Quotes by Avigyani in Bitesapp read free

Avigyani

Avigyani

@nizampj23gmail.com130402


ಆಡಿದ ಮಾತೆಲ್ಲ
ಮರೆತು ಹೋಯಿತು
ಹೇಳಲು ಉಳಿದ
ಮಾತಷ್ಟೇ ಇರಿದು
ಹೋಯಿತು.!

🙂

-ಅವಿಜ್ಞಾನಿ

-Avigyani

ನಮ್ಮ ಬೆವರ ಮಳೆಯ
ಲೆಕ್ಕ ಕೊಡು
ಈ ಸೋನೆಯ
ರಾತ್ರಿಯನ್ನೂ
ಕಳೆಯಬೇಕು ಏಕಾಂಗಿಯಾಗಿ

ನಾ ತೀರಾ ದಣಿಯುವುದು
ನಿನ್ನ ಮುಲುಗುವಿಕೆ
ಕೇಳಿದ ನಂತರ
ಈ ದೂರಕ್ಕೆ ಅಗಾಧ
ಶಾಪವಿದೆ ನನ್ನ
ಪರವಾಗಿ

ಪ್ರಣಯದ ಕಥೆ
ನಿನ್ನ ಮುಂಗುರುಳಿನಲ್ಲಿಯೇ
ಶುರುವಾತು
ಚಳಿಯ ಬಹಾನ
ಬೇಕಂತಲೇ ಹೇಳುತ್ತೇನೆ

ದಿಂಬುಗಳೊಂದಾಗಲಿ
ದೂರ ಕಮ್ಮಿಯಾಗಿಸಿ
ನಿನ್ನ ಟೀ ಶರ್ಟಿನ
ಅಳತೆ ತೆಗೆಯಬೇಕಿದೆ

ಪ್ರೇಮದ ರೂಪಗಳಲ್ಲಿ
ಇದೂ ಒಂದು
ಬಾ ಎದೆ ರೋಮ
ಎಣಿಸು
ನಾ ಕನಸಿದ್ದನ್ನು
ಗುಣಿಸಿಕೊಂಡಿದ್ದೇನೆ
ಬಹುವಾಗಿ

ಜಗತ್ತಿನ ಉಡಾಫೆ
ಮಾಡುವ‌ ಹುಡುಗ
ನಿನ್ನೊಳಗಷ್ಟೇ
ಕುತೂಹಲವಾಗುತ್ತಾನೆ

ಇಶ್ಕಿನ ಪರಿಭಾಷೆ
ಬಹಳವೇ.!

-ಅವಿಜ್ಞಾನಿ

Read More