ಅಧ್ಯಾಯ 12 : "ಗಾಳಿಯಲ್ಲಿ ಕಳೆದುಹೋದ ಮಾತುಗಳು"
ಇನ್ನು ಈ ಕಡೆ ಅಲ್ರೇಡಿ ತುಂಬಾ ಲೇಟ್ ಆಗಿರೋದ್ರಿಂದ ಪ್ರವೀಣ್ : "ಇವತ್ತು ಆ ಪೂರ್ವಿ ಇಂದ ಎಲ್ಲಾ ಲೇಟ್ ಆಗೋಯ್ತು "
ಆಗ ಸ್ವಾತಿ ಕುತೂಹಲದಿಂದ ಅವನತ್ತ ನೋಡಿದಳು,"ಲೇಟ್ ಆಗೋಯ್ತಾ ಏನಕ್ಕೆ? ಈಗ ನಾವು ಮನೆಗೆ ತಾನೇ ಹೋಗ್ತಿರೋದು ಆರಾಮಾಗಿ ಹೋಗಿ ರೆಸ್ಟ್ ಮಾಡು"
ಪ್ರವೀಣ್ ನಗುವನ್ನು ತಡೆಯುತ್ತಾ "ಅಯ್ಯೋ ಸ್ವಾತಿ ಇವತ್ತು ಜೆಕೆ ನಿಂಗೆ"... ಅಷ್ಟರಲ್ಲಿ ಜೆಕೆ ಗಾಬರಿಗೊಂಡು ಹೇ! ಪವಿ
ಕಾರ್ತಿಕ್ ಪ್ರವೀಣ್ ಕಡೆ ನೋಟವನ್ನು ಹಾಯಿಸುತ್ತಾ "ಸ್ಪಲ್ಪ ಸುಮ್ನೆ ಇರೋ ಮಾರಾಯ".."ಸ್ವಾತಿ ಇವತ್ತು ಕಾಲೇಜಿನಲ್ಲಿ ಅನ್ಯುಯಲ್ ಡೇ ಏನೋ ಮುಗೀತು ಅದೆ ಅದೆ ಋಷಿಗೆ ಅಂತಾ ನಾವು ನಾಲ್ಕು ಜನ ಸೇರಿ ಇಲ್ಲೇ ಹತ್ರ ಇರೋ ಗ್ರೀನ್ ಹೌಸ್ ರೆಸಾರ್ಟ್ ಅಲ್ಲಿ ಸೆಲೆಬ್ರೇಷನ್ ಮಾಡ್ಬೇಕು ಅಂತಾ ಪ್ಲಾನ್ ಮಾಡಿದ್ವಿ"..
"ಅದು?? ಹೇ.. ಸೂರ್ಯ ನಂಗೆ ಮುಂದೆ ಎನ್ ಹೇಳ್ಬೇಕು ಗೊತ್ತಾಗ್ತಿಲ್ಲ ನೀನೇ ಏನಾದ್ರೂ ಹೇಳೊ ಅಂತ ಅವನ ಕಿವಿ ಹತ್ರ ಬಂದು ಗುನುಗುತ್ತಾನೆ"
"ಅವಾಗ ಸೂರ್ಯ ತುಸು ನಕ್ಕು, ಅದು ಸ್ವಾತಿ ನಾವು ನಾಲ್ಕು ಜನ ಸೇರಿ ನಿಂಗೆ ಸರ್ಪ್ರೈಸ್ ಕೊಡಬೇಕು ಅಂದ್ರೆ ಈ ಪ್ರವೀಣ್ ಸರ್ಪ್ರೈಸ್ ನಾ ಸರ್ಪ್ರೈಸ್ ಆಗಿ ಹೇಗೆ ಇಡ್ತಾನೆ , ನನ್ನ ಮಗನೆ ಸುಮ್ನೆ ಕೂರೋಕೆ ಏನೋ ತಗೋತೀಯ ಅಂತಾ ಸೂರ್ಯ ಮತ್ತೆ ಕಾರ್ತಿಕ್ ಇಬ್ಬರು ಅವನನ್ನ ಗಟ್ಟಿಯಾಗಿ ಹಿಡಕೊಂಡು ಭುಜದ ಮೇಲೆ ಕೈಯನ್ನು ಇಟ್ಟು ಕಣ್ಣಲ್ಲೇ ಅವನನ್ನು ಗುರಾಯಿಸುತ್ತಾರೆ "
"ಜೆಕೆ ಮುಗುಳ್ನಗೆಯನ್ನು ಬೀರುತ್ತಾ ಸಾಕು ಬಿಡ್ರೋ ಅವನ ಬಾಯಲ್ಲಿ ಮಾತು ನಿಲ್ಲಲ್ಲ ಅಂತಾ ಗೊತ್ತಿದ್ರೂ ಹೇಳಿದ್ವಿ ಅಲ್ವಾ ಅದು ನಮ್ಮ ತಪ್ಪು"..
"ಸ್ವಾತಿ ಜೆಕೆ ನನ್ನೇ ನೋಡುತ್ತಾ ಜೆಕೆ ಇವತ್ತು ನಡಿದಿರೋ ಮ್ಯಾಟರ್ ಗೆ ನೀನು ತುಂಬಾ ಬೇಜಾರಲ್ಲಿ ಇರ್ತೀಯ ಅನ್ಕೊಂಡ್ರೆ ನೀನು ತುಂಬಾ ಕುಷಿ ಅಲ್ಲಿ ಇರೋ ಹಾಗಿದೆ "
ಜೆಕೆ : "ಬೇಡದೆ ಇರೋ ವಿಷಯಕ್ಕೆಲ್ಲ ಯಾಕೆ ಬೇಜಾರ್ ಮಾಡ್ಕೊಳ್ಳಿ ಸ್ವಾತಿ".. ( ಆದರೆ ಅವನ ಮನಸಲ್ಲಿ ಹೇಳುತ್ತಿತ್ತು ಇವತ್ತು ನನಗೆ ತುಂಬಾ ಇಂಪಾರ್ಟೆಂಟ್ ಡೇ ನಾನು ಇದನ್ನ ಹಾಳು ಮಾಡ್ಕೊಳೋಕೆ ಇಷ್ಟ ಪಡೋಲ್ಲ ) "ಹಾಗೆ ಜೆಕೆ ಸ್ವಾತಿ ಇವತ್ತು ಈ ಸಿರೇಲಿ ತುಂಬಾ ಡಿಫರೆಂಟ್ ಆಗಿ ಕಾನಸ್ತಾ ಇದ್ದೀಯಾ ಅಂತಾ ಹೇಳ್ತಾ.. ಅವಳನ್ನೇ ನೋಡ್ತಾ ಕಳೆದುಹೋಗ್ತಾನೆ"...
"ಆಗ ಈ ಮೂವರು ಸಿಕ್ಕಿದ್ದೇ ಚಾನ್ಸು ಅಂತ ಜೆಕೆ ನಾ ರೇ ಗಿಸೋಕೆ ಸ್ಟಾರ್ಟ್ ಮಾಡ್ತಾರೆ ಓ .. ಓ.. ಇವತ್ತು ಈ ಕ್ಲೈಮೇಟ್ ತುಂಬಾ ಡಿಫರೆಂಟ್ ಆಗಿದೆ ಅಲ್ವೇನ್ರೋ, ಅಂತಾ ಹೇಳಿ ಜೆಕೆ ಕಡೆ ನೋಟವನ್ನು ಹಾಯಿಸುತ್ತಾ ಕಿಲ ಕಿಲ ಅಂತ ನಗಲು ಶುರು ಮಾಡ್ತಾರೆ" ,"ಆಗ ಪ್ರವೀಣ್ ಅಲ್ಲಿನೋಡ್ರೋ ಜೆಕೆ ಸ್ವಾತಿನ ನೋಡ್ತಾ ಕಳೆದೋಗಿ ಬಿಟ್ಟಿದ್ದಾನೆ ಇರಲಿ ಬಿಡೋ ಪಾಪ ನಮ್ಮ ಹುಡುಗ ತುಂಬಾ ಎಕ್ಸೈಟ್ಮೆಂಟ್ ಅಲ್ಲಿ ಇದಾನೆ" ...
"ಸ್ವಾತಿ ಜೆಕೆ ಯನ್ನು ಗಮನಿಸಿ ಹಲೋ.. ಜೆಕೆ ಸರ್ ಸಾಕು ಸಾಕು ನೋಡಿದ್ದು.. ತಿನ್ನೋ ಹಾಗೆ ನೋಡ್ತಿದೀಯಲ್ಲೋ ತುಂಬಾ ನೋಡ್ಬೇಡ ನಂಗೆ ದೃಷ್ಟಿ ಆಗುತ್ತೆ"
ಜೆಕೆ ಏನೂ ನಾನು ನಿನ್ನ ನೋಡೋದ ಕನ್ನಡಿಲಿ ನಿನ್ನ ಮುಖ ನೋಡ್ಕೊಂಡಿದಿಯಾ ಒಳ್ಳೆ ಕೋತಿ ತರ ಇದ್ದೀಯಾ ಅಷ್ಟೆಲ್ಲ ಸೀನ್ ಇಲ್ಲ ಬಿಡು ಜೋರಾದ ನಗುವಿನೊಂದಿಗೆ ಹೇಳುತ್ತಾನೆ
"ಸ್ವಾತಿ ಹುಸಿಮುನಿಸನ್ನು ಮಾಡಿಕೊಂಡು ಹೌದಾ.. ಸರಿ ಹಾಗಾದ್ರೆ ಪಾರ್ಟಿ ಮಾಡೋಕೆ ನೀವ್ ನಾಲ್ಕು ಜನ ಅಷ್ಟೆ ಹೋಗಿ ಬನ್ನಿ ಓಕೆ ನಾನ್ ಹೋಗ್ತೀನಿ"
ಸೂರ್ಯ : ಅಯ್ಯೋ.. ಜೆಕೆ ಸುಮ್ನೆ ಇರೋ ಅವಳನ್ನ ಕಾಡಿಸಬೇಡ.. ಸ್ವಾತಿ ನೀನು ಬರಲಿಲ್ಲ ಅಂದ್ರೆ ಎಲ್ಲಾ ಹಾಳಾಗೋಗುತ್ತೆ ಅವನ ಬಗ್ಗೆ ತಲೆ ಕೇಡಸ್ಗೋಬೇಡ ಪ್ಲೀಸ್ ಬಾ..
ಸ್ವಾತಿ : ಸರಿ ನೀನು ಹೇಳ್ತಿದ್ಧಿಯಾ ಅಂತಾ ಬರ್ತಿನಿ ಆದರೆ ಜೆಕೆ ನಂಗೆ ಇನ್ನೂ sorry ಕೇಳಲೇ ಇಲ್ಲ, ಓರೆಗಣ್ಣಿನಲ್ಲಿ ಅವನನ್ನೇ ನೋಡುತ್ತಾ ಕೇಳುತ್ತಾಳೆ
ಜೆಕೆ : "ಏನು sorry ನಾ ಕಂಡಿತಾ ಕೇಳಲ್ಲ, ಆಗ ಸ್ವಾತಿ ಸರಿ ಹಾಗಿದ್ರೆ ನಾನ್ ಕ್ಯಾಬ್ ಬುಕ್ ಮಾಡ್ಕೊಂಡ್ ಹೋಗ್ತೀನಿ ನೀವೆಲ್ಲ ಹೋಗಿ ಬನ್ನಿ"...
ಕಾರ್ತಿಕ್ : "ಅಯ್ಯೋ ಹೋಗಲಿ sorry ಕೇಳ್ಬಿಡು ಜೆಕೆ ಇಲ್ಲ ಅಂದ್ರೆ" ..
"ಜೆಕೆ ಒಂದು ಬದಿ ಹುಬ್ಬನ್ನು ಮೇಲೆಕ್ಕೆ ಎತ್ತಿ ಒಂದು ತುಂಟ ನಗುವೊಂದಿಗೆ ,ಇಲ್ಲ ಅಂದ್ರೆ ಏನೂ" ??
ಪ್ರವೀಣ್ : "ಇಲ್ಲ ಅಂದ್ರೆ ಎಲ್ಲಾ ಹೇಳ್ಬಿಡ್ತೀನಿ" !
ಜೆಕೆ ಗಾಬರಿಯಲ್ಲಿ ಅಯ್ಯೋ ಬೇಡ ಕಣೋ ... ಸ್ವಾತಿ I am sorry ಸರಿ ಈಗಲಾದರೂ ಹೋಗೋಣ್ವಾ
ಸ್ವಾತಿ : "ನೋಡಿದ್ರಾ ಈ ಪ್ರಜೆ ತಪ್ಪು ಮಾಡಿ ಪಶ್ಚಾತ್ತಾಪದಿಂದ ಕ್ಷಮೆ ಕೇಳುತ್ತಿದ್ದಾನೆ ಆದ್ದರಿಂದ ಮಹಾರಣಿಯು ಕ್ಷಮಿಸಿದ್ದಾರೆ "
"ಜೆಕೆ ಅವಳಿಗೆ ತನ್ನ ಎರಡು ಕೈಗಳನ್ನು ಜೋಡಿಸಿ ಹಾ.. ಸರಿ ಮಹಾರಾಣಿಯವರೆ ನನಗೆ ನಿಮ್ಮಿಂದ ದೊಡ್ಡ ಉಪಕಾರವಾಯಿತು ಈಗ ಎಲ್ಲರೂ ನಡೀರಿ ಇಲ್ಲವಾದರೆ ಮಹಾರಾಣಿ ತಮ್ಮ ನಿರ್ಣಯವನ್ನು ಬದಲಿಸಿಕೊಳ್ತಾರೆ"
ಸೂರ್ಯ : "ಹಾ.. ಹೌದು ನಡೀರಿ ಅಂತ ಎಲ್ಲರೂ ಹೊರಡ್ತಾರೇ"
ಸ್ಪಲ್ಪ ಸಮಯದ ನಂತರ ಎಲ್ಲರೂ ರೆಸಾರ್ಟ್ ರೀಚ್ ಆಗ್ತಾರೆ "ರಿಸಾರ್ಟ್‌ನಲ್ಲಿ ರಾತ್ರಿ ಸಮಯ ತನ್ನ ತಂಪಿನ ಹೊದಿಕೆಯಲ್ಲಿ ಮಲಗಿತ್ತು. ಮೃದುವಾದ ಗಾಳಿ ಮರಗಳ ಎಲೆಗಳನ್ನು ತೂಗಿಸುತ್ತಾ ಹೂವಿನ ಪರಿಮಳವನ್ನು ದೂರದವರೆಗೂ ಹೊತ್ತೊಯ್ದಿತು. ಲಾನ್‌ದ ಮಂಕು ಬೆಳಕು ಹುಲ್ಲಿನ ಮೇಲೆ ಚಿನ್ನದ ನೆರಳು ಬೀರಿದಾಗ, ಆಕಾಶದಲ್ಲಿನ ನಕ್ಷತ್ರಗಳ ಮಿನುಗಾಟ ವಾತಾವರಣಕ್ಕೆ ಕನಸಿನಂತ ಆಕರ್ಷಣೆ ನೀಡಿತು.
" ರೆಸಾರ್ಟ್ ವ್ಯೂ ನೋಡುತ್ತಾ ನೋಡುತ್ತಾ ಅದರ ಸೌಂದರ್ಯವನ್ನು ಸವಿಯುತ್ತಾ ತನ್ನ ಮಾತುಗಳನ್ನು ಮುಂದುವರೆಸುತ್ತಾಳೆ"
"ಅಲ್ರೋ.. ಜಸ್ಟ್ ಒಂದ್ ಪಾರ್ಟಿ ಮಾಡೋಕೆ ರೆಸಾರ್ಟ್ ಬೇಕಾ ಆದರೆ ನೋಡೋಕೆ ಮಾತ್ರ ಸಖತ್ ಆಗಿದೆ.. ಎಷ್ಟು ಶಾಂತ ವಾಗಿದೆ ಅಲ್ವಾ ಜೆಕೆ ನನಗಂತು ತುಂಬಾ ಇಷ್ಟ ಆಯ್ತು...
"ಆಗ ಜೆಕೆ ಸರಿ ಹಾಗಾದ್ರೆ ಇನ್ಮೇಲಿಂದ ಇಲ್ಲೇ ಇರೋಣ ಓಕೆ ನಾ"?
"ಆಗ ಸೂರ್ಯ ಅವನತ್ತ ಛೇಡಿಸುತ್ತಾ ನೋಟ ಹಾಕಿದ ಹಲೋ! ನೀವಿಬ್ಬರೂ ಬೇಕಾದ್ರೆ ಇಲ್ಲೇ ಇರಿ, ನಮಗಿಲ್ಲಿ ಎನ್ ಕೆಲಸ ನಾವು ಹೋಗ್ತೀವಿ"
"ಅದನ್ನು ಕೇಳಿ ಜೆಕೆ ಯ ತುಟಿಯಲ್ಲಿ ಕಿರುನಗೆ ,ಅಯ್ಯೋ ಸುಮ್ನೆ ಹೇಳ್ದೆ ಕಣ್ರೋ...ಸ್ವಾತಿ ನೀನು ಇಲ್ಲೇ ಕ್ಲೈಮೇಟ್ ನಾ ಎಂಜಾಯ್ ಮಾಡ್ತಿರು ನಾವು ಪ್ರೈವೇಟ್ ಏರಿಯಾ ನಾ ಬುಕಿಂಗ್ ಮಾಡಿದ್ವಿ ಅದರ ಬಗ್ಗೆ ಕೇಳ್ಕೊಂಡು ಬರ್ತೀವಿ
ಸ್ವಾತಿ : "ಹೌದಾ ಸರಿ ಬೇಗ ಬನ್ನಿ"
ಸ್ವಾತಿನ ಅಲ್ಲೇ ಬಿಟ್ಟುಇವರೆಲ್ಲರೂ ಮ್ಯಾನೇಜರ್ ಹತ್ರ ಬರ್ತಾರೆ
ಮ್ಯಾನೇಜರ್ : "hello sir welcome to our resort"
ಜೆಕೆ : "ಥ್ಯಾಂಕ್ ಯು..ಅರೆಂಜಿಮೆಂಟ್ ಎಲ್ಲಾ ಕರೆಕ್ಟ್ ಆಗಿ ಮಾಡಿದಿರಾ"
ಮ್ಯಾನೇಜರ್ : "ಆಫ್ಕೋರ್ಸ್ ಸರ್ ನೀವು ಹೇಗೆ ಹೇಳಿದ್ರೂ ಹಾಗೆ ಮಾಡಿದೀವಿ ಆದರೆ... ಒಂದು ಸಣ್ಣ ಪ್ರಾಬ್ಲಮ್ ಆಗಿದೆ ಸರ್ ನೀವು ಕೇಳಿದ್ದು ಪ್ರೈವೇಟ್ ಗಾರ್ಡನ್ ಏರಿಯಾ ಆದರೆ ಅಲ್ಲಿ ... ಸರ್ ಪ್ಲೀಸ್ ಕೋಪ ಮಾಡ್ಕೋಬೇಡಿ ನಮ್ಮ ಟೀಮ್ ಮೆಂಬರ್ಸ್ ಒಂದು ಸ್ಮಾಲ್ ಮಿಸ್ಟೆಕ್ ಮಾಡಿದ್ದಾರೆ ಜಸ್ಟ್ ಒಂದು 15 to 20 ಮಿನಿಟ್ಸ್ ಅಲ್ಲಿ ರೆಡಿ ಅಗೋಗುತ್ತೆ ಸರ್ ಪ್ಲೀಸ್ ಅಲ್ಲಿವರೆಗೂ ನೀವು ಲೌಂಜ್ ಏರಿಯಾ ಲೀ ವೇಟ್ ಮಾಡ್ತೀರಿ"
"ಜೆಕೆ ಕೋಪದಲ್ಲಿ ಅವನನ್ನೇ ನೋಡುತ್ತಾ, ಏನ್ರೀ ಹೇಳ್ತಿದಿರ ನಾವು ಇಲ್ಲಿ ರೆಸ್ಟ್ ಮಾಡೋಕೆ ಬಂದಿಲ್ಲ ಎಲ್ಲಾ ಅರೆಂಜ್ಮೆಂಟ್ ಕರೆಕ್ಟ್ ಆಗಿ ಮಾಡ್ತೀವಿ ಅಂತ ಹೇಳಿ ಈಗ ಹೀಗೆ ಹೇಳ್ತಿದಿರಾ" ?
ಮ್ಯಾನೇಜರ್: "ಸರ್ ಪ್ಲೀಸ್ ನಮ್ಮನ್ನ ಕ್ಷಮಿಸಿ ಬಿಡಿ ಸ್ಪಲ್ಪ ಟೈಮ್ ಕೊಡಿ ಅಷ್ಟೆ ಈಗಾಗಲೇ ರೆಡಿ ಮಾಡ್ತಿದ್ದಾರೆ" ....
"ಛೇ!... ಇವತ್ತು ನನ್ನ ಟೈಮೇ ಸರಿ ಇಲ್ಲ ಕಣ್ರೋ.. ಅಂತ ಹೇಳಿ ಸ್ಪಲ್ಪ ಬೇಜಾರಾಗ್ತಾನೆ"
"ಅದನ್ನು ನೋಡಿದ ಸೂರ್ಯ ತನ್ನ ಕೈಯನ್ನು ಜೆಕೆ ಭುಜದ ಮೇಲೆ ಇಟ್ಟು, ಜೆಕೆ ಇದರ ಬಗ್ಗೆ ನೀನು ತಲೆ ಕೇಡ ಸ್ಗೋಬೇಡ ನಾನು ಪ್ರವೀಣ್ ಇದರ ಬಗ್ಗೆ ನೋಡ್ಕೋತೀವಿ ನೀನು ಮತ್ತೆ ಕಾರ್ತಿಕ್ ಸ್ವಾತಿ ಜೊತೆ ಇರಿ ಸ್ಪಲ್ಪ ಸಮಯ ಆದ್ಮೇಲೆ ಜೆಕೆ ನೀನು ಅಲ್ಲಿಂದ ಬಂದುಬಿಡು.. ಆಗ ಕಾರ್ತಿಕ್ ಸ್ವಾತಿ ಕಣ್ಣಿಗೆ ಬಟ್ಟೆ ಕಟ್ಟಿ ಇಲ್ಲಿ ಕರ್ಕೊಂಡು ಬರ್ತಾನೆ".. ಸರೀನೇನ್ರೋ?..ಆಗ ಇಬ್ಬರು ಸರಿ ಅಂತಾ ಹೇಳಿ ನೇರ ಸ್ವಾತಿ ಹತ್ರ ಬರ್ತಾರೆ...
ಸ್ವಾತಿ : "ಯಾಕೆ ಇಷ್ಟು ಲೇಟ್ ಮಾಡ್ತಿದಿರಾ ನಂಗೆ ತುಂಬಾ ಸುಸ್ತಾಗ್ತಿದೆ ಕಣ್ರೋ"
ಜೆಕೆ : "I am really sorry ಸ್ವಾತಿ ಇನ್ನೊಂದು 15 ರಿಂದ 20 ನಿಮಿಷ ಅಷ್ಟೇ ಅಲ್ಲಿವರೆಗೂ ಇಲ್ಲೇ ವಿವ್ ನಾ ಎಂಜಾಯ್ ಮಾಡ್ತಾ ಇರೋಣ ಓಕೆ"...
ಸ್ವಾತಿ ದಿಢೀರನೆ ಹೀಗೆ ಹೇಳ್ತಾಳೆ, ನಂಗೆ ಐಸ್ಕ್ರೀಮ್ ತಿನ್ಬೇಕು ಅನಸ್ತಿದೆ..ಬನ್ನಿ ಹೋಗೋಣ
ಜೆಕೆ : "ಏನು ಐಸ್ಕ್ರೀಮ್ ಆ.. ಬೇಡ ಕಣೋ ನಿಂಗೆ ಕೊಲ್ಡ್ ಆಗುತ್ತೆ..
"ಸ್ವಾತಿ ಅವನ ಮಾತುಗಳನ್ನು ಕೇಳದೆ ತನ್ನ ತುಟಿಗಳನ್ನು ಒಗ್ಗಿಸಿಕೊಂಡು ಅವನೆಡೆಗೆ ಮಗುವಿನಂತೆ ನೋಟ ಹಾಯಿಸಿದಳು, ಪ್ಲೀಸ್... ಒಂದೇ ಒಂದು ಅಷ್ಟೆ ಪ್ಲೀಜ್ ಕಣೋ"..
"ಅವಳನ್ನು ನೋಡುತ್ತಾ ಜೆಕೆ ಮನಸಲ್ಲಿ ಹಾಗೆಲ್ಲ ರಿಯಾಕ್ಷನ್ ಕೊಡಬೇಡ್ವೆ ಈ ಮನಸ್ಸು ಕೂಡ ಐಸ್ಕ್ರೀಮ್ ತರ ಕರಗಿಹೋಗುತ್ತೆ"...ಸರಿ ಓಕೆ ತರಸ್ತಿನಿ ಇರು
ಸ್ವಾತಿ : "ಏನು ಇಲ್ಲಾ ನೋ ವೇ.. ನಂಗೆ ಇಲ್ಲಿ ಬೇಡ ಹೊರಗಡೆ ಹೋಗಣ ಆಗ ಕಾರ್ತಿಕ್ ,ಸ್ವಾತಿ ಇನ್ನೇನು ಎಲ್ಲಾ ಆರೆಂಜ್ ಅಗೋಗುತ್ತೆ.. ಮತ್ತೆ ಯಾಕೆ ಹೊರಗಡೆ ಹೋಗೋದು"?? ಸ್ವಾತಿ ಇಬ್ಬರು ಮಾತು ಕೇಳೋಕೆ ರೆಡಿ ಇರೋದೇ ಇಲ್ಲ ನನಗೆಲ್ಲ ಗೊತ್ತಿಲ್ಲ ಬೇಕು ಅಂದ್ರೆ ಬೇಕು ಅಷ್ಟೇ ಬನ್ನಿ ಹೋಗೋಣ
ಜೆಕೆ :" ಸರಿ.. ನಡಿ ಇಲ್ಲೇ ಸ್ವಲ್ಪ ದೂರದಲ್ಲೇ ಒಂದು ಪಾರ್ಕ್ ಇದೆ ಅಲ್ಲಿ ಹೋಗೋಣ .. ಹೌದಾ ನಡೀರಿ ಮತ್ತೆ ಬೇಗ.. ಆಗ ಕಾರ್ತಿಕ್ ,ಸರಿ ನೀವೊಬ್ಬರೇ ಹೋಗಿ ಬನ್ನಿ ನಾನು ಇಲ್ಲೇ ವೇಟ್ ಮಾಡ್ತೀರ್ತೀನಿ ಬೇಗ ಬನ್ನಿ...ಕಾರ್ತಿಕ್ ಎಷ್ಟೇ ಬೇಡ ಅಂದ್ರು ಜೆಕೆ,ಸ್ವಾತಿ ಅವನನ್ನು ಕರ್ಕೊಂಡು ಹೋಗ್ತಾರೆ"
ಹಾಗೆ ಪಾರ್ಕ್ ಒಳಗೆ ಎಂಟರ್ ಆಗ್ತಿದ್ದ ಹಾಗೆ... ಸ್ವಾತಿ : "ಅಯ್ಯೋ ಇಲ್ಲಿ ಏನೋ.. ಬರೀ ಕಪಲ್ಸ್ ಗಳೇ ಇದಾರಲ್ರೋ"
ಕಾರ್ತಿಕ್ ಮತ್ತು ಜೆಕೆ ಒಬ್ಬರಿಗೊಬ್ಬರು ಮುಖವನ್ನು ಒಳಗೊಳಗೇ ನಗಲು ಶುರು ಮಾಡ್ತಾರೆ. "ಹೇ! ಯಾಕ್ರೊ ಇಬ್ಬರು ನಗ್ತಾ ಇದೀರಾ ನಾನೇನು ಅಂತಹದ್ದು ಹೇಳಿದೆ ಅಂತಾ"?
"ಜೆಕೆ ನಗುವನ್ನು ಮುಂದುವರೆಸುತ್ತಾ..ನಿನ್ನೀನು ಚಿಕ್ಕ ಪಾಪು ನಿನಗೆಲ್ಲ ಹೇಳಿದ್ರೂ ಅರ್ಥ ಆಗೋಲ್ಲ ಬಿಡು ,ದೇವರೆ ಇವಳಿಗೆ ತಲೆ ಏನೋ ಕೊಟ್ಟೆ ಆದರೆ ಅದರಲ್ಲಿ ಬುದ್ದಿನೇ ಕೊಡಲಿಲ್ವಲ್ಲ ಯಾಕೆ ಈ ಹುಡುಗಿಗೆ ಹೀಗೆ ಅನ್ಯಾಯ ಮಾಡ್ದೆ ದೇವರೆ ಇದು ನಿಂಗೆ ನ್ಯಾಯನಾ"...
ಕಾರ್ತಿಕ್ : "ಸ್ವಾತಿ ನೀನು ಐಸ್ಕ್ರೀಮ್ ತಿನ್ನೋದೇ ಒಳ್ಳೇದು ಅನ್ಸುತ್ತೆ...ಅದೆಲ್ಲ ದೊಡ್ಡವರಿಗೆ ಅಷ್ಟೆ ಗೊತ್ತಾಗೋದು"..
ಆಗ ಸ್ವಾತಿ ಹುಸಿಕೋಪದಲ್ಲಿ ,"ಹಲೋ ನೀವಿಬ್ಬರೂ ಅನ್ಕೊಂಡಸ್ಟು ಚೈಲ್ಡ ಅಲ್ಲ ನಾನು ನಂಗೂ ಎಲ್ಲಾ ಗೊತ್ತಾಗುತ್ತೆ ,ಸರಿ ಬೇಗ ಹೋಗಿ ಐಸ್ ಕ್ರೀಮ್ ತಗೊಂಡ್ ಬನ್ನಿ"... ನಾನು ಹೋಗಿ ತಗೊಂಡು ಬರ್ತೀನಿ ಅಂತಾ ಕಾರ್ತಿಕ್ ಹೋಗ್ತಾನೆ ಜೆಕೆ ಮತ್ತು ಸ್ವಾತಿ ಅಲ್ಲೇ ಬೆಂಚ್ ಮೇಲೆ ಕುಳಿತುಕೊಳ್ತಾರೆ..
ಜೆಕೆ ಸ್ವಲ್ಪ ಸಂಕೋಚದಿಂದ ಸ್ವಾತಿ ಅದು...ಅದು..
ಸ್ವಾತಿ : "ಏನೋ ರಾಗ ಇಳಿತಾ ಇದಿಯಾ ಹೇಳು ಏನು ಅಂತಾ"..
ಜೆಕೆ :" ಏನಿಲ್ಲ ಸುಮ್ನೆ ಜನರಲ್ ಆಗಿ.. ನಿಂಗೆ ಪ್ರೀತಿ ಮೇಲೆ ನಂಬಿಕೆ ಇದೆಯಾ? ಪ್ರೀತಿ ಮೇಲೆ ಯಾವ ರೀತಿ ಅಭಿಪ್ರಾಯ ಇದೆ ನಿಂಗೆ"..
"ಸ್ವಾತಿ ಸ್ವಲ್ಪ ಆಶ್ಚರ್ಯದಿಂದ ಏನೂ?.. ಪ್ರೀತಿ ಅಲ್ಲಾ ಇದಕ್ಕಿದ್ದಂಗೆ ಏನು .. ಇತರ ಪ್ರಶ್ನೆಗಳು ಉದ್ಭವ ಆಗ್ತಿದ್ದಾವೆ ಎನ್ ಸಮಾಚರ ನೀನು ಯಾರನ್ನಾದ್ರೂ ಲವ್ ಗಿವ್ ಅಂತಾ ಮಾಡ್ತಿದಿಯೋ ಹೇಗೆ"?...
ಛೇ!.. ಛೇ!.. ಲವ್ ಆ! ಅದು ನಾನು ಇಲ್ಲಾ.. ಸುಮ್ನೆ ಕ್ಯಾಶುಯಲ್ ಆಗಿ ಕೇಳ್ದೆ ಅಷ್ಟೆ ಆದರೆ ಅವನ ಮುಖದಲ್ಲಿ ಕಳವಳ ಎದ್ದು ಕಾಣಿಸುತ್ತಿತ್ತು
ಸ್ವಾತಿ : "ನಂಗೆನೋ ಡೌಟ್ ಇತ್ತೀಚಿಗೆ ನೀನು ತುಂಬಾ ವಿಚಿತ್ರವಾಗಿ ಆಡ್ತಿದಿಯ.. ಪೂರ್ವಿ ಮೇಲೆ ಲೈಟ್ ಆಗಿ ಲವ್ ಅಗೋಯ್ತಾ ಹೇಗೆ"?
"ಜೆಕೆ ಸ್ವಲ್ಪ ಕೋಪದಲ್ಲಿ ಸ್ವಾತಿ... ಅವಳ ಹೆಸರು ಕೇಳಿದ್ರೆ ನಂಗೆ ಇಷ್ಟ ಆಗೋಲ್ಲ ಪ್ಲೀಜ್ ಅವಳ ಬಗ್ಗೆ ಮಾತಾಡಿ ನನ್ನ ಮೂಡ್ ಹಾಳು ಮಾಡ್ಬೇಡ ಈಗೇನು ನಾನು ಕೇಳಿರೋ ಪ್ರಶ್ನೆಗೆ ಉತ್ತರ ಕೊಡ್ತಿಯೋ ಇಲ್ವೋ"...
ಸ್ವಾತಿ : "ಅಯ್ಯೋ ಅದೇಗೆ ಕೊಡೋಕೆ ಆಗುತ್ತೆ ಸರ್ ಆ ದೇವರು ನನ್ನ ತಲೇಲಿ ಬುದ್ದಿನೆ ತುಂಬಿ ಕಳಸಿಲ್ವಲ್ಲ"...
ಜೆಕೆ : "ಓ.. ನಮ್ಮ ಮಾತನ್ನ ನಮ್ಗೆ ಹೇಳ್ತಿಯಾ ಇರಲಿ".. ಅಷ್ಟರಲ್ಲಿ ಕಾರ್ತಿಕ್ ಐಸ್ಕ್ರೀಮ್ ತಗೊಂಡು ಬರ್ತಾನೆ ಸ್ವಾತಿ ತಗೋ ನಿನ್ನ ಐಸ್ ಕ್ರೀಮ್ ... ಥ್ಯಾಂಕ್ ಯು ಕಾರ್ತಿ...
ಮೂವರು ಐಸ್ ಕ್ರೀಮ್ ತಿಂತಾ ಹಾಗೆ ಮಾತಾಡ್ತಾ ಇರ್ತಾರೆ ಆಗ ಸ್ವಾತಿ ಏನನ್ನೋ ಗಮನಿಸಿ, ಅಲ್ಲಿ ಇಬ್ಬರು ಯಂಗ್ ಲವರ್ಸ್ ನಾ ನೋಡ್ರೋ.. ಆಗ ಇಬ್ಬರು ತಮ್ಮ ಕಣ್ಣುಗಳನ್ನು ಆಕಡೆ ಹಾಯಿಸ್ತಾರೆ.. "ಹಾ! ನೋಡದ್ವಿ ಅವರಿಬ್ಬರೂ ಲವರ್ಸ್ ಅಂತಾ ಹೇಗೆ ಹೇಳ್ತೀಯ" ??
ಸ್ವಾತಿ :"ಈಗ ನೋಡ್ತೀರಿ ಅವನು ಅವಳಿಗೆ ಪ್ರಪೋಸ್ ಮಾಡ್ತಾನೆ"
ಜೆಕೆ : "ನನಗೇನು ಹಾಗೆ ಅನಸ್ತಿಲ್ಲ ಅವನು ಎಷ್ಟು ದಿಸ್ಟೆನ್ಸ್ ಮೆಂಟೇನ್ ಮಾಡ್ತಿದಾನೆ.. ಅಲ್ವೇನೋ ಕಾರ್ತಿ.. ಹೌದು ಕಣೋ ನಂಗೂ ಹಾಗೆ ಅನಸ್ತಿದೆ" ..
"ವೇಟ್ ಅವನು ಅವಳಿಗೆ ಇಷ್ಟರಲ್ಲಿ ಪ್ರೊಪೋಸ್ ಮಾಡ್ತಾನೆ ನೋಡ್ತೀರಿ.. ಹಾಗೆ ಮೂವರು ಆ ಲವರ್ಸ್ ಗಳನ್ನೇ ನೋಡ್ತಾ ಇರ್ತಾರೆ ....
ಆಗ ಅಲ್ಲಿರುವ ಹುಡುಗ ಒಂದು ರಿಂಗ್ ತೆಗೆದು ಅವಳಿಗೆ ಪ್ರಪೋಸ್ ಮಾಡ್ತಾನೆ ಇಲ್ಲಿ ಜೆಕೆ,ಕಾರ್ತಿಕ್ ಶಾಕ್, ಹೇ! ಇದೆಲ್ಲ ನಿನಗೆ ಹೇಗೆ ಗೊತ್ತಾಯ್ತು ಅವನು ನಿಜವಾಗ್ಲೂ ಪ್ರಪೋಸ್ ಮಾಡ್ದ...
"ನೋಡಿದ್ರಾ ಹೆಂಗೆ ಗೆಸ್ ಮಾಡಿದೆ ಅಂತಾ"
ಜೆಕೆ : "ಗ್ರೇಟ್.. ಅವಳು ಒಪ್ಪಿಕೊಳ್ತಾಳೆ ಅನಿಸುತ್ತಾ.. ಪ್ಲೀಜ್ ದೇವರೆ ಆ ಹುಡಗನ ಹಾರ್ಟ್ ಬ್ರೇಕ್ ಮಾಡ್ಬೇಡ" ..
"ಸ್ವಾತಿ ನೇರವಾಗಿ ಅವಳು.. ಪ್ರಪೋಸಲ್ ನಾ ಒಪ್ಪಿಕೊಳ್ಳಬಾರದು ಆವಾಗ್ಲೇ ಕರೆಕ್ಟ್ ಆಗುತ್ತೆ"
ಆಗ ಜೆಕೆ ಮತ್ತು ಕಾರ್ತಿಕ್ ಶಾಕ್ ಜೊತೆಗೆ ಆಶ್ಚರ್ಯ
ಜೆಕೆ :" ಹೇ! ಸ್ವಾತಿ ಯಾಕೆ ಹಾಗೆ ಹೇಳ್ತಿದ್ಧಿಯ ನೀನು ಪ್ರೀತಿ ಮಾಡೋರಿಗೆ ಸಪೋರ್ಟ್ ಮಾಡ್ಬೇಕು ಅದು ಬಿಟ್ಟು ಅವಳು ಪ್ರಪೋಸಲ್ ನಾ ಆಕ್ಸೆಪ್ಟ್ ಮಾಡ್ಬರ್ದು ಅಂತಾ ಹೇಳ್ತಿದಿಯಾ"? ಅದಕ್ಕೆ ಕಾರ್ತಿಕ್ ಸಹ ಹೌದು,ಸ್ವಾತಿ ನೀನು ಇತರ ಹೇಳೋಕೆ ಹೇಗೆ ಸಾದ್ಯ!
ಸ್ವಾತಿ : "ಅಲ್ಲಾ.. ನನ್ನೇ ಯಾಕೆ ಹೀಗೆ ನೋಡ್ತಿದಿರಾ ಅದು ಅಲ್ದೇ ನಾನೇನು ತಪ್ಪು ಮಾತಾಡಿಲ್ಲ ಅವನನ್ನ ನೋಡಿದ್ರೇನೆ ಗೊತ್ತಾಗುತ್ತೆ ಅವನು ಲೈಫ್ ಅಲ್ಲಿ ಸೆಟಲ್ ಇಲ್ಲ ಅಂತಾ ,ಅವನ ಲೈಫ್ ಅವನಿಗೆ ಕ್ಲಾರಿಟಿ ಇಲ್ಲದೆ ಇರೋವಾಗ ಅವನು ಈ ರಿಲೇಷನ್ಶಿಪ್ ನಾ ಹ್ಯಾಂಡಲ್ ಮಾಡ್ತಾನೆ ಅಂತಾ ನಂಗಂತೂ ಅನಸ್ತಿಲ್ಲ"...
ಅವಳ ಆ ನೆರವಾದ ಮಾತುಗಳನ್ನು ಕೇಳಿ ಜೆಕೆ ಮುಖದಲ್ಲಿ ಇದ್ದ ಕುಷಿ ಎಲ್ಲಾ ಕಳಚಿ ಬಿದ್ದಂತಾಯ್ತು ,ಅವನ ಮುಖದಲ್ಲಿ ನಗುವಿನ ಕಳೆ ಸ್ವಲ್ಪ ಸ್ವಲ್ಪವೇ ಕಣ್ಮರೆ ಆಗುತ್ತಾ ಬಂದಿತು..ಅದನ್ನು ಕಾರ್ತಿಕ್ ಸಹ ಗಮನಿಸುತ್ತಿದ್ದ..
ಕಾರ್ತಿಕ್ : "ಸ್ವಾತಿ ಹೋಗಲಿ ಬಿಡು ಅವರ ವಿಷಯ ನಮಗ್ಯಾಕೆ ಸರಿ ಈಗ ಬೇಗ ಬನ್ನಿ ಹೊರಡೋಣ ಅವರಿಬ್ಬರೂ ಕಾಯ್ತಿರ್ತಾರೆ"...
"ಜೆಕೆ ದ್ವನಿ ಎತ್ತಿ,ಒಂದು ನಿಮಿಷ ಇರೋ ಸ್ವಾತಿ.. ಅಂದ್ರೆ ನಿನ್ನ ಪ್ರಕಾರ ಲವ್ ಮಾಡ್ಬೇಕು ಅಂದ್ರೆ ಅವರು ಮೊದಲು ಲೈಫ್ ಅಲ್ಲಿ ಸೆಟಲ್ ಆಗಬೇಕು ಅಂತಾ ಹೇಳ್ತೀದಿಯ"....
ಸ್ವಾತಿ : "ಅರೆ.. ಎಷ್ಟು ಕರೆಕ್ಟ್ ಆಗಿ ಹೇಳ್ದೆ ಅದಕ್ಕೆ ಹೇಳೋದು ನೀನು ಎಲ್ಲದರಲ್ಲೂ ಪರ್ಫೆಕ್ಟ್ ಅಂತಾ..ಅದಿಕ್ಕೆ ನೀನಂದ್ರೆ ನಂಗೆ ತುಂಬಾ ತುಂಬಾ ಇಷ್ಟ ಆಗ್ತಿಯ, ನನ್ನ ಮುದ್ದು ಜೆಕೆ.. ಕಣೋ ನೀನು" ...
ಆಗ ಜೆಕೆ ಸ್ವಾತಿ.. ಯಾಕೆ ಎಲ್ಲಾ ಹುಡಗಿರು ಇದನ್ನೇ ಎಕ್ಸಪೆಕ್ಟ್ ಮಾಡ್ತಾರೆ ?
ಸ್ವಾತಿ : "ಎಲ್ಲಾ ಹುಡಗಿರ ಬಗ್ಗೆ ನನಗೆ ಗೊತ್ತಿಲ್ಲ ಬಟ್ ನನ್ನ ಒಪೀನಿಯನ್ ಅಷ್ಟೆ"
ಜೆಕೆ :" ಅಂದ್ರೆ.. ಅರ್ಥಾಆಗಲಿಲ್ಲ"??
ಸ್ವಾತಿ : "ಒಂದ್ ನಿಮಿಷ... ನಾನು ಸುಮ್ನೆ ನನಗಣಿಸಿದ್ದನ್ನ ಹೇಳಿದೆ ಆದರೆ ನೀವು ಇಬ್ಬರು ಯಾಕೆ ಮುಖಾನ ಇತರ ಮಾಡ್ಕೊಂಡಿದಿರ _ನನ್ನ ಪ್ರಕಾರ ಮೊದಲು ಹುಡಗಿನು ಇಂಡಿಪೆಂಡೆಂಟ್ ಆಗಬೇಕು ಹಾಗೆ ಹುಡುಗ ಕೂಡಾ ಈ ತರ ಕಾಲೇಜ್ ನಲ್ಲಿ ಹುಟ್ಟಿದ ಪ್ರೀತಿ ಜಸ್ಟ್ ಅಟ್ರಾಕ್ಷನ್ ಅಷ್ಟೆ ಅದು ನಿಜವಾದ ಲವ್ ಆಗೋಕೆ ಸಾಧ್ಯ ಇಲ್ಲ ,ಯಾವಾಗ ಇಬ್ಬರು ಲೈಫ್ ಅಲ್ಲಿ ಸೆಟಲ್ ಆಗ್ತಾರೆ ಆಗ ಇದಕ್ಕೆಲ್ಲ ಬೆಲೆ, ಇಲ್ಲ ಅಂದ್ರೆ ಟೈಮ್ ಪಾಸ್ ಅಷ್ಟೆ"...
"ಆಗ ಕಾರ್ತಿಕ್ ತನ್ನ ಮನಸ್ಸಲ್ಲಿ ಯಾಕೆ ನೀನು ಹೀಗೆ ಹೇಳ್ದೆ ಜೆಕೆ ಪಾಪ ಎಷ್ಟೋ ದಿನಗಳಿಂದ ಈ ಕನಸನ್ನು ಕಾಣ್ತಿದ್ದ ಆದರೆ ನಿನ್ನ ಒಂದು ಸಣ್ಣ ಒಪೀನಿಯನ್ ಅವನ ಮನಸಲ್ಲಿ ಸಾವಿರಾರು ಪ್ರಶ್ನೆಗಳು ಓಡ್ತಾಇದ್ದಾವೆ .. ಛೇ! ಇದೇನ್ ಆಗೋಯ್ತು ಇಲ್ಲ ನಾನು ಅವನನ್ನ ಮೊದಲು ಇಲ್ಲಿಂದ ಕರ್ಕೊಂಡು ಹೋಗ್ಬೇಕು" ...
ಅಷ್ಟರಲ್ಲಿ ಸೂರ್ಯ ಕಾರ್ತಿಕ್ ಗೆ ಕಾಲ್ ಮಾಡ್ತಾನೆ ಒಂದು ನಿಮಿಷ ಬರ್ತೀನಿ ಇಲ್ಲೇ ಇರಿ
ಹಲೋ ಹೇಳೊ... ಸೂರ್ಯ ,ಕಾರ್ತಿ ಬೇಗ ಜೆಕೆ ನಾ ಕಳಿಸು ಹಾಗೆ ನೀನು ಸ್ವಾತಿ ಕಣ್ಣಿಗೆ ಬಟ್ಟೆ ಕಟ್ಟಿ ಕರ್ಕೊಂಡು ಬಾ..
ಕಾರ್ತಿಕ್ : "ಸೂರ್ಯ ಅದು ನಾವು ರೆಸಾರ್ಟ್ ಅಲ್ಲಿ ಇಲ್ಲ ಕಣೋ"...
ಸೂರ್ಯ : "ಏನು ರೆಸಾರ್ಟ್ ಅಲ್ಲಿ ಇಲ್ಲ ಅಂದ್ರೆ ಎಲ್ಲಿಗೆ ಹೋದ್ರಿ"...
ಕಾರ್ತಿಕ್ : "ಸ್ವಾತಿ ಐಸ್ ಕ್ರೀಮ್ ತಿನ್ಬೇಕು ಅಂತ ಹಟ ಹಿಡಿದಳು ಅದಕ್ಕೆ ಇಲ್ಲೇ ಸ್ವಲ್ಪ ದೂರಲ್ಲದಲ್ಲಿರೋ ಪಾರ್ಕ್ ಹತ್ರ ಬಂದಿದೀವಿ ಆದರೆ...
"ಅಷ್ಟರಲ್ಲಿ ಜೆಕೆ ಕಾರ್ತಿಕ್ ಹತ್ರ ಇರೋ ಮೊಬೈಲ್ ತನ್ನ ಕೈಗೆ ತಗೋತಾನೆ ಹಲೋ ಸೂರ್ಯ ನಾನು ಹೇಳೋದನ್ನ ಕೇಳು ಈಗಲೇ ಎಲ್ಲಾ ಆರೆಂಜ್ಮೆಂಟ್ ನೂ ಕ್ಯಾನ್ಸಲ್ ಮಾಡು"..
ಸೂರ್ಯ : "ಹೇ! ತಲೆ ಕೆಟ್ಟಿದೆಯೋಣೋ ನಿಂಗೆ ಇದೆ ಸಮಯಕ್ಕೋಸ್ಕರ ನೀನು ಎಷ್ಟೋ ದಿನಗಳಿಂದ ಕಾಯ್ತಿದೀಯ ಈಗ ಇದ್ದಕಿದ್ದ ಹಾಗೆ ಏನು ಆಯ್ತು ನೀವು ಯಾಕೆ ಅಲ್ಲಿಗೆ ಹೋದ್ರಿ"...
"ಆಗ ಜೆಕೆ ನೋಡು ಈಗ ಎಲ್ಲ ಎಕ್ಸ್ಪ್ಲೇನ್ ಮಾಡೋದಕ್ಕೆ ಟೈಮ್ ಇಲ್ಲ ಸ್ವಾತಿ ನು ಇಲ್ಲೇ ಬರ್ತಿದ್ದಾಳೆ ನಾವು ಬರೋವಸ್ಟ್ರಲ್ಲಿ ಅದನ್ನೆಲ್ಲ ಕ್ಯಾನ್ಸಲ್ ಮಾಡಿ ನಾರ್ಮಲ್ ಡಿನ್ನರ್ ಗೆ ಆರೆಂಜ್ ಮಾಡು.. ಅಂತ ಜೆಕೆ ಕಾಲ್ ಕಟ್ ಮಾಡ್ತಾನೆ "
ಸೂರ್ಯ : "ಹಲೋ.. ಹಲೋ.. ಅಲ್ಲಾ ಇದ್ದಕಿದ್ದ ಹಾಗೆ ಇವನಿಗೆ ಎನ್ ಆಯ್ತು"
ಪ್ರವೀಣ್ : "ಯಾಕೋ ಏನಾಯ್ತು?..ಜೆಕೆ ಎಲ್ಲಾ ಪ್ಲಾನ್ ನು ಕ್ಯಾನ್ಸಲ್ ಮಾಡಿ ನಾರ್ಮಲ್ ಡಿನ್ನರ್ ಗೆ ಆರೆಂಜ್ ಮಾಡು ಅಂತಾ ಹೇಳ್ತಿದಾನೇ ಎನ್ ಆಯ್ತು ಅಂತಾ ಗೊತ್ತಾಗ್ತಿಲ್ಲ ಈಗ ಅವನೇ ಬಂದು ಹೇಳ್ಬೇಕು"
ಇನ್ನು ಈ ಕಡೆ ಕಾರ್ತಿಕ್ ಬೇಜಾರಿನಲ್ಲಿ ಜೆಕೆ ಯಾಕೋ ಹೀಗೆ ಮಾಡ್ದೆ
ಜೆಕೆ : "ನಾನು ಮಾಡಿರೋದೇ ಕರೆಕ್ಟ್ ಮಗ ಸುಮ್ನಿರು ಸ್ವಾತಿ ಬಂದ್ಲು"... ಹೇ ಎನ್ರೋ ನಿಮ್ದು ಹಂತಾ ಸೀಕ್ರೆಟ್ ಸರ್ಪ್ರೈಸ್ ನನ್ನನ್ನ ಒಬ್ಬಳನ್ನೇ ಬಿಟ್ಟು ಬಂದು ಮಾತಾಡ್ತಾ ಇದೀರಾ... ನಂಗಂತೂ ಸಾಕಾಗೋಯ್ತು ಅದರಲ್ಲೂ ಈ ಸೀರೆ ತುಂಬಾ ಇರ್ರಿಟೇಷನ್ ಆಗ್ತಿದೆ ..
ಜೆಕೆ : "ಸರಿ ಈಗಲೇ ಹೊರಡೋಣ ಬಾ ಅಂತಾ ಅವರು ಅಲ್ಲಿಂದ ಹೊರಟು ರೆಸಾರ್ಟ್ ಗೆ ಬರ್ತಾರೆ"
ಸೂರ್ಯ,ಪ್ರವೀಣ್ ಗಾರ್ಡನ್ ಅಲ್ಲಿ ಡಿನ್ನರ್ ಆರೆಂಜ್ಮೆಂಟ್ ಮಾಡಿರುತ್ತಾರೆ ಆಗ ಸ್ವಾತಿ ,ಕಾರ್ತಿಕ್,ಜೆಕೆ ಮೂವರು ಬರ್ತಾರೆ... ಸ್ವಾತಿ ಅಲ್ಲಿ ಬಂದು.. ಎಲ್ಲರ ಮುಖವನ್ನೇ ನೋಡ್ತಾ ನಿಲ್ತಾಳೆ ,
ಸೂರ್ಯ : "ಯಾಕೆ ಸ್ವಾತಿ ಹಾಗೆ ನೋಡ್ತಿದ್ದಿಯ ಅರೇಂಜ್ಮೆಂಟ್ ಚೆನ್ನಾಗಿ ಅನಸ್ತಿಲ್ವ"?...
"ಸ್ವಾತಿ ಗೊಂದಲದಲ್ಲಿ ,ಇಷ್ಟು ಸಣ್ಣ ಪಾರ್ಟಿ ಗೋಸ್ಕರ ಇಸ್ಟೊಂದು ಟೈಮ್ ತಗೊಂದ್ರಾ ಏನು ಸ್ಪೆಶಲ್ ಕಾನಸ್ತಾನೆ ಇಲ್ಲ ,ನಂಗಂತೂ ಯಾವ ಸರ್ಪ್ರೈಸ್ ಅಂತಾ ಅನಸ್ತಿಲ್ಲ ಪಾ!..
ಸೂರ್ಯ : "ಇಲ್ಲ ಸ್ವಾತಿ ಗೇಮ್ಸ್ ಎಲ್ಲಾ ಆರೆಂಜ್ ಮಾಡಿದ್ವಿ ಬಟ್ ಟೈಮ್ ಇಲ್ಲದೆ ಇರೋದ್ರಿಂದ ಮತ್ತೆ ಎವಾಗ್ಲಾದ್ರು ಮಾಡೋಣ ಅಂತ ಸುಮ್ನೆ ಸಿಂಪಲ್ ಡಿನ್ನರ್ ಪ್ಲಾನ್ ಮಾಡಿದ್ವಿ"
"ಸ್ವಾತಿ ಅನುಮಾನದಿಂದ,ನಂಗೆ ಏನೋ ಸರಿ ಅನಸ್ತಿಲ್ಲ ಯಾಕೆ ಎಲ್ಲರೂ ಮುಖಾನು ಒಳ್ಳೆ ಹರಳೆಣ್ಣೆ ಕೂಡದಿರೊರ್ತರ ಆಗಿದೆ ,ನಿಮ್ಮ ಯಾರ ಮುಖದಲ್ಲಿನು ಎನರ್ಜಿ ಇಲ್ಲಾ... ನಾವು ಇಷ್ಟು ವರ್ಷದಲ್ಲಿ ಒಂದು ಚಿಕ್ಕ ಪಾರ್ಟಿ ಮಾಡಿದ್ರೂ ಅದರಲ್ಲಿ ಎಲ್ಲರೂ ಫುಲ್ ಎಂಜಾಯ್ ಮಾಡ್ತಾ ಇರ್ತಿದ್ವೀ ಆದರೆ ಇವತ್ತು"...
ಪ್ರವೀಣ್ : "ಅಯ್ಯೋ ಹಾಗೇನೂ ಇಲ್ಲ ಸ್ವಾತಿ ಇವತ್ತು ಬೆಳಿಗ್ಗೆ ನಡೆದ ಮ್ಯಾಟರ್ ಇಂದ ಎಲ್ಲರೂ ಸ್ಪಲ್ಪ ಅಪ್ಸೆಟ್ ಆಗಿದ್ದಾರೆ ಅಷ್ಟೆ"
ಸ್ವಾತಿ : "ಓ.. ಹೌದಲ್ವಾ ನಾನು ಮರತೇ ಹೋಗಿದ್ದೆ ಪರವಾಗಿಲ್ಲ ನೆಕ್ಸ್ಟ್ ಟೈಮ್ ಫುಲ್ ಜೋಶ್ ಅಲ್ಲಿ ಮಾಡೋಣ ಸರಿ ಬೇಗ ಊಟ ಮಾಡಿ ಮನೆಗೆ ಹೋಗಣ ಜೆಕೆ ನನಗಂತು ತುಂಬಾ ಸುಸ್ತಾಗ್ತಿದೆ"...
ಎಲ್ಲರೂ ಡಿನ್ನರ್ ಮಾಡುವಾಗ ಸೂರ್ಯನಿಗೆ ಜೆಕೆ ಯಾಕೆ ಹಾಗೆ ಹೇಳ್ದ ಅನ್ನೋ ಪ್ರಶ್ನೇನೆ ಕಾಡ್ತಿರುತ್ತೆ... ಎಲ್ಲರೂ ಡಿನ್ನರ್ ಮುಗಿಸಿ ಮನೆಗೆ ಹೋರಡ್ತಾರೇ
ಜೆಕೆ : "ನೀವೆಲ್ಲರೂ ಮನೆಗೆ ಹೊರಡಿ ನಾನು ಸ್ವಾತಿ ನಾ ಬಿಟ್ಟು ಹೋರಡ್ತೀನಿ"..
"ಕಾರ್ತಿಕ್ ಗಡಸು ದ್ವನಿಯಲ್ಲಿ,ಜೆಕೆ ಇವತ್ತು ನಮ್ಮ ರೂಮ್ ನಲ್ಲೆ ಇರೋಣ ಎಲ್ಲರೂ ಸ್ವಾತಿ ನಾ ಮನೆಗೆ ಬಿಟ್ಟು ಬಾ ಆಗ ಜೆಕೆ ಬೇಡ ಕಣ್ರೋ ನಾನು ಮನೆಗೆ ಹೋಗಿ ರೆಸ್ಟ್ ಮಾಡ್ತೀನಿ ನೀವು ಹೋಗಿ"...
ಕಾರ್ತಿಕ್ : "ಸುಮ್ನೆ ಹೇಳಿದಷ್ಟು ಮಾಡು ಜೆಕೆ ಅಂತ ಸ್ಪಲ್ಪ ರುಡ್ ಆಗಿ ಹೇಳ್ತಾನೆ (Sorry ಕಣೋ ನಿನ್ನ ಸಮಾಧಾನ ಮಾಡೋಕೆ ಅಲ್ಲಿರೋದೆ ಸರಿ ಅದಕ್ಕೆ ಹಾಗೆ ಮಾತಾಡಿದೆ ಅಂತ ಮನಸಲ್ಲಿ ಅಂದುಕೊಳ್ತಾನೇ )
"ಆಗ ಸ್ವಾತಿ ನೀವೆಲ್ಲ ಎಲ್ಲಿಯಾದರೂ ಮಲ್ಕೋಳಿ ನಂಗಂತೂ ತುಂಬಾ ಸುಸ್ತು ಆಗ್ತಿದೆ ಜೆಕೆ ಪ್ಲೀಸ್ ಬೇಗ ಹೋಗು"... ಆಗ ಸೂರ್ಯ ,ಜೆಕೆ ರೂಮ್ ಗೆ ಬಾ ವೇಟ್ ಮಾಡ್ತೀರ್ತಿವಿ ಆಗ ಜೆಕೆ ಸರಿ ಅಂತ ಅಲ್ಲಿಂದ ಹೋರಡ್ತಾನೇ...
"ಬೈಕ್ ನಲ್ಲಿ ಹೋಗೋವಾಗ ಜೆಕೆ ಯಾವಾಗ್ಲೂ ಪಟ ಪಟ ಅಂತಾ ಮಾತಾಡ್ತಾ ಇರೋನು ಇವತ್ತು ಎಷ್ಟೇ ದೂರ ಹೋದರು ಅವನು ಮೌನವಾಗಿಯೇ ಇರ್ತಾನೆ "
ಸ್ವಾತಿ : "ಜೆಕೆ ಯಾಕೋ ಸೈಲೆಂಟ್ ಆಗಿದ್ದೀಯಾ ಡೈಲಿ ಬೈಕ್ ಮೇಲೆ ಹೋಗ್ಬೇಕಾದ್ರೆ ನಾನು ಸಾಕು ಅಂದ್ರು ಮಾತಾಡ್ತಾ ಇದ್ದೆ ಯಾಕೋ ತುಂಬಾ ಡಲ್ ಆಗಿದ್ದೀಯಾ ಅನಸ್ತಿದೆ!.... ಹಾಗೇನಿಲ್ಲ ಮನೆಗೆ ಹೋಗಿ ರೆಸ್ಟ್ ಮಾಡು ತುಂಬಾ ಸುಸ್ತಾಗಿದಿಯ ಅನಸ್ಥಿದೆ... ಅದಕ್ಕೆ ಸ್ವಾತಿ ತಲೆಯಾಡಿಸುತ್ತಾ, ಹೌದು ಕಣೋ...ಅಂತ ಹೇಳ್ತಾ ಜೆಕೆ ನಾ ಹಿಂದೆ ಇಂದ ಗಟ್ಟಿಯಾಗಿ ತಬ್ಬಿಕೊಳ್ಳತಾಳೆ...
"ಜೆಕೆ ಹೃದಯದ ಬಡಿತ ಜೋರಾಗಿ ಹೊಡೆದು ಕೊಳ್ಳೋಕೆ ಸ್ಟಾರ್ಟ್ ಆಗುತ್ತೆ ಮನಸಲ್ಲಿ ಗೊಂದಲಗಳ ಮನೆ ಸ್ವಲ್ಪ ತನ್ನ ಮೌನ ಮುರಿದು"...ಸ್ವಾತಿ ನಾನೊಂದು ಪ್ರಶ್ನೆಕೇಳಲ... ಹಾ! ಕೇಳೋ ಅದರಲ್ಲಿ ಏನಿದೆ..
"ಹಾಗೆ ಮನೆ ಇನ್ನೇನು ಹತ್ರ ಇದೆ ಅಂದಾಗ ಜೆಕೆ ಗೆ ಭಯ ಆಗೋಕೆ ,ಇವತ್ತು ಇವಳಿಗೆ ನಾನು ಹೇಳ್ದೆ ಇದ್ದರೆ ಇವಳನ್ನ ಕಳ್ಕೊಂಡು ಬಿಡ್ತೀನಿ ಅಂತಾ ಅನ್ಸೋಕೆ ಶುರುವಾಗಿದೆ.. ಇಲ್ಲ ಸ್ವಾತಿ ನಾ ಕಳ್ಕೊಳೋಕೆ ನಂಗೆ ಇಷ್ಟ ಇಲ್ಲ ಅವಳು ಇಲ್ದೆ ಇದ್ದರೆ... ಅತರ ಯೋಚನೆ ಮಾಡೋಕು ಕಷ್ಟ ಅನಸ್ತಿದೆ
ಯಾಕೆ ಆ ದೇವರು ನನ್ನ ಪ್ರೀತಿ ಹೇಳಿಕೊಳ್ಳೋವಾಗ ಅಡ್ಡಿಯಾಗ್ತಿದ್ದಾನೆ..ನನ್ನ ಪ್ರೀತಿ ಸ್ವಾತಿಗೆ ಅರ್ಥ ಆಗ್ತಿಲ್ಲ ಅಂದ್ರೆ ಆ ದೇವರಾದ್ರು ಎನ್ ಮಾಡ್ತಾನೆ ... ಪ್ಲೀಜ್ ಕಣೆ ನನ್ನ ಪ್ರೀತಿನಾ ಅರ್ಥಾ ಮಾಡಿಕೋ..ಅದೇನಾದರೂ ಆಗಲಿ ಹೇಳೆ ಬಿಡ್ತೀನಿ ..ಅಂತಾ ಮನಸನ್ನ ಗಟ್ಟಿ ಮಾಡ್ಕೊಂಡು ಸ್ವಾತಿ ಅದು ನಾನು ನಿನ್ನ ಹತ್ರ ತುಂಬಾ ಇಂಪಾರ್ಟೆಂಟ್ ವಿಷಯ ಹೇಳ್ಬೇಕು ಅನ್ಕೊಂಡಿದೀನಿ.. ನಿಂಗೆ ನಾನು ಮಾತಾಡೋದು ಕೆಳಸ್ತಾ ಇದೆಯಾ
ಸ್ವಾತಿ ಹಾ!.. ಕೆಳಸ್ತಾ ಇದೆ ಹೇಳು ಹೇಳು
ಜೆಕೆ : "ಅದು.. ನಾನು ನಿನ್ನ ತುಂಬಾ ಪ್ರೀತಿಸ್ತಾ ಇದೀನಿ ಸ್ವಾತಿ ಅದು..ನೀನು ಈಗಲೇ ನಿನ್ನ ನಿರ್ಧಾರ ಹೇಳಬೇಕಾಗಿಲ್ಲ ಸ್ವಲ್ಪ ಟೈಮ್ ತಗೋ ನಿಂಗೆ ಪ್ರಾಮಿಸ್ ಕೂಡಾ ಮಾಡ್ತೀನಿ ನಾನು ಲೈಫ್ ಅಲ್ಲಿ ಸೆಟಲ್ ಆದಮೇಲೆ ನಿನ್ನ ಮದುವೆ ಆಗ್ತೀನಿ ನಾನು ನಿನ್ನ ಈಗಿಂದ ಅಲ್ಲ ತುಂಬಾ ದಿನಗಳಿಂದ ಪ್ರೀತಿ ಮಾಡ್ತಿದೀನಿ ನೀನು ಅಂದ್ಕೊಂಡಿರೋ ತರ ಅಲ್ಲಾ ಪ್ರೀತಿ ಅಂದ್ರೆ... ನೀನು ಜಸ್ಟ್ ಹೂ.. ಅನ್ನು ಅಷ್ಟೆ ಸಾಕು ಪ್ಲೀಜ್ ಸ್ವಾತಿ ಏನಾದ್ರೂ ಮಾತಾಡು ಸ್ವಾತಿ"...
"ಸ್ವಾತಿ ದ್ವನಿ ಎತ್ತಿ, ಜೆಕೆ ಸ್ಟಾಪ್ ಮಾಡು.. ಸ್ವಾತಿ ಅದು ನಾನು ಜಸ್ಟ್.. ಸ್ವಾತಿ : ಅಯ್ಯೋ ಸ್ಟಾಪ್ ಮಾಡು ಅಂತಾ ಹೇಳಿದೆ ಅಲ್ವಾ... ಜೆಕೆ ಸರಿ ಅಂತಾ ಬೈಕ್ ನಾ ಸ್ಟಾಪ್ ಮಾಡ್ತಾನೆ" ...
ಸ್ವಾತಿ ಕೋಪದಲ್ಲಿ ಅವನ ಮುಖವನ್ನೇ ನೋಡುತ್ತಾ ನಿಲ್ತಾಳೆ
ಇವನಿಗೆ ಗಾಬರಿ ಜೊತೆಗೆ ಭಯ ಎರಡು ಇವನಿಗೆ ಗೊತ್ತಿಲ್ಲದಂತೆ ಅವನ ಮನಸಲ್ಲಿ ಮೂಡತೊಡಗುತ್ತದೆ ,ಸ್ವಾತಿ... ಪ್ಲೀಜ್ ಕೋಪ ಮಾಡ್ಕೋ ಬೇಡ ಅದು ನಾನು...
ಸ್ವಾತಿ : "ಏನು ಕೋಪ ಮಾಡ್ಕೋಬೇಡ ನೀನು ಮಾಡಿರೋ ಕೆಲಸಕ್ಕೆ ನಂಗೆ ಕೋಪ ಹಾಗೆ ನೆತ್ತಿಗೆ ಏರ್ತಾಇದೆ ಏನು ಮಾಡ್ದೆ ನೀನು"...
"ಜೆಕೆ ಬೇಜಾರಿನಲ್ಲಿ ಸ್ವಾತಿ , I am sorry ಆದರೆ ನನಗೆ ಗೊತ್ತು ನಾನು ಹಿಂತಹ ಜಾಗದಲ್ಲಿ ಪ್ರಪೋ"... ಅಂತ ಹೇಳುವಷ್ಟರಲ್ಲಿ ಸ್ವಾತಿ ತನ್ನ ಮಾತುಗಳನ್ನು ಮುಂದುವರೆಸುತ್ತಾಳೆ ಮಾಡೋದೆಲ್ಲ ಮಾಡಿ ಈಗ sorry ಅಂತಾ ಕೇಳ್ತಿಯಾ ನಮ್ಮ ಮನೆ ಎಲ್ಲಿದೆ ನೀನು ಎಲ್ಲಿ ಸ್ಟಾಪ್ ಮಾಡಿದ್ದೀಯಾ ನೋಡು.. ನಂಗೆ ಗೊತ್ತಿಲ್ಲ ಸೀದಾ ನನ್ನ ನಮ್ಮ ಮನೆ ಹತ್ರ ಬಿಡು ಅಷ್ಟೆ..
ಜೆಕೆ : "ಅಂದ್ರೆ ನೀನು ಇಷ್ಟೊತ್ತು ಇದರ ಬಗ್ಗೆನೇ ಹೇಳ್ತಾ ಇದ್ದೀಯಾ??.. ಹಾ! ಹೌದು ನೀನೇನು ಅನ್ಕೊಂಡೆ" ,
ಜೆಕೆ : "ಏನಿಲ್ಲ ಬಿಡು ಸರಿ ಕುಳಿತುಕೋ ಅಲ್ಲೇ ಬಿಡ್ತೀನಿ ಅಂತಾ ಅವಳ ಮನೆ ಹತ್ರ ಬಿಡ್ತಾನೆ... ಬೈಕ್ ಮೇಲಿಂದ ಇಳಿದ ಸ್ವಾತಿ,ಥ್ಯಾಂಕ್ ಯು ಡಿಯರ್ ನೀನು ಎಷ್ಟು ಪಾಪ ದವನು ನಾನು ಸುಮ್ನೆ ಕೋಪ ಮಾಡ್ಕೊಂಡಿರೋರ್ ತರ ನಾಟಕ ಮಾಡಿದೆ ನೀನು ಅದಿಕ್ಕೆ ಭಯ ಬಿದ್ದಬಿಟ್ಟೆ ಅಲ್ವಾ.. ಅಂತ ಹೇಳಿ ಒಂದು ಮುಗುಳ್ನಗೆಯನ್ನು ಬಿರ್ತಾಳೆ "
"ಹೇ.. ನೀನು ಏನೋ ಹೇಳ್ತಿದ್ದೆ ಅಲ್ವಾ ನಂಗೆ ಗಾಳಿ ಜೋರಾಗಿ ಬರ್ತಿರೋದ್ರಿಂದ ನಂಗೆ ಸರಿಯಾಗಿ ಕೆಳಿಸಲಿಲ್ಲ"...
"ಜೆಕೆ ಹುಸಿನಗೆಯನ್ನು ಬೀರುತ್ತಾ, ಏನು ಇಲ್ಲ ಎಕ್ಸಾಮ್ಸ್ ಹತ್ರ ಬಂದಿದಾವೆ ಟೈಮ್ ಪಾಸ್ ಮಾಡೋದು ಬಿಟ್ಟು ಓದೋದರ ಕಡೆ ಗಮನ ಕೊಡು ಅಂದೆ ಹಾಗೆ ಹೋದ ತಕ್ಷಣ ಮೊಬೈಲ್ ನೋಡ್ತಾ ಕುರ್ಬೇಡ ಬೇಗ ಮಲ್ಕೊ ಇಲ್ಲ ಅಂದ್ರೆ ತಲೆ ನೋವು ಬರೋಕೆ ಸ್ಟಾರ್ಟ್ ಆಗುತ್ತೆ"...
ಸ್ವಾತಿ : "ಓ.. ಎಷ್ಟು ಕೇರ್ ಮಾಡ್ತೀಯಾ ಕಣೋ.. ನನಗೆ ಇಷ್ಟು ಕೇರ್ ಮಾಡೊ ನೀನು ನಿನ್ನ ಹುಡಗಿಗೆ ಎಷ್ಟು ಕೇರ್ ಮಾಡ್ಬೇಡ ರಿಯಲಿ ಅವಳು ತುಂಬಾ ಪುಣ್ಯಾ ಮಾಡಿದಾಳೆ ಬಿಡು ಸರಿ ನೀನು ಹೋಗು ಎಲ್ಲರೂ ಹರಟೆ ಹೊಡೀತಾ ಕೂತಗೋಬೇಡಿ ಬೇಗ ಮಲ್ಕೋಳಿ ಓಕೆ ಗುಡ್ ನೈಟ್.. ಅಂತಾ ಹೇಳಿ ಸ್ವಾತಿ ಅಲ್ಲಿಂದ ಹೊರಡ್ತಾಳೆ" ....
ಯಾಕೆ ನನ್ನ ಮನಸ್ಸು ಅರ್ಥ ಆಗ್ತಿಲ್ಲ ನಿಂಗೆ ನಿನ್ನ ಹುಡಗಿ ಪುಣ್ಯ ಮಾಡ್ತಿದಾಳೆ ಅಂತ ಹೇಳ್ತಾನೆ ಇರ್ತಿಯ ಆದರೆ ಅದು ನೀನೇ ಅಂತಾ ನಿಂಗೆ ಯಾವಾಗ ಗೊತ್ತಾಗುತ್ತೆ... ಜೆಕೆಯ ಕಣ್ಣಂಚಲಿ ಕಣ್ಣೀರು ಸಹ ತನ್ನ ಅಸಹಾಯಕತೆಯನ್ನು ತೋರ್ಪಡಿಸುತ್ತದೆ...ಅದೆ ಬೇಜಾರಲ್ಲೇ ಜೆಕೆ ಅಲ್ಲಿಂದ ಕಾರ್ತಿಕ್ ರೂಮ್ ಗೆ ಹೊರಡ್ತಾನೆ...
ಮುಂದುವರೆಯುವುದು....
🌸ಲೇಖಕರ ನೋಟ🌸
ಈ ಕಥೆಯಲ್ಲಿ ಕೆಲ ಮಾತುಗಳು ಗಾಳಿಯಲ್ಲಿ ತಿರುಗಿ ಹೋಗಿ ಹೃದಯವನ್ನೇ ಕಲ್ಲಾಗಿ ಮಾಡುತ್ತವೆ. ತಾಳ್ಮೆಯೊಂದಿಗೆ, ಮನಸ್ಸಿನ ಆಳದಿಂದ ಬರುವ ಅನಿಸಿಕೆಗಳನ್ನು ಸರಿಯಾಗಿ ವ್ಯಕ್ತಪಡಿಸುವ ಪ್ರಯತ್ನ ಇದಾಗಿದೆ. ಓದುಗರೂ ಈ ನಿಶ್ಶಬ್ದ ಭಾವನೆಗಳು ನಿಮಗೆ ಹೇಗೆ ಎನಿಸಿದವು ಎಂದು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಹಾಗೆ ಹೆಚ್ಚಿನ ಅಪ್ಡೇಟ್ ಗಳಿಗಾಗಿ ಫಾಲೋ ಮಾಡಿ.