ಬಿಲ್ಲಿಂಗ್ ಕೌಂಟರ್ ಹತ್ತಿರ ನಿಂತಿದ್ದ ನಿರಂಜನ್ ಮೊಬೈಲ್ ಗೆ ಅಭಿ ನಂಬರ್ ಯಿಂದ ಕಾಲ್ ಬರುತ್ತೆ. ಅಭಿ ನಂಬರ್ ನೋಡಿ ನಿರಂಜನ್ ಕಾಲ್ ಪಿಕ್ ಮಾಡಿ ಮಾತಾಡ್ತಾನೆ. ಅಭಿ ಜೊತೆಗೆ ಕಾಲ್ ಮಾತಾಡಿ ಸರಿ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.
ಪ್ರಿಯಾ,,, ಅಭಿ ನಾ ಎಲ್ಲಿದ್ದಾನೆ?
ನಿರಂಜನ್,,, ಅಭಿ ಗೆ ಮತ್ತೆ ಫೀವರ್ ಜಾಸ್ತಿ ಆಗಿದೆ ಅಂತ ಕಾಲ್ ಮಾಡಿದ.
ಪ್ರಿಯಾ,,, ಏನು ಮತ್ತೆ ಫೀವರ್ ಅ ನಡಿಯೋ ಬೇಗ ಹೋಗಿ ಹಾಸ್ಪಿಟಲ್ ಗೆ ಕರ್ಕೊಂಡು ಹೋಗೋಣ.
ನಿರಂಜನ್,,, ಲೇ ಅವನು ಈಗ ಹಾಸ್ಪಿಟಲ್ ಅಲ್ಲೇ ಇದ್ದಾನೆ ಅಂತ ಅವನ ಫ್ರೆಂಡ್ ಕರ್ಕೊಂಡು ಹೋಗಿ ತೋರಿಸಿದ್ದಾನೆ. ಡಾಕ್ಟರ್ ಟೈಪಾಯಿಡ್ ಅಂತ ಹೇಳಿದ್ರು ಅಂತೇ. ಅವನ ಫ್ರೆಂಡ್ ಗೆ ಆಫೀಸ್ ಬೇರೆ ಇದೆ, ಲಿವ್ ಕೇಳಿದ್ರೆ ಆಫ್ ಡೇ ಅಷ್ಟೇ ಪರ್ಮಿಷನ್ ಕೊಟ್ರು ಅಂತೇ. ಇವಾಗ ಅವನು ಆಫೀಸ್ ಗೆ ಹೋಗಬೇಕು. ರೂಮ್ ಅಲ್ಲಿ ಇರೋಕೆ ಆಗಲ್ಲಾ, ಕರ್ಕೊಂಡು ಹೋಗಿ ಅವರ ಮನೇಲಿ ಬಿಡೋಕೆ ಹೇಳಿದ. ಅದಕ್ಕೆ ಕಾಲ್ ಮಾಡಿದ್ದ. ನಾನ್ ಸರ್ ಹತ್ತಿರ ಹೇಳಿ ಅವನನ್ನ ಅವನ ಮನೆಗೆ ಬಿಟ್ಟು ಬರ್ತೀನಿ ಅಂತ ಹೇಳಿ ಆಫೀಸ್ ಕಡೆಗೆ ಹೋಗ್ತಾನೆ.
ಪ್ರಿಯಾ ಮೊಬೈಲ್ ತೆಗೆದು ಅಭಿ ಗೆ ಕಾಲ್ ಮಾಡ್ತಾಳೆ.
*****
ನಿರಂಜನ್ ಆಫೀಸ್ ರೂಮ್ ಹತ್ತಿರ ಬರ್ತಾನೇ, ವಿಶ್ವನಾಥ್ ನಿರಂಜನ್ ನಾ ನೋಡಿ ಅ ನಿರಂಜನ್ ಹೇಳು ಏನ್ ಬಂದಿದ್ದು.
ನಿರಂಜನ್,,, ಸರ್ ಅಭಿ ಕಾಲ್ ಮಾಡಿದ್ದ ಹಾಸ್ಪಿಟಲ್ ಅಲ್ಲಿ ಇದ್ದಾನೆ ಅಂತೇ, ಡಾಕ್ಟರ್ ಟೈಪಾಯಿಡ್ ಫೀವರ್ ಅಂತ ಹೇಳಿದ್ರು ಮನೆಗೆ ಕರ್ಕೊಂಡು ಹೋಗಿ ಬಿಡೋಕೆ ಹೇಳಿದ ಅದಕ್ಕೆ ನಿಮಗೆ ಹೇಳಿ ಹೋಗೋಣ ಅಂತ ಬಂದೆ.
ವಿಶ್ವ, ನಯನಾ ಇಬ್ಬರು ಗಾಬರಿ ಆಗ್ತಾರೆ.
ವಿಶ್ವ,,, ಹೌದ ಯಾವ್ ಹಾಸ್ಪಿಟಲ್.
ನಿರಂಜನ್,,, ಹಾಸ್ಪಿಟಲ್ ಹೆಸರು ಹೇಳ್ತಾನೆ.
ವಿಶ್ವ,,, ಬೈಕ್ ಅಲ್ಲಿ ಬೇಡ ನಾನೆ ಹೋಗಿ ಕಾರ್ ಅಲ್ಲಿ ಮನೆಗೆ ಬಿಟ್ಟು ಬರ್ತೀನಿ ನೀವು ನೋಡ್ಕೊಳಿ ಅಂತ ಎದ್ದು ಆಫೀಸ್ ರೂಮಿಂದ ಹೊರಗೆ ಬರ್ತಾನೇ.
ನಯನಾ ಕೂಡ ಅಪ್ಪನ ಹಿಂದೆ ಬರ್ತಾಳೆ.ವಿಶ್ವ, ಪ್ರಿಯಾ ನಿರಂಜನ್ ಗೆ ಹೇಳಿ ನಯನಾ ಜೊತೆಗೆ ಕಾರ್ ಅಲ್ಲಿ ಹಾಸ್ಪಿಟಲ್ ಕಡೆಗೆ ಹೋಗ್ತಾರೆ..
ಸ್ವಲ್ಪ ಸಮಯದ ನಂತರ ಇಬ್ಬರು ಹಾಸ್ಪಿಟಲ್ ಹತ್ತಿರ ಬರ್ತಾರೆ.. ಅಲ್ಲಿ ಹೋಗಿ ನರ್ಸ್ ನಾ ಅಭಿ ಬಗ್ಗೆ ಕೇಳ್ತಾರೆ. ಅವರು ಅಭಿ ಇರೋ ಪ್ಲೇಸ್ ಹೇಳ್ತಾರೆ. ಇಬ್ಬರು ಅಭಿ ಇರೋ ಬೆಡ್ ಹತ್ತಿರ ಬರ್ತಾರೆ. ಅಭಿ ಕಣ್ ಮುಚ್ಚಿಕೊಂಡು ಬೆಡ್ ಮೇಲೆ ಮಲಗಿರ್ತಾನೆ. ಅಭಿ ನಾ ನೋಡಿ ನಯನಾ ಕಣ್ಣಲ್ಲಿ ಕಣ್ಣೀರು ತುಂಬಿಕೊಳ್ಳುತ್ತೇ ಮನಸ್ಸಿಗೆ ನೋವಾಗುತ್ತೆ.
ವಿಶ್ವ,,, ಅಭಿ ಹತ್ತಿರ ಹೋಗಿ ಕುತ್ಕೊಂಡು ಅಭಿ ಅಂತ ಕರೀತಾರೆ.
ಕಣ್ ಮುಚ್ಚಿ ಮಲಗಿದ್ದ ಅಭಿ ಕಣ್ ಬಿಟ್ಟು ನೋಡ್ತಾನೆ, ವಿಶ್ವ ನಾ ನೋಡಿ ಸರ್ ನೀವು ಇಲ್ಲಿ ಅಂತ ಕೇಳ್ತಾನೆ.
ವಿಶ್ವ,,, ಯಾಕ್ ನಾನ್ ಬರಬಾರ್ದಿತ್ತ?
ಅಭಿ,,, ಅದು ಹಾಗಲ್ಲ ಸರ್. ನಿಮಗೆ ಯಾಕೆ ತೊಂದ್ರೆ ಅಂತ,
ವಿಶ್ವ,,, ಅಭಿ ನಾನೇನ್ ಬೇರೆಯವನ ಹೇಳು. ಇವತ್ತು ನನ್ನಾ ಪ್ರಾಣ ಉಳಿದಿರೋದೇ ನಿನ್ನಿಂದ. ಅಂತದ್ರಲ್ಲಿ ನೀನು ಈ ರೀತಿ ಇದ್ರೆ ನಾನ್ ಹೇಗೆ ನೋಡ್ಕೊಂಡು ಸುಮ್ನೆ ಇರಲಿ ಹೇಳು. ಬೆಳಿಗ್ಗೆ ಯಿಂದ ನಿನಗೆ ತುಂಬಾ ಸರಿ ಕಾಲ್ ಮಾಡಿದೆ ರಿಚ್ ಆಗಲಿಲ್ಲ, ಮನೆಗೆ ಹೋಗಿರ್ತೀಯಾ ಅನ್ಕೊಂಡು, ನಿರಂಜನ್ ಗೆ ನಿನ್ನ ನೋಡ್ಕೊಂಡು ಬರೋಕೆ ಹೇಳ್ದೆ. ಆಮೇಲೆ ನೀನೇ ಕಾಲ್ ಮಾಡಿದೆ.
*ಅಭಿ ವಿಶ್ವ ಇಬ್ಬರು ಮಾತಾಡ್ತಾ ಇರೋವಾಗ ನಯನಾ ಅಭಿ ನಾ ನೋಡ್ತಾನೆ ಇದ್ದು ಬಿಡ್ತಾಳೆ *
ಇಬ್ಬರು ಮಾತಾಡ್ತಾ ಇರೋವಾಗ ಡಾಕ್ಟರ್ ಬರ್ತಾರೆ. ಡಾಕ್ಟರ್ ವಿಶ್ವ ನಯನಾ ನಾ ನೋಡಿ ನೀವು ಅಂತ ಕೇಳ್ತಾನೆ.
ನಯನಾ,,, ಡಾಕ್ಟರ್ ಇವರು ನನ್ನ ತಂದೆ. ಅಭಿ ನಾ ನೋಡಿಸಿ ನಾನು ಅವರ ಹೆಂಡತಿ ಅಂತ ಹೇಳ್ತಾಳೆ.
ವಿಶ್ವ ಗೆ ಮಗಳು ಹಾಗೇ ಹೇಳಿದ್ದನ್ನ ಕೇಳಿ ತುಂಬಾ ಸಂತೋಷ ಮತ್ತೆ ಆಶ್ಚರ್ಯ ಕೂಡ ಆಗ್ತಾ ಮಗಳನ್ನೇ ನೋಡ್ತಾ ಇದ್ದು ಬಿಡ್ತಾರೆ.
ಅಭಿ ನಯನಾ ಹಾಗೇ ಹೇಳಿದ್ರು ಅವಳ ಕಡೆಗೆ ಕಣ್ಣೆತ್ತಿ ಕೂಡ ನೋಡೋದಿಲ್ಲ
ಡಾಕ್ಟರ್,,, ನೀವು ಅವರ ವೈಫ್ ಅ, ಗುಡ್ ಅಂತ ಮೆಡಿಸಿನ್ ಸ್ಲಿಪ್ ನಾ ಅವರ ಕೈಗೆ ಕೊಟ್ಟು, ಇದರಲ್ಲಿ ಮೆಡಿಸಿನ್ ಬರೆದಿದ್ದೀನಿ ಟೈಮ್ ಸರಿಯಾಗಿ ಕೊಡೀ, ರೈಸ್ ಐಟಂ ಕೊಡಬೇಡಿ. 3 ಡೇಸ್ 2 ಟೈಮ್ಸ್ ಡ್ರಿಪ್ಸ್ ಹಾಕಿಸಬೇಕು. ಇಲ್ಲಿಗೆ ಕರ್ಕೊಂಡು ಬನ್ನಿ. ಇವಾಗ ಕರ್ಕೊಂಡು ಹೋಗಿ ತಿಂಡಿ ಏನಾದ್ರು ಬೇಕು ಅಂದ್ರೆ ಕೊಡಿ.
ನಯನಾ,,, ಓಕೆ ಡಾಕ್ಟರ್, ಬಿಲ್ ಎಷ್ಟಾಯ್ತು?
ಡಾಕ್ಟರ್,,, ಬಿಲ್ ಆಲ್ರೆಡಿ ಪೆ ಮಾಡಿದ್ದಾರೆ ನೀವು ಮೆಡಿಸಿನ್ ತಗೊಂಡು ಹೋಗಿ ಅಷ್ಟೇ ಸಾಕು ಅಂತ ಹೇಳಿ ಹೊರಟು ಹೋಗ್ತಾರೆ.
ವಿಶ್ವ,,,, ನಯನಾ ಕಡೆಗೆ ನೋಡ್ತಾ ಸ್ಲಿಪ್ ತಗೊಂಡು ನಾನ್ ಮೆಡಿಸಿನ್ ತಗೋ ಬರ್ತೀನಿ ನೀನು ಅಭಿ ನಾ ಕಾರ್ ಹತ್ತಿರ ಕರ್ಕೊಂಡು ಬಾ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ.
ಡಾಕ್ಟರ್ ಹತ್ತಿರ ಹೇಳೋದೇನೋ ಧೈರ್ಯವಾಗಿ ಹೇಳಿದ್ಲು ಬಟ್ ಈಗ ಅಭಿ ನಾ ಇಡ್ಕೊಂಡು ಕರ್ಕೊಂಡು ಹೋಗಬೇಕು, ಅದನ್ನ ನೆನೆಸಿಕೊಂಡು ಕೈ ಕಾಲು ನಡುಗೋಕೆ ಶುರು ಆಗುತ್ತೆ.
ಅಭಿ ಅವನೇ ಬೆಡ್ ಮೇಲಿಂದ ಎದ್ದೇಳೋಕೆ ಹೋಗ್ತಾನೆ, ಬಟ್ ಅವನಿಗೆ ಸ್ವಲ್ಪ ಕಷ್ಟ ಆಗುತ್ತೆ. ಹಾಗೋ ಇಗೋ ಕಷ್ಟ ಪಟ್ಟು ಎದ್ದು ಕೂತ್ಕೋಳ್ಳೋಕೆ ಪ್ರಯತ್ನ ಪಡ್ತಾ ಎದ್ದು ಕೂತ್ಕೋತಾನೆ. ಬಟ್ ಎದ್ದು ನಿಲ್ಲೋವಾಗ ಅವನಿಗೆ ಸ್ವಲ್ಪ ಕಷ್ಟ ಆಗುತ್ತೆ. ಪಕ್ಕದ ಬೆಡ್ ವ್ಯಕ್ತಿ ಹತ್ತಿರ ಕೂತಿದ್ದ ಮಹಿಳೆ ಅಭಿ ಕಷ್ಟ ನಾ ನೋಡಿ ನಯನಾ ಗೆ ಏನಮ್ಮ ಹೆಂಡತಿ ಅಂತೀಯಾ ಅಷ್ಟು ಕಷ್ಟ ಪಡ್ತಾ ಇದ್ದಾನೆ ಹೆಲ್ಪ್ ಮಾಡಬಾರದ ಅಂತ ಹೇಳ್ತಾಳೆ.
ನಯನಾ ತಕ್ಷಣ ಓಡಿ ಬಂದು ಅಭಿ ಭುಜ ನಾ ಇಡ್ಕೊಂಡು ಅಭಿ ಗೆ ಎದ್ದೇಳೋಕೆ ಸಹಾಯ ಮಾಡೋಣ ಅಂತ ಬರ್ತಾಳೆ. ಬಟ್ ಅಭಿ ಬೇಡ ಅನ್ನೋತರ ಕೈ ಮುಂದೆ ಮಾಡಿ ಹೇಳ್ತಾನೆ. ನಯನಾ ಮನಸ್ಸಿಗೆ ಅ ಕ್ಷಣ ಒಂದೇ ವಿಷಯ ಬರುತ್ತೆ. ಈ ಕ್ಷಣ ನನ್ನ ಮನಸಾರೆ ಇಷ್ಟಪಟ್ಟು ಇವನ ಕೈ ಇಡ್ಕೋತ ಇದ್ದೀನಿ. ಕಷ್ಟ ಸುಖ ಏನೇ ಇದ್ರು ಇನ್ನುಮುಂದೆ ಇವನ ಜೊತೇನೆ. ಇವನ ಜೊತೆ ನೇ ನನ್ನ ಜೀವನ. ಅಂತ ನಿರ್ಧಾರ ಮಾಡಿ, ಅಭಿ ತಡೆದ ಕೈ ನಾ ಇಡಿದುಕೊಂಡು ಭುಜನ ಇಡ್ಕೊಂಡು ಎದ್ದೇಳೋಕೆ ಸಹಾಯ ಮಾಡ್ತಾಳೆ. ಅಭಿ ಅ ಕ್ಷಣ ನಯನಾ ಮುಖ ನೋಡ್ತಾನೆ. ನಯನಾ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಇರೋದನ್ನ ನೋಡ್ತಾನೆ. ಏನು ಮಾತಾಡದೆ ಅವಳ ಜೊತೆಗೆ ನಡೆದುಕೊಂಡು ಕಾರ್ ಹತ್ತಿರ ಬರ್ತಾನೇ.
ವಿಶ್ವ ಇಬ್ಬರನ್ನು ನೋಡ್ತಾ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮನಸಲ್ಲೇ ಖುಷಿ ಪಡ್ತಾ ದೇವರಿಗೆ ಥ್ಯಾಂಕ್ಸ್ ಹೇಳ್ತಾರೆ.
ಕಾರ್ ಹತ್ತಿರ ಬಂದಮೇಲೆ ಅಭಿ ಕಾರ್ ಡೋರ್ ನಾ ಓಪನ್ ಮಾಡೋಕೆ ಕೈ ಮುಂದೆ ಮಾಡ್ತಾನೆ. ಬಟ್ ಕೈಗೆ ಡ್ರಿಪ್ಸ್ ಇಂಜೆಕ್ಷನ್ ಇರೋದ್ರಿಂದ ಆಗೋದು ಇಲ್ಲಾ. ಅದನ್ನ ನೋಡಿದ ನಯನಾ ನೇ ಕಾರ್ ಡೋರ್ ನಾ ಓಪನ್ ಮಾಡಿ ಹಿಂದೆ ಸೀಟ್ ಅಲ್ಲಿ ಅಭಿ ನಾ ಕುರಿಸ್ತಾಳೆ. ಕಾರ್ ಹತ್ತಿರ ಬಂದ ವಿಶ್ವ.. ನಯನಾ ಗೆ ಹಿಂದೇನೆ ಕೂತ್ಕೋಳ್ಳೋಕೆ ಹೇಳಿ ಡ್ರೈವಿಂಗ್ ಸೀಟ್ ಅಲ್ಲಿ ಕೂತ್ಕೋತಾರೆ. ನಯನಾ ಅಭಿ ಪಕ್ಕದಲ್ಲಿ ಕೂತ್ಕೊಂಡು. ಕಾರ್ ಡೋರ್ ಹಾಕಿ ಅಭಿ ಮುಖ ನೋಡ್ತಾಳೆ. ಅಭಿ ಸೀಟ್ ಗೆ ತಲೆ ನಾ ಹೊರಗಿಸಿಕೊಂಡು ಕಣ್ ಮುಚ್ಚಿಕೊಂಡು ಇರ್ತಾನೆ.
ವಿಶ್ವ,,, ನಯನಾ ಹೋಗೋಣ್ವಾ
ನಯನಾ,,, ಹ್ಮ್ ಹೋಗೋಣ ಅಪ್ಪ.
ವಿಶ್ವ ಕಾರ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಮನೆ ಕಡೆಗೆ ಬರ್ತಾರೆ. ಸ್ವಲ್ಪ ಸಮಯದ ನಂತರ ವಿಶ್ವನಾಥ್ ಮನೆ ಹತ್ತಿರ ಬಂದು ಕಾರ್ ನಾ ನಿಲ್ಲಿಸ್ತಾರೆ. ನಯನಾ ಅಭಿ ಕಡೆಗೆ ನೋಡ್ತಾಳೆ. ಅಭಿ ಇನ್ನು ಹಾಗೇ ಕಣ್ಮುಚ್ಚಿ ಕೊಂಡು ಇರೋದನ್ನ ನೋಡಿ, ಮೊದಲ ಸರಿ ಇಷ್ಟಪಟ್ಟು ಅಭಿ ಅಂತ ಕರೀತಾಳೆ. ಅಭಿ ಗೆ ಅದು ಕೇಳಿಸೋದಿಲ್ಲ. ನಯನಾ ಅಭಿ ಭುಜನ ಆಡಿಸ್ತಾ ಅಭಿ ಅಭಿ ಅಂತ ಕರೀತಾಳೆ. ಅಭಿ ಗೆ ಹೆಚ್ಚರ ಆಗುತ್ತೆ ಕಣ್ ಬಿಟ್ಟು ನಯನಾ ಕಡೆಗೆ ನೋಡ್ತಾನೆ. ನಯನಾ,,, ಅಭಿ ಮನೆ ಬಂತು ಅಂತ ಹೇಳಿ ಕಾರ್ ಡೋರ್ ಒಪನ್ ಮಾಡಿಕೊಂಡು ಅಭಿ ಕೂತಿದ್ದ ಸೈಡ್ ಕಾರ್ ಡೋರ್ ಒಪನ್ ಮಾಡ್ತಾ ಅಭಿಗೆ ಹೊರಗೆ ಬರೋಕೆ ಸಹಾಯ ಮಾಡ್ತಾಳೇ. ನಂತರ ಅಭಿ ಭುಜ ಇಡ್ಕೊಂಡು ಮನೆ ಒಳಗೆ ಕರ್ಕೊಂಡು ಬರ್ತಾಳೆ. ವಿಶ್ವ ಅವರಿಬ್ಬರನ್ನು ನೋಡ್ತಾ ಸಂತೋಷ ಪಡ್ತಾ ಹಿಂದೇನೆ ಬರ್ತಾ ಇರ್ತಾರೆ.
ಹಾಲ್ ಅಲ್ಲಿ ಮೊಮ್ಮಗಳ ಜೊತೆಗೆ ಆಟವಡ್ತಾ ಇದ್ದಾ ಸುಭದ್ರ. ಅಭಿ ನಯನಾ ಬರೋದನ್ನ ನೋಡ್ತಾರೆ. ಸುಭದ್ರ ಗೆ ಎಷ್ಟು ಸಂತೋಷ ಆಗುತ್ತೆ ಅಂದ್ರೆ ಅವರಿಬ್ಬರನ್ನ ಹಾಗೇ ನೋಡಿ, ಅವರ ಕಣ್ಣಲ್ಲಿ ಕಣ್ಣೀರು ತುಂಬಿಕೊಳ್ಳುತ್ತೇ. ಅನಾ,,, ಪಪ್ಪಾ ಅಂತ ಓಡಿ ಅವರ ಹತ್ತಿರ ಬರ್ತಾಳೆ. ಸುಭದ್ರ ಕೂಡ ಅವರ ಹತ್ತಿರ ಬಂದು ನಯನಾ ಏನಾಯ್ತು ಅಭಿ ಗೆ ಅಂತ ಕೇಳ್ತಾರೇ. ನಯನಾ ಅಮ್ಮ ಫೀವರ್ ಜಾಸ್ತಿ ಆಗಿ ಟೈಪಾಯಿಡ್ ಆಗಿದೆ. ಇವಾಗ ಪರ್ವಾಗಿಲ್ಲ ಅಂತ ಹೇಳ್ತಾಳೆ. ಸುಭದ್ರ ಗೆ ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ ಕೂಡ ಆಗುತ್ತೆ. ಬಾಮ್ಮ ಸೋಫಾ ಮೇಲೆ ಕುರಿಸು ಅಂತ ಹೇಳ್ತಾರೆ. ನಯನಾ,, ಬೇಡ ಅಮ್ಮ ಸ್ವಲ್ಪ ಟೈಡ್ ಆಗಿದ್ದಾರೆ, ಕಾರ್ ಅಲ್ಲಿ ಕೂಡ ನಿದ್ದೆ ಮಾಡಿ ಬಿಟ್ಟಿದ್ರು. ನಾನ್ ಕರ್ಕೊಂಡು ಹೋಗಿ ರೂಮ್ ಅಲ್ಲಿ ಮಲಗಿಸಿ ಬರ್ತೀನಿ ಅಂತ ಹೇಳ್ತಾ ರೂಮ್ ಕಡೆಗೆ ಕರ್ಕೊಂಡು ಹೋಗೋಕೆ ಹೆಜ್ಜೆ ಇಡ್ತಾಳೆ. ಅನಾ,,, ಪಪ್ಪಾ ಹುಷಾರಿಲ್ವಾ ಬಾ ರೂಮ್ ಗೆ ಹೋಗಿ ಸ್ವಲ್ಪ ಹೊತ್ತು ರೆಸ್ಟ್ ಮಾಡು ಎಲ್ಲಾ ಸರಿ ಹೋಗುತ್ತೆ ಅಂತ ಇನ್ನೊಂದು ಕಡೆ ಅಭಿ ನಾ ಇಡ್ಕೊಂಡು ರೂಮ್ ಕಡೆಗೆ ಹೋಗ್ತಾರೆ.
ನಯನಾ ಅಭಿ ನಾ ಅವಳ ರೂಮ್ ಕಡೆಗೆ ಕರ್ಕೊಂಡು ಹೋಗೋದನ್ನ ನೋಡಿ,
ಅಭಿ,,,, ಬಂಗಾರ ಮೇಲೆ ರೂಮ್ ಗೆ ಕರ್ಕೊಂಡು ಹೋಗು.
ನಯನಾ ಗೆ ಈ ಮಾತನ್ನ ಕೇಳಿ ಕೆಟ್ಟ ಕೋಪ ಬರುತ್ತೆ. ತಕ್ಷಣ ಅಭಿ ಮಾತಿಗೆ ಸ್ವಲ್ಪ ಜೋರಾಗಿ ಅಮ್ಮ ಮೇಲೆ ರೂಮ್ ಅಲ್ಲಿ ಇರೋ ನಿನ್ನ ಅಳಿಯ ನಾ ಬಟ್ಟೆಗಳನ್ನ ಎಲ್ಲಾ ಕೆಳಗೆ ನಮ್ ರೂಮ್ ಗೆ ತಂದು ಇಡೋಕೆ ಆಮೇಲೆ ನನಗೆ ಸ್ವಲ್ಪ ಸಹಾಯ ಮಾಡಮ್ಮ. ಅಂತ ಹೇಳ್ತಾ ಅಭಿ ನಾ ಅವಳ ರೂಮ್ ಒಳಗೆ ಕರ್ಕೊಂಡು ಹೋಗ್ತಾಳೆ. ಅಭಿ ಏನು ಮಾತನಾಡದೆ ಸೈಲೆಂಟ್ ಆಗಿ ಬಿಡ್ತಾನೆ.
ಮಗಳು ಹಾಗೇ ಹೇಳಿದ್ದನ್ನ ಕೇಳಿ ಸುಭದ್ರ ಕಣ್ಣಲ್ಲಿ ತಡೆದು ಕೊಂಡು ಇದ್ದಾ ಕಣ್ಣಿರೆಲ್ಲ ಹೊರಗೆ ಬರೋಕೆ ಶುರುವಾಗುತ್ತೆ. ವಿಶ್ವ,,,ಸುಭದ್ರ ಕಡೆಗೆ ನೋಡ್ತಾ ಯಾಕೆ ಅಳ್ತಾ ಇದ್ದಿಯಾ.
ಸುಭದ್ರ,,, ರೀ ನಾನೇನು ಕನಸು ಕಾಣ್ತಾ ಇಲ್ಲಾ ಅಲ್ವಾ.
ವಿಶ್ವ,,, ನಗ್ತಾ ಇಲ್ಲಾ. ನಿನ್ ಏನ್ ನೋಡ್ತಾ ಇದ್ದಿಯಾ ಅದೆಲ್ಲಾ ಸತ್ಯ.
ಸುಭದ್ರ,,, ವಿಶ್ವ ನಾ ತಬ್ಬಿಕೊಂಡು ನನ್ನಾ ಮನಸಿಗೆ ಎಷ್ಟು ಸಂತೋಷ ಆಗ್ತಾ ಇದೆ ಅಂದ್ರೆ ಅದನ್ನ ಮಾತಲ್ಲಿ ಹೇಳೋಕೆ ಆಗ್ತಾ ಇಲ್ಲಾ. ಅಂತು ದೇವ್ರು ನಮ್ಮ ನೋವನ್ನ ಅರ್ಥ ಮಾಡಿಕೊಂಡ.
ವಿಶ್ವ,,,, ಸುಭದ್ರ ಗೆ ಸಮಾಧಾನ ಮಾಡ್ತಾ ಆಗೋದೆಲ್ಲ ಒಳ್ಳೇದಕ್ಕೆ ನೀನೇನು ಕಣ್ಣೀರು ಹಾಕಬೇಡ.
ನಯನಾ ಅಭಿ ನಾ ಬೆಡ್ ಮೇಲೆ ಮಲಗಿಸಿ, ರೀ ನೀವು ರೆಸ್ಟ್ ಮಾಡಿ, ನಾನೊಗಿ ತಿಂಡಿ ಮಾಡ್ಕೊಂಡು ಬರ್ತೀನಿ ಅಂತ ಹೇಳಿ. ಬಂಗಾರಿ ಪಪ್ಪಾ ರೆಸ್ಟ್ ಮಾಡ್ಲಿ ಬಾ ನಾವು ಹೋಗಿ ಪಪ್ಪಾ ಗೆ ತಿಂಡಿ ಮಾಡ್ಕೊಂಡು ಬರೋಣ ಅಂತ ಹೇಳ್ತಾಳೆ..
ಅನಾ ಅಭಿ ಹಣೆಗೆ ಮುತ್ತೊಂದನ್ನ ಕೊಟ್ಟು ಪಪ್ಪಾ ರೆಸ್ಟ್ ಮಾಡು ನಿನಗೋಸ್ಕರ ತಿಂಡಿ ಮಾಡ್ಕೊಂಡು ಬರ್ತೀವಿ ಅಂತ ಹೇಳಿ. ಅಮ್ಮ ನಡಿ ಹೋಗೋನಾ ಅಂತ ಹೇಳಿ ನಯನಾ ಕೈ ಇಡ್ಕೊಂಡು ರೂಮಿಂದ ಹೊರಗೆ ಬರ್ತಾ ರೂಮ್ ಡೋರ್ ಕ್ಲೋಸ್ ಮಾಡಿಕೊಂಡು ಹಾಲ್ ಗೆ ಬರ್ತಾರೆ.
ವಿಶ್ವನಾಥ್ ಸುಭದ್ರ ಇಬ್ಬರು ಹಾಲ್ ಅಲ್ಲಿ ಸೋಫಾ ಮೇಲೆ ಕೂತ್ಕೊಂಡು, ಏನೋ ಮಾತಾಡ್ತಾ ಇರ್ತಾರೆ. ನಯನಾ ಬರೋದನ್ನ ನೋಡಿ, ಸುಭದ್ರ ಎದ್ದು ನಿಂತು ನಯನಾ ನಾ ಗಟ್ಟಿಯಾಗಿ ತಬ್ಬಿಕೊಂಡು, ತುಂಬಾ ಸಂತೋಷ ಆಗ್ತಾ ಇದೆ ನಯನಾ, ಇಷ್ಟು ವರ್ಷದ ನನ್ನ ನೋವು ಅ ದೇವರಿಗೆ ಈಗ ಅರ್ಥ ಆಗಿದೆ, ನಿಮ್ಮಿಬ್ಬರನ್ನ ಹೀಗೆ ನೋಡಿ ಖುಷಿ ಆಗ್ತಾ ಇದೆ. ಇನ್ನು ಮುಂದೆ ನೀವಿಬ್ರು ಇಷ್ಟೇ ಸಂತೋಷ ವಾಗಿ ಖುಷಿಯಾಗಿ ಇರಿ. ಇದಕ್ಕಿಂತ ಬೇರೇನೂ ಬೇಕಾಗಿಲ್ಲ ನಮಗೆ ಅಂತ ಹೇಳ್ತಾ ಅವಳ ಹಣೆಗೆ ಮುತ್ತೊಂದನ್ನ ಕೊಡ್ತಾರೆ.
ನಯನಾ,,, ಅಮ್ಮ ಅಭಿ ನಾ ಅರ್ಥ ಮಾಡ್ಕೊಳ್ಳದೇ ದುಡಿಕಿ ಬಿಟ್ಟೆ. ಈಗ ಅವನು ಏನು ಅಂತ ನನಗೆ ಅರ್ಥ ಆಯ್ತು. ಈಗ ನಿನ್ನ ಜೊತೆಗೆ ಮಾತಾಡೋ ಟೈಮ್ ಇಲ್ಲಾ ಡಾಕ್ಟರ್ ಅಭಿ ಗೆ ತಿಂಡಿ ಕೊಡೋಕೆ ಹೇಳಿದ್ರು ನಾನು ನನ್ನ ಮಗಳು ಹೋಗಿ ಅಭಿ ಗೆ ತಿಂಡಿ ಮಾಡಬೇಕು ಅಂತ ಹೇಳಿ ಮಗಳನ್ನ ಕರ್ಕೊಂಡು ಅಡುಗೆ ಮನೆ ಕಡೆಗೆ ಹೋಗ್ತಾಳೆ.
ವಿಶ್ವ.. ಸುಭದ್ರ ನಾನು ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ.
ರೂಮ್ ಅಲ್ಲಿ ಬೆಡ್ ಮೇಲೆ ಮಲಗಿದ್ದ ಅಭಿ ಗೆ ಸಾವಿರ ಪ್ರಶ್ನೆ ಕಾಡೋಕೆ ಶುರು ಆಗುತ್ತೆ. ಅವನು ಇಲ್ಲಿಗೆ ಬಂದ ಕಾರಣ ಬೇರೆ, ಉದ್ದೇಶ ಬೇರೆ ಅದ್ರೆ ಈಗ ನಯನಾ ಈ ರೀತಿ ಮಾತಾಡೋದು ಅವಳಲ್ಲಿ ಬದಲಾದ ವರ್ತನೆ. ಅಭಿ ಗೆ ಮತ್ತೊಂದು ರೀತಿ ಸಮಸ್ಯೆ ಬರೋ ತರ ಕಾಡ್ತಾ ಇದೆ ಅದೇ ಯೋಚ್ನೆ ಅಲ್ಲೇ ಕಣ್ ಮುಚ್ಚಿ ಕೊಳ್ತಾನೆ.
@@@@@@@@@@@@@@@@@@@@@@@@@