ಅಧ್ಯಾಯ 9 : " ನಗುವಿನ ಹಿಂದೆ ನಾಟಕ"
ಪೂರ್ವಿಯು ತಾನು ಮಾಡಿದ ಪ್ಲಾನ್ ಎಲ್ಲವನ್ನೂ ರಾಜೇಶ್ ಗೆ ಹೇಳುತ್ತಾಳೆ
ರಾಜೇಶ್ ಆಶ್ಚರ್ಯಚಕಿತನಾಗಿ ಇದು ನೀನೆನಾ? ನಾನು ನಿನ್ನ ತುಂಬಾ ಸೈಲೆಂಟ್ ಹುಡಗಿ ಅನ್ಕೊಂಡಿದ್ದೆ ನೀನು ತುಂಬಾ ಡೆಂಜರ್ ಇದ್ದೀಯಾ ಮಾರಾಯ್ತಿ ಇರಲಿ ನಾನು ನಿನಗೆ ಹೆಲ್ಪ್ ಮಾಡ್ತೀನಿ, ಆದರೆ ಇದರಿಂದ ನಂಗೆ ಏನು ಪ್ರಾಬ್ಲಮ್ ಆಗಲ್ಲ ತಾನೇ ?
ಪೂರ್ವಿಯ ಮುಖದಲ್ಲಿ ಗಂಭೀರತೆಯನ್ನು ಹೊತ್ತು ಯಾವ ಪ್ರಾಬ್ಲಮ್ ಆಗೋದಿಲ್ಲ,ನೀನು ಯಾವ ಟೆನ್ಷನ್ ಮಾಡ್ಕೋಬೇಡ ಓಕೆ
ರಾಜೇಶ್ : "ಇದರಿಂದ ನಂಗೆ ಯಾವ ಲಾಭನು ಇಲ್"ಲ🤷
"ಪೂರ್ವಿಯು ಸಮಾಧಾನದಿಂದ ನಾನು ನಿನಗೆ ಒಂದು ಲಕ್ಷ ಕೊಡ್ತೀನಿ ನೀನು ನಿಮ್ಮ ಫ್ರೆಂಡ್ಸ್ ಎಲ್ಲಾ ಹಂಚ್ಕೊಳ್ಳಿ ಓಕೆ ನಾ"?..
ರಾಜೇಶ್ ಅದನ್ನ ಕೇಳಿ ಫುಲ್ ಶಾಕ್ "ಏನು ಒಂದು ಲಕ್ಷ ನಂಗೆ ಗೊತ್ತು ನೀನು ತಮಾಷೆ ಮಾಡ್ತಿದೀಯ, ಇಸ್ಟೊಂದು ದುಡ್ಡು ಓ ಮೈ ಗಾಡ್"
ಪೂರ್ವಿ : "ಇನ್ನೂ ಕೆಲಸ ಕರೆಕ್ಟ್ ಆಗಿ ಮಾಡಿದ್ರೆ ಇನ್ನು ಜಾಸ್ತಿ ಕೊಡ್ತೀನಿ "
ರಾಜೇಶ್ ಅವಳು ಹೇಳಿದ ಮಾತನ್ನು ಕೇಳಿ ಆಶ್ಚರ್ಯದ ಜೊತೆಗೆ ಖುಷಿಯಿಂದ ಅವನ ಬಾಯಲ್ಲಿ ಮಾತುಗಳೇ ಹೊರಡದಂತಾಯಿತು.. ನಂತರ ತನ್ನನ್ನು ತಾನೇ ಸಂಭಾಳಿಸಿಕೊಂಡು ಓಕೆ ಡೀಲ್ 🤝 ಅಂತ ಶೇಕ್ ಹಾಂಡ್ ಮಾಡಿಕೊಳ್ತಾರೆ
ರಾಜೇಶ್ : ಆದರೆ ಹರ್ಷಾ ಇದಕ್ಕೆಲ್ಲ ಒಪ್ಗೊಂಡಿದಾಳಾ?
ಪೂರ್ವಿ : "ಅವಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅವಳಿಂದ ಯಾವ ಪ್ರಾಬ್ಲಮ್ ಆಗೋಲ್ಲ ಸರಿ ನೀವಿನ್ನು ಹೊರಡಿ ಆದರೆ ಕೆಲಸ ಕರೆಕ್ಟ್ ಟೈಮ್ ಗೆ ಆಗಬೇಕು ಅಷ್ಟೆ"
ರಾಜೇಶ್ : "ಸರಿ ಹಾಗಾದ್ರೆ ನಾನಿನ್ನೂ ಬರ್ತೀನಿ ಸೀ ಯು ಲೇಟರ್ ಅಂತಾ ಹೇಳಿ ಅಲ್ಲಿಂದ ಹೊರಡ್ತಾನೆ"
--------
ಇನ್ನು ಈ ಕಡೆ ಜೆಕೆ,ಕಾರ್ತಿಕ್,ಸೂರ್ಯ ಹಾಗೆ ಪ್ರವೀಣ್ ಎಲ್ಲರೂ ಕಾಲೇಜ್ ಎಂಟ್ರೆನ್ಸ್ ಗೆ ಬರ್ತಾರೆ ಸ್ವಾತಿ ನಾ ನೋಡಿ ಹಾಗೆ ಸ್ಟನ್ ಆಗಿ ನಿಂತು ಬಿಡ್ತಾರೆ
( ಸ್ವಾತಿ ಗೋಲ್ಡನ್ ಕಲರ್ ಸೀರೆ , ಆ ಬಿಟ್ಟಿರುವ ರೇಷ್ಮೆ ಅಂತಿರುವ ಅವಳ ಕೂದಲು ಹಾಗೆ ಸ್ಪಲ್ಪ ಸ್ವಲ್ಪವೇ ಮಾಡಿದ ಮೇಕಪ್ ಕಿವಿಗೆ ಸಣ್ಣ ಸಣ್ಣ earings ಹಾಗೆ ನೆಕ್ಲೆಸ್ ಅವಳನ್ನು ಇನ್ನು ಹೆಚ್ಚು ಸುಂದರವಾಗಿ ಕಾಣಿಸುವಂತೆ ಮಾಡುತ್ತಿತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವಳ ಆ ತುಂಟ ನಗು ಸೌಂದರ್ಯಕ್ಕೆ ಕಿರೀಟದ ತರಹ ಒಟ್ಟಾರೆ ಸ್ವಾತಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು )
"ಜೆಕೆ ಆಶ್ಚರ್ಯದಿಂದ ಸ್ವಾತಿ ಇದು.. ಇದು.. ನೀನಾ"?
"ಸ್ವಾತಿ ತನ್ನ ತುಟಿಗಳಿಂದ ಮಂದಹಾಸವನ್ನು ಬೀರುತ್ತಾ ಹೆಂಗೆ ನನ್ ಸರ್ಪ್ರೈಸ್ , ನೋಡದ್ರಾ ಹೆಂಗೆ ಎಲ್ಲರೂ ಸ್ಟನ್ ಆಗಿದಿರಾ ನನ್ನ ನೋಡಿ ನಿಮಗೆಲ್ಲ ಸರ್ಪ್ರೈಸ್ ಕೊಡಬೇಕು ಅಂತಾನೆ ನಾನು ಇವತ್ತು ನಿಮ್ಮ ಜೊತೆ ಬರ್ಲಿಲ್ಲ "
ಪ್ರವೀಣ್ ( ಛೇಡಿಸುತ್ತಾ) : "ಅಲ್ಲ ನೀನು ಸೀರೆ ಊಟಗೊಂಡು ಹಿಂಗೆ ಬಂದು ಶಾಕ್ ಕೊಟ್ರೆ ಹೇಗೆ"?,
ಜೆಕೆ ಏನನ್ನು ಮಾತಾಡದೆ ಸ್ವಾತಿಯನ್ನು ನೋಡುವುದರಲ್ಲೇ ಮಗ್ನನಾಗಿರುತ್ತಾನೆ,
ಸ್ವಾತಿ : "ವಾವ್!!.. ಜೆಕೆ ಏನು ಸಖತ್ ಆಗಿ ಕಾನಸ್ತಾ ಇದ್ದೀಯಾ ಗೊತ್ತಾ ಹಿಂಗೆ ರೆಡಿ ಆದರೆ ಯಾವ ಹುಡಗಿ ತಾನೇ ನಿಂಗೆ ಬೀಳದೆ ಇರ್ತಾಳೆ ಅಂತ ಹೇಳಿ ತುಂಟ ನಗೆಯೊಂದನ್ನು ಬೀರುತ್ತಾಳೆ, ಹಾಗೆ ನೀವು ಕೂಡ ಸೂಪರ್ ಆಗಿ ಕಾಣಿಸ್ತಾ ಇದೀರಾ ಕಣ್ರೋ"
ಸೂರ್ಯ : "ಸ್ವಾತಿ ನಿಂಗೆ ಈ ಸೀರೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ ಹಾಗೆ ಕಾರ್ತೀಕ್ ಮತ್ತೆ ಪ್ರವೀಣ್ ಕೂಡ ಕಾಂಪ್ಲಿಮೆಂಟ್ ಕೊಡ್ತಾರೆ "
ಆದರೆ ಜೆಕೆ ಮಾತ್ರ ಸ್ತಬ್ಧನಾಗಿ ನಿಂತಿರ್ತಾನೆ
ಸ್ವಾತಿ : "ಜೆಕೆ ಯಾಕೋ ನನಗೆ ಈ ಸೀರೆ ಸೂಟ್ ಆಗ್ತಿಲ್ವ ನೀನು ಏನು ಹೇಳ್ತಾನೆ ಇಲ್ಲಾ ? ನಾನು ಈ ಸೀರೆ ಹಾಕೊಂಡು ಬಂದಿದ್ದೆ ನಿಂಗೆ ಇಷ್ಟ ಅಂತ ಆದರೆ ನೀನು ಏನು ಹೇಳ್ತಾನೆ ಇಲ್ಲಾ"
ಆಗ ಸೂರ್ಯ,ಕಾರ್ತಿಕ್,ಪ್ರವೀಣ್ ಮೂವರು ಒಬ್ಬರಿಗೊಬ್ಬರು ಮುಖವನ್ನು ನೋಡ್ತಾ ಕಣ್ಣಲ್ಲೇ ಸನ್ನೆಯನ್ನು ಪಾಸ್ ಮಾಡ್ತೀರ್ತಾರೆ
ಕಾರ್ತಿಕ್ ತನ್ನ ಒಂದು ಹುಬ್ಬನ್ನು ಹಾರಿಸುತ್ತಾ ಹಾಗಾದ್ರೆ ನೀನು ಸೀರೆ ನಾ ಹಾಕೊಂಡು ಬಂದಿದ್ದು ಜೆಕೆ ಗೋಸ್ಕರಣಾ?
ಸ್ವಾತಿ :" ಹೌದು! ಇವನಿಗೆ ಇಷ್ಟಾ ಅಂತಾನೆ ನಿಮ್ಗೆ ಗೊತ್ತಲ್ವಾ ನಂಗೆ ಸೀರೆ ಊಟಗೊಳ್ಳೋಕೆ ತುಂಬಾ ಕಷ್ಟ ಇಷ್ಟು ಕಷ್ಟ ಬಿದ್ದು ಸೀರೆ ನಾ ಉಟ್ಟುಗೊಂಡು ಬಂದ್ರೆ ಈ ಕೋತಿ ಏನು ಹೇಳ್ತಾನೆ ಇಲ್ಲಾ ಅಂತ ಹೇಳುವ ಮೂಲಕ ತನ್ನ ಬೇಜಾರನ್ನು ಹೊರ ಹಾಕ್ತಾಳೆ"
ಜೆಕೆ : "ತುಂಬಾ ಚೆನ್ನಾಗಿ ಕಾಣಸ್ತಾಇದ್ದೀಯಾ ಅಂತ ಮುಗುಳ್ನಗೆಯನ್ನು ಬಿರ್ತಾನೆ"
( ಆದರೆ ಅವನ ಮನಸೊಳಗಡೆ ಅವಳಿಗೆ ಹೇಳಲಾಗದ ಶಬ್ದಗಳು ,ಹೆಂಗೆ ಹೇಳಲಿ ನೀನು ದೇವತೆತರ ಕಾಣಸ್ತಾಇದ್ದೀಯಾ ಅಂತ ,ನಾನು ಆಗಲೇ ನಿಂಗೆ ಸೋತು ಶರಣಾಗಿದ್ದೇ ಮತ್ತೆ ನೀನು ಇನ್ನು ಸೋಲೋ ತರ ಮಾಡ್ತಿದ್ದಿಯಾ ಹಿಂಗೆ ಮಾಡ್ಬೇಡ್ವೆ ಈ ಜೀವ ಹೆಂಗೆ ತಡಕೊಳ್ಳುತ್ತೆ ಇವತ್ತು ನನ್ನ ಮನಸಲ್ಲಿರೋ ಎಲ್ಲಾ ಮಾತನ್ನು ಹೇಳಿ ಬಿಡ್ತೀನಿ ಆ ಸಮಯಕ್ಕೆ ಕಾಯ್ತಿದೀನಿ,ಅಂತ ತನ್ನ ಮನಸಲ್ಲೇ ಅಂದುಕೊಳ್ತಾನೆ)
ಸ್ವಾತಿ : "ಏನು!.. ನಿಂಗೆ ಹುಡಗಿರ್ಗೆ ಕಾಂಪ್ಲಿಮೆಂಟ್ ಕೂಡಾ ಕೊಡೋಕೆ ಬರಲ್ಪಲ್ಲೋ ಪಾಪ ನಿನ್ನ ಹುಡಗಿ ಅದೇನ ಪಾಪ ಮಾಡಿದಳೋ ಏನೋ"
"ಆಗ ಪ್ರವೀಣ್ ಸಣ್ಣ ಧ್ವನಿಯಲ್ಲಿ ನೀನೇ ತಾನೆ ಅವನ ಹುಡಗಿ ಅಂತ ಹೇಳ್ತಾನೆ"
ಸ್ವಾತಿ : "ಪವಿ..ಏನಾದ್ರೂ ಹೇಳಿದೀಯ" ?
ಸೂರ್ಯ ತಕ್ಷಣ ಅವನ ಬಾಯಿಯನ್ನು ಮುಚ್ಚಿ ಹೇ.. ಅವನು ಏನು ಹೇಳಿಲ್ಲ ಸ್ವಾತಿ ಅಲ್ವೇನೋ..
ಪ್ರವೀಣ್ :" ಹೌದು ಸ್ವಾತಿ ಅಂತ ತಲೆಯನ್ನು ದೂಡುತ್ತಾನೆ "
ಜೆಕೆ : "ಸರಿ ಬನ್ನಿ ಟೈಮ್ ಆಯ್ತು ಹೋಗೋಣ ಇನ್ನೇನು ಗೆಸ್ಟ್ ಬರೋ ಟೈಮ್, ಸ್ವಾತಿ ಸರಿ ಎಲ್ಲರೂ ಸೇರಿ ಒಂದು ಸೆಲ್ಫಿ ತಗೊಳೋಣ ಪ್ಲೀಜ್ ಜೆಕೆ"
ಜೆಕೆ: "ಸರಿ ಅಂತ ಎಲ್ಲರೂ ಸೆಲ್ಫಿ ತೆಗೆದುಕೊಂಡು ಹೊರಡುವಾಗ ಜೆಕೆ ಗೆ ಸುಮತಿ ಅತ್ತೆ ಇಂದ ಕಾಲ್ ಬರುತ್ತೆ ಇದೇನು ಅತ್ತೆ ಈ ಟೈಮ್ ಅಲ್ಲಿ ಕಾಲ್ ಮಾಡ್ತಿದ್ದಾರೆ... ಸ್ವಾತಿ ನೀವೆಲ್ಲರೂ ಹೋರಡಿ ನಂಗೆ ಸ್ಪಲ್ಪ ಕೆಲಸ ಇದೆ ಒಂದು 5 ಮಿನಿಟ್ಸ್ ಅಲ್ಲಿ ಬರ್ತೀನಿ"
ಸೂರ್ಯ : "ಸರಿ ಬೇಗ ಬಾರೋ ಅಂತಾ ಹೇಳಿ ಅವರೆಲ್ಲರೂ ಅಲ್ಲಿಂದ ಹೊರಡ್ತಾರೆ"
ಜೆಕೆ ಕಾಲ್ ಪಿಕ್ ಮಾಡಿ ಹಲೋ
ಸುಮತಿ ತನ್ನ ಮಧುರವಾದ ಧ್ವನಿಯಿಂದ ಮೆಲ್ಲನೆ
"ಹಲೋ ಕಾರ್ತಿ ಪುಟ್ಟ ನಿಂಗೆ ಇವತ್ತು ಆಲ್ ದೀ ಬೆಸ್ಟ್ ಹೇಳೋದನ್ನೇ ಮರೆತು ಹೋಯ್ತು ಕಣೋ ಅದಕ್ಕೆ ಕಾಲ್ ಮಾಡ್ದೆ ಬ್ಯುಸಿ ಇದಿಯಾ ಅನ್ಸುತ್ತೆ ,ಆದರೆ ಇವತ್ತು ನೀನು ಯಾವುದೇ ಕಾರಣಕ್ಕೂ ಪ್ರೊಪೋಸ್ ಮಾಡೋದನ್ನ ಮಿಸ್ ಮಾಡ್ಬೇಡ ಓಕೆ ನಾ "
"ಜೆಕೆ ಮಂದಹಾಸವನ್ನು ಬೀರುತ್ತಾ ಸರಿ ಅತ್ತೆ ನೀವ್ ಹೇಳಿದ್ಮೇಲೆ ಮುಗೀತು ಡನ್ ,ಅತ್ತೆ ಇನ್ನೊಂದು ವಿಷಯ ಗೊತ್ತಾ ಸ್ವಾತಿ ಇವತ್ತು ನನಗೋಸ್ಕರ ಸೀರೆ ಉಟ್ಟುಕೊಂಡು ಬಂದಿದ್ದಾಳೆ ಗೊತ್ತಾ..."
"ಸುಮತಿ ಆಶ್ಚರ್ಯದಿಂದ ಏನೂ! ನಿನಗೋಸ್ಕರ ನಾ ನೋಡ್ಡಾ ನಾನು ಹೇಳ್ತಾ ಇದ್ದೆ ಅವಳು ಕೂಡ ನಿನ್ನ ಪ್ರೀತಿ ಮಾಡ್ತಿದಾಳೆ ಅಂತ ಹುಡಗಿರು ಎಲ್ಲಾ ನು ಬಾಯಿಬಿಟ್ಟು ಹೇಳೋದಿಲ್ಲ ಆದರೆ ಅವರು ಮಾಡೊ ಆಕ್ಷನ್ ಅಲ್ಲೇ ನಾವೇ ತಿಲ್ಕೋಬೇಕು ಕಂದ ..ಸರಿ ಇವತ್ತು ರಾತ್ರಿ ನೀನು ಮನೆಗೆ ಬಂದು ನನಗೆ ಏನಾಯ್ತು ಅಂತಾ ಎಲ್ಲಾ ವಿಷಯನು ಹೇಳಿನೆ ಮನೆಗೆ ಹೋಗ್ಬೇಕು ಓಕೆ ನಾ..
ಜೆಕೆ : "ಸರಿ ಅತ್ತೆ ಎಲ್ಲಾನು ಹೇಳ್ತೀನಿ ಬಾಯ್.. ಅಂತಾ ಕಾಲ್ ಕಟ್ ಮಾಡಿ ತನ್ನೊಳಗೆ ಒಂದು ಮಂದಹಾಸವನ್ನು ಬೀರುತ್ತಾ ಆಡಿಟೋರಿಯಂ ಕಡೆ ನಡೀತಾನೆ"
-------
"ಸ್ವಲ್ಪ ಸಮಯಕ್ಕೆ ಫಂಕ್ಷನ್ ಕೂಡಾ ಸ್ಟಾರ್ಟ್ ಆಗುತ್ತೆ ಎಲ್ಲಾ ಗೆಸ್ಟ್ ಕೂಡಾ ಬರ್ತಾರೆ ಫಂಕ್ಷನ್ ಹೋಸ್ಟ್ ನಾ ಜೆಕೆ ನೇ ವಹಿಸಿಕೊಂಡಿರ್ತಾನೆ ಬಂದಿರೋ ಗೆಸ್ಟ್ಸ್ ಎಲ್ಲರನ್ನು ವೆಲ್ಕಮ್ ಮಾಡಿಕೊಳ್ತಾನೆ ಹಾಗೆ ಬಂದಿರೋ ಎಲ್ಲಾ ಗೆಸ್ಟ್ ಹಾಗೂ ಪ್ರೊಫೆಸರ್ ಎಲ್ಲರೂ ಕಾಲೇಜ್ ಬಗ್ಗೆ ಹಾಗೆ ಸ್ಟೂಡೆಂಟ್ಸ್ ಬಗ್ಗೆ ತಮ್ಮ ಸ್ಪೀಚ್ ಕೂಡಾ ಮಾಡ್ತಾರೆ" ,
"ಇನ್ನೇನೂ ಕೊನೆಯದಾಗಿ ಪ್ರಿನ್ಸಿಪಾಲ್ ಭಾಷಣ ಮಾಡಲು ಬರ್ತಾರೆ ಆಗ ಅಲ್ಲಿರುವ ಎಲ್ಲಾ ಸ್ಟೂಡೆಂಟ್ಸ್ ಬೇಗ ಕಲ್ಚರಲ್ ಪ್ರೋಗ್ರಾಮ್ ಸ್ಟಾರ್ಟ್ ಮಾಡಿ ಎಂದು ಎಲ್ಲರೂ ಗಲಾಟೆ ಮಾಡೋಕೆ ಶುರು ಮಾಡ್ತಾರೆ",
ಪ್ರಿನ್ಸಿಪಾಲ್ : "ನೋಡಿ ನನಗೆ ನಿಮ್ಮ ಉತ್ಸಾಹ ಅರ್ಥ ಆಗುತ್ತೆ ನಾನು ತುಂಬಾ ಸಮಯ ತೆಗೆದುಕೊಳ್ಳೋದಿಲ್ಲ ಒಂದು ಇಂಪಾರ್ಟೆಂಟ್ ವಿಷಯದ ಬಗ್ಗೆ ಮಾತಾಡಿ ಬಿಡ್ತೀನಿ ಅದು ನಿಮ್ಮೆಲ್ಲರಿಗೂ ಕೂಡಾ ಗೊತ್ತಿರೋ ವಿಷಯ",
ಆಗ ಎಲ್ಲೋ ಮೂಲೆಯಿಂದ ಒಂದು ದ್ವನಿ ಬರುತ್ತೆ ನಮ್ಗೆ ಗೊತ್ತಿರೋ ವಿಷಯ ಮತ್ತೆ ಯಾಕೆ ಹೇಳಿ ನಮ್ಮ ಟೈಮ್ ವೆಸ್ಟ್ ಮಾಡ್ತಿರಾ... ಅಷ್ಟು ಹೇಳಿದ್ದೆ ತಡ ಅಲ್ಲಿರೋ ಎಲ್ಲಾ ಸ್ಟೂಡೆಂಟ್ಸ್ ಎದ್ದು ಬಿದ್ದು ನಗೋಕೆ ಸ್ಟಾರ್ಟ್ ಮಾಡ್ತಾರೆ ಹಾಗೆ ಇದೆ ಗ್ಯಾಪ್ ನಲ್ಲಿ ಜೋರಾಗಿ ಗಲಾಟೆ ಮಾಡೋಕೆ ಶುರು ಮಾಡ್ತಾರೆ
ಪ್ರಿನ್ಸಿಪಾಲ್ : "ನೋಡಿ ನೀವೇನಾದರೂ ಹಿಂಗೆ ಗಲಾಟೆ ಮಾಡಿದ್ರೆ ನಾನು ಇರೋ ಎಲ್ಲಾ ಪ್ರೋಗ್ರಾಮ್ ನು ಕ್ಯಾನ್ಸಲ್ ಮಾಡ್ಬೇಕಾಗುತ್ತೆ ಅಂತ ಹೇಳಿದಾಗ ಎಲ್ಲರೂ ಸೈಲೆಂಟ್ ಆಗ್ತಾರೆ ,ನೋಡಿ ನನ್ನ ಇಷ್ಟು ಅನುಭವದಲ್ಲಿ ಇದೆ ಫಸ್ಟ್ ಟೈಮ್ ನೀವುಗಳು ಮಾಡಿರೋ ಕೆಲಸಕ್ಕೆ ನಂಗೆ ತುಂಬಾ ಹೆಮ್ಮೆ ಆಗ್ತಿದೆ ಹಾಗೆ ಇದಕ್ಕೆಲ್ಲ ಮುಖ್ಯಕಾರಣ Mr.ಜಯ ಕಾರ್ತೀಕ್ ಈ ಅನಾಥಾಶ್ರಮ ಫಂಡ್ ಮಾಡೊ ಕಾನ್ಸೆಪ್ಟ್ ಬಂದಿದ್ದೆ ಇವನಿಂದ ಇದರಿಂದ ನಮ್ಮ ಕಾಲೇಜ್ ಅಷ್ಟೆ ಅಲ್ಲ ಎಲ್ಲಾ ಕಡೆ ಇಂದಾನು ಉತ್ತಮ ಪ್ರಶಂಸೆ ವ್ಯಕ್ತವಾಗ್ತಿದೆ ,ನಂಗಂತೂ ತುಂಬಾ ಕುಷಿ ಆಗ್ತಿದೆ ಅದೆ ರೀತಿ ನಿಮ್ಮನ್ನ ಕಳಿಸಿಕೊಡೋಕೆ ತುಂಬಾ ಬೇಜಾರ್ ಆಗ್ತಿದೆ ಹಾಗೆ ಕಾಲೇಜ್ ಬಗ್ಗೆ ಸ್ಟೂಡೆಂಟ್ಸ್ ಮಾಡಿರುವ ಸಾಧನೆಗಳ ಬಗ್ಗೆ ಮಾತಾಡ್ತಾ ತಮ್ಮ ಭಾಷಣವನ್ನು ಮುಗಿಸಿ ನಂತರ ಅನಾಥಾಶ್ರಮದ ಕಡೆಯಿಂದ ಬಂದಿರೋ ಗೆಸ್ಟ್ ಗೆ ಫಂಡ್ ನಾ ಕೊಟ್ಟು ವಂದನೆಗಳ ಮೂಲಕ ಈ ಕಾರ್ಯಕ್ರಮ ಮುಗಿಸಿ ಕಲ್ಚರಲ್ ಕಾರ್ಯಕ್ರಮಗಳನ್ನು ಸ್ಟಾರ್ಟ್ ಮಾಡ್ತಾರೆ"
ಎಲ್ಲರೂ ತಮ್ಮ ತಮ್ಮ ಪರ್ಫಾರ್ಮೆನ್ಸ್ ಮೂಲಕ ಮನೋ ರಂಜನೆಯನ್ನು ನೀಡುತ್ತಿರುತ್ತಾರೆ ಸ್ವಾತಿ ,ಪೂರ್ವಿ ಹಾಗೆ ಇನ್ನು ಹಲವು ಹುಡುಗಿಯರು Ramp Walk ( ರ್ಯಾಂಪ್ ವಾಕ್) ಮಾಡುತ್ತಾರೆ ಮತ್ತು ಹಾಗೆ ಜೆಕೆ ,ಕಾರ್ತಿಕ್,ಸೂರ್ಯ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡ್ತಾರೆ ಮತ್ತೆ ಪ್ರವೀಣ್ ಸಾಂಗ್ ಹಾಡುವುದರ ಮೂಲಕ ಹಾಗೆ ಜೆಕೆ ಗಿಟಾರ್ ನುಡಿಸುವದರ ಮೂಲಕ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ತಾನೆ ಆಗ ಎಲ್ಲರೂ ವಿಷ್ಯಲ್, ಚಪ್ಪಾಳೆಯ ಮೂಲಕ ಅದನ್ನು ಎಂಜಾಯ್ ಮಾಡ್ತಾ ಇರ್ತಾರೆ ಪೂರ್ವಿ ಮತ್ತು ಸ್ವಾತಿ ಅಲ್ಲೇ ನಿಂತು ನೋಡ್ತೀರ್ತಾರೆ
"ಪೂರ್ವಿ ಸ್ವಾತಿಯ ಕಡೆ ನೋಟವನ್ನು ಬೀರುತ್ತಾ ಸ್ವಾತಿ ಜೆಕೆ ಡ್ಯಾನ್ಸ್ ಅಷ್ಟೆ ಅಲ್ಲ ಗಿಟಾರ್ ಕೂಡ ಸೂಪರ್ ಆಗಿ ನುಡಸ್ತಾನೆ wow he is unbelievable "
ಸ್ವಾತಿ : "ಹೌದು ಪೂರ್ವಿ ಜೆಕೆ ಗೆ ಯಾವ್ದು ಬರೋದೇ ಇಲ್ಲ ಅನ್ನೋಹಾಗೆ ಇಲ್ಲ ಎಲ್ಲಾನು ಬರುತ್ತೆ ಅವನಿಗೆ "
"ಆಗ ಪೂರ್ವಿ ಅವಳ ಎದುರಿಗೆ ಮಂದಹಾಸವನ್ನು ಬೀರುತ್ತಾ ಹೌದಾ! ನೈಸ್ ಆದರೆ ತನ್ನ ಮನದಲ್ಲಿ ಅದಕ್ಕೆ ತಾನೇ ಅವನನ್ನ ಹುಚ್ಚಿತರ ಪ್ರಿತಸ್ತಾ ಇದೀನಿ ಇವತ್ತು ನಾನ್ ಮಾಡೊ ಪ್ಲಾನ್ ವರ್ಕ್ ಆಗೆ ಆಗುತ್ತೆ ಜೆಕೆ ನನ್ನವನ್ನಾಗಿ ಮಾಡ್ಕೊಂಡೆ ಮಾಡ್ಕೋತೀನಿ ಅಂತ ಮನಸಲ್ಲಿ ಆಂದುಕೊಳ್ತಾಳೆ "
"ಹಾಗೆ ಮತ್ತೊಂದು ಪ್ರಶ್ನೆ ಕೇಳುತ್ತಾಸ್ವಾತಿ ನೀನ್ ಯಾಕೆ ಡ್ಯಾನ್ಸ್ ಮಾಡ್ಲಿಲ್ಲ?"
ಸ್ವಾತಿ ಒಂದು ಮುಗ್ಧ ನಗೆಯೊಂದಿಗೆ "ನಂಗೆ ಇದರಲ್ಲಿ ಎಲ್ಲಾ ಇಂಟ್ರೆಸ್ಟ್ ಇಲ್ಲ ನಾನು ಮಾಡದಿದ್ರೆ ಎನ್ ಆಯ್ತು ನಮ್ಮ ಫ್ರೆಂಡ್ಸ್ ಮಾಡಿದರಲ್ಲ ಅಷ್ಟೆ ಸಾಕು"
ಪೂರ್ವಿ :" ಹೌದು ನಿಜ ನಿಮ್ಮ ಫ್ರೆಂಡಶಿಪ್ ನಾ ನೋಡೋದಕ್ಕೆ ಒಂತರ ಕುಷಿ ಆಗುತ್ತೆ ಆದರೆ ಏನು ಮಾಡೋದು ಆ ಅದೃಷ್ಟ ಎಲ್ಲರಿಗೂ ಇರಲ್ಲ ಅಲ್ವಾ"
ಸ್ವಾತಿ : "ಹೇ!.. ಹಾಗೆ ಯಾಕೆ ಅಂದುಕೊಳ್ತಿಯ ನೀನು ಕೂಡ ನಮ್ಮಲ್ಲಿ ಒಬ್ಬಳು ಹಿಂದೆ ನಡದಿದ್ದನ್ನ ಎಲ್ಲಾ ಮರೆತುಬಿಡು ಇನ್ಮೆಲಿಂದ ನಾವೆಲ್ಲ ಫ್ರೆಂಡ್ಸ್ ಓಕೆ ನಾ "
ಪೂರ್ವಿ : "ಮತ್ತೆ ತನ್ನ ಹುಸಿನಗೆಯನ್ನು ಬೀರುತ್ತಾ ಥ್ಯಾಂಕ್ ಯೂ ಸ್ವಾತಿ ನೀನು ತುಂಬಾ ಒಳ್ಳೆಯವಳು ಅಂತ ಹೇಳಿ ಸ್ವಾತಿ ನಾ ತಬ್ಬಿಕೊಳ್ತಾಳೆ "
"ಆದರೆ ಅವಳ ಮನಸ್ಸಲ್ಲಿರುವ ವಿಚಾರಗಳೇ ಬೇರೆ ನನ್ನ ಜೆಕೆ ದೂರ ಮಾಡೋಕೆ ನೀವುಗಳು ಕೂಡಾ ಕಾರಣ ನೋಡ್ತೀರಿ ಒಮ್ಮೆ ಜೆಕೆ ನನ್ನ ವಶದಲ್ಲಿ ಬಂದ್ರೆ ಸಾಕು ನಿಮ್ಮನ್ನೆಲ್ಲ ಅವನಿಂದ ಹೇಗೆ ದೂರ ಮಾಡ್ತೀನಿ ಅಂತ.. ಅವಳು ನಿಗೂಢತೆಯಿಂದ ಕೂಡಿದ ಒಂದು ನಗೆಯನ್ನು ಬರ್ತಾಳೆ"...
ಮುಂದುವರೆಯುವುದು.....
🌸ಲೇಖಕರ ನೋಟ🌸:
ಈ ಅಧ್ಯಾಯದಲ್ಲಿ ನಗು ಹಿಂದಿದ್ದ ನಾಟಕ, ಪ್ರೀತಿಯಲ್ಲಿ ತೋರುವ ಮೌನ, ಮತ್ತು ಲಹರಿಯಾದ ಕನಸುಗಳ ಸೆಳೆತ ಎಲ್ಲವೂ ಒಂದೇ ಸಾಲಿನಲ್ಲಿ ಇವೆ.
ನಿಮ್ಮ ಮನಸಿಗೂ ಈ ಕಥೆಯ ಸ್ಪರ್ಶವಾಯಿತಾ?
ದಯವಿಟ್ಟು ಫಾಲೋ ಮಾಡಿ… ನಿಮ್ಮ ಬೆಂಬಲವೇ ಈ ಕಥೆಗೆ ಜೀವ!