Abhinayanaa - 19 in Kannada Love Stories by S Pr books and stories PDF | ಅಭಿನಯನಾ - 19

The Author
Featured Books
Categories
Share

ಅಭಿನಯನಾ - 19

   ಸಾರಿಕಾ ಹೇಳೋದನ್ನ ಕೇಳಿ, SI ಗೆ  ಕೋಪದ ಜೊತೆಗೆ ಮನಸ್ಸಿಗೂ ಸ್ವಲ್ಪ ನೋವಾಗುತ್ತೆ.  ಅಳ್ತಾ ಇರೋ ಸಾರಿಕಾ ನಾ ನೋಡಿ. ನೋಡಿಮ ನಿಮ್ಮ ನೋವು ನನಗೆ ಅರ್ಥ ಆಗುತ್ತೆ.  ನೀವು ಒಂದು ಕಂಪ್ಲೇಂಟ್ ಬರ್ತೀನಿ ಬರೆದು ಕೊಡಿ. ಹಾಗೇ ನೀವು ಇದಕ್ಕೂ ಮೊದಲು ಯಾವ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ಮಾಡಿದ್ರೋ ಅ ಸ್ಟೇಷನ್ ಬಗ್ಗೆ ಕೂಡ ಒಂದು ಲೇಟರ್ ಬರೆದು ಕೊಡಿ. ಅಂತ ಹೇಳ್ತಾ. ಲೇಡಿ pc ಕಡೆಗೆ ನೋಡಿ. ನೋಡಿ ಇವರನ್ನ ಕರೆದುಕೊಂಡು ಹೋಗಿ ಕಂಪ್ಲೇಂಟ್ ಬರ್ತೀನಿ ಬರೆಸಿಕೊಂಡು, fir ಫೈಲ್ ಮಾಡಿ. ಹಾಗೇ ಇವರನ್ನ ಹಾಸ್ಪಿಟಲ್ ಗೆ ಕರ್ಕೊಂಡು ಹೋಗಿ ಮೆಡಿಕಲ್ ಟೆಸ್ಟ್ ಮಾಡಿಸಿ. ಹೊಟ್ಟೆಲಿ ಇದ್ದಾ ಮಗು ಅಬೋರ್ಟ್ ಅದ ಬಗ್ಗೆ, ಅದರ ಫುಲ್ ಡೀಟೇಲ್ಸ್ ನಾ ತಗೊಂಡು ಬನ್ನಿ. ಅಂತ ಹೇಳಿ ಸಾರಿಕಾ ಕಡೆಗೆ ನೋಡ್ತಾ. ನೋಡಿ ಮೇಡಂ ನೀವಿನ್ನು ಭಯ ಬೀಳೋದಕ್ಕೆ ಹೋಗಬೇಡಿ. ನಾನ್ ನೋಡ್ಕೋತೀನಿ. ನೀವು ನಮ್ ಲೇಡಿ pc ಜೊತೆಗೆ ಹೋಗಿ ಅವರು ಹೇಳಿದ ಹಾಗೇ ಮಾಡಿ ಅಂತ ಹೇಳಿ ಕಳಿಸ್ತಾರೆ. 

ನಂತರ ಇನ್ನೊಬ್ಬ pc ನಾ ಬರೋಕೆ ಹೇಳ್ತಾರೆ. 

Pc,,, ಸರ್ ಹೇಳಿ.

Si,,, ಅವನು ಯಾವನೋ ವೇದಾಂತ್ ಅಂತೇ, ಎಲ್ಲೇ ಇದ್ರು ಹೇಗೆ ಇದ್ರು ಅ ನನ್ನ ಮಗನನ್ನ ಎತ್ತಾಕೊಂಡು ಸ್ಟೇಷನ್ ಗೆ ಬನ್ನಿ. ಮಗನಿಗೆ ಪೊಲೀಸ್ ಅಂದ್ರೆ ಏನು ಅಂತ ಅರ್ಥ ಮಾಡಿಸೋಣ.

Pc,,, ಓಕೆ ಸರ್ ಅಂತ ಹೇಳಿ. ಅಲ್ಲಿಂದ ಹೊರಟು ಹೋಗ್ತಾನೆ.

ಲೇಡಿ pc,,, ನೋಡಮ್ಮ ಸಾರಿಕಾ ನೀನೇನು ಭಯ ಬೀಳೋದಕ್ಕೆ ಹೋಗಬೇಡ. ಸಾಹೇಬ್ರು ತುಂಬಾ ಒಳ್ಳೆಯವರು. ನಿನ್ನ ಕಷ್ಟ ಅವರಿಗೆ ಹೇಳಿದೆ ಅಲ್ವಾ.  ಖಂಡಿತ ನಿನಗೆ ಒಳ್ಳೆಯದನ್ನೇ ಮಾಡ್ತಾರೆ.  ನಾನೊಬ್ಬ ಲೇಡಿ ಲಾಯರ್ ನಂಬರ್ ಕೊಡ್ತೀನಿ, ನಿನ್ನ ಕಷ್ಟ ನೋವು ಏನು ಇದೆಯೋ ಅವರ ಹತ್ತಿರ ಹೇಳು. ಆಮೇಲೆ ಅವರು ನೋಡ್ಕೋತಾರೆ. ನೀನು ಒಂದು ರೂಪಾಯಿ ಕೂಡ ಕೊಡಬೇಡ ಅವರಿಗೆ. 

ಸಾರಿಕಾ ಅಳ್ತಾ ತುಂಬಾ ಥ್ಯಾಂಕ್ಸ್ ಮೇಡಂ.

ಲೇಡಿ pc,,, ಥ್ಯಾಂಕ್ಸ್ ಏನಕ್ಕೆ ಸಾರಿಕಾ. ನಾನು ಒಬ್ಬ ಹೆಣ್ಣಾಗಿ, ಒಂದು ಹೆಣ್ಣು ಮಗುವಿನ ತಾಯಿ ಆಗಿ. ನಿನಗೆ ಆಗಿರೋ ಅನ್ಯಾಯ ನಾ ಸರಿ ಮಾಡೋಕೆ ನನ್ನಿಂದ ಹಾಗೋ ಸಹಾಯ ಮಾಡ್ತಾ ಇದ್ದೀನಿ. ನೀನು ಪ್ರತಿಯೊಂದು ವಿಷಯ ನಾ ವಿವರವಾಗಿ ಬರೆದು ಕಂಪ್ಲೇಂಟ್ ಕೊಡು. ಆಮೇಲೆ ನೋಡು ಅವನ ಗತಿ ಏನಾಗುತ್ತೆ ಅಂತ. ಧೈರ್ಯ ಹೇಳ್ತಾರೆ.

*****

ನಯನಾ ಗೆ ಅಭಿ ಮನೆಯವರು ತುಂಬಾ ಇಷ್ಟ ಆಗ್ತಾರೆ. ಅನಾ ಅಂತು ಅಜ್ಜಿ ದೇವಮ್ಮ, ಅತ್ತೆ ನಂದಿನಿ, ಅಕ್ಕ ಶ್ರುತಿ ಗೆ ತುಂಬಾ ಇಷ್ಟ ಆಗ್ತಾಳೆ. ಅನಾ ಗೆ ಕೂಡ ಅವರು ತುಂಬಾ ಇಷ್ಟ ಆಗ್ತಾರೆ. ನಯನಾ ಮನಸಲ್ಲಿ ಅನಾ ನಾ ಅಭಿ ಮನೆಯವರು ಹೇಗೆ ಒಪ್ಕೋತಾರೆ ಅನ್ನೋ ಭಯ ಇತ್ತು. ಬಟ್ ಅವರು ತೋರಿಸ್ತಾ ಇರೋ ಪ್ರೀತಿ ನಾ ನೋಡಿ. ನಯನಾ ಗೆ ಅ ಭಯ ದೂರ ಆಗಿ ಬಿಡ್ತು. 

ಅನಾ ಅಭಿ ಜೊತೆಗೆ ಬೈಕ್ ಅಲ್ಲಿ ಸುತ್ತಾಡೋ ಆಸೆ ನಾ ಅಭಿ ನೆರವೇರಿಸ್ತಾನೆ. ದಿನ ಬೈಕ್ ಅಲ್ಲಿ 2 3 ರೌಂಡ್ ಹೋಗೋದು. ಅಮ್ಮ ನಾ ಮರೆತು ಅತ್ತೆ ಅಜ್ಜಿ ಅಕ್ಕ ನಾ ಜೊತೆಗೆನೇ ಇರೋದು. ಅತ್ತೆ ನಾ ಬಿಡದೆ ಅವರ ಜೊತೆಗೆ ಇರೋದು ಅವರ ಜೊತೆಗೆ ಸುತ್ತಾಡೋದು. ಶ್ರುತಿ ಜೊತೆಗೆ ಸೇರಿ ಆಟ ಆಡೋದು. ಅಪ್ಪ ಅಮ್ಮ ನಾ ಬಿಟ್ಟು ಹೋಗಿ ಅತ್ತೆ ಅಜ್ಜಿ ಜೊತೆಗೆ ಮಲಗಿಕೊಂಡು ನಿದ್ದೆ ಮಾಡೋದು. ಅಭಿ ಮನೇಲಿ ಹೇಗೆ ಇರ್ತಾರೆ ಅನ್ನೋ ಭಯದಿಂದ, ಅತ್ತೆ ಮನೆ ಅಮ್ಮನ ಮನೆ ಎರಡು ಒಂದೇ ಅನ್ನೋ ಸಂತೋಷ ಪಡ್ತಾಳೆ. ಅಭಿ ಗೆ ಮತ್ತಷ್ಟು ಹತ್ತಿರ ಹಾಗೂ ಅವಕಾಶ ಬರುತ್ತೆ. ಅಭಿ ನಯನಾ ಇಷ್ಟಕ್ಕೆ ಅವಳ ಸಂತೋಷಕ್ಕೆ ಯಾವ ಅಡ್ಡಿ ಬಾರದ ರೀತಿ ನಡ್ಕೋತಾನೆ. ಹೀಗೆ ವಾರಗಳು ಕಳೆದು ಹೋಗುತ್ತೆ. 

***

ಅಭಿ,,, ದೇವಮ್ಮ ನಾಳೆ ನಾವು ಹೊರಡ್ತೀವಿ. 

ದೇವಮ್ಮ,,, ಯಾಕೋ ಇನ್ನು ಒಂದು ಎರಡು ದಿನ ಇರಬಾರ್ದ?

ಅಭಿ,,, ಇರೋ ಪ್ರಶ್ನೆ ಅಲ್ಲ ದೇವಮ್ಮ, ಕೆಲಸಗಳು ಇದೆ ಅದಕ್ಕೆ. ಅದು ಅಲ್ಲದೆ ಕೆಲಸಕ್ಕೆ ಹೋಗಿ ವಾರ ಆಯಿತು, ಅದು ಅಲ್ಲದೆ ಮಗಳನ್ನ ಮೊಮ್ಮಗಳನ್ನ ಇಷ್ಟು ದಿನ ಅವ್ರು ಬಿಟ್ಟು ಇದ್ದೆ ಇಲ್ಲಾ. ಅವರ ಬಗ್ಗೆನೂ ಯೋಚ್ನೆ ಮಾಡಬೇಕು ಅಲ್ವಾ. 

ದೇವಮ್ಮ,, ಹ್ಮ್ ಸರಿ, ಅದ್ರೆ ಅವಾಗವಾಗ ಬರ್ತಾ ಇರಬೇಕು ಸರಿನಾ?

ನಯನಾ,,, ಅಮ್ಮ ನಿಮ್ ಮಗನ ಬಗ್ಗೆ ನಿಮಗೆ ಗೊತ್ತು ಅಲ್ವಾ. ಕೆಲಸ ಅಂತ ಅಂದ್ರೆ, ಮನೆ ಹೆಂಡತಿ ಮಕ್ಕಳನ್ನ ಮರೆತು ಬಿಡ್ತಾನೆ. ನಿಮ್ ಮಗ ಬರದೇ ಇದ್ರೆ ಏನಂತೆ. ಈಗ ನನಗೆ ಮನೆ ಗೊತ್ತಾಯಿತು ಅಲ್ವಾ. ಅವಾಗವಾಗ ಬರ್ತಾ ಇರ್ತೀನಿ ನಿಮ್ ಮೊಮ್ಮಗಳನ್ನ ಕರ್ಕೊಂಡು. 

ದೇವಮ್ಮ,,, ಹ್ಮ್ ಹಾಗೇ ಮಾಡು ಮಗಳೇ.  ಇಲ್ಲಾ ಅಂದ್ರೆ ಇವನು ಹೇಳಿದ ಮಾತು ಕೇಳೋದಿಲ್ಲ..

ಅಭಿ,,, ವ್ಯಂಗ್ಯ ವಾಗಿ ನಗ್ತಾ, ಸೊಸೆ ಬಂದಿದ್ದೆ, ಮಗನೆ ಬೇಡ ಅದ ಅಲ್ವಾ ನಿನಗೆ. ಅಷ್ಟೇ ಬಿಡು ದೇವಮ್ಮ. ಏನೋ ಮಾಡ್ರಿ ಅಂತ ಹೇಳ್ತಾ ಎದ್ದು ಹೊರಗೆ ಹೋಗ್ತಾನೆ..

######

ಮೊಬೈಲ್ ರಿಂಗ್ ಸೌಂಡ್ ಗೆ ಸಾರಿಕಾ ಮೊಬೈಲ್ ಕಡೆಗೆ ನೋಡ್ತಾಳೆ. ಲಾಯರ್ ಮೇಡಂ, ಸಾರಿಕಾ ಕಾಲ್ ಪಿಕ್ ಮಾಡಿ ಮೇಡಂ ಹೇಳಿ.

ಲಾಯರ್,,, ಸಾರಿಕಾ ಫ್ರೀ ಇದ್ರೆ ಆಫೀಸ್ ಗೆ ಬರ್ತೀಯ.

ಸಾರಿಕಾ,, ಸರಿ ಮೇಡಂ ಇನ್ನ ಒಂದು ಗಂಟೆ ಅಲ್ಲಿ ಆಫೀಸ್ ಹತ್ತಿರ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ರೆಡಿ ಆಗಿ ಲಾಯರ್ ಮೇಡಂ ನಾ ನೋಡೋಕೆ ಹೋಗ್ತಾಳೆ. 

ಕೆಲವು ಸಮಯದ ನಂತರ.

ಸಾರಿಕಾ ಲಾಯರ್ ಆಫೀಸ್ ಡೋರ್ ಓಪನ್ ಮಾಡಿಕೊಂಡು ಒಳಗೆ ಬರ್ತಾಳೆ.

ಲಾಯರ್,,, ಬಾ ಸಾರಿಕಾ ಕುತ್ಕೋ. 

ಸಾರಿಕಾ,, ಚೇರ್ ಮೇಲೆ ಕೂತು, ಹೇಳಿ ಮೇಡಂ ಬರೋಕೆ ಹೇಳಿದ್ರಿ. 

ಲಾಯರ್,,, ಕೆಲವೊಂದು ಡಾಕ್ಯುಮೆಂಟ್ಸ್ ಕೊಡ್ತಾ ತಗೊ ಸಾರಿಕಾ ನಿನ್ನ ಡಿವೋರ್ಸ್ ಪೇಪರ್. 

ಸಾರಿಕಾ,,, ತುಂಬಾ ಥ್ಯಾಂಕ್ಸ್ ಮೇಡಂ, ಇಷ್ಟು ಬೇಗ ಸಿಗುತ್ತೆ ಅಂತ ಅನ್ಕೊಂಡು ಇರಲಿಲ್ಲ.

ಲಾಯರ್,,, ನಾರ್ಮಲ್ ಆಗಿದ್ರೆ ಸ್ವಲ್ಪ ಲೇಟ್ ಆಗಿರೋದು, ಬಟ್ ಇದು ಬೇರೆ ಅಲ್ವಾ. ಅದಕ್ಕೆ ಬೇಗ ಸಿಕ್ತು. ಇನ್ಮೇಲೆ ನೀನು ಯಾರಿಗೂ ಭಯ ಬಿಳೋ ಅವಶ್ಯಕತೆ ಇಲ್ಲಾ.  ವೇದಾಂತ್ ಗೆ 5 ವರ್ಷ ಜೈಲು ಶಿಕ್ಷೆ. ಮತ್ತೆ ಅವನ ಅಸ್ತಿ ಲಿ ನಿನಗೆ ಅರ್ಧ ಪಾಲು. ಮತ್ತೆ ಹಣ. ಹಣ ಬಂದು ನಿನ್ನ ಬ್ಯಾಂಕ್ ಅಕೌಂಟ್ ಗೆ ಬರುತ್ತೆ. 

ಸಾರಿಕಾ,,, ಅಳ್ತಾ ನನಗೆ ಅಸ್ತಿ ಹಣ ಏನು ಬೇಡ ಮೇಡಂ, ಅವನಿಗೆ ಶಿಕ್ಷೆ ಹಾಗೋ ಹಾಗೇ ಮಾಡಿ ನನಗೆ ಡಿವೋರ್ಸ್ ಕೊಡಿಸಿದ್ರಿ ಅಲ್ವಾ ಅಷ್ಟು ಸಾಕು ನನಗೆ.  ಯಾವುದಾದ್ರೂ ಕೆಲಸ ಮಾಡ್ಕೊಂಡು ನನ್ನ ಜೀವನ ನಾನು ಮಾಡ್ಕೋತೀನಿ.

ಲಾಯರ್,,, ಸಾರಿಕಾ ಸಮಾಧಾನ ಮಾಡ್ಕೊ, ನಿನ್ನ ನೋವು ನನಗೆ ಅರ್ಥ ಆಗುತ್ತೆ. ಅಂತ ಹೇಳಿ ಸಮಾಧಾನ ಮಾಡಿ. ನೋಡು ನೀನು ಇದೆ ಊರಲ್ಲಿ ಇದ್ರೆ ನಿನಗೆ ಪದೇ ಪದೇ ಈ ವಿಷಯ ನೆನಪಾಗುತ ಇರುತ್ತೆ. ಒಂದು ಕೆಲಸ ಮಾಡು. ಹೇಗಿದ್ರು ನೀನು ಕೆಲಸ ಮಾಡಬೇಕು ಅಂತ ಇದ್ದಿಯಾ ಅಲ್ವಾ. ನಾನ್ ಒಂದು ಅಡ್ರೆಸ್ ಕೊಡ್ತೀನಿ, ನೀನು ಅಲ್ಲಿಗೆ ಹೋಗಿ ಇದನ್ನೆಲ್ಲಾ ಮರೆತು ಹೊಸ ಜೀವನ ಮಾಡು.  ಅಲ್ಲಿ ನಿನಗೆ ಯಾರ ಭಯ ಕೂಡ ಇರೋದಿಲ್ಲ. ನಮ್ ರಿಲೇಟಿವ್ ಅಂಕಲ್ ಒಬ್ರು ಇದ್ದಾರೆ ನಾನು ಅವರ ಹತ್ತಿರ ಮಾತಾಡಿ ನಿನಗೆ ಉಳಿದು ಕೊಳ್ಳೋಕೆ ಒಂದು ಮನೆ ಮಾಡೋಕೆ ಒಂದು ಕೆಲಸ ನೋಡೋಕೆ ಹೇಳ್ತಿನಿ.  ಹೋಗಿ ಹೊಸ ಜೀವನ ಶುರು ಮಾಡು. ಅಪ್ಪ ಅಮ್ಮ ನಾ ಆಗಾಗ ಬಂದು ನೋಡ್ಕೊಂಡು ಹೋಗು. ಇಲ್ಲೇ ಇದ್ರೆ ಈ ನೆನಪುಗಳು ನಿನ್ನ ಕಾಡ್ತಾ ಇರುತ್ತೆ. ಇದರಲ್ಲಿ ನನ್ನ ಬಲವಂತ ಏನು ಇಲ್ಲಾ. ನಿನಗೆ ಇಷ್ಟ ಇದ್ರೆ ಮಾತ್ರ ಹೋಗು. 

ಸಾರಿಕಾ,,, ಇಲ್ಲಾ ಮೇಡಂ, ನನಗೂ ಇಲ್ಲಿ ಈ ಊರಲ್ಲಿ ಇರೋಕೆ ಇಷ್ಟ ಇಲ್ಲಾ. ನೀವು ಹೇಳಿದ ಹಾಗೇ ಮಾಡ್ತೀನಿ.

ಲಾಯರ್,, ಸರಿ, ಅಂತ ಹೇಳಿ, ಒಂದು ಕಾರ್ಡ್ ಮತ್ತೆ ಅಡ್ರೆಸ್ ಕೊಟ್ಟು.  ನೀನು ಹೊರಡೋವಾಗ ನನಗೆ ಹೇಳು ನಾನು ನಮ್ ಅಂಕಲ್ ಹತ್ತಿರ ಮಾತಾಡಿ ಹೇಳ್ತಿನಿ.

ಸಾರಿಕಾ,,, ಸರಿ ಮೇಡಂ.  ಅಂತ ಹೇಳಿ ಮತ್ತೆ ಮೇಡಂ ನೀವು ತಪ್ಪು ತಿಳ್ಕೊಳಲ್ಲ ಅಂದ್ರೆ ನಿಮ್ ಫೀಸ್ ಎಷ್ಟು ಅಂತ ಹೇಳಿದ್ರೆ.

ಲಾಯರ್,,, ಸಾರಿಕಾ, ಎಲ್ಲಾ ಕೆಲಸಾನ ನಾನು ದುಡ್ಡಿಗೋಸ್ಕರ ಮಾಡೋದಿಲ್ಲ. ನಿನಗೆ ಅನ್ಯಾಯ ಆಗಿತ್ತು, ನಿನ್ನ ಕಡೆ ಸತ್ಯ ಇತ್ತು, ನಾನು ಒಂದು ಹೆಣ್ಣಾಗಿ ನಿನಗೆ ನ್ಯಾಯ ಕೊಡಿಸದೆ ಇದ್ರೆ ನನ್ನ ಈ ಲಾಯರ್ ವೃತ್ತಿ ಏನಕ್ಕೆ ಹೇಳು. ಹುಷಾರಾಗಿ ಹೋಗು ಆರಾಮಾಗಿ ಹೊಸ ಜೀವನ ಶುರು ಮಾಡು. 

ಸಾರಿಕಾ,,, ತುಂಬಾ ಥ್ಯಾಂಕ್ಸ್ ಮೇಡಂ ನಾನಿನ್ನು ಬರ್ತೀನಿ ಅಂತ ಹೇಳಿ, ಅಲ್ಲಿಂದ ಹೊರಟು ಹೋದಳು. 

####

ಶಾಂತಲಾ,,, ಏನಮ್ಮ ಹೇಳ್ತಾ ಇದ್ದಿಯಾ ಸಾರಿಕಾ.

ಸಾರಿಕಾ,, ಹೌದಮ್ಮ, ನನಗೂ ಇಲ್ಲಿ ಇರೋಕೆ ಇಷ್ಟ ಇಲ್ಲಾ.  ಕಣ್ ಮುಚ್ಚಿದ್ರೆ ಸಾಕು ನನಗೆ ಅ ರಾಕ್ಷಸ ನೇ ಕಣ್ಣೆದುರು ಬರ್ತಾನೇ.

ಶಾಂತಲಾ,,, ನಿನ್ನ ನೋವು ನನಗೆ ಅರ್ಥ ಆಗುತ್ತೆ ಸಾರಿಕಾ, ಅದ್ರೆ ಒಬ್ಳೆ ಅಷ್ಟು ದೂರ ಹೋಗಿ, ಇರ್ತೀನಿ ಅಂದ್ರೆ ನನಗೆ ಯಾಕೋ ಭಯ ಆಗ್ತಾ ಇದೆ.

ಸಂಪತ್,,, ಬೇಡ ಶಾಂತ, ಅವಳನ್ನ ತಡಿಯೋಕೆ ಹೋಗಬೇಡ. ಅವಳ ಜೀವನ ಚೆನ್ನಾಗಿ ಇರುತ್ತೆ ಅಂತ ಕುರುಡನ ಹಾಗೇ ನಂಬಿ ಅವಳ ಜೀವನ ಹೀಗೆ ಹಾಗೋ ಹಾಗೇ ಮಾಡಿಬಿಟ್ಟೆ.  ಒಂದು ಸರಿ ಅವಳ ನಿರ್ಧಾರ ತಪ್ಪು ಅಂತ ಹೇಳಿ. ಅವಳ ಜೀವನವನ್ನೇ ಹಾಳು ಬಾವಿ ಗೆ ತಳ್ಳಿಬಿಟ್ಟೆ. ಈಗ ನೀನು ನಾನು ಮಾಡಿದ ತಪ್ಪನ್ನೇ ಮಾಡೋಕೆ ಹೋಗಬೇಡ. ಎಲ್ಲೋ ನೆಮ್ಮದಿಯಾಗಿ ಇದ್ರೆ ನಮಗೆ ಅಷ್ಟೇ ಸಾಕು. ಅಂತ ಹೇಳ್ತಾ ಕಣ್ಣೀರು ತುಂಬಿಕೊಂಡ ಕಣ್ಣುಗಳಿಂದ ಅಲ್ಲಿಂದ ಹೊರಟು ಹೋದರು. 

ಶಾಂತಲಾ,,, ಕಣ್ಣೀರು ತುಂಬಿಕೊಂಡು, ಮಗಳನ್ನ ನೋಡ್ತಾ ದೇವರು ನಿನಗೆ ಒಳ್ಳೇದು ಮಾಡಲಿ ಅಂತ ಹೇಳಿ ಹೊರಟು ಹೋದಳು. 

ಸಾರಿಕಾ ನೋವನ್ನ ತಡೆದುಕೊಂಡು ರೂಮಿನ ಒಳಗೆ ಹೋಗಿ ಬಿಟ್ಟಳು. 

######

ಅಭಿ ಮನೇಲಿ ಅಮ್ಮ ಅಕ್ಕ ಮತ್ತೆ ಬರ್ತೀನಿ ಅಂತ ಹೇಳಿ. ನಯನಾ ಅನಾ ಜೊತೆಗೆ  ಅಲ್ಲಿಂದ ಹೊರಟ ನಯನಾ ಮನೆ ಕಡೆಗೆ. 

ನಯನಾ ಮನೆ ಬರೋ ಅಷ್ಟೋತ್ತಿಗೆ ಮಧ್ಯಾಹ್ನ ಆಗಿತ್ತು. 

ಅಭಿ ಲಗೇಜ್ ನಾ ತೆಗೆದುಕೊಂಡು  ಮನೆ ಒಳಗೆ ಬಂದ.. ನಯನಾ ರೀ ಕೊಡಿ ಅಂತ ಹೇಳಿ ಲಗೇಜ್ ನಾ ತೆಗೆದುಕೊಂಡು ರೂಮ್ ಒಳಗೆ ಹೋದಳು. 

ಸುಭದ್ರ,,, ಅಭಿ ಹೋಗಿ ಕೈ ಕಾಲು ತೊಳೆದುಕೊಂಡು ಬಾ ಊಟಕ್ಕೆ ಇಡ್ತೀನಿ. 

ಅಭಿ,,, ಅಮ್ಮ ನನಗೆ ಏನು ಬೇಡ ಬರ್ತಾ ಊಟ ಮಾಡ್ಕೊಂಡೆ ಬಂದೆ. ನನಗೆ ಸ್ವಲ್ಪ ಟೀ ಕೊಡಿ ಸಾಕು.

ಅನಾ,, ಅಜ್ಜಿ ನನಗೆ ಹಾಲು ಕೊಡಿ ಸಾಕು, ಊಟ ಏನು ಬೇಡ. 

ಸುಭದ್ರ,, ಹ್ಮ್ ಸರಿ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋಗಿ , ಟೀ ಮತ್ತೆ ಹಾಲನ್ನ ತಂದು ಅಭಿ ಗೆ ಅನಾ ಗೆ ಕೊಟ್ಟರು. ಅಭಿ ಟೀ ಕುಡಿದು. ಅಮ್ಮ ನಾನು ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ. ಅಂತ ಹೇಳಿ ಅಲ್ಲಿಂದ ಸೂಪರ್ ಮಾರ್ಕೆಟ್ ಕಡೆಗೆ ಹೋದ..

ನಯನಾ ಫ್ರೆಷ್ ಅಪ್ ಆಗಿ ಬಟ್ಟೆ ಚೇಂಜ್ ಮಾಡಿಕೊಂಡು ಹಾಲ್ ಗೆ ಬಂದು ನೋಡ್ತಾಳೆ ಅಭಿ ಕಾಣೋದಿಲ್ಲ.

ನಯನಾ,, ಅಮ್ಮ ಅಭಿ ಎಲ್ಲೋದ?

ಸುಭದ್ರ,,, ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ ಅಂತ ಹೇಳಿ ಹೋದ. 

ನಯನಾ,,, ಊಟ ಮಾಡದೇ ಹೋದ್ನ?

ಸುಭದ್ರ,,, ಇಲ್ವೆ ಊಟ ಮಾಡು ಅಂತ ಕೇಳ್ದೆ. ಬೇಡಮ್ಮ ಬರ್ತಾ ತಿಂದು ಬಂದೆ, ಟೀ ಕೊಡಿ ಸಾಕು ಅಂತ ಹೇಳಿ ಟೀ ಕುಡಿದು ಹೋದ.

ನಯನಾ,, ಹೌದ ಸರಿ ಅಂತ ಹೇಳಿ ಬಂದು ಅಮ್ಮನ ಪಕ್ಕ ಕೂತ್ಕೋತಾಳೆ.

ಸುಭದ್ರ,,, ಹ್ಮ್ ಮತ್ತೆ ಏನ್ ಸಮಾಚಾರ ಅತ್ತೆ ಮನೇಲಿ ನಿನ್ನ ಚೆನ್ನಾಗಿ ನೋಡಿಕೊಂಡ್ರಾ?. ಅನಾ ಅವರಿಗೆ ಇಷ್ಟ ಅದ್ಲಾ? ಹೇಳ್ದೆ ಮದುವೆ ಯಾಕ್ ಮಾಡ್ಕೊಂಡ್ರಿ ಅಂತ ಏನಾದ್ರೂ ಜಗಳ ಮಾಡಿದ್ರ? ನಿನಗೆ ಅಭಿ ಮನೆಯವರು ಇಷ್ಟ ಅದ್ರ?

ನಯನಾ,,, ತುಂಬಾ ಇಷ್ಟ ಆದ್ರು ಅಮ್ಮ. ನನ್ನ ಸೊಸೆ ಅಂತ ಮರೆತು ಮಗಳ ಹಾಗೇ ನೋಡ್ಕೊಂಡ್ರು. ಹೇಳ್ದೆ ಕೇಳ್ದೆ ಯಾಕ್ ಮದುವೆ ಆದ್ರಿ, ನಿಮ್ ಅಪ್ಪ ಅಮ್ಮ ಯಾರು ಏನ್ ಕೆಲಸ ಮಾಡ್ತಾರೆ, ಜಾತಿ, ಕುಲ ಯಾವುದು ಅಂತ ಏನು ಒಂದು ಪ್ರಶ್ನೆ ಕೇಳಿಲ್ಲ. ಕೇಳಿದ್ದು ಒಂದೇ.  ಅಭಿ ನಿಮ್ ಅಪ್ಪ ಅಮ್ಮನ ಒಪ್ಪಿಸಿ ಮದುವೆ ಮಾಡಿಕೊಂಡನ ಇಲ್ಲಾ ನಿನ್ನ ಭಯ ಬೀಳಿಸಿ ಏನಾದ್ರೂ ಮದುವೆ ಮಾಡಿಕೊಂಡನ. ಮದುವೆ ಅದ ಮೇಲೆ ನಿನ್ನ ಚೆನ್ನಾಗಿ ನೋಡ್ಕೋತ ಇದ್ದಾನ. ಮಗಳನ್ನ ಚೆನ್ನಾಗಿ ನೋಡ್ಕೋತ ಇದ್ದಾನ. ಇಲ್ಲಾ ನಿಮಗೆ ಏನಾದ್ರೂ ತೊಂದ್ರೆ ಕಷ್ಟ ಏನಾದ್ರೂ ಕೊಡ್ತಾ ಇದ್ದಾನ. ಹಾಗೇ ಏನಾದ್ರೂ ಇದ್ರೆ ಹೇಳು ಮಗ ಅಂತ ಕೂಡ ನೋಡಲ್ಲ ಸರಿಯಾಗಿ ಬುದ್ದಿ ಕಳಿಸ್ತೀನಿ ಅಂತ ಕೇಳಿದ್ರು. 

ನಾನು ಅಭಿ ಅ ತರ ಏನು ಇಲ್ಲಾ. ಅಪ್ಪ ಅಮ್ಮ ಒಪ್ಪಿದ ಮೇಲೆ ನೇ ಅವರ ಇಷ್ಟದಂತೆ ಮದುವೆ ಆಗಿದ್ದು. ನನ್ನ, ನನ್ನ ಮಗಳನ್ನ ತುಂಬಾ ಚೆನ್ನಾಗಿ ನೋಡ್ಕೋತ ಇದ್ದಾನೆ. ನಿಜ ಹೇಳಬೇಕು ಅಂದ್ರೆ ಅವನಿಗೆ ಅವನ ಮಗಳು ಅಂದ್ರೆ ಪ್ರಾಣ. ಅಪ್ಪ ಮಗಳು ಇಬ್ರು ಒಂದೇ ಪಕ್ಷ ಅಂತ ಹೇಳಿದೆ. 

ತುಂಬಾ ಕಷ್ಟ ನೋಡಿರೋ ಫ್ಯಾಮಿಲಿ ಅಮ್ಮ, ಅಭಿ ಅವರ ದೊಡ್ಡಪ್ಪ ಅವರ ಅಪ್ಪನಿಗೆ ಮೋಸ ಮಾಡಿ ಕುಡಿಯೋದನ್ನ ಕಲಿಸಿ ಅಸ್ತಿ ನಾ ಎಲ್ಲಾ ಅವರ ಹೆಸರಿಗೆ ಬರೆಸಿಕೊಂಡು ಇವರಿಗೆ ಮೋಸ ಮಾಡಿ ಬಿಟ್ಟ. ಅಂತ ಪ್ರತಿಯೊಂದು ವಿಷಯ ನಾ ಹೇಳೋಕೆ ಶುರು ಮಾಡಿದ್ಲು..

ಸುಭದ್ರ,,, ನಯನಾ ಹೇಳಿದ್ದನ್ನ ಎಲ್ಲಾ ಕೇಳಿ. ಪಾಪ ಇಷ್ಟೊಂದು ಕಷ್ಟ ಬಿದ್ದಿದ್ದಾರೆ. ದೇವ್ರು ಒಳ್ಳೆಯವರಿಗೆ ನೇ ತುಂಬಾ ಕಷ್ಟ ಕೊಡೋದು. ನೋಡು ಅವರು ಏನಾದ್ರೂ ಒಂದು ಮಾತು ಅಂದ್ರೆ ಕೋಪ ಮಾಡ್ಕೊಳ್ಳೋಕೆ ಹೋಗಬೇಡ. 

ನಯನಾ,,, ಅಮ್ಮ ಇಲ್ಲಾ ಅಮ್ಮ, ನನಗೆ ನಿನ್ ಹೇಗೋ ಅವರು ಹಾಗೇ. ನಿಜ ಹೇಳಬೇಕು ಅಂದ್ರೆ ನಿಮಗಿಂತ ಅವರು ಸ್ವಲ್ಪ ಜಾಸ್ತಿ ಇಷ್ಟ ಆದ್ರು. ಮಗನನ್ನ ಬೈದು ಸೊಸೆ ಗೆ ಯಾರಮ್ಮ ಸಪೋರ್ಟ್ ಮಾಡ್ತಾರೆ. ಅಭಿ ಅವರ ಅಕ್ಕ ಅಂತು ಅನಾ ನಾ ಒಂದು ದಿನ ಬಿಟ್ಟು ಇರಲಿಲ್ಲ. ಕಾರ್ ಅಲ್ಲಿ ಅಷ್ಟೇ ಅವಳು ನನ್ನ ಜೊತೆಗೆ ಇದ್ದಿದ್ದು. ಅಲ್ಲಿಗೆ ಹೋದಮೇಲೆ, ಅಜ್ಜಿ ಅತ್ತೆ ಅಕ್ಕ. ಅವಳನ್ನ ತುಂಬಾ ಪ್ರೀತಿ ಯಿಂದ ನೋಡ್ಕೊಂಡ್ರು. ನನಗೆ ಅತ್ತೆ ಮನೆಗೆ ಹೋಗಿದ್ದೀನಿ ಅನ್ನೋ ಫೀಲ್ ಆಗಿಲ್ಲ. ನನ್ನ ಮನೇಲೆ ನಾನು ಇದ್ದೀನಿ ಅನ್ನೋ ಫೀಲ್ ಆಯಿತು.. ನಿನಗೆ ಇನ್ನೊಂದು ವಿಷಯ ಗೊತ್ತಾ ಅಮ್ಮ?

ಸುಭದ್ರ,,, ಕುತೂಹಲ ದಿಂದ ಏನು?

ನಯನಾ,,, ಅಮ್ಮ ಅಭಿ ಗೆ ಸೂಪರ್ ಆಗಿ ಅಡುಗೆ ಮಾಡೋಕೆ ಬರುತ್ತೆ. 

ಸುಭದ್ರ,,, ಆಶ್ಚರ್ಯ ವಾಗಿ ಏನು ಅಭಿ ಗೆ ಅಡುಗೆ ಮಾಡೋಕೆ ಬರುತ್ತಾ.

ನಯನಾ,,, ಹೌದಮ್ಮ ಅಭಿ ಗೆ ಚೆನ್ನಾಗಿ ಅಡುಗೆ ಮಾಡೋಕೆ ಬರುತ್ತೆ. ನಾವು ಹೋಗ್ತಾ ಇದ್ದಂತೆ. ಅಭಿ ಅವರ ಅಕ್ಕ ಬಿರಿಯಾನಿ ಮಾಡೋ ಅಂತ ಹೇಳಿದ್ರು. ಆಮೇಲೆ ಅವನೇ ಹೋಗಿ ಮಟನ್ ತಂದು ಬಿರಿಯಾನಿ ಮಾಡಿದ. 1st ಟೈಮ್ ನನಗೆ ಕಾಫಿ ಮಾಡಿ ಕೊಟ್ಟ. ನನಗೆ ಎಷ್ಟು ಸಂತೋಷ ಆಯ್ತು ಅಂತ ಅದ್ರೆ,  ಅದನ್ನ ಮಾತಲ್ಲಿ ಹೇಳೋಕೆ ಆಗಲ್ಲಾ ಅಷ್ಟು ಸಂತೋಷ ಆಯ್ತು. ಆಮೇಲೆ ನನಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ ಅಂತ ಹೇಳಿದೆ. ಸೀರಿಯಸ್ಲಿ ಅಮ್ಮ ನನಗೆ ಅ ಬಿರಿಯಾನಿ ತಿಂತ ದೇವರ ಹತ್ತಿರ ಒಂದೇ ಕೇಳ್ಕೊಂಡೆ . ನಾನು ಕೇಳದೇನೆ ನಾನು ನನ್ನ ಲೈಫ್ ಗೆ ಯಾವ ತರ ಹುಡುಗ ಬೇಕು ಅಂತ ಕೇಳ್ಕೊಂಡು ಇದ್ನೋ ಅದಕ್ಕಿಂತ ಒಳ್ಳೆ ಹುಡುಗನನ್ನ ಕೊಟ್ಟಿದ್ದೀಯ ತುಂಬಾ ತುಂಬಾ ಥ್ಯಾಂಕ್ಸ್ ದೇವ್ರೇ ಅಂತ. 

ಸುಭದ್ರ,,, ಮಗಳ ಸಂತೋಷ ನೋಡಿ ನೀನು ಯಾವಾಗಲು ಹೀಗೆ ಸಂತೋಷ ವಾಗಿ ಇರು ಮಗಳೇ.

ನಯನಾ,,, ಅಮ್ಮ ನನ್ನ ಜೊತೆಗೆ ಅಭಿ ಒಬ್ಬ ಇದ್ರೆ ಸಾಕು ಅಮ್ಮ, ಎಲ್ಲೇ ಇದ್ರು ಸಂತೋಷ ವಾಗಿ ನೆಮ್ಮದಿಯಾಗಿ ಇರ್ತೀನಿ ಅವನ ಜೊತೆ. 

ಸುಭದ್ರ,,, ಅವನೇನೋ ನಿನ್ನ ಸಂತೋಷ ವಾಗಿ ನೋಡ್ಕೊಳ್ತಾ ಇದ್ದಾನೆ. ನೀನು ಕೂಡ ಅವನ ಸಂತೋಷ ಏನು ಅವನ ಇಷ್ಟ ಏನು ಅಂತ ತಿಳ್ಕೊಂಡು ಸಂತೋಷ ವಾಗಿ ನೋಡ್ಕೋ ಬೇಕು ಅಲ್ವಾ. 

ನಯನಾ,,, ಅಮ್ಮ ನೀನು ಏನ್ ಹೇಳಬೇಕು ಅಂತ ಇದ್ದಿಯಾ ಅನ್ನೋದು ನನಗೆ ಚೆನ್ನಾಗಿ ಗೊತ್ತು, ನಾನು ಯಾವಾಗ ಅಭಿ ನಾ ಮನಸ್ಫೂರ್ತಿ ಆಗಿ ಗಂಡ ಅಂತ ಅನ್ಕೊಂಡನೋ ಹಾಗಲೇ ನನ್ನ ಸರ್ವಸ್ವ ಅವನೇ ಆಗೋದ,  ನನ್ನ ಕಡೆಯಿಂದ ಏನು ಅಭ್ಯಂತರ ಇಲ್ಲಾ. ಅದ್ರೆ ಅಭಿ ನೇ ಸ್ವಲ್ಪ ಹಿಂದೆ ಹೆಜ್ಜೆ ಇಡ್ತಾ ಇದ್ದಾನೆ. ಮೆ ಬಿ ನಾನು ಇನ್ನು ಅ ವಿಷಯ ದಲ್ಲಿ ಏನು ಯೋಚ್ನೆ ಮಾಡಿಲ್ಲ ಅಂತ ಅವನಿಗೆ ಅನ್ನಿಸಿರ ಬೇಕು. ಅದಕ್ಕೆ ನನಗೆ ನನ್ನ ಭಾವನೆಗಳಿಗೆ ಗೌರವ ಕೊಟ್ಟು ನನಗೆ ತೊಂದ್ರೆ ಕೊಡೋಕೆ ಹೋಗ್ತಾ ಇಲ್ಲಾ ಅಂತ  ಅನ್ನಿಸುತ್ತೆ. ಈ ವಿಷಯ ದ ಬಗ್ಗೆ ಅಭಿ ಹತ್ತಿರ ಮಾತಾಡಿ ಕ್ಲಿಯರ್ ಮಾಡ್ತೀನಿ ನೀನೇನು ಯೋಚ್ನೆ ಮಾಡಬೇಡ ಸರಿನಾ. 

ಸುಭದ್ರ,,, ಹ್ಮ್, ಗಂಡ ಹೆಂಡತಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸಂತೋಷ ವಾಗಿ ಇರಿ ನಮಗೆ ಅಷ್ಟೇ ಸಾಕು.  ಬಾ ಊಟ ಮಾಡೋಣ ಅಂತ ಹೇಳಿ. ಅಮ್ಮ ಮಗಳು ಇಬ್ಬರು ಊಟ ಮಾಡೋಕೆ ಹೋಗ್ತಾರೆ. 

@@@@@@@@@@@@@@@@@@@@@@@@@