Magical Garden - 2 in Kannada Thriller by Shrathi books and stories PDF | ಮಾಯಾಂಗನೆ - 2

The Author
Featured Books
Categories
Share

ಮಾಯಾಂಗನೆ - 2














ನೋಡಿ ಸರ್ ಅವರು ಅಂದರೆ ಅದೆ 
ಆ ಫೋಟೋದಲ್ಲಿ ಇರುವುದು ನನ್ನ ಗೆಳತಿ ಹೊರತು  ಹೆಂಡತಿಯಲ್ಲ

ಎಂದು ಹೇಳಿದ ಅರುಣ್ ಕುಮಾರ್ ಅಲ್ಲಿಂದ ಬೇಗ - ಬೇಗ ಹೋಗಿ ಬಸ್ಸ್ ಹತ್ತಿ ಸೀಟಿನಲ್ಲಿ ಕಳಿತುಕೊಂಡನು  ...... 

ಈ ಅರುಣ್ ಯಾಕೆ ವಿಚಿತ್ರವಾಗಿ ನಡೆದು ಕೊಳ್ಳುತ್ತಾ ಇದ್ದಾನೆ ... 
ಇವನು ಇರುವುದೇ ಈಗೆಯಾ ಅಥವಾ ನನ್ನ ಪೊಲೀಸ್ ಮೈಂಡ್ ಗೆ ಇವನು ವಿಚಿತ್ರ ಅಂತ ಕಾಣಿಸುತ್ತಾ ಇದೆಯಾ .... 
ಆದರೆ ಇವನಲ್ಲಿ ಏನೋ ಒಂದು ರಹಸ್ಯ ಇದೆ  ತಿಳಿದು ಕೊಳ್ಳಬೇಕು ...  
ಆದರೆ ಇವನ ಮನದ ವಿಷಯವನ್ನು ನಾನು ಹೇಗೆ ತಿಳಿದು ಕೊಳ್ಳುವುದು ... 
ಇವನ ಮನಸಿನ ಮಾತುಗಳನ್ನು ನಾನು ಹೇಗಾದರೂ ಹೊರಗೆ ತರಿಸ ಬೇಕು ...

ಎಂದು ಅನುಜ್ ಸೂದ್ ಮನದಲ್ಲಿಯೇ ನೆನೆದ.

ಅರುಣ್ ಕುಮಾರ್ ವರ್ತನೆ ಅನುಜ್ ಗೆ ಸ್ವಲ್ಪ ವಿಚಿತ್ರ ಎಂದು ಅನಿಸಿದರೂ   ... 
ಆದನ್ನು ಏನೂ ತೋರ್ಪಡಿಸದೆ  ಅನುಜ್ ಅವನ ಸೀಟಿನಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾನೆ ...  ಅರುಣ್ ಸ್ವಲ್ಪ ಹೊತ್ತು ಸುಮ್ಮನೆ ಇದ್ದು  ತನ್ನನ್ನು ತಾನು ಸುಧಾರಿಸಿ ಕೊಂಡನು ನಂತರ ಅರುಣ್  ಅನುಜ್ ನ ಕಡೆ ನೋಡುತ್ತಾನೆ ಮತ್ತು ಅವನ ಮುಖ ಭಾವವನ್ನು ಪರೀಕ್ಷಿಸುತ್ತನೆ .. 
ಅನುಜ್ ನ ಮುಖದಲ್ಲಿ ಯಾವುದೇ ಸಿಟ್ಟು ಅನುಮಾನ ಕಾಣಿಸುವುದಿಲ್ಲ  ... ಅನುಜ್ ಸೂದ್ ನ ಮುಖ ಪ್ರಶಾಂತವಾಗಿರುವುದನ್ನು ನೋಡಿ  ಅರುಣ್ ಗೆ ಸ್ವಲ್ಪ ಸಮಾಧಾನ ಆಯ್ತು ..

ನಿಮಗೆ ಏನು ತೊಂದರೆ ಇಲ್ಲ ಅಂದರೆ
ನಿಮ್ಮ ಬಳಿ ಒಂದು ವಿಚಾರನ್ನು ಹೇಳ ಬೇಕೆಂದು ಕೊಂಡಿದ್ದೇನೆ ...

ಎಂದು ಅರುಣ್ ಕುಮಾರ್ ಮಾತನ್ನು ಆರಂಭ ಮಾಡುತ್ತಾನೆ   ....

  ಅನುಜ್ ಗೆ ಸ್ವಲ್ಪ ಆಶ್ಚರ್ಯ ಆಗುತ್ತೆ ಏಕೆಂದರೆ ಆತನ ಸ್ವರದಲ್ಲಿ ಸ್ವಲ್ಪ ಭಯ ಮತ್ತು ತಡೆಯಲಾಗದ ನೋವು ಕಾಣುತ್ತಿತ್ತು ...
ಅನುಜ್ ಆತನ ಮಾತಿನಲ್ಲಿ ಇದ್ದ ನೋವನ್ನು ಗಮನಿಸಿ ಆತನ  ಕಡೆ ನೋಡಿದನು ...
ಆದರೆ ಅವನ ಮುಖದಲ್ಲಿ ಯಾವುದೇ ರೀತಿಯ ಭಾವನೆಗಳು ಇರಲಿಲ್ಲ .. 
ಕಣ್ಣುಗಳು ಸ್ಥಿರವಾಗಿತ್ತು , ಅವನ  ಕಣ್ಣುಗಳಲ್ಲಿ ಯಾವುದೇ ಭಾವನೆಗಳು ಕಾಣುತ್ತಿರಲಿಲ್ಲ ..
ಆದರೆ ಅವನ ಸ್ವರ ನೋವಿನಿಂದ ಕೂಡಿತ್ತು ಆದರೆ ಅವನ ಮುಖ ಪ್ರಶಾಂತವಾಗಿತ್ತು  ...  
ಅನುಜ್ ಅವನ ಕಡೆಯಿಂದ ಮುಖವನ್ನು  ತಿರುಗಿಸಿಕೊಂಡು ಗಂಭೀರವಾಗಿ ಕುಳಿತನು ... 

ಏನು ....? 
ಯಾವ ವಿಚಾರ ... 

ಎಂದು ಅನುಜ್ ಗಂಭೀರವಾಗಿ ಕೇಳಿದ ....

ಆ ಫೋಟೋದಲ್ಲಿ ಇರುವುದು ನನ್ನ ಗೆಳತಿ ಅಲ್ಲ .... 
ಆ ಪೋಟೋವನ್ನು ನಿಮ್ಮ ಕೈಯಿಂದ ಎಳೆದುಕೊಂಡದಕ್ಕೆ ನಿಮ್ಮ ಮನಸ್ಸಿಗೆ ಬೇಸರವಾಗಿಲ್ಲ ತಾನೇ ....?
ಬೇಸರವಾಗಿದ್ದರೆ ಕ್ಷಮಿಸಿ ನನ್ನನ್ನು ...
ನಾನು ಅಲ್ಪ ಬುದ್ದಿಯವನು  ಆ ಕ್ಷಣ ನನ್ನ ಮನಸಿಗೆ ತೋಚಿತು ಅದನ್ನು ಮಾಡಿದೆ ...

ಎಂದು ಅರುಣ್ ಹೇಳುತ್ತಾನೆ ... ಅಂತ ಹೇಳಿ  ಒಂದು ಬುಕ್ ತೆಗೆದು ಏನೋ ಬರೆಯುತ್ತಾನೆ ... 

( ಅರಿವಿಲ್ಲದೆ ಪರಿವಿಲ್ಲದೆ ... 
ಅಂಕು ಡೊಂಕು ರಸ್ತೆಯಲ್ಲಿ 
ಒಬ್ಬಂಟಿಯಾಗಿ ಹೋಗುತ್ತಿದ್ದೇನೆ ...
ಒಂಟಿಯಾಗಿ ಪ್ರಯಾಣ ಶುರು ಮಾಡಿದವನು 
ಒಂಟಿಯಾಗಿಯೇ ಕೊನೆಯಾಗುವುದು ಎಂದು ಅನಿಸುತ್ತಿದೆ  ...  )

ಅವನು ಬುಕ್ ನಲ್ಲಿ ಬರೆಯುವುದನ್ನು ಅನುಜ್ ಸೂದ್ ನೋಡುತ್ತ ಕುಳಿತ  ... 

ಏನು ಬರೆಯುತ್ತಾ ಇದ್ದಿಯಾ ... 

ಎಂದು ಅನುಜ್ ಸೂದ್ ಕೇಳುತ್ತಾನೆ .... 

ಮನಸಿಗೆ ತೋಚಿದ್ದ ಪದಗಳನ್ನು ಗೀಚಿದ್ದು ... 

ಎಂದು ಅರುಣ್ ಕುಮಾರ್ ಹೇಳುತ್ತಾನೆ... 

ಆ ...

ಎಂದು ಅನುಜ್ ಸೂದ್ ಹೇಳುತ್ತಾನೆ...

ನೀವು ನನ್ನ ಕ್ಷಮಿಸಿದ್ದಿರ ....

ಎಂದು ಅರುಣ್ ಕುಮಾರ್ ಕೇಳುತ್ತಾನೆ ....

ಆ ಕ್ಷಮಿಸಿದ್ದೇನೆ ...
ಮತ್ತೆ ಆ ಫೋಟೊದಲ್ಲಿ ಇರುವುದು ನಿನ್ನ ಗೆಳತಿ ಅಲ್ಲ ಎಂದು ನನಗೆ ಆಗಲೇ ಗೊತ್ತಾಯಿತು .....
ಆದರೆ ಅರುಣ್ ನೀನು ನಂಗೆ ಒಂದು ವಿಚಾರ ಹೇಳು  ನಿನ್ನ ಮಾತಿಗೆ ಮತ್ತು ಮುಖದ ಭಾವನೆಗೆ ಒಂದಕ್ಕೊಂದು ಸಂಬಂಧವಿಲ್ಲ ಅಲ್ಲ  ... 
ನೀನು ಆ ರೀತಿ  ಹೇಗೆ  ಮಾಡುತ್ತೀಯಾ  .... ? 
ಮತ್ತೆ ನೀನು ನನ್ನನ್ನು ಇದಕ್ಕಿಂತ ಮೊದಲು ಭೇಟಿ ಮಾಡಿದ್ದೀಯಾ ..? 

ಎ೦ದು ಅನುಜ್ ಅನುಮಾನದಿಂದ ಹೇಳಿದ .....

ಆದರೆ ಅವಳು ನನ್ನ ಗೆಳತಿಯು ಅಲ್ಲ ನನ್ನ ಹೆಂಡತಿಯೂ ಅಲ್ಲ .... 
ನನ್ನ ಮನಸ್ಸಿಗೆ ನೆಮ್ಮದಿ ನೀಡುವವಳು .... 
ನನ್ನ ನಗುವಿಗೆ ಕಾರಣವಾಗುವವಳು .... 

ಎ೦ದು ಗೊಂದಲದಿಂದ ಉತ್ತರ ನೀಡಿ ಸುಮ್ಮನಾಗಿ ಬಿಟ್ಟ ಅರುಣ್ .

ಅದನ್ನು ನಾನಾಗಲೇ ಊಹಿಸಿದೆ ,
ಆದರೆ ಮೊದಲು ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸು ... ?

ಎಂದು ಅನುಜ್ ಸೂದ್ ಹೇಳಿದ ...

ಏನು ಕೇಳಿ , ನಿಮ್ಮ ಪ್ರಶ್ನೆಗಳಿಗೆ ಸಾದ್ಯವಾದರೆ ಉತ್ತರ ನೀಡುತ್ತೇನೆ .. 
ಮತ್ತು ನೀವು ಹೇಗೆ ಊಹಿಸಿದಿರಿ ಎಂದು ಹೇಳಿ ನನಗೆ ...

ಎಂದು ಅರುಣ್ ಕುಮಾರ್ ಕೇಳುತ್ತಾನೆ. 

ನಿನ್ನ ಮಾತಿಗೂ ಮತ್ತು ನಿನ್ನ ಮುಖದ ಭಾವನೆಗೆ ಒಂದಕ್ಕೊಂದು ಸಂಬಂಧವಿಲ್ಲ .....
ನಿನ್ನ ಮಾತು ಕೇಳುತ್ತಿದ್ದರೆ ನೀನು ತುಂಬಾ ನೋವಿನಲ್ಲಿ ಇರುವೆ ಎಂದು ಅನಿಸುತ್ತಿದೆ....
ಆದರೆ ನಿನ್ನ ಮುಖ , ಭಾವನೆ ರಹಿತವಾಗಿ ಪ್ರಶಾಂತವಾಗಿದೆ .... 
ಒಬ್ಬ ಮನುಷ್ಯ ತನ್ನ ಭಾವನೆಗಳನ್ನು ಹೇಗೆ ತಡೆಹಿಡಿದುಕೊಳ್ಳಲು ಸಾಧ್ಯ ..
ಮತ್ತು ನೀನು ನನ್ನನ್ನು ಇದಕ್ಕಿಂತ ಮೊದಲು ಎಲ್ಲಿ ಯಾದರೂ ಭೇಟಿ ಮಾಡಿದ್ದೀಯಾ ... ? 
ನನಗೆ ನಿನ್ನನ್ನು ತುಂಬಾ ಹತ್ತಿರದಲ್ಲಿ ನೋಡಿದ್ದೇನೆ ಎಂದು ಅನಿಸುತ್ತಿದೆ ....
ನಿನ್ನನ್ನು ಈ ಮೊದಲು ಮಾತಡಿಸಿದಂತೆ  ಭಾಸವಾಗುತ್ತಿದೆ ....

ಎ೦ದು ಅನುಜ್ ಸೂದ್ ಕೇಳುತ್ತಾನೆ.....

ಇಲ್ಲ ಸರ್... 
ನಾನು ನಿಮ್ಮನ್ನು ಮುಖಾಮುಖಿಯಾಗಿ ಪರಿಚಯ ಮಾಡಿ ಕೊಂಡದ್ದು ಇವತ್ತೆ ....
ಇದೆ ಮೊದಲೇ , ಸರ್ ....
ಆದರೆ ನಿಮ್ಮನ್ನು ಟಿ ವಿ ಯಲ್ಲಿ ನೋಡಿ ಮೊದಲೇ ಪರಿಚಯವಾಗಿತ್ತು ...
ಆದರೆ ಮಾತನಾಡಲು ಮಾತ್ರ ಇವತ್ತೆ ಸಿಕ್ಕಿದ್ದು ಮತ್ತೆ 

ನಾನೂ ಚಿಕ್ಕ ವಯಸ್ಸಿನಿಂದಲೇ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಕಲಿತ್ತಿದ್ದೇನೆ .. 

ನನಗೆ ನನ್ನ ತಂದೆ ಹೇಳಿ ಕೊಟ್ಟದ್ದು ...
ಆದರೆ ನಾನು ನನ್ನ ಮುಖದ ಭಾವನೆಗಳನ್ನು ತಡೆದುಕೊಳ್ಳುವುದು ಮಾತ್ರ ಸಾದ್ಯ ಆದರೆ ನನ್ನ  ನೋವುಗಳನ್ನು ಮಾತಿನಲ್ಲಿ  ತಡೆಹಿಡಿಯಲು ಸಾದ್ಯವಾಗುವುದಿಲ್ಲ  ... 

ಎಂದು ನೋವಿನಿಂದ ಅರುಣ್ ಕುಮಾರ್ ಹೇಳಿದ ..

ಆ ಹಾಗೆ .. 
ಆದರೆ ನನಗೆ ನಿನ್ನನ್ನು ತುಂಬಾ ಹತ್ತಿರದಲ್ಲಿ ನೋಡಿದಂತೆ ಭಾಸವಾಗುತ್ತಿದೆ ...
ಆದರೆ ಅದು ನನ್ನ ಭ್ರಮೆಯಾಗಿರಬಹುದು ..
ಅದು ಸರಿ ನೀನು ಭಾವನೆಗಳನ್ನು ತಡೆದು ಕೊಳ್ಳುವ ವಿದ್ಯೆ ಕಲಿಯುವುದು ತುಂಬಾ ಕಷ್ಟ ಅಲ್ಲವಾ ... ಒಬ್ಬ ಮನುಷ್ಯ ಸಾಮಾನ್ಯವಾಗಿ ನೋವುಗಳನ್ನು ತಡೆದುಕೊಂಡು ಗಟ್ಟಿಯಾಗಿ ಇರಬಹುದು ಆದರೆ ಮುಖದಲ್ಲಿ ಮಂದಹಾಸ ಕಳೆದುಕೊಂಡು ಇರುವುದರ ಮೂಲಕ ಆ ವ್ಯಕ್ತಿ ನೋವಿನಲ್ಲಿ ಇದ್ದಾನೆ ಎಂದು ತಿಳಿಯುತ್ತಾದೆ ..  ಆದರೆ ನಿನ್ನ ಬಗ್ಗೆ ಹೇಳುವುದಾದರೆ ನಿನ್ನ ಮುಖ ಪೂರ್ತಿ ಮಂದಹಾಸ  ಬೀರುತ್ತಾ ಇದೆ ...  ಆದರೆ ಮಾತು ಮಾತ್ರ ನೋವಿನಲ್ಲಿ ಇರುವ ಹಾಗೆ ಇದೆ ... ನಿನ್ನ ಮುಖ ನೋಡಿದವರು. ಯಾರು ಬೇಕಾದರೂ ಹೇಳುತ್ತಾರೆ ನಿನಗಿಂತ ಖುಷಿಯಾಗಿ ಇರುವವರು ಈ ಲೋಕದಲ್ಲಿ

ಎಂದು ಅನುಜ್ ಸೂದ್  ಕೇಳುತ್ತಾನೆ ...

ಕಷ್ಟ ಹೌದು , ಆದರೆ ಅಸಾದ್ಯ ಅಲ್ಲ ..  
ಪೆಟ್ಟು ತಿನ್ನುವ ಬದಲು  ಅದನ್ನು ಕಲಿಯುವುದು ತುಂಬಾ ಸುಲಭ ಎಂದು ನನ್ನ ಅಭಿಪ್ರಾಯ... 

ಎಂದು ಹೇಳಿ ಅರುಣ್ ಕುಮಾರ್ ಹೇಳಿ .. ಏನೋ ನೆನಪದವನಂತೆ ಮತ್ತೆ ಕೇಳುತ್ತಾನೆ ..

ನೀವು  ಹೇಗೆ ... 
ಆ ಫೋಟೋದಲ್ಲಿ ಇರುವುದು ನನ್ನ ಹೆಂಡತಿ ಮತ್ತು ಗೆಳತಿ ಅಲ್ಲ ಎಂದು ಹೇಗೆ ಊಹಿಸಿದಿರಿ ... ?

ಎಂದು ಅರುಣ್ ಕುಮಾರ್ ಮತ್ತೆ ಕೇಳುತ್ತಾನೆ .. 

ಈ ಜಗತ್ತಿನಲ್ಲಿ ಹೆಂಡತಿಯನ್ನು ಯಾರು ಬೇರೆಯವರಿಗೆ ಹೊಳಿಸುವುದಿಲ್ಲ ಎಂಬುವುದು ನನ್ನ ಅಭಿಪ್ರಾಯ ...

.........

ಅಂತ ಅನುಜ್ ಸೂದ್ ಉತ್ತರಿಸಿದ ...
ಅರುಣ್ ಬಗ್ಗೆ ಯೋಚನೆ  ಮಾಡುತ್ತಾನೆ ...
( ಈ ಅರುಣ್ ಕುಮಾರ್ ಯಾರು ...? 
ಅವನ ಬಗ್ಗೆ  ತಿಳಿಬೇಕು ... ಅರುಣ್ ಕುಮಾರ್ ನ ವರ್ತನೆ ತುಂಬಾ ವಿಚಿತ್ರವಾಗಿದೆ , ಮಾತು ಕೂಡ ಗೊಂದಲ ಮಾಯವಾಗಿದೆ ..  ಆ ಹುಡುಗಿ ಯಾರು.... ? ಇವನು ಯಾಕೆ ಆ ಹುಡುಗಿಯ ಫೋಟೋವನ್ನು ಹಿಡಿದು ಕೊಂಡು ಇದ್ದಾನೆ ...  ಈ ಅರುಣ್ ಕುಮಾರ್ ಆ ಹುಡುಗಿಗೆ ತೊಂದರೆ ಕೊಡಲು ಹೋಗುತ್ತಿದ್ದಾನ ಹೇಗೆ .... 
ಆದರೆ ಇವನ ಬಗ್ಗೆ ತಿಳಿಯುವುದಾದರು ಹೇಗೆ .. ಇವನು ಒಳ್ಳೆಯವನ ಅಥವಾ ಒಳ್ಳೆಯವನಂತೆ ಮುಖವಾಡ ಹಾಕಿಕೊಂಡವನ .... ಎಲ್ಲ ಗೋಜಲು ಗೋಜಲಾಗಿದೆ , ಇವನ ಬಗ್ಗೆ ಹೇಗಾದರೂ ತಿಳಿಯಲೇ ಬೇಕು ...   ) ಅಂತ ಮನದಲ್ಲಿ ನೆನೆದು ಕೊಂಡನು ... 

ಓ .. 
ಹಾಗೇ ... ? 

ಅಂತ ಅರುಣ್ ಕುಮಾರ್ ಹೇಳುತ್ತಾನೆ ...

ಆ ... ಹಾಗೆಯೇ .... ? 

ಎಂದು ಅನುಜ್ ಸೂದ್ ಮರು ಉತ್ತರಿಸಿದ ..

ನನ್ನ ಬಗ್ಗೆ ನೀವು ತಪ್ಪು ಅಭಿಪ್ರಾಯ ವಿಟ್ಟುಕೊಳ್ಳದಿದ್ದರೆ ನಿಮಗೆ ನಾನು ಒಂದು ವಿಚಾರ ಹೇಳುತ್ತೇನೆ ....
ಅದನ್ನು ಕೇಳಿದ ಮೇಲೆ ನಾನು ಆ ವಿಚಾರದ ಬಗ್ಗೆ ಯಾವ ರೀತಿ ನನ್ನ ಮನವನ್ನು ಸಿದ್ದಗೊಳಿಸಬೇಕು ಎಂದು ನೀವು ನನಗೆ ತಿಳಿಸ ಬೇಕು  ....

ಎಂದು ಅರುಣ್ ಕುಮಾರ್ ಹೇಳುತ್ತಾನೆ  .. 

ನಾನ್ಯಾವ  ಅಭಿಪ್ರಾಯನ್ನು ಏಕೆ ವ್ಯಕ್ತಪಡಿಸಬೇಕು ... ?
ಅದಲ್ಲದೇ ನಿನ್ನ ಗೊಡವೆ ನನಗೇಕೆ ....?
ನೀವು ಯಾಕೆ ಇದನ್ನೆಲ್ಲ ನನಗೆ ಹೇಳಬೇಕಾದ ಪ್ರಮೆಯವೇನು ... ?

ಎಂದು ಅನುಜ್ ಸೂದ್  ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ  ..  

ಹಾಗಲ್ಲ .......! 
ಫೋಟೋ ಮತ್ತು ಲೇಟರ್ ಅನ್ನು ಹಿಡಿದು ಕೊಂಡಿದ್ದೇನೆ  ......
ಅದು ಕೂಡ ಒಂದು ಹುಡುಗಿಯ 
ಫೋಟೋ ... 
ನಿಮಗೆ ನಾಳೆ ಅಥವಾ ಯಾವತ್ತಾದರೂ ಯಾರಾದರೂ ಹುಡುಗಿಯ ಕೊಲೆ ಅಥವಾ ಅಪಹರಿಸಿದ ಸುದ್ದಿ ಸಿಕ್ಕಿ ನೀವು ನನ್ನ ಬಗ್ಗೆ ಯೋಚನೆ ಮಾಡಿ ..... 
ಅದನ್ನು ನಾನೇ ಮಾಡಿರುವುದು ಎಂದು ಅಂದುಕೊಂಡರೆ ಎಂಬ ಭಯ ಅಷ್ಟೇ ....

ಎಂದು ಅರುಣ್ ಕುಮಾರ್ ನಗುತ್ತ ಹೇಳಿದನು ...

ನಾನೆಂದೂ ಹಾಗೇ ಯಾರ ಮೇಲು ಸಂಶಯ ಪಡುವುದಿಲ್ಲ ..  
ಸಂಶಯ ಪಟ್ಟರು ಅದಕ್ಕೆ ಸರಿಯಾದ ಸಾಕ್ಷಿ ಪುರಾವೆಗಳು ಹೊಂದಿದ್ದಾರೆ ಮಾತ್ರ ಅನುಮಾನಿಸುತ್ತೇನೆ ... 

ಎಂದು ಅನುಜ್ ಸೂದ್ ಉತ್ತರಿಸಿದ ......   

ಅದು ಸರಿ .......! 
ಆದರೂ ಸ್ವಲ್ಪ ಭಯ ನಿಮಗೆ ಸಂಶಯ ಬಂದು ನನ್ನನ್ನು ಅರೆಸ್ಟ್ ಮಾಡಿದರೆ ಎಂದು ... 
ಪ್ರೀತಿಗಾಗಿ ಬೇಡುತ್ತಿರುವ ಈ  ಹುಚ್ಚು ಪ್ರಿಯಕರನನ್ನು ಜೈಲಿಗೆ ಹಾಕಿದರೆ,  ನನ್ನನ್ನು ಮತ್ತೆ ಆ ಹುಡುಗಿ ಮದುವೆಯಾಗದೆ ಇದ್ದಾರೆ .....
ನಾನು ಜೀವನ ಪೂರ್ತಿ ಒಬ್ಬಂಟಿಯಾಗಿ ಬದುಕ ಬೇಕು ...  

ಎಂದು ಅರುಣ್ ಕುಮಾರ್ ತಲೆ ಕೆರೆದು ಕೊಂಡು  ಹೇಳುತ್ತಾನೆ ..... 


✨✨✨✨✨✨✨✨✨✨✨✨✨✨✨

ಅರುಣ್ ಕುಮಾರ್ ಹಿಡಿದು ಕೊಂಡಿದ್ದ ಹುಡುಗಿಯ ಫೋಟೋ ಯಾರದು ... ?

ಈ ಅರುಣ್ ಕುಮಾರ್ ಯಾರು ... ? 

ಈ ಅರುಣ್ ಕುಮಾರ್  ಒಳ್ಳೆಯವನ ಅಥವಾ ಕೆಟ್ಟವನ .. ? 

ಇದೆಲ್ಲಾ ಪ್ರಶ್ನೆಗಳಿಗೆ ಮುಂದಿನ ಅಧ್ಯಾಯದಲ್ಲಿ ಉತ್ತರ ಸಿಗುತ್ತದೆ ...