She came unwillingly... - 16 in Kannada Drama by Kavya Pattar books and stories PDF | ಬಯಸದೆ ಬಂದವಳು... - 16

Featured Books
Categories
Share

ಬಯಸದೆ ಬಂದವಳು... - 16



ಅಧ್ಯಾಯ 15 : "ಅವಿಭಾಜ್ಯದ ಹೃದಯಗಳು, ವಿದಾಯದ ಹೊತ್ತಿನಲ್ಲಿ"

ಮನೆಯೆಲ್ಲಾ ಒಂದು ವಿಚಿತ್ರ ವಾದ ವಾತಾವರಣ ಹರಡಿತ್ತು ಶಶಿಧರ್ ಹೇಳಿದ ನಿರ್ಧಾರವು ಎಲ್ಲರ ಮನಸ್ಸಿಗೆ ದೊಡ್ಡ ಆಘಾತ ನೀಡಿತ್ತು 
ಎದೆ ಬಡಿತ ಹೊತ್ತ ಲಕ್ಕಿ ಕೋಪದಿಂದ ಶಶಿಧರ್ ಎದುರು ನಿಂತು" ಹೇ! ಏನೋ ಹೇಳ್ತಿದೀಯಾ ಶಶಿ...ಇಲ್ಲ ಕಂಡಿತಾ ನಾನಂತು ಇದಕ್ಕೆ ಒಪ್ಗೊಳೋದಿಲ್ಲ..ಇವರಿನ್ನು ಪುಟ್ಟ ಮಕ್ಕಳು ಪಾಪ ಅವಕ್ಕೆ ಇನ್ನು ಏನು ಗೊತ್ತಾಗಲ್ಲ ಅದರಲ್ಲೂ ಬೇರೆ ದೇಶಕ್ಕೆ ಕಳಿಸೋಕೆ ಒಪ್ಪಲ್ಲ" ... 

ಅಜ್ಜಿ ತನ್ನ ಭಾರವಾದ ಹೆಜ್ಜೆಗಳನ್ನು ಜೆಕೆ ನತ್ತ ಇಟ್ಟು ಅವನ ಹತ್ತಿರ ಬಂದಳು, ಮೊಮ್ಮಗನೆ ಈ ಅಜ್ಜಿ ನಾ ಬಿಟ್ಟು ನೀನು ಹೇಗೋ ಹೋಗ್ತಿಯಾ ಅವಳ ಕಣ್ಣೀರಿನ ಹೊಳೆ ಪ್ರೀತಿ ಮಿಶ್ರಿತ ಆ ಭಾವನೆ ಎಲ್ಲವನ್ನೂ ತೋರಿಸುತ್ತಿತ್ತು ... ಅಜ್ಜಿಯ ಕಣ್ಣಂಚಲ್ಲಿ ಕಣ್ಣೀರನ್ನು ನೋಡಿ ಜೆಕೆ ಹೃದಯಕ್ಕೆ ಕೈ ಹಾಕಿ ಕಿವುಚಿದಂತಾಗುತ್ತದೆ...

"ಅವಳು ಮೊಮ್ಮಗನನ್ನು ಬಲವಾಗಿ ಹಿಡಿದು ಹೃದಯದ ನೋವನ್ನು ಹೊರಹಾಕಿದಂತೆ ಗಟ್ಟಿಯಾಗಿ ತಬ್ಬಿಕೊಂಡಳು ...ಹಾಗೆ ಸೂರ್ಯನೆಡೆಗೆ ನೋಡುತ್ತಾ ಸೂರ್ಯ.. ಏನೋ ನೀನು ನಮ್ಮನ್ನೆಲ್ಲ ಬಿಟ್ಟು ಹೋಗ್ತೀಯಾ ನಿನ್ನ ಅಜ್ಜಿ ಮತ್ತೆ ಮನೆಯವರನ್ನು ಬಿಟ್ಟು ಹೋಗೋಕೆ ಹೆಗ್ರೋ ಒಪ್ಗೊಂಡ್ರಿ"...

"ಸೂರ್ಯನು ಸಹ ಅವಳ ಮಾತುಗಳಿಗೆ ಕರಗಿ ಅಜ್ಜಿ.. ಅಂತ ಹೇಳಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಳ್ತಾನೆ"...

ಆಗ ಜೆಕೆ ಮಕ್ಕಳು ಇವರೆಲ್ಲ ಆಡುವ ಮಾತುಗಳನ್ನು ಕೇಳಿಸಿಕೊಳ್ಳೋದನ್ನು ಗಮನಿಸಿ ಇದೆಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರಬಾರದೆಂದು...ಜೆಕೆ ಅಮ್ಮು ಮಕ್ಕಳನ್ನ ಹೊರಗಡೆ ಗಾರ್ಡನ್ ಗೆ ಕರ್ಕೊಂಡು ಹೋಗು... 
ಆದರೆ ಅವಳಿಗೂ ಎಲ್ಲರ ಮಾತುಗಳನ್ನು ಕೇಳಬೇಕೆಂದು ಆದರೆ ನಾ.. ಅಂತ ಹೇಳುವಷ್ಟರಲ್ಲಿ ಶ್!.. ಹೇಳ್ದೆ ಅಲ್ವಾ ಕರ್ಕೊಂಡು ಹೋಗು ಅಂತ ಅಂತ ಸ್ವಲ್ಪ ಕೋಪದಲ್ಲಿ ದ್ವನಿ ಹೆಚ್ಚಿಸುತ್ತಾನೆ.. 

ಆಗ ಅಮ್ಮು..ಸೂರ್ಯನ ಕಡೆಗೆ ಕೋಪದಲ್ಲಿ ಚೂಪಾದ ನೋಟವನ್ನು ಬೀರುತ್ತಾ ಮಕ್ಕಳನ್ನ ಕರ್ಕೊಂಡು ಅಲ್ಲಿಂದ ಹೋರಡ್ತಾಳೇ.. 

ಸೂರ್ಯ ಮನಸ್ಸಲ್ಲಿ ಗೊಂದಲ ಅಯ್ಯೋ.. ಹೇಳಿರೋದು ಜೆಕೆ ಆದರೆ ಇವಳು ನನ್ನ ಯಾಕೆ ಗುರಾಯಿಸ್ತಿದ್ದಾಳೆ...

ಶಶಿಧರ್ ಸಮಾಧಾನದಿಂದ " ಅಮ್ಮ" ಅವರೇನು ಅಲ್ಲೇ ಇರೋಕೆ ಹೋಗ್ತಿಲ್ಲ ಕೆಲವ 2 ವರ್ಷ ಅಷ್ಟೆ... ಮುಂದೆ ಅವರು ಹೊಸ ಭವಿಷ್ಯ ರೂಪಿಸಲು ಇದು ಅವಶ್ಯಕ... 

ಅದಕ್ಕೆ ಸುಧಾಕರ್ ಸಹ ಹೌದು ಅಮ್ಮ.. ನೀವು ಇತರ ಅಳ್ತಾ ಇದ್ದರೆ ಅವರಿಗೂ ಹೋಗೋಕೆ ಕಷ್ಟ ಆಗಲ್ವಾ?..

ಯಶೋದಳ ಹೃದಯದಲ್ಲಂತೂ ಹೇಳಲಾಗದ ನೋವು ಏನ್ರೀ ನೀವು ಮಕ್ಕಳನ್ನು ಅಷ್ಟು ದೂರ ಅದು 2 ವರ್ಷ ? ಅವರನ್ನ ಬಿಟ್ಟು ಒಂದು ದಿನ ಇರೋಕೆ ಆಗಲ್ಲ ನಮ್ಗೆ ಇನ್ನು.. ಅಷ್ಟು ದಿನ ಹೇಗೆ ಇರ್ತೀವಿ.. ಇಲ್ಲ ಅವರು ಇಲ್ಲೇ ಏನಾದ್ರೂ ಒದ್ಕೊಳ್ಳಿ ಇಲ್ಲ.. ನಿಮಗೆ ಕಂಪನಿಲೀ ಸಹಾಯ ಮಾಡ್ತಾರೆ.. ಆಗ ಸುಮತಿ ಸಹ ತನ್ನ ಮೌನವನ್ನು ಮುರಿಯುತ್ತಾಳೆ "ಹೌದು ಅಣ್ಣ ಮಕ್ಕಳನ್ನು ಬಿಟ್ಟು ನಮಗಂತೂ ಇರೋಕೆ ಆಗಲ್ಲ ನೀವು ಏನೇ ಹೇಳಿದರೂ ನಾವಂತೂ ಒಪ್ಪಿಕೊಳ್ಲಲ್ಲ"..

ಶೇಖರ್ ( ಸೂರ್ಯ ನ ಅಪ್ಪ) : "ಸುಮತಿ ಮಾವ ಹೇಳೋದ್ರಲ್ಲಿ ಏನು ತಪ್ಪಿದೆ" ...

ಸುಮತಿ ಶೇಖರ್ ಕಡೆ ನೋಟ ಬೀರಿ "ಏನ್ರೀ ನೀವು ಅವರದ್ದೇ ಸರಿ ಅಂತೀರಿ".. 

ಶೇಖರ್ : "ಹೌದು ಈಗ ಜಗತ್ತು ನಾವು ಅಂದುಕೊಂಡಿರೊ ತರ ಇಲ್ಲ ಟೆಕ್ನಾಲಜಿ ಅಲ್ಲಿ ತುಂಬಾ ಮುಂದುವರೆದಿದೆ ಇವರುಗಳು ಮುಂದೆ ಉತ್ತಮ ಜೀವನ ರೂಪಿಸಿಕೊಳ್ಳೋಕೆ ಇದು ತುಂಬಾ ಮುಖ್ಯ.. ಇದಕ್ಕೆ ಮಾಧವ್ ಹಾಗೂ ಭುವನ್ ಕೂಡ ಸಮ್ಮತಿಸುತ್ತಾರೆ"...

ಲಕ್ಕಿ : ಎನ್ರೋ ಮನೆ ಹೆಣ್ಣುಮಕ್ಕಳು ಬಿಟ್ಟು ಮಿಕ್ಕವರೆಲ್ಲರೂ ಹಾಗೆ ಹೇಳ್ತಿದಿರಿ... ನೀವು ಯಾರು ಏನೇ ಹೇಳಿದ್ರೂ ನಾನಂತು ಇವರನ್ನ ಕಳಿಸಿಕೊಡಲ್ಲ ಅಂತ ಹೇಳಿ ಲಕ್ಕಿ ಕೋಪದಿಂದ ತನ್ನ ಹೆಜ್ಜೆಗಳನ್ನು ಕಿತ್ತಿ ಅಲ್ಲಿಂದ ತನ್ನ ಕೋಣೆ ಕಡೆಗೆ ಹೋಗ್ತಾಳೆ..

"ಶಶಿಧರ್ ಅಮ್ಮ ... ನಿಂತುಕೋ ನಾವು ಹೇಳೋದು ಸ್ಪಲ್ಪ ಕೇಳು ... ಶಶಿಧರ್ ಎಷ್ಟೇ ಕರೆದರೂ ಲಕ್ಕಿ ತಿರಿಗಿ ನೋಡುವುದಿಲ್ಲ"

ಕೇಶವ್ ತನ್ನ ಧ್ವನಿಯನ್ನು ಎತ್ತಿ "ಅಣ್ಣ ನಿಂಗೆ ಗೊತ್ತಲ್ವಾ ನನಗೆ ಚಂದ್ರಿಕಾ ಗೆ ಜೆಕೆ ನಾ ಬಿಟ್ಟಿರೋಕೆ ಆಗೋಲ್ಲ ಅಂತಾ ಆದರೂ ಯಾಕೆ ನೀವು ಈ ಡಿಸಿಷನ್ ತಗೊಂಡ್ರಿ... ಅಂತ ತನ್ನ ನೋವನ್ನು ಹೊರಹಾಕ್ತಾನೆ" 

ಸುಧಾಕರ್ ಅವನೆಡೆಗೆ ನೋಡುತ್ತಾ "ನಮ್ಗೆ ಗೊತ್ತು ಕಣೋ ನೀನು ನಾವು ಮಾಡಿರೋ ಈ ನಿರ್ಧಾರಕ್ಕೆ ಒಪ್ಪಿಕೊಳ್ಳೋದಿಲ್ಲ ಅಂತ ಅದಿಕ್ಕೆ.. ನಾವು ನಿನಗೆ ಮುಂಚೆ ಹೇಳ್ದೆ ಇರೋದು"...

ಶಶಿಧರ್ ನೋವಿನಿಂದ" ನೀವೆಲ್ಲ ಯಾಕೆ ನಮ್ಮ ಮಾತನ್ನ ಅರ್ಥ ಮಾಡ್ಕೋತಿಲ್ಲ.. ನೀವೆಲ್ಲ ಈ ರೀತಿ ಮಾಡೋದ್ರಿಂದ ಆ ಮಕ್ಕಳು ಹೇಗೆ ಕುಷಿ ಇಂದ ಹೋಗೋಕೆ ಸಾಧ್ಯ"... 

ಮಾಧವ್ ( ಜೆಕೆ ಅಣ್ಣ) : "ನೀವೆಲ್ಲ ಅಮ್ಮಂದಿರು ಇದೆ ತರ ಹಟಾ ಮಾಡಿದ್ರೆ ಅವರು ತಮ್ಮ ಜೀವನ ನಾ ರೋಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ...

ಭುವನ್ ಸಹ ಇದಕ್ಕೆ ಪರವಾಗಿ "ಹೌದು.. ಸರಿಯಾಗೇ ಹೇಳ್ದೆ ಕಣೋ ನೀವೆಲ್ಲ ಅವರನ್ನು ಬೆಂಬಲಿಸೋದು ತುಂಬಾ ಅವಶ್ಯಕ".. ಈ ಮಾತಿಗೆ ಮನೆಯ ಸೊಸೆಯಂದಿರಾದ ಸೌಮ್ಯ,ರಮ್ಯಾ ಹಾಗೆ ವೃಂದಾ ಹೌದು.. ಮಾವಂದಿರು ಹೇಳೋದು ನಮಗಂತೂ ಸರಿ ಅನಸ್ತಿದೆ... ಅಂತ ಅವರು ಸಹ ಸಮ್ಮತಿಯನ್ನು ಸೂಚಿಸುತ್ತಾರೆ...

ಚಂದ್ರಿಕಾ ದುಃಖದಿಂದ ಎನ್ರಮ್ಮ ನೀವು ಹೀಗೆ ಹೇಳ್ತೀದಿರಾ...

ಇಷ್ಟರವರೆಗೂ ಮೌನದಿಂದಿಂದ ಸ್ವಾತಿ ಕಡೆಗೂ ತನ್ನ ಅಭಿಪ್ರಾಯವನ್ನು ಹೊರಹಾಕುತ್ತಾಳೆ "ಹೌದು ಆಂಟಿ..ಎಲ್ಲರೂ ಸರಿಯಾಗೇ ಹೇಳ್ತಿದ್ದಾರೆ ನೀವೆಲ್ಲ ಅಮ್ಮಂದಿರು ಅವರ ಮೇಲೆ ಇಟ್ಟಿರೋ ಪ್ರೀತಿ,ಹಾಗೆ ಕಾಳಜಿ ನಿಮಗೆಲ್ಲ ಹೀಗೆ ಮಾಡಸ್ತಿದೆ... ನಿಮ್ಮೆಲ್ಲರ ಪ್ರೀತಿ ಅವರಿಗೆ ರಕ್ಷೆ ಆಗಬೇಕೆ ಹೊರತು... ಅವರ ಸಾಧನೆಗೆ ಅಡ್ಡಿ ಆಗಬಾರದು.. ನಿಮ್ಮ ಮಕ್ಕಳನ್ನು  ನಾವು ಎಲ್ಲಿ ಕಳಿಸೋಲ್ಲ ಅಂತ ಇಲ್ಲೇ ಇಟ್ಟುಕೊಂಡು ಕೂತರೆ ಆಗ ಕಂಡಿತಾ ಅವರಂತೂ.. ಏನು ಸಾಧನೆ ಮಾಡಲ್ಲಾ ,ಹೀಗೆ ರೌಡಿಸಂ ಮಾಡ್ತಾ ಅಲೆದಾಡ್ತಾ ಇರ್ತಾರೆ.. ಮುಂದೆ ಇವರಿಗೆ ಯಾರು ಹೆಣ್ಣು ಕೊಡ್ತಾರೆ .... ಈಗ ಎಲ್ಲ ಅಮ್ಮಂದಿರು ಸ್ವಾತಿ ಹೇಳಿದ ಮಾತಿನ ವಿಚಾರವು ಸ್ವಲ್ಪ ಅವರ ಮನಸಲ್ಲಿ ಕಸಿವಿಸಿ ಮೂಡಿಸಲು ಶುರುವಾಗುತ್ತೆ..

ಜೆಕೆ ಸ್ವಾತಿ ಹತ್ತಿರ ಬಂದು ಅವಳ ಕಿವಿಯಲ್ಲಿ "ನಾವು ಯಾವಗ್ಲೆ ರೌಡಿಸಂ.. ಮಾಡಿದ್ವಿ.... 
ಸ್ಪಲ್ಪ ಸುಮ್ನೆ ಇರೋ ಅವರನ್ನ ಕನ್ವಿನ್ಸ್ ಮಾಡೋಕೆ ಹಾಗೆ ಹೇಳ್ದೆ .. ನೀನೊಂದು ವೆಸ್ಟ್ ಕಣೋ... ಓ.. ಹಾಗ ಸರಿ ಅಂತ ಕಿರುನಗೆ ಬೀರುತ್ತಾ ತಲೆಯಾಡಿಸುತ್ತಾನೆ

ಶಶಿಧರ್ ಸ್ವಾತಿ ಹೇಳಿದ ಮಾತುಗಳು ತೂಕವೆನಿಸಿ "ಸರಿಯಾಗೇ ಹೇಳ್ದೆ ಸ್ವಾತಿ.. ಈ ಚಿಕ್ಕ ಮಕ್ಕಳಿಗೆ ಗೊತ್ತಾಗುತ್ತೆ ಆದರೆ ನಿಮ್ಗಳಿಗೆ ಗೊತ್ತಾಗ್ತಾ ಇಲ್ಲವಲ್ಲ ಇದು ಅಂತ ತನ್ನ ಬೇಜಾರನ್ನು ವ್ಯಕ್ತ ಪಡಿಸುತ್ತಾನೆ"

ಕಮಲಾ ( ಶಶಿಧರ್ ಪತ್ನಿ)" ಸಹ ಸ್ವಲ್ಪ ಯೋಚಿಸಿ ಯಶು.. ನನಗೂ ಇವರು ಹೇಳೊ ಮಾತು ಸರಿ ಅನಸ್ತಿದೆ"... 

ಯಶೋಧಾ : "ಏನಕ್ಕ ನೀವು...ಅಂತ ಹೇಳುವಾಗ ಸುಮತಿ ಸಹ ಹೌದು ಅತ್ತಿಗೆ ಸ್ವಾತಿ ಹೇಳೋದು ನೋಡಿದ್ರೆ ಭಯ ಆಗ್ತಿದೆ.. ನಮ್ಮಗಳ ಪ್ರೀತಿ ಅವರಿಗೆ ಬೇಡಿ ಆಗ್ಬಾರ್ದು ಬದಲಿಗೆ ಅವರ ಶಕ್ತಿ ಆಗಬೇಕು"
ಆಗ ಯಶೋಧ,ಮತ್ತೆ ಚಂದ್ರಿಕಾ ಸ್ಪಲ್ಪ ಹೊತ್ತು ಯೋಚನೆ ಮಾಡ್ತಾರೆ ಅವರಿಗೂ ಸಹ ಅದು ಸರಿ ಎನ್ನಿಸಿ ಕಡೆಗೂ ಅವರಿಂದಲೂ ಒಪ್ಪಿಗೆ ಸೂಚಿಸುತ್ತಾರೆ...

ಶೇಖರ್ ( ಸೂರ್ಯ ನ ಅಪ್ಪ ) : ದೊಡ್ಡ ಮಾವ ಇಡೀ ಮನೇಲಿ ಇಲ್ಲಿವರೆಗೂ ನೀವು ಹೇಳಿದ ಒಂದೇ ಮಾತಿಗೆ ಸರಿ.. ಅಂತಿದ್ದ ಇವರು ಇವತ್ತು ನೋಡಿ ಸ್ವತಃ ನೀವೇ ಎಷ್ಟೇ ಬೇಡ್ಕೊಂಡ್ರು... ಒಂದು ಹೂ.. ಅನ್ನೋಕೆ ಇಷ್ಟು ಟೈಮ್ ತಗೊಂಡ್ರು... ಅಂತ ಒಂದು ಸಣ್ಣ ನಗುವಿನ ಮೂಲಕ ಹೇಳ್ತಾನೆ

ಶಶಿಧರ್ ಸಹ "ಅದು ನಿಜ ಆದರೆ ಇದು ಅವರ ಮಕ್ಕಳ ವಿಷಯ ಅಲ್ವಾ ಅವರ ವಿಷಯ ಬಂದಾಗ ಇವರೆಲ್ಲ ಯಾರ ಮಾತನ್ನೂ ಕೇಳೊಲ್ಲ ಬಿಡು.. ಆದರೆ ಅಮ್ಮ ಒಬ್ಬರು ಒಪ್ಪಿದರೆ ಸಾಕು.. 

ಕೇಶವ್ : ನಾನು ಕೂಡ ಇನ್ನೂ ಒಪ್ಪಿಲ್ಲ ... 

ಶಶಿಧರ್ : "ಕೇಶವ್.. ಅನ್ನೋ ಒಂದೇ ಧ್ವನಿಗೆ ಕೇಶವ್ ಅಯ್ಯೋ ಈಗ ಒಪ್ಪಿಕೊಂಡೆ ಅಂತ ಹೇಳೋಕೆ ಬಂದೆ ಅಣ್ಣ..." 

ಜೆಕೆ ಗೆ ಈಗ ಸ್ವಲ್ಪ ಸಮಾಧಾನದ ಭಾವ "ಅಬ್ಬಾ ಅಂತೂ ಎಲ್ಲಾ ಅಮ್ಮಂದಿರು ಒಪ್ಗೊಂಡ್ರು ಅಲ್ವಾ ಅಷ್ಟೆ ಸಾಕು ದೊಡ್ಡಪ್ಪ ಡಾರ್ಲಿಂಗ್ ನಾ ನಾನು ಒಪ್ಪಿಸ್ತಿನಿ ಬೀಡಿ ಅಂತ ಆತ್ಮವಿಶ್ವಾಸದಿಂದ ನುಡಿಯುತ್ತಾನೆ" 

ಶಶಿಧರ್ ಗೆ ಖುಷಿ ಸರಿ ಮಗನೆ ಅದಷ್ಟು ಬೇಗ ಒಪ್ಪಿಸು ಆಗ ಜೆಕೆ ಸರಿ ಅಂತಾ ತಲೆಯಾಡಿಸುತ್ತಾನೆ 
ಕಮಲಾ ಎಲ್ಲರಿಗೂ ಹಾ.. ಬನ್ನಿ ಈಗ ಲೇಟ್ ಆಗಿದೆ ಬೇಗ ಬೇಗ ಅಡುಗೆ ಮಾಡೋಣ.. ಅಲ್ಲಿಂದ ಅವರೆಲ್ಲ ಕಿಚನ್ ಗೆ ಹೋರಡ್ತಾರೇ .... ಹಾಗೆ ಶಶಿಧರ್,ಶೇಖರ್ ಎಲ್ಲರೂ ಹಾಲ್ ನಲ್ಲಿ ಮಾತಾಡ್ತಾ ಕುಡ್ತಾರೆ... 

"ಸ್ವಾತಿ , ಸೂರ್ಯ ಬನ್ನಿ ನಾವು ಗಾರ್ಡನ್ ಗೆ ಹೋಗೋಣ ಅಂತ ಜೆಕೆ ಅಲ್ಲಿಂದ ಅವರನ್ನು ಗಾರ್ಡನ್ ಕಡೆ ಕರೆದುಕೊಂಡು ಹೋಗ್ತಾನೆ"

ಅಲ್ಲೇ ಗಾರ್ಡನ್ ನಲ್ಲಿ ಒಂದು ಬೆಂಚ್ ಮೇಲೆ ಮೂವರು ಕುಳಿತುಕೊಳ್ತಾರೆ ಆಗ ಜೆಕೆ ಸ್ವಲ್ಪ ಅಂಜಿಕೆಯಿಂದಲೇ "ಸ್ವಾತಿ ಅಂಕಲ್ ಮತ್ತೆ ಆಂಟಿಗು ನೀನು ಬರೋ ವಿಷಯ ಹೇಳಿದೀಯಾ ತಾನೇ?

ಸ್ವಾತಿಯ ಮೊಗದಲ್ಲಿ ಯಾವುದೇ ಉತ್ಸಾಹ ಇರುವುದಿಲ್ಲ "ಇಲ್ಲ ಜೆಕೆ ನಾನು ನಿಮ್ಮ ಜೊತೆ ಬರೋಕಾಗೋಲ್ಲ"... 

ಅದನ್ನು ಕೇಳಿದ ಜೆಕೆ ಯ ಹೃದಯದಲ್ಲಿ ಕಸಿವಿಸಿ ಏನು.. ಆದ್ರೆ ಯಾಕೆ ?? ಅಂತ ಅವಳನ್ನು ಪ್ರಶ್ನೆ ಮಾಡಲು ಶುರು ಮಾಡ್ತಾನೆ 

ಸೂರ್ಯ  ಸಹ "ಹೌದು ಸ್ವಾತಿ ನೀನು ಬರ್ತೀಯಾ ಅಂತಾ ಅನಕೊಂಡಿದೀವಿ.. ಆದರೆ ನೀನು... 

ಸ್ವಾತಿ ಸಮಾಧಾನದಿಂದ ಉತ್ತರಿಸುತ್ತಾಳೆ "ಈ ವಿಷಯ ನಾನು ಮೊದಲೇ ಶಶಿಧರ್ ಅಂಕಲ್ ಕಾಲ್ ಮಾಡಿ ಕೇಳ್ದಾಗ ಹೇಳಿದ್ದೆ... ನಾನು ಇಲ್ಲೇ ಇದ್ಕೊಂಡು ಅಪ್ಪನಿಗೆ ಬಿಸಿನೆಸ್ ನಲ್ಲಿ ಹೆಲ್ಪ್ ಮಾಡ್ತೀನಿ ಅದು ಅಲ್ಲದೆ ಅಪ್ಪ ಕೂಡ ನನ್ನ ಒಂದು ದಿನ ಕೂಡ ಬಿಟ್ಟಿರೋಲ್ಲ... ಆದರೆ ನಾನು ಬರ್ದೆ ಇದ್ರೆ ಏನು ನೀವುಗಳು ಹೋಗ್ತಿದಿರಿ ಅಲ್ವಾ ಅಷ್ಟೆ ಸಾಕು ಅವಳ ಮೊಗದಲ್ಲಿ ಒಂದು ಚಿಕ್ಕ ನಗು".... 

ಜೆಕೆ ಅವಳ ಕಣ್ಣುಗಳನ್ನೇ ನೋಡುತ್ತಾ"ಹಾಗಾದ್ರೆ ನನ್ನ ಗತಿ ಏನು ನಾನು ನಿನ್ನ  2 ವರ್ಷ ಬಿಟ್ಟಿರ್ಬೇಕಾ ನನ್ನಿಂದ ಆಗೋಲ್ಲ ಕಣೆ"...

ಸ್ವಾತಿ ಸ್ವಲ್ಪ ಗೊಂದಲದಿಂದ "ಏನೋ !ಹೀಗೆ ಹೇಳ್ತೀದಿಯಾ?.. ಏನೋ ನಾನು ನಿನ್ನ ಗರ್ಲ್ ಫ್ರೆಂಡ್.. ನೀನು ನನ್ನ ಒಂದು ನಿಮಿಷ ನು ಬಿಟ್ಟು ಇರೋದೇ ಇಲ್ಲ ಅಣ್ಣೋತರ ಆಡ್ತಿದೀಯ ಅಂತ ಹೇಳಿ ಒಂದು ಜೋರಾದ ನಗುವನ್ನು ಬಿರುತ್ತಾಳೆ"...

"ಜೆಕೆ ಅದು ನಿಜ ಅಂತ ತನ್ನೊಳಗೆ ಪಿಸು ನುಡಿಯುತ್ತಾನೆ...  ಸ್ವಾತಿ ಗೆ ಕೇಳಿಸದೆ ಇರುವುದರಿಂದ ಆ... ಏನಂದೇ? ಅಂತ ಪ್ರಶ್ನಿಸುತ್ತಾಳೆ"..

ಸೂರ್ಯ ದ್ವನಿ ಎತ್ತಿ "ಅಲ್ಲ ಹಾಗಲ್ಲ ಇಷ್ಟು ವರ್ಷ ಎಲ್ಲಾ ಜೊತೆಗೆ ಇದ್ದು ಈಗ ನೀನು ಬರಲ್ಲ  ಅಂದೆ ಅಲ್ವಾ ಅದಿಕ್ಕೆ ".... 

ಸ್ವಾತಿ : "ಓ.. ಹಾಗ ನೋಡಿ ಮತ್ತೆ 2 ವರ್ಷ ಆದಮೇಲೆ ನೀವು ಇಲ್ಲೇ ಬರ್ತೀರಾ ಅಲ್ವಾ .. ನಿಜ ನಂಗೂ ನಿಮ್ಮನ್ನೆಲ್ಲ ಬಿಟ್ಟು ಇರೋಕೆ ತುಂಬಾ ಕಷ್ಟ ಆಗುತ್ತೆ..

ಜೆಕೆ ನೇರವಾಗಿ" ಸರಿ ಹಾಗಿದ್ರೆ ನಾನು ಹೋಗಲ್ಲ ಕಾರ್ತಿಕ್,ಸೂರ್ಯ ಅಷ್ಟೆ ಹೋಗ್ತಾರೆ"..

ಸ್ವಾತಿ : "ಹೇ!.. ಏನೋ ನೀನು ಒಳ್ಳೆ ಚಿಕ್ಕ ಮಕ್ಕಳ ತರ ನೀನೆನಾದ್ರು ಹೋಗ್ಲಿಲ್ಲ ಅಂದ್ರೆ ನನ್ನ ಮೇಲೆ ಆಣೆ... ಅವನ ಮನದ ದುಗುಡ ಇವಳಿಗೆ ಅರ್ಥವಾಗುತ್ತಿಲ್ಲ ಸ್ವಾತಿ.. ( ಇವಳಿಗೆ ನಾನ್ ಸತ್ತರು ನನ್ನ ಫೀಲಿಂಗ್ಸ್ ಅರ್ಥ ಆಗೋಲ್ಲ ಅನ್ಸುತ್ತೆ ) ಸರಿ ನೀನು ಆಣೆ ಅದು ಎಲ್ಲಾ ಹಾಕ್ಬೇಡ ನಾನು ಹೋಗ್ತೀನಿ...

ಸ್ವಾತಿ : "ಗುಡ್ ಬಾಯ್ ಎಂದು ಹೇಳುತ್ತಾ ಒಂದು ಚಿಕ್ಕ ಕಿರುನಗೆಯನ್ನು ಬೀರುತ್ತಾಳೆ ... ಏನನ್ನೋ ಗಮನಿಸಿದ ಸ್ವಾತಿ "ಸೂರ್ಯ ಅಲ್ಲಿ ನೋಡೋ ಕೋಪದಲ್ಲಿ ಕೆಂಪಾದ ಎರಡು ಕಣ್ಗಳು ನಿನ್ನೆ ನೋಡ್ತಿವೆ".. 

ಸೂರ್ಯ ಧೈರ್ಯದಿಂದ" ಏನೇ ಹೇಳ್ತೀತಿದಿಯಾ ನನ್ನ ಮೇಲೆ ಕೋಪ ಮಾಡ್ಕೊಳೋ ದೈರ್ಯ ಯಾರಿಗಿದೆ"..

ಜೆಕೆ ನಗುತ್ತಲೇ" ಸ್ಪಲ್ಪ ಹಿಂದೆ ತಿರುಗಿ ನೋಡಪ್ಪಾ ದೊಡ್ಡ ಸೈತಾನ್ ನಿನ್ನ ಹಿಂದೇನೆ ಇದೆ" .. 

ಯಾರದು ಅಂತ ಹಿಂದೆ ತಿರುಗಿ ನೋಡ್ತಾನೆ... ಅಮ್ಮು ನೀನಾ .... 

ಅವಳ ಕೋಪ ಹೇಗಿತ್ತೆಂದರೆ ಪಾಪದ ಸೂರ್ಯ ಅವಳ ಕೈಯಲ್ಲಿ ಆ ಬಡ ಜೀವದ ಪಾಡು "ಹೂ.. ನಾನೇ ಕಣಪ್ಪ"

ಎಷ್ಟು ದೈರ್ಯ ನಿಂಗೆ ನನ್ನೇ ಬಿಟ್ಟು UK ಗೆ ಹೋಗ್ತೀಯ ಅದು ನನ್ನಿಂದಾನೆ ಈ ವಿಷಯ ಮುಚ್ಚಿಟ್ಟಿದಿಯ ಹಾ!.

ಜೆಕೆ ಮತ್ತು ಸ್ವಾತಿ ಅವರ ಜಗಳವನ್ನು ಮಜಾ ತೆಗೆದುಕೊಳ್ಳುತ್ತಾ ನೋಡುತ್ತಿರುತ್ತಾರೆ...

ಸೂರ್ಯ ಭಯದಲ್ಲೇ ಅಯ್ಯೋ!.. ಆ ವಿಷಯ ದೊಡ್ಡ ಮಾವ ಇವತ್ತೇ ನಂಗೆ ಹೇಳಿದ್ದು ಬೇಕಿದ್ರೆ ಜೆಕೆ ನೇ ಕೇಳು ಅಲ್ವೇನೋ... 

ಜೆಕೆ ಅವನಿಗೆ ಇನ್ನೂ ಕಾಡಿಸಲು ಶುರು ಮಾಡ್ತಾನೆ "ಆ.... ನನಗೇನೋ ಗೊತ್ತು.. ಮೊನ್ನೆ ಏನೋ ಹೇಳ್ತಿದ್ದೇ ಮಗ ಫಾರಿನ್ ಕಂಟ್ರಿ ಗೆ ಹೋಗ್ಬೇಕು ಅನ್ಸ್ತಿದೆ ಅಂತ ಎನ್ ಏನೋ... ಹೇಳ್ತಿದ್ದ ಅಮ್ಮು"

ಸೂರ್ಯನ ಜೀವ ಬಾಯಿಗೆ ಬಂದಂಗೆ ಆಯ್ತು "ಲೋ.. ಏನೋ ಹೇಳ್ತಿದೀಯಾ ಅವತ್ತು ನಾನ್ ಹೇಳಿದ್ದು ಟ್ರಿಪ್ ಗೆ ಅಂತ ಅದಕ್ಕೆ ಇದಕ್ಕೆ ಯಾಕೋ ಸಿಂಕ್ ಮಾಡ್ತಿದೀಯಾ... ಅಯ್ಯೋ ಅಮ್ಮು ಪ್ಲೀಸ್ ಕಣೇ ಅವನ್ ಮಾತನ್ನ ನಂಬೇಡ ನಾನ್ ಹೇಳಿದ್ದು ಸತ್ಯ.. ಅವನ್ ಬಗ್ಗೆ ನಿಂಗೆ ಗೊತ್ತಲ್ವಾ "

ಅಮ್ಮುನ ಕಣ್ಣುಗಳು ಕೋಪದಲ್ಲಿ ಕೆಂಪಾಗಿ ನನ್ನನ್ನ ದಡ್ಡಿ ಅನ್ಕೊಂಡಿದೀಯೆನೋ..ನಂಗೆ ಗೊತ್ತು ನೀನು ಅಲ್ಲಿಗೆ ಹೋಗ್ತಿರೋದೆ ಫಾರಿನ್ ಹುಡುಗಿನ ಕ್ಯಾಚ್ ಹಾಕೋಕೆ ಅಂತಾ ,ನನ್ನ ಹತ್ರ ಮಾತಾಡ್ಬೇಡ ನೀನು ಇನ್ಮೆಲಿಂದ..ಅಂತ ಕೋಪ ಮಾಡ್ಕೊಂಡು ಅಲ್ಲಿಂದ ಹೊರಡ್ತಾಳೆ ... ಅಮ್ಮು ನಿಂತ್ಕೋ.. ಅಂತ ಹೇಳುತ್ತಾ ಅವಳ ಹಿಂದೆಯೇ ಹೋರಡುತ್ತಾನೆ  

ಜೆಕೆ ಜೋರಾಗಿ ನಗುತ್ತಾ" ಮೊದಲು ಹೋಗೋ ಅವಳನ್ನ ಸಮಾಧಾನ ಮಾಡು".. 

ಸ್ವಾತಿ :" ಸರಿ ಜೆಕೆ ಟೈಮ್ ಆಯ್ತು ಹೋರಡ್ತೀನಿ
ಜೆಕೆ ಬೇಜಾರಿನಲ್ಲಿ  ಅಯ್ಯೋ..ಇಷ್ಟು ಬೇಗಾನಾ ?

ಸ್ವಾತಿ : "ಹಲೋ ನಾನ್ ಬಂದು ತುಂಬಾ ಹೋತ್ತಾಯ್ತು.. ಸರಿ ಆಯ್ತು ನಾನೇ ಬಿಟ್ಟು ಬರ್ತೀನಿ ನಡಿ ಅಂತ ಜೆಕೆ ಸ್ವಾತಿ ನಾ ಮನೆ ಬಿಟ್ಟು ಬರ್ತಾನೆ"...

--- 

ಸ್ವಲ್ಪ ಸಮಯದ ನಂತರ ಜೆಕೆ ಲಕ್ಕಿ ಅಜ್ಜಿ ಕೋಣೆಗೆ ಬರುತ್ತಾನೆ ಡಾರ್ಲಿಂಗ್
ಆದರೆ ಲಕ್ಕಿ ಕೋಪದಲ್ಲಿ ತನ್ನ ಮುಖವನ್ನು ಅವನೆಡೆಗೆ ನೋಡದೆ ಮೋಖ ತಿರುಗಿಸಿ ತನ್ನ ಬೆಡ್ ಮೇಲೆ ಕುಳಿತಿರುತ್ತಾಳೆ ... 

ಜೆಕೆ ವೃದುವಾದ ದ್ವನಿಯಲ್ಲಿ "ಡಾರ್ಲಿಂಗ್ ನಿಂಗೆ ಈ ಕೋಪ ಎಲ್ಲಾ ಸೂಟ್ ಆಗಲ್ಲ ಬೀಡು.. ನೀನು ನಗ್ತಾ ಇದ್ರೇನೆ ಚಂದಾ... ಪ್ಲೀಸ್ ಮಾತಾಡು ಲಕ್ಕಿ"...

ಲಕ್ಕಿ ಅವನ ಮಾತುಗಳಿಗೆ ಕರಗಿ" ಏನೋ ಮಾತಾಡಲಿ...ನಿನ್ನ 2 ವರ್ಷ ಹೇಗೋ ಬಿಟ್ಟಿರ್ಲಿ" ಅವಳ ಕಣ್ಣುಗಳಲ್ಲಿ ನೋವು ಎದ್ದು ಕಾಣಿಸುತ್ತಿರುತ್ತದೆ.. 

ಜೆಕೆ ಅವಳಿಗೆ ಧೈರ್ಯ ತುಂಬಲು ಧೈರ್ಯದ ಮಾತುಗಳನ್ನು ನುಡಿಯುತ್ತಾನೆ"ಡಾರ್ಲಿಂಗ್ ಇದೆಲ್ಲ ದೊಡ್ಡ ಮ್ಯಾಟರ್ ಅಲ್ವೆ ಅಲ್ಲ ನಾನು ನಿನ್ ಜೊತೆ ಇಲ್ಲದೆ ಇದ್ರೆ ಏನು ನಿನ್ ಹತ್ರ ಡೈಲಿ ವಿಡಿಯೋ ಕಾಲ್ ಹಾಕಿ ಮಾತಾಡ್ತೀನಿ".. 

ಲಕ್ಕಿ ಮುನಿಸಿಕೊಂಡ ಮೊಗದಿಂದ" ಹಾಗಿದ್ರೆ ನೀನು ಹೋಗೋಕೆ ಫಿಕ್ಸ್ ಆಗಿದೆಯಾ ಅಂತಾ ಆಯ್ತು".. 

ಜೆಕೆ :" ಹೌದು ಡಾರ್ಲಿಂಗ್ ನಿಂಗೆ ಗೊತ್ತಲ್ವಾ ನಾನು ದೊಡ್ಡಪ್ಪನ ಮಾತನ್ನ ಯಾವತ್ತೂ ಮಿರಲ್ಲ ಅಂತ ಅದು ಅಲ್ದೇ ಇದು ಅವರ ಆಸೆ ಹೇಗೆ ಪೂರೈಸದೆ ಇರ್ಲಿ"...

ಲಕ್ಕಿಯ ಸ್ವಲ್ಪ ಹೊತ್ತು ಮೌನವಾಗುತ್ತಾಳೆ ಮೊಮ್ಮಗನೇ... ಜೆಕೆ ಮತ್ತೆ ತನ್ನ ಮಾತುಗಳನ್ನು ಮುಂದುವರೆಸುತ್ತಾ ಅದು ಅಲ್ದೇ ಸ್ವಾತಿ ಅಂತ ಮುದ್ದಿನ ಸೊಸೆ ಈ ಮನೆಗೆ ಬರ್ಬೇಕು  ಅಂದ್ರೆ ನಾನು ಸ್ಪಲ್ಪ ಕಷ್ಟ ಪಡಬೇಕು ಅಲ್ವಾ ಡಾರ್ಲಿಂಗ್ ಅಂತ ಒಂದು ಚಿಕ್ಕ ಕಿರುನಗೆಯೊಂದಿಗೆ ಹೇಳುತ್ತಾನೆ... ಪ್ಲೀಸ್ ಡಾರ್ಲಿಂಗ್ ಒಪ್ಗೊ ದೊಡ್ಡಪ್ಪನಿಗೆ ನಿನ್ನ ಒಪ್ಪಸ್ತಿನಿ ಅಂತ ದೊಡ್ಡ ಡೈಲಾಗ್ ಬೇರೆ ಹೊಡದಿದೀನಿ ನಿನ್ನ ಮೊಮ್ಮಗನ ಮರ್ಯಾದೆ ಉಳಿಸು... 

ಲಕ್ಕಿ ಅವನ ಆ ಮುದ್ದು ಮಾತುಗಳಿಗೆ ಇಲ್ಲಾ ಎನ್ನಲಾಗದೆ "ಸರಿ ನನ್ನ ಮೊಮ್ಮಗನ ಆಸೆನೇ ನನ್ನ ಆಸೆ". ಜೆಕೆ ಗಂತೂ ತುಂಬಾ ಖುಷಿಯಾಗಿ "ಅಬ್ಬಾ ಅಂತೂ ಒಪ್ಪಿಕೊಂಡೆ ಅಲ್ವಾ ಸಾಕು... ಆದರೆ ಲಕ್ಕಿ ತನ್ನ ಇನ್ನೊಂದು ಮಾತನ್ನು ಹೇಳುತ್ತಾಳೆ ಆದರೆ ನನಗೆ ಒಂದು ಮಾತು ಕೊಡು... ಜೆಕೆ ಕುತೂಹಲದಿಂದ ಏನದು ಡಾರ್ಲಿಂಗ್?? 

ಲಕ್ಕಿ : ನೀನು ಅಲ್ಲಿಂದ ಬಂದ್ಮೇಲೆ ಸ್ವಾತಿ ಗೆ ಪ್ರಪೋಸ್ ಮಾಡ್ತೀನಿ ಅಂತಾ...
ನಗುತ್ತಲೇ" ಅಷ್ಟೆ ತಾನೇ ಕಂಡಿತಾ ಮಾಡ್ತೀನಿ ಈಗ ಊಟಕ್ಕೆ ನಿನಗೋಸ್ಕರ ಎಲ್ಲರೂ ಕಾಯ್ತಿದ್ದಾರೆ ಬಾ ಹೋಗೋಣ...ಅಂತ ಊಟಕ್ಕೆ ಕರೆದುಕೊಂಡು ಹೋಗ್ತಾನೆ"...

ನಂತರ ಮರುದಿನ ಶಶಿಧರ್ ಕಾರ್ತಿಕ್ ಎಷ್ಟೇ ಬೇಡ ಅಂತಾ ಹಟ ಮಾಡಿದರು ಅವನ ಮಾತನ್ನ ಕೇಳ್ದೆ.. ಅವನನ್ನು ಜೆಕೆ,ಸೂರ್ಯ ನಾ ಜೊತೆ ಹೋಗೋಕೆ ಒಪ್ಪಿಸುತ್ತಾರೆ , ಇನ್ನೂ ಪ್ರವೀಣ್ ಮೊದಲೇ ಹೇಳಿರೋ ಹಾಗೆ ಅವನು ಕೂಡ ಇಲ್ಲೇ ಇರ್ತೀನಿ ಅಂತಾ ಹೇಳ್ತಾನೆ...

------- 

ಒಂದು ವಾರದ ನಂತರ ಜೆಕೆ,ಸೂರ್ಯ ಹಾಗೆ ಕಾರ್ತಿಕ್ ಮೂವರು ಮನೆಯವರಿಗೆಲ್ಲ ವೀದಾಯ ಹೇಳಿ ಹೊರಡುವ ಸಮಯ ಬಂದೇ ಬಿಟ್ಟಿತು

ಮನಸ್ಸಿನಲ್ಲಿ ಅಳಲು, ನೋಟಗಳಲ್ಲಿ ನೋವು, ಹೃದಯದ ತೀವ್ರ ಆತಂಕ—ಎಲ್ಲವೂ ಮಿಶ್ರವಾಗಿತ್ತು. ಪ್ರೀತಿಯ ಸ್ಪರ್ಶಗಳು, ಕೊನೆಗೂ ಬಿಡಬೇಕಾದ ನೋವು, ಪರಸ್ಪರ ಪ್ರೀತಿಯ ಬೆರಗು ಎಲ್ಲರಲ್ಲೂ ಸ್ಪಷ್ಟವಾಗಿತ್ತು.

ಕಣ್ಣೀರಿನ ಹೊಳೆಯೊಂದಿಗೆ, ಧೈರ್ಯ ಮತ್ತು ಸಂಯಮವನ್ನು ಮನಸ್ಸಿನೊಳಗೆ ಒತ್ತಿಕೊಂಡು, ಹೃದಯದ ಆಶೀರ್ವಾದಗಳನ್ನು ಕಟುಹೃದಯದಿಂದ ಸ್ವೀಕರಿಸಿದರು. ದೂರ ಹೋಗುವ ಮುನ್ನ, ಹಗುರವಾದ ಉಸಿರಾಟ, ಶಾಂತವಾದ ನಿಶ್ಚಲತೆ, ಮತ್ತು ಮನಸ್ಸಿನ ಆಳದ ಪ್ರೀತಿ ಎಲ್ಲರೊಳಗಿದ್ದೆ.

ಅವರು ಎಲ್ಲರ ಆಶೀರ್ವಾದ ಮತ್ತು ಪ್ರೀತಿಯನ್ನು ಹೃದಯದಲ್ಲಿ ಹಿಡಿದು, ಹೊಸ ಹಾದಿಗೆ ಹೆಜ್ಜೆ ಹಾಕಿದರು.

ನಂತರ ಏರ್ಪೋರ್ಟ್ ಗೆ ಕೇವಲ ಶೇಖರ್ , ಮಾಧವ್, ಭುವನ್,ಕೇಶವ್,ಸ್ವಾತಿ ಮತ್ತು ಪ್ರವೀಣ್ ಇಷ್ಟು ಜನ ಮಾತ್ರ ಬಂದಿರುತ್ತಾರೆ ಎಲ್ಲರ ಮನಸ್ಸುಗಳು ಆಗಲೇ ಭಾರವಾಗಿರುತ್ತವೆ

ಕೇಶವ್ ಮೌನ ಮುರಿದು" ನೋಡಿ ನೀವು ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ... ನಿಮಗೆ ಯಾವಗ್ಲೇ ಅವಶ್ಯಕತೆ ಇದ್ರು ನಂಗೆ ಒಂದು ಕಾಲ್ ಅಥವಾ ಮೆಸೇಜ್ ಹಾಕಿ... ಕಾರ್ತಿಕ್ ಸ್ಪೆಷಲಿ ನಿಂಗೆ"..

ಕಾರ್ತಿಕ್ : ಸರಿ ಅಂಕಲ್ ಅಂತ ತಲೆಯಾಡಿಸುತ್ತಾನೆ... ಶೇಖರ್ ನೋಡಿ ಮೂವರು ಹುಷಾರಾಗಿ ಹೋಗಿ ಹೋದಮೇಲೆ ಕಾಲ್ ಮಾಡಿ ಓಕೆ ನಾ..

ಜೆಕೆ :ಸರಿ ಮಾವ ನಾನು ಬರೋವರ್ಗು ಅತ್ತೇನಾ ಚೆನ್ನಾಗಿ ನೊಡ್ಕೋಬೇಕು ಏನು?? ಅಂತ ಛೇಡಿಸುತ್ತಾನೆ

ಶೇಖರ್ : ಚೆನ್ನಾಗಿ ಏನೋ ನೋಡ್ಕೋತೀನಿ ಆದರೆ ಬರೋವಾಗ ಇನ್ನೊಂದು ಅತ್ತಿಗೆನ ಕರ್ಕೊಂಡು ಬಾರೋ.... 

ಮಾಧವ್  ಕಣ್ಣುಗಳನ್ನು ಅರಳಿಸಿ "ಭಾವಾ  ಏನಿದು ನಾನು ಭುವಿ ಇನ್ನು ಇಲ್ಲೇ ಇದೀವಿ ನೀವು ಹೇಳಿರೋ ವಿಷ್ಯ ನಾ ಅತ್ತಿಗೆಗೆ ಹೇಳಿದ್ರೆ"

"ಶೇಖರ್ ಭಯಬಿದ್ದು ಸುಮ್ನೆ ಹೇಳ್ದೆ ಕಣ್ರೋ ನೀವೇನು ಸೀರಿಯಸ್ ಆಗೆ ತಗೋತೀರಾ ಪಾ"...

ಜೆಕೆ ಸ್ವಾತಿ ನಾ ಗಮನಿಸ್ತಾನೆ... ಸ್ವಾತಿ ಮೌನವಾಗಿ ನಿಂತಿರುತ್ತಾಳೆ ಅವಳ ಕಣ್ಣಂಚಲ್ಲಿ ನೀರನ್ನು ನೋಡಿ ಹೇ!... ಸ್ವಾತಿ ಅಳ್ತಾ ಇದಿಯಾ ಅದು ನೀನು.. ಆಗ ಸ್ವಾತಿ ತನ್ನ ನೋವನ್ನು ಸಹಿಸಿಕೊಳ್ಳಲಾಗದೆ ಜೆಕೆ ಯನ್ನೂ ಬಿಗಿದಪ್ಪಿಕೊಳ್ಳುತ್ತಾಳೆ... ನಿಮ್ಮನ್ನ ಬಿಟ್ಟು 2 ವರ್ಷ ಹೇಗೋ ಇರೋದು ನಂಗೆ ತುಂಬಾ ಅಳು ಬರ್ತಿದೆ ... 

ಜೆಕೆ : "ನೋಡಿದಾ ನಾನು ಮೊದಲೇ ಹೇಳಿದ್ದೆ ಹೋಗಲ್ಲ ಅಂತ ನೀನೇ ಹಠ ಮಾಡಿ ಈಗ ಅಳ್ತಾ ಇದ್ರೆ ಹೇಗೆ... ನೀನು ಹೀಗೆ ಅಳ್ತಾ ಇದ್ರೆ ನಾವು ಹೋಗೋದೇ ಇಲ್ಲ "..

ಸ್ವಾತಿ ತನ್ನ ಕಣ್ಣೀರನ್ನು ಒರೆಸಿಕೊಳ್ಳುತ್ತಾ "ಹೇ!... ಇಲ್ಲ.. ಇಲ್ಲ ನಾನು ಅಳೋದಿಲ್ಲ.. ನೀವೆಲ್ಲ ಹುಷಾರಾಗಿ ಹೋಗಿ ರೀಚ್ ಆದ್ಮೇಲೆ ಕಾಲ್ ಮಾಡಿ.". 

ಜೆಕೆ : ಸ್ವಾತಿ...ಆದಷ್ಟು ಬೇಗ ಬರ್ತೀನಿ ಕಣೆ ನನಗೋಸ್ಕರ ವೇಟ್ ಮಾಡ್ತೀಯಾ ಅಲ್ವಾ ಅವಳ ಕಣ್ಣುಗಳನ್ನೇ ನೋಡುತ್ತಾ ಕೇಳಿದಾಗ... 

ಸ್ವಾತಿ : "ಇದೇನೋ ಹೀಗೆ ಕೇಳ್ತಿದೀಯ ಕಂಡಿತಾ ಕಾಯ್ತಿನಿ"... 

ಜೆಕೆ : "ತಲೆಯಾಡಿಸುತ್ತಾನೆ ಆದರೆ ತನ್ನ ಮನಸ್ಸಿನಲ್ಲಿ ಅಯ್ಯೋ ಪೆದ್ದು ನಾನು ಹೇಳೋದು ನಿಂಗೆ ಅರ್ಥಾನೆ ಆಗ್ತಿಲ್ಲ"..

ಪ್ರವೀಣ್ : ನಾನು ನಿಮ್ಮನ್ನ ಮಿಸ್ ಮಾಡ್ಕೊತಿನಿ ಕಣ್ರೋ ಅಂತ ಮೂವರ ಮೇಲೆ ಎಗರ್ತಾನೆ.. 
ಆಗ ಅವರುಗಳು ತಮ್ಮ ಬ್ಯಾಲೆನ್ಸ್ ತಪ್ಪಿ ಸೂರ್ಯ, ಹೇ! ಇದೆ ರೀತಿ ಏನೋ ನಿಂದು ತಬ್ಬಿಕೊಳ್ಳೋದು ಜೆಕೆ ,ಸ್ಪಲ್ಪ ಉಸಿರಾಡೊಕು ಸ್ಪೇಸ್ ಕೊಡೋ... ಸ್ವಾತಿ ಕೂಡ ನಾನು ಬಂದೆ... 5 ಜನ ತಬ್ಬಿ ಕೊಳ್ಳುವುದರ ಮೂಲಕ ಭಾವುಕರಾಗ್ತಾರೆ,ಸ್ಪಲ್ಪ ಸಮಯದ ನಂತರ 

ಭುವನ್ : "ಜೆಕೆ ಫ್ಲೈಟ್ ಗೆ ಟೈಮ್ ಆಯ್ತು ನೀವು ಹೋರಡಿ" ... 

ಜೆಕೆ : "ಸರಿ ಅಣ್ಣ ಎಲ್ಲರನ್ನು ಹಗ್ ಮಾಡಿ ಅವರಿಗೆ ವಿದಾಯ ಹೇಳಿ ಹೋರಡ್ತಾರೇ".

ಸ್ವಾತಿ : "ಹುಷಾರು ಕಣ್ರೋ.. we miss you ಪ್ರವೀಣ್ ಅವಳಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾನೆ" ಸ್ವಾತಿ ಸಮಾಧಾನ ಮಾಡ್ಕೋ ಅವರು ಬೇಗ ಬರ್ತಾರೆ". ಹಾಗೆ ಆ ಮೂವರು ಜನಜಂಗುಳಿಯ ಮಧ್ಯೆ ಮರೆಯವುವವರೆಗೂ ಅವರೆಡೆಗೆ ನೋಡುತ್ತಾ ನಿಲ್ಲುತ್ತಾರೆ

           ಮುಂದುವರೆಯುವುದು......

---

🌸ಲೇಖಕನ ನೋಟ🌸:

ವಿದಾಯದ ಕ್ಷಣಗಳು, ಮನಸ್ಸಿನೊಳಗಿನ ಕಾಳಜಿ ಮತ್ತು ಪ್ರೀತಿ, ಮನೆಯಲ್ಲಿನ ಬಂಧಗಳ ಸಂಕೀರ್ಣತೆಯನ್ನು ಚಿತ್ರಿಸಲಾಗಿದೆ. ದೂರ ಹೋದರೂ ಹೃದಯಗಳು ಹೇಗೆ ಒಟ್ಟಾಗಿ ಇರುತ್ತವೆ, ಕಣ್ಣೀರಿನೊಂದಿಗೆ ಹೃದಯಸ್ಪರ್ಶಿ ಕ್ಷಣಗಳು ಎಲ್ಲರೊಳಗಿದ್ದವು. ಓದುಗರಿಗೆ ಈ ವಿದಾಯದ ಭಾವನೆಗಳು, ಪ್ರೀತಿ ಮತ್ತು ಆಶೀರ್ವಾದಗಳ ಮಹತ್ವವನ್ನು ಸ್ಪಷ್ಟವಾಗಿ ತಲುಪಲಿ ಎಂಬುದು ನನ್ನ ಆಶಯ.

ನಿಮಗೆ ಈ ಕಥಾ ಅಧ್ಯಾಯ ಇಷ್ಟವಾದರೆ, ದಯವಿಟ್ಟು ರೇಟಿಂಗ್ ನೀಡಿ ಮತ್ತು ಫಾಲೋ ಮಾಡೋದು ಮರೆಯಬೇಡಿ. ನಿಮ್ಮ ಪ್ರೋತ್ಸಾಹವೇ ನನ್ನ ಮುಂದಿನ ಅಧ್ಯಾಯಗಳಿಗೆ ಪ್ರೇರಣೆ.