ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ. ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ,
ಅಭಿನಯನಾ - 1
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು ವರ್ಷದ ಅನಾ, ಮೊಮ್ಮಗಳು ಓಡ್ತಾ ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ. ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ, ...Read More
ಅಭಿನಯನಾ - 2
ರಾತ್ರಿ ಊಟ ಮಾಡದೇ ಹಾಗೇ ಮಲಗಿದ್ದ ಅಭಿ ಗೆ ಅವನ ಮುದ್ದಾದ ಮಗಳು ಅನಾ ಬಂದು ಎಬ್ಬಿಸಿದಾಗ ನಿದ್ದೆಯಿಂದ ಎಚ್ಚರ ಆಯಿತು. ಅಭಿ ಕಣ್ ಬಿಟ್ಟು ಮುದ್ದು ಮುಖ ನೋಡ್ತಾ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ. ಅನಾ,,,, ಗುಡ್ ಮಾರ್ನಿಂಗ್ ಪಪ್ಪಾ, ಅಂತ ಹೇಳಿ ಕೆನ್ನೆಗೆ ಮುತ್ತಿಟ್ಟು, ತುಸು ಕೋಪದಿಂದ ಪಪ್ಪಾ ರಾತ್ರಿ ನಿನಗೋಸ್ಕರ ಎಷ್ಟು ಕಾದೆ ಗೊತ್ತಾ, ನೀನು ಬರಲೇ ಇಲ್ಲಾ. ನೀನು ಬರ್ತೀಯ ಬರ್ತೀಯ ಅಂತ ನೋಡಿ ನೋಡಿ ಹಾಗೇ ಮಲಗಿ ಬಿಟ್ಟೆ.ಅಭಿ,,, ಸಾರೀ ಬಂಗಾರ ಕೆಲಸ ಜಾಸ್ತಿ ಇತ್ತು ಅದಕ್ಕೆ ಲೇಟ್ ಆಗಿ ಬಿಡ್ತು ಸಾರೀ ಅಂತ ಹೇಳಿ ಮಗಳ ಕೆನ್ನೆಗೆ ಮುತ್ತಿಟ್ಟು, ಇನ್ಮೇಲೆ ಅಷ್ಟು ಲೇಟ್ ಮಾಡೋದಿಲ್ಲ ಸರಿನಾ.ಅನಾ,,, ಥ್ಯಾಂಕ್ಸ್ ಪಪ್ಪಾ ಅಂತ ಹೇಳಿ ಅಪ್ಪಿಕೋಳ್ತಾಳೆ.ಸ್ವಲ್ಪ ಸಮಯ ಮಗಳ ಜೊತೆಗೆ ಆಟವಾಡಿಕೊಂಡು ನಂತರ ಮಗಳನ್ನ ಬೆನ್ನ ಮೇಲೆ ಕೂರಿಸಿಕೊಂಡು ಮೆಟ್ಟಿಲು ಇಳಿದು ಹಾಲ್ ಗೆ ಬರ್ತಾನೇ. ಮಗಳನ್ನ ಕೆಳಗೆ ...Read More
ಅಭಿನಯನಾ - 3
ನಯನಾ ಮಗಳಿಗೆ ಊಟ ಮಾಡಿಸ್ತಾ ಅಮ್ಮನ ಜೊತೆಗೆ ಮಾತಾಡ್ತಾ ಇರ್ತಾಳೆ. ಸುಭದ್ರ ಅವರು ಊಟ ಮಾಡ್ತಾ ಮಗಳ ಜೊತೆಗೆ ಮತ್ತೆ ಮೊಮ್ಮಗಳ ಜೊತೆಗೆ ಮಾತಾಡ್ತಾ ಇರ್ತಾರೆ.ಅನಾ,,, ಮುದ್ದಾಗಿ ಅಜ್ಜಿ ನೀನು ಯಾವಾಗೂ ಯಾಕೆ ತಾತ ಊಟ ಮಾಡೋವರೆಗೂ ಊಟ ಮಾಡಲ್ಲ ತಿಂಡಿ ತಿನ್ನಲ್ಲ.ಸುಭದ್ರ,,, ಮೊಮ್ಮಗಳ ಮಾತಿಗೆ, ಯಾಕೆ ಅಂದ್ರೆ ಅವರು ನನ್ನ ಗಂಡ, ಅವರು ನನಗೆ ಯಾವುದೇ ಕಷ್ಟ ಬಾರದ ಹಾಗೇ ತುಂಬಾ ಪ್ರೀತಿ ಯಿಂದ ನೋಡ್ಕೋತಾರೆ, ನಾನು ಅವರನ್ನ ಅಷ್ಟೇ ಪ್ರೀತಿಯಿಂದ ನೋಡ್ಕೋಬೇಕು ಅಲ್ವಾ, ಅದಕ್ಕೆ ಏನೇ ಇದ್ರು ಅವರ ನಂತರ ನನಗೆ.ಅನಾ,,, ಹೌದ? ಮತ್ತೆ ಪಪ್ಪಾ ಯಾಕೆ ಮನೇಲಿ ಒಂದು ದಿನ ಕೂಡ ಊಟ ತಿಂಡಿ ಏನು ಮಾಡಲ್ಲ. ಅಮ್ಮ ಮಾತ್ರ ಪಪ್ಪಾ ಬರಲಿ ಬರದೇ ಇರಲಿ. ಊಟ ಮಾಡ್ತಾರೆ ತಿಂಡಿ ತಿಂತಾರೆ. ಪಪ್ಪಾ ಅಮ್ಮನ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ. ಇಲ್ಲಾ ಅಮ್ಮ ಪಪ್ಪಾ ನಾ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ ಅಂತ ಕೇಳ್ತಾ ಅಮ್ಮನ ಮುಖ ನೋಡ್ತಾ ...Read More