು ನೆಮ್ಮದಿಯ ಅದೆಷ್ಟೋ ಸಂಗತಿಗಳ ,
ಸಂತೋಷಗಳ ನೆನಪಿನ ಬುತ್ತಿಯ ಆಗರ .......
ಮನೆ ಎಂದರೆ ಹೀಗೆಯೇ ಇರಬೇಕೆಂದಿಲ್ಲ ಆದರೂ ಇರುವ ಹಾಗೆಯೇ ಇದ್ದರೆ ಚೆಂದ ಎಂದು ನನ್ನ ಅಭಿಪ್ರಾಯ .....
ಆದರೆ ನನ್ನ ಮನೆ ವಿಚಿತ್ರ ಮನೆ ಏಕೆಂದರೆ ಎರಡಂತಸ್ಥಿನ ಮನೆ, ಸುಂದರ ಮನೆ ಆದರೆ 20 ಜನ ಇರಬಹುದಾದ ಮನೆಯಲ್ಲಿ ನಾನು ಒಬ್ಬನೇ ಇದ್ದೆನೇ ....

ಸ್ನಾನಗೃಹ , ಅಡಿಗೆ ಮನೆ , ಮಲಗುವ ಕೋಣೆಗಳು ಎಲ್ಲ ನನ್ನನ್ನು ಒಂಟಿ ಎಂದು ತಮಾಷೆ ಮಾಡುವಂತೆ ಭಾಸವಾಗುತ್ತಿದೆ ...
ಹೆಸರಿಗೆ ಕೈಲಾಸ ನಿಲಾಯ ಎಂದು ಹೆಸರು ಇಟ್ಟಿದ್ದರೆ ಆದರೆ ಇರುವುದಕ್ಕೆ ಒಂದು ಗಣಗಳು ಕೂಡ ಇಲ್ಲ ...
ಅಡುಗೆಗೆ ಒಬ್ಬ , ಮನೆ ಒರೆಸುವುದಕ್ಕೆ ಒಬ್ಬ , ಗಾರ್ಡನ್ ಕ್ಲೀನ್ ಮಾಡುವುದಕ್ಕೆ ಒಬ್ಬ , ವಾಚ್ ಮ್ಯಾನ್ ಒಬ್ಬ , ಕಾರ್ ಡ್ರೈವರ್ ಒಬ್ಬ ಈಗೆ ಎಲ್ಲ
ಕೆಲಸಗಾರು ತಮ್ಮ ತಮ್ಮ ಕೆಲಸ ಮಾಡಿ ಅವರ ಮನೆಗೆ ತೆರಳುತ್ತಾರೆ .....
ಆದರೆ ಅವರು ಎಲ್ಲಾ ಸಂಬಳಕಕ್ಕಾಗಿ ಕೆಲಸ ಮಾಡುವವರು ...