Abhinayanaa - 3 in Kannada Love Stories by S Pr books and stories PDF | ಅಭಿನಯನಾ - 3

The Author
Featured Books
Categories
Share

ಅಭಿನಯನಾ - 3

    ನಯನಾ ಮಗಳಿಗೆ ಊಟ ಮಾಡಿಸ್ತಾ ಅಮ್ಮನ ಜೊತೆಗೆ ಮಾತಾಡ್ತಾ ಇರ್ತಾಳೆ. ಸುಭದ್ರ ಅವರು ಊಟ ಮಾಡ್ತಾ ಮಗಳ ಜೊತೆಗೆ ಮತ್ತೆ ಮೊಮ್ಮಗಳ ಜೊತೆಗೆ ಮಾತಾಡ್ತಾ ಇರ್ತಾರೆ. 

ಅನಾ,,, ಮುದ್ದು ಮುದ್ದಾಗಿ ಅಜ್ಜಿ ನೀನು ಯಾವಾಗೂ ಯಾಕೆ ತಾತ ಊಟ ಮಾಡೋವರೆಗೂ ಊಟ ಮಾಡಲ್ಲ ತಿಂಡಿ ತಿನ್ನಲ್ಲ.

ಸುಭದ್ರ,,, ಮೊಮ್ಮಗಳ ಮಾತಿಗೆ, ಯಾಕೆ ಅಂದ್ರೆ ಅವರು ನನ್ನ ಗಂಡ, ಅವರು ನನಗೆ ಯಾವುದೇ ಕಷ್ಟ ಬಾರದ ಹಾಗೇ ತುಂಬಾ ಪ್ರೀತಿ ಯಿಂದ ನೋಡ್ಕೋತಾರೆ, ನಾನು ಅವರನ್ನ ಅಷ್ಟೇ ಪ್ರೀತಿಯಿಂದ ನೋಡ್ಕೋಬೇಕು ಅಲ್ವಾ, ಅದಕ್ಕೆ ಏನೇ ಇದ್ರು ಅವರ ನಂತರ ನನಗೆ. 

ಅನಾ,,, ಹೌದ? ಮತ್ತೆ ಪಪ್ಪಾ ಯಾಕೆ ಮನೇಲಿ ಒಂದು ದಿನ ಕೂಡ ಊಟ ತಿಂಡಿ ಏನು ಮಾಡಲ್ಲ. ಅಮ್ಮ ಮಾತ್ರ ಪಪ್ಪಾ ಬರಲಿ ಬರದೇ ಇರಲಿ. ಊಟ ಮಾಡ್ತಾರೆ ತಿಂಡಿ ತಿಂತಾರೆ. ಪಪ್ಪಾ ಅಮ್ಮನ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ. ಇಲ್ಲಾ ಅಮ್ಮ ಪಪ್ಪಾ ನಾ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ ಅಂತ ಕೇಳ್ತಾ ಅಮ್ಮನ ಮುಖ ನೋಡ್ತಾ ಅಜ್ಜಿ ಮುಖ ನೋಡ್ತಾಳೆ.

ಮೊಮ್ಮಗಳು ಈ ರೀತಿ ಪ್ರಶ್ನೆ ಕೇಳ್ತಾಳೆ ಅಂತ ಊಹಿಸದ ಸುಭದ್ರ ಅವರು ಮೊಮ್ಮಗಳು ಕೇಳಿದ ಪ್ರಶ್ನೆ ನಾ ಕೇಳಿ ಏನ್ ಉತ್ತರ ಕೊಡಬೇಕು ಅಂತ ಅರ್ಥ ಆಗದೆ ಸಂಕಷ್ಟಕ್ಕೆ ಸಿಕ್ಕಿ ಹಾಕಿ ಕೊಳ್ತಾರೆ. 

ಮತ್ತೆ ಅನಾ ಮಾತಾಡ್ತಾ,,, ಅಷ್ಟೇ ಅಲ್ಲ ಅಜ್ಜಿ, ನೀನು ತಾತ ಒಂದೇ ರೂಮ್ ಅಲ್ಲಿ ಮಲಗ್ತೀರಾ. ತಾತ ರಾತ್ರಿ ಮನೆಗೆ ಬರೋವರೆಗೂ ಕಾಯ್ತಾ ಇರ್ತೀರ. ಅಮ್ಮ ಮಾತ್ರ ಪಪ್ಪಾ ಬರದೇ ಇದ್ರು ರೂಮ್ ಗೆ ಹೋಗಿ ಮಲಗಿ ಕೊಳ್ತಾರೆ. ಪಪ್ಪಾ ಮೇಲೆ ರೂಮ್ ಅಲ್ಲಿ ಮಲಗಿದ್ರೆ ಅಮ್ಮ ಕೆಳಗೆ ಇರೋ ರೂಮ್ ಅಲ್ಲಿ ಮಲಗ್ತಾರೆ. ನನಗೆ ಪಪ್ಪಾ ಜೊತೆಗೆ ತುಂಬಾ ಹೊತ್ತು ಇರಬೇಕು ಅಂತ ಅನ್ನಿಸುತ್ತೆ. ಅವರ ಜೊತೆಗೆ ಆಟ ಆಡಬೇಕು, ಮತ್ತೆ ಅವರನ್ನ ಅಪ್ಪಿಕೊಂಡು ಮಲಗಬೇಕು ಅಂತ ಅನ್ನಿಸುತ್ತೆ. ಅದ್ರೆ ಅವರು ರಾತ್ರಿ ಲೇಟ್ ಆಗಿ ಬರ್ತಾರೆ. ಬೆಳಿಗ್ಗೆ ಸ್ವಲ್ಪ ಹೊತ್ತು ನನ್ನ ಜೊತೆಗೆ ಇದ್ದು ಕೆಲಸಕ್ಕೆ ಹೋಗಿ ಬಿಡ್ತಾರೆ. ಅಮ್ಮ ನಾನು ಇಬ್ರೇ ಇದ್ದು ಬಿಡ್ತಿವಿ. ಪಪ್ಪಾ ಅಮ್ಮ ಜೊತೆ ಕೂಡ ಮಾತಾಡಲ್ಲ, ಅಮ್ಮ ಕೂಡ ಪಪ್ಪಾ ಜೊತೆ ಮಾತಾಡಲ್ಲ. ಅದ್ರೆ ಇಬ್ರು ನನ್ನ ಜೊತೆಗೆ ತುಂಬಾ ಚೆನ್ನಾಗಿ ಮಾತಾಡ್ತಾರೆ. ಮುದ್ದು ಮಾಡ್ತಾರೆ. ಅಮ್ಮ ಟೈಮ್ ಸರಿಯಾಗಿ ನನಗೆ ಊಟ ಮಾಡಿಸ್ತಾರೆ. ನೀನು ತಾತ ತಿನ್ನೋವರೆಗೂ ಊಟ ತಿಂಡಿ ಏನು ತಿನ್ನಲ್ಲ. ತಾತ ಊಟ ತಿಂದ ಮೇಲೆ ಅಮ್ಮನ ಜೊತೆಗೆ ಕೂತು ಊಟ ತಿಂಡಿ ಮಾಡ್ತಿಯಾ. ನೀನು ತಾತ ನಾ ಚೆನ್ನಾಗಿ ನೋಡ್ಕೊತಿಯ. ಅಮ್ಮ ನನ್ನ ಚೆನ್ನಾಗಿ ನೋಡ್ಕೋತಾಳೆ. ಮತ್ತೆ ಪಪ್ಪಾ ನಾ ಯಾರು ಚೆನ್ನಾಗಿ ನೋಡ್ಕೋತಾರೆ. ಯಾಕೆ ಅವರಿಗೆ ಹೊಟ್ಟೆ ಹಸಿಯೋದಿಲ್ವಾ. ಊಟ ತಿಂಡಿ ಮಾಡೋದಿಲ್ವಾ. ಅಂತ ಕೇಳ್ತಾಳೆ.

ಸುಭದ್ರ,,, ಮೊಮ್ಮಗಳು ಇಷ್ಟೆಲ್ಲಾ ಹೇಳಿದ್ದನ್ನ ಕೇಳಿ ಏನ್ ಉತ್ತರ ಕೊಡಬೇಕು ಅನ್ನೋದು ಅರ್ಥ ಆಗೋದೇ ಇಲ್ಲಾ. ಮೊಮ್ಮಗಳ ಮಾತಲ್ಲಿ ಸತ್ಯ ಇದೆ ಅರ್ಥ ಇದೆ. ಮಕ್ಕಳು ದೇವರಿಗೆ ಸಮ ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಅಭಿ ಅವನ ಮನೇಲಿ ಇದ್ದಿದ್ರೆ ಅವರ ತಾಯಿ ಅವನಿಗೋಸ್ಕರ ಕಾಯ್ತಾ ಇರ್ತಾ ಇದ್ಲು. ಅವನಿಗೋಸ್ಕರ ಅಡುಗೆ ಮಾಡ್ತಾ ಅವನು ಊಟ ತಿಂಡಿ ಮಾಡೋವರೆಗೂ ಕಾಯ್ತಾ ಇದ್ಲು. ಬಲವಂತ ಮಾಡ್ತಾ ಇದ್ಲು. ಹೆತ್ತ ಕರುಳಿನ ನೋವು ಈ ಮುಗ್ದ ಮನಸ್ಸಿಗೆ ಅರ್ಥ ಆಗಿ ನನ್ನ ಪ್ರಶ್ನೆ ಕೇಳ್ತಾ ಇದೆ. ಏನಂತ ಉತ್ತರ ಕೊಡಲಿ ದೇವರೇ ಅಂತ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಊಟ ಮಾಡ್ತಾ ಇದ್ದವರು ತಟ್ಟೆ ನಾ ತೆಗೆದುಕೊಂಡು ಹೋಗಿ ಅಡುಗೆ ಮನೇಲಿ ಇಟ್ಟು ಕೈ ನಾ ತೊಳೆದುಕೊಂಡು. ರೂಮ್ ಕಡೆಗೆ ಹೋಗ್ತಾ ಡೈನಿಂಗ್ ಟೇಬಲ್ ಕಡೆಗೆ ನೋಡ್ತಾರೆ.  ನಯನಾ ಏನು ಮಾತನಾಡದೆ ಮೌನವಾಗಿ ಕೂತಿರೋದನ್ನ ನೋಡಿ ಕಣ್ಣೀರನ್ನ ಹೊರೆಸಿಕೊಂಡು ಅವರ ರೂಮ್ ಗೆ ಹೋಗತಾರೆ.

ಅನಾ,,,, ನಯನಾ ಕಡೆಗೆ ನೋಡ್ತಾ,,ಅಮ್ಮ ಅಜ್ಜಿ ಯಾಕೆ ಹಾಗೇ ಹೋದ್ರು. ನಾನ್ ಕೇಳಿದಕ್ಕೆ ಅವರು ಏನು ಹೇಳೇ ಇಲ್ಲಾ. 

ನಯನಾ,,,,ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಅನಾ ಮುಖ ನೋಡ್ತಾ, ಬಲವಂತವಾಗಿ ಮುಖದ ಮೇಲೆ ನಗು ನಾ ತಂದುಕೊಂಡು. ಚಿಕ್ಕದಾಗಿ ನಗ್ತಾ ನೀನು ತುಂಬಾ ದೊಡ್ಡ ಪ್ರಶ್ನೆ ಕೇಳಿದೆ ಅಲ್ವಾ ಅದಕ್ಕೆ ಅಜ್ಜಿ ಹತ್ತಿರ ಉತ್ತರ ಇದ್ದಿಲ್ಲ. ಅದಕ್ಕೆ ಹೊರಟು ಹೋದರು. ಸರಿ ಬಾ ಸ್ವಲ್ಪ ಹೊತ್ತು ನಿದ್ದೆ ಮಾಡಿವಂತೆ ಅಂತ ಹೇಳಿ ಅನಾ ನಾ ಎತ್ತಿಕೊಂಡು ರೂಮ್ ಗೆ ಹೋಗಿ ಅವಳನ್ನ ಬೆಡ್ ಮೇಲೆ ಮಲಗಿಸಿ, ಪಕ್ಕದಲ್ಲಿ ಮಲಗಿಕೊಂಡು ಜೋ ಮಾಡ್ತಾಳೆ. 

ಅನಾ,,, ಅಮ್ಮ ಪಪ್ಪಾ ಕೂಡ ನಮ್ ಜೊತೆಗೆ ಇದೆ ರೂಮ್ ಅಲ್ಲಿ ನಮ್ ಜೊತೆಗೆ ಇದ್ರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ ಅಮ್ಮ. ಒಂದು ದಿನ ನಿನ್ನ ಅಪ್ಪಿಕೊಂಡು ಮಲಗಿದ್ರೆ ಇನ್ನೊಂದು ದಿನ ಪಪ್ಪಾ ನಾ ಅಪ್ಪಿಕೊಂಡು ಮಲಗ್ತೀನಿ. ಅದ್ರೆ ಪಪ್ಪಾ ಇಲ್ಲಿಗೆ ಬರೋದೇ ಇಲ್ಲಾ. ನೀನು ಕೂಡ ಅವರ ಜೊತೆಗೆ ಮಾತಾಡೋದು ಇಲ್ಲಾ. ಪಪ್ಪಾ ಏನಾದ್ರು ಬ್ಯಾಡ್ ಬಾಯ್ ನಾ? 

ನಯನಾ,,, ಅನಾ ಪಪ್ಪಾ ಬಗ್ಗೆ ಹಾಗೆಲ್ಲ ಮಾತಾಡಬಾರದು, ಸರಿ ನಾ.

ಅನಾ,,, ಸಾರೀ ಅಮ್ಮ್ 

ನಯನಾ,,, ಗುಡ್ ಗರ್ಲ್ ಇವಾಗ ಕಣ್ ಮುಚ್ಕೊಂಡು ಮಲಕ್ಕೋ.

ಅನಾ ಕಣ್ ಮುಚ್ಚಿ ನಿದ್ದೆ ಮಾಡೋಕೆ ಶುರು ಮಾಡ್ತಾಳೆ...

ಸ್ವಲ್ಪ ಸಮಯದ ನಂತರ ಅನಾ ನಿದ್ದೆ ಮಾಡಿದ ಮೇಲೆ ನಯನಾ ಅನಾ ಕೇಳಿದರಾ ಬಗ್ಗೆ ಯೋಚ್ನೆ ಮಾಡ್ತಾ ಹಾಗೇ ಕಣ್ ಮುಚ್ಚುತಾಳೆ.

######

    ಸೂಪರ್ ಮಾರ್ಕೆಟ್ ಅಲ್ಲಿ ವಿಶ್ವನಾಥ್ ಬಿಲ್ ಕೌಂಟರ್ ಹತ್ತಿರ ಬರ್ತಾರೆ. ಅಭಿ ಪ್ರಿಯಾ ತೇಜು ಅವರ ಪಾಡಿಗೆ ಅವರು ಕೆಲಸ ಮಾಡ್ತಾ ಇರ್ತಾರೆ. 

ವಿಶ್ವನಾಥ್,,,, ಅಭಿ 

ಅಭಿ,,, ಅ ಸರ್ ಹೇಳಿ 

ವಿಶ್ವನಾಥ್,,, ಅಭಿ ನಾಳೆ ನಾನು ಇರೋದಿಲ್ಲ, ನನ್ನ ಮಗಳು ಬರ್ತಾಳೆ, ಏನಾದ್ರು ಎಮರ್ಜೆನ್ಸಿ ಇದ್ರೆ ನನ್ನ ಕಾಂಟಾಕ್ಟ್ ಮಾಡಿ.

ಅಭಿ,,, ಸರಿ ಸರ್. 

ವಿಶ್ವ,,, ಸರಿ ಅಭಿ ನಾನ್ ಹೊರಡ್ತೀನಿ ಹುಷಾರು ಅಂತ ಹೇಳಿ ಸೂಪರ್ ಮಾರ್ಕೆಟ್ ನಿಂದ ಹೊರಗಡೆ ಬಂದು ಅವರ ಕಾರ್ ಹತ್ತಿ ಹೊರಟು ಹೋಗ್ತಾರೆ. 

ಅಭಿ ಅವನ ಕೆಲಸದ ಕಡೆ ಗಮನ ಕೊಡ್ತಾನೆ....

########

ಮನೆಗೆ ಬಂದ ವಿಶ್ವನಾಥ್ ಫ್ರೆಷ್ ಅಪ್ ಆಗಿ ಬಂದು ಸೋಫಾ ಮೇಲೆ ಕೂತ್ಕೋತಾರೆ. ಸುಭದ್ರ ಗಂಡನಿಗೆ ಕಾಫಿ ಕೊಟ್ಟು ಪಕ್ಕದಲ್ಲಿ ಕೂತ್ಕೋತಾರೆ. 

ವಿಶ್ವ,,, ಕಾಫಿ ಸಿಪ್ ಮಾಡ್ತಾ ಏನಾಯ್ತು?

ಸುಭದ್ರ,,, ಅನಾ ಹೇಳಿದ ವಿಷಯ ಹೇಳ್ತಾರೆ.

ವಿಶ್ವ,,, ಹೆಂಡತಿ ಹೇಳಿದ್ದನ್ನ ಕೇಳಿ ಕಾಫಿ ಕಪ್ ಸೈಡ್ ಗೆ ಇಟ್ಟು,  ಪ್ರಶ್ನೆ ಶುರುವಾದ ಜಾಗದಲ್ಲೇ ಉತ್ತರ ಇದೆ, ಇದರಲ್ಲಿ ನೀನೇನು ಮಾತಾಡೋಕೆ ಹೋಗಬೇಡ, 

ಸುಭದ್ರ,,, ಸರಿ ಅಂತ ಹೇಳಿ ಕಾಫಿ ಕಪ್ ತೆಗೆದು ಕೊಂಡು ಅಡುಗೆ ಮನೆ ಕಡೆ ಹೋಗ್ತಾರೆ.

#####

ಪ್ರಿಯಾ ತೇಜು ಮೇಘ,,, ಟೈಮ್ ಆಯ್ತು ಕಣ್ರೋ ಹೋಗ್ತಿವಿ,  ನಾಳೆ ಸರ್ ಬರೋದಿಲ್ಲ ಅಂತ ಲೇಟ್ ಮಾಡಬೇಡಿ. ಅಂತ ಮುವ್ವರಿಗೂ ಬೈ ಹೇಳಿ ಹೊರಟು ಹೋಗ್ತಾರೆ.

ರಾಜ್,,,, ನಿರಂಜನ್ ನಾ ನೋಡಿ ಮಚ್ಚಾ ಕ್ಲೋಸ್ ಆದಮೇಲೆ ಸಿಟ್ಟಿಂಗ್ ಓಕೆ ನಾ.

ನಿರಂಜನ್,,, ಬೆಳಿಗ್ಗೆ ತಾನೇ ಏನೋ ಹೇಳ್ದೆ. ಮತ್ತೆ ಶುರು ನಾ 

ರಾಜ್,,, ಅದು ಬೇರೆ ಇದು ಬೇರೆ ಮಚ್ಚಾ 

ಅಭಿ,,, ಅದ್ರೆ ಹ್ಯಾಂಗ್ ಓವರ್ ಒಂದೇ ಅಲ್ವಾ ಮಚ್ಚಾ 

ರಾಜ್,,, ಮಿಕ್ಸ್ ಕುಡಿದ್ರೆ ಅಲ್ವಾ, ಇವತ್ತು ಏನಿದ್ರೂ ಒಂದೇ ಬ್ರಾಂಡ್ ಕುಡಿಯೋದು.

ನಿರಂಜನ್,,,  ನಿನ್ ಏನಾದ್ರು ಕುಡ್ಕೋ, ಬಿಲ್ ಮಾತ್ರ ನೀನೇ ಕೊಡಬೇಕು.

ರಾಜ್,,, ಆಯ್ತು,,,ನಂದೇ ಬಿಡೋ 

ಅಭಿ,,,, ಆಯ್ತು,,, ಮೊದಲು ಕೆಲಸ ನೋಡು ಹೋಗೋ ಅಂತ ಬೈದು ಕಳಿಸ್ತಾನೆ. 

ರಾತ್ರಿ 10 ಗಂಟೆ ಗೆ ಸೂಪರ್ ಮಾರ್ಕೆಟ್ ಕ್ಲೋಸ್ ಮಾಡಿ.  ಮೂರು ಜನ ಬೈಕ್ ಅಲ್ಲಿ ಬಾರ್ ಗೆ ಹೋಗಿ ಡ್ರಿಂಕ್ಸ್ ಮಾಡಿ ವಾಪಸ್ಸು ಮನೆ ಕಡೆಗೆ ಹೋಗೋಣ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಡ್ತಾರೆ. ಅಭಿ ಮನೆ ಹತ್ತಿರ ಬೈಕ್ ನಿಲ್ಲಿಸಿ ಮನೆ ಒಳಗೆ ಹೋಗೋಣ ಅಂತ ಮೇನ್ ಡೋರ್ ಹತ್ತಿರ ಬಂದು ಅವನ ಹತ್ತಿರ ಇದ್ದಾ ಕೀ ನಾ ಹುಡುಕ್ತಾ ಇರ್ತಾನೆ ಅಷ್ಟರಲ್ಲಿ ಮೇನ್ ಡೋರ್ ಓಪನ್ ಆಗುತ್ತೆ. ಅಭಿ ಕೀ ಹುಡುಕ್ತಾ ಇದ್ದವನು ಡೋರ್ ಕಡೆಗೆ ನೋಡ್ತಾನೆ. ಎದುರಿಗೆ ನಯನಾ. ನಯನಾ ನಾ ನೋಡಿ ಅಭಿ ಏನ್ ಮಾತನಾಡದೆ ಸೈಲೆಂಟ್ ಆಗಿ ಬಿಡ್ತಾನೆ.

ನಯನಾ ಡೋರ್ ಕ್ಲೋಸ್ ಮಾಡಿ. ಹೊರಗಡೆ ಬಂದು ಒಂದು ಸೈಡ್ ಗೋಡೆಗೆ ಹೊರಗಿ ನಿಂತು ಕೈ ಕಟ್ಟಿಕೊಂಡು. ಅಭಿ ಕಡೆಗೆ ನೋಡದೆ. ದಿನ ರಾತ್ರಿ ಈಗೆ ಕುಡ್ಕೊಂಡು ಎಷ್ಟೋತ್ತಲ್ಲಿ ಅಂದ್ರೆ ಅಷ್ಟೋತ್ತಲ್ಲಿ ಬರೋದು. ಅನಾ ಗೆ ಇಲ್ದೆ ಇರೋ ವಿಷಯ ನಾ ಎಲ್ಲಾ ಹೇಳಿ ಅವಳ ತಲೆಗೆ ತುಂಬಿಸೋದು ಮಾಡೋದು ಸರಿ ಇರಲ್ಲ. ಯಾರು ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇದ್ರೆ ಒಳ್ಳೇದು. ಅನಾ ನಾ ಅಡ್ಡ ಇಟ್ಟುಕೊಂಡು ನನ್ನ ತನಕ ಬರೋ ಪ್ರಯತ್ನ ಏನಾದ್ರು ಮಾಡಿದ್ರೆ ನಾನು ನನ್ನ ಮಗಳು ಯಾರ ಕಣ್ಣಿಗೂ ಕಾಣಿಸದ ಹಾಗೇ ಹೊರಟು ಹೋಗ್ತಿವಿ. ಇದೆ ಕೊನೆ ಯಾರು ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇದ್ರೆ ಎಲ್ಲರಿಗೂ ಒಳ್ಳೇದು ಅಂತ ಹೇಳಿ  ಡೋರ್ ಓಪನ್ ಮಾಡಿಕೊಂಡು ಮನೆ ಒಳಗೆ ಹೋಗ್ತಾಳೆ. 

 ಅಭಿ ನಯನಾ ಮಾತಾಡಿದ್ದ ಅಲ್ಲೇ ನಿಂತು ಕೇಳಿಸಿಕೊಂಡು ಏನು ಮಾತನಾಡದೆ,  ವಾಪಸ್ಸು ಬೈಕ್ ಹತ್ತಿರ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಸೀದಾ ಮತ್ತೆ ಬಾರ್ ಅಲ್ಲಿ ಕೂತು ಡ್ರಿಂಕ್ಸ್ ಮಾಡೋಕೆ ಶುರು ಮಾಡ್ತಾನೆ. ಎಷ್ಟು ಡ್ರಿಂಕ್ಸ್ ಮಾಡಿದನೋ ಅವನಿಗೆ ಗೊತ್ತಿಲ್ಲ. ಬಾರ್ ಹುಡುಗ ಬಂದು  ಅಣ್ಣ ಕ್ಲೋಸ್ ಮಾಡಬೇಕು ಹೊರಡಿ ಅಂತ ಹೇಳ್ತಾನೆ. ಅಭಿ ಅವನ ಕಡೆಗೆ ನೋಡಿ ಸಾರೀ ಅಂತ ಹೇಳಿ  ಮತ್ತೆ ಎರಡು ಬಿಯರ್ ನಾ ತೆಗೆದುಕೊಂಡು ತುರಾಡ್ತಾ ಬಾರ್ ನಿಂದ ಹೊರಗೆ ಬಂದು  ಬೈಕ್ ಅಲ್ಲಿ ಬಿಯರ್ ಬಾಟೆಲ್ ನಾ ಇಟ್ಕೊಂಡು. ಬೈಕ್ ಸ್ಟಾರ್ಟ್ ಮಾಡಿಕೊಂಡು, ಸೀದಾ ಅವನ ರೂಮ್ ಹತ್ತಿರ ಬಂದು ರೂಮ್ ಡೋರ್ ಹೊಡೀತಾನೆ. 2 ನಿಮಿಷ ದ ನಂತರ ಒಬ್ಬ ವ್ಯಕ್ತಿ ಬಂದು ಡೋರ್ ಓಪನ್ ಮಾಡ್ತಾನೆ. 

  ಅ ವ್ಯಕ್ತಿ ಅಭಿ ನಾ ನೋಡಿ ಅವನು ಇರೋ ಪರಿಸ್ಥಿತಿ ನೋಡಿ, ಅಲ್ವೋ ಮಚ್ಚಾ ಕುಡಿದಿದ್ದು ಸಾಕಾಗಿಲ್ಲ ಅಂತ ಮತ್ತೆ ಎರಡನ್ನ ಕೈಲಿ ಇಟ್ಕೊಂಡು ಬಂದಿದ್ದೀಯಾ ಅಂತ ಕೇಳ್ತಾನೆ .

ಅಭಿ,,, ಇಲ್ಲಾ ಜೆ ಇದರಲ್ಲಿ ನಿನಗೆ ಒಂದು ತಗೋ 

ಜೆ,,, ಸರಿ ಬಾ ಅಂತ ಹೇಳಿ ಅಭಿ ನಾ ಒಳಗೆ ಕರೆದು ರೂಮ್ ಡೋರ್ ಕ್ಲೋಸ್ ಮಾಡಿ, ಏನಾದ್ರು ತಿಂದ ಇಲ್ವಾ 

ಅಭಿ,,, ನನಗೆ ಏನು ಬೇಡ ಈ ಬಿಯರ್ ಸಾಕು.

ಜೆ,,, ಇವಾಗ ಬೇಡ ಅನ್ನಿಸುತ್ತೆ, ಖಾಲಿ ಹೊಟ್ಟೇಲಿ ಮಲಗಬಾರ್ದು, ಅಂತ ಹೇಳಿ ಹೋಗಿ ಒಂದು ಪ್ಲೇಟ್ ಗೆ ಅನ್ನ ಸಾಂಬಾರ್ ಹಾಕಿಕೊಂಡು ಬಂದು ಅಭಿ ಮುಂದೆ ಇಟ್ಟು. ತಿಂತ ಕುಡಿ ಅಂತ ಹೇಳಿ ಇನ್ನೊಂದು ಬಿಯರ್ ನಾ ಓಪನ್ ಮಾಡಿ ಪಕ್ಕದಲ್ಲಿ ಕೂತ್ಕೋತಾನೆ.

ಅಭಿ,,, ಲವ್ ಯು ಮಚ್ಚಾ,, ನನ್ನ ಯಾರಾದ್ರೂ ಅರ್ಥ ಮಾಡ್ಕೊಂಡು ಇದ್ದಾರೆ ಅಂದ್ರೆ ಅದು ನೀನೊಬ್ಬನೇ, ಐ ಲವ್ ಯು ಮಚ್ಚಾ. 

ಜೆ,,, ಆಯ್ತು ಮೊದಲು ತಿನ್ನು ಅಂತ ಹೇಳಿ ಬಿಯರ್ ಕುಡೀತಾನೆ.

ಅಭಿ ಬಿಯರ್ ಕುಡಿದು ಊಟ ಮಾಡ್ತಾನೆ. ಜೆ ಅವನನ್ನ ಕರ್ಕೊಂಡು ಹೋಗಿ ಮಲಗಿಸಿ, ಬಂದು ಪ್ಲೇಟ್ ನಾ ಖಾಲಿ ಬಾಟೆಲ್ ನಾ ತೆಗೆದು ಸೈಡ್ ಗೆ ಇಟ್ಟು ಅವನು ನಿದ್ದೆ ಗೆ ಜಾರ್ತನೆ.

##### 

ಅಭಿ ಮೊಬೈಲ್ ನಾನ್ ಸ್ಟಾಪ್ ಆಗಿ ಬಡ್ಕೊಳ್ತಾ ಇರೋದನ್ನ ನೋಡಿ ಜೆ. ಅಭಿ ನಾ ಎಬ್ಬಿಸೋಕೆ ಹೋಗ್ತಾನೆ. ಅಭಿ ಇನ್ನು ನಿದ್ದೆಲೆ ಇರೋದನ್ನ ನೋಡಿ ಅವನನ್ನ ಮುಟ್ಟಿ ಎಬ್ಬಿಸ್ತಾನೆ. ಅಭಿ ಗೆ ನಶೆ ಇನ್ನು ಸರಿಯಾಗಿ ಇಳಿದಿಲ್ಲ ಅಂತ ಅನ್ನಿಸುತ್ತೆ. ನಶೆ ನಲ್ಲೆ ಕಣ್ ಬಿಟ್ಟು ಜೆ ನಾ ನೋಡ್ತಾ ಹೇಳು ಮಚ್ಚಾ.

ಜೆ,,, ಲೋ ಅವಾಗಿಂದ ನಿನ್ ಮೊಬೈಲ್ ಬಡ್ಕೊಳ್ತಾ ಇದೆ, 

ಅಭಿ,,, ಟೈಮ್ ಎಷ್ಟು?

ಜೆ,,,, 9 ಗಂಟೆ 

ಅಭಿ,,, ಎದ್ದು ಮೊಬೈಲ್ ತೆಗೆದುಕೊಂಡು ನೋಡ್ತಾನೆ. ನಿರಂಜನ್ ಕಾಲ್. ವಾಪಸ್ಸು ಕಾಲ್ ಮಾಡಿ ಮಾತಾಡಿ  ಸ್ನಾನ ಮಾಡೋಕೆ ಹೋಗ್ತಾನೆ.

15 ನಿಮಿಷದಲ್ಲಿ ರೆಡಿ ಆಗಿ ರೂಮಿಂದ ಹೊರಗೆ ಬರೋವಾಗ, 

ಜೆ,,, ಮಚ್ಚಾ ಹೀಗೆ ಹೇಳ್ತಿನಿ ಅಂತ ಬೇಜಾರ್ ಮಾಡ್ಕೋಬೇಡ.

ಅಭಿ,,, ಸಾರೀ ಮಚ್ಚಾ ಏನೋ ಬೇಜಾರಿಗೆ ರಾತ್ರಿ ಅಷ್ಟು ಕುಡಿದು ಬಿಟ್ಟೆ ಸಾರೀ..

ಜೆ,,, ಮಚ್ಚಾ ನಿನ್ನ ನೋವು ನನಗೆ ಗೊತ್ತು ಮಚ್ಚಾ, ನಾನ್ ಕುಡಿಬೇಡ ಅಂತ ಹೇಳ್ತಾ ಇಲ್ಲಾ, ಅಷ್ಟು ಕುಡಿದು ಬೈಕ್ ಓಡಿಸಿ ಕೊಂಡು ಬರೋಕೆ ಹೋಗಬೇಡ, ನನಗೆ ಕಾಲ್ ಮಾಡು ನಾನ್ ಬರ್ತೀನಿ.

ಅಭಿ,,, ಸರಿ ಮಚ್ಚಾ ಲೇಟ್ ಆಯ್ತು. ಬೈ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾನೆ.

@@@@@@@@@@@@@@@@@@@@@@@@