vyoma in Kannada Drama by S Pr books and stories PDF | ವ್ಯೋಮ

The Author
Featured Books
Categories
Share

ವ್ಯೋಮ

ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ,  ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನನ್ನ ನೋಡಿ....ಲೇ  ಕೆಂಪ ಯಾಕೋ ಹಾಗೇ ಅಳ್ತಾ ಹೋಗ್ತ ಇದ್ದಿಯಾ ಏನಾಯ್ತು...

ಕೆಂಪ...ಅಳೋದನ್ನ ನಿಲ್ಲಿಸಿ,,,ಏನಾಯ್ತು ಅಂತ ಕೇಳ್ತಿಯಾ, ನಿನಗೆ ಮನಃಸಾಕ್ಷಿ ಅನ್ನೋದು ಐತಾ ಹೇಳು,  ಹೋಗಿ ಅವನ ಮೇಲೆ ಹಾಗೇ ಇಲ್ದೆ ಇರೋ ಚಾಡಿ ನಾ ಹೇಳಿದ್ದೀಯಾ ಅಲ್ವಾ. 
ಮುದುಕ... ಎಲಾ ನಿನ್ನ ನಾನ್ ಏನ್ಲ ಮಾಡಿದೆ, ನಾನ್ ಶಿವ ಅಂತ  ತಿನ್ಕೊಂಡು ಬಂದು ಈ ಕಟ್ಟೇ ಮೇಲೆ ಕೂತು ಬಿಡಿ ಸೇದ್ತಾ ಇದ್ದೀನಿ, ಅಳ್ತಾ ಹೋತ ಇದ್ದೆ ಯಾಕ್ಲಾ ಅಂತ ಕೇಳಿದ್ದು ನನ್ನ ತಪ್ಪಾ ಹೇಳು. 
ಕೆಂಪ... ಲೇ ಮುದುಕ ನೀನು ನಿನ್ನ ನವರಂಗಿ ಆಟ ನಾ ಬೇರೆ ಯಾರತ್ತಾದ್ರೂ ಹೇಳು ನಂಬ್ತಾರೇ  ಅದ್ರೆ ನನ್ನತ್ರ ಹೇಳೋಕೆ ಹೋಗಬೇಡ. ನೀನು ಎಂತ  ಊರುಬಾಕ ಅನ್ನೋದು ನನಗೆ ಚೆನ್ನಾಗಿ ಗೊತ್ತು.
ಮುದುಕ,,, ಎಲಾ ಬಡ್ಡೇತದೆ ನನ್ನೇ ನವರಂಗಿ ಅಂತೀಯಾ ಎಷ್ಟ್ಲಾ ನಿನಗೆ ಧೈರ್ಯ. ಇರು ನಿಮ್ಮಪ್ಪ ಬರ್ಲಿ ಹೇಳ್ತಿನಿ.
ಕೆಂಪ... ಲೋ ಮುದುಕ ಅವನಾಗಿದ್ದಕ್ಕೆ ನಿನ್ನ ಸುಮ್ನೆ ಬಿಟ್ಟವನೆ,    ನೀನು ಹೋಗಿ ನಮ್ಮಪ್ಪನ ಹತ್ತಿರ ನಿನ್ನ ಮಗ ಹೀಗೆ ಹೇಳ್ದ ಅಂತ ಹೇಳು,  ಇವತ್ತೇ ನಿನ್ನ  ಇಲ್ಲಾ ಅನ್ನಿಸಿ ಬಿಡ್ತೀನಿ.  ನಾನ್ ಅವನಷ್ಟು ಒಳ್ಳೆಯವನು ಅಲ್ಲ ತಿಳಿತಾ.
ಮುದುಕ ಮನಸಲ್ಲೇ ಇವನು ಮಾಡಿದ್ರು ಮಾಡ್ತಾನೆ ಹೇಳೋಕೆ ಆಗಲ್ಲಾ ಅಂತ ಭಯ ಬಿದ್ದು. ಹೋಗ್ ಹೋಗು  ಹೋಗಿ ಅದೇನ್ ಕೆಲಸ ಇದೆಯೋ ನೋಡೊಗು. ಅಂತ ಹೇಳಿ ಬಿಡಿ ಸೇದೋಕೆ ಶುರು ಮಾಡ್ತಾನೆ.

ಕೆಂಪ ಅಲ್ಲಿಂದ ಹೊರಟು ಹೋದಮೇಲೆ.. ಮುದುಕನ ಪಕ್ಕದಲ್ಲಿ ಇದ್ದಾ ಇನ್ನೊಬ್ಬ ವ್ಯಕ್ತಿ,.  ಅ ಮುದುಕ ನೋಡಿ,  ಲೇ ಊರು ಹೋಗು ಅಂತದೆ ಕಾಡು ಬಾ ಅಂತದೆ, ಈ ವಯಸ್ಸಲ್ಲಿ  ಏನೋ ನೀನು, ಹೋಗಿ ಹೋಗಿ ಅ ಪಾಪದ ಹುಡುಗನ ಮೇಲೆ ಇಲ್ದೆ ಇರೋ ವಿಷಯ ನಾ ಅವನ ಚಿಕ್ಕಮ್ಮ ನಿಗೆ ಹೇಳಿದ್ದಿಯ.  ಅವನ ಚಿಕ್ಕಮ್ಮ ಮೊದಲೇ ಅವನನ್ನ ಕಂಡ್ರೆ ಅಷ್ಟಕ್ಕೇ ಅಷ್ಟೇ,  ಅಂತದ್ರಲ್ಲಿ ನೀನು ಅ ಹುಡುಗನ ಬಗ್ಗೆ ಹೀಗೆ ಹೇಳಿದ್ದೀಯಾ ಅವನನ್ನ ಸುಮ್ನೆ ಬಿಡ್ತಾಳ ಹೇಳು. 
ಮುದುಕ,,, ನಿನಗೆ ಗೊತ್ತಿಲ್ಲಾ ಸುಮ್ನೆ ಇರ್ಲಾ,  ಮೊನ್ನೆ  ಅ ಕೆರೆ ಕಟ್ಟೆತವಾ ,  ಭಂಗಿ ಸೇದ್ತಾ ಇದ್ದೆ ಅಂತ ಹೋಗಿ ನನ್ನ ಮಗನಿಗೆ ಹೇಳೋದ,  ನನ್ನ ಮಗನ ನನ್ನ ಬಾಯಿಗೆ ಬಂದ ಹಾಗೇ ಬೈದ,  ಯಾವತ್ತು ಹಾಗೇ ನನ್ನ ಬೈದೊವ್ನೆ ಅಲ್ಲ ನನ್ನ ಮಗ. ಅಂತದ್ರಲ್ಲಿ ಅವನಿಂದ ಬೈಸ್ಕೊಂಡೆ ಅದಕ್ಕೆ , ಸೇಡು ತಿರೋಸ್ಕೊ ಬೇಕು ಅಂತ ಅವನ ಚಿಕ್ಕಮ್ಮ ನಿಗೆ  ಏನೋ ನಾಲಕ್ಕು ಮಾತು ಸೇರಿಸಿ ಹೇಳ್ದೆ ಅಷ್ಟೇ. ನಾನ್ ಹೇಳ್ದೆ ಅಂತ ನಿನ್ ಹೋಗಿ ಹೇಳೋಕೆ ಹೋಗಬೇಡ. ನಾಳೆಯಿಂದ ನಿನಗೆ ಬಿಡಿ ಕೊಡೋದಿಲ್ಲ. 
ಇನ್ನೊಬ್ಬ ವ್ಯಕ್ತಿ,,, ಲೇ ನನ್ನ ಏನು ಗತಿ ಇಲ್ಲದವನು ಅನ್ಕೊಂಡ, ತಗಳ ನಿನ್ನ ಬಿಡಿ ನಾ ಅಂತ ಅವನ ಮುಖದ ಮೇಲೆ ಬಿಸಾಕಿ ಸೀದಾ   ಅಲ್ಲಿಂದ ಎದ್ದು ಹೊರಟು ಹೋಗ್ತಾನೆ...
ಮುದುಕ,, ಹೋಗ್ಲಾ ನನಗೆ ಬಿಡಿ ಮಿಕ್ತು ಅಂತ ಹೇಳಿ ಕೆಳಗೆ ಬಿಸಾಕಿದ್ದ ಬಿಡಿ ನಾ ತೆಗೆದು ಜೇಬಲ್ಲಿ ಇಟ್ಕೊತಾನೆ.

                  ******
ಕಣ್ಣಲ್ಲಿ ಕಣ್ಣೀರನ್ನ ತುಂಬಿಕೊಂಡು ಮೈ ಗೆ ಅದ ಗಾಯಕ್ಕೆ ಅರಶಿಣ ಹಚ್ಚುತ  ಯಾಕೋ ಅಣ್ಣ ಅಮ್ಮ ಹತ್ತಿರ ಹೀಗೆ ಒದೆ ತಿಂತೀಯಾ ನೋಡು  ಯಾವ ರೀತಿ ಆಗಿದೆ.  ಅಂತ ಹೇಳ್ತಾ ಅರಶಿಣ ಹಚ್ಚುತಾಳೆ  ಶ್ರಾವ್ಯ.. ತಂಗಿ ಏನೇ ಮಾತಾಡ್ತಾ ಇದ್ರು ಏನು ಮಾತನಾಡದೆ ಮೌನವಾಗಿ ಇದ್ದು ಬಿಡ್ತಾನೆ ಅ ಹುಡುಗರು. 

ಸಂಜೆ  ಬಿಡಿ ಸೇದ್ತಾ  ಹೋಗ್ತಾ ಇದ್ದಾ  ವ್ಯಕ್ತಿ ಗೆ ಏನೋ ನೆನಪಾಗಿ,  ಬಿಡಿ ಸೇದೋದನ್ನ ಪೂರ್ತಿ ಮಾಡಿ, ಬಿಡಿ ನಾ ಬಿಸಾಕಿ ಹೆಜ್ಜೆ ಗಳನ್ನ ಜೋರಾಗಿ ಇಡೋಕೆ ಶುರು ಮಾಡ್ತಾನೆ.  
ಕೆಲಸದಿಂದ ಆಗಷ್ಟೇ ಮನೆಗೆ ಬಂದಿದ್ದ ಮನೆ ಯಜಮಾನ   ಕೈ ಕಾಲು ಮುಖ ನಾ ತೊಳ್ಕೊಂಡು  ಟೀ ಕುಡಿತಾ  ಜಗ್ಲಿ ಮೇಲೆ ಕೂತಿರ್ತಾನೆ,  ಯಾರೋ ಮನೆ ಗೇಟ್ ನಾ ಓಪನ್ ಮಾಡಿಕೊಂಡು ಒಳಗೆ ಬರೋದನ್ನ ನೋಡಿ, ಮನೆ ಯಜಮಾನ  ಅ ವ್ಯಕ್ತಿ ನಾ ನೋಡಿ ಏನ್ ಪಾಳೇಗಾರ  ನಮ್ ಮನೆ ಕಡೆ ಬಂದು ಬಿಟ್ಟಿದ್ದೀಯ ಏನ್ ಸಮಾಚಾರ. ಬಾ ಟೀ ಕುಡಿ. 
ಬಸಣ್ಣ  ನಿನ್ನ ಮರ್ಯಾದೆ ಇಲ್ರಿ ನಿನ್ನ ಮಗ ಎಲ್ಲಿ? 
ಬಸಣ್ಣ... ಯಾಕ್ ಪಾಳೇಗಾರ ಏನಾಯ್ತು, ನನ್ನ ಮಗ ಏನ್ ಮಾಡಿದ? 
ಪಾಳೇಗಾರ... ಏನಿಲ್ಲಾ ಹೇಳ್ತಿನಿ ಎಲ್ಲಿ ನಿನ್ನ ಮಗ. 
ಬಸಣ್ಣ...  ತಂಗಿಗೆ ಹೋಮ್ ವರ್ಕ್ ಹೇಳಿ ಕೊಡ್ತಾ ಇದ್ದಾನೆ.
ಪಾಳೇಗಾರ,,, ಹೌದ ಬಂದೆ ಅಂತ ಒಳಗೆ ಹೋಗಿ  2 ನಿಮಿಷದಲ್ಲಿ ನಂತರ ಹೊರಗಡೆ ಬರ್ತಾ ಜಗಲಿ ಮೇಲೆ ಕುತ್ಕೊಂಡು.  ಬಸಣ್ಣ ನಾನ್ ಹೀಗೆ ಹೇಳ್ತಿನಿ ಅಂತ ನನ್ನ ಬೈಕೊಂಡ್ರು ಪರ್ವಾಗಿಲ್ಲ,  ನಿನ್ನ ಮಗನನ್ನ  ಈ ಊರು ಬಿಟ್ಟು ಬೇರೆ ಎಲ್ಲಾದ್ರೂ ಬೇರೆಕಡೆ  ಕಳಿಸಿಬಿಡು. 
ಮನೆ ಒಳಗೆ ಯಿಂದ ಒಬ್ಬ ಮಹಿಳೆ ಬರ್ತಾ,,, ಯಾಕ್ ಪಾಳೇಗಾರ, ಅವನ್ ಏನಾದ್ರೂ ನಿನಗೆ ತೊಂದ್ರೆ ಕೊಟ್ನಾ ಇಲ್ಲಾ  ನಿಮ್ ಮನೇಲಿ ಏನಾದ್ರೂ ತಿನ್ಕೊಂಡು ಬಿದ್ದಿದ್ದಾನಾ. 
ಪಾಳೇಗಾರ,,,,  ನನಗಂತೂ  ಯಾರು ಇಲ್ಲಾ ಇದ್ದವರೆಲ್ಲ ನನ್ನ ಬಿಟ್ಟು ಹೋದ್ರು.   ಅಲ್ಲ ನಿಂಗಕ್ಕ ಅ ಮುದುಕ ಹೇಳ್ದ ಅಂತ ಅ ಮಗ ನಾ ಹಾಗೇ ಹೊಡೆದ್ದಿದ್ದೀಯಾ ಅಲ್ವಾ ಮನಸಾದ್ರು ಹೇಗ್ ಬಂತು,   ಬುದ್ದಿ ಬರೋಕು ಮೊದಲೇ ಅಪ್ಪ ಅಮ್ಮ ನಾ ಕಳ್ಕೊಂಡ,   ನಿಮ್ಮನ್ನೇ ಅಪ್ಪ ಅಮ್ಮ ಅನ್ಕೊಂಡು,  ನಿಮಗೆ ಭಾರ ಆಗ್ಬಾರ್ದು ಅಂತ ಕೆಲಸ ಮಾಡ್ಕೊಂಡು, ಓದ್ಕೊಂಡು  ಅವನ ಕಾಲಿನ ಮೇಲೆ ಅವನು ನಿಂತುಕೊಂಡು ಬದುಕ್ತಾ ಇದ್ದಾನೆ,  ಯಾರಿಗೂ ಕೆಟ್ಟದನ್ನ ಬಯಸಿದವನೇ ಅಲ್ಲ. 
ಬಸಣ್ಣ,,, ಕೋಪದಿಂದ ಏನು ಇವಳು ನನ್ನ ಮಗನಿಗೆ ಹೊಡೆದ್ಲಾ. 
ನಿಂಗಮ್ಮ,,, ಹೊಡಿದೆ, ಇನ್ನೇನ್ ಮಾಡ್ತಾರೆ , ಅ ಮುದುಕ ಬಂದು ನನಗೆ ಹೇಳಿದಾಗ ಅವನ ಚರ್ಮ ಸುಲಿಬೇಕು ಅನ್ನೋ ಅಷ್ಟು ಕೋಪ ಬಂತು,, ಅಲ್ಲ ನಾನ್ ಒಂದು ವಿಷಯ ಕೇಳ್ತೀನಿ, ನಮ್ ಮನೆಗೂ ಒಂದು ಹೆಣ್ಣು ಮಗು ಇದೆ ಅಲ್ವಾ,   ಯಾರಾದ್ರೂ  ಬಂದು ಅ ಮಗಿ ಹತ್ರ ತಪ್ಪಾಗಿ ನಡ್ಕೊಂಡ್ರೆ ನೀವ್ ಸುಮ್ನೆ ಇರ್ತೀರಾ,  ನಿನ್ ಮಗ ಅ ಕೆರೆ ಕಟ್ಟೇತವಾ  ಕುತ್ಕೊಂಡು  ಬರೋ ಹೆಣ್ ಮಕ್ಕಳಿಗೆ, ಲವ್ ಮಾಡೋಣ ಬರ್ತಿಯಾ, ಮದುವೆ ಆಗೋಣ ಬರ್ತಿಯಾ ಅಂತ ಕೇಳ್ತಾನೆ  ಅಲ್ವಾ,  ಇದು ಸರಿನಾ? ನೀವೇ ಹೇಳಿ. 

ಪಾಳೇಗಾರ,,, ಸುಮ್ನೆ ಇರು ನಿಂಗಕ್ಕ,  ಈ ಊರಲ್ಲಿ ಇರೋ ಐಕ್ಳು ಯಾರು ಹೆಂಗೆ ಅಂತ ನನಗೆ ಗೊತ್ತಿಲ್ವಾ,  ನಿನ್ನ ಮಗ ಬಂಗಾರ,  ಎಲ್ಲರನ್ನು ಬಾಯಿ ತುಂಬಾ ಅಕ್ಕ ತಂಗಿ ಅಂತ ಮಾತಾಡಿಸ್ತಾನೆ,,  ಅ ಮುದುಕಪ್ಪ ನೇ  ಕೆರೆ ಕಟ್ಟೇತವಾ  ಭಂಗಿ ಸೇದ್ಕೊಂಡು, ಕೆರೆತಕಾ ಬರೋವ್ರ್ನಾ ಬಾಯಿಗೆ ಬಂದ ಹಾಗೇ ಬೈತಾ ಇದ್ದಾ,   ಮನುಷ್ಯ ಅದವ್ನು ಮಾತಾಡೋ ಮಾತಾ ಅವೆಲ್ಲಾ, ಅದಕ್ಕೆ ನಿನ್ನ ಮಗ ಹೋಗಿ ಅವರ ಮಗನಿಗೆ, ಹೇಳಿದ. ಅದು ತಪ್ಪಾ?  ಅವನ ಮಗ ಬೈದ ಅಂತ ನಿನ್ನ ಮಗನ ಮೇಲೆ ಕೋಪ ಇಟ್ಕೊಂಡು ನಿನ್ನತ್ರ ಹೀಗೆ ಹೇಳವ್ನೆ.   ಬಾ ನನ್ನ ಜೊತೆಗೆ  ಬೇಕಿದ್ರೆ ಅ ಮುದುಕ ಬಾಯಲ್ಲೇ ಸತ್ಯ ಏನು ಅಂತ ಹೇಳಿಸ್ತೀನಿ.  ಅಂತ ಹೇಳಿ ಬಸಣ್ಣ ಕಡೆ ನೋಡಿ,  ನೋಡು ಬಸಣ್ಣ , ನಿನ್ನ ಮಗನಿಗೆ  ಒಳ್ಳೆತನ ತುಂಬಾ ಇದೆ,  ಅದಕ್ಕೆ  ಈ ಮನೇಲಿ ಅವನಿಗೆ ಏನೇ ಅಂದ್ರು ನೀವೇ ದ್ಯಾವ್ರು ಅನ್ಕೊಂಡು ಬದುಕ್ತಾ ಇದ್ದಾನೆ.  ಅ ಮಗ ಓದಿರೋದಕ್ಕೆ ನಮ್ ಸುತ್ತ ಮುತ್ತ ಹಳ್ಲಿಲಿ ಏನು ಕೆಲಸ ಸಿಗಲ್ಲ, ಪ್ಯಾಟೆ ಗೆ ಕಳಿಸು  ಓದಿಗೆ ತಕ್ಕ ಕೆಲಸ ಮಾಡ್ಲಿ.   ಹೊಲ ಗದ್ದೆ ಅಂತ ಇದ್ರೆ  ನಾಳೆ ಅವನ ಬದುಕು ಕಷ್ಟ ಆಗುತ್ತೆ,  ಅವನು ದುಡಿದ್ರೆ ನಿನಗೂ ಒಂದು ಧೈರ್ಯ ಇರುತ್ತೆ.  ಅವನಿಗೆ ಅರ್ಥ ಆಗೊತರ ಹೇಳಿ ಕಳಿಸಿಕೊಡು,  ಅಂತ ಹೇಳಿ ಎದ್ದು ಅಲ್ಲಿಂದ ಹೊರಟು ಹೋಗ್ತಾನೆ.

ಪಾಳೇಗಾರ ಹೋದಮೇಲೆ,  ಕೋಪದಿಂದ ಹೆಂಡತಿ ನಾ ನೋಡ್ತಾ, ಹೊರಗಿನವರಿಗೆ ಇರೋ ಅಷ್ಟು ಪ್ರೀತಿ ಲಿ ಸ್ವಲ್ಪಾನು ನಿನಗೆ ಅವನ ಮೇಲೆ ಇಲ್ಲಾ ಅಲ್ವೇ  ಛೇ  ಹೋಗಿ ಕೆಲಸ ನೋಡು ಅಂತ ಹೇಳಿ ಬೈದು ಕಳಿಸಿ ಜಗಲಿ ಮೇಲೆ ಕುತ್ಕೊಂಡು  ಯೋಚ್ನೆ ಮಾಡೋಕೆ ಶುರು ಮಾಡ್ತಾರೆ.

ರಾತ್ರಿ ಊಟ ಮಾಡೋವಾಗ, 
ಬಸಣ್ಣ,,, ಅಮ್ಮ ಶ್ರಾವ್ಯ ನಿಮ್ಮಣ್ಣ ಊಟಕ್ಕೆ ಬರಲಿಲ್ಲ. ಹೋಗಿ ಕರ್ಕೊಂಡು ಬಾಮ್ಮ. 
ಶ್ರಾವ್ಯ,,, ಅಪ್ಪಯ್ಯ  ಬರೋವಾಗಲೇ ಕರ್ದೆ, ನನಗೆ ಬ್ಯಾಡ ನಿನ್ ಹೋಗಿ ಊಟ ಮಾಡು ಅಂದ. 
ಬಸಣ್ಣ,,, ನಾನ್ ಕರ್ದೆ ಅಂತ ಹೋಗಿ ಕರ್ಕೊಂಡು ಬಾ.
ಶ್ರಾವ್ಯ,,, ಸರಿ ಅಪ್ಪಯ್ಯ ಅಂತ ಹೇಳಿ ಎದ್ದು  ಹೋಗಿ ಅವಳ ಅಣ್ಣ ನಾ ಕರ್ಕೊಂಡು ಬರ್ತಾಳೆ.
ಬಸಣ್ಣ,, ಕುತ್ಕೋ ಮಗ ಊಟ ಮಾಡು. ಅಂತ ಹೇಳಿ  ಹೆಂಡತಿ ಕಡೆ ನೋಡ್ತಾನೆ.
ನಿಂಗಮ್ಮ  ಅವನ ಮೇಲೆ ಎಷ್ಟೇ ಕೋಪದಲ್ಲಿ ಇದ್ರು ಅವನ ಮೇಲೆ ಪ್ರೀತಿ ಇಲ್ದೆ ಇದ್ರು, ಊಟದ ವಿಷಯ ದಲ್ಲಿ ಯಾವತ್ತೂ  ಬೇಧ ನೋಡೋಕೆ ಹೋಗಿಲ್ಲ.  ಯಾಕಂದ್ರೆ  ಹಸಿವು ಅಂದ್ರೆ ಏನು ಅಂತ ನಿಂಗಮ್ಮ ಗೆ ಚೆನ್ನಾಗಿ ಗೊತ್ತು ಅದಕ್ಕೆ. 

ಬಸಣ್ಣ,,, ನೋಡು ಮಗ, ನಾನ್ ಈಗ ಹೇಳೋದು ನಿನ್ನ ಮನಸ್ಸಿಗೆ ನೋವಾಗಬಹುದು, ಆದ್ರು ಹೇಳ್ತಿನಿ.  ಎಷ್ಟುದಿನ ಅಂತ ಹೊಲ ಗದ್ದೆ ಅಂತ ಕೆಲಸ ಮಾಡ್ಕೊಂಡು ಇರ್ತೀಯಾ?  ಇದರಲ್ಲಿ ಬರೋದು ಅಷ್ಟಕ್ಕೇ ಅಷ್ಟೇ, ಚೆನ್ನಾಗಿ ಓದ್ಕೊಂಡು ಇದ್ದಿಯಾ, ಪ್ಯಾಟೆ ಗೆ ಹೋಗು  ಓದಿಗೆ ತಕ್ಕ ಕೆಲಸ ಹುಡುಕ್ಕೊಂಡು ಕೆಲಸ ಮಾಡು,  ನಾಳೆ ದಿನ ನಿನ್ನ ಭವಿಷ್ಯ ಕೂಡ ಚೆನ್ನಾಗಿ ಇರಬೇಕು ಅಲ್ವಾ.  ನಾನ್ ತರೋ ಸಂಬಳ ಮನೆ ಖರ್ಚಿಗೆ ಅದಕ್ಕೆ ಇದಕ್ಕೆ ಅಂತ ಸರಿ ಹೋಗುತ್ತೆ.   ನಮಗೆ ಅಂತ ಇರೋದು ಅ 6 ಎಕರೆ ಜಮೀನು,  ಈ ಮನೆ ಅಷ್ಟೇ. ಅದನ್ನ ಮಾರಿಕೊಂಡು ಬದುಕಿದ್ರು  ಸ್ವಲ್ಪ ದಿನ ಚೆನ್ನಾಗಿ ಇರಬಹುದು ಕೈಲಿ ಇರೋ ದುಡ್ಡು ಖಾಲಿ ಆದಮೇಲೆ ಮತ್ತೆ ಅದೇ ಬದುಕು,  ಅದಕ್ಕೆ  ಇಷ್ಟು ದಿನ ಹೇಗೋ ನಡೀತು ಜೀವನ,  ನಾಳೆ ದಿನ ನಿನ್ನದು ಅಂತ ಒಂದು ಬದುಕು ಇರಬೇಕು ಅಲ್ವಾ.  
ನಿಂಗಮ್ಮ,,, ನೋಡು ಮಗ,  ನಿಮ್ ಅಪ್ಪಯ್ಯ ಹೇಳೋದನ್ನ ಕೇಳು ಅವರು ನಿನ್ನ ಒಳ್ಳೇದಕ್ಕೆ ನೇ ಹೇಳ್ತಾ ಇರೋದು.  ಏನ್ ನಮ್ ಚಿಕ್ಕಮ್ಮ  ಮದ್ಯಾಹ್ನ ಹಾಗೇ ಹೊಡೆದು ಈಗ ಹೀಗೆ ಹೇಳ್ತಾ ಇದ್ದಾಳೆ ಅಂತ ತಪ್ಪಾಗಿ ತಿಳ್ಕೋಬೇಡ,   ಅ ಮುದುಕ ಬೇರೆ ಏನಾದ್ರೂ ಹೇಳಿದ್ದಿದ್ರೆ ನಾಲಕ್ಕು ಮಾತು ಅಂದು ಸುಮ್ನೆ ಆಗಿ ಬಿಡ್ತಾ ಇದ್ದೆ. ಅದ್ರೆ ಹೆಣ್ ಮಗಿ ವಿಚಾರ ಹೇಳಿದ, ನಮ್ ಮನೆಗೂ ಒಂದು ಹೆಣ್ ಮಗು ಇದೆ , ಅದಕ್ಕೆ ಕೋಪ ಬಂದು ನಿನ್ನ ಹೊಡೆದು ಬಿಟ್ಟೆ. ನನ್ನ ಕ್ಷಮಿಸು  ಬಿಡು ಮಗ. .
ಶ್ರಾವ್ಯ,,, ಅಮ್ಮ  ಏನಮ್ಮ ಇದು, ಅಣ್ಣನಿಗೆ ನಮ್ಮನ್ನ ಬಿಟ್ಟು ಬೇರೆ ಯಾರ್ ಇದ್ದಾರೆ,  ಪ್ಯಾಟೆ ಗೆ ಹೋಗಿ  ಒಬ್ನೇ ಇರಬೇಕಾ? ಅ ಕೆಲಸ ಏನ್ ಇದೆಯೋ ನಮ್ ಊರಲ್ಲೇ ಸಿಗೋದಿಲ್ವಾ. ಬೇಕಿದ್ರೆ ಅಪ್ಪಯ್ಯ ಮಾಡೋ  ಫ್ಯಾಕ್ಟರಿ ಅಲ್ಲಿ ಅಣ್ಣನಿಗೆ ಒಂದು ಕೆಲಸ ಕೊಡಿಸಿದ್ರೆ ಅಣ್ಣ ಕೂಡ ನಮ್ ಜೊತೆಗೆ ಇರ್ತಾನೆ ಅಲ್ವಾ? 

ಬಸಣ್ಣ,,, ಬೇಡ ಮಗಳೇ,  ನಾನಾದ್ರೂ ಅಲ್ಪ ಸ್ವಲ್ಪ ಓದಿ ಈ ಕೆಲಸ ಮಾಡ್ತಾ ಇದ್ದೀನಿ, ನಿಮ್ಮಣ್ಣ ಕೂಡ ಹಾಗೇ ಇರೋದು ಬೇಡ.  ಪ್ಯಾಟೆಲಿ ನನಗೆ ಗೊತ್ತಿರೋ ಒಬ್ರು ಇದ್ದಾರೆ ಅವರಿಗೆ ವಿಷಯ ಹೇಳಿದ್ದೀನಿ,  ಪ್ಯಾಟೆ ಗೆ ಕಳಿಸು ನಾನ್ ನೋಡ್ಕೋತೀನಿ ಅಂತ ಹೇಳಿದ್ದಾರೆ. ಅವನು ಅಲ್ಲಿಗೆ ಹೋದ್ರೆ ಅವನಿಗೆ ಅಂತ ಒಂದು ಕೆಲಸ, ಒಂದು ಜೀವನ ಇರುತ್ತೆ.  ಯೋಚ್ನೆ ಮಾಡೋಕೆ ಹೇಳು ಅಂತ ಹೇಳಿ ಕೈ ತೊಳೆದು ಎದ್ದು ಹೊರಟು ಹೋಗ್ತಾರೆ.

                     *******

ಬಸಣ್ಣ,,, ಯಾಕೆ ಒಂತರಾ ಇದ್ದಿಯಾ ಏನಾಯ್ತು.
ನಿಂಗಮ್ಮ,,,, ಏನು ಇಲ್ಲಾ ರೀ, ಮಗ  ಪ್ಯಾಟೆಗೆ ಹೋಗ್ತಾ ಇದ್ದಾನೆ ಅಂತ ಕೇಳಿದಾಗಿನಿಂದ ಮನಸ್ಸಿಗೆ ಒಂತರಾ ಆಗ್ತಾ ಇದೆ.   ಅವನ ಮೇಲೆ ನನಗೆ ಪ್ರೀತಿ ಇಲ್ದೆ ಇರಬಹುದು ಅದ್ರೆ ಅವನು ನನಗೆ ಈ ಮನೆಗೆ ಮಗ ಅಲ್ವಾ.  ನಾಳೆ ಶ್ರಾವ್ಯ ಮದುವೆ ಆಗಿ ಹೋದ್ರೆ, ನಮಗೆ ಅಂತ ಇರೋದು ಅಂದ್ರೆ ಅವನೇ ತಾನೇ.   ಅವನು ಪ್ಯಾಟೆ ಗೆ ಹೋಗಿ ಸಂಪಾದನೆ ಮಾಡಿ ನಮ್ಮನ್ನ ನೋಡಿಕೊಳ್ದೆ ಇದ್ರು ಪರವಾಗಿಲ್ಲ,   ಕ್ಷೇಮವಾಗಿ ಇದ್ರೆ ಅಷ್ಟೇ ಸಾಕು.  
ಬಸಣ್ಣ,,,  ಅವನ ಒಳ್ಳೆತನನೆ ಅವನನ್ನ ಕಾಪಾಡುತ್ತೆ ಮಲಕ್ಕೋ ಅಂತ ಹೇಳ್ತಾರೆ..

ಬೆಳ್ಳಿಗೆ ಎದ್ದು ದೇವರಿಗೆ ಕೈ ಮುಗಿದು,, ಅಪ್ಪ ದೇವ್ರೇ ಹುಟ್ಟಿದಾಗಿಂದ ಅ ಮಗಿ ಈ ಊರು ಬಿಟ್ಟು ಹೋದವನು ಅಲ್ಲ. ಅದ್ರೆ ಇವತ್ತು ಪ್ಯಾಟೆ ಗೆ ಹೋಗ್ತಾ ಇದ್ದಾನೆ,  ಯಾವ ತೊಂದ್ರೆ ಬಾರದ ಹಾಗೇ ನೀನೇ ಕಾಪಾಡು ತಂದೆ ಅವನನ್ನ ಅಂತ ನಿಂಗಮ್ಮ ದೇವರಿಗೆ ಕೈ ಮುಗಿದು ಬೇಡಿಕೊಂಡು, ಹೊರಗಡೆ ಬರ್ತಾಳೆ.

ನಂತರ ಬಸ್ ಸ್ಟಾಂಡ್ ಗೆ ಬರ್ತಾರೆ... 
ಬಸಣ್ಣ,,, ಮಗ ಇದು ಅವರ ಅಡ್ರೆಸ್, ಹೋಗಿ ಅವರಿಗೆ ಕಾಲ್ ಮಾಡು, ಬಂದು ನಿನ್ನ ಕರ್ಕೊಂಡು ಹೋಗ್ತಾರೆ.
ಶ್ರಾವ್ಯ,,, ಅಣ್ಣನ ಅಪ್ಪಿಕೊಂಡು ಕಣ್ಣೀರು ಹಾಕ್ತಾ ಹುಷಾರು ಅಣ್ಣ, ಅವಾಗವಾಗ ಫೋನ್ ಮಾಡ್ತಾ ಇರು ಅಂತ ಹೇಳ್ತಾಳೆ.
ನಿಂಗಮ್ಮ,,  ಕಣ್ಣಲ್ಲಿ ಕಣ್ಣೀರನ್ನ ತುಂಬಿಕೊಂಡು ಹುಷಾರು ಮಗ.  ನಿನಗೆ ಅಲ್ಲಿ ಇರೋಕೆ ಇಷ್ಟ ಇಲ್ಲಾ ಅಂದ್ರೆ ಇಲ್ಲಿಗೆ ಬಂದು ಬಿಡು. 
ಕೆಂಪ,,, ದೋಸ್ತ ಹುಷಾರು, ಕಾಲ್ ಮಾಡ್ತಾ ಇರು ಅಂತ ಹೇಳ್ತಾನೆ..

ನಂತರ ಬಸ್ ಬರುತ್ತೆ , ಎಲ್ಲರಿಗೂ ಬಾಯ್ ಮಾಡಿ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಪ್ಯಾಟೆ ಕಡೆ ಹೋಗ್ತಾನೆ ನಮ್ಮ ಹೀರೋ.... 

@@@@@@@@@@@@@@@@@@@@@@@@@@@@@@@@