Quotes by saroja huddar in Bitesapp read free

saroja huddar

saroja huddar

@sarojahuddar.690838


ಎಲ್ಲರಿಗೂ ತುಂಬಾನೆ ಪರಿಚಿತವಾದ ಒಂದು ಸಸಿ ಅಥವಾ ಗಿಡ ಅದುವೇ ತುಳಸಿ (Holy basil). ತುಳಸಿ ಗಿಡ ಭಾರತೀಯರ ಹೃದಯದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ಸಸ್ಯವನ್ನು ಪೂಜಿಸಲಾಗುತ್ತದೆ ಮತ್ತು ಅದನ್ನು ತಮ್ಮ ಮನೆಗಳ ಮುಂದೆ ಬೆಳೆಸುವುದನ್ನು ಕಾಣಬಹುದು. ತುಳಸಿ ಗಿಡವು ಕೇವಲ ಪೂಜೆಗೆ ಮಾತ್ರ ಮೀಸಲಾಗಿಲ್ಲ ಆದರೆ ಔಷಧೀಯ ಮೌಲ್ಯಗಳನ್ನು ಹೊಂದಿದೆ. ಅದರ ಪ್ರತಿಯೊಂದು ಭಾಗವನ್ನು ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ಬಳಸಬಹುದು.



ಉಸಿರಾಟ, ಜೀರ್ಣಕಾರಿ ಮತ್ತು ಚರ್ಮ ರೋಗಗಳ ಚಿಕಿತ್ಸೆಯಲ್ಲಿ ತುಳಸಿಯನ್ನು ಪ್ರಥಮ ಚಿಕಿತ್ಸೆಯಾಗಿ ಶಿಫಾರಸು ಮಾಡಲಾಗುತ್ತದೆ. ಸಾಮಾನ್ಯ ಕಾಯಿಲೆಗಳಿಗಷ್ಟೇಅಲ್ಲ , ಆಯುರ್ವೇದವು ಗೆಡ್ಡೆಯ ಬೆಳವಣಿಗೆಯವರೆಗಿನ ರೋಗಗಳಿಗೆ ಇದರ ಬಳಕೆಯನ್ನು ತಿಳಿಸುತ್ತದೆ. ಪ್ರಾಯೋಗಿಕ ಅಧ್ಯಯನಗಳು ಇದನ್ನು ಹೆಚ್ಚು ಭರವಸೆಯ ಇಮ್ಯುನೊಮಾಡ್ಯುಲೇಟರ್ (immunomodulator), ಸೈಟೊಪ್ರೊಟೆಕ್ಟಿವ್ (cytoprotective) ಮತ್ತು ಆಂಟಿಕಾನ್ಸರ್ ಏಜೆಂಟ್ (anticancer agent) ಎಂದು ಗುರುತಿಸುತ್ತವೆ.



ಹೃದ್ಯವನ್ನು ಆರೋಗ್ಯವಾಗಿಡಲು ತುಳಸಿಯನ್ನು ಬಳಸಿ



ವಿಟಮಿನ್ ಸಿ ಮತ್ತು ಯುಜೆನಾಲ್ ನಂತಹ ಉತ್ಕರ್ಷಣ ನಿರೋಧಕಗಳು ತುಳಸಿ ಹೊಂದಿದ್ದು ಇವು ಹೃದಯವನ್ನು ಹಾನಿಕಾರಕ ರಾಡಿಕಲ್ಸ್ ನಿಂದ ಸಂರಕ್ಷಿಸುತ್ತದೆ. ತುಳಸಿಯಲ್ಲಿರುವ ಯುಜೆನಾಲ್ (eugenol) ಅಂಶವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.



ಆಕರ್ಷಕ ತ್ವಚೆಗಾಗಿ ತುಳಸಿ ಉಪಯುಕ್ತ



ತುಳಸಿಯಲ್ಲಿರುವ ವಿಟಮಿನ್ ಸಿ ಮತ್ತು ಎ, ಫೈಟೊನ್ಯೂಟ್ರಿಯೆಂಟ್‌ಗಳು ರಾಡಿಕಲ್ಸ್ ನಿಂದ ತ್ವಚೆಗೆ ಆಗುವ ಹಾನಿಯನ್ನು ತಡೆಗಟ್ಟುತ್ತವೆ.



ಮೂತ್ರಪಿಂಡದ ಕಲ್ಲುಗಳಿಗೆ ತುಳಸಿ ರಾಮಬಾಣ



ತುಳಸಿಯು ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪವಿತ್ರ ತುಳಸಿಯಲ್ಲಿರುವ ಅಸಿಟಿಕ್ ಆಮ್ಲವು ಕಲ್ಲುಗಳ ವಿಭಜನೆಗೆ ಸಹಾಯ ಮಾಡುತ್ತದೆ.



ತಲೆನೋವು ನಿವಾರಿಸುತ್ತದೆ



ತಲೆನೋವು ಮತ್ತು ಮೈಗ್ರೇನ್‌ಗೆ ತುಳಸಿ ತುಂಬಾ ಪರಿಣಾಮಕಾರಿ



ಉಸಿರಾಟದ ತೊಂದರೆಗಳನ್ನು ತುಳಸಿಯ ಸೇವನೆಯಿಂದ ಗುಣಪಡಿಸಬಹುದು



ತುಳಸಿಯಲ್ಲಿರುವ ಕ್ಯಾಂಪೇನ್, ಯುಜೆನಾಲ್ ಮತ್ತು ಸಿನೋಲ್ ನಂತಹ ಸಂಯುಕ್ತಗಳು ಉಸಿರಾಟದ ವ್ಯವಸ್ಥೆಯ ಮೇಲೆ ಉಂಟಾಗುವ ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ಗುಣಪಡಿಸುತ್ತದೆ. ಇದು ಬ್ರಾಂಕೈಟಿಸ್ ಮತ್ತು ಕ್ಷಯರೋಗದಂತಹ ವಿವಿಧ ಉಸಿರಾಟದ ಕಾಯಿಲೆಗಳನ್ನು ಸಹ ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.



ತುಳಸಿ ವಿಟಮಿನ್ ಕೆ ಯ (Vitamin K) ಸಮೃದ್ಧ ಮೂಲವಾಗಿದೆ



ವಿಟಮಿನ್ ಕೆ (Vitamin K) ಅತ್ಯಗತ್ಯ ಕೊಬ್ಬು-ಕರಗಬಲ್ಲ ವಿಟಮಿನ್ ಆಗಿದ್ದು ಮೂಳೆಗಳ ಆರೋಗ್ಯ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.



ಬಾಯಿಯ ಆರೋಗ್ಯಕ್ಕೆ ತುಳಸಿಯ ಸೇವನೆ ಉತ್ತಮ ಆಯ್ಕೆಯಾಗಿದೆ



ತುಳಸಿ ನೈಸರ್ಗಿಕ ಮೌತ್ ಫ್ರೆಶ್ನರ್ ಮತ್ತು ಬಾಯಿಯ ಸೋಂಕುನಿವಾರಕವಾಗಿದೆ. ತುಳಸಿ (Holy Basil ) ಬಾಯಿಯ ಹುಣ್ಣುಗಳನ್ನು ಸಹ ಗುಣಪಡಿಸುತ್ತದೆ. ಹಲ್ಲಿನ ಕುಳಿಗಳು, ಪ್ಲೇಕ್, ಟಾರ್ಟರ್ ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ನಾಶಪಡಿಸುವಲ್ಲಿ ತುಳಸಿ ಪರಿಣಾಮಕಾರಿಯಾಗಿದೆ.



ಕಫ ಮಾತು ಪಿತ್ತ ದೋಷಗಳ ನಿವಾರಣೆಗೆ ತುಳಸಿಯ ಪ್ರಯೋಗ



ತುಳಸಿಯ ನಿಯಮಿತ ಬಳಕೆಯಿಂದ ಕಫ ಮತ್ತು ಪಿತ್ತದಂತಹ ದೋಷಗಳನ್ನು ಸಮಾಧಾನಪಡಿಸಬಹುದು.

Read More