ಯಾರೇ ನೀನು ಮನ ಮೋಹಿನಿ ಏನೆಂದು ಬಣ್ಣಿಸಲಿ ನಿನ್ನನು ಓ ಕಣ್ಮಣಿ ನೋಡಿ ನಿನ್ನ ಈ ಅನುರೂಪವನಿಂದು ಆ ಅಂಬರವವೂ ಅಶಿವುದೇನೊ ನಿನ್ನ ಸೀರೆಯಾಗುವುನೆಂದು ನೀ ನಿಂತ ಭೂಮಿಯೂ ಬಿಂಕುತಿರಬಹುದು ನಿನ್ನ ಮೈ ತಾಕಿಸಿ ನಿಂತಿರುವೆನೆಂದು ನೋಡಿ ನಿನ್ನ ಈ ಸೌಂದರ್ಯವನಿಂದು ಅನಿಸುತಿರುವುದು ಆ ಸೂರ್ಯನೂ ಇಂದು ಅಸ್ತಮನಾಗಲು ಇಚ್ಚಿಸುತ್ತಿಲವೆಂದು ಆ ಶಶಿಯು ನಿನ್ನ ಸೌಂದರ್ಯದ ನಶೆಯಲ್ಲಿ ಮುಳುಗಲು ತವಕಿಸುತ್ತಿರಬಹುದೆಂದು ಸಂದೇಹವಿಲ್ಲ ಆ ರತಿಯೂ ಮರಗುವುಳು ನೋಡಿ ನಿನ್ನೀ ಮಾದಕತೆಯನಿಂದು ಇವರ ಕತೆಯೇ ಹೀಗಾದಿರಿಂದು ಊಹಿಸಬಲ್ಲೆಯಾ ನನ್ನಂತ ಹುಲು ಮಾನವರ ಗತಿಯೆನೆಂದು