ಅಭಿ ಗೋಸ್ಕರ ಕಾಯ್ತಾ ಕೂತ್ಕೊಂಡು ಇದ್ದಾ ನಯನಾ ಹಾಗೇ ಸೋಫಾ ಮೇಲೆ ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಿ ಬಿಡ್ತಾಳೆ. ಕೆಲವು ಸಮಯದ ನಂತರ ಹೊರಗಡೆ ಬೈಕ್ ಬಂದ ಸದ್ದು ಕೇಳಿ ನಯನಾ ಗೆ ಎಚ್ಚರಿಕೆ ಆಗುತ್ತೆ, ಅಲ್ಲಿಂದ ಎದ್ದು ಮೇನ್ ಡೋರ್ ಓಪನ್ ಮಾಡಿಕೊಂಡು ಹೊರಗಡೆ ನೋಡ್ತಾಳೆ.
ಅಭಿ ಬೈಕ್ ಸ್ಟಾಂಡ್ ಹಾಕಿ ಬೈಕ್ ನ ನೋಡ್ತಾ, ತುಂಬಾ ಥ್ಯಾಂಕ್ಸ್ ಗೆಳೆಯ, ನೀನು ನನ್ನ ಲೈಫ್ ಗೆ ಬಂದಮೇಲೆ, ನನ್ನ ಕಷ್ಟ, ನೋವು, ಸಂತೋಷ, ಕಣ್ಣೀರು ಎಲ್ಲಾ ಸಮಯದಲ್ಲಿ ನನ್ನ ಜೊತೆಗೆ ಇದ್ದೆ. ಅದಕ್ಕೆ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ.
ನಯನಾ ಅಭಿ ಮಾತಾಡೋ ರೀತಿ ನೋಡಿ ಡ್ರಿಂಕ್ಸ್ ಮಾಡಿದ್ದಾನೆ ಅಂತ ಅರ್ಥ ಆಗುತ್ತೆ, ಬಟ್ ಬೈಕ್ ಜೊತೆಗೆ ಮಾತಾಡೋದನ್ನ ಕೇಳಿ, ಅವನನ್ನ ಡಿಸ್ಟರ್ಬ್ ಮಾಡದೇ ಕೇಳ್ತಾ ನಿಂತು ಬಿಡ್ತಾಳೆ, ಯಾಕಂದ್ರೆ ಅಭಿ ಇದುವರೆಗೂ ಅವನ ಮನಸಲ್ಲಿ ಇರೋ ಯಾವ ಒಂದು ವಿಷಯ ನ ಕೂಡ ಮನಸ್ಸು ಬಿಚ್ಚಿ ಮಾತಾಡೋಕೆ ಹೋಗಲಿಲ್ಲ. ಈ ರೀತಿ ಆದ್ರು ತಿಳ್ಕೊಬೋದು ಅಂತ ನೋಡ್ತಾ ಇದ್ದು ಬಿಡ್ತಾಳೆ.
ಅಭಿ ಬೈಕ್ ಜೊತೆಗೆ ಮಾತಾಡ್ತಾ...
ನನ್ನ ಲೈಫ್ ಅಲ್ಲಿ, ತುಂಬಾ ನಂಬಿರೋವ್ರು ಯಾರಾದ್ರೂ ನನ್ನ ಜೊತೆಗೆ ಇದ್ದಾರೆ ಅಂದ್ರೆ ಅದು ನೀನೇ ಗೆಳೆಯ, ಮಿಕ್ಕಿದವರೆಲ್ಲ ನಂಬಿಕೆ ಕೊಟ್ಟು ದೂರ ಆದವರೇ, ಇವತ್ತು ನನಗೆ ಖುಷಿ ನು ಆಗ್ತಾ ಇದೆ ಹಾಗೇ ನೋವು ಕೂಡ ಆಗ್ತಾ ಇದೆ, ಖುಷಿ ಏನ್ ಗೊತ್ತಾ, ಇರು ಹೇಳ್ತಿನಿ ಅಂತ ಬೈಕ್ ಮುಂದೆ ಕೂತ್ಕೋತಾನೆ.
ನಯನಾ ಅಭಿ ಕುತ್ಕೊಂಡಿದ್ದನ್ನ ನೋಡಿ ಅವಳು ಕೂಡ ಸ್ವಲ್ಪ ದೂರದಲ್ಲೇ ಕುತ್ಕೊಂಡು ಅಭಿ ಕಡೆನೇ ನೋಡ್ತಾಳೆ.
ಅಭಿ,,, ಖುಷಿ ವಿಷಯ ಏನ್ ಗೊತ್ತಾ, ನಿರಂಜನ್ ಮೇಘ ಇಬ್ರು ಅಪ್ಪ ಅಮ್ಮನ ಇಷ್ಟದಂತೆ, ಅವರ ಇಷ್ಟದಂತೆ ಮದುವೆ ಆಗ್ತಾ ಇರೋದು, ಎಷ್ಟು ಚೆನ್ನಾಗಿ ಹೇಳಿದ್ರು ಮೊದಲು ಅಪ್ಪ ಅಮ್ಮ ನ ಕೇಳೋಣ ಆಮೇಲೆ ಅವರಿಗೆ ಇಷ್ಟ ಅದ್ರೆ ಮದುವೆ ಆಗೋಣ ಇಲ್ಲಾ ಅಂದ್ರೆ ಹೀಗೆ ಇರೋಣ ಅಂತ, ಲೈಫ್ ಅಲ್ಲಿ ಇಷ್ಟು ಕ್ಲಾರಿಟಿ ಆಗಿ ಇರಬೇಕು, ಮೊದಲು ಅಪ್ಪ ಅಮ್ಮ ಆಮೇಲೆ ಹುಡುಗ ಪ್ರೀತಿ ಇದೆಲ್ಲಾ, ಅದೇ ಖುಷಿ ಪಡೋ ವಿಷಯ.
ಇನ್ನು ನೋವು ಅಂತೀಯಾ, ನಿನಗೆ ಗೊತ್ತು ಅಲ್ವಾ, ನಾನು ಮನಸಾರೆ ಇಷ್ಟ ಪಟ್ಟು ಪ್ರೀತಿಸಿದ ಹುಡುಗಿ,
*ಪ್ರೀತಿಸಿದ ಹುಡುಗಿ ಅಂತ ಹೇಳಿದ್ದೆ ನಯನಾ ಗೆ ಶಾಕ್ ಜೊತೆಗೆ ಮನಸ್ಸಿಗೆ ನೋವಾಯ್ತು. ಕಣ್ಣಲ್ಲಿ ಕಣ್ಣೀರು ಬರೋಕೆ ಶುರುವಾಯಿತು ಅವಳಿಗೇನೇ ಗೊತ್ತಿಲ್ಲದೇ.*
ಅಭಿ,,, ಅವಳಾಗೆ ನನ್ನ ಲೈಫ್ ಗೆ ಬಂದಳು, ಮೊದಲೇ ನೊಂದು ಹರಿದು ಹೋಗಿರೋ ಹೃದಯ, ಪ್ರೀತಿ ಎಲ್ಲಾ ನನ್ನ ಲೈಫ್ ಗೆ ಹೃದಯಕ್ಕೆ ಸೆಟ್ ಆಗಲ್ಲ ಅಂತ, ಆದ್ರು ನನ್ನ ಹೃದಯಕ್ಕೆ ಪ್ರೀತಿ ನ ಕೊಟ್ಟು, ಕೊನೆಗೂ ಕರುಣೆ ಇಲ್ಲದೆ ಕತ್ತರಿನ ತಗೊಂಡು ಹರಿದು ಹೋಗಿರೋ ಹೃದಯನ ಇನ್ನು ಹರಿದು ಹಾಕಿ, ತಿರುಗಿ ನೋಡದ ಹಾಗೇ ಹೋಗೆ ಬಿಟ್ಲು. ಒಂದು ಸಾರಿ ಕೂಡ ತಿರುಗಿ ನೋಡಲೇ ಇಲ್ಲಾ ಬದುಕಿದ್ದೀನೊ ಇಲ್ಲಾ ಸತ್ತಿದ್ದೀನೊ ಅಂತ. ಮೊದಲೇ ಜೀವನದಲ್ಲಿ ನೊಂದು ಹೋಗಿದ್ದೆ ಇವಳು ಸತ್ತೇ ಹೋಗು ಅಂತ ಹೊರಟು ಹೋದಳು. ನಾನು ಸತ್ತೋಗೋಣ ಅಂತ ಅನ್ಕೊಂಡೆ, ಅದ್ರೆ ನನಗೋಸ್ಕರ ಅಮ್ಮ ಅಕ್ಕ ಇರೋದನ್ನ ನೋಡಿ ಸಾಯೋ ಆಸೇ ನ ಬಿಟ್ಟೆ ಬಿಟ್ಟೆ. ಅಲ್ಲ ನನ್ನ ಪ್ರೀತಿ ಮಾಡ್ತೀನಿ ಅಂತ ಹೇಳಿದವಳಿಗೆ ಮೊದಲೇ ಗೊತ್ತಿತ್ತು ಅಲ್ವಾ, ಜಾತಿ ಬೇರೆ ಧರ್ಮ ಬೇರೆ, ನನ್ನ ಹತ್ತಿರ ದುಡ್ಡಿಲ್ಲ, ಹೇಳ್ಕೊಳ್ಳೋ ಅಂತ ಕೆಲಸ ಇಲ್ಲಾ ಅಂತ, ಅದು ಅವರ ಅಪ್ಪ ಹೇಳಿದಾಗ ಅರ್ಥ ಆಯ್ತಾ ಅವಳಿಗೆ. ಬಿಡು ಅವಳು ಯಾವ ಪರಿಸ್ಥಿತಿ ಅಲ್ಲಿ ನನ್ನ ಬಿಟ್ಟು ಹೋಗಬೇಕಾಯಿತು ಏನೋ. ಬೇಕು ಅಂತ ಏನು ಬಿಟ್ಟು ಹೋಗಿಲ್ಲ ಅಲ್ವಾ, ಅಪ್ಪ ಅಮ್ಮನಿಗೋಸ್ಕರ ಬಿಟ್ಟು ಹೋದ್ಲು ಅಲ್ವಾ, ಸರಿ ನೇ ಮಾಡಿದ್ದಾಳೆ. ಪ್ರೀತಿ ನ ಕೊಟ್ಟು, ನನ್ನ ಕಷ್ಟದಲ್ಲಿ ಜೊತೆಗೆ ಇದ್ದು, ನನ್ನ ಪರಿಸ್ಥಿತಿ ನ ಅರ್ಥ ಮಾಡಿಕೊಂಡು, ಬಿಡೋ ಕಷ್ಟ ಮನುಷ್ಯ ನಿಗೆ ಬರದೇ ಇನ್ನ್ಯಾರಿಗೆ ಬರುತ್ತೆ ಅಂತ ಧೈರ್ಯ ಹೇಳ್ತಾ ಇದ್ಲು ತುಂಬಾ ಒಳ್ಳೆ ಹುಡುಗಿ. ಅದ್ರೆ ಏನ್ ಮಾಡೋದು ದೇವ್ರು ನನ್ನ ಹಣೆಲಿ ಅವಳ ಹೆಸರನ್ನ ಬರೆದೆ ಹೋದ. ಅವಳು ಎಲ್ಲೇ ಇದ್ರು ಸಂತೋಷ ವಾಗಿ ಇರಲಿ.
ನಯನಾ ಗೆ ಅವನು ಅವನ ಮನಸಲ್ಲಿ ಈ ರೀತಿ ನೋವಿದೆ ಅಂತ ಕೇಳಿ ಅವಳ ಮನಸ್ಸಿಗೆ ತುಂಬಾ ನೋವಾಗುತ್ತೆ. ಅದೇ ಸಮಯಕ್ಕೆ ಪ್ರೀತ್ಸಿ ಬಿಟ್ಟು ಹೋದ ಹುಡುಗಿ ಮೇಲೆ ಅಷ್ಟು ಗೌರವ ಎಲ್ಲೇ ಇದ್ರು ಸಂತೋಷ ವಾಗಿ ಇರಲಿ ಅನ್ನೋ ಮಾತನ್ನ ಕೇಳಿ, ಅವನ ಮೇಲೆ ಇನ್ನು ಗೌರವ ಹೆಚ್ಚಾಗುತ್ತೆ. ಅವಳು ಇನ್ನು ಅವನ ಮನಸಲ್ಲಿ ಇದ್ದಾಳ, ನನಗೆ ಅವನ ಮನಸಲ್ಲಿ ಜಾಗ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತೆ. ಅದನ್ನೇ ನೆನೆಸ್ಕೊಂಡು ಇನ್ನು ಕಣ್ಣೀರು ಹಾಕ್ತಾಳೆ.
ಅಭಿ,,, ಬೈಕ್ ನ ನೋಡ್ತಾ ಏನೋ ಇವನು ಮದುವೆ ಆಗಿ ಪ್ರೀತಿ ಮಾಡಿ ಬಿಟ್ಟು ಹೋದ ಹುಡುಗಿ ನ ಇನ್ನು ನೆನೆಸಿಕೊಳ್ತಾ ಇದ್ದಾನೆ, ಮದುವೆ ಆಗಿರೋ ನಯನಾ ಪರಿಸ್ಥಿತಿ ಏನು ಅಂತ ಬೈಕೋತಾ ಇದ್ದಿಯಾ. ನನಗೆ ಗೊತ್ತು ನೀನು ನನ್ನ ಅದೇ ಪ್ರಶ್ನೆ ಕೇಳಬೇಕು ಅಂತ ಇದ್ದಿಯಾ ಅಂತ.
ನಯನಾ ಗೆ ಈ ಮಾತನ್ನ ಕೇಳಿ ಏನ್ ಹೇಳ್ತಾನೇ ಅನ್ನೋ ಟೆನ್ಶನ್ ಭಯ ಆಗೋಕೆ ಶುರುವಾಗುತ್ತೆ. ಕೈ ಕಾಲು ನಡುಗೋಕೆ ಶುರು ಮಾಡುತ್ತೆ.
ಅಭಿ,,, ನಯನಾ ತುಂಬಾ ಒಳ್ಳೆ ಹುಡುಗಿ ಕಣೋ ಗೆಳೆಯ, ತುಂಬಾ ತುಂಬಾ ಒಳ್ಳೆ ಹುಡುಗಿ. ಅಪ್ಪ ಅಮ್ಮ ನ ಕಳ್ಕೊಂಡ ಅ ಮಗುವಿಗೆ ತಾಯಿ ಸ್ಥಾನ ಕೊಟ್ಟು ಅ ಮಗುನೇ ತನ್ನ ಸ್ವಂತ ಮಗಳು ಅಂತ ಅನ್ಕೊಂಡು, ಎಲ್ಲಿ ಮದುವೆ ಅದ್ರೆ ಈ ಮಗು ತನ್ನಿಂದ ದೂರ ಆಗುತ್ತೆ ಅಂತ ಮದುವೆ ನೇ ಬೇಡ ಅಂತ ನಿರ್ಧಾರ ಮಾಡಿ ಬಿಟ್ಲು. ನೆಂಟರು ಸಂಬಧಿಕರು, ಅಷ್ಟೇ ಯಾಕೆ ಅಪ್ಪ ಅಮ್ಮ ಕೂಡ ಏನೇ ಹೇಳಿದ್ರು ನನಗೆ ನನ್ನ ಸಂತೋಷ ಕ್ಕಿಂತ ಮಗು ನೇ ಮುಖ್ಯ ಅಂತ ಹೇಳಿದ್ಲು. ಅ ಮಗು ಗೋಸ್ಕರ ಎಲ್ಲಾನು ತ್ಯಾಗ ಮಾಡಿದ್ಲು. ಅಂತ ಒಳ್ಳೆ ಮನಸ್ಸು ಯಾರಿಗೆ ಇರುತ್ತೆ ಹೇಳು. ಅವರ ಅಪ್ಪ ಅವಳ ಬಗ್ಗೆ ಹೇಳಿದಾಗ ಅವಳ ಮೇಲೆ ನನಗೆ ತುಂಬಾ ಗೌರವ ಬಂತು. ಅವರಪ್ಪಾ ನಾನು ಕೇಳಿದ ತಕ್ಷಣ ಹಿಂದೆ ಮುಂದೆ ಯೋಚ್ನೆ ಮಾಡದೇ ಬಂದು ನನ್ನ ತಾಯಿ ಪ್ರಾಣ ನ ಉಳಿಸಿದ್ರು. ಅಂತವರ ಕಣ್ಣಲ್ಲಿ ತನ್ನ ಮಗಳ ಬಗ್ಗೆ ಹೇಳ್ತಾ ಕಣ್ಣೀರು ಸುರಿಸೋದನ್ನ ನೋಡಿ, ಅ ಹುಡುಗಿಗೆ ಇಷ್ಟ ಇಲ್ಲಾ ಅಂದ್ರು ಮದುವೆ ಅದೇ. ಅ ಮಗುಗೆ ತಂದೆ ಅದೇ. ಈ ವಿಷಯ ದಲ್ಲಿ ನಯನಾ ಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ ನೇ. ನನಗೆ ಒಬ್ಬ ಮಗಳನ್ನ ಕೊಟ್ಟಳು, ನನಗೆ ಒಂದು ತಂದೆ ಸ್ಥಾನ ಕೊಟ್ಟಳು. ಈ ಮನೆಗೆ ಈ ಮನೇಲಿ ಇರೋ ಒಳ್ಳೆ ಮನಸ್ಸಿರೋ ವ್ಯಕ್ತಿಗಳಿಗೆ ನಾವು ತುಂಬಾ ಋಣ ಇದ್ದಿವಿ. ಎಲ್ಲೋ ಕುಡಿತಾ ಪರಿಚಯ ಅದ ವ್ಯಕ್ತಿ ನನ್ನ ಮನೆ ಅಳಿಯ ನಾಗಿ ಮಾಡಿಕೊಂಡು, ಇವತ್ತು ನನಗೆ ಮಗನ ಸ್ಥಾನ ತುಂಬಿದೆ ಅಂತ ಹೇಳ್ತಾ ಇದ್ದಾರೆ.ಇದೆಲ್ಲಾ ನೋಡಿ ನನಗೆ ಒಂದು ಕಡೆ ಸಂತೋಷ ಆಗ್ತಾ ಇದ್ರೆ ಇನ್ನೊಂದು ಕಡೆ ಭಯ ಆಗ್ತಾ ಇದೆ.
ಎಲ್ಲಿ ಇವರೆಲ್ಲ ನನ್ನಿಂದ ದೂರ ಆಗಿ ಬಿಡ್ತಾರೆ ಅಂತ. ನಯನಾ ನನ್ನ ಮೇಲೆ ಅಷ್ಟು ಪ್ರೀತಿ ನ ಬೆಳೆಸಿಕೊಂಡು, ಅ ಪ್ರೀತಿ ನ ತೋರಿಸ್ತಾ ಇದ್ರೆ, ಅದನ್ನ ಒಪ್ಕೋಳ್ಳೋಕೆ ತುಂಬಾ ಭಯ ಆಗ್ತಾ ಇದೆ, ಎಲ್ಲಿ ಅ ದೇವ್ರು ನನ್ನ ಮೇಲೆ ಇರೋ ಕೋಪಕ್ಕೆ ಈ ಪ್ರೀತಿ ನ ಕೂಡ ನನ್ನಿಂದ ದೂರ ಮಾಡಿ ಬಿಡ್ತಾನೋ ಅಂತ. ಮನಸಲ್ಲಿ ಅವಳು ಇಷ್ಟ ಇದ್ರು ಹೇಳ್ಕೊಳ್ಳೋಕೆ ಭಯ ಪಡ್ತಾ ಇದ್ದೀನಿ. ಏನಪ್ಪಾ ಇವನು ನನ್ನ ಅಷ್ಟು ಅಂದ್ರು ಬೈದ್ರು ಹೊರಟು ಹೋಗು ಅಂತ ಹೇಳಿದ್ರು ಅ ಹುಡುಗಿ ಹೇಗೆ ಇಷ್ಟ ಆದ್ಲು ಇವನಿಗೆ ಅಂತ ಯೋಚ್ನೆ ಮಾಡ್ತಾ ಇದ್ದಿಯಾ. ಅಲ್ವೋ ನಾವಿಬ್ರು ಏನು ಇಷ್ಟ ಪಟ್ಟು ಮದುವೆ ಅದ್ವ, ಇಷ್ಟ ಇಲ್ಲದೆ ಮದುವೆ ಆಗಿದ್ದು. ಅ ಹುಡುಗಿ ಕೋಪದಲ್ಲೂ ನ್ಯಾಯ ಇದೆ. ಅದು ನಾವು ಅರ್ಥ ಮಾಡ್ಕೋಬೇಕು. ಅವತ್ತು ಹೊರಟು ಹೋಗೋ ಅಂತ ಹೇಳಿದ ಹುಡುಗಿ ನನ್ನ ಬಿಟ್ಟು ಹೋಗಬೇಡವೋ ನನ್ನ ಜೊತೆಗೆ ಇರೋ, ಕಷ್ಟ ಸುಖ ಏನೇ ಇರಲಿ ನಿನ್ನ ಜೊತೆಗೆ ನಾನ್ ಇರ್ತೀನಿ. ಅಂತ ಕಣ್ಣೀರು ಹಾಕೊಂಡು ಕೇಳಿಕೊಂಡಳು. ಊಟ ಮಾಡಿದ ಅಂತ ಒಂದು ಮಾತು ಕೇಳದೆ ಇದ್ದವಳು, ಈಗ ನನಗೋಸ್ಕರ ಊಟ ಮಾಡದೇ ಕಾಯ್ತಾ ಇರ್ತಾಳೆ. ಅವಳು ನನ್ನ ಮೇಲೆ ತೋರಿಸ್ತಾ ಇರೋ ಪ್ರೀತಿಗೆ ಒಂದು ಕ್ಷಣ ನನಗೆ ಭಯ ಆಗುತ್ತೆ ಎಲ್ಲಿ ನಾನು ಅವಳನ್ನ ಅವಳಷ್ಟು ಪ್ರೀತಿ ಮಾಡೋಕೆ ಆಗೋದಿಲ್ಲ ಅಂತ ಅಷ್ಟು ಪ್ರೀತಿ ಕೊಡ್ತಾ ಇದ್ದಾಳೆ. ನನ್ನ ಮನಸಲ್ಲಿ ಇರೋ ನೋವನ್ನ ಅವಳ ಹತ್ತಿರ ಹೇಳ್ಕೊಂಡು ಮನಸ್ಫೂರ್ತಿ ಆಗಿ ಅಳಬೇಕು ಅಂತ ಅನ್ನಿಸುತ್ತೆ. ಅದ್ರೆ ನನ್ನ ಪಾಸ್ಟ್ ಕೇಳಿ ಎಲ್ಲಿ ನನ್ನ ಬಿಟ್ಟು ಮತ್ತೆ ದೂರ ಹೋಗಿ ಬಿಡ್ತಾಳೆ ಅನ್ನೋ ಭಯ. ಬಟ್ ಒಂದಲ್ಲ ಒಂದು ದಿನ ಅವಳಿಗೆ ಸತ್ಯ ಹೇಳಬೇಕು ಅಲ್ವಾ. ಇಲ್ಲಾ ಅಂದ್ರೆ ಮೋಸ ಮಾಡಿದ ಹಾಗೇ ಆಗುತ್ತೆ. ನಮಗೆ ನಾವು ಮೋಸ ಮಾಡ್ಕೊಂಡ್ರು ಪರ್ವಾಗಿಲ್ಲ ಅದ್ರೆ ಒಳ್ಳೆ ಮನಸ್ಸು ಇರೋ ವ್ಯಕಿಗಳಿಗೆ ಮೋಸ ಮಾಡೋಕೆ ಹೋಗ್ಬಾರ್ದು. ಅದರಲ್ಲೂ ನನ್ನ ನನಗಿಂತ ಹೆಚ್ಚಾಗಿ ಪ್ರೀತ್ಸೋ ನನ್ನ ನಯನಾ ಗೆ ಯಾವುದೇ ಕಾರಣಕ್ಕೂ ನಾನು ಮೋಸ ಮಾಡೋದಿಲ್ಲ ಮಾಡೋಕು ಹೋಗಲ್ಲ. ದೇವತೆ ಹಾಗೇ ಬಂದು ನನ್ನ ಲೈಫ್ ಗೆ.
ನಯನಾ ಗೆ ಅಭಿ ಹೇಳಿದ್ದನ್ನ ಕೇಳಿ ಭಯ ದೂರ ಆಯ್ತು. ಮನಸಲ್ಲಿ ಇದ್ದಾ ನೋವು ಹೋಗಿ. ಅಭಿ ಗು ನನ್ನ ಮೇಲೆ ಅಷ್ಟೇ ಪ್ರೀತಿ ಇದೆ, ಅನ್ನೋ ವಿಷಯ ಕೇಳಿ ತುಂಬಾ ಸಂತೋಷ ಆಗುತ್ತೆ. ನನ್ನ ನಯನಾ ಅಂತ ಹೇಳಿದ ಮಾತು ಅವಳ ಮನಸ್ಸಿಗೆ ತುಂಬಾ ಇಷ್ಟ ಆಗುತ್ತೆ. ಅಳು ಜೊತೆಗೆ ಮುಖದಲ್ಲಿ ನಗು ಕೂಡ ಬರುತ್ತೆ.
ಅಭಿ,,, ಬೈಕ್ ನೋಡ್ತಾ ಸಾರೀ ಗೆಳೆಯ ತುಂಬಾ ಮಾತಾಡಿ ನಿನಗೆ ತೊಂದ್ರೆ ಕೊಟ್ಟೆ, ಟೈಮ್ ಬೇರೆ ಆಗಿದೆ, ನಾನ್ ಬೇರೆ ಡ್ರಿಂಕ್ಸ್ ಮಾಡಿ ಬಿಟ್ಟಿದ್ದೀನಿ, ನೀನು ಆರಾಮಾಗಿ ರೆಸ್ಟ್ ಮಾಡು, ನಾನು ಬೆಳಿಗ್ಗೆ ಸಿಗ್ತೀನಿ. ಒಳಗೆ ನಮ್ ಮೇಡಂ ನನ್ನ ನೋಡಿ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದೇ ಗೊತ್ತಿಲ್ಲ, ಒಳಗೆ ಹೋದಮೇಲೆ ನಾನು ಕಿರೀಚಿಕೊಳ್ಳೋ ಸೌಂಡ್ ಏನಾದ್ರೂ ಬಂದ್ರೆ, ಪ್ಲೀಸ್ ಯಾರಿಗೂ ಹೇಳಬೇಡ ನನ್ನ ಮರ್ಯಾದೆ ಹೋಗುತ್ತೆ ಅಂತ ಹೇಳ್ತಾ ಎದ್ದು ನಿಲ್ತಾನೇ.
ನಯನಾ ಗೆ ಅವನ ಮಾತನ್ನ ಕೇಳಿ ನಗು ಬರುತ್ತೆ,, ಅಭಿ ಬರ್ತಾನೇ ಅಂತ ಗೊತ್ತಾಗಿ ಎದ್ದು ಮನೆ ಒಳಗೆ ಹೋಗ್ತಾಳೆ.
ಅಭಿ ಸ್ವಲ್ಪ ಸ್ಟಡಿ ಆಗಿ ನಡ್ಕೊಂಡು ಬಂದು ಮೇನ್ ಡೋರ್ ಬೆಲ್ ಮಾಡ್ತಾನೆ.
ನಯನಾ ಬಂದು ಮೇನ್ ಡೋರ್ ನ ಓಪನ್ ಮಾಡಿ ಅಭಿ ನ ನೋಡ್ತಾಳೆ. ಅಭಿ ಕಣ್ಣೆಲ್ಲ ಪೂರ್ತಿ ಕೆಂಪಗೆ ಹಾಗಿರುತ್ತೆ. ನಯನಾ ಗೆ ಕಾರಣ ಏನು ಅಂತ ಗೊತ್ತಿದ್ದರೂ. ಗೊತ್ತಿಲ್ಲದ ಹಾಗೇ ರೀ ಏನಾಯ್ತು ಹಾಗೇ ಇದ್ದೀರಾ ಇಷ್ಟೋತ್ತು ಎಲ್ಲಿ ಹೋಗಿದ್ರಿ. ಎಲ್ಲಾ ಓಕೆ ಅಲ್ವಾ. ಏನಾದ್ರೂ ಪ್ರಾಬ್ಲಮ್ ಅ ಹೇಳ್ರಿ ಅಂತ ಕೇಳ್ತಾಳೆ.
ಅಭಿ ಗೆ ಏನಾಯ್ತೋ ಏನೋ, ಕಣ್ಣಿಂದ ಕಣ್ಣೀರು ಬರೋದಕ್ಕೆ ಶುರುವಾಯಿತು.
ನಯನಾ,,, ಅಭಿ ಅಳೋದನ್ನ ನೋಡಿ ರೀ ಏನಾಯ್ತು ಯಾಕ್ ಅಳ್ತಾ ಇದ್ದೀರಾ, ಅಂತ ಕೇಳ್ತಾಳೆ..
ಅಭಿ,,, ಅಳ್ತಾನೆ ನೆಲದ ಮೇಲೆ ಕುಸಿದು ಮಂಡಿವೂರಿ ತಲೆ ಬಗ್ಗಿಸಿಕೊಂಡು ಅಳೋಕೆ ಶುರು ಮಾಡ್ತಾನೆ.
ನಯನಾ,,, ತಕ್ಷಣ ಮಂಡಿವೂರಿ ಕಣ್ಣೀರು ಸುರಿಸುತ್ತಾ ರೀ ಯಾಕ್ರೀ ಅಳ್ತಾ ಇದ್ದೀರಾ ಏನಾಯ್ತು ಅಂತ ಹೇಳಿ. ಪ್ಲೀಸ್ ನೀವು ಹೀಗೆ ಅಳೋದನ್ನ ನನ್ನಿಂದ ನೋಡೋಕೆ ಆಗ್ತಾ ಇಲ್ಲಾ ಪ್ಲೀಸ್ ಏನಾಯ್ತು ಅಂತ ಹೇಳಿ ಅಂತ ಅವನ ಕೈಗಳನ್ನ ಇಡ್ಕೊಂಡು ಕೇಳ್ತಾಳೆ.
ಅಭಿ,,, ನಯನಾ ಕೈಗಳನ್ನ ಗಟ್ಟಿಯಾಗಿ ಇಡಿದು ಕೊಂಡು, ನನ್ನಿಂದ ಆಗ್ತಾ ಇಲ್ಲಾ ನಯನಾ, ಅಂತ ಅವನ ಮಾತನ್ನ ಮುಂದುವರೆಸೋಕೆ ಹೋದ್ರೆ
ನಯನಾ,, ಅವನ ಬಾಯಿನ ಕೈ ಯಿಂದ ಮುಚ್ಚಿ,, ಬೇಡ್ವೊ ನೀನು ಏನು ಹೇಳೋಕೆ ಹೋಗಬೇಡ, ಇಷ್ಟೋತ್ತು ನೀನು ಹೇಳಿದ ಪ್ರತಿಯೊಂದು ಮಾತನ್ನ ಕೇಳಿಸಿಕೊಂಡೆ. ಮನಸಲ್ಲಿ ಇಷ್ಟೊಂದು ನೋವನ್ನ ಇಟ್ಕೊಂಡು, ನಗ್ತಾ ಎಲ್ಲರನ್ನು ಸಂತೋಷ ವಾಗಿ ಹೇಗೋ ನೋಡ್ಕೋತ ಇದ್ದಿಯಾ. ದ್ವೇಷ ಮಾಡ್ತಾ ಇದ್ದಾ ನನ್ನ ಪ್ರೀತ್ಸೋ ಹಾಗೇ ಮಾಡಿದೆ. ನನಗೆ ಮೋಸ ಮಾಡ್ತಾ ಇದ್ದಿಯಾ ಅಂತ ಮನಸಲ್ಲೇ ನರಕ ಅನುಭವಿಸಿದೆ. ಮನಸಲ್ಲಿ ನನ್ನ ಮೇಲೆ ಅಷ್ಟೊಂದು ಪ್ರೀತಿ ನ ಇಟ್ಕೊಂಡು ಯಾಕೋ ಮುಚ್ಚಿಟ್ಟುಕೊಂಡೆ. ಸತ್ಯ ಹೇಳಿದ್ರೆ ಎಲ್ಲಿ ಬಿಟ್ಟು ಹೋಗ್ತೀನಿ ಅಂತ ಭಯ ಬಿದ್ದ. ಸತ್ಯ ಮಾಡಿ ಹೇಳ್ತಾ ಇದ್ದೀನೊ ಇವತ್ತು ನಾನು ನನ್ನ ಮನೆ ಇಷ್ಟು ಸಂತೋಷ ವಾಗಿ ಇದೆ ಅಂದ್ರೆ ಅದು ನಿನ್ನಿಂದ, ಅಂತ ಒಳ್ಳೆ ಮನಸ್ಸು ಇರೋ ನಿನ್ನ ಬಿಟ್ಟು ನಾನು ಎಲ್ಲಿಗೋ ಹೋಗಲಿ, ಬಿಟ್ಟು ಹೋಗಿ ಏನನ್ನ ಸಾಧಿಸಲಿ ಹೇಳು. ನಾನು ನಿನಗೆ ಅವಮಾನ ಮಾಡಿದ್ರು ನೀನು ನನಗೆ ಮೋಸ ಮಾಡಬಾರದು ಅಂತ ಅನ್ಕೊಂಡೆ ಅಲ್ವಾ ನನಗೆ ಅಷ್ಟು ಸಾಕು ಕಣೋ, ಅಂತ ಹೇಳ್ತಾ ಅಭಿ ನ ಗಟ್ಟಿಯಾಗಿ ತಬ್ಬಿಕೊಂಡು, ನಿನ್ನ ಬಿಟ್ಟು ಹೋಗೋದು ಅಲ್ವೋ, ಬಿಟ್ಟು ಹೋಗಬೇಕು ಅನ್ನೋ ಆಲೋಚನೆ ಕೂಡ ನನ್ನಿಂದ ಸಹಿಸಿ ಕೊಳ್ಳೋಕೆ ಹಾಗಲ್ಲ. ಈ ಜೀವಾ ಈ ಜೀವನ ಕೊನೆ ತನಕ ನಿನ್ನ ಜೊತೇನೆ. ನನಗೆ ನಿನ್ ಬೇಕು, ನಿನ್ನ ಪ್ರೀತಿ ಬೇಕು. ಅಂತ ಹೇಳ್ತಾ ಕಣ್ಣೀರು ಹಾಕ್ತಾಳೆ.
ಅಭಿ ಗೆ ನಯನಾ ಹೇಳಿದ್ದನ್ನ ಕೇಳಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಆಗಿ ಬಿಡ್ತು. ಮನಸಾರೆ ನಯನಾ ನ ಅಪ್ಪಿಕೋಳ್ತಾನೆ.
ಇಬ್ಬರ ನಡುವೆ ಇದ್ದಾ ದೂರ ಕಳೆದು ಹೋಯ್ತು. ನೋವಿನಿಂದ ಬರ್ತಾ ಇದ್ದಾ ಕಣ್ಣೀರು ಕೂಡ ಖಾಲಿ ಆಯಿತು. ಇಬ್ಬರು ಒಬ್ಬರನೊಬ್ಬರು ಅಪ್ಪಿಕೊಂಡು ಹಾಗೇ ಇದ್ದು ಬಿಟ್ಟರು. ಹಾಗೇ ಎಷ್ಟೋತ್ತು ಇದ್ದಾರೋ ಗೊತ್ತಿಲ್ಲ.
ಕೆಲವು ಸಮಯದ ನಂತರ,
ನಯನಾ,,, ಅಭಿ, ಟೈಮ್ ತುಂಬಾ ಆಗಿದೆ ನಡಿ ಊಟ ಮಾಡೋಣ.
ಅಭಿ,,, ಸರಿ ನಡಿ ಅಂತ ಹೇಳಿ ಇಬ್ಬರು ಎದ್ದು ಅಡುಗೆ ಮನೆಗೆ ಹೋಗಿ. ಖುಷಿಯಾಗಿ ಮಾತಾಡಿಕೊಂಡು ಒಟ್ಟಿಗೆ ಊಟ ಮಾಡ್ತಾರೇ.
@@@@@@@@@@@@@@@@@@@@@@@@@